‘ಲವ್ ಯೂ ರಚ್ಚು’ ಸಿನಿಮಾ ಸೆಟ್ ನಲ್ಲಿ ನಡೆದ ದುರಂತದ ಬಗ್ಗೆ ನಿಮ್ಮೆಲ್ಲರಿಗೂ ಗೊತ್ತೆಯಿದೆ. ಹೈ ಟೆನ್ಷನ್ ವಿದ್ಯುತ್ ತಂತಿ ತಗುಲಿ ಪ್ರಾಣಬಿಟ್ಟ ಫೈಟರ್ ವಿವೇಕ್ ಸಾವಿಗೆ ನೀವೆಲ್ಲರೂ ಕೂಡ ಕಂಬನಿ ಮಿಡಿದಿದ್ದೀರಾ, ಮರುಕ ಪಟ್ಟಿದ್ದೀರಾ ಅದೇ ರೀತಿ ಚಿತ್ರತಂಡ ಕೂಡ ಕೊರಗುತ್ತಿದೆ, ನಿರ್ಮಾಪಕ ಗುರು ದೇಶ್ ಪಾಂಡೆ ಕುಟುಂಬ ಕೂಡ ವಿಷಾದ ವ್ಯಕ್ತಪಡಿಸುತ್ತಿದೆ.
ನಮ್ಮ ಬ್ಯಾನರ್ ನ ಸಿನಿಮಾದಲ್ಲಿ ಇಂತಹದ್ದೊಂದು ಅವಘಡ ಸಂಭವಿಸಿಬಾರದಿತ್ತು, ದುರದೃಷ್ಟವಶಾತ್ ದುರಂತ ಸಂಭವಿಸಿದೆ. ಈಗ ಮೃತ ವಿವೇಕ್ ನ ಜೀವಂತವಾಗಿ ತಂದು ಕೊಡುವುದಕ್ಕಂತೂ ಆಗೋದಿಲ್ಲ ಹಾಗಂತ ವಿವೇಕ್ ಕುಟುಂಬವನ್ನೂ ನಾವು ಕೈಬಿಡುವುದಿಲ್ಲ. ವಿವೇಕ್ ಅಂತಿಮ ಕಾರ್ಯಕ್ಕೂ ಹಣ ನೀಡಿದ್ದೇವೆ, ಗಾಯಗೊಂಡು ಆಸ್ಪತ್ರೆ ಸೇರಿರುವ ರಂಜಿತ್ ಚಿಕಿತ್ಸಾ ವೆಚ್ಚ ಕೂಡ ಭರಿಸಿದ್ದಾರೆ ಎಂದಿದ್ದಾರೆ.
ಸದ್ಯ ಗುರುದೇಶ್ ಪಾಂಡೆ ಎಲ್ಲಿದ್ದಾರೋ ಗೊತ್ತಿಲ್ಲ.
ಘಟನೆ ನಡೆದ ಕ್ಷಣದಿಂದ ಯಾರ ಕೈಗೂ ಕೂಡ ಸಿಗುತ್ತಿಲ್ಲ. ಅಜ್ಞಾತ ಸ್ಥಳದಿಂದಲೇ ಲಾಯರ್ ಗೆ ಮೇಲ್ ಮಾಡಿ ಮೃತ ವಿವೇಕ್ ಕುಟುಂಬಕ್ಕೆ 10 ಲಕ್ಷ ಪರಿಹಾರ ಘೋಷಿಸಿ ಎಂದು ಹೇಳಿದ್ದರಂತೆ. ಹೀಗಾಗಿ, ಗುರು ದೇಶ್ ಪಾಂಡೆಯವರ ಪತ್ನಿ ಪ್ರಿತಿಕಾ ದೇಶ್ ಪಾಂಡೆ
ಜಿ ಸಿನಿಮಾ ಅಕಾಡೆಮಿ ಪರ ವಕೀಲ ನಾಗಭೂಷಣ್, ಹಾಗೂ ಗುರು ದೇಶ್ ಪಾಂಡೆ ಪರ ವಕೀಲ ಕೆಂಪೇಗೌಡರ ಜೊತೆ ಸುದ್ದಿಗೋಷ್ಠಿ ನಡೆಸಿದರು.
10 ಲಕ್ಷ ಪರಿಹಾರ ಕೊಡುವುದಾಗಿ ಹೇಳಿದ್ದೇವೆ, ಸದ್ಯ 5 ಲಕ್ಷ ಚೆಕ್ ನ ಹಸ್ತಾಂತರಿಸುತ್ತೇವೆ. ವಿವೇಕ್ ಮನೆಗೆ ನಾವೇ ಖುದ್ದಾಗಿ ಹೋಗಿ ಅವರ ತಾಯಿ ಕೈಗೆ 5 ಲಕ್ಷ ಚೆಕ್ ಒಪ್ಪಿಸಲಿದ್ದೇವೆ ಅಂತ ಸುದ್ದಿ ಗೋಷ್ಟಿಯಲ್ಲಿ ತಿಳಿಸಿದರು.
ಪ್ರಕರಣ ತನಿಖೆಯ ಹಂತದಲ್ಲಿದೆ ಹೆಚ್ಚು ಮಾತನಾಡುವುದಿಲ್ಲ, ತಪ್ಪಿತಸ್ಥರು ನೀವೇ ಅಂತ ನಮ್ಮ ನಿರ್ಮಾಣ ಸಂಸ್ಥೆಯ ಮೇಲೆ ಬಂದರೆ ಅದರ ಹೊಣೆಯನ್ನ ನಾವೇ ಹೊರುತ್ತೇವೆ ಎಂದು
ಕ್ಯಾಮೆರಾ ಮುಂದೆ ಹೇಳಿದ್ದಾರೆ. ಪ್ರಕರಣ ಸಂಬಂಧ ಲವ್ ಯೂ ರಚ್ಚು ಚಿತ್ರದ ನಿರ್ದೇಶಕ ಶಶಾಂಕ್ ರಾಜ್, ನಿರ್ಮಾಪಕ ಗುರುದೇಶ್ ಪಾಂಡೆ, ಸಾಹಸ ನಿರ್ದೇಶಕ ವಿನೋದ್, ಸಿನಿಮಾ ಇನ್ ಚಾರ್ಜ್ ಫರ್ನಾಂಡೀಸ್, ಕ್ರೇನ್ ಆಪರೇಟರ್ ಮಹದೇವ್ ಸೇರಿದಂತೆ ಐವರ ಮೇಲೆ ಎಫ್ ಐ ಆರ್ ದಾಖಲಾಗಿದೆ.
ಈಗಾಗಲೇ ಮೂವರನ್ನು ಅರೆಸ್ಟ್ ಮಾಡಿದ್ದು, 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಮುಂದಿನ ದಿನಗಳಲ್ಲಿ ಕಾನೂನು ಯಾವ ರೀತಿಯ ತೀರ್ಪು ಕೊಡುತ್ತೆ ಕಾದುನೋಡಬೇಕಿದೆ.