Deshadri Hosmane
Those who came to journalism with a fighting background. Hew has over 20 years of experience as a journalist and has worked in a variety of fields including politics, crime and agriculture. He is also a film journalist by accident and has been awarded the prestigious Aragini Award by the Karnataka Media Academy. He has worked in evening newspapers like sanjevani, karunaadu Sanje. Also work in tv Chanel. ETV, Udaya TV, Janashree, Vijaya Karnataka and Kannada newspapers.
ದೇಶಾದ್ರಿ ಹೊಸ್ಮನೆ
ಹೋರಾಟದ ಹಿನ್ನೆಲೆಯೊಂದಿಗೆ ಪತ್ರಿಕೋದ್ಯಮ ಕ್ಕೆ ಬಂದವರು. ಪತ್ರಕರ್ತನಾಗಿ 20 ವರ್ಷಗಳಿಗೂ ಹೆಚ್ವು ಕಾಲ ಅನುಭವ ಹೊಂದಿದ್ದು, ರಾಜಕೀಯ, ಅಪರಾಧ, ಕೃಷಿ ಸೇರಿದಂತೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಕೆಲಸ ಮಾಡಿದ ಅನುಭವಿ. ಹಾಗೆಯೇ ಆಕಸ್ಮಿಕ ಎಂಬಂತೆ ಸಿನಿಮಾ ಪತ್ರಕರ್ತರಾಗಿ ಬಂದ ಅವರು, ಕರ್ನಾಟಕ ಮಾಧ್ಯಮ ಅಕಾಡೆಮಿ ನೀಡುವ ಪ್ರತಿಷ್ಟಿತ ಅರಗಿಣಿ ಪ್ರಶಸ್ತಿ ಗೆ ಪಾತ್ರವಾಗಿದ್ದಾರೆ. ಸಂಜೆ ವಾಣಿ, ಈಟಿವಿ, ಉದಯ ಟಿವಿ, ಜನಶ್ರೀ, ವಿಜಯ ಕರ್ನಾಟಕ, ಕನ್ನಡ ಪ್ರಭ ಪತ್ರಿಕೆಗಳಲ್ಲಿ ಕೆಲಸ ಮಾಡಿದ್ದು, ರಾಜ್ಯ ಕಾರ್ಯ ನಿರತ ಪತ್ರಕರ್ತರ ಸಂಘದ ವಾರ್ಷಿಕ ಪ್ರಶಸ್ತಿ, ನ್ಯೂಸ್ ಮೀಡಿಯಾ ವಿಶೇಷ ಪ್ರಶಸ್ತಿ ಗಳಿಗೆ ಭಾಜನರಾಗಿದ್ದಾರೆ.ಈಗ ಸಿನಿ ಲಹರಿ ವೆಬ್ ಸೈಟ್ ಹಾಗೂ ಯುಟ್ಯೂಬ್ ಚಾನೆಲ್ ರೂವಾರಿ ಆಗಿದ್ದಾರೆ.
ನಟಿ ರಶ್ಮಿಕಾ ಮಂದಣ್ಣ ಅವರಿಗೆ ವಯಸ್ಸಾಗ್ತಿದೆ. ಹಾಗಂತ ಹೇಳ್ತಿರೋದು ನಾವಲ್ಲ. ಖುದ್ದು ರಶ್ಮಿಕಾ ಅವರೇ ತಮಗೆ ವಯಸ್ಸಾಗ್ತಿದೆ ಅಂತ ಹೇಳಿಕೊಂಡಿದ್ದಾರೆ. ಅದು ʼಪೊಗರುʼ ಚಿತ್ರದ ಪ್ರಮೋಷನ್ ಕಾರ್ಯಕ್ರಮದಲ್ಲಿ ನಟ ರಕ್ಷಿತ್ ಶೆಟ್ಟಿ ಹಾಗೂ ತಮ್ಮ ನಡುವೆ ನಿಜಕ್ಕೂ ಅಗಿದ್ದೇನು? ಮದುವೆ ಬಗ್ಗೆ ನಿಮ್ಮ ಪ್ಲಾನ್ ಏನು? ಅಂತ ತಮಗೆ ಎದುರಾದ ಪ್ರಶ್ನೆಗಳಿಗೆ ಕೊಂಚ ಇರುಸು ಮುರುಸು ಮಾಡಿಕೊಂಡೆ ಉತ್ತರಿಸಿದ ಅವರು, ನಂಗೂ ಗೊತ್ತಾಗ್ತಿದೆ, ವಯಸ್ಸಾಗ್ತಿದೆ ಅಂತʼ ನಕ್ಕರು.
ಅನಿರೀಕ್ಷಿತವಾಗಿ ಎದುರಾದ ಪ್ರಶ್ನೆಗಳಿಗೆ ಉತ್ತರಿಸಬೇಕೋ ಅಥವಾ ಬೇಡವೋ ಎನ್ನುವ ಮೂಡ್ ನಲ್ಲಿಯೇ ಮಾತಿಗೆ ಮುಂದಾದ ರಶ್ಮಿಕಾ, ಅದೆಲ್ಲ ಈಗ ಬೇಕಾ? ಎಂದು ಮರು ಪ್ರಶ್ಮೆ ಹಾಕಿದರು. ” ಕಿರಿಕ್ ಪಾರ್ಟಿʼ ನನ್ನ ಮೊದಲ ಸಿನಿಮಾ. ಆ ಸಿನಿಮಾ ದೊಡ್ಡ ಸಕ್ಸಸ್ ಕಂಡಿತು. ಅಲ್ಲಿಂದ ನನಗೆ ನನ್ನ ಕೆರಿಯರ್ ಮುಖ್ಯ ಎನಿಸಿತು. ಮೇಲಾಗಿ ನನಗೇನು ಆಗ ಮದುವೆ ಆಗುವ ವಯಸ್ಸಲ್ಲ ಎಂದರು. ಅದು ಸರಿ, ಮದುವೆ ಪ್ಲಾನ್ ಏನು? ಎನ್ನುವ ಮರು ಪ್ರಶ್ನೆಗೆ ” ನಂಗೂ ಗೊತ್ತಾಗ್ತಿದೆ, ವಯಸ್ಸಾಗ್ತಿದೆ ಅಂತ, ನೋಡೋಣ ಮುಂದೆʼ ಎಂದರು. ಸದ್ಯ ಅವರೀಗ ʼಪೊಗರುʼ ಚಿತ್ರದ ಪ್ರಮೋಷನ್ ಕಾರ್ಯಕ್ರಮದಲ್ಲಿ ಬ್ಯುಸಿ ಆಗಿದ್ದಾರೆ.
ಆಗಸ್ಟ್ ವರೆಗೂ ಕನ್ನಡದವರಿಗೆ ಸಿಗಲ್ಲ ಅಂದ್ರು ʼಕಿರಿಕ್ ಪಾರ್ಟಿʼ ಚೆಲುವೆ ರಶ್ಮಿಕಾ ಮಂದಣ್ಣ
ʼಕಿರಿಕ್ ಪಾರ್ಟಿʼ ಚಿತ್ರದ ಖ್ಯಾತಿಯ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ನಾಯಕಿ ಆಗಿ ಅಭಿನಯಿಸಿರುವ “ಪೊಗರುʼ ಚಿತ್ರ ಇದೇ ತಿಂಗಳು ೧೯ ರಂದು ಭರ್ಜರಿಯಾಗಿ ತೆರೆ ಕಾಣುತ್ತಿದೆ. “ಯಜಮಾನʼ ಚಿತ್ರದ ನಂತರ ರಶ್ಮಿಕಾ ಇದೇ ಮೊದಲು ತೆರೆಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯಕ್ಕೀಗ ಟಾಲಿವುಡ್, ಕಾಲಿವುಡ್, ಬಾಲಿವುಡ್ ಅಂತೆಲ್ಲ ಬ್ಯುಸಿ ಇರುವ ರಶ್ಮಿಕಾ ಮಂದಣ್ಣ ಕನ್ನಡದಲ್ಲಿ ಮತ್ತೆ ಯಾವ ಸ್ಟಾರ್ ಜತೆಗೆ ಕಾಣಸಿಕೊಳ್ಳಬಹುದು? ಅವರ ಮುಂದಿನ ಸಿನಿಮಾ ಯಾವುದು ? ಸಿನಿ ಪ್ರೇಕ್ಷಕರಿಗೆ ಇಂತಹ ಕುತೂಹಲ ಇರುವುದು ಸಹಜವೇ. ಆದರೆ ಮುಂದಿನ ಆರು ತಿಂಗಳ ಕಾಲ ಅವರು ಕನ್ನಡಕ್ಕೆ ಲಭ್ಯ ಇಲ್ಲ. ಹಾಗೊಂದು ವೇಳೆ ಅವರು ಕನ್ನಡದಲ್ಲಿ ಯಾವುದಾದರೂ ಸಿನಿಮಾ ಒಪ್ಪಿಕೊಂಡು ಮತ್ತೆ ಇಲ್ಲಿ ಕಾಣಸಿಕೊಳ್ಳುವುದಾದರೆ ಅದು ಆಗಸ್ಟ್ ತಿಂಗಳ ನಂತರವೇ ಅಂತೆ. ಅಂತಹದೊಂದು ಸಂಗತಿಯನ್ನು ನಟಿ ರಶ್ಮಿಕಾ ಮಂದಣ್ಣ ಅವರೇ ರಿವೀಲ್ ಮಾಡಿದ್ದಾರೆ.
