Categories
ಸಿನಿ ಸುದ್ದಿ

ಎವಿಡೆನ್ಸ್‌ ಹಿಂದೆ ಬಂದ ಮಾನಸ ಜೋಶಿ

ವಿಭಿನ್ನ ಕ್ರೈಂ ಥ್ರಿಲ್ಲರ್ ನಲ್ಲಿ ರೋಬೋ ಗಣೇಶ್

ಮಾನಸ ಜೋಶಿ ಈ ಹೆಸರು ಕೇಳಿದಾಕ್ಷಣ , ಹಾಗೊಮ್ಮೆ ‘ಕಿರಗೂರಿನ ಗಯ್ಯಾಳಿಗಳು’ ಸಿನ್ಮಾ ನೆನಪಾಗುತ್ತೆ. ಪಕ್ಕಾ ಜಗಳಗಂಟಿ ಹೆಣ್ಣಾಗಿ ಗಮನ ಸೆಳೆದಿದ್ದ ಮಾನಸ ಜೋಶಿ ಆ ಬಳಿಕ ಹೊಸ ಬಗೆಯ ಕಥೆ, ಪಾತ್ರಗಳತ್ತ ಗಮನಹರಿಸಿದರು. ಈಗ ತಮಗೆ ಸರಿಹೊಂದುವ ಕಥೆ ,ಪಾತ್ರ ಹಾಗೂ ಒಳ್ಳೆಯ ತಂಡ ಸಿಕ್ಕ ಖುಷಿಯಲ್ಲಿ ಹೊಸದೊಂದು ಚಿತ್ರಕ್ಕೆ ಜೈ ಎಂದಿದ್ದಾರೆ.
ಹೌದು, ಮಾನಸ ಜೋಶಿ ಈ ಬಾರಿ ವಿಭಿನ್ನ ಕಥೆ, ಪಾತ್ರವಿರುವ ಚಿತ್ರ ಒಪ್ಪಿಕೊಂಡಿದ್ದು, ಹೊಸ ಗೆಟಪ್ ಮೂಲಕ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ಅಂದಹಾಗೆ, ಆ ಚಿತ್ರಕ್ಕೆ ‘ಎವಿಡೆನ್ಸ್’ ಎಂದು ನಾಮಕರಣ ಮಾಡಲಾಗಿದೆ.

ಈ ಚಿತ್ರವನ್ನು ಪ್ರವೀಣ್ (ಪಿ ಆರ್) ನಿರ್ದೇಶನ ಮಾಡುತ್ತಿದ್ದಾರೆ. ಅವರದೇ ಶ್ರೀ ಧೃತಿ ಪ್ರೊಡಕ್ಷನ್ ಮೂಲಕ ತಯಾರಾಗುತ್ತಿರುವ ‘ಎವಿಡೆನ್ಸ್’ ಚಿತ್ರಕ್ಕೆ ಅರವಿಂದ್ ಕುಮಾರ್, ಸುರೇಂದ್ರ ಶೆಟ್ಟಿ, ನರಸಿಂಹಮೂರ್ತಿ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ.
ವಿಶೇಷವೆಂದರೆ, ಈ ಚಿತ್ರದಲ್ಲಿ ಕೇವಲ ಎರಡು ಮುಖ್ಯ ಪಾತ್ರಗಳಿವೆ. ಮಾನಸ ಜೋಶಿ ಜೊತೆ ರೋಬೊ ಗಣೇಶ್ ನಟಿಸುತ್ತಿದ್ದಾರೆ. ಅವರಿಲ್ಲಿ ನೆಗೆಟಿವ್ ಶೇಡ್ ಪಾತ್ರ ಮಾಡಿದರೆ, ಮಾನಸ ಜೋಶಿ‌ ಮೊದಲ ಸಲ ತನಿಖಾಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೊಂದು ಕ್ರೈಮ್ ಥ್ರಿಲ್ಲರ್ ಕಥೆಯಾಗಿದ್ದು, ಒಂದೇ ರೂಮ್ ನಲ್ಲಿ ಕಥೆ ನಡಯಲಿದೆ. ಎರಡು ತಾಸು ಇಡೀ ಚಿತ್ರ ಒಂದೇ ರೂಮ್ ನಲ್ಲಿ ಸಾಗಲಿದೆ ಎಂಬುದು ವಿಶೇಷ.


ಚಿತ್ರಕ್ಕೆ ರವಿಸುವರ್ಣ ಛಾಯಾಗ್ರಹಣವಿದೆ. ಇದು ಅವರ 25ನೇ ಚಿತ್ರ ಎಂಬುದು ಮತ್ತೊಂದು ವಿಶೇಷ.
ಚಿತ್ರಕ್ಕೆ ಆರ್. ಚಂದ್ರಶೇಖರ್ ಪ್ರಸಾದ್ ಸಂಭಾಷಣೆ ಬರೆದಿದ್ದಾರೆ. ಕಾರ್ತಿಕ್ ವೆಂಕಟೇಶ್ ಸಂಗೀತ, ಸಾಹಿತ್ಯವಿದೆ.
ಸೆಪ್ಟೆಂಬರ್ 9ರಂದು ‘ಎವಿಡೆನ್ಸ್’ ಗೆ ಪೂಜೆ ನಡೆಯಲಿದೆ. ಇಡೀ ಸಿನಿಮಾ ಕೇವಲ 7 ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ

