ʼ ಕಾಂಟ್ರೋವರ್ಸಿ ಇಲ್ಲ ಅಂದ್ರೆ ಈ ನಟಿಗೆ ಸಿಕ್ಕಾಪಟ್ಟೆ ಬೇಸರವಂತೆ ʼ

ನ್ಯಾಷನಲ್‌ ಕ್ರಷ್‌ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಹೀಗೇಕೆ ಹೇಳಿದ್ರು….


ನಟಿ ರಶ್ಮಿಕಾ ಮಂದಣ್ಣಗೆ ಈಗ ಕಾಂಟ್ರೋವರ್ಸಿ ಬೇಕೇ ಬೇಕು. ಅದಿಲ್ಲ ಅಂದ್ರೆ ಅವರಿಗೆ ಬೇಜಾರಾಗುತ್ತಂತೆ. ಹೀಗಂತ ಹೇಳಿದ್ದು ಬೇರಾರೂ ಅಲ್ಲ, ಖುದ್ದು ಅವರೇ ಇದನ್ನು ಹೇಳಿಕೊಂಡು ನಗೆ ಬೀರಿದ್ದು ವಿಚಿತ್ರ ಎನಿಸಿತು.
ಇಷ್ಟಕ್ಕೂ ಅವರು ಈ ರೀತಿ ಹೇಳಿದ್ದು ಶನಿವಾರ ʼಪೊಗರುʼ ಚಿತ್ರದ ಮೀಟ್‌ ದಿ ಮೀಡಿಯಾ ಕಾರ್ಯಕ್ರಮದಲ್ಲಿ. ಸೋಷಲ್‌ ಮೀಡಿಯಾದಲ್ಲಿ ತಮ್ಮ ಬಗ್ಗೆ ದಿನನಿತ್ಯ ಕಾಣಿಸಿಕೊಳ್ಳುವ ಕಾಂಟ್ರೋವರ್ಸಿಗಳ ಕುರಿತ ಪ್ರಶ್ನೆಗೆ ನಗುತ್ತಲೇ ಪ್ರತಿಕಿಯಿಸಿದ ನಟಿ ರಶ್ಮಿಕಾ ಮಂದಣ್ಣ, ಅವುಗಳಿಗೆಲ್ಲ ನಾನು ಹೆಚ್ಚು ತಲೆ ಕಡೆಸಿಕೊಳ್ಳುವುದಿಲ್ಲ. ದಿನಿ ನಿತ್ಯ ಮಾಡೋದಿಕ್ಕೆ ಸಾಕಷ್ಟು ಕೆಲಸ ಇರುತ್ತದೆ ಎಂದರು.

 

” ಮೊದಲೆಲ್ಲ ಅಂದ್ರೆ ಕಿರಿಕ್‌ ಪಾರ್ಟಿ ಬಂದು ಹೋದ ನಂತರದ ದಿನಗಳಲ್ಲಿ ನನ್ನ ಬಗೆಗಿನ ಯಾವುದಾದರೂ ಕಾಂಟ್ರೋವರ್ಸಿ ವಿಷಯ ಕಿವಿ ಬಿದ್ದರೆ ಸಿಕ್ಕಾಪಟ್ಟೆ ಬೇಸರ ಆಗುತ್ತಿತ್ತು. ಇದ್ಯಾಕೆ ಹೀಗೆ ಜನ ಏನೇನು ಗಾಸಿಪ್‌ ಹಬ್ಬಿಸುತ್ತಿದ್ದಾರೆ, ಇವರಿಗೇನು ಕೆಲಸ ಇಲ್ಲವೇ ಅಂತೆಲ್ಲ ತಲೆಕೆಡಿಸಿಕೊಂಡು, ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದೆ. ಆದ್ರೆ ಈಗ ಅದೆಲ್ಲವನ್ನು ಪಾಸಿಟಿವ್‌ ಆಗಿಯೇ ತೆಗೆದುಕೊಂಡಿದ್ದೇನೆ. ದಿನ ಸುದ್ದಿಯಲ್ಲಿರಬೇಕಾದ್ರೆ ಅಂತಹ ಕಾಂಟ್ರೋವರ್ಸಿ ಇರಬೇಕು ಅಂತೆನಿಸುತ್ತದೆ. ಅದೂ ಇದ್ದಾಗಲೇ ನಾವು ಕೂಡ ಇಲ್ಲಿ ಸಕ್ರಿಯವಾಗಿದ್ದೇವೆ ಅಂತೆನಿಸುತ್ತದೆ ʼ ಅಂತ ನಟಿ ರಶ್ಮಿಕಾ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು.

 

ಹಾಗಾದ್ರೆ ಕಾಂಟ್ರೋವರ್ಸಿಗಳನ್ನ ಪಾಸಿಟಿವ್‌ ತೆಗೆದುಕೊಳ್ಳುತ್ತಿದ್ದೀರಿ ಅಂತನಾ ಎನ್ನುವ ಮರು ಪ್ರಶ್ನೆಗೆ, ರಶ್ಮಿಕಾ ಉತ್ತರ ಅಷ್ಟೇ ಬುದ್ಧಿವಂತಿಕೆಯಿಂದಲೇ ಉತ್ತರಿಸಿದರು.” ಪಾಸಿಟಿವ್‌ ಅಂತಲ್ಲ. ಸೋಷಲ್‌ ಮೀಡಿಯಾದಲ್ಲಿ ಅದನ್ನೇ ಕಿಯೇಟ್‌ ಮಾಡೋದಿಕ್ಕೆ ಒಂದಷ್ಟು ಜನರು ಇರುವಾಗ ನಾವು ಅವರಿಗೆ ಏನೇ ಉತ್ತರ ಕೊಟ್ಟರು ಕೂಡ ಅದು ಕಾಂಟ್ರೋವರ್ಸಿಯಾಗಿಯೇ ಇರುತ್ತದೆ. ಹಾಗಾಗಿ ಅವರಿಗೆ ಪ್ರತಿಕ್ರಿಯಿಸಿ ನಾವು ಸಣ್ಣರಾಗುವುದಕ್ಕಿಂತ ಸುಮ್ಮನಿರುವುದೇ ಉತ್ತಮ ಅಲ್ಲವೇ ಎನ್ನುವ ಮೂಲಕ ರಶ್ಮಿಕಾ ತುಂಬಾ ಮಾರ್ಮಿಕವಾಗಿ ಪ್ರತಿಕ್ರಿಯಿಸಿದರು.

Related Posts

error: Content is protected !!