ಚಿತ್ರೋತ್ಸವದ ಹಣ ದುರುಪಯೋಗದ ಆರೋಪ : ಅಕಾಡೆಮಿ ಅಧ್ಯಕ್ಷ ಸುನೀಲ್‌ ಪುರಾಣಿಕ್‌ ವಿರುದ್ಧ ದೂರು

ಸರ್ಕಾರದ ಹಣ ದುರುಪಯೋಗದ ಆರೋಪದಲ್ಲಿ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್‌ ಪುರಾಣಿಕ್‌ ವಿರುದ್ಧ ನಿರ್ಮಾಪಕ ಹಾಗೂ ನಿರ್ದೇಶಕ ಮದನ್‌ ಪಟೇಲ್‌ ಅವರು ಭ್ರಷ್ಟಚಾರ ನಿಗ್ರಹ ವಿಭಾಗದ ಹೆಚ್ಚುವರಿ ಪೊಲೀಸ್‌ ಮಹಾ ನಿರ್ದೇಶಕರಿಗೆ ದೂರು ಸಲ್ಲಿಸಿದ್ದಾರೆ. ಕರ್ನಾಟಕ ಚಲನಚಿತ್ರ ಅಕಾಡೆಮಿ ನಡೆಸುವ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಿಗೆ ತಗಲು ಖರ್ಚು ವೆಚ್ಚಗಳ ಕುರಿತು ವಿಧಾನ ಪರಿಷತ್‌ ಸದಸ್ಯ ಮೋಹನಗ ಕೊಂಡಜ್ಜಿ ಪರಿಷತ್‌ ಸಭೆ ಯಲ್ಲಿ ಪ್ರಸ್ತಾಪಿಸಿ, ಅದಕ್ಕೆ ಸಂಬಂಧಿಸಿದಂತೆ ಮಾಹಿತಿ ಹಕ್ಕಿನಡಿ ಪಡೆ ದಾಖಲೆಗಳನ್ನು ಉಲ್ಲೇಖಿಸಿ ಮದನ್‌ ಪಟೇಲ್‌ ದೂರು ನೀಡಿದ್ದು, ಹಾಲಿ ಅಧ್ಯಕ್ಷರಾದ ಸುನೀಲ್‌ ಪುರಾಣಿಕ್‌ ಅವರು ಭಾರೀ ಪ್ರಮಾಣದಲ್ಲಿ ಸರ್ಕಾರದ ಹಣವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ. ಈ ಸಂಬಂಧ ಸರಿಯಾದ ತನಿಖೆ ನಡೆಯಬೇಕೆಂದು ಮನವಿ ಮಾಡಿದ್ದಾರೆ.

Related Posts

error: Content is protected !!