Categories
ಸಿನಿ ಸುದ್ದಿ

ಶುಗರ್ ಲೆಸ್ ಗೆ ಚಾಲನೆ-ಶಶಿಧರ್ ಚೊಚ್ಚಲ ನಿರ್ದೇಶನ

‘ಡಾಟರ್‌ ಆಫ್ ಪಾರ್ವತಮ್ಮ’ ಮೂಲಕ ನಿರ್ಮಾಪಕರಾದ ಶಶಿಧರ್‌ ಕೆ.ಎಂ.ಅವರು ಹೊಸದೊಂದು ಕಥೆ ಬರೆದು, ನಿರ್ದೇಶನ ಮಾಡಲು ಹೊರಟ ಸುದ್ದಿ ಹೊಸದೇನಲ್ಲ. ಮೊದಲ ಸಲ ಅವರು ‘ಶುಗರ್‌ಲೆಸ್‌ ‘ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲು ಹೊರಟಿದ್ದಾರೆ.
ಗುರುವಾರ
ಅವರ ಚೊಚ್ಚಲ ಚಿತ್ರಕ್ಕೆ ಮುಹೂರ್ತ ನೆರವೇರಿದೆ.
ಗುರುವಾರ ರಾಯರ ಅನುಗ್ರಹದಲ್ಲಿ ಇಂದು ಪುಷ್ಕರ್ ಫಿಲ್ಮ್ಸ್ ಸಹಯೋಗದಲ್ಲಿ ‘ಶುಗರ್ ಲೆಸ್’ ಚಿತ್ರವನ್ನು ನಿರ್ದೇಶನದ ಜೊತೆಗೆ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ.
ಚಿತ್ರದ ಕಥೆ ತಕ್ಕಂತೆ ಶೀರ್ಷಿಕೆ ಇಟ್ಟಿರುವ ನಿರ್ದೇಶಕ ಶಶಿಧರ್, ಡಯಾಬಿಟಿಸ್‌ ಕುರಿತ ಕಥೆ ಹೇಳಲು ಹೊರಟಿದ್ದಾರೆ. ಈ ಕಥೆ ಜೊತೆ ಒಂದು ಬ್ಲಾಕ್‌ ಕಾಮಿಡಿಯಲ್ಲೇ ಗಂಭೀರ ವಿಷಯ ಹೇಳಲು ಹೊರಟಿದ್ದಾರೆ.
ಅವರು ಹೇಳುವಂತೆ, ಇಂದು ಡಯಾಬಿಟಿಕ್‌ ಅನ್ನೋದು, ಮಕ್ಕಳಿಂದ ಹಿಡಿದು ದೊಡ್ಡವರಿಗೂ ಇದೆ. ಆದರೆ, ಅದೇ ಸುಮಾರು 30 ವರ್ಷದ ಯುವಕನಿಗೆ ಡಯಾ ಬಿಟಿಸ್‌ ಬಂದಾಗ, ಅವರ ಬದುಕು ಹೇಗೆ ಇರುತ್ತೆ. ನಿತ್ಯ ಅವನ ಬದುಕಲ್ಲಿ ಏನೆಲ್ಲಾ ಸಮಸ್ಯೆ ಎದುರಾಗುತ್ತವೆ. ಸಮಾಜದಲ್ಲಿ ಆ ವಿಷಯವನ್ನು ಹೇಳಿಕೊಳ್ಳಲೂ ಆಗದ ವ್ಯಕ್ತಿಗಳು ಎಷ್ಟೆಲ್ಲಾ ಯಾತನೆ ಅನು ಭವಿಸುತ್ತಾರೆ ಎಂಬುದನ್ನು ಹೇಳುವ ಪ್ರಯತ್ನ ಮಾಡುತ್ತಿದ್ದಾರೆ ಅವರು. ಯಾವ ಭಾಷೆಯಲ್ಲೂ ಈ ಕಂಟೆಂಟ್‌ ಇರದ ಕಾರಣ, ಅವರು ಇದನ್ನೇ ಇಟ್ಟು ಕೊಂಡು ಹೊದ ವ್ಯಾಖ್ಯಾನದೊಂದಿಗೆ ಸಿನಿಮಾ ಮಾಡಲು ಹೊರಟಿದ್ದಾರೆ.
ತಮ್ಮ ದಿಶಾ ಎಂಟರ್‌ಟೈನರ್ಸ್‌ ಬ್ಯಾನರ್‌ನಲ್ಲಿ ಈ ಚಿತ್ರ ನಿರ್ಮಿಸುತ್ತಿದ್ದು, ಶಶಿಧರ್‌ ಗೆ ನಿರ್ಮಾಪಕ ಪುಷ್ಕರ್‌ ಕೈ ಜೋಡಿಸಿದ್ದಾರೆ.

Categories
ಸಿನಿ ಸುದ್ದಿ

ಗುಬ್ಬಿ ಮರಿ ಹಾರಲು ರೆಡಿ

ಈ ಹಿಂದೆ ಎ.ಪಿ.ಪ್ರೊಡಕ್ಷನ್ಸ್ ಬ್ಯಾನರ್ ತನ್ನ ಸ್ನೇಹಿತರ ಜೊತೆಗೂಡಿ “ಕಮರೊಟ್ಟು ಚೆಕ್ ಪೋಸ್ಟ್” ಎಂಬ ಹಾರರ್ ಚಿತ್ರವನ್ನು ನಿರ್ಮಾಣ ಮಾಡಿ ಯಶಸ್ವಿಯಾಗಿದ್ದ ಆನಂದ ಬಾಬು ಈಗ ಇನ್ನೊಂದು ಸಿನಿಮಾಗೆ ಕೈ ಹಾಕಿದ್ದಾರೆ.
ಆನಂದ ಬಾಬು ಅವರು ಡಾ|| ನಿಶ್ಚಿತ ಬಿ. ಅವರ ಜೊತೆ ಸೇರಿ “ಗುಬ್ಬಿ ಮರಿ” ಎನ್ನುವ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಈ ಚಿತ್ರಕ್ಕೆ ಮಧು ಡಕಣಾಚಾರ್ ಅವರು ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಎ.ಟಿ.ರವೀಶ್ ಸಂಗೀತವಿದೆ. ಸಿದ್ದು ಕೆ.ಗೌಡಗೆರೆ ಛಾಯಾಗ್ರಹಣ ಮಾಡಿದ್ದಾರೆ. ಎನ್.ಆದಿತ್ಯ ಕುಣಿಗಲ್ ಸಂಕಲನವಿದೆ. ಗೆಳೆಯ ಆನಂದ ಬಾಬು ಅವರಿಗೆ ಸಾಥ್ ನೀಡಿದ್ದಾರೆ. ಇಷ್ಟರಲ್ಲೇ ಅವರ ಕನಸಿನ ಕೂಸು “ಗುಬ್ಬಿಮರಿ” ಹಾರಲಿದೆ.