“ಪೊಗರುʼ ಚಿತ್ರದ ರಿಲೀಸ್ ಪ್ರಮೋಷನ್ ಹಿನ್ನೆಲೆಯಲ್ಲಿ ಶನಿವಾರ “ಮೀಟ್ ದಿ ಮೀಡಿಯಾʼ ಕಾರ್ಯಕ್ರಮದಲ್ಲಿ ಮಾಧ್ಯಮದವರ ಜತೆಗೆ ಮಾತನಾಡಿದರು. ʼಪೊಗರುʼ ನಂತರ ಕನ್ನಡದಲ್ಲಿ ನಿಮ್ಮ ಮುಂದಿನ ಪ್ರಾಜೆಕ್ಟ್ ಯಾವುದು ಅಂತ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ರಶ್ಮಿಕಾ, ಸದ್ಯಕ್ಕೆ ನಾನು ಒಪ್ಪಿಕೊಂಡ ಪ್ರಾಜೆಕ್ಟ್ ಶೆಡ್ಯೂಲ್ ಪ್ರಕಾರ ಜುಲೈ – ಆಗಸ್ಟ್ ತಿಂಗಳವರೆಗೂ ಯಾವುದೇ ಸಿನಿಮಾ ಒಪ್ಪಿಕೊಳ್ಳುವುದಕ್ಕೆ ಸಮಯ ಇಲ್ಲ. ಅದುವರೆಗೂ ನಾನು ಶೂಟಿಂಗ್ ಜಾಮ್ ಪ್ಯಾಕ್. ಅವೆಲ್ಲ ಮುಗಿಯೋದಿಕ್ಕೆ ಕನಿಷ್ಟ ಆರು ತಿಂಗಳು ಬೇಕೇ ಬೇಕು. ಆಮೇಲೆ ಸಮಯ ಸಿಕ್ಕಾಗ ಕನ್ನಡದಲ್ಲಿ ಕಥೆ ಕೇಳಿ, ಹೊಸ ಪ್ರಾಜೆಕ್ಟ್ ಒಪ್ಪಿಕೊಳ್ಳೋಣ ಅಂದುಕೊಂಡಿದ್ದೇನೆʼ ಎನ್ನುತ್ತಾರೆ ರಶ್ಮಿಕಾ.
ಹಾಗಾದ್ರೆ ಕನ್ನಡಕ್ಕೆ ನೀವು ʼದುಬಾರಿʼಯಾದ್ರಾ ಎನ್ನುವ ಮತ್ತೊಂದು ಪ್ರಶ್ನೆಗೆ ರಶ್ಮಿಕಾ ಉತ್ತರಿಸಿದ ರೀತಿಯೇ ಅದ್ಭುತ. ” ಅಯ್ಯೋ, ನಾನು ಕನ್ನಡತಿ. ಇಲ್ಲಿಯೇ ನಂಗೆ ನೇಮ್-ಫೇಮ್ ಸಿಕ್ಕಿದ್ದು. ಇಲ್ಲಿ ನಾನು ಅಭಿನಯಿಸುವುದಿಲ್ಲ ಎನ್ನುತ್ತೇನಾ? ಸದ್ಯಕ್ಕೀಗ ಬೇರೆ ಬೇರೆ ಭಾಷೆಯ ಸಿನಿಮಾಗಳ ಅವಕಾಶ ಬಂದಿವೆ. ಆ ಸಿನಿಮಾಗಳ ಶೂಟಿಂಗ್ ಶೆಡ್ಯೂಲ್ ಕೊಟ್ಟಿದ್ದೇನೆ. ಹಾಗಾಗಿ ಕನ್ನಡದಲ್ಲಿನ ಆಫರ್ ಗಳ ಬಗ್ಗೆ ಹೆಚ್ಚು ಗಮನ ನೀಡಲು ಆಗುತ್ತಿಲ್ಲವಷ್ಟೇ. ಮುಂದೆ ಅದಕ್ಕಾಗಿಯೇ ಒಂದಷ್ಟು ಸಮಯ ಫಿಕ್ಸ್ ಮಾಡಿಕೊಳ್ಳುತ್ತಿದ್ದೇನೆ. ಆಗ ಯಾವುದಾದರೂ ಒಳ್ಳೆಯ ಕತೆ ಸಿಕ್ಕರೆ ಖಂಡಿತಾ ಇಲ್ಲಿ ನಟಿಸುತ್ತೇನೆʼ ಎನ್ನುತ್ತಾರೆ ರಶ್ಮಿಕಾ ಮಂದಣ್ಣ.
ನ್ಯಾಷನಲ್ ಕ್ರಷ್ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಹೀಗೇಕೆ ಹೇಳಿದ್ರು….
ನಟಿ ರಶ್ಮಿಕಾ ಮಂದಣ್ಣಗೆ ಈಗ ಕಾಂಟ್ರೋವರ್ಸಿ ಬೇಕೇ ಬೇಕು. ಅದಿಲ್ಲ ಅಂದ್ರೆ ಅವರಿಗೆ ಬೇಜಾರಾಗುತ್ತಂತೆ. ಹೀಗಂತ ಹೇಳಿದ್ದು ಬೇರಾರೂ ಅಲ್ಲ, ಖುದ್ದು ಅವರೇ ಇದನ್ನು ಹೇಳಿಕೊಂಡು ನಗೆ ಬೀರಿದ್ದು ವಿಚಿತ್ರ ಎನಿಸಿತು.
ಇಷ್ಟಕ್ಕೂ ಅವರು ಈ ರೀತಿ ಹೇಳಿದ್ದು ಶನಿವಾರ ʼಪೊಗರುʼ ಚಿತ್ರದ ಮೀಟ್ ದಿ ಮೀಡಿಯಾ ಕಾರ್ಯಕ್ರಮದಲ್ಲಿ. ಸೋಷಲ್ ಮೀಡಿಯಾದಲ್ಲಿ ತಮ್ಮ ಬಗ್ಗೆ ದಿನನಿತ್ಯ ಕಾಣಿಸಿಕೊಳ್ಳುವ ಕಾಂಟ್ರೋವರ್ಸಿಗಳ ಕುರಿತ ಪ್ರಶ್ನೆಗೆ ನಗುತ್ತಲೇ ಪ್ರತಿಕಿಯಿಸಿದ ನಟಿ ರಶ್ಮಿಕಾ ಮಂದಣ್ಣ, ಅವುಗಳಿಗೆಲ್ಲ ನಾನು ಹೆಚ್ಚು ತಲೆ ಕಡೆಸಿಕೊಳ್ಳುವುದಿಲ್ಲ. ದಿನಿ ನಿತ್ಯ ಮಾಡೋದಿಕ್ಕೆ ಸಾಕಷ್ಟು ಕೆಲಸ ಇರುತ್ತದೆ ಎಂದರು.
” ಮೊದಲೆಲ್ಲ ಅಂದ್ರೆ ಕಿರಿಕ್ ಪಾರ್ಟಿ ಬಂದು ಹೋದ ನಂತರದ ದಿನಗಳಲ್ಲಿ ನನ್ನ ಬಗೆಗಿನ ಯಾವುದಾದರೂ ಕಾಂಟ್ರೋವರ್ಸಿ ವಿಷಯ ಕಿವಿ ಬಿದ್ದರೆ ಸಿಕ್ಕಾಪಟ್ಟೆ ಬೇಸರ ಆಗುತ್ತಿತ್ತು. ಇದ್ಯಾಕೆ ಹೀಗೆ ಜನ ಏನೇನು ಗಾಸಿಪ್ ಹಬ್ಬಿಸುತ್ತಿದ್ದಾರೆ, ಇವರಿಗೇನು ಕೆಲಸ ಇಲ್ಲವೇ ಅಂತೆಲ್ಲ ತಲೆಕೆಡಿಸಿಕೊಂಡು, ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದೆ. ಆದ್ರೆ ಈಗ ಅದೆಲ್ಲವನ್ನು ಪಾಸಿಟಿವ್ ಆಗಿಯೇ ತೆಗೆದುಕೊಂಡಿದ್ದೇನೆ. ದಿನ ಸುದ್ದಿಯಲ್ಲಿರಬೇಕಾದ್ರೆ ಅಂತಹ ಕಾಂಟ್ರೋವರ್ಸಿ ಇರಬೇಕು ಅಂತೆನಿಸುತ್ತದೆ. ಅದೂ ಇದ್ದಾಗಲೇ ನಾವು ಕೂಡ ಇಲ್ಲಿ ಸಕ್ರಿಯವಾಗಿದ್ದೇವೆ ಅಂತೆನಿಸುತ್ತದೆ ʼ ಅಂತ ನಟಿ ರಶ್ಮಿಕಾ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು.
