ಹುಡುಗರನ್ನು ಹಾಡಿ ಹೊಗಳಿದ ಬಿಗ್ ಬಾಸ್ ಖ್ಯಾತಿಯ ನಟಿ !!
“ಹುಡುಗರು ಬೇಕು, ನಂಗೆ ಹುಡುಗರು ಬೇಕುʼ ಅಂತ ಕೊಡಗಿನ ಬೆಡಗಿ ನಿಧಿ ಸುಬ್ಬಯ್ಯ ಈ ಹಿಂದೆ ಆನ್ ಸ್ಕ್ರೀನ್ ಮೇಲೆ ಗೊಗರೆದಿದ್ದು ನಿಮಗೆಲ್ಲ ಗೊತ್ತೇ ಇದೆ. ಈಗ ನಿಧಿ ಸುಬ್ಬಯ್ಯ ಅವರ ಹಾಗೆಯೇ ” ಹುಡುಗರು ತುಂಬಾ ಒಳ್ಳೆಯವ್ರು, ಟೈಮ್ ಬೇಕು ಒಂಚೂರು ʼ ಅಂತ ಹುಡುಗರ ಹಿಂದೆ ಬಿದಿದ್ದಾರೆ ಬಿಗ್‌ಬಾಸ್ ಖ್ಯಾತಿಯ ನಟಿ ಚೈತ್ರಾ ಕೋಟೂರ್. ಅಂದ ಹಾಗೆ, ಅವರಿಗೇನಾಯ್ತು ? ಮದ್ವೆ- ಗಿದ್ವಿ ಅಂತ ಹುಡುಗ್ನ ಹುಡುಕುತಿದ್ದಾರಾ ಅಂತ ತಲೆ ಕೆಡಿಸಿಕೊಳ್ಳಬೇಡಿ, ಯಾಕಂದ್ರೆ ಇದು ರೀಲ್ ಮೇಲಿನ ಕತೆ.
ಬಿಗ್‌ಬಾಸ್ ಜನಪ್ರಿಯತೆಯ ಮೂಲಕ ಈಗ ನಟನೆಯತ್ತ ಹೆಚ್ಚು ಗಮನ ಹರಿಸಿರುವ ಚೈತ್ರಾ ಕೋಟೂರ್, ತಾವೇ ಸಾಹಿತ್ಯ ಬರೆದು ಹೊಸದೊಂದು ವಿಡಿಯೋ ಆಲ್ಬ ಸಾಂಗ್ ಹೊರ ತಂದಿದ್ದಾರೆ. “ಹುಡುಗರು ತುಂಬಾ ಒಳ್ಳೆಯವ್ರು ʼ ಎನ್ನುವುದು ಆ ವಿಡಿಯೋ ಆಲ್ಬಂ ಸಾಂಗ್ ಹೆಸರು. ಸಾಹಿತ್ಯ ದ ಜತೆಗೆ ಈ ಹಾಡಿಗೆ ಅವರೇ ಸಂಗೀತ ಸಂಯೋಜನೆ ಮಾಡಿದ್ದಾರೆ. ಹಾಗೆಯೇ ಅವರೇ ಆನ್ ಸ್ಕ್ರೀನ್ ಮೇಲೆ ಮಸ್ತ್ ಮಸ್ತ್ ಹಾಡಿ ಕುಣಿದಿರುವುದು ವಿಶೇಷ.
ಮೂಲತಃ ರಂಗಭೂಮಿ ನಟಿಯಾದ ಚೈತ್ರಾ ಕೋಟೂರ್, ಸಿನಿಮಾ ನಿರ್ದೇಶನದ ಕಲಿಕೆಯ ಜತೆಗೆಯೇ ನಟಿಯಾಗಿ ಕಾಣಿಸಿಕೊಂಡವರು. ಅದರ ಜತೆಗೆಯೇ ಬಿಗ್‌ಬಾಸ್ ಗೂ ಹೋಗಿ ಬಂದು ಒಂದಷ್ಟು ಫೇಮಸ್ ಆದರು. ಅಲ್ಲಿಂದ ಬಂದವರು ಒನ್ಸ್ ಏಗೇನ್ ಸಿನಿಮಾ ನಿರ್ದೇಶನ , ನಟನೆ ಅಂತ ಬ್ಯುಸಿ ಆಗಿರುವುದರ ನಡುವೆಯೇ ಈಗ ತಾವೇ ಒಂದು ವಿಡಿಯೋ ಆಲ್ಬಂ ಸಾಂಗ್ ಹೊರತಂದಿದ್ದಾರೆ. ಅದೀಗ ಆನಂದ್ ಆಡಿಯೋ ಮೂಲಕ ಹೊರ ಬಂದಿದೆ.