Categories
ಸಿನಿ ಸುದ್ದಿ

ನಿರ್ದೇಶಕ ಮನು ಕಲ್ಯಾಡಿ ಈಗ ಹೀರೋ‌ !

ಅವರದೇ ಬ್ಯಾನರ್ ನಲ್ಲಿ ನಿರ್ಮಾಣವಾಗುತ್ತಿದೆ ಹೊಸ‌ ಸಿನಿಮಾ

ಪ್ರಾರಂಭ‌‌ ಚಿತ್ರದ ನಿರ್ದೇಶಕ ಮನು‌ಕಲ್ಯಾಡಿ‌ ಅವರಿಗೆ ಇಂದು ಹುಟ್ಟು ಸಂಭ್ರಮ.‌‌ಪ್ರಾರಂಭ ಚಿತ್ರ ತಂಡವು ರಾತ್ರಿಯೇ ಕೇಕ್ ಕತ್ತರಿಸಿ, ಸಿಹಿ‌ಹಂಚುವ ಮೂಲಕ ಮನು‌ ಕಲ್ಯಾಡಿ ಅವರ ಹುಟ್ಟು ‌ಹಬ್ಬವನ್ನು‌ಅಚರಿಸಿತು.‌ಇದೇ‌ವೇಳೆ ನಿರ್ದೇಶಕ ಮನು ಕಲ್ಯಾಡಿ‌ ಅವರಿಗೆ ಸಹೋದರ ಜಗದೀಶ್ ಕಲ್ಯಾಡಿ ವಿಶೇಷವಾದ ಗಿಫ್ಟ್ ಕೊಟ್ಟರು. ಮನು‌ಕಲ್ಯಾಡಿ‌ ಅವರನ್ನೆ ಹೀರೋ ಆಗಿಸಿಕೊಂಡು ಹೊಸ ದೊಂದು‌ಸಿನಿಮಾ‌ ಮಾಡುವುದಾಗಿ‌ ಘೋಷಿಸಿದರು.

ಮನು ಕಲ್ಯಾಡಿ‌ ನಿರ್ದೇಶನದ’  ಪ್ರಾರಂಭ‌ ‘ಚಿತ್ರವು ಹೊರಬರುತ್ತಿದ್ದಂತೆ‌ ಮನುಕಲ್ಯಾಡಿ‌ ಆ‌ವರನ್ನು‌ ಹೀರೋ ಆಗಿ‌ಬೆಳ್ಳಿತೆರೆಗೆ ಪರಿಚಯಿಸುವುದಾಗಿ‌ಜಗದೀಶ್ ಕಲ್ಯಾಡಿ‌  ಭರವಸೆ ನೀಡಿದರು.‌ ಅಂದ‌ಹಾಗೆ‌ ಈ‌ಚಿತ್ರಕ್ಕೆ‌ಈಗಾಗಲೇ‌‌ನಿರ್ದೇಶಕರು‌ಫಿಕ್ಸ್ ಆಗಿದ್ದಾರೆ. ಸಾಯಿ‌ಕಿಶೋರ್ ತಲ್ಲ ಆ್ಯಕ್ಚನ್ ಹೇಳಲು‌ ರೆಡಿ ಆಗಿದ್ದಾರೆ. ಸ್ಕ್ರಿಪ್ಟ್ ‌ವರ್ಕ್ ಕೂಡ‌ಮುಗಿದಿದೆ.‌ ನಾಯಕಿ‌ಸೇರಿದಂತೆ‌ಉಳಿದ‌ಕಲಾವಿದರ‌ಆಯ್ಕೆ ಬಾಕಿಯಿದೆ.ಅಕ್ಟೋಬರ್ ‌ತಿಂಗಳಲ್ಲಿ‌ಈ‌ಚಿತ್ರ‌ಸೆಟ್ಟೇರುವುದು‌‌ ಗ್ಯಾರಂಟಿ ಯಂತೆ.‌

ಇನ್ನು‌ಎಲ್ಲವೂ‌ಅಂದುಕೊಂಡಂತೆಯೇ ಆಗಿದ್ದರೆ‌ಜಗದೀಶ್ ಕಲ್ಯಾಡಿ‌ನಿರ್ಮಾಣ‌ಹಾಗೂ‌ ಮನು‌ಕಲ್ಯಾಡಿ‌‌ ನಿರ್ದೇಶನದ ಪ್ರಾರಂಭ‌ಚಿತ್ರ ರಿಲೀಸ್‌ಆಗಬೇಕಿತ್ತು.‌ ಆದರೆ‌ಕೊರೋನಾ‌ ಕಾರಣ‌ಎಲ್ಲವೂ‌‌ ಏರುಪೇರಾಯಿತು.‌ಈಗ‌ ಕೊರೋನಾ‌‌ ಭೀತಿ‌ ಒಂದಷ್ಟು ತಿಳಿಯಾಗುತ್ತಿದೆ.‌ ನಿರ್ಮಾಪಕ‌ ಜಗದೀಶ್  ಕಲ್ಯಾಡಿ  ಪ್ರಾರಂಭ ರಿಲೀಸ್ ಗೆ‌ಸಿದ್ದತೆ‌‌ನಡೆಸಿದ್ದಾರೆ.‌ಅದು ತೆರೆಗೆ‌ ಬರುತ್ತಿದ್ದಂತೆ ಮನು‌ಕಲ್ಯಾಡಿ‌ ಅಭಿನಯದ ಚೊಚ್ಚಲ ಚಿತ್ರ ಸೆಟ್ಟೇರಲಿದೆ‌‌  ಎನ್ನುವುದು  ತಂಡದ ಅಧಿಕೃತ ಮಾಹಿತಿ.

