ನಂಗೂ ಗೊತ್ತಿದೆ, ವಯಸ್ಸಾಗ್ತಿದೆ – ರಶ್ಮಿಕಾ ಮಂದಣ್ಣ ಹೀಗೆ ತಮ್ಮ ವಯಸ್ಸಿನ ಕುರಿತು ಹೇಳಿದ್ದೇಕೆ?

ರಶ್ಮಿಕಾ ಮಂದಣ್ಣ ಮದುವೆ ಯಾವಾಗ ?

ನಟಿ ರಶ್ಮಿಕಾ ಮಂದಣ್ಣ ಅವರಿಗೆ ವಯಸ್ಸಾಗ್ತಿದೆ. ಹಾಗಂತ ಹೇಳ್ತಿರೋದು ನಾವಲ್ಲ. ಖುದ್ದು ರಶ್ಮಿಕಾ ಅವರೇ ತಮಗೆ ವಯಸ್ಸಾಗ್ತಿದೆ ಅಂತ ಹೇಳಿಕೊಂಡಿದ್ದಾರೆ. ಅದು ʼಪೊಗರುʼ ಚಿತ್ರದ ಪ್ರಮೋಷನ್‌ ಕಾರ್ಯಕ್ರಮದಲ್ಲಿ ನಟ ರಕ್ಷಿತ್‌ ಶೆಟ್ಟಿ ಹಾಗೂ ತಮ್ಮ ನಡುವೆ ನಿಜಕ್ಕೂ ಅಗಿದ್ದೇನು? ಮದುವೆ ಬಗ್ಗೆ ನಿಮ್ಮ ಪ್ಲಾನ್‌ ಏನು? ಅಂತ ತಮಗೆ ಎದುರಾದ ಪ್ರಶ್ನೆಗಳಿಗೆ ಕೊಂಚ ಇರುಸು ಮುರುಸು ಮಾಡಿಕೊಂಡೆ ಉತ್ತರಿಸಿದ ಅವರು, ನಂಗೂ ಗೊತ್ತಾಗ್ತಿದೆ, ವಯಸ್ಸಾಗ್ತಿದೆ ಅಂತʼ ನಕ್ಕರು.

ಅನಿರೀಕ್ಷಿತವಾಗಿ ಎದುರಾದ ಪ್ರಶ್ನೆಗಳಿಗೆ ಉತ್ತರಿಸಬೇಕೋ ಅಥವಾ ಬೇಡವೋ ಎನ್ನುವ ಮೂಡ್‌ ನಲ್ಲಿಯೇ ಮಾತಿಗೆ ಮುಂದಾದ ರಶ್ಮಿಕಾ, ಅದೆಲ್ಲ ಈಗ ಬೇಕಾ? ಎಂದು ಮರು ಪ್ರಶ್ಮೆ ಹಾಕಿದರು. ” ಕಿರಿಕ್‌ ಪಾರ್ಟಿʼ ನನ್ನ ಮೊದಲ ಸಿನಿಮಾ. ಆ ಸಿನಿಮಾ ದೊಡ್ಡ ಸಕ್ಸಸ್‌ ಕಂಡಿತು. ಅಲ್ಲಿಂದ ನನಗೆ ನನ್ನ ಕೆರಿಯರ್‌ ಮುಖ್ಯ ಎನಿಸಿತು. ಮೇಲಾಗಿ ನನಗೇನು ಆಗ ಮದುವೆ ಆಗುವ ವಯಸ್ಸಲ್ಲ ಎಂದರು. ಅದು ಸರಿ, ಮದುವೆ ಪ್ಲಾನ್‌ ಏನು? ಎನ್ನುವ ಮರು ಪ್ರಶ್ನೆಗೆ ” ನಂಗೂ ಗೊತ್ತಾಗ್ತಿದೆ, ವಯಸ್ಸಾಗ್ತಿದೆ ಅಂತ, ನೋಡೋಣ ಮುಂದೆʼ ಎಂದರು. ಸದ್ಯ ಅವರೀಗ ʼಪೊಗರುʼ ಚಿತ್ರದ ಪ್ರಮೋಷನ್‌ ಕಾರ್ಯಕ್ರಮದಲ್ಲಿ ಬ್ಯುಸಿ ಆಗಿದ್ದಾರೆ.

Related Posts

error: Content is protected !!