Categories
ಸಿನಿ ಸುದ್ದಿ

ಉಪ್ಪಿ ಸಿನಿಮಾ ನಿಲ್ಲಿಸಿ, ಹೊಸ ಪ್ರತಿಭೆಗೆ ಆಕ್ಷನ್‌ ಕಟ್‌ ಹೇಳಲು ಮುಂದಾದ ನಿರ್ದೇಶಕ ಶಶಾಂಕ್‌

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ನಿರ್ದೇಶಕ ಶಶಾಂಕ್‌, ತಮ್ಮದೇ ನಿರ್ಮಾಣದ ಉಪೇಂದ್ರ ಹಾಗೂ ಹರಿಪ್ರಿಯ ಜೋಡಿಯ ಸಿನಿಮಾಕ್ಕೆ ಆಕ್ಷನ್‌-ಕಟ್‌ ಹೇಳಿ ಇಷ್ಟರಲ್ಲಿಯೇ ಸಿನಿಮಾವನ್ನು ರಿಲೀಸ್‌ ಹಂತಕ್ಕೆ ತಂದು ನಿಲ್ಲಿಸುತ್ತಿದ್ದರೋ ಏನೋ, ಆದರೆ, ಕೊರೊನಾ ಹಿನ್ನೆಲೆಯಲ್ಲಿ ಅವರ ಬಹು ನಿರೀಕ್ಷಿತ ಪ್ರಾಜೆಕ್ಟ್‌ ಅರ್ಧಕ್ಕೆ ನಿಂತಿದೆ. ಈ ನಡುವೆಯೇ ಈಗ ಹೊಸ ಸಿನಿಮಾವೊಂದನ್ನು ಅನೌನ್ಸ್‌ ಮಾಡಿದ್ದಾರೆ. ವಿಶೇಷ ಅಂದ್ರೆ ಈಗವರು ಹೊಸ ಪ್ರತಿಭೆಗೆ ಆಕ್ಷನ್‌ ಕಟ್‌ ಹೇಳಲು ಮುಂದಾಗಿದ್ದಾರೆ. ಆ ಚಿತ್ರದ ಟೈಟಲ್‌ ಕೂಡ ಈಗ ರಿವೀಲ್‌ ಆಗಿದೆ.


ʼಲವ್‌ 360ʼ ಎನ್ನುವುದು ಆ ಚಿತ್ರದ ಹೆಸರು. ಹೆಸರೇ ಹೇಳುವಂತೆ ಇದೊಂದು ಪಕ್ಕಾ ಲವ್‌ ಸ್ಟೋರಿ ಸಿನಿಮಾ. ಹೊಸ ತಲೆಮಾರಿನ ಯುವ ಜನತೆಗೆ ಹಿಡಿಸುವಂತಹ ಕಥೆಯೊಂದನ್ನು ರೆಡಿ ಮಾಡಿಕೊಂಡು ಲವ್‌ ೩೬೦ ಹೆಸರಲ್ಲಿ ಸಿನಿಮಾ ಮಾಡಲು ಹೊರಟಿದ್ದಾರಂತೆ ನಿರ್ದೇಶಕ ಶಶಾಂಕ್.‌ ಲವ್‌ ಅನ್ನೋದೇ ಒಂದು ಯುನಿವರ್ಸಲ್‌ ಸಬ್ಜೆಕ್ಟ್.‌ ಪ್ರತಿಯೊಬ್ಬರಲ್ಲೂ ಒಂದಲ್ಲೊಂದು ಬಗೆಯಲ್ಲಿ ಪ್ರೀತಿಯ ಧಾರೆ ಹರಿದೇ ಇರುತ್ತೆ. ಆ ದೃಷ್ಟಿಯಲ್ಲಿ ತುಂಬಾ ಆಫ್ಟ್‌ ಆಗುವ ವಿಷಯವನ್ನು ಕೈಗೆತ್ತಿಕೊಂಡಿದ್ದು ಮಾತ್ರವಲ್ಲ, ಈ ಕಥೆಗೆ ತಕ್ಕಂತೆ ಬಳ್ಳಾಗಿ ಮೂಲದ ಹೊಸ ಪ್ರತಿಭೆಯನ್ನು ಚಿತ್ರದ ನಾಯಕನನ್ನಾಗಿಯೇ ಆಯ್ಕೆ ಮಾಡಿಕೊಂಡಿದ್ದಾರೆ.


ಅಂದಹಾಗೆ, ಬಳ್ಳಾರಿ ಮೂಲದ ಯುವ ಪ್ರತಿಭೆ ಪ್ರವೀಣ್‌ ಈ ಚಿತ್ರದ ನಾಯಕ. ಎಂಜಿನಿಯರಿಂಗ್‌ ಮುಗಿಸಿರುವ ಈ ಹುಡುಗನಿಗೆ ಸಿನಿಮಾ ಅಂದ್ರೆ ವಿಪರೀತ ಹುಚ್ಚಂತೆ. ಅದರಲ್ಲೂ ನಾಯಕನಾಗಿಯೇ ತೆರೆ ಮೇಲೆ ಕಾಣಿಸಿಕೊಳ್ಳಬೇಕೆಂಬ ಹಂಬಲವಂತೆ. ಸದ್ಯಕ್ಕೆ ಈ ಚಿತ್ರಕ್ಕೆ ಪವೀಣ್‌ ನಾಯಕರಾಗಿ ಆಯ್ಕೆ ಆಗಿದ್ದು ಬಿಟ್ಟರೆ, ನಾಯಕಿ ಸೇರಿದಂತೆ ಉಳಿದ ಪಾತ್ರಗಳಿಗೆ ಕಲಾವಿದರ ಹುಡುಕಾಟ ನಡೆಸಿದ್ದಾರಂತೆ ನಿರ್ದೇಶದ ಶಶಾಂಕ್.‌ʼ ನಾಯಕಿ ಸೇರಿದಂತೆ ಉಳಿದ ಪಾತ್ರಗಳಿಗೆ ಕಲಾವಿದರನ್ನು ಆಯ್ಕೆ ಮಾಡಿಕೊಳ್ಳುವ ಕೆಲಸ ಈಗ ನಡೆದಿದೆ. ಈ ವಾರದೊಳಗೆ ನಾಯಕಿ ಅಯ್ಕೆ ಫೈನಲ್‌ ಆಗಲಿದೆ. ಉಳಿದಂತೆ ಚಿತ್ರದ ತಂತ್ರಜ್ಜರು ಆಯ್ಕೆ ಈಗಾಗಲೇ ನಡೆದು ಹೋಗಿದೆ ಎನ್ನುತ್ತಾರವರು.


“ಲವ್‌ 360” ಗೆ ಶಶಾಂಕ್‌ ಅವರೇ ನಿರ್ದೇಶಕ ಕಮ್‌ ನಿರ್ಮಾಪಕ. ಶಶಾಂಕ್‌ ಫಿಲ್ಮ್‌ ಬ್ಯಾನರ್‌ ನಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದೆ. ಆಗಸ್ಟ್‌ ನಲ್ಲಿ ಈ ಚಿತ್ರಕ್ಕೆ ಚಿತ್ರೀಕರಣ ಶುರುವಾಗಲಿದೆಯಂತೆ. ಸದ್ಯಕ್ಕೆ ಕಲಾವಿದರ ಆಯ್ಕೆ ಹಾಗೂ ಒಂದಷ್ಟು ಸಿದ್ದತೆ ನಡೆಯುತ್ತಿವೆ ಎನ್ನುತ್ತಾರವರು. ಇನ್ನು ಅವರದೇ ಬ್ಯಾನರ್‌ನಲ್ಲಿ ನಿರ್ಮಾಣವಾಗಬೇಕಿದ್ದ ಉಪೇಂದ್ರ- ಹರಿಪ್ರಿಯ ಕಾಂಬಿನೇಷನ್‌ ಸಿನಿಮಾ ಶುರುವಾಗುವುದು ಯಾವಾಗ ಎನ್ನುವುದಕ್ಕೂ ಪ್ರತಿಕ್ರಿಯೆ ಕೊಟ್ಟಿದ್ದಾರೆ.ʼ

ಅದು ಬಿಗ್‌ ಬಜೆಟ್‌ ಸಿನಿಮಾ. ಮೇಲಾಗಿ ಜನರ ಮಧ್ಯೆಯೇ ಸಾಕಷ್ಟು ದೃಶ್ಯಗಳನ್ನು ಚಿತ್ರೀಕರಿಸಬೇಕಿದೆ. ಆದರೆ ಈ ಕೊರೋನಾ ಸಂದರ್ಭದಲ್ಲಿ ಅದೆಲ್ಲ ಸಾಧ್ಯವೇ ಇಲ್ಲ. ಅದೇ ಕಾರಣದಿಂದ ಅದನ್ನು ಸದ್ಯಕ್ಕೆ ನಿಲ್ಲಿಸಿ, ಈ ಸಿನಿಮಾ ಶುರುಮಾಡುತ್ತಿದ್ದೇವೆ ಎನ್ನುತ್ತಾರೆ ನಿರ್ದೇಶಕ ಶಶಾಂಕ್.‌

Categories
ಸಿನಿ ಸುದ್ದಿ

ಅಂಡಾಳಮ್ಮ ಎಂಬ ನೂತನ ಕಥೆ ! ಶ್ರೀನಿ- ನೂತನ್‌ ಉಮೇಶ್ ಜೋಡಿಯ ಹನಿ ಹನಿ ಹಾರರ್‌ ಕಹಾನಿ!!