Categories
ಸಿನಿ ಸುದ್ದಿ

ನಿರ್ದೇಶಕ ಮನು ಕಲ್ಯಾಡಿ ಈಗ ಹೀರೋ!

ಅವರದೇ ಬ್ಯಾನರ್ ನಲ್ಲಿ ನಿರ್ಮಾಣವಾಗುತ್ತಿದೆ ಹೊಸ‌ ಸಿನಿಮಾ

‘ಪ್ರಾರಂಭ‌‌’ ಚಿತ್ರದ ನಿರ್ದೇಶಕ ಮನು‌ಕಲ್ಯಾಡಿ‌ ಅವರಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ.‌‌ಪ್ರಾರಂಭ ಚಿತ್ರ ತಂಡವು ರಾತ್ರಿಯೇ ಕೇಕ್ ಕತ್ತರಿಸಿ, ಸಿಹಿ‌ಹಂಚುವ ಮೂಲಕ ಮನು‌ ಕಲ್ಯಾಡಿ ಅವರ ಹುಟ್ಟು ‌ಹಬ್ಬವನ್ನು‌ಅಚರಿಸಿತು.‌ಇದೇ‌ವೇಳೆ ನಿರ್ದೇಶಕ ಮನು ಕಲ್ಯಾಡಿ‌ ಅವರಿಗೆ ಸಹೋದರ ಜಗದೀಶ್ ಕಲ್ಯಾಡಿ ವಿಶೇಷವಾದ ಗಿಫ್ಟ್ ಕೊಟ್ಟರು. ಮನು‌ಕಲ್ಯಾಡಿ‌ ಅವರನ್ನೆ ಹೀರೋ ಆಗಿಸಿಕೊಂಡು ಹೊಸ ದೊಂದು‌ಸಿನಿಮಾ‌ ಮಾಡುವುದಾಗಿ‌ ಘೋಷಿಸಿದರು.
ಮನು ಕಲ್ಯಾಡಿ‌ ನಿರ್ದೇಶನದ’ ‘ಪ್ರಾರಂಭ‌ ‘ಚಿತ್ರವು ಹೊರಬರುತ್ತಿದ್ದಂತೆ‌ ಮನುಕಲ್ಯಾಡಿ‌ ಆ‌ವರನ್ನು‌ ಹೀರೋ ಆಗಿ‌ಬೆಳ್ಳಿತೆರೆಗೆ ಪರಿಚಯಿಸುವುದಾಗಿ‌
ಜಗದೀಶ್ ಕಲ್ಯಾಡಿ‌ ಭರವಸೆ ನೀಡಿದರು.‌ಅಂದ‌ಹಾಗೆ‌ಈ‌ಚಿತ್ರಕ್ಕೆ‌ಈಗಾಗಲೇ‌‌ನಿರ್ದೇಶಕರು‌ಫಿಕ್ಸ್ ಆಗಿದ್ದಾರೆ. ಸಾಯಿ‌ಕಿಶೋರ್ ತಲ್ಲ ಆ್ಯಕ್ಚನ್ ಹೇಳಲು‌ ರೆಡಿ ಆಗಿದ್ದಾರೆ. ಸ್ಕ್ರಿಪ್ಟ್ ‌ವರ್ಕ್

ಕೂಡ‌ಮುಗಿದಿದೆ.‌ನಾಯಕಿ‌ಸೇರಿದಂತೆ‌ಉಳಿದ‌ಕಲಾವಿದರ‌ಆಯ್ಕೆ‌ಬಾಕಿಯಿದೆ.‌‌ಅಕ್ಟೋಬರ್ ‌ತಿಂಗಳಲ್ಲಿ‌ಈ‌ಚಿತ್ರ‌ಸೆಟ್ಟೇರುವುದು‌‌ ಗ್ಯಾರಂಟಿ ಯಂತೆ.‌ಇನ್ನು‌ಎಲ್ಲವೂ‌ಅಂದುಕೊಂಡಂತೆಯೇ ಆಗಿದ್ದರೆ‌ಜಗದೀಶ್ ಕಲ್ಯಾಡಿ‌ನಿರ್ಮಾಣ‌ಹಾಗೂ‌ ಮನು‌ಕಲ್ಯಾಡಿ‌‌ ನಿರ್ದೇಶನದ ಪ್ರಾರಂಭ‌ಚಿತ್ರ ರಿಲೀಸ್‌ಆಗಬೇಕಿತ್ತು.‌ಆದರೆ‌ಕೊರೋನಾ‌ ಕಾರಣ‌ಎಲ್ಲವೂ‌‌ ಏರುಪೇರಾಯಿತು.‌ಈಗ‌ ಕೊರೋನಾ‌‌ ಭೀತಿ‌ ಒಂದಷ್ಟು ತಿಳಿಯಾಗುತ್ತಿದೆ.‌ ನಿರ್ಮಾಪಕ‌ ಜಗದೀಶ್ ಕಲ್ಯಾಡಿ ಪ್ರಾರಂಭ ರಿಲೀಸ್ ಗೆ‌ಸಿದ್ದತೆ‌‌ನಡೆಸಿದ್ದಾರೆ.‌ಅದು ತೆರೆಗೆ‌ ಬರುತ್ತಿದ್ದಂತೆ ಮನು‌ಕಲ್ಯಾಡಿ‌ ಅಭಿನಯದ ಚೊಚ್ಚಲ ಚಿತ್ರ ಸೆಟ್ಟೇರಲಿದೆ‌‌ ಎನ್ನುವುದು ತಂಡದ ಅಧಿಕೃತ ಮಾಹಿತಿ.