ಹಾಗಾದ್ರೆ ಕಾಂಟ್ರೋವರ್ಸಿಗಳನ್ನ ಪಾಸಿಟಿವ್ ತೆಗೆದುಕೊಳ್ಳುತ್ತಿದ್ದೀರಿ ಅಂತನಾ ಎನ್ನುವ ಮರು ಪ್ರಶ್ನೆಗೆ, ರಶ್ಮಿಕಾ ಉತ್ತರ ಅಷ್ಟೇ ಬುದ್ಧಿವಂತಿಕೆಯಿಂದಲೇ ಉತ್ತರಿಸಿದರು.” ಪಾಸಿಟಿವ್ ಅಂತಲ್ಲ. ಸೋಷಲ್ ಮೀಡಿಯಾದಲ್ಲಿ ಅದನ್ನೇ ಕಿಯೇಟ್ ಮಾಡೋದಿಕ್ಕೆ ಒಂದಷ್ಟು ಜನರು ಇರುವಾಗ ನಾವು ಅವರಿಗೆ ಏನೇ ಉತ್ತರ ಕೊಟ್ಟರು ಕೂಡ ಅದು ಕಾಂಟ್ರೋವರ್ಸಿಯಾಗಿಯೇ ಇರುತ್ತದೆ. ಹಾಗಾಗಿ ಅವರಿಗೆ ಪ್ರತಿಕ್ರಿಯಿಸಿ ನಾವು ಸಣ್ಣರಾಗುವುದಕ್ಕಿಂತ ಸುಮ್ಮನಿರುವುದೇ ಉತ್ತಮ ಅಲ್ಲವೇ ಎನ್ನುವ ಮೂಲಕ ರಶ್ಮಿಕಾ ತುಂಬಾ ಮಾರ್ಮಿಕವಾಗಿ ಪ್ರತಿಕ್ರಿಯಿಸಿದರು.
ಟಾಲಿವುಡ್ ನಲ್ಲಿ ರಶ್ಮಿಕಾಗೆ 2 ಕೋಟಿ ಸಂಭಾವನೆಯಂತೆ ಎನ್ನುವ ಪ್ರಶ್ನೆಗೆ ಅಚ್ಚರಿಪಟ್ಟಿದ್ದು ಯಾರು ಗೊತ್ತಾ?
ನ್ಯಾಷನಲ್ ಕ್ರಷ್ ಅಂತಲೇ ಜನಪ್ರಿಯತೆ ಪಡೆದಿರುವ ಕಿರಿಕ್ ಪಾರ್ಟಿ ಚಿತ್ರದ ಖ್ಯಾತಿಯ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಈಗ ಬಹುಭಾಷೆಗಳಲ್ಲಿ ಬಹು ಬೇಡಿಕೆಯ ನಟಿ. ವಿಶೇಷವಾಗಿ ತೆಲುಗಿನಲ್ಲಿ ರಶ್ಮಿಕಾ ಮಂದಣ್ಣ ಮನೆ ಮಾತಾದ ಜನಪ್ರಿಯ ತಾರೆ. ಈಗ ಅಲ್ಲಿ ಅವರು ಒಂದು ಸಿನಿಮಾಕ್ಕೆ ಪಡೆಯುವ ಸಂಭಾವನೆ ಎಷ್ಟು? ಒಂದು ಸಿನಿಮಾಕ್ಕೆ ಅಲ್ಲಿ ಅವರು ಪಡೆಯುತ್ತಿರುವ ಸಂಭಾವನೆ ಎರಡು ಕೋಟಿ ಎನ್ನುವುದು ನಿಜವೇ?
ಅಧಿಕೃತವಾಗಿ ಅದು ಯಾರಿಗೂ ಗೊತ್ತಿಲ್ಲ. ಆದರೆ ಸೋಷಲ್ ಮೀಡಿಯಾದಲ್ಲಿ ಅವರ ಸಂಭಾವನೆ ಕುರಿತು ಸಾಕಷ್ಟು ಸುದ್ದಿಗಳು ಹರಿದಾಡುತ್ತಿವೆ. ಪ್ರಕಾರ ನಟಿ ರಶ್ಮಿಕಾ ಮಂದಣ್ಣ ಈಗ ಟಾಲಿವುಡ್ ನಲ್ಲಿ ಒಂದು ಸಿನಿಮಾಕ್ಕೆ ಪಡೆಯುವ ಸಂಭಾವನೆ ೨ ಕೋಟಿ. ಹಾಗಾದ್ರೆ ಇದು ನಿಜವೇ? ಇದಕ್ಕೆ ಖುದ್ದು ನಟಿ ರಶ್ಮಿಕಾ ಮಂದಣ್ಣ ಅವರು ಹೇಳುವುದೇನು?
ಶನಿವಾರ ʼಪೊಗರುʼ ಚಿತ್ರದ ಮೀಟ್ ದಿ ಮೀಡಿಯಾ ಕಾರ್ಯಕ್ರಮದಲ್ಲಿ ನಟಿ ರಶ್ಮಿಕಾ ಅವರಿಗೆ ಈ ಪ್ರಶ್ನೆ ಎದುರಾಯಿತು. ಟಾಲಿವುಡ್ ನಲ್ಲಿ ನೀವು ಒಂದು ಸಿನಿಮಾಕ್ಕೆ ಪಡೆಯುತ್ತಿರುವ ಸಂಭಾವನೆ ಎಷ್ಟು? ಎರಡು ಕೋಟಿ ಇದೆ ಎನ್ನುವುದು ನಿಜವೇ ? ಎನ್ನುವ ಪ್ರಶ್ನೆಗಳಿಗೆ ಉತ್ತರಿಸುವ ಮುನ್ನ ನಟಿ ರಶ್ಮಿಕಾ ಮಂದಣ್ಣ ಜೋರಾಗಿ ನಕ್ಕರು.
“ಅಯ್ಯೋ,, ಅಷ್ಟೊಂದು ಸಂಭಾವನೆ ಸಿಕ್ಕರೆ ನಂಗೂ ಖುಷಿ ಅಲ್ವೇ? ಹಾಗೆಲ್ಲ ಹೇಳಿದರು, ಹೇಳುತ್ತಿರುವವರು ಯಾರೋ ನಂಗೆ ಗೊತ್ತಿಲ್ಲ. ಆದ್ರೆ ನನ್ನ ಪ್ರಕಾರ ಅದೆಲ್ಲ ಸುಳ್ಳು. ವಾಸ್ತವದಲ್ಲಿ ಅಷ್ಟೊಂದು ಸಂಭಾವನೆ ಪಡೆಯುತ್ತಿರುವ ನಟಿ ನಾನಲ್ಲ. ಒಂದು ವೇಳೆ ಅಷ್ಟು ಸಂಭಾವನೆ ಸಿಕ್ಕಿದ್ದರೆ ನಿಜಕ್ಕೂ ಅದು ನಂಗೂ ಖುಷಿ ನೀಡುತ್ತಿತ್ತು.
ಆದರೆ ಅದೆಲ್ಲ ಅಪಪ್ರಚಾರ ಮಾತ್ರ. ಅದರಿಂದಲೇ ಅಲ್ವೇ, ನಮ್ಮ ಮನೆ ಮೇಲೆ ಐಟಿ ದಾಳಿ ನಡೆದಿದ್ದು. ಇದೆಲ್ಲದ್ದಕ್ಕೂ ನಾನು ಹೇಗೆ ಪ್ರತಿಕ್ರಿಯಿಸಬೇಕೋ ಗೊತ್ತಿಲ್ಲ. ಆದರೆ ಅಷ್ಟೊಂದು ಸಂಭಾವನೆ ಬೇಕೆಂದು ಅಲ್ಲಿ ನಾವೇ ಡಿಮ್ಯಾಂಡ್ ಮಾಡಿದರೂ ಅಲ್ಲಿ ಕೊಡುವವರು ಇಲ್ಲ. ಅವರಿಗೂ ಗೊತ್ತು, ಯಾರಿಗೆ ಎಷ್ಟೇಲ್ಲ ಡಿಮ್ಯಾಂಡ್ ಇದೆ, ಎಷ್ಟು ಕೊಡಬೇಕು ಅಂತ. ನಾವು ಕೇಳಿದಷ್ಟನ್ನೇ ಕೊಡುವುದಕ್ಕೂ ಕೂಡ ಬೇರೆ, ಬೇರೆ ನಟಿಯರನ್ನು ಮಾದರಿಯಾಗಿ ತೋರಿಸುತ್ತಾರೆ. ಅವರೇ ಅಷ್ಟೊಂದು ಕಡಿಮೆ ಸಂಭಾವನೆ ಪಡೆಯುವಾಗ, ನೀವ್ಯಾಕೆ ಇಷ್ಟೊಂದು ಕೇಳ್ತೀರಾ ಅಂತಾರೆʼ ಎನ್ನುವ ಮಾತುಗಳ ಮೂಲಕ ಸಂಭಾವನೆ ಹಿಂದಿನ ಗುಟ್ಟು ರಟ್ಟು ಮಾಡಲು ನಿರಾಕರಿಸಿದರು.