ಕನ್ನಡ ಸಿನಿಮಾರಂಗ ಈಗ ಮೆಲ್ಲನೆ ಗರಿಗೆದರುತ್ತಿದೆ. ಕನ್ನಡದಲ್ಲೀಗ ಹೊಸ ಸಿನಿಮಾಗಳ ಕಲರವ ಆಗುತ್ತಿರುವುದು ಹೊಸ ಬೆಳವಣಿಗೆಯೇ ಸರಿ. ಕೊರೊನಾ ಸಮಸ್ಯೆಗೆ ನಲುಗಿದ್ದ ಚಿತ್ರರಂಗ ಈಗ ಚೇತರಿಸಿಕೊಳ್ಳುತ್ತಿದೆ. ಹೊಸಬರು ಆಸೆಯ ಕಂಗಳಲ್ಲೇ ತಮ್ಮ ನೂತನ ಸಿನಿಮಾಗಳಿಗೆ ಚಾಲನೆ ಕೊಡುತ್ತಿದ್ದಾರೆ. ಅರ್ಧಕ್ಕೆ ನಿಂತಿದ್ದ ಚಿತ್ರಗಳು ಕೂಡ ಇದೀಗ ಶುರುವಾಗುತ್ತಿವೆ. ಒಂದಷ್ಟು ಸಿನಿಮಾಗಳು ಬಿಡುಗಡೆಗೂ ತಯಾರಾಗುತ್ತಿವೆ. ಈಗ ಆದರ ಬೆನ್ನಲ್ಲೇ ಹೊಸ ಚಿತ್ರಗಳು ಸೆಟ್ಟೇರುತ್ತಿವೆ. ಆಷಾಢ ಶುರುವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅದೆಷ್ಟೋ ಸಿನಿಮಾಗಳು ಸೆಟ್ಟೇರಿವೆ. ಪೂಜೆ ಮುಗಿಸಿಕೊಂಡಿವೆ. ಅಂತೆಯೇ ನಿರ್ದೇಶಕ ನೂತನ್‌ ಉಮೇಶ್‌ ಅವರೂ ಸಹ ಹೊಸದೊಂದು ಸಿನಿಮಾ ಅನೌನ್ಸ್‌ ಮಾಡಿದ್ದಾರೆ.


ಹೌದು, ಈಗಾಗಲೇ ನೂತನ್‌ ಉಮೇಶ್‌ ಅವರು ಸದ್ದಿಲ್ಲದೆಯೇ, ಒಂದು ಸಿನಮಾ ಮಾಡಿದ್ದಾಗಿದೆ. ಕನ್ನಡ, ತೆಲುಗು, ತಮಿಳು ಹಾಗು ಮಲಯಾಳಂ ಭಾಷೆಯಲ್ಲಿ ತಯಾರಾಗಿರುವ ಸಿನಿಮಾ ಲಾಕ್‌ಡೌನ್‌ ಕಥಾಹಂದರ ಹೊಂದಿದೆ. ಅದೊಂದು ವಿಶೇಷ ಕಥೆ ಎನ್ನುವ ನಿರ್ದೇಶಕ ನೂತನ್‌ ಉಮೇಶ್‌, ನಾಲ್ಕು ಭಾಷೆಯಲ್ಲಿ ಬೇರೆ ಬೇರೆ ಹೀರೋಗಳಿದ್ದಾರೆ. ಹಾಗಂತ, ಆಯಾ ಭಾಷೆಯಲ್ಲೇ ನಟರಿದ್ದರೂ, ಎಲ್ಲಾ ನಟರಿಗೂ ಕಥೆಯೊಳಗಿನ ಲಿಂಕ್‌ ಇರಲಿದೆ ಎನ್ನುವ ಅವರು ಆ ಚಿತ್ರದ ಬಿಡುಗಡೆ ತಯಾರಿ ಮಾಡಿಕೊಳ್ಳುತ್ತಿರುವುದಾಗಿ ಹೇಳುತ್ತಾರೆ. ಈಗ ಹೊಸ ಸುದ್ದಿ ಅಂದರೆ, ಅವರು ತಮ್ಮ ಹೊಸ ಪ್ರಾಜೆಕ್ಟ್‌ಗೂ ಚಾಲನೆ ಕೊಟ್ಟಿದ್ದಾರೆ. ನೂತನ್‌ ಉಮೇಶ್‌ ಅವರ ಡ್ರೀಮ್‌ ಪ್ರಾಜೆಕ್ಟ್‌ ಅದು ಅನ್ನೋದು ವಿಶೇಷತೆಗಳಲ್ಲೊಂದು.


ಹೌದು, ನೂತನ್‌ ಉಮೇಶ್‌ ಅವರು, ಬಹಳ ದಿನಗಳಿಂದಲೂ ಒಂದೊಳ್ಳೆಯ ಕಥೆ ಮಾಡಿಕೊಂಡು, ಸಿನಿಮಾ ಮಾಡುವ ಉತ್ಸಾಹದಲ್ಲಿದ್ದರು. ಇನ್ನೇನು ಶುರು ಮಾಡಬೇಕು ಅನ್ನುವ ಹೊತ್ತಿಗೆ ಕೊರೊನಾ ಇತ್ಯಾದಿ ಸಮಸ್ಯೆಗಳು ಎದುರಾಗಿಬಿಟ್ಟಿದ್ದವು. ಈಗ ಅವರು ಒಂದೊಳ್ಳೆಯ ಹಾರರ್‌ ಕಥೆ ಹಿಡಿದು ಹೊರಟಿದ್ದಾರೆ. ಆ ಚಿತ್ರಕ್ಕೆ “A tale of ಅಂಡಾಳಮ್ಮ” ಎಂದು ನಾಮಕರಣ ಮಾಡಿದ್ದಾರೆ. ಹೌದು, ” ಹನಿ ಹನಿ ಹಾರರ್‌ ಕಹಾನಿ” ಎಂಬ ಅಡಿಬರಹವಿರುವ ಈ ಚಿತ್ರದ ಟೈಟಲ್‌ ಮಾತ್ರ ಅನೌನ್ಸ್‌ ಮಾಡಿರುವ ನೂತನ್‌ ಉಮೇಶ್‌, ಚಿತ್ರಕ್ಕೆ ಶ್ರೀನಿ ಅವರನ್ನು ಹೀರೋ ಮಾಡಿದ್ದಾರೆ. ಶ್ರೀನಿ ಈ ಹಿಂದೆ “ಟೋಪಿವಾಲ” ನಿರ್ದೇಶಿಸಿದ್ದರು. “ಶ್ರೀನಿವಾಸ ಕಲ್ಯಾಣ” ಮತ್ತು ಬೀರ್‌ಬಲ್‌ʼ ಸಿನಿಮಾದಲ್ಲಿ ನಟಿಸುವುದರ ಜೊತೆಗೂ ನಿರ್ದೇಶನ ಮಾಡಿದ್ದರು.

ಈಗ “A tale of ಅಂಡಾಳಮ್ಮ” ಸಿನಮಾದಲ್ಲಿ ನಟಿಸುತ್ತಿದ್ದಾರೆ. ಈ ಶೀರ್ಷಿಕೆಯೇ ಒಂದೊಳ್ಳೆಯ ಮಜಾ ಎನಿಸುತ್ತದೆ. ಕಥೆ ಕೂಡ ಅಷ್ಟೇ ಮಜವಾಗಿದೆ ಎನ್ನುವ ನಿರ್ದೇಶಕರು, ಅಂಡಾಳಮ್ಮ ಅಂದರೇನು? ಎಂಬ ಪ್ರಶ್ನೆಗೆ ಸಿನಿಮಾ ನೋಡಬೇಕು ಎಂದಷ್ಟೇ ಹೇಳುತ್ತಾರೆ. ಅದೇನೆ ಇರಲಿ, ಕನ್ನಡದಲ್ಲಿ ಈಗಂತೂ ಹೊಸಬಗೆಯ ಕಥೆಗಳು ಹುಟ್ಟಿಕೊಳ್ಳುತ್ತಿವೆ.

ಆ ಮೂಲಕ ಹೊಸ ಸಂಚಲನವನ್ನೂ ಸೃಷ್ಟಿಸುತ್ತಿವೆ. ಶ್ರೀನಿ ಹಾಗು ನೂತನ್‌ ಉಮೇಶ್‌ ಅವರ ಈ “A tale of ಅಂಡಾಳಮ್ಮ” ಸಿನಿಮಾ ಕೂಡ ಸಕ್ಸಸ್‌ ಆಗಲಿ. ಅಂದಹಾಗೆ, ಈ ಚಿತ್ರ ಮೋಹಕ್‌ ಸಿನಿಮಾಸ್‌ ಪ್ರೆಸೆಂಟ್ಸ್‌ ಮೂಲಕ ಶುರುವಾಗುತ್ತಿದೆ. ಸದ್ಯಕ್ಕೆ ಶ್ರೀನಿ ಹೀರೋ. ಅವರಿಗೆ ನಾಯಕಿ ಯಾರು, ಯಾರೆಲ್ಲಾ ತಾಂತ್ರಿಕ ವರ್ಗದವರು ಇರುತ್ತಾರೆ, ಕಲಾವಿದರು ಯಾರು ಎಂಬಿತ್ಯಾದಿ ಪ್ರಶ್ನೆಗಳಿಗೆ ಇಷ್ಟರಲ್ಲೇ ಉತ್ತರ ಸಿಗಲಿದೆ.