Categories
ಸಿನಿ ಸುದ್ದಿ

ಒಳ್ಳೇ ಹುಡುಗನ ಕುರಿ, ಹಸು ಮೇಯಿಸೋ ಕೆಲಸ

ಹಸು ಹಾಲು ಹಿಂಡುತ್ತಿರುವ ಪ್ರಥಮ್

ನಟ ಭಯಂಕರ ಅಲಿಯಾಸ್ ಒಳ್ಳೇ ಹುಡುಗ ಅಂದುಕೊಳ್ಳುವ ಪ್ರಥಮ್ ಬಗ್ಗೆ ಎಲ್ಲರಿಗೂ ಗೊತ್ತು. ಮಾತಲ್ಲೇ ಮೋಡಿ‌ ಮಾಡುವ ಪ್ರಥಮ್, ಸದ್ಯ ತನ್ನೂರಲ್ಲಿದ್ದಾರೆ. ಅಲ್ಲಿ ಕೃಷಿಯತ್ತ ಗಮನಹರಿಸಿದ್ದಾರೆ. ಅಷ್ಟೇ ಅಲ್ಲ, ಅವರು ತಮ್ಮ ಹಸು , ಕುರಿ ಮರಿಗಳನ್ನು ಮೇಯಿಸುವುದರ ಜೊತೆ ಸಮಯ ಕಳೆಯುತ್ತಿದ್ದಾರೆ. ಇತ್ತೀಚೆಗೆ ಅವರು ಹಸುವಿನ‌ ಹಾಲು ಕರೆದು ತಾನೊಬ್ಬ ಪಕ್ಕಾ ರೈತ ಎನ್ನುವುದನ್ನು ಹೇಳುವ ಪ್ರಯತ್ನ ಮಾಡಿದ್ದಾರೆ. ತಾವು ಮಾಡುತ್ತಿರುವ ಕೆಲಸಗಳ ಫೋಟೋ ತೆಗೆದು ತಮ್ಮ ಮುಖಪುಟದಲ್ಲಿ ಹಾಕಿಕೊಂಡಿದ್ದಾರೆ.
‘ಈಗಷ್ಟೇ ನಾನು ಕುರಿ ಮೇಯಿಸುವಾಗ ನಮ್ ಚಿಕ್ಕಪ್ಪನ ಕುರಿ,ಮರಿ ಹಾಕ್ತು!ಗಂಡುಮರಿ ಆದ್ರಿಂದ ಮುಂದಿನ ತಿಂಗಳು ಸ್ವಲ್ಪ ಬಲಿತ ಮೇಲೆ ಮಾರಿಬಿಡ್ತಾರೆ!
ಹೆಣ್ಣು ಮರಿ ಆಗಿದ್ರೆ ಸಾಕೋದು ವಾಡಿಕೆ. ಹಾಗಾಗಿ ನಾನೇ
ಅದನ್ನು ಖರೀದಿಸಿದ್ದೇನೆ.
ಖುಷಿ ಅಂದ್ರೆ ಶೀಘ್ರದಲ್ಲೇ ನನ್ನ ಕುರಿಗಳ ಸಂಖ್ಯೆ ಜಾಸ್ತಿಆಗ್ತಿದೆ! ಎಂದು ಬರೆದುಕೊಂಡು ಖುಷಿ ಹಂಚಿಕೊಂಡಿದ್ದಾರೆ.
ಇನ್ನೊಂದು ಸ್ಟೇಟಸ್ ನಲ್ಲಿ
ಪ್ರತಿದಿನ ಕುರಿ ಮೇಯಿಸೋದು, ಹಾಲು ಕರೆಯೋದನ್ನು ಕಲೀತಾ ಇದೀನಿ ಎಂಬ ಸಾಲು ಬರೆದುಕೊಂಡಿದ್ದಾರೆ.
ಸದ್ಯ ನಟಭಯಂಕರ ಸಿನಿಮಾದ ಕೆಲಸ‌ ಪೆಂಡಿಂಗ್ ಇರುವುದರಿಂದ ಊರಲ್ಲೇ ಕುರಿ, ಹಸು‌ ಮೇಯಿಸಿಕೊಂಡು ಹಾಲು ಕರೆಯುವುದನ್ನು ಕಲೀತಾ ಇದಾರೆ.
ಸಿನಿಮಾ ಚಟುವಟಿಕೆಗಳು ಶುರುವಾದರೆ ಪ್ರಥಮ್ ಮತ್ತೆ ಗಾಂಧಿನಗರದಲ್ಲಿ ಸದ್ದು ಮಾಡುವ ಉತ್ಸಾಹದಲ್ಲಿದ್ದಾರೆ.

Categories
ಸಿನಿ ಸುದ್ದಿ

ಮಳೆಯಲಿ, ಜೊತೆಯಲಿ ‘ ಕಿಯಾ’ ಳೊಂದಿಗೆ ‘ಸಂಚಾರಿ’!