ರೈತರ ಪ್ರತಿಭಟನೆಯ ಬಿಸಿ ಈಗ ಸಿನಿಮಾ ತಾರೆಯರಿಗೂ ತಟ್ಟಿದೆ. ಬಾಲಿವುಡ್‌ನಲ್ಲಿ ಈಗ ನಟ-ನಟಿಯರು ಈಗ ಬಗ್ಗೆ ಮಾತನಾಡಲೇಬೇಕಾದ ಅನಿವಾರ್ಯತೆ ಸೃಷ್ಟಿ ಆಗಿದೆ. ಕಲಾವಿದರು ತಮ್ಮ ನಿಲವು ಸ್ಪಷ್ಟ ಪಡಿಸಬೇಕೆಂದು ಅಲ್ಲಿ ಅಭಿಮಾನಿಗಳ ಕಡೆಯಿಂದಲೇ ಒತ್ತಡ ಹೆಚ್ಚಿದೆ. ಸದ್ಯಕ್ಕೆ ಈ ಪರಿಸ್ಥಿತಿ ಸ್ಯಾಂಡಲ್ ವುಡ್‌ನಲ್ಲಿ ಇಲ್ಲ ಎನ್ನುವಂತಿದ್ದರೂ, ಕಲಾವಿದರು ತಮ್ಮ ಬದ್ಧತೆ ತೋರಬೇಕೆನ್ನುವ ಮಾತುಗಳು ಕೇಳಿಬರುತ್ತಿವೆ.
ಪರ-ವಿರೋಧ ಎನ್ನುವುದಕ್ಕಿಂತ ರೈತರ ಪ್ರತಿಭಟನೆ ವಿಚಾರದಲ್ಲಿ ಕಲಾವಿದರು ತಮ್ಮ ನಿಲುವು ಸ್ಪಷ್ಟಪಡಿಸಲಿ ಎಂದು ಸೋಷಲ್ ಮೀಡಿಯಾದಲ್ಲಿ ಕೆಲವರು ಒತ್ತಾಯಿಸಿದ್ದಾರೆ. ಈ ಮಧ್ಯೆಯೇ ಶುಕ್ರವಾರ ಬಹುಭಾಷೆ ನಟಿ ಪ್ರಣೀತಾ, ಟ್ವೀಟ್ ಮೂಲಕ ರೈತರ ಪ್ರತಿಭಟನೆಗೆ ಪ್ರತಿಕ್ರಿಯೆ ನೀಡಿರುವುದು ಪರ-ವಿರೋಧ ಅಭಿಪ್ರಾಯಕ್ಕೆ ಕಾರಣವಾಗಿದೆ.
” ಕಾನೂನು ಉಲ್ಲಂಘಿಸಿ ಸಮಾಜದ ಸುವ್ಯವಸ್ಥೆಗೆ ಧಕ್ಕೆ ತರುವ ಸಂಘಟಿತ ಪ್ರಯತ್ನಗಳು ನಡೆಯುತ್ತಿದ್ದರೂ ಕೇಂದ್ರ ಸರ್ಕಾರ ಈಗಲೂ ಮಾತುಕತೆಗೆ ಸಿದ್ಧವಿದೆ. ಕಾಯ್ದೆಗಳು ಉತ್ತಮವಾಗಿದೆ. ಇತ್ತೀಚೆಗೆ ಮಂಡನೆಯಾದ ಬಜೆಟ್ ಭಾರತವು ದಶಕಗಳಲ್ಲಿ ಕಂಡ ಅತ್ಯಂತ ಸುಧಾರಿತ ಬಜೆಟ್ ಇದಾಗಿದೆ ʼ ಎಂಬುದು ನಟಿ ಪ್ರಣೀತಾ ಅವರ ಟ್ವೀಟ್ ನ ಸಾರಾಂಶ.
ಉಳಿದಂತೆ ಕುತೂಹಲ ಇರೋದು ದರ್ಶನ್, ಸುದೀಪ್, ಶಿವರಾಜ್ ಕುಮಾರ್, ಯಶ್, ಪುನೀತ್ ರಾಜ್ ಕುಮಾರ್ ಸೇರಿದಂತೆ ಇತರೆ ನಟ-ನಟಯರ ಹೇಳಿಕೆಗಳ ಬಗ್ಗೆ. ಹಾಗಂತ ಇವರೆಲ್ಲ ರೈತರ ಪರವಾಗಿ ಮಾತನಾಡಿಲ್ಲ, ಬೀದಿಗಿಳಿದಿಲ್ಲ ಅಂತಲ್ಲ. ಅವರೇನು ಅಂತ ಕನ್ನಡದ ಪ್ರೇಕ್ಷಕರಿಗೆ ಗೊತ್ತು. ಕನ್ನಡ ಭಾಷೆ ಸೇರಿದಂತೆ ನೆಲ-ಜಲದ ಪ್ರಶ್ನೆ ಬಂದಾಗ ಬರೀ ಹೇಳಿಕೆಗಳು ಮಾತ್ರವಲ್ಲ ಅಷ್ಟು ನಟರೂ ಬೀದಿಗಿಳಿದು ಹೋರಾಟ ದಾಖಲಿಸಿದ್ದಾರೆ. ಅಷ್ಟಾಗಿಯೂ ಈಗ ದೇಶಾದ್ಯಂತ ರೈತರ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿರುವ ಸಂದರ್ಭದಲ್ಲಿ ಅವರ ನಿಲುವೇನು ಅನ್ನೋದು ಜನ ಸಾಮಾನ್ಯರಲ್ಲಿರುವ ಕುತೂಹಲದ ಪ್ರಶ್ನೆ.
ಹೊಸ ಟೈಟಲ್ ಮೂಲಕ ಕನ್ನಡದಲ್ಲಿ ಬರಲಿದೆ ಪ್ಯಾನ್ ಇಂಡಿಯಾ ಚಿತ್ರ
ಕಾಲಿವುಡ್ ಸ್ಟಾರ್ ಸಿಲಂಬರಸನ್ ಅಭಿನಯದ ಬಹು ನಿರೀಕ್ಷಿತ ಚಿತ್ರ ‘ಮಾನಾಡು’ ತೆರೆಗೆ ಬರಲು ರೆಡಿಯಾಗು ತ್ತಿದ್ದು, ಕನ್ನಡದಲ್ಲಿ ಇದಕ್ಕಿದ್ದ ಟೈಟಲ್ ಈಗ ಚೇಂಜ್ ಆಗುವುದು ಖಾತರಿ ಆಗಿದೆ. ಮೊನ್ನೆಯಷ್ಟೇ ಈ ಚಿತ್ರಕ್ಕೆ ಚಿತ್ರ ತಂಡ ಕನ್ನಡಕ್ಕೆ ಫೈನಲ್ ಮಾಡಿಕೊಂಡಿದ್ದ ರಿವೈಂಡ್ ಹೆಸರಿನ ಟೈಟಲ್ ಅನ್ನು ನಟ ಕಿಚ್ಚ ಸುದೀಪ್ ಲಾಂಚ್ ಮಾಡಿ, ಚಿತ್ರ ತಂಡಕ್ಕೆ ಶುಭ ಹಾರೈಸಿದ್ದರು. ಅದೇ ವೇಳೆ ಟೀಸರ್ ಕೂಡ ಲಾಂಚ್ ಆಗಿತ್ತು. ಆದರೆ ಈಗ ಟೈಟಲ್ ಚೇಂಜ್ ಆಗುವುದು ಗ್ಯಾರಂಟಿ ಆಗಿದೆ. ಕನ್ನಡದಲ್ಲಿ ಅದೇ ಹೆಸರಲ್ಲೊಂದು ಚಿತ್ರ ರಿಲೀಸ್ ಗೆ ರೆಡಿ ಆಗಿರುವುದೇ ಇದಕ್ಕೆ ಕಾರಣ ಎನ್ನುತ್ತಿದೆ ಚಿತ್ರ ತಂಡ.
‘ ಈಗಾಗಲೇ ನಾವು ಪ್ರಕಟಟಿಸಿರುವ ಹಾಗೆ ಮಾನಾಡು ಐದು ಭಾಷೆಗಳಲ್ಲಿ ರಿಲೀಸ್ ಗೆ ರೆಡಿ ಆಗುತ್ತಿರುವ ಸಿನಿಮಾ. ಅಂತೆಯೇ ಕನ್ನಡಕ್ಕೆ ನಾವು’ ರಿವೈಂಡ್’ ಹೆಸರಲ್ಲಿ ರಿಲೀಸ್ ಮಾಡಲು ಸಿದ್ಧತೆ ಮಾಡಿಕೊಂಡಿದ್ದೇವು. ಸುದೀಪ್ ಅವರು ಕೂಡ ಟೈಟಲ್ ಲಾಂಚ್ ಮಾಡಿ, ಚಿತ್ರ ತಂಡಕ್ಕೆ ಶುಭ ಹಾರೈಸಿದ್ದರು.ಆದರೆ ಈಗ ಅದೇ ಹೆಸರಲ್ಲಿ ಮತ್ತೊಂದು ಚಿತ್ರ ತೆರೆಗೆ ಬರಲು ರೆಡಿಯಾಗುತ್ತಿದೆ ಎನ್ನುವ ಸುದ್ದಿ ಗೊತ್ತಾಗಿದೆ. ಹಾಗಾಗಿ ಈಗ ನಾವು ಚಿತ್ರಕ್ಕೆ ಬೇರೆ ಟೈಟಲ್ ಇಡಲು ನಿರ್ಧರಿಸಿದ್ದೇವೆ. ಈಗ ಎಲ್ಲಾ ಭಾಷೆಗೂ ಅನ್ವಯವಾಗುವಂತಹ ಒಂದೇ ಟೈಟಲ್ ಆಯ್ಕೆ ಮಾಡಿಕೊಳ್ಳಲು ಚಿಂತನೆ ನಡೆಸಿದ್ದೇವೆ. ಸದ್ಯದಲ್ಲೇ ಅದನ್ನು ಅನೌನ್ಸ್ ಮಾಡುತ್ತೇವೆ’ ಚಿತ್ರದ ನಿರ್ಮಾಪಕ ಸುರೇಶ್ ಕಲಮತಚಿ.