Categories
ಸಿನಿ ಸುದ್ದಿ

ತನುಷ್ ಈಗ ನಟ್ವರ್ ಲಾಲ್ ! ಬಿಡುಗಡೆಗೆ ರೆಡಿಯಾಗಿರೋ ಚಿತ್ರದ ಫಸ್ಟ್ ಲುಕ್ ಗೆ ಭರಪೂರ ಮೆಚ್ಚುಗೆ

ಕನ್ನಡ ಚಿತ್ರರಂಗದಲ್ಲಿ ಗಟ್ಟಿ ನೆಲೆ ಕಾಣಬೇಕು ಅಂತ ನೂರಾರು ಪ್ರತಿಭೆಗಳು ತಮ್ಮ ಶ್ರಮದಿಂದಲೇ ಗುರುತಿಸಿಕೊಳ್ಳೋ ಪ್ರಯತ್ನ ಮಾಡುತ್ತಲೇ ಇದ್ದಾರೆ. ಕೆಲವರು ನೆಲೆ ಕಂಡರೆ ಇನ್ನು ಕೆಲವರು ಆ ಪ್ರಯತ್ನದಲ್ಲಿದ್ದಾರೆ
ಈಗ ಯುವ ನಟ ತನುಷ್ ಶಿವಣ್ಣ ಕೂಡ ಗಾಂಧಿನಗರದಲ್ಲಿ ತಕ್ಕಮಟ್ಟಿಗಿನ ಸದ್ದು ಮಾಡುತ್ತಿದ್ದಾರೆ.
ಹೌದು, ಈ ಹಿಂದೆ “ಮಡಮಕ್ಕಿ” ಎಂಬ ಜನ ಮೆಚ್ಚುಗೆಯ ಸಿನಿಮಾ ಮಾಡಿ ಆ ಮೂಲಕ ಸೈ ಎನಿಸಿಕೊಂಡು ಭವ್ಯ ಭರವಸೆ ಮೂಡಿಸಿದ್ದ ತನುಷ್ ಈಗ ಮತ್ತೊಂದು ಭರವಸೆಯ ಸಿನಿಮಾ ಕಟ್ಟಿಕೊಟ್ಟಿದ್ದಾರೆ.


ತನುಷ್ ಶಿವಣ್ಣ ಈಗ “ನಟ್ವರ್ ಲಾಲ್” ಆಗಿದ್ದಾರೆ. ಚಿತ್ರ ಇನ್ನೇನು ಬಿಡುಗಡೆಗೂ ಸಜ್ಜಾಗಿದೆ. ಇತ್ತೀಚೆಗೆ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ
ಚಿತ್ರದ ಫಸ್ಟ್ ಲುಕ್ ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ. ಮೊದಲ ಲುಕ ನಲ್ಲೇ ಭಾರೀ ಸದ್ದು ಮಾಡುತ್ತಿದೆ ಅನ್ನೋದು‌ ವಿಶೇಷ.

ವಿ.ಲವ ನಿರ್ದೇಶಿಸುತ್ತಿರುವ ಈ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಸದ್ಯ ಡಬ್ಬಿಂಗ್ ನಡೆಯುತ್ತಿದೆ.
ಕರ್ನಾಟಕದ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆದಿದೆ. ಬಹುತೇಕ ಚಿತ್ರೀಕರಣ ವಿವಿಧ ಸೆಟ್ ಗಳಲ್ಲಿ ನಡೆದಿರುವುದು ಈ ಚಿತ್ರದ ವಿಶೇಷ.
ಆಕ್ಷನ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರದ ಹೀರೋ ತನುಷ್ ಅವರಿಗೆ ಸೋನಾಲ್ ಮಾಂಟೆರೊ ನಾಯಕಿ.


ರಾಜೇಶ್ ನಟರಂಗ, ಸುಜಯ್ ಶಾಸ್ತ್ರಿ, ವಿಜಯ್ ಚೆಂಡೂರ್, ಕೆ.ಎಸ್.ಶ್ರೀಧರ್, ಯಶ್ ಶೆಟ್ಟಿ, ಗಿರಿ ಗೌಡ, ನಾಗಭೂಷಣ್, ಕಾಕ್ರೋಜ್ ಸುಧೀ, ಕಾಮಿಡಿ ಕಿಲಾಡಿಗಳು ನಯನ, ರಾಜೇಂದ್ರ ಕಾರಂತ್, ರಘು ರಮಣಕೊಪ್ಪ, ಸುಂದರರಾಜ್, ಕಾಂತರಾಜ್ ಕಡ್ಡಿಪಡಿ, ಬಲ ರಾಜವಾಡಿ, ಹರಿಣಿ, ಪದ್ಮಾ ವಾಸಂತಿ, ನಾಗರಾಜ್ ಅರಸು, ಭೀಷ್ಮ ರಾಮಯ್ಯ, ಪ್ರಶಾಂತ್ ಸಿದ್ದಿ ಇತರರು ಇಲ್ಲಿದ್ದಾರೆ.


ಧರ್ಮ ವಿಶ್ ಸಂಗೀತವಿದೆ, ವಿಲಿಯಂ ಡೇವಿಡ್ ಛಾಯಾಗ್ರಹಣ ಮಾಡಿದರೆ, ಕೆ.ಎಂ.ಪ್ರಕಾಶ್ ಸಂಕಲನವಿದೆ. ಪ್ರಶಾಂತ್ ಗೌಡ ಕಲಾ ನಿರ್ದೇಶನ, ಡಿಫರೆಂಟ್ ಡ್ಯಾನಿ, ಥ್ರಿಲ್ಲರ್ ಮಂಜು, ರಾ ಪುಷ್ಪರಾಜು ಸಾಹಸ ನಿರ್ದೇಶನ ಹಾಗೂ ಧನಂಜಯ್ ಅವರ ನೃತ್ಯ ನಿರ್ದೇಶನವಿದೆ.

Categories
ಸಿನಿ ಸುದ್ದಿ

ಇನ್ನೂ ವ್ಯಾಕ್ಸಿನ್ ಹಾಕಿಸಿಕೊಂಡಿಲ್ಲ ಮೋಹಕ ತಾರೆ ರಮ್ಯಾ !? ಹೀಗಂತ ಅವರೇ ಹೇಳ್ಕೊಂಡವ್ರೆ!

ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಮೇಡಂ ಇನ್ನೂ ವ್ಯಾಕ್ಸಿನ್ ಹಾಕಿಸಿಕೊಂಡಿಲ್ಲ ಇದು ಈ ಕ್ಷಣದ ಬಿಗ್ ಬ್ರೇಕಿಂಗ್ ಸ್ಟೋರಿ.

ರೂಪಾಂತರಿ ಕೊರೊನಾ ಅಟ್ಟಹಾಸ ಇನ್ನೂ ಕಮ್ಮಿಯಾಗಿಲ್ಲ ದಯವಿಟ್ಟು ಎಲ್ಲರೂ ವ್ಯಾಕ್ಸಿನೇಷನ್ ಹಾಕಿಸಿಕೊಳ್ಳಿ ಅಂತ ಸರ್ಕಾರ ಸಾರಿ ಸಾರಿ ಹೇಳ್ತಿದೆ. ಸರ್ಕಾರ ಇಷ್ಟು ಹೇಳಿದರೂ, ಕೊರೊನಾ ಬಗ್ಗೆ ಅರಿವು ಮೂಡಿಸಿದ್ರೂ ಕೂಡ ಸೆಲೆಬ್ರಿಟಿ ಹುದ್ದೆಯಲ್ಲಿರುವ, ಸಾಮಾಜಿಕ ಜವಾಬ್ದಾರಿಯನ್ನ ನಿಭಾಯಿಸಬೇಕಾಗಿರುವ
ರಮ್ಯಾ ಮೇಡಂ ವ್ಯಾಕ್ಸಿನೇಷನ್‌ ಹಾಕಿಸಿಕೊಳ್ಳೋಕೆ ತಡ ಮಾಡ್ತಿದ್ದಾರೆ.

ಮಾಜಿ ನಟಿ, ಕಾಂಗ್ರೇಸ್ ಪಕ್ಷದ ಸಾಮಾಜಿಕ ಜಾಲತಾಣದ ಮುಖ್ಯಸ್ಥೆಯಾಗಿದ್ದಂತ ರಮ್ಯಾ ಅವರು ಕೊರೊನಾ ವ್ಯಾಕ್ಸಿನ್ ಹಾಕಿಸಿಕೊಳ್ಳೋದಕ್ಕೆ ತಡ ಮಾಡ್ತಿರೋದಕ್ಕೆ ಕಾರಣ ಕೊರೊನಾ ವ್ಯಾಕ್ಸಿನ್ ಬಗ್ಗೆ ಅವರಿಗಿರುವ ಕನ್ಫ್ಯೂಶನ್

https://www.instagram.com/tv/CRHJ6J_lqDv/?utm_medium=copy_link

ಹೌದು, ಕೊವ್ಯಾಕ್ಸಿನ್ ತಗೊಳ್ಳೋದಾ, ಕೊವಿಶೀಲ್ಡ್ ಹಾಕಿಸಿಕೊಳ್ಳೋದಾ ಅಂತ ನಮ್ಮ ಜನ ಕನ್ಫ್ಯೂಶನ್ ಕ್ರಿಯೇಟ್ ಮಾಡಿಕೊಳ್ತಾರೆ. ಅದರಂತೇ ಚಂದನವನದ ಮಾಜಿ ಪದ್ಮಾವತಿಗೂ ಯಾವ್ ವ್ಯಾಕ್ಸಿನ್ ತಗೋಬೇಕು ಅಂತ ಕನ್ಫ್ಯೂಶನ್ ಆಗ್ತಿದೆಯಂತೆ.