ತಲೆದಂಡದ ಗುಂಗು, ಮಲೆನಾಡಿನ ಮೆರಗು

ಎಲ್ಲೆಡೆ‌ಹಸಿರು, ಬೆಟ್ಟ ಗುಡ್ಡ,ಅವುಗಳ‌ ನಡುವೆ ಬೋರ್ಗೆರೆಯುವ ಜಲಪಾತ, ತಣ್ಣನೆಯ ವಾತಾವರಣ, ಮನಸ್ಸಿಗೆ ಹಿತ ನೀಡುವ ಹಿತವಾದ ಗಾಳಿ, ಅಲಲ್ಲಿ ಕಾಫಿತೋಟ, ಮಧುರವಾಗಿ ಕೇಳಿಸುವ ಪ್ರಾಣಿ -ಪಕ್ಷಿ ಸಂಕುಲದ ಸಪ್ಪಳ…ಅಬ್ಬಾ, ಕಾಫಿನಾಡು‌ ಚಿಕ್ಕಮಗಳೂರು ಅಂದ್ರೇನೆ ಹಾಗೆ. ಅಲ್ಲಿದ್ದವರಿಗಿಂತ ಬಯಲು‌ ನಾಡಿನ ಜನರಿಗೆ ಅದೊಂದು‌ ಸ್ವರ್ಗದ ಸೀಮೆ.‌ ಅದರಲ್ಲೂ‌ ಮಳೆಗಾಲದ ಮಳೆಯೊಳಗಡೆ ಚಿಕ್ಕಮಗಳೂರಿಗೆ ಕಾಲಿಟ್ಟರೆ ಅದೊಂದು ರೋಮಾಂಚಕಾರಿ ಅನುಭವ.ಸದ್ಯಕ್ಕೀಗ ಚಿಕ್ಕಮಗಳೂರಿಗೆ ಹೋಗಿ ಅಂತಹ ಅನುಭವ ಕಂಡು‌ ಬಂದಿದ್ದಾರೆ ‌ನಟ ಸಂಚಾರಿ ವಿಜಯ್ !

ಸಂಚಾರಿಯವರ ಈ ಸಂಚಾರ ಯಾಕಾಗಿ? ಯಾವುದಾದ್ರೂ ಚಿತ್ರೀಕರಣವೇ, ಇಲ್ಲವೇ ಸುಮ್ನೆ ಕಣ್ಣೋಟದ ಪ್ರಯಾಣವೇ?‌ ನಟ ವಿಜಯ್ ಅವರ ಪ್ರಕಾರ ಇವೆರಡೂ ಅಲ್ಲ. ಕೊರೋನಾ‌ ಕಾಲದಲ್ಲಿ‌ಚಿತ್ರೀಕರಣ ಇಲ್ಲ, ಹೊರ ಊರುಗಳಿಗೂ ಹೋಗಿರಲಿಲ್ಲ ಎನ್ನುವುದು ನಿಜವಾಗಿದ್ದರೂ, ನಾನು ಚಿಕ್ಕಮಗಳೂರು ಹೋಗಿದ್ದು ಒಂದು ಖಾಸಗಿ ಕೆಲಸದ ಮೇಲೆ. ಹಾಗೆಯೇ ಸಮಯ ಇತ್ತು, ಅದನ್ನೇ ಬಳಸಿಕೊಂಡು‌ ಚಿಕ್ಕಮಗಳೂರಿನಿಂದ ಬಾಳೆ ಹೊನ್ನುರು ಮಾರ್ಗವಾಗಿ ಶೃಂಗೇರಿಗೆ ಹೋಗಿ ಬಂದೆ.

ಅವರು ಏನೇ ಹೇಳಿದ್ರೂ ಅವರ ಈ ಜಾಲಿ‌ಮೂಡ್ ನ ಪ್ರವಾಸಕ್ಕಿದ್ದ ಪ್ರೇರಣೆ ‘ಕಿಯಾ ‘! ಉಳಿದಂತೆ‌ ಅವರೀಗ ತಲೆ ದಂಡ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಈಗಾಗಲೇ‌ ಚಿತ್ರೀಕರಣ ಮುಗಿಸಿರುವ ಮೇಲೊಬ್ಬ ಮಾಯಾವಿ, ಪುಕ್ಸಟೆ ಲೈಪು ರಿಲೀಸ್ ಗೆ ರೆಡಿ ಆಗಿವೆ. ಮತ್ತೆ ಮೂರು ಹೊಸ ಸಿನಿಮಾಕ್ಕೆ ಸಹಿ ಹಾಕಿದ್ದಾರೆ.

ಕೊರೋನಾ ಭೀತಿ ದೂರವಾದರೆ ಅವು ಇಷ್ಟರಲ್ಲಿಯೇ ಶುರುವಾಗಲಿವೆ. ಬಹುತೇಕ ಅಕ್ಟೋಬರ್ ಅಥವಾ ನವೆಂಬರ್ ನಲ್ಲಿ ಆ ಸಿನಿಮಾಗಳಿಗೆ‌‌ಚಾಲನೆ ಸಿಗಬಹುದು ಎನ್ನುವ ಮಾತು‌ಅವರದು. ಉಳಿದಂತೆ‌ ಇಲ್ಲಿ ‘ ಕಿಯಾ’ ಬೇರಾರು ಅಲ್ಲ.ಅವರು ತೆಗೆದುಕೊಂಡಿರುವ ಹೊಸ‌ಕಾರು!

Categories
ಸಿನಿ ಸುದ್ದಿ

ಹೊಸಬರ ಕನಸಿಗೆ ಜೋಗಿ ಪ್ರೇಮ್ ಸಾಥ್-

ಯುವ ನಿರ್ದೇಶಕ ಸ್ಮಿತೇಶ್ ಎಸ್ ಬಾರ್ಯ ನಿರ್ದೇಶನದ ‘ಕನಸು ಮಾರಾಟಕ್ಕಿದೆ’ ಚಿತ್ರ ಈಗಾಗಲೇ ಜೋರು ಸುದ್ದಿಯಾಗುತ್ತಿದ್ದು, ಸಿನೆಮಾದ ಮೊದಲ ಟೀಸರ್ ರಿಲೀಸ್ ಗೆ ನಿರ್ದೇಶಕ ಜೋಗಿ ಪ್ರೇಮ್ ಬುಧವಾರ ಸಂಜೆ 5 ಕ್ಕೆ ಚಾಲನೆ‌ ನೀಡುತ್ತಿದ್ದಾರೆ. ಶಿವಕುಮಾರ್ ನಿರ್ಮಾಣದ ಈ ಚಿತ್ರಕ್ಕೆ‌ ಶರತ್ ಕುಮಾರ್ , ಪ್ರಶಾಂತ್ ಕೋಟ್ಯಾನ್ ಪಾದೆಗುತ್ತು, ಸೆಲ್ವ ರಾಜ್ ಸಹ ನಿರ್ಮಾಣವಿದೆ. ಕೊಡಲಿದ್ದಾರೆ. ನವೀನ್ ಪೂಜಾರಿ ಕಥೆ ಬರೆದರೆ, ಅನೀಶ್ ಪೂಜಾರಿ ಚಿತ್ರಕಥೆ, ಸಂಭಾಷಣೆ ಇದೆ. ಮಾನಸ‌ ಹೊಳ್ಳ ಸಂಗೀತವಿದೆ. ಸಂತೋಷ ಆಚಾರ್ಯ ಛಾಯಾಗ್ರಹಣವಿದೆ. ಗಣೇಶ್ ನೀರ್ಜಾಲ್ ಸಂಕಲನವಿದೆ.