ವೆಂಕಟ್‌ಪ್ರಭು ನಿರ್ದೇಶನದ ಈ ಚಿತ್ರಕ್ಕೆ ಹೆಸರಾಂತ ಸಂಗೀತ ನಿರ್ದೇಶಕ ಇಳಯರಾಜ್ ಪುತ್ರ ಯುವನ್‌ಶಂಕರ್‌ರಾಜ ಸಂಗೀತ ನೀಡಿದ್ದಾರೆ. ಹಾಗೆಯೇ ರಿಚರ್ಡ್ ಛಾಯಾಗ್ರಹ ಣವಿದೆ. ಪ್ರವೀಣ್.ಕೆ.ಎಲ್ ಸಂಕಲನ ಹಾಗೂ ಸ್ವಂಟ್‌ಶಿವ ಸಾಹಸ, ರಾಜುಸುಂದರಂ ನೃತ್ಯ ನಿರ್ದೇಶನವಿದೆ. ತಾರಾಗಣದಲ್ಲಿ ಸಿಲಂಬರಸನ್ ಅವರೊಂದಿಗೆ ಕಲ್ಯಾಣಿ, ಪ್ರಿಯದರ್ಶನ್, ಎಸ್.ಎ.ಚಂದ್ರಶೇಖರ್, ಎಸ್.ಜೆ.ಸೂರ್ಯ, ಪ್ರೇಮ್‌ಗಿಅಮರೆನ್, ಕರುಣಾಕರನ್ ಮುಂತಾದವರಿದ್ದಾರೆ.
ನಟ ಶ್ರೀನಗರ ಕಿಟ್ಟಿ ಈಗ ಹೊಸ ಅವತಾರಕ್ಕೆ ರೆಡಿ ಆಗಿದ್ದಾರೆ. ಬೆಳ್ಳಿತೆರೆಯಲ್ಲಿ ಅವರು ಹೀರೋ ಆಗಿ ಮಿಂಚಿದವರು. ಆದರೆ ಈಗ ಆ ಬಾರ್ಡರ್ ದಾಟಿಯೂ ವಿಲನ್ ಆಗಿ ಅಬ್ಬರಿಸಲು ಮುಂದಾಗಿದ್ದಾರೆ. ಹಾಗಂತ ಇವರಿಗೂ ಅವರೇನು ಹೀರೋ ಲೈನ್ ಕ್ರಾಸ್ ಮಾಡಿಲ್ಲ ಅಂತಲ್ಲ. ಈಗಾಗಲೇ ʼಬಾಲ್‌ಪೆನ್ʼ,ʼ ಸಿಂಪಾಲ್ಲಾಗಿ ಒಂದ್ ಲವ್ ಸ್ಟೋರಿʼ, ʼಭಜರಂಗಿʼ ಹಾಗೂ ʼನನ್ ಲೈಪ್ ಅಲ್ಲಿʼ ಎನ್ನುವ ಚಿತ್ರಗಳಲ್ಲಿ ವಿಶೇಷ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು ನಿಮಗೂ ಗೊತ್ತು. ಅಷ್ಟೇ ಯಾಕೆ, ಈಗ ಶರಣ್ ಅಭಿನಯದ ಬಹು ನಿರೀಕ್ಷಿತ ಚಿತ್ರ ʼಅವತಾರ ಪುರುಷʼ ಹಾಗೂ ʼಗರುಡʼ ಚಿತ್ರಗಳಲ್ಲೂ ಅವರದ್ದು ಗೆಸ್ಟ್ ಅಫೀರಿಯನ್ಸ್ ಇದೆ. ಇಷ್ಟಾಗಿಯೂ ಈಗವರು ಹೀರೋಗಿರಿ ಕ್ರಾಸ್ ಮಾಡಿ ಬಣ್ಣ ಹಚ್ಚುತ್ತಿರುವುದು ವಿಲನ್ ಪಾತ್ರಕ್ಕೆ. ಅದರಲ್ಲೂ ರಿಯಲ್ ಸ್ಟಾರ್ ಉಪೇಂದ್ರ ಎದುರು. ಹಾಗೆಯೇ ಅವರು ವಿಲನ್ ಆಗಿರುವುದು ಫಸ್ಟ್ ಟೈಮ್.
ಯಾವುದು ಆ ಚಿತ್ರ?
ಉಪೇಂದ್ರ ನಾಯಕರಾಗಿ ಅಭಿನಯಿಸಿರುವ ಚಿತ್ರಗಳ ಪೈಕಿ ಈಗ ಹೆಚ್ಚು ಸುದ್ದಿಯಲ್ಲಿರುವ ಚಿತ್ರಗಳಂದ್ರೆ ʼಕಬ್ಜʼ ಹಾಗೂʼ ಬುದ್ಧಿವಂತ 2ʼ. ಇವೆರೆಡು ಚಿತ್ರಗಳ ಪೈಕಿ ʼಬುದ್ಧಿವಂತ 2′ ಹಲವು ಕಾರಣಕ್ಕೆ ಕುತೂಹಲ ಮೂಡಿಸಿದ ಚಿತ್ರ. ʼಬುದ್ಧಿವಂತʼ ಉಪೇಂದ್ರ ಅವರ ಸಿನಿ ಜರ್ನಿಯ ಸ್ಪೆಷಲ್ ಚಿತ್ರ. ಕನ್ನಡದ ಬ್ಲಾಕ್ ಬಸ್ಟರ್ ಚಿತ್ರವೂ ಹೌದು. ಕತೆ, ಚಿತ್ರಕತೆ ಎನ್ನುವುದಕ್ಕಿಂತ ಅವರ ವಿಶಿಷ್ಟ ಮ್ಯಾನರಿಸಂ ಹಾಗೂ ಕಿಕ್ ನೀಡುವ ಡೈಲಾಗ್ ಮೂಲಕವೇ ಸಖತ್ ಹಿಟ್ ಆಗಿದ್ದು ಇತಿಹಾಸ. ಅದರ ‘ ಪಾರ್ಟ್ 2’ ಈಗ ʼಬುದ್ಧಿವಂತ 2ʼ ಹೆಸರಲ್ಲಿ ಬರುತ್ತಿರುವುದು ಹಳೇ ಸುದ್ದಿ.
ಕಿಟ್ಟಿ ಕರೆತಂದರು ಜಯರಾಂ..
ಕ್ರೆಸ್ಟಲ್ ಪಾರ್ಕ್ ಪ್ರೊಡಕ್ಷನ್ ಮೂಲಕ ನಿರ್ಮಾಪಕ ಟಿ.ಆರ್.ಚಂದ್ರಶೇಖರ್ ನಿರ್ಮಾಣ ಮಾಡುತ್ತಿರುವ ಚಿತ್ರ ಇದು. ಇದಕ್ಕೆ ಆಕ್ಷನ್ ಕಟ್ ಹೇಳುತ್ತಿರುವವರು ಕ್ರಿಯೇಟಿವ್ ಯಂಗ್ ಡೈರೆಕ್ಟರ್ ಜಯರಾಂ ಭದ್ರಾವತಿ.ಇವರಿಗಿದು ಎರಡನೇ ಚಿತ್ರ. ಅದಕ್ಕೂ ಮೊದಲು ʼಚೆರಿʼ ಹೆಸರಿನ ಚಿತ್ರ ನಿರ್ದೇಶಿಸಿದ್ದರು. ಅದಕ್ಕಿಂತ ಹೆಚ್ಚಾಗಿ ನಿರ್ದೇಶಕ ಆರ್. ಚಂದ್ರು ಬಳಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಉಪೇಂದ್ರ ಅಭಿನಯದ ‘ಬ್ರಹ್ಮ’ ಚಿತ್ರಕ್ಕೂ ಜಯರಾಂ ಸಹಾಯಕ ನಿರ್ದೇಶಕರಾಗಿದ್ದರು. ಅದೇ ನಂಟಿನ ಮೂಲಕ ‘ಬುದ್ಧಿವಂತ 2’ ನಲ್ಲಿ ಉಪ್ಪಿಗೆ ಜೋಡಿಯಾಗಿರುವ ಜಯರಾಂ ಈಗ ಚಿತ್ರದಲ್ಲಿನ ಪ್ರಮುಖ ಪಾತ್ರವೊಂದಕ್ಕೆ ಕನ್ನಡದ ಮತ್ತೊಬ್ಬ ಸ್ಟಾರ್ ಅನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ಅವರೇ ಶ್ರೀನಗರ ಕಿಟ್ಟಿ.ಅವರಿಲ್ಲಿ ವಿಲನ್!
ವಿಲನ್ ಅನ್ನೋದು ನಿಜ,ಆದರೆ…?
ಚಿತ್ರದಲ್ಲಿ ನಟ ಶ್ರೀನಗರ ಕಿಟ್ಟಿಅವರದ್ದು ವಿಲನ್ ಪಾತ್ರ.