ಸಹಜವಾಗಿಯೇ ಡಾನ್ಸ್ ಹಾಗೂ ಮ್ಯೂಜಿಕ್ ನಲ್ಲೂ ಹೊಸತನ ಇರೋದ್ರಿಂದ ಸೋಷಲ್ ಮೀಡಿಯಾದಲ್ಲಿ ಹಾಡು ವೈರಲ್ ಆಗುತ್ತಿದೆ. ನಟಿ, ನಿರ್ದೇಶಕಿ ಚೈತ್ರಾ ಕೋಟೂರ್ ಅವರ ಇನ್ನೊಂದು ಮುಖ ಇಲ್ಲಿ ರಿವೀಲ್ ಆಗಿದ್ದು ಕಂಡು ಸಿನಿಮಾ ಪ್ರೇಮಿಗಳು ಶಾಕ್ ಆಗಿದ್ದಾರೆ.ರಾಪ್ ಸಾಂಗ್ ಶೈಲಿಯ ಈ ವಿಡಿಯೋ ಆಲ್ಬಂ ಸಾಂಗ್ ಮಜವಾಗಿದೆ. ” ಹುಡುಗರು ತುಂಬಾ ಒಳ್ಳೆಯವ್ರು, ಟೈಮ್ ಬೇಕು ಒಂಚೂರುʼ ಅಂತ ಹುಡುಗರಲ್ಲಿ ನಾಯಕಿ ಚೈತ್ರಾ ಕೋಟೂರ್ ರಿಕ್ವೆಸ್ಟ್ ಮಾಡುವ ಹಾಡಿನ ಸಾಲುಗಳೇ ಸೊಗಸಾಗಿವೆ. ಅಷ್ಟೇ ಅಲ್ಲ, ಅವರ ಪ್ರಕಾರ ಹುಡುಗರು ತುಂಬಾ ಒಳ್ಳೆಯವ್ರು. ನಿಯತ್ತಿನಿಂದ ದುಡಿಯೋವ್ರು ಅಂತೆಲ್ಲ ಹುಡುಗರನ್ನು ಹಾಡಿ ಹೊಗಳಿದ್ದಾರೆ.
ಸದ್ಯಕ್ಕೆ ಈ ವಿಡಿಯೋ ಆಲ್ಬಂ ಸಾಂಗ್ ಅನ್ನು ಹೊರ ತಂದಿರುವ ಉದ್ದೇಶವನ್ನು ಅವರು ರಿವೀಲ್ ಮಾಡಿಲ್ಲ. ಆದರೆ, ಸಾಂಗ್ ಕಾನ್ಸೆಪ್ಟ್ ಬಗ್ಗೆ ಹೇಳಿಕೊಂಡಿದ್ದಾರೆ.. ನನಗೆ ಇದು ಹೊಸ ಪ್ರಯತ್ನ’ ಇದು ನನ್ನ ಜೀವನದಲ್ಲಿ ವಿಶೇಷವಾದ ಪ್ರಯತ್ನ ಎಂದು ಹೇಳಿಕೊಂಡಿದ್ದಾರೆ ಚೈತ್ರಾ. ಈ ಹಾಡಿಗೆರಾಜ್ ರೋಹಿತ್ ಛಾಯಾಗ್ರಹಣ ಮಾಡಿದ್ದು, ಕಾವ್ಯಾ ಶಿವಮೊಗ್ಗ ನೃತ್ಯ ನಿರ್ದೇಶನ ಮಾಡಿದ್ದಾರೆ. ಸೋಷಲ್ ಮೀಡಿಯಾದಲ್ಲಿ ರಿಲೀಸ್ ಆಗಿದೆ. ಉಳಿದಂತೆ ಚೈತ್ರಾ ಕೋಟೂರ್ ‘ಹೇ ರಾಮ್’ ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.