Categories
ಸಿನಿ ಸುದ್ದಿ

ಲಗ್ನ ಪತ್ರಿಕೆ ಹಂಚಲು ರೆಡಿಯಾದ ಅರವಿಂದ್ ಕೌಶಿಕ್- ಕಲರ್ಸ್ ನಲ್ಲಿ ಕಲರ್ ಫುಲ್ ಸ್ಟೋರಿ

 

 

 

 

ನಿರ್ದೇಶಕ ಅರವಿಂದ್ ಕೌಶಿಕ್ ಇದೀಗ ಲಗ್ನ ಪತ್ರಿಕೆ ಹಂಚೋಕೆ ರೆಡಿಯಾಗಿದ್ದಾರೆ!

ಅರೇ, ಹೀಗಂದಾಕ್ಷಣ ಮತ್ತೊಂದು ಮದ್ವೆಗೆ ಏನಾದರೂ ಅವರು ತಯಾರಿ ನಡೆಸಿದ್ದಾರಾ ಅನ್ನೋ ಪ್ರಶ್ನೆ ಸಹಜ. ಆದರೆ, ಅವರು ಹೊಸ ಮದ್ವೆ ಆಗ್ತಾ ಇಲ್ಲ, ಬದಲಾಗಿ ಮದ್ವೆಗೆ ಸಂಬಂಧಿಸಿದ ಹೊಸ ಬಗೆಯ ಕಥೆ ಹೆಣೆದು ಪ್ರೇಕ್ಷಕರ ಮುಂದೆ ಬರೋಕೆ ಸಜ್ಜಾಗಿದ್ದಾರೆ.
ಹೌದು, ಕಿರುತೆರೆ ಹಾಗೂ ಹಿರಿತೆರೆಯಲ್ಲಿ ತಮ್ಮದೇ ಛಾಪು ಮೂಡಿಸಿರುವ ಅರವಿಂದ್ ಕೌಶಿಕ್ ಈಗ ಕಲರ್ಸ್ ಕನ್ನಡ ವಾಹಿನಿಯಲ್ಲಿ ಕಲರ್ ಫುಲ್ ಸ್ಟೋರಿ ಮೂಲಕ ರಂಜಿಸಲು ತಮ್ಮ ತಂಡದೊಂದಿಗೆ ತಯಾರಾಗಿದ್ದಾರೆ.
ಬರೀ ರಿಮೇಕ್ ಹಾವಳಿ ಇರುವ ಈ ದಿನಮಾನದಲ್ಲೂ ಅವರು ದೇಸಿ ಸೊಗಡಿನ‌ ಪಕ್ಕಾ ನಮ್ಮತನ ಇರುವ ಸ್ವಂಥದ್ದೊಂದು ಕಥೆ ಹೆಣೆದು ಧಾರಾವಾಹಿ ಮೂಲಕ ಮನೆ ಮಂದಿಯ‌ ಮನ ತಣಿಸಲು ಹೊರಟಿದ್ದಾರೆ.
ಈ ಧಾರಾವಾಹಿ ಮೂಲಕ ಅಪ್ಪಟ ಕನ್ನಡದ ಪ್ರತಿಭಾವಂತರನ್ನ ಹಾಗೂ ಕ್ರಿಯಾಶೀಲ ಬರಹಗಾರರಿರುವ ತಂಡ ಕಟ್ಟಿಕೊಂಡು ಹೊಸ ಸವಿರುಚಿ ಉಣಬಡಿಸುವ ಉತ್ಸಾಹದಲ್ಲಿದ್ದಾರೆ.
ಅವರ ನಿರ್ದೇಶನದ ‘ಲಗ್ನಪತ್ರಿಕೆ’ ಧಾರಾವಾಹಿಯಲ್ಲಿ
ಸುಂದರ್ ಮತ್ತು ನವೀನ್ ಸಾಗರ್ ಕೈ ಜೋಡಿಸಿದ್ದಾರೆ. ಅವರ ಜೊತೆ ಅರವಿಂದ್ ಕೂಡ ಕಥೆ, ಚಿತ್ರಕಥೆಯಲ್ಲಿ ನಿರತರಾಗಿದ್ದಾರೆ.
ಕ್ರಿಯಾಶೀಲ ಬರಹಗಾರ ನವೀನ್ ಸಾಗರ್ ಲಗ್ನ ಪತ್ರಿಕೆಗೆ ಮಾತುಗಳನ್ನು ಪೋಣಿಸುತ್ತಿರುವುದು ವಿಶೇಷ.
ಅರವಿಂದ್ ಕೌಶಿಕ್ ಅವರ ಲಗ್ನ ಪತ್ರಿಕೆ ಸಂಭ್ರಮಕ್ಕೆ ಕಲಾವಿದರಾದ ಸುಂದರ್,ರವಿ ಭಟ್, ರೇಣುಕ,ಮರೀನಾ ತಾರಾ ,ಜ್ಯೋತಿ ,ಕುಲ್ದೀಪ್ ,ಸುಪ್ರಿಯಾ,ದರ್ಶನ್ ಸೂರ್ಯ , ಸಂಜನಾ ಬುರ್ಲಿ , ಸೂರಜ್ ಹೂಗಾರ್ ಸಾಕ್ಷಿಯಾಗಲಿದ್ದಾರೆ.
ಮನೋಹರ್ ಯಾಪ್ಲರ್, ಕ್ಯಾಮೆರಾ ಹಿಡಿದರೆ, ಗಣಪತಿ ಭಟ್ ಸಂಕಲನವಿದೆ. ಸಂಗೀತ ಅರ್ಜುನ್ ರಾಮು ಸಂಗೀತವಿದೆ. ಗಣೇಶ್ ಕಾರಂತ್ , ಸ್ಪರ್ಶಾ ಹಾಡಿದ್ದಾರೆ. ಸಹ ನಿರ್ದೇಶಕ ಸುರೇಶ್ ಕುಣಿಗಲ್ ಸಾಥ್ ನೀಡಿದ್ದಾರೆ. ಕುಲ್ದೀಪ್ ಹಾಗು ಚೇತನ್ ನಿರ್ಮಾಣ ಕೆಲಸದ ಉಸ್ತುವಾರಿ ಹೊತ್ತಿದ್ದಾರೆ.
ಅಂತೂ ಲಾಕ್ ಡೌನ್ ಆಗಿ ಬೇಸತ್ತಿದ್ದ ಮನೆ ಮಂದಿ ಒಂದೊಳ್ಳೆಯ ಮದುವೆ ಊಟದಷ್ಟು ರುಚಿ ಈ ಧಾರಾವಾಹಿಯಿಂದ ನಿರೀಕ್ಷಿಸಬಹುದು.