ಈ ಬಗ್ಗೆ ಕಾಮಿಡಿಯನ್ ಸೋನು ವೇಣುಗೋಪಾಲ್ ಜೊತೆ ಇನ್ಸ್ ಟಾಗ್ರಾಮ್ ಲೈವ್ ನಲ್ಲಿ ಮಾತನಾಡಿರುವ ಗೌರಮ್ಮ, ವ್ಯಾಕ್ಸಿನ್ ಹಾಕಿಸಿಕೊಳ್ಳಲೆಬೇಕು ಆದರೆ ಮೊಡರ್ನಾ ವ್ಯಾಕ್ಸಿನ್ ಬಂದರೆ 100 ಪರ್ಸೆಂಟ್ ಹಾಕಿಸಿಕೊಳ್ತೀನಿ ಎಂದಿದ್ದಾರೆ. ‌ಮೊಡರ್ನಾ ವ್ಯಾಕ್ಸಿನ್ ಗೆ ಪರ್ಮಿಷನ್‌ ಸಿಕ್ಕಿದೆ ಅದು ಬರೋವರೆಗೂ ವೇಯ್ಟ್ ಮಾಡಿ ಆಮೇಲೆ ತೆಗೆದುಕೊಳ್ಳೋದಕ್ಕೆ ರಮ್ಯಾ ನಿರ್ಧರಿಸಿದ್ದಾರೆ.

ಅಷ್ಟಕ್ಕೂ ಸದ್ಯಕ್ಕೆ ರಮ್ಯಾ ಮೇಡಂ ಅದೆಲ್ಲಿ ನೆಲೆಸಿದ್ದಾರೋ ಗೊತ್ತಿಲ್ಲ. ಮೊಡೊರ್ನಾ ಬಗ್ಗೆ ಮಾತನಾಡ್ತಿದ್ದಾರೆ ಅಂದರೆ ಮಂಡ್ಯ ಮೇಡಂ ಡೆಲ್ಲಿನಲ್ಲಿರೋದು ಡೌಟು ಮತ್ತೆಲ್ಲಿದ್ದಾರೆ ಅನ್ನೋ ಕೂತೂಹಲದ ಪ್ರಶ್ನೆಗೆ ಸದ್ಯಕ್ಕೆ ಉತ್ತರವಿಲ್ಲ. ಯಾಕಂದ್ರೆ ನಿನ್ನೆ ರಾತ್ರಿ ಲೈವ್ ಬಂದಾಗ ರಮ್ಯಕ್ಕನಿಗೆ ಎಲ್ಲಿದ್ದೀರಾ ಈಗ ಅಂತ ಫ್ಯಾನ್ಸ್ ಪ್ರಶ್ನೆ ಕೇಳಿದರೆ ಮನೆಯಲ್ಲಿದ್ದೀನಿ ಅಂತ ಹೇಳಿದರೆ ಹೊರೆತು,

ಯಾವ್ ಮನೆ? ಎಲ್ಲಿ ತಂಗಿದ್ದಾರೆ ಅನ್ನೋದನ್ನ ಕೊನೆಗೂ ಬಾಯ್ಬಿಟ್ಟು ಹೇಳಲಿಲ್ಲ. ಹೀಗಾಗಿ, ದಿಲ್ಲಿ ಮೇಡಂ ರಮ್ಯಾ ಅವರು ಎಲ್ಲಿದ್ದಾರೆ ಅನ್ನೋದು ಎಲ್ಲರ ಕೂತೂಹಲದ ಪ್ರಶ್ನೆ.

Categories
ಸಿನಿ ಸುದ್ದಿ

ಲಹರಿ ಮ್ಯೂಜಿಕ್‌ ಗೆ ವಜ್ರ ಕಿರೀಟ…! ಹಲವು ದಾಖಲೆಗಳ ಸೃಷ್ಟಿಸಿದ ಲಹರಿ ಮ್ಯೂಜಿಕ್ ಯುಟ್ಯೂಬ್‌ ಚಾನೆಲ್ ; ಕನ್ನಡಿಗರಿಗೆ ಪ್ರಶಸ್ತಿ ಅರ್ಪಣೆ ಮಾಡಿದ ಲಹರಿ ವೇಲು

ಲಹರಿ, ಇದು ಕನ್ನಡಿಗರ ಮನೆ ಮಾತಾದ ಹೆಸರು. ಲಹರಿ ಅಂದಾಕ್ಷಣ ನೆನಪಾಗುವುದೆ ʼಲಹರಿ ಆಡಿಯೋ ಸಂಸ್ಥೆʼ ಯಾಕಂದ್ರೆ, ಸಿನಿಮಾ, ಭಾವಗೀತೆ ಹಾಗೂ ಭಕ್ತಿ ಗೀತೆಗಳ ಆಡಿಯೋ ಸಂಗೀತ ಕ್ಷೇತ್ರದಲ್ಲಿ ಲಹರಿ ಮ್ಯೂಜಿಕ್‌ ಗೆ ಮಹತ್ತರ ಮೈಲುಗಲ್ಲು ಸ್ಥಾಪಿಸಿದ ಹೆಗ್ಗಳಿಕೆ ಇದೆ. ಅಷ್ಟು ಮಾತ್ರವೇ ಅಲ್ಲ, ದಕ್ಷಿಣ ಭಾರತೀಯ ಸಂಗೀತ ಕ್ಷೇತ್ರದಲ್ಲಿ ಬಹುದೊಡ್ಡ ಹೆಸರು ಲಹರಿ ಆಡಿಯೋ ಸಂಸ್ಥೆಯದ್ದು. ಅದರ ಸಾಧನೆಯ ಕಿರೀಟಕ್ಕೆ ಈಗಾಗಲೇ ಸಾಕಷ್ಟು ಪ್ರತಿಷ್ಟಿತ ಪ್ರಶಸ್ತಿಗಳು ಸಂದಿವೆ. ಆ ಸಾಲಿನಲ್ಲಿ ಈಗ ಅತೀ ಶ್ರೇಷ್ಟ ಎನ್ನಬಹುದಾದ ಗೌರವದ ಗರಿ ಮೂಡಿದೆ.


ಹೌದು, ಲಹರಿ ಮ್ಯೂಜಿಕ್‌ ಯುಟ್ಯೂಬ್‌ ಚಾನೆಲ್‌ಗೆ ಈಗ 1.18 ಕೋಟಿ ಯಷ್ಟು ಜನ ಚಂದದಾರಾಗಿದ್ದಾರೆ. ಇದು ಭಾರತೀಯ ಸಂಗೀತ ಕ್ಷೇತ್ರದ ಡಿಜಿಟಲ್‌ ಯುಗಕ್ಕೆ ಹೊಚ್ಚ ಹೊಸ ದಾಖಲೆಯೇ ಹೌದು. ಈ ಹಿನ್ನೆಲೆಯಲ್ಲಿ ಅಮೆರಿಕದ ನ್ಯೂಯಾರ್ಕ್‌ ನಲ್ಲಿರುವ ಯುಟ್ಯೂಬ್‌ ಸಂಸ್ಥೆಯಿಂದ ಲಹರಿ ಮ್ಯೂಜಿಕ್‌ ಗೆ ಪ್ರತಿಷ್ಟಿತ ʼಡೈಮಂಡ್‌ ಕ್ರಿಯೇಟರ್‌ ಅವಾರ್ಡ್‌ ಸಿಕ್ಕಿದೆ. ಸಹಜವಾಗಿಯೇ ಲಹರಿ ಸಂಸ್ಥೆಯ ಮಾಲೀಕರಾದ ಮನೋಹರ್‌ ನಾಯ್ಡು ಹಾಗೂ ಲಹರಿ ವೇಲು ಅವರ ಮುಖದಲ್ಲಿ ಸಂತಸದ ನಗೆ ಮೂಡಿಸಿದೆ.