ಸದ್ಯಕ್ಕೆಇದಿಷ್ಟೇ ಗೊತ್ತಾಗಿರುವ ವಿಚಾರ. ಉಳಿದಂತೆ ಆ ಪಾತ್ರದ ವಿವರ ಇನ್ನು ಬಹಿರಂಗವಾಗಿಲ್ಲ. ಆದರೆ ಫಸ್ಟ್ ಲುಕ್ ಹೊರ ಬಿದಿದ್ದೆ. ಸಖತ್ ಗಡ್ಡ ದಾರಿಯಾಗಿರುವ ಕಿಟ್ಟಿ, ದೊಡ್ಡ ಗ್ಯಾಂಗ್ ಸ್ಟರ್ ಅಂತೆ.ಈ ಬಗ್ಗೆ ನಿರ್ದೇಶಕ ಜಯರಾಂ ಹೇಳುವುದಿಷ್ಟು ; ಅವರದ್ದು ಇಲ್ಲಿ ಒಂದು ವಿಲನ್ ಲುಕ್. ಅವರ ಕರಿಯರ್ ನಲ್ಲೇ ಒಂದು ಪ್ರಮುಖ ಪಾತ್ರ. ಸದ್ಯಕ್ಕೆ ಆ ಪಾತ್ರದ ಡಿಟೈಲ್ಸ್ ಬೇಡ. ಮುಂದೆ ಅವರೇ ಎಲ್ಲವನ್ನು ರಿವೀಲ್ ಮಾಡಲಿದ್ದಾರೆ. ಆದರೆ ಇಲ್ಲಿ ಉಪ್ಪೇಂದ್ರ ಹಾಗೂ ಶ್ರೀನಗರ ಕಿಟ್ಟಿ ಅವರ ಜುಗಲ್ ಬಂಧಿಯೇ ಅದ್ಬುತವಾಗಿದೆ. ಇಬ್ಬರ ಫ್ಯಾನ್ಸ್ ಗೂ ಹಬ್ಬವೇ’
ಇನ್ನೇರಡು ದಿನಗಳ ಶೂಟ್ ಬಾಕಿ…
‘ಬುದ್ಧಿವಂತ 2’ ಶುರುವಾಗಿದ್ದೇ 2020 ಕ್ಕೂ ಮೊದಲು. ಅಲ್ಲಿಂದ 2020 ಮಾರ್ಚ್ ಹೊತ್ತಿಗೆ ಒಂದಷ್ಟು ಚಿತ್ರೀಕರಣ ಕೂಡ ಪೂರೈಸಿತ್ತು. ಶಿವಮೊಗ್ಗ ಜೈಲಿನಲ್ಲಿ ಅದ್ಭುತವಾದ ಸನ್ನಿವೇಶಗಳಿಗೆ ಶೂಟಿಂಗ್ ಮುಗಿಸಿಕೊಂಡು ಬಂದಿತ್ತು ಚಿತ್ರ ತಂಡ. ಅಲ್ಲಿಂದ ಕೊರೋನಾ ಬಂತು, ಚಿತ್ರೀಕರಣವನ್ನು ಸ್ಥಗಿತಗೊಂಡಿತ್ತು.ಮತ್ತೆ ಚಿತ್ರೀಕರಣ ಶುರು ಮಾಡಿ, ಈಗ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದಿದೆ. ಇದರಲ್ಲಿ ಶ್ರೀನಗರ ಕಿಟ್ಟಿ ಕೂಡ ಬಹುತೇಕ ಚಿತ್ರೀಕರಣ ಮುಗಿಸಿಕೊಟ್ಟಿದ್ದಾರಂತೆ. ಇನ್ನೇರೆಡು ದಿನ ಮಾತ್ರ ಶೂಟಿಂಗ್ ಬಾಕಿ ಇದೆಯಂತೆ. ಇಷ್ಟರಲ್ಲಿಯೇ ಅದು ಕೂಡ ಕಂಪ್ಲೀಟ್ ಆಗಲಿದೆಯಂತೆ. ಅಲ್ಲಿಂದ ಎಲ್ಲವೂ ಅಂದುಕೊಂಡಂತದರೆ, ಶೀಘ್ರವೇ ಚಿತ್ರ ತೆರೆಗೆ ಬರಲಿದೆಯಂತೆ.
“ಹುಡುಗರು ಬೇಕು, ನಂಗೆ ಹುಡುಗರು ಬೇಕುʼ ಅಂತ ಕೊಡಗಿನ ಬೆಡಗಿ ನಿಧಿ ಸುಬ್ಬಯ್ಯ ಈ ಹಿಂದೆ ಆನ್ ಸ್ಕ್ರೀನ್ ಮೇಲೆ ಗೊಗರೆದಿದ್ದು ನಿಮಗೆಲ್ಲ ಗೊತ್ತೇ ಇದೆ. ಈಗ ನಿಧಿ ಸುಬ್ಬಯ್ಯ ಅವರ ಹಾಗೆಯೇ ” ಹುಡುಗರು ತುಂಬಾ ಒಳ್ಳೆಯವ್ರು, ಟೈಮ್ ಬೇಕು ಒಂಚೂರು ʼ ಅಂತ ಹುಡುಗರ ಹಿಂದೆ ಬಿದಿದ್ದಾರೆ ಬಿಗ್‌ಬಾಸ್ ಖ್ಯಾತಿಯ ನಟಿ ಚೈತ್ರಾ ಕೋಟೂರ್. ಅಂದ ಹಾಗೆ, ಅವರಿಗೇನಾಯ್ತು ? ಮದ್ವೆ- ಗಿದ್ವಿ ಅಂತ ಹುಡುಗ್ನ ಹುಡುಕುತಿದ್ದಾರಾ ಅಂತ ತಲೆ ಕೆಡಿಸಿಕೊಳ್ಳಬೇಡಿ, ಯಾಕಂದ್ರೆ ಇದು ರೀಲ್ ಮೇಲಿನ ಕತೆ.
ಬಿಗ್‌ಬಾಸ್ ಜನಪ್ರಿಯತೆಯ ಮೂಲಕ ಈಗ ನಟನೆಯತ್ತ ಹೆಚ್ಚು ಗಮನ ಹರಿಸಿರುವ ಚೈತ್ರಾ ಕೋಟೂರ್, ತಾವೇ ಸಾಹಿತ್ಯ ಬರೆದು ಹೊಸದೊಂದು ವಿಡಿಯೋ ಆಲ್ಬ ಸಾಂಗ್ ಹೊರ ತಂದಿದ್ದಾರೆ. “ಹುಡುಗರು ತುಂಬಾ ಒಳ್ಳೆಯವ್ರು ʼ ಎನ್ನುವುದು ಆ ವಿಡಿಯೋ ಆಲ್ಬಂ ಸಾಂಗ್ ಹೆಸರು. ಸಾಹಿತ್ಯ ದ ಜತೆಗೆ ಈ ಹಾಡಿಗೆ ಅವರೇ ಸಂಗೀತ ಸಂಯೋಜನೆ ಮಾಡಿದ್ದಾರೆ. ಹಾಗೆಯೇ ಅವರೇ ಆನ್ ಸ್ಕ್ರೀನ್ ಮೇಲೆ ಮಸ್ತ್ ಮಸ್ತ್ ಹಾಡಿ ಕುಣಿದಿರುವುದು ವಿಶೇಷ.
ಮೂಲತಃ ರಂಗಭೂಮಿ ನಟಿಯಾದ ಚೈತ್ರಾ ಕೋಟೂರ್, ಸಿನಿಮಾ ನಿರ್ದೇಶನದ ಕಲಿಕೆಯ ಜತೆಗೆಯೇ ನಟಿಯಾಗಿ ಕಾಣಿಸಿಕೊಂಡವರು. ಅದರ ಜತೆಗೆಯೇ ಬಿಗ್‌ಬಾಸ್ ಗೂ ಹೋಗಿ ಬಂದು ಒಂದಷ್ಟು ಫೇಮಸ್ ಆದರು. ಅಲ್ಲಿಂದ ಬಂದವರು ಒನ್ಸ್ ಏಗೇನ್ ಸಿನಿಮಾ ನಿರ್ದೇಶನ , ನಟನೆ ಅಂತ ಬ್ಯುಸಿ ಆಗಿರುವುದರ ನಡುವೆಯೇ ಈಗ ತಾವೇ ಒಂದು ವಿಡಿಯೋ ಆಲ್ಬಂ ಸಾಂಗ್ ಹೊರತಂದಿದ್ದಾರೆ. ಅದೀಗ ಆನಂದ್ ಆಡಿಯೋ ಮೂಲಕ ಹೊರ ಬಂದಿದೆ.
