ಹೊಸ ಟೈಟಲ್ ಮೂಲಕ ಕನ್ನಡದಲ್ಲಿ ಬರಲಿದೆ ಪ್ಯಾನ್ ಇಂಡಿಯಾ ಚಿತ್ರ
ಕಾಲಿವುಡ್ ಸ್ಟಾರ್ ಸಿಲಂಬರಸನ್ ಅಭಿನಯದ ಬಹು ನಿರೀಕ್ಷಿತ ಚಿತ್ರ ‘ಮಾನಾಡು’ ತೆರೆಗೆ ಬರಲು ರೆಡಿಯಾಗು ತ್ತಿದ್ದು, ಕನ್ನಡದಲ್ಲಿ ಇದಕ್ಕಿದ್ದ ಟೈಟಲ್ ಈಗ ಚೇಂಜ್ ಆಗುವುದು ಖಾತರಿ ಆಗಿದೆ. ಮೊನ್ನೆಯಷ್ಟೇ ಈ ಚಿತ್ರಕ್ಕೆ ಚಿತ್ರ ತಂಡ ಕನ್ನಡಕ್ಕೆ ಫೈನಲ್ ಮಾಡಿಕೊಂಡಿದ್ದ ರಿವೈಂಡ್ ಹೆಸರಿನ ಟೈಟಲ್ ಅನ್ನು ನಟ ಕಿಚ್ಚ ಸುದೀಪ್ ಲಾಂಚ್ ಮಾಡಿ, ಚಿತ್ರ ತಂಡಕ್ಕೆ ಶುಭ ಹಾರೈಸಿದ್ದರು. ಅದೇ ವೇಳೆ ಟೀಸರ್ ಕೂಡ ಲಾಂಚ್ ಆಗಿತ್ತು. ಆದರೆ ಈಗ ಟೈಟಲ್ ಚೇಂಜ್ ಆಗುವುದು ಗ್ಯಾರಂಟಿ ಆಗಿದೆ. ಕನ್ನಡದಲ್ಲಿ ಅದೇ ಹೆಸರಲ್ಲೊಂದು ಚಿತ್ರ ರಿಲೀಸ್ ಗೆ ರೆಡಿ ಆಗಿರುವುದೇ ಇದಕ್ಕೆ ಕಾರಣ ಎನ್ನುತ್ತಿದೆ ಚಿತ್ರ ತಂಡ.
‘ ಈಗಾಗಲೇ ನಾವು ಪ್ರಕಟಟಿಸಿರುವ ಹಾಗೆ ಮಾನಾಡು ಐದು ಭಾಷೆಗಳಲ್ಲಿ ರಿಲೀಸ್ ಗೆ ರೆಡಿ ಆಗುತ್ತಿರುವ ಸಿನಿಮಾ. ಅಂತೆಯೇ ಕನ್ನಡಕ್ಕೆ ನಾವು’ ರಿವೈಂಡ್’ ಹೆಸರಲ್ಲಿ ರಿಲೀಸ್ ಮಾಡಲು ಸಿದ್ಧತೆ ಮಾಡಿಕೊಂಡಿದ್ದೇವು. ಸುದೀಪ್ ಅವರು ಕೂಡ ಟೈಟಲ್ ಲಾಂಚ್ ಮಾಡಿ, ಚಿತ್ರ ತಂಡಕ್ಕೆ ಶುಭ ಹಾರೈಸಿದ್ದರು.ಆದರೆ ಈಗ ಅದೇ ಹೆಸರಲ್ಲಿ ಮತ್ತೊಂದು ಚಿತ್ರ ತೆರೆಗೆ ಬರಲು ರೆಡಿಯಾಗುತ್ತಿದೆ ಎನ್ನುವ ಸುದ್ದಿ ಗೊತ್ತಾಗಿದೆ. ಹಾಗಾಗಿ ಈಗ ನಾವು ಚಿತ್ರಕ್ಕೆ ಬೇರೆ ಟೈಟಲ್ ಇಡಲು ನಿರ್ಧರಿಸಿದ್ದೇವೆ. ಈಗ ಎಲ್ಲಾ ಭಾಷೆಗೂ ಅನ್ವಯವಾಗುವಂತಹ ಒಂದೇ ಟೈಟಲ್ ಆಯ್ಕೆ ಮಾಡಿಕೊಳ್ಳಲು ಚಿಂತನೆ ನಡೆಸಿದ್ದೇವೆ. ಸದ್ಯದಲ್ಲೇ ಅದನ್ನು ಅನೌನ್ಸ್ ಮಾಡುತ್ತೇವೆ’ ಚಿತ್ರದ ನಿರ್ಮಾಪಕ ಸುರೇಶ್ ಕಲಮತಚಿ.
ವೆಂಕಟ್‌ಪ್ರಭು ನಿರ್ದೇಶನದ ಈ ಚಿತ್ರಕ್ಕೆ ಹೆಸರಾಂತ ಸಂಗೀತ ನಿರ್ದೇಶಕ ಇಳಯರಾಜ್ ಪುತ್ರ ಯುವನ್‌ಶಂಕರ್‌ರಾಜ ಸಂಗೀತ ನೀಡಿದ್ದಾರೆ. ಹಾಗೆಯೇ ರಿಚರ್ಡ್ ಛಾಯಾಗ್ರಹ ಣವಿದೆ. ಪ್ರವೀಣ್.ಕೆ.ಎಲ್ ಸಂಕಲನ ಹಾಗೂ ಸ್ವಂಟ್‌ಶಿವ ಸಾಹಸ, ರಾಜುಸುಂದರಂ ನೃತ್ಯ ನಿರ್ದೇಶನವಿದೆ. ತಾರಾಗಣದಲ್ಲಿ ಸಿಲಂಬರಸನ್ ಅವರೊಂದಿಗೆ ಕಲ್ಯಾಣಿ, ಪ್ರಿಯದರ್ಶನ್, ಎಸ್.ಎ.ಚಂದ್ರಶೇಖರ್, ಎಸ್.ಜೆ.ಸೂರ್ಯ, ಪ್ರೇಮ್‌ಗಿಅಮರೆನ್, ಕರುಣಾಕರನ್ ಮುಂತಾದವರಿದ್ದಾರೆ.