ʼ ಇದು ನಮಗೆ ಸಿಕ್ಕ ಗೌರವವಲ್ಲ, ಸಮಸ್ತ ಕನ್ನಡಿಗರ ಸಹಕಾರದ ಫಲ. ಒಂದು ಸಣ್ಣ ಸಂಸ್ಥೆಯನ್ನು ಆರು ಕೋಟಿ ಕನ್ನಡಿಗರು ಪ್ರೋತಾಹಿಸಿ, ಬೆಳೆಸುತ್ತಾ ಬಂದಿದ್ದರ ಫಲದಿಂದಾಗಿಯೇ ಲಹರಿ ಸಂಸ್ಥೆ ಇವತ್ತು ದೊಡ್ಡ ಮಟ್ಟಕ್ಕೆ ಬೆಳೆದಿದೆ. ಹಾಗಾಗಿ ಇದು ಸಮಸ್ತ ಕನ್ನಡಿಗರಿಗೆ ಸಲಬೇಕಾದ ಗೌರವ. ಅವರಿಗೆ ಇದು ಅರ್ಪಣೆʼ ಎನ್ನುತ್ತಾರೆ ಲಹರಿ ಸಂಸ್ಥೆಯ ಮುಖ್ಯಸ್ಥರಾದ ಲಹರಿ ವೇಲು.
ಲಹರಿ ಮ್ಯೂಜಿಕ್‌ಗೆ ಈಗಾಗಲೇ ಯುಟ್ಯೂಬ್‌ ಸಂಸ್ಥೆಯಿಂದ ಎರಡು ಅವಾರ್ಡ್‌ ಸಿಕ್ಕಿವೆ. ಯುಟ್ಯೂಬ್‌ ಚಾನೆಲ್‌ಗೆ ಚಂದದಾರರ ಬಳಗವೂ ದಾಖಲೆಯಲ್ಲಿ ಜತೆಯಾದಂತೆಯೇ ಯುಟ್ಯೂಬ್‌ ಸಂಸ್ಥೆಯ ಕಡೆಯಿಂದ ಸಿಲ್ವರ್‌ ಹಾಗೂ ಗೋಲ್ಡನ್‌ ಅವಾರ್ಡ್‌ ಬಂದಿರುವುದು ಅದರ ಸಾಧನೆಯ ಸಿಕ್ಕ ಗರಿಮೆ. ಒಂದು ಲಕ್ಷ, 50 ಲಕ್ಷ ಹಾಗೂ 1 ಕೋಟಿಯಷ್ಟು ಜನರು ಕ್ರಮವಾಗಿ ಲಹರಿ ಮ್ಯೂಜಿಕ್‌ಗೆ ಚಂದದಾರರು ಆದಂತೆಲ್ಲ, ಯುಟ್ಯೂಬ್‌ ಸಂಸ್ಥೆ ದಾಖಲೆಯ ಗೌರವಗಳನ್ನು ನೀಡುತ್ತಾ ಬಂದಿದೆ.

ಈಗ ಲಹರಿ ಮ್ಯೂಜಿಕ್‌ ಯುಟ್ಯೂಬ್‌ ಸಾಧನೆಯಲ್ಲಿ ಡೈಮೆಂಡ್‌ ಅವಾರ್ಡ್‌ ಪ್ರಾಪ್ತಿ ಆಗಿದೆ. ಆ ಮೂಲಕ ದಕ್ಷಿಣ ಭಾರತದ ಸಂಗೀತ ಕ್ಷೇತ್ರದಲ್ಲಿಯೇ ಲಹರಿ ಮ್ಯೂಜಿಕ್‌ ಅಗ್ರಗಣ್ಯ ಸ್ಥಾನಕ್ಕೇರಿದೆ.
ʼನನಗೆ ಗೊತ್ತಿರುವ ಹಾಗೆ ಇದು ದಕ್ಷಿಣ ಭಾರತೀಯ ಸಂಗೀತ ಕ್ಷೇತ್ರದಲ್ಲಿಯೇ ಮೊದಲು. ತೆಲುಗು, ತಮಿಳು, ಮಲಯಾಳಂ ಸೇರಿದಂತೆ ಯಾವುದೇ ಭಾಷೆಯಲ್ಲೂ ಇಷ್ಟು ಚಂದದಾರರ ಬಳಗವನ್ನು ಸಂಪಾದಿಸಿಕೊಂಡ ಮ್ಯೂಜಿಕ್‌ ಯುಟ್ಯೂಬ್‌ ಚಾನೆಲ್‌ ಇಲ್ಲ. ಅಂತಹ ಹೊಸ ದಾಖಲೆ ಲಹರಿ ಮ್ಯೂಜಿಕ್‌ ಗೆ ಸಿಕ್ಕಿದೆ ಎನ್ನುವುದೇ ನಮ್ಮ ಸಂಸ್ಥೆಯ ಹೆಮ್ಮೆ. ಅದಕ್ಕೆ ಕಾರಣಕರ್ತರು ನಾವು ಎನ್ನುವುದಕ್ಕಿಂತ ಸಮಸ್ತ ಕನ್ನಡಿಗರು. ಸಿನಮಾ ನಿರ್ಮಾಪಕರು, ನಿರ್ದೇಶಕರು, ಕಲಾವಿದರು. ಕಾರ್ಮಿಕರು, ವಿಶೇಷವಾಗಿ ಸಂಗೀತ ನಿರ್ದೇಶಕರು, ಗಾಯಕರು, ಸಾಹಿತಿಗಳು , ಜತೆಗೆ ಮಾಧ್ಯಮದ ಮಿತ್ರರು ಕಾರಣರು. ಅವರು ನೀಡಿದ ಅಭೂತ ಪೂರ್ವ ಬೆಂಬಲದಿಂದಲೇ ಇದೆಲ್ಲ ಸಾಧ್ಯವಾಗಿದೆʼ ಎನ್ನುತ್ತಾರೆ ಲಹರಿ ವೇಲು.


ಲಹರಿ ಯುಟ್ಯೂಬ್‌ ಚಾನೆಲ್‌ ಶುರುವಾಗಿ ಇಲ್ಲಿಗೆ ೧೦ ವರ್ಷ. ಇಷ್ಟು ಕಡಿಮೆ ಅವದಿಯಲ್ಲಿ ಅದು ೧.೧೮ ಕೋಟಿ ಚಂದದಾರರ ಬಳಗ ಹೊಂದಿದೆ. ಕನ್ನಡಕ್ಕೆ ಮಾತ್ರ ಸೀಮಿತವಾಗದೆ ತೆಲುಗು, ತಮಿಳು ಹಾಗೂ ಮಲಯಾಳಂಗೂ ವಿಸ್ತರಣೆ ಗೊಂಡಿದೆ. ಪ್ರತಿ ಭಾಷೆಯಲ್ಲೂ ಒಂದೊಂದು ತಂಡ ಹೊಂದಿದೆ. ಪ್ರತಿ ತಂಡದಲ್ಲೂ ೨೦ ರಿಂದ ೨೫ ಮಂದಿ ಕೆಲಸ ಗಾರರಿದ್ದಾರೆ. ಇದು ಲಹರಿ ಮ್ಯೂಜಿಕ್‌ ನ ಶಕ್ತಿ. ಇನ್ನು ಲಹರಿ ಆಡಿಯೋ ಸಂಸ್ಥೆ ಆಲದ ಮರದಂತೆ ಬೆಳೆದು ನಿಂತಿದೆ. ಕನ್ನಡದ ಹಿರಿಮೆ-ಗರಿಮೆ ಹೆಚ್ಚಾಗುವಂತೆ ಅದು ಕನ್ನಡದ ಚಿತ್ರಗೀತೆ ಮತ್ತು ಭಾವಗೀತೆಗಳನ್ನು ಜಗತ್ತಿನಾದ್ಯಂತ ಸಂಗೀತ ಪ್ರಿಯರಿಗೆ ಉಣಬಡಿಸುತ್ತಿದೆ. .ಆ ಮೂಲಕ ಲಹರಿ ಆಡಿಯೋ ಸಂಸ್ಥೆಯ ಮಾಲೀಕರಾದ ಮನೋಹರ್‌ ನಾಯ್ಡು ಹಾಗೂ ಲಹರಿ ವೇಲು ಇಬ್ಬರು ರಾಜ್ಯೋತ್ಸವ ಪ್ರಶಸ್ತಿಗೆ ಪಾತ್ರವಾಗಿದ್ದು ಲಹರಿ ಸಂಸ್ಥೆಯ ಸಾಧನೆಗೆ ಸಂದ ಬಹುದೊಡ್ಡ ಗೌರವ. ಹಾಗೆಯೇ ಕನ್ನಡದ ಹೆಮ್ಮೆಯೂ ಹೌದು.

Categories
ಸಿನಿ ಸುದ್ದಿ

ವಿನೋದ್ ಪ್ರಭಾಕರ್ ತಟ್ಟೆಯಲ್ಲಿರುವ ಅನ್ನ ಕಿತ್ತುಕೊಳ್ಳೋ ಪ್ರಯತ್ನ? 1 ಕೋಟಿ ಸಂಭಾವನೆ- ನೆತ್ತಿಗೇರಿದೆ ರಾಬರ್ಟ್ ಯಶಸ್ಸು- ಹಿಂಗೆ ಕುಟುಕಿದವರಿಗೆ ಟೈಸನ್‌ ಕೊಟ್ರು ಉತ್ತರ

ತಮ್ಮ ತಟ್ಟೆಯಲ್ಲಿ ಹೈದ್ರಬಾದ್ ಬಿರಿಯಾನಿ ಇದ್ದರೂ, ಪಕ್ಕದ ತಟ್ಟೆಯಲ್ಲಿರುವ ನಾಟಿಕೋಳಿ ಸಾರು ರಾಗಿಮುದ್ದೆ ಮೇಲೆ ಕಣ್ಣು ಹಾಕ್ತಾರೆ. ಎಲ್ಲರೂ ಹಂಚಿಕೊಂಡು ತಿನ್ನೋಕೆ ಅವಕಾಶ ಇರುತ್ತೆ. ಆದರೆ, ಕಿತ್ತುಕೊಂಡು ತಿನ್ನೋರಿಗೆ ಹಂಚಿಕೊಂಡು ತಿನ್ನೋ ಗುಣ ಎಲ್ಲಿಂದ ಬರಬೇಕು. ಇದನ್ನಿಲ್ಲಿ ಹೇಳುವುದಕ್ಕೂ ಒಂದು ಕಾರಣವಿದೆ.
ಬೆವರು ಸುರಿಸಿ ದುಡಿದು ತಿನ್ನುವವರು ಎಷ್ಟು ಮಂದಿ ಇದ್ದಾರೋ‌ಅಷ್ಟೇ ಮಂದಿ ಬೇರೆಯವರ ಹೊಟ್ಟೆ ಮೇಲೆ ಹೊಡೆದು, ಬೇರೆಯವರ ತಟ್ಟೆಯ ಅನ್ನ ಕಿತ್ಕೊಂಡು ಬದುಕುವವರು ಇದ್ದಾರೆ. ಬೆಳೆಯುತ್ತಿದ್ದಾರೆ ಅಂದರೆ, ತುಳಿಯೋಕೆ‌ ನೋಡ್ತಾರೆ, ಹೆಸರು ಮಾಡ್ತಿದ್ದಾರೆ ಅಂದರೆ ತೇಜೋವಧೆ ಮಾಡುವ ಕಾರ್ಯಕ್ಕೆ ಚಾಲನೆ ಕೊಡ್ತಾರೆ. ಟೈಗರ್ ಪ್ರಭಾಕರ್ ಪುತ್ರ ವಿನೋದ್ ಪ್ರಭಾಕರ್ ಇಂತಹದ್ದೊಂದು ಸನ್ನಿವೇಶವನ್ನ‌ ಎದುರಿಸಿದ್ದಾರಂತೆ.‌