ಸಹಜವಾಗಿಯೇ ಡಾನ್ಸ್ ಹಾಗೂ ಮ್ಯೂಜಿಕ್ ನಲ್ಲೂ ಹೊಸತನ ಇರೋದ್ರಿಂದ ಸೋಷಲ್ ಮೀಡಿಯಾದಲ್ಲಿ ಹಾಡು ವೈರಲ್ ಆಗುತ್ತಿದೆ. ನಟಿ, ನಿರ್ದೇಶಕಿ ಚೈತ್ರಾ ಕೋಟೂರ್ ಅವರ ಇನ್ನೊಂದು ಮುಖ ಇಲ್ಲಿ ರಿವೀಲ್ ಆಗಿದ್ದು ಕಂಡು ಸಿನಿಮಾ ಪ್ರೇಮಿಗಳು ಶಾಕ್ ಆಗಿದ್ದಾರೆ.ರಾಪ್ ಸಾಂಗ್ ಶೈಲಿಯ ಈ ವಿಡಿಯೋ ಆಲ್ಬಂ ಸಾಂಗ್ ಮಜವಾಗಿದೆ. ” ಹುಡುಗರು ತುಂಬಾ ಒಳ್ಳೆಯವ್ರು, ಟೈಮ್ ಬೇಕು ಒಂಚೂರುʼ ಅಂತ ಹುಡುಗರಲ್ಲಿ ನಾಯಕಿ ಚೈತ್ರಾ ಕೋಟೂರ್ ರಿಕ್ವೆಸ್ಟ್ ಮಾಡುವ ಹಾಡಿನ ಸಾಲುಗಳೇ ಸೊಗಸಾಗಿವೆ. ಅಷ್ಟೇ ಅಲ್ಲ, ಅವರ ಪ್ರಕಾರ ಹುಡುಗರು ತುಂಬಾ ಒಳ್ಳೆಯವ್ರು. ನಿಯತ್ತಿನಿಂದ ದುಡಿಯೋವ್ರು ಅಂತೆಲ್ಲ ಹುಡುಗರನ್ನು ಹಾಡಿ ಹೊಗಳಿದ್ದಾರೆ.
ಸದ್ಯಕ್ಕೆ ಈ ವಿಡಿಯೋ ಆಲ್ಬಂ ಸಾಂಗ್ ಅನ್ನು ಹೊರ ತಂದಿರುವ ಉದ್ದೇಶವನ್ನು ಅವರು ರಿವೀಲ್ ಮಾಡಿಲ್ಲ. ಆದರೆ, ಸಾಂಗ್ ಕಾನ್ಸೆಪ್ಟ್ ಬಗ್ಗೆ ಹೇಳಿಕೊಂಡಿದ್ದಾರೆ.. ನನಗೆ ಇದು ಹೊಸ ಪ್ರಯತ್ನ’ ಇದು ನನ್ನ ಜೀವನದಲ್ಲಿ ವಿಶೇಷವಾದ ಪ್ರಯತ್ನ ಎಂದು ಹೇಳಿಕೊಂಡಿದ್ದಾರೆ ಚೈತ್ರಾ. ಈ ಹಾಡಿಗೆರಾಜ್ ರೋಹಿತ್ ಛಾಯಾಗ್ರಹಣ ಮಾಡಿದ್ದು, ಕಾವ್ಯಾ ಶಿವಮೊಗ್ಗ ನೃತ್ಯ ನಿರ್ದೇಶನ ಮಾಡಿದ್ದಾರೆ. ಸೋಷಲ್ ಮೀಡಿಯಾದಲ್ಲಿ ರಿಲೀಸ್ ಆಗಿದೆ. ಉಳಿದಂತೆ ಚೈತ್ರಾ ಕೋಟೂರ್ ‘ಹೇ ರಾಮ್’ ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ಬಾಲಿವುಡ್ ನಟಿ ತಾಪ್ಸಿ ಪನ್ನು ಮತ್ತೆ ಸುದ್ದಿಯಲ್ಲಿದ್ದಾರೆ. ಈ ಹಿಂದೆ ಕಂಗನಾ ವಿವಾದಾತ್ಮಕ ಹೇಳಿಕೆಯಲ್ಲೂ ಪನ್ನು ಸಾಕಷ್ಟು ಸುದ್ದಿಲ್ಲಿದ್ದರು. ಈಗ ಜಾತಿಕವಾಗಿ ಸುದ್ದಿಯಾದ ಭಾರತೀಯ ರೈತರ ಪ್ರತಿಭಟನೆಯ ವಿಚಾರದಲ್ಲಿ ತಾಪ್ಸಿ ಪನ್ನು ಹೆಸರು ಚಾಲ್ತಿಗೆ ಬಂದಿದೆ. ಮತ್ತೆ ಕಂಗನಾ ಹಾಗೂ ತಾಪ್ಸಿ ನಡುವೆ ಸಮರ ಸುರುವಾಗುವ ಸಾಧ್ಯತೆಗಳು ಕಾಣುತ್ತಿವೆ. ರೈತರ ಪ್ರತಿಭಟನೆಗೆ ಸಂಬಂಧಿಸಿದಂತೆ ನಟಿ ತಾಪಸಿ ಪನ್ನು ಮಾಡಿರುವ ಟ್ವೀಟ್ ಬಾಲಿವುಡ್ ಘಟಾನಿಘಟಿಗಳ ಕೆನ್ನೆಗೆ ಭಾರಿಸಿದಂತಿದೆ. ಅವರ ಟ್ವೀಟ್‌ಗೆ ಪರ-ವಿರೋಧದ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.
ಭಾರತದಲ್ಲಿನ ರೈತರ ಪ್ರತಿಭಟನೆ ಕುರಿತಂತೆ ಪಾಪ್‌ಸ್ಟಾರ್ ರಿಹಾನಾರ ಟ್ವೀಟ್ ಬಾಲಿವುಡ್‌ನಲ್ಲಿ ಸಂಚಲನ ಸೃಷ್ಟಿಸಿದ್ದು ಸರಿಯಷ್ಟೆ. ಆಕೆಯ ಟ್ವೀಟ್ ಹಿಂದೆ ಆಂತಾರಾಷ್ಟ್ರೀಯ ತಾರೆಯರ ಮತ್ತಷ್ಟು ಟ್ವೀಟ್‌ಗಳು ದಾಖಲಾದವು. ಅಲ್ಲಿಯವರೆಗೆ ಸುಮ್ಮನಿದ್ದ ಬಾಲಿವುಡ್ ತಾರೆಯರು ಅದೊಂದು ಟ್ವೀಟ್ ನಂತರ ನಿದ್ದೆಯಿಂದ ಎದ್ದಂತೆ ಪ್ರತಿಕ್ರಿಯಿಸಿದ್ದರು. ಗಾಯಕಿ ರಿಹಾನಾ ಟ್ರ್ಯಾಕ್ಟರ್ ಪ್ರತಿಭಟನೆಯ ಫೋಟೋ ಹಾಕಿ, “ನಾವೇಕೆ ಈ ಬಗ್ಗೆ ಮಾತನಾಡುತ್ತಿಲ್ಲ?” ಎಂದು ಪ್ರಶ್ನಿಸಿದ್ದರು. ಈ ಟ್ವೀಟ್ ನಂತರ ಬಾಲಿವುಡ್ ತಾರೆಯರ ಸರಣಿ ಟ್ವೀಟ್‌ಗಳು ಕಾಣಿಸಿಕೊಳ್ಳತೊಡಗಿವೆ.
ಬಾಲಿವುಡ್ ಸ್ಟಾರ್‌ಗಳಾದ ಅಕ್ಷಯ್ ಕುಮಾರ್, ಅಜಯ್ ದೇವಗನ್, ಸುನೀಲ್ ಶೆಟ್ಟಿ, ಚಿತ್ರನಿರ್ದೇಶಕ ಕರಣ್ ಜೋಹರ್, ಗಾಯಕಿ ಲತಾ ಮಂಗೇಶ್ಕರ್ ಸೇರಿದಂತೆ ಹತ್ತಾರು ಬಾಲಿವುಡ್ ಸೆಲೆಬ್ರಿಟಿಗಳು ‘#IndiaTogether, #IndiaAgainstPropaganda’ ಆಶ್ ಟ್ಯಾಗ್‌ನಡಿ ಟ್ವೀಟ್ ಮಾಡತೊಡಗಿದ್ದಾರೆ. “ಸುಳ್ಳು ಸುದ್ದಿ, ಮಾಹಿತಿಗೆ ಬಲಿಯಾಗದೆ ನಾವೆಲ್ಲರೂ ಭಾರತೀಯರಾಗಿ ಒಗ್ಗಟ್ಟಾಗಿ ನಿಲ್ಲೋಣ. ನಮ್ಮಲ್ಲೇ ಗೊಂದಲ ಬೇಡ” ಎನ್ನುವ ಅರ್ಥದಲ್ಲಿದ್ದವು ಈ ಎಲ್ಲಾ ಟ್ವೀಟ್‌ಗಳು. ಅಚ್ಚರಿಯೆಂದರೆ ಬಾಲಿವುಡ್ ಹಾಗೂ ಕ್ರೀಡಾರಂಗದ ತಾರೆಯರ ಕೆಲವು ಟ್ವೀಟ್‌ಗಳು ಒಂದೇ ರೀತಿಯ ಒಕ್ಕಣಿ ಹೊಂದಿದ್ದವು! ಸೋಷಿಯಲ್ ಮೀಡಿಯಾದಲ್ಲಿ ಇದಕ್ಕೂ ಟೀಕೆ ವ್ಯಕ್ತವಾಗುತ್ತಿದೆ.