ಅರವಿಂದ್ ಕೌಶಿಕ್

Categories
ಸಿನಿ ಸುದ್ದಿ

ಅಕ್ಕ – ತಂಗಿಯರೆಂದರೆ ಹೀಗಿರಬೇಕು!

ಸ್ಟಾರ್ ಸಿಸ್ಟರ್

ನೇಹಾ- ಸೋನು‌‌ ಆತ್ಮೀಯತೆಯ‌ ಆಟ

‌ಚೆಂದನವನಲ್ಲಿ ಮಿಂಚುತ್ತಿರುವ ಸ್ಟಾರ್ ಸಿಸ್ಟರ್ ಪೈಕಿ ನೇಹಾ ಮತ್ತು ಸೋನು ಕೂಡ ಇದ್ದಾರೆ. ಇವ್ರು ಚಿತ್ರ ರಂಗದ ಹೆಸರಾಂತ ಮೆಕಪ್ ಕಲಾವಿದ ರಾಮಕೃಷ್ಣ ಅವರ ಪುತ್ರಿಯರು ಎನ್ನುವುದು ಬಣ್ಣದ ಲೋಕಕ್ಕೆ ಗೊತ್ತಿರುವ ಸಂಗತಿ. ಅದೃಷವೇ ಎನ್ನುವಂತೆ ಇಬ್ಬರು ಈಗ ಕಲರ್ಫುಲ್ ದುನಿಯಾ ಸ್ಟಾರ್ ಸಹೋದರಿಯರು.

 

ನೇಹಾ ಸೀರಿಯಲ್ ಜಗತ್ತಿನಲ್ಲಿ ಬಹುಬೇಡಿಕೆಯ ನಟಿಯಾಗಿ ಮಿಂಚುತ್ತಿದ್ದರೆ, ಸೋನು ತಾನೇನುಕಮ್ಮಿಇಲ್ಲ ಅಂತ ಸಿನಿಮಾರಂಗದ ಬಹುಬೇಡಿಕೆ ನಟಿಆಗಿದ್ದಾರೆ. ಇಬ್ಬರು ಈಗಬಿಡುವಿಲ್ಲದ. ಬ್ಯುಸಿನಟಿಯರು.ಈಗ ಕೊರೋನಾಕಾರಣ ಚಿತ್ರೀಕರಣ ಇಲ್ಲದೆ ಮನೆಯಲ್ಲಿ ಕುಳಿತಿರುವ ನೇಹಾ ಮತ್ತು ಸೋನು, ಪುಟಾಣಿಗಳ ಹಾಗೆ ತಮ್ಮ ಅನನ್ಯ ಪ್ರೀತಿಗೆ, ಒಡನಾಟಕ್ಕೆ, ಆತ್ಮೀಯತೆಗೆ ಸಾಕ್ಷಿಯಾಗುವಂತೆ ಕ್ಯಾಮರಾಕ್ಕೆ ಪೋಸು ನೀಡಿದ್ದಾರೆ.

ಗುಂಡು ಮಕ್ಕಳಿಲ್ಲದ ಮೆಕಪ್ ಕಲಾವಿದ ರಾಮಕೃಷ್ಣ ಅವರಿಗೆ ಇವರೇ ಮುದ್ದಿನ ಗಂಡುಮಕ್ಕಳು.ಅಪ್ಪ-ಅಮ್ಮನ ಮುದ್ದಿನಸಹೋದರಿಯರು. ಬೇಡಿಕೆಯ ನಟಿಯರಾದರೂ, ಕಿಂಚಿತ್ತು ಜಂಬ ಅವರಲಿಲ್ಲ.ಸರಳ- ಸಜ್ಜನಿಕೆಯೇ ಅವರ ಆಸ್ತಿ. ಹಾಗೆ ಸುಮ್ಮನೆ ಸ್ಟಾರ್ ಸಿಸ್ಟರ್ ಕ್ಯಾಮರಾ ಕ್ಕೆ ಪೋಸು ನೀಡಿರುವ ರೀತಿ ನೋಡಿದರೆ, ಇತರೆಯವರಿಗೂ ಮಾದರಿ…