ಹೌದು, ವಿನೋದ್ ಪ್ರಭಾಕರ್ ತಮ್ಮ ಸ್ವಂತ ಪರಿಶ್ರಮದಿಂದ ಯಶಸ್ಸಿನ ಒಂದೊಂದೇ ಮೆಟ್ಟಿಲೇರಿದ್ದಾರೆ. ಅವಮಾನ, ಅಪಮಾನ, ನಿಂದನೆ ಎಲ್ಲವನ್ನೂ ಸಹಿಸಿಕೊಂಡು, ಅದೆಲ್ಲವನ್ನೂ ದಾಟಿಕೊಂಡು ಬಂದಿದ್ದಾರೆ. ಸ್ವಂತ ಬ್ರ್ಯಾಂಡ್ ಕಟ್ಟುವ ಹಾದಿಯಲ್ಲಿ ಎದುರಾಗುವ ಸವಾಲುಗಳಿಗೆ ಸೆಡ್ಡು ಹೊಡೆದು ಬೆವರು ಪ್ಲಸ್ ಬ್ಲಡ್ ಒಟ್ಟೊಟ್ಟಿಗೆ
ಸುರಿಸಿ ಗಂಧದಗುಡಿಯಲ್ಲಿ ತಮ್ಮ “ರಗಡ್” ಅವತಾರ ತೋರಿಸಿ ಎದ್ದು ನಿಂತಿದ್ದಾರೆ.

ಇವತ್ತಿಗೆ ಟೈಸನ್ ಬಹು ಬೇಡಿಕೆಯ ಯಶಸ್ವಿ ನಟರೂ ಆಗಿದ್ದಾರೆ. ವಿನೋದ್ ಪ್ರಭಾಕರ್ ಅವರ ಈ ಸಕ್ಸಸ್ ನ ಅದ್ಯಾರ ಕಣ್ಣಲ್ಲಿ ನೋಡೋದಕ್ಕೆ ಆಗ್ತಿಲ್ಲವೋ ಗೊತ್ತಿಲ್ಲ. ಟೈಗರ್ ಪುತ್ರನ ಹೊಟ್ಟೆ ಮೇಲೆ ಹೊಡೆಯುವ, ಟೈಸನ್ ತಟ್ಟೆಯಲ್ಲಿರುವ ಅನ್ನ ಕಿತ್ತು ಕೊಳ್ಳುವ ಪ್ರಯತ್ನಗಳಾಗಿವೆಯಂತೆ.


“ರಾಬರ್ಟ್” ನಂತರ ವಿನೋದ್ ಸಂಭಾವನೆ ಹೆಚ್ವಿಸಿಕೊಂಡಿದ್ದಾರೆ, ಒಂದು ಸಿನಿಮಾಗೆ ಒಂದು ಕೋಟಿ ‌ಡಿಮ್ಯಾಂಡ್ ಮಾಡ್ತಾರೆ ಎನ್ನುವ ಸುದ್ದಿ ಹಬ್ಬಿಸುವ ಮೂಲಕ ವಿನೋದ್ ಹೊಟ್ಟೆ ಮೇಲೆ ಹೊಡೆಯುವ, ವಿನೋದ್ ತಟ್ಟೆಯಲ್ಲಿರುವ ಅನ್ನ ಕಿತ್ತುಕೊಳ್ಳುವ‌ಕೆಲಸ ಮಾಡಿದ್ದಾರಂತೆ. ಈ ಬಗ್ಗೆ ತಮ್ಮ “ವರದ” ಚಿತ್ರದ‌ ಪ್ರಮೋಷನ್ ಪೋಸ್ಟರ್ ರಿಲೀಸ್ ಸಂದರ್ಭದಲ್ಲಿ ಮಾತನಾಡಿದ ವಿನೋದ್ ಪ್ರಭಾಕರ್, “ಯಾವತ್ತೂ ಯಾರ ಹತ್ತಿರ ರೆಮ್ಯೂನರೇಷನ್ ಡಿಮ್ಯಾಂಡ್ ಮಾಡಿಲ್ಲ. ನನ್ನ ಸ್ಟೇಟಸ್ ಏನು, ನನ್ನ ಸಿನಿಮಾಗೆ ಮಾರ್ಕೆಟ್ ನಲ್ಲಿ ಎಷ್ಟು ವ್ಯಾಲ್ಯೂ ಇದೆ ಅನ್ನೋದು ನನಗೆ ಚೆನ್ನಾಗಿ ಗೊತ್ತಿದೆ.

ನನ್ನಿಂದ ಅನ್ನದಾತನಿಗೆ ನಷ್ಟ ಆಗೋದಕ್ಕೆ ನಾನು ಬಿಡೋದಿಲ್ಲ. ಅಗತ್ಯಕ್ಕಿಂತ ಹೆಚ್ಚಾಗಿ ‌ಬಂಡವಾಳ‌ ಹಾಕಿಸೋದು ಇಲ್ಲ. ಹೀಗಿರುವಾಗ ಸುಖಾ ಸುಮ್ಮನೇ ಸಂಭಾವನೆ ಕೋಟಿ ಹೆಚ್ಚಿಸಿಕೊಂಡಿದ್ದಾರೆ ಅಂತ ಸುಳ್ಳು ಸುದ್ದಿ ಹಬ್ಬಿಸಿ ಬರುವ ಅವಕಾಶಗಳ ಕೈ ತಪ್ಪಿಸಬೇಡಿ, ನನ್ನ ಹೊಟ್ಟೆಯ ಮೇಲೆ ಹೊಡೆದು, ನನ್ನ ತಟ್ಟೆಯಲ್ಲಿರುವ ಕಿತ್ಕೊಬೇಡಿ ಅಂತ ವಿನೋದ್ ಕೇಳಿಕೊಂಡಿದ್ದಾರೆ. ಇಲ್ಲಿವರೆಗಿನ ಯಾವ ಸಕ್ಸಸ್ ಕೂಡ ನನ್ನ ನೆತ್ತಿಗೇರಿಲ್ಲ, ಏರೋದು ಇಲ್ಲ.‌ ಕಾಲನ್ನ ಭೂಮಿ ಮೇಲೆ ಬಿಟ್ಟು ಆಕಾಶದ ಮೇಲೆ ಇಡಲ್ಲ ಅಂತಾರೇ ಟೈಗರ್ ಸನ್.

Categories
ಸಿನಿ ಸುದ್ದಿ

ಟೇಶಿ ವೆಂಕಟೇಶ್‌ ವಿರುದ್ಧ ಮಾನನಷ್ಠ ಮೊಕದ್ದಮೆ ಹಾಕಿದ ರೂಪ ಅಯ್ಯರ್‌ ; ವೈಯಕ್ತಿಕ ನಿಂದನೆ ಮಾಡಿದ್ದಕ್ಕೆ ಒಂದು ಕೋಟಿ ಮಾನನಷ್ಠ ಮೊಕದ್ದಮೆ

ನಿರ್ದೇಶಕರ ಸಂಘ ಬೀದಿಗೆ ಬಂದಿದ್ದು ಗೊತ್ತೇ ಇದೆ. ನಿರ್ದೇಶಕರ ಸಂಘದ ಅಧ್ಯಕ್ಷ ಟೇಶಿ ವೆಂಕಟೇಶ್ ವಿರುದ್ಧ ಹಲವರು ಕಿಡಿಕಾರಿದ್ದು ಗೊತ್ತು. ಈಗ ಟೇಶಿ ಟೇಶಿ ವೆಂಕಟೇಶ್ ವಿರುದ್ಧ ನಿರ್ದೇಶಕಿ ಕಮ್‌ ನಿರ್ಮಾಪಕಿ ರೂಪ ಅಯ್ಯರ್‌ ಅವರು ಗುಡುಗಿದ್ದಾರೆ. ಅಷ್ಟೇ ಅಲ್ಲ, ಅವರು ಮಾನನಷ್ಠ ಮೊಕದ್ದಮೆ ಹಾಕುವುದಾಗಿ ಹೇಳಿದ್ದಾರೆ. ಹೌದು, ರೂಪ ಅಯ್ಯರ್‌ ಅವರು ಟೇಶಿ ವೆಂಕಟೇಶ್ ವಿರುದ್ಧ 1 ಕೋಟಿ‌ ಮಾನನಷ್ಠ ಮೊಕದ್ದಮೆ ಕೇಸ್ ಹಾಕಿದ್ದಾರೆ.