ಈ ಮಧ್ಯೆ ನಟಿ ತಾಪಸಿ ಪನ್ನು ಟ್ವೀಟಿಸಿದ ಬಾಲಿವುಡ್ ತಾರೆಯರಿಗೆ ಬಿಸಿಮುಟ್ಟಿಸುವಂತಹ ಒಂದು ಟ್ವೀಟ್ ಮಾಡಿದ್ದಾರೆ. “ಒಂದು ಟ್ವೀಟ್ ನಿಮ್ಮ ಐಕ್ಯತೆಯನ್ನು ಅಲ್ಲಾಡಿಸುವುದಾದರೆ, ಒಂದು ಜೋಕ್ ನಿಮ್ಮ ನಂಬಿಕೆಯನ್ನು ಅಲ್ಲಾಡಿಸುವುದಾದರೆ, ಒಂದು ಕಾರ್ಯಕ್ರಮ ನಿಮ್ಮ ಧಾರ್ಮಿಕ ನಂಬಿಕೆಯನ್ನು ಅಲ್ಲಾಡಿಸುವುದಾದರೆ… ಮೊದಲು ನೀವು ನಂಬಿರುವ ಮೌಲ್ಯಗಳನ್ನು ಗಟ್ಟಿಗೊಳಿಸುವ ಕೆಲಸ ಮಾಡಿ. ಬದಲಿಗೆ ಉಳಿದವರ ಪ್ರೊಪಗಾಂಡಾ ಪಾಠ ಮಾಡಲು ಬರಬೇಡಿ” ಎನ್ನುವ ತಾಪ್ಸಿ ಟ್ವೀಟ್ ಬಾಲಿವುಡ್ ಸ್ಟಾರ್‌ಗಳಿಗೆ ಬಿಸಿ ಮುಟ್ಟಿಸಿದೆ. ನಟಿಯ ದಿಟ್ಟತನಕ್ಕೆ ಮೆಚ್ಚುಗೆ ಜೊತೆ ಈರ್ಷ್ಯೆಯೂ ವ್ಯಕ್ತವಾಗುತ್ತಿದೆ.
ಬಾಲಿವುಡ್ ಸಂಗೀತ ನಿರ್ದೇಶಕ ವಿಶಾಲ್ ದಡ್ಲಾನಿ ಕೂಡ ರೈತರ ಪರ ಟ್ವೀಟ್ ಮಾಡಿ ಗಮನ ಸೆಳೆದಿದ್ದರು. ‘#FarmersProtest, #TheWorldIsWatching’ ಆಶ್ ಟ್ಯಾಗ್‌ನಡಿ ಅವರು “ಹೋಲೋಕಾಸ್ಟ್ ಹತ್ಯಾಕಾಂಡವನ್ನು ಹಿಟ್ಲರ್ ಆಂತರಿಕ ವಿಷಯ ಎಂದು ಸಮರ್ಥಿಸಿಕೊಂಡರೆ?” ಎನ್ನುವ ಒಕ್ಕಣಿಯ ಪ್ರಶ್ನೆ ಎಸದಿದ್ದರು. ಇದೀಗ ತಾಪ್ಸಿ ಟ್ವೀಟ್‌ನಿಂದ ಕುಪಿತರಾಗಿರುವ ನಟಿ ಕಂಗನಾ ರನಾವತ್, ಅವರನ್ನು ಬಿ ಗ್ರೇಡ್ ನಟಿ ಎಂದು ಕರೆದು ಟ್ವೀಟ್ ಮಾಡಿ ದೇಶದ ಐಕ್ಯತೆ ಕುರಿತಂತೆ ಚರ್ಚಿಸತೊಡಗಿದ್ದಾರೆ. ಇದಕ್ಕೆ ತಾಪ್ಸಿ ಕಡೆಯಿಂದ ಇನ್ನೂ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ರೈತರ ಪ್ರತಿಭಟನೆಗೆ ಸಂಬಂಧಿಸಿದಂತೆ ಬಾಲಿವುಡ್‌ನಲ್ಲಿ ಸದ್ಯ ಟ್ವೀಟ್ ಸಮರ ಜಾರಿಯಲ್ಲಿದ್ದು, ಇದು ಹೇಗೆ ತಾರ್ಕಿಕ ಅಂತ್ಯ ಕಾಣುತ್ತದೆ ಎನ್ನುವುದನ್ನು ನೋಡಬೇಕಿದೆ.
ಸಿಎಂ ಮಾತಿಗೆ ಮಾರುತ್ತರ ನೀಡದೆ ಮುಖಭಂಗ ಅನುಭವಿಸಿದರು ಸಚಿವ ಡಾ. ಸುಧಾಕರ್ !
ಚಿತ್ರಮಂದಿರಗಳಲ್ಲಿನ ಶೇಕಡಾ ನೂರರಷ್ಟು ಸೀಟು ಭರ್ತಿ ವಿಷಯದಲ್ಲಿ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಬುಧವಾರ ನಿಜಕ್ಕೂ ಮುಖಭಂಗ ಅನುಭವಿಸಿದರು. ನೂರರಷ್ಟು ಭರ್ತಿಗೆ ಅವಕಾಶ ನೀಡುವಂತೆ ಸ್ಯಾಂಡಲ್ವುಡ್ ಬುಧವಾರ ಮುಂಜಾನೆಯಿಂದಲೇ ಆರಂಭಿಸಿದ್ದ ಸೋಷಲ್ ಮೀಡಿಯಾ ಆಭಿಯಾನಕ್ಕೆ ಮಧ್ಯಾಹ್ನ ಸುಧಾಕರ್ ವಿಧಾನ ಸೌಧದಲ್ಲೇ ಪ್ರತಿಕ್ರಿಯೆ ನೀಡಿದ್ದರು. ಅವರ ಹೇಳಿಕೆಯೇ ವಿಚಿತ್ರವಾಗಿತ್ತು. ಸಿಎಂ ಜೊತೆ ಮಾತುಕತೆ ನಡೆಸಿ, ಆ ಹೇಳಿಕೆ ನೀಡಿದ್ದರೂ ಅಥವಾ ತಾವೇ ಸ್ವ ಇಚ್ಚೆಯಿಂದ ಈ ಹೇಳಿಕೆ ನೀಡಿದ್ದರೂ ಗೊತ್ತಿಲ್ಲ. ʼಮನರಂಜನೆಗಿಂತ ತಮಗೆ ಜನರ ಆರೋಗ್ಯ ಮುಖ್ಯʼಎನ್ನುವ ಮಾತುಗಳನ್ನು ತೀರಾ ವ್ಯಂಗ್ಯದ ಧ್ವನಿಯಲ್ಲೇ ನೀಡಿದ್ದರು. ಆದರೆ ಆ ಹೇಳಿಕೆ ಗೆ ಸ್ಯಾಂಡಲ್ ವುಡ್ ಜತೆಗೆ ಅಧಿವೇಶನದಲ್ಲೇ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದಂತೆ ಆರೋಗ್ಯ ಸಚಿವ ಸುಧಾಕರ್ ವಿಲನ್ ಸ್ಥಾನದಲ್ಲಿ ನಿಂತರು.
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅಧಿವೇಶನದಲ್ಲಿಯೇ ಸರ್ಕಾರದ ನಿರ್ಧಾರವನ್ನು ತರಾಟೆಗೆ ತೆಗೆದುಕೊಂಡರು. ಮತ್ತೊಂದೆಡೆ ಚಿತ್ರರಂಗ ಸಿಟ್ಟಾಗಿ ಕುಳಿತಿತು. ಈ ಬೆಳವಣಿಗೆಗಳ ಬೆನ್ನಲೇ ಸಿಎಂ ಯುಡಿಯೂರಪ್ಪ ಎಚ್ಚೆತ್ತುಕೊಂಡರು. ಉರಿಯುವ ಬೆಂಕಿಗೆ ಸಿಲುಕಬಹುದೆನ್ನುವ ಸೂಚನೆ ಸಿಗುತ್ತಿದ್ದಂತೆ ಆರೋಗ್ಯ ಸಚಿವ ಸುಧಾಕರ್ ಗೆ ಕ್ಲಾಸ್ ತೆಗೆದುಕೊಂಡರು. ತಕ್ಷಣವೇ ಚಿತ್ರರಂಗದ ಗಣ್ಯರ ಜತೆ ಸಭೆ ನಡೆಸಿ, ಷರತ್ತು ಬದ್ಧ ಅವಕಾಶ ನೀಡಲು ಕ್ರಮ ಕೈಗೊಳ್ಳಿ ಅಂತ ಕಿವಿ ಹಿಂಡಿದರು.
ಇದಾಗುತ್ತಿದ್ದಂತೆ ತೀವ್ರ ಮುಖಭಂಗ ಅನುಭವಿಸಿದ ಸುಧಾಕರ್, ತಕ್ಷಣವೇ ವಿಧಾನ ಸೌಧದ ಸಮ್ಮೇಳನ ಸಭಾಂಗಣದಲ್ಲಿ ಚಿತ್ರರಂಗದವರ ಜತೆಗೆ ಸಭೆ ನಡೆಸಿದರು. ಚಿತ್ರೋದ್ಯಮದ ಪರಿಸ್ಥಿತಿ ಅವಲೋಕಿಸಿ, ಅವಕಾಶ ಕೊಡುವುದಾಗಿ ಹೇಳಿದರು. ಒಟ್ಟಾರೆ ಪೂರ್ವಾಲೋಚನೆ ಇಲ್ಲದೆ ಸುಧಾಕರ್ , ಒಂದು ಹೇಳಿಕೆ ಕೊಟ್ಟು ಆಮೇಲೆ ಮುಖಭಂಗ ಅನುಭವಿಸಬೇಕಾಗಿ ಬಂತು.