ಕನ್ನಡ ಚಿತ್ರರಂಗದಲ್ಲಿ ಗಟ್ಟಿ ನೆಲೆ ಕಾಣಬೇಕು ಅಂತ ನೂರಾರು ಪ್ರತಿಭೆಗಳು ತಮ್ಮ ಶ್ರಮದಿಂದಲೇ ಗುರುತಿಸಿಕೊಳ್ಳೋ ಪ್ರಯತ್ನ ಮಾಡುತ್ತಲೇ ಇದ್ದಾರೆ. ಕೆಲವರು ನೆಲೆ ಕಂಡರೆ ಇನ್ನು ಕೆಲವರು ಆ ಪ್ರಯತ್ನದಲ್ಲಿದ್ದಾರೆ
ಈಗ ಯುವ ನಟ ತನುಷ್ ಶಿವಣ್ಣ ಕೂಡ ಗಾಂಧಿನಗರದಲ್ಲಿ ತಕ್ಕಮಟ್ಟಿಗಿನ ಸದ್ದು ಮಾಡುತ್ತಿದ್ದಾರೆ.
ಹೌದು, ಈ ಹಿಂದೆ “ಮಡಮಕ್ಕಿ” ಎಂಬ ಜನ ಮೆಚ್ಚುಗೆಯ ಸಿನಿಮಾ ಮಾಡಿ ಆ ಮೂಲಕ ಸೈ ಎನಿಸಿಕೊಂಡು ಭವ್ಯ ಭರವಸೆ ಮೂಡಿಸಿದ್ದ ತನುಷ್ ಈಗ ಮತ್ತೊಂದು ಭರವಸೆಯ ಸಿನಿಮಾ ಕಟ್ಟಿಕೊಟ್ಟಿದ್ದಾರೆ.
ತನುಷ್ ಶಿವಣ್ಣ ಈಗ “ನಟ್ವರ್ ಲಾಲ್” ಆಗಿದ್ದಾರೆ. ಚಿತ್ರ ಇನ್ನೇನು ಬಿಡುಗಡೆಗೂ ಸಜ್ಜಾಗಿದೆ. ಇತ್ತೀಚೆಗೆ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ
ಚಿತ್ರದ ಫಸ್ಟ್ ಲುಕ್ ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ. ಮೊದಲ ಲುಕ ನಲ್ಲೇ ಭಾರೀ ಸದ್ದು ಮಾಡುತ್ತಿದೆ ಅನ್ನೋದು ವಿಶೇಷ.
ತನುಷ್ ಶಿವಣ್ಣ, ಹೀರೋ
ವಿ.ಲವ ನಿರ್ದೇಶಿಸುತ್ತಿರುವ ಈ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಸದ್ಯ ಡಬ್ಬಿಂಗ್ ನಡೆಯುತ್ತಿದೆ.
ಕರ್ನಾಟಕದ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆದಿದೆ. ಬಹುತೇಕ ಚಿತ್ರೀಕರಣ ವಿವಿಧ ಸೆಟ್ ಗಳಲ್ಲಿ ನಡೆದಿರುವುದು ಈ ಚಿತ್ರದ ವಿಶೇಷ.
ಆಕ್ಷನ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರದ ಹೀರೋ ತನುಷ್ ಅವರಿಗೆ ಸೋನಾಲ್ ಮಾಂಟೆರೊ ನಾಯಕಿ.
ರಾಜೇಶ್ ನಟರಂಗ, ಸುಜಯ್ ಶಾಸ್ತ್ರಿ, ವಿಜಯ್ ಚೆಂಡೂರ್, ಕೆ.ಎಸ್.ಶ್ರೀಧರ್, ಯಶ್ ಶೆಟ್ಟಿ, ಗಿರಿ ಗೌಡ, ನಾಗಭೂಷಣ್, ಕಾಕ್ರೋಜ್ ಸುಧೀ, ಕಾಮಿಡಿ ಕಿಲಾಡಿಗಳು ನಯನ, ರಾಜೇಂದ್ರ ಕಾರಂತ್, ರಘು ರಮಣಕೊಪ್ಪ, ಸುಂದರರಾಜ್, ಕಾಂತರಾಜ್ ಕಡ್ಡಿಪಡಿ, ಬಲ ರಾಜವಾಡಿ, ಹರಿಣಿ, ಪದ್ಮಾ ವಾಸಂತಿ, ನಾಗರಾಜ್ ಅರಸು, ಭೀಷ್ಮ ರಾಮಯ್ಯ, ಪ್ರಶಾಂತ್ ಸಿದ್ದಿ ಇತರರು ಇಲ್ಲಿದ್ದಾರೆ.
ವಿ.ಲವ, ನಿರ್ದೇಶಕ
ಧರ್ಮ ವಿಶ್ ಸಂಗೀತವಿದೆ, ವಿಲಿಯಂ ಡೇವಿಡ್ ಛಾಯಾಗ್ರಹಣ ಮಾಡಿದರೆ, ಕೆ.ಎಂ.ಪ್ರಕಾಶ್ ಸಂಕಲನವಿದೆ. ಪ್ರಶಾಂತ್ ಗೌಡ ಕಲಾ ನಿರ್ದೇಶನ, ಡಿಫರೆಂಟ್ ಡ್ಯಾನಿ, ಥ್ರಿಲ್ಲರ್ ಮಂಜು, ರಾ ಪುಷ್ಪರಾಜು ಸಾಹಸ ನಿರ್ದೇಶನ ಹಾಗೂ ಧನಂಜಯ್ ಅವರ ನೃತ್ಯ ನಿರ್ದೇಶನವಿದೆ.