ವೈಯಕ್ತಿಕ ವಿಚಾರವನ್ನು ಕೆದಕಿದ್ದ ಹಿನ್ನೆಲೆಯಲ್ಲಿ ರೂಪ ಅಯ್ಯರ್‌ ಅವರು ಇದೀಗ ಟೇಶಿ‌ ವೆಂಕಟೇಶ್ ಅವರ ಮೇಲೆ ದೂರಿದ್ದು, ಕೇಸ್‌ ಹಾಕಿದ್ದಾರೆ.

“ರೂಪ ಅಯ್ಯರ್ ಅಕೌಂಟ್ ನಲ್ಲಿ‌ ಎಷ್ಟು ದುಡ್ಡು ಇದೆ, ಯಾವ್ ರೀತಿ‌ ಸಂಪಾದನೆ ಮಾಡ್ತಾರೆ ಅಂತ ಗೊತ್ತಿದೆ” ಅಂತ ಈ‌ ಹಿಂದೆ ಟೇಶಿ ವೆಂಕಟೇಶ್ ಪತ್ರಿಕಾಗೋಷ್ಠಿಯಲ್ಲಿ ಹೇಳಿಕೊಂಡಿದ್ದಉರ. ಹೀಗೆ ವೈಯಕ್ತಿಕವಾಗಿ ಪ್ರಶ್ನೆ ಮಾಡಿದ್ದಕ್ಕೆ ರೂಪ ಅಯ್ಯರ್ ಕಾನೂನಿನ ಮೊರೆ ಹೋಗಿರುವ ರೂಪ ಅಯ್ಯರ್‌,

ಕೋರ್ಟ್ ನಲ್ಲಿ ಈ ಕೇಸ್ ಗೆದ್ದೇ ಗೆಲ್ತೀನಿ ಎಂದಿದ್ದಾರೆ. ಅಷ್ಟೇ ಅಲ್ಲ, ಈ ಕೇಸ್‌ನಿಂದ ಬರುವ 1 ಕೋಟಿ ರೂಪಾಯಿ ಮಾನನಷ್ಠ ಹಣವನ್ನು ನಿರ್ದೇಶಕರ ಸಂಘದ ಅಭಿವೃದ್ಧಿಗೆ ಕೊಡ್ತೀನಿ ಅಂತ ಹೇಳಿದ್ದಾರೆ.

Categories
ಸಿನಿ ಸುದ್ದಿ

ಕನ್ನಡದ ಇಬ್ಬರು ನಟರ ಹುಟ್ಟು ಹಬ್ಬ; ಬರ್ತ್‌ ಡೇ ಗುಂಗಲ್ಲಿ ಶ್ರೀನಗರ ಕಿಟ್ಟಿ, ಧರ್ಮ ಕೀರ್ತಿರಾಜ್‌

ಕೊರೊನಾ- ಗ್ರಾಂಡ್‌ ಸೆಲೆಬ್ರೆಷನ್ಸ್‌ ಗೆ ಬ್ರೇಕ್‌
ಸಿಂಪಲ್‌ ಬರ್ತ್‌ ಡೇ ಆಚರಿಸಿಕೊಂಡ ನಟರು
ಬುದ್ಧಿವಂತ 2 ನಲ್ಲಿಬಣ್ಣ ಹಚ್ಚಿ
ಉಪೇಂದ್ರ ಎದುರು ನಿಂತ್ರ ಶ್ರೀನಗರ ಕಿಟ್ಟಿ
ನವಗ್ರಹ ಮೂಲಕ ಬಂದ ಧರ್ಮ
ಟಕಿಲಾ ಗುಂಗಲ್ಲಿ ರಂಜಿಸಲು ರೆಡಿ


ಇಂದು ಕನ್ನಡದ ಇಬ್ಬರು ನಟರ ಹುಟ್ಟು ಹಬ್ಬ. ಭರವಸೆಯ ಯುವ ನಟರಾದ ಧರ್ಮ ಕೀರ್ತಿರಾಜ್‌ ಜುಲೈ 7 ಹಾಗೂ ಶ್ರೀನಗರ ಕಿಟ್ಟಿ ಜುಲೈ 8 ಹುಟ್ಟು ಹಬ್ಬ. ಆದರೆ ಕೊರೋನಾ ಕಾರಣಕ್ಕೆ ಈ ಇಬ್ಬರು ನಟರ ಗ್ರಾಂಡ್‌ ಸೆಲೆಬ್ರೆಷನ್‌ ನಿಂದ ದೂರವೇ ಉಳಿದಿದ್ದಾರೆ. ಕಳೆದ ವರ್ಷದಂತೆಯೇ ಈ ವರ್ಷ ಕೂಡ ಸಿಂಪಲ್‌ ಸೆಲೆಬ್ರೆಷನ್‌ಗೆ ಆದ್ಯತೆ ಕೊಟ್ಟಿರುವುದು ವಿಶೇಷ.


ಸ್ಯಾಂಡಲ್‌ವುಡ್‌ ನಲ್ಲಿ ದುನಿಯಾ ಸೂರಿ ನಿರ್ದೇಶನದ ʼಇಂತಿ ನಿನ್ನ ಪ್ರೀತಿಯʼ ಹಾಗೂ ನಾಗಶೇಖರ್‌ ನಿರ್ದೇಶನದʼ ಸಂಜು ವೆಡ್ಸ್‌ ಗೀತಾʼ ಚಿತ್ರಗಳ ಮೂಲಕ ಮನೆ ಮಾತಾದ ನಟ ಶ್ರೀನಗರ ಕಿಟ್ಟಿ. ಸದ್ಯಕ್ಕೀಗ ಅವರು ಉಪೇಂದ್ರ ಅಭಿನಯದ ʼಬುದ್ದಿವಂತ ೨ʼ ಚಿತ್ರದಲ್ಲಿ ವಿಶೇಷ ಪಾತ್ರವೊಂದಕ್ಕೆ ಬಣ್ಣ ಹಚ್ಚಿದ್ದಾರೆ. ಅದರಲ್ಲಿ ಕಿಟ್ಟಿ ಅವರದ್ದು ವಿಶೇಷವಾದ ಲುಕ್.‌ ಅದೇ ಕಾರಣಕ್ಕೆ ಸಾಕಷ್ಟು ಕುತೂಹಲ ಹುಟ್ಟಿಸಿದೆ ಈ ಚಿತ್ರದಲ್ಲಿನ ಕಿಟ್ಟಿ ಅವರ ಪಾತ್ರ.

ಕಿಟ್ಟಿ ಅವರ ಹುಟ್ಟುಹಬ್ಬಕ್ಕೆ ಬುದ್ದಿವಂತ 2 ಚಿತ್ರ ತಂಡ ಸ್ಪೆಷಲ್‌ ಗಿಫ್ಟ್‌ ಕೊಟ್ಟಿದೆ. ಬುದ್ಧಿವಂತ ೨ ಚಿತ್ರದಲ್ಲಿನ ಕಿಟ್ಟಿ ಅವರ ಪಾತ್ರದ ಒಂದು ಲುಕ್‌ ರಿವೀಲ್‌ ಮಾಡುವುದರ ಜತೆಗೆ ಹುಟ್ಟು ಹಬ್ಬಕ್ಕೆ ವಿಶ್‌ ಮಾಡಿದೆ. ಹಾಗೆಯೇ ಸೋಷಲ್‌ ಮೀಡಿಯಾದಲ್ಲಿ ಅಭಿಮಾನಿಗಳಿಂದ ನಟ ಕಿಟ್ಟಿ ಅವರಿಗೆ ಹುಟ್ಟು ಹಬ್ಬದ ಶುಭಾಶದ ಮಹಾಪೂರವೇ ಹರಿದು ಬಂದಿದೆ.


ಇನ್ನು ದರ್ಶನ್‌ ಅಭಿನಯದ ʼನವಗ್ರಹ ʼಚಿತ್ರದೊಂದಿಗೆ ಬೆಳ್ಳಿತೆರೆಗೆ ಎಂಟ್ರಿಯಾದವರು ನಟ ಧರ್ಮ್‌ ಕೀರ್ತಿರಾಜ್. ಹೆಸರಾಂತ ಖಳನಟ ಕಿರ್ತೀರಾಜ್‌ ಪುತ್ರ. ಆ ಹಿನ್ನೆಲೆಯಲ್ಲಿಯೇ ಚಿತ್ರರಂಗಕ್ಕೆ ಎಂಟ್ರಿಯಾದರೂ, ತಮ್ಮದೇ ಛಾಪು ಮೂಡಿಸಲು ಸಾಕಷ್ಟು ಶ್ರಮ ಪಡುತ್ತಿದ್ದಾರೆ. ʼನವಗ್ರಹʼ ಚಿತ್ರದ ನಂತರ ಸಾಕಷ್ಟು ಸಿನಿಮಾಗಳಲ್ಲಿ ನಾಯಕರಾಗಿ ಅಭಿನಯಿಸಿ, ಭರವಸೆಯ ನಟ ಎಂದು ಗುರುತಿಸಿಕೊಂಡವರು. ಸದ್ಯಕ್ಕೀಗ ʼಟಕೀಲಾʼ ಚಿತ್ರದಲ್ಲಿ ನಾಯಕರಾಗಿ ಅಭಿನಯಸಿದ್ದಾರೆ. ಚಿತ್ರ ತಂಡ ಅವರ ಹುಟ್ಟು ಹಬ್ಬಕ್ಕೆ ವಿಶೇಷವಾಗಿ ವಿಶ್‌ ಮಾಡಿದೆ. ಅಭಿಮಾನಿಗಳು ಕೂಡ ಸೋಷಲ್‌ ಮೀಡಿಯಾದಲ್ಲಿ ನಟ ಧರ್ಮಕೀರ್ತಿರಾಜ್‌ ಅವರಿಗೆ ಹುಟ್ಟು ಹಬ್ಬದ ಶುಭಾಶಯ ಕೋರಿದ್ದಾರೆ.

Categories
ಸಿನಿ ಸುದ್ದಿ

ಕೆಆರ್‌ಜಿ ಸ್ಟುಡಿಯೋಸ್‌ನ ಸಾಲು ಸಾಲು ಚಿತ್ರಗಳಲ್ಲಿ ಡಾಲಿ ಧನಂಜಯ್ ನಟನೆ ; ಈ ಸಂಸ್ಥೆಯ ರತ್ನನ ಪ್ರಪಂಚ ಸದ್ಯದಲ್ಲೇ ತೆರೆಗೆ

ನಟ “ಡಾಲಿ” ಧನಂಜಯ್‌ ಸದ್ಯ ಫುಲ್‌ ಬಿಝಿ. ಹೌದು, “ಟಗರು” ಮೂಲಕ “ಡಾಲಿ” ಅಂತಾನೇ ಗುರುತಿಸಿಕೊಂಡ ಧನಂಜಯ್‌ ಆ ಬಳಿಕ ಸಾಲು ಸಾಲು ಸಿನಿಮಾಗಳಿಗೆ ಹೀರೋ ಆಗಿಬಿಟ್ಟರು. ಅದರಲ್ಲೂ ಧನಂಜಯ್‌ ಅವರು ಕೆ.ಆರ್.ಜಿ ಸ್ಟುಡಿಯೋಸ್ ಜೊತೆ ಒಂದು ದೀರ್ಘಕಾಲಿಕ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ ಅನ್ನೋದು ವಿಶೇಷ. ಅವರಿಬ್ಬರೂ ಜೊತೆಗೂಡಿ ಹಲವಾರು ಚಿತ್ರಗಳನ್ನು ಸಾಲಾಗಿ ಮಾಡಲಿದ್ದಾರೆ ಎಂಬ ಸುದ್ದಿ ಜೋರಾಗಿದೆ.

ಒಟ್ಟಾರೆ, ಧನಂಜಯ್ ಅಭಿಮಾನಿಗಳಿಗೆ ಕೆ.ಆರ್.ಜಿ ಸ್ಟುಡಿಯೋ ಭರ್ಜರಿ ರಸದೌತಣ ನೀಡಲು ಸಿದ್ದವಾಗಿದೆ. ಸದ್ಯದಲ್ಲೇ ನೂತನ ಚಿತ್ರಗಳ ಶೀರ್ಷಿಕೆ ಹಾಗೂ ತಾಂತ್ರಿಕವರ್ಗದ ಮಾಹಿತಿ ಹೊರ ಬರುವ ನಿರೀಕ್ಷೆಯಿದೆ. ಕೆ.ಆರ್.ಜಿ ಸ್ಟುಡಿಯೋಸ್ ಬ್ಯಾನರ್‌ನಲ್ಲಿ ಕಾರ್ತಿಕ್ ಗೌಡ ಹಾಗೂ ಯೋಗಿ ಜಿ.ರಾಜ್ ನಿರ್ಮಾಣ ‌ಮಾಡಿರುವ, “ಡಾಲಿ” ಧನಂಜಯ ನಾಯಕನಾಗಿ ಅಭಿನಯಿಸಿರುವ “ರತ್ನನ ಪ್ರಪಂಚ” ಚಿತ್ರ ಸಹ ಸದ್ಯದಲ್ಲೇ ತೆರೆಗೆ ಬರಲಿದೆ.

ರೋಹಿತ್ ಪದಕಿ ನಿರ್ದೇಶಿಸಿರುವ ಈ ಚಿತ್ರದ ಬಗ್ಗೆ ಗಾಂಧಿನಗರದಲ್ಲಿ ಉತ್ತಮ ಮಾತುಗಳು ಕೇಳಿ ಬರುತ್ತಿದೆ. ಅಜನೀಶ್ ಲೋಕನಾಥ್ “ರತ್ನನ‌ ಪ್ರಪಂಚ”ಕ್ಕೆ ಸಂಗೀತ ನೀಡಿದ್ದಾರೆ. ಶ್ರೀಶ ಛಾಯಾಗ್ರಾಹಣವಿದೆ. ಡಾಲಿಗೆ ನಾಯಕಿಯಾಗಿ ರೆಬಾ ಜಾನ್ ಕಾಣಿಸಿಕೊಂಡಿದ್ದಾರೆ. ಉಮಾಶ್ರೀ, ಅನು ಪ್ರಭಾಕರ್ ಇತರರು ಚಿತ್ರದ ಚಿತ್ರದಲ್ಲಿದ್ದಾರೆ.

Categories
ಸಿನಿ ಸುದ್ದಿ

ಸಿಂಗಲ್ ಸ್ಕ್ರೀನ್‌ ಚಿತ್ರಮಂದಿರಗಳ ಆಸ್ತಿ ತೆರಿಗೆ ಮನ್ನಾ; ಟಾಕೀಸ್ ಮಾಲೀಕರಿಗೆ ಕೊನೆಗೂ ಸಿಕ್ತು ಒಂದಷ್ಟು ರಿಲ್ಯಾಕ್ಸ್


ರಾಜ್ಯದಲ್ಲಿರುವ 630ಕ್ಕೂ ಹೆಚ್ಚು ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಿಗೆ ಪ್ರಸಕ್ತ ಸಾಲಿನ ಆಸ್ತಿ ತೆರಿಗೆ ಪಾವತಿಯಿಂದ ವಿನಾಯಿತಿ ಸಿಕ್ಕಿದೆ. ಈ ಕುರಿತು ವಾರ್ತಾ ಇಲಾಖೆ ಬುಧವಾರ ಆದೇಶ ಹೊರಡಿಸಿದೆ. ಕರ್ನಾಟಕ ಚಿತ್ರ ಪ್ರದರ್ಶಕರ ಸಂಘದ ಮನವಿ ಮೇರೆಗೆ ರಾಜ್ಯ ಸರ್ಕಾರ ಸ್ಪಂದಿಸಿದೆ. ಕೊರೊನಾ ಲಾಕ್‌ಡೌನ್‌ನಿಂದಾಗಿ ಕಳೆದ ವರ್ಷದಿಂದಲೂ ಚಿತ್ರಮಂದಿರಗಳು ಬಹುತೇಕ ಬಂದ್ ಆಗಿದ್ದವು.

ರಾಜ್ಯದಲ್ಲಿ 14 ತಿಂಗಳಿನಿಂದ ಬಹುತೇಕ ಚಿತ್ರಮಂದಿರಗಳ ಬಾಗಿಲು ತೆರೆದಿಲ್ಲ. ಆದರೆ ಆಸ್ತಿ ತೆರಿಗೆ, ವಿದ್ಯುತ್ ಶುಲ್ಕ ಇನ್ನಿತರೆ ಶುಲ್ಕಗಳನ್ನು ಪಾವತಿಸಲೇ ಬೇಕಿತ್ತು. ಈ ಹಿನ್ನೆಲೆಯಲ್ಲಿ ಕಂಗಲಾಗಿದ್ದ ಚಿತ್ರ ಮಂದಿರ ಮಾಲೀಕರಿಗೆ ಈಗ ಒಂದಷ್ಟು ರಿಲ್ಯಾಕ್ಸ್ ಸಿಕ್ಕಿದೆ.

ಸಂಕಷ್ಟದಲ್ಲಿರುವ ಚಿತ್ರಮಂದಿರಗಳಿಗೆ ಆಸ್ತಿ ತೆರಿಗೆ, ವಿದ್ಯುತ್ ಶುಲ್ಕ ಪಾವತಿ ರದ್ದು ಮಾಡಬೇಕು ಎಂದು ರ್ನಾಟಕ ಚಿತ್ರ ಪ್ರದರ್ಶಕರ ಸಂಘ, ಏಕ ಪರದೆ (ಸಿಂಗಲ್ ಸ್ಕ್ರೀನ್) ಚಿತ್ರಮಂದಿರಗಳಿಗೆ ಆಸ್ತಿ ತೆರಿಗೆ ಪಾವತಿಯಿಂದ ವಿನಾಯಿತಿ ನೀಡುವಂತೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿತ್ತು. ಅದಕ್ಕೆ ಸರ್ಕಾರ ಸ್ಪಂದಿಸಿದೆ. ಏಕ ಪರದೆಯ ಚಿತ್ರಮಂದಿರಗಳ ಪ್ರಸಕ್ತ ವರ್ಷದ ಆಸ್ತಿ ತೆರಿಗೆಯನ್ನು ಮನ್ನಾ ಮಾಡಿದೆ. ಇದರಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ 9 ಕೋಟಿ ಹೊರೆಯಾಗಲಿದೆ ಎಂದು ವಾರ್ತಾ ಇಲಾಖೆ ಆದೇಶದಲ್ಲಿ ತಿಳಿಸಿದೆ.

error: Content is protected !!