Categories
ಸಿನಿ ಸುದ್ದಿ

ಕನ್ನಡದಲ್ಲೂ ಜೈಭೀಮ್ ಹವಾ -ಅಂಬೇಡ್ಕರ್ ಅನುಯಾಯಿಗಳು ಖುಷ್ ಹುವಾ !

ಟೈಟಲ್ ಓದಿದಾಕ್ಷಣ ಅರೆ, ಇದೇನು ಅಂತ ನಿಮಗನಿಸಿರಬಹುದು. ʼಮಹಾನಾಯಕʼ ಸೀರಿಯಲ್ ನಂತರ ಕನ್ನಡದ ಕಿರುತೆರೆಯಲ್ಲಿ ‘ಜೈ ಭೀಮ್’ ಹೆಸರಲ್ಲಿ ಮತ್ತೊಂದು ಸೀರಿಯಲ್ ಶುರುವಾಗುತ್ತಾ ಎನ್ನುವ ಲೆಕ್ಕಚಾರವೂ ಹುಟ್ಟಿರಬಹುದು. ಯಾಕಂದ್ರೆ ಈಗ ಮಹಾನಾಯಕ ಅಥವಾ ಜೈ ಭೀಮ್‌ ಅಂತ ಸಿನಿಮಾ ಅಥವಾ ಸೀರಿಯಲ್‌ ಪೂರಕವಾಗಿ ಹೇಳಿದರೆ, ಹಾಗೆಂದು ಭಾವಿಸುವಷ್ಟು ಜನಪ್ರಿಯತೆ ಕನ್ನಡದಲ್ಲಿ ಮಹಾನಾಯಕ ಸೀರಿಯಲ್‌ ತಂದಿಟ್ಟಿದೆ. ಆದರೆ ಇದು ಸೀರಿಯಲ್‌ ಕಥೆ ಅಲ್ಲ. ಸಿನಿಮಾವೇ ಹೌದು. ಹಾಗಂತ ಕನ್ನಡದವರು ಮಾಡುತ್ತಿಲ್ಲ. ಬದಲಿಗೆ ತಮಿಳಿನ ಹೆಸರಾಂತ ನಟ ಸೂರ್ಯ ಅಲಿಯಾಸ್‌ ಸೂರ್ಯ ಶಿವಕುಮಾರ್‌ ಅವರ 39ನೇ ಚಿತ್ರದ ಹೆಸರು ಜೈ ಭೀಮ್.‌

ಶುಕ್ರವಾರವಷ್ಟೇ ನಟ ಸೂರ್ಯ ತಮ್ಮ 46ನೇ ವರ್ಷದ ಹುಟ್ಟು ಹಬ್ಬ ಆಚರಿಸಿಕೊಂಡರು. ಆ ಹುಟ್ಟು ಹಬ್ಬದ ಪ್ರಯುಕ್ತ ಅವರು ʼಜೈ ಭೀಮ್‌ʼ ಸಿನಿಮಾದ ಫಸ್ಟ್‌ ಲುಕ್‌ ಪೋಸ್ಟರ್‌ ಅನ್ನು ಸೋಷಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಆ ಪೋಸ್ಟರ್‌ ಈಗ ಸೋಷಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಅಷ್ಟು ಮಾತ್ರವಲ್ಲ, ಸೌತ್ ಸಿನಿಮಾ ಇಂಡಸ್ಟ್ರಿನಲ್ಲಿ ಸಖತ್ ಸೌಂಡ್ ಮಾಡಿದೆ. ಯಾಕಂದ್ರೆ ಅದು ತಮಿಳು, ತೆಲುಗು, ಮಲಯಾಳಂ ಹಾಗೂ ಕನ್ನಡವೂ ಸೇರಿದಂತೆ ಭಾರತದ ಬಹು ಭಾಷೆಗಳಲ್ಲಿ ಬರುತ್ತಿದೆ. ಅವೆಲ್ಲ ಭಾಷೆಗಳಲ್ಲೂ ಚಿತ್ರ ತಂಡ ಪೋಸ್ಟರ್‌ ರಿವೀಲ್‌ ಮಾಡಿದೆ.

ಪೋಸ್ಟರ್‌ ಸಖತ್‌ ಸುದ್ದಿ ಮಾಡಿದ್ದು ಸೂರ್ಯ ಅವರ ಪಾತ್ರದ ಲುಕ್‌ ಕಾರಣಕ್ಕೆ. ಸದ್ಯಕ್ಕೆ ಲಭ್ಯವಿರುವ ಮಾಹಿತಿ ಪ್ರಕಾರ ಇದು ಅಂಬೇಡ್ಕರ್‌ ಅವರ ಕುರಿತ ಕಥಾಹಂದರದ ಚಿತ್ರ. ಹಾಗಂತ ಚಿತ್ರ ಶೀರ್ಷಿಕೆಯೇ ಹೇಳುತ್ತೆ. ಹಾಗಂತ ಇದು ಅಂಬೇಡ್ಕರ್‌ ಅವರ ಇಡೀ ಜೀವನ ಕಥೆ ಆಧರಿಸಿದ ಸಿನಿಮಾ ಅಲ್ಲ. ಈಗ ಲಾಂಚ್‌ ಆಗಿರುವ ಪೋಸ್ಟರ್‌ ನಲ್ಲಿ ನಟ ಸೂರ್ಯ ಅವರದ್ದು ಲಾಯರ್‌ ಪಾತ್ರ. ಅಲ್ಲಿಗೆ ಈ ಚಿತ್ರದ ಕಥಾ ಹಂದರ ಅಂಬೇಡ್ಕರ್‌ ಒಬ್ಬ ಲಾಯರ್‌ ಆಗಿ, ಯಾರ ಪರವಾಗಿ ಧ್ವನಿ ಎತ್ತಿದ್ದರು, ಯಾರ ವಿರುದ್ಧ ಹೇಗೆಲ್ಲ ಕಾನೂನಿನ ಮೂಲಕ ಗೆದ್ದರು ಅನ್ನೋದನ್ನು ಬಯೋಪಿಕ್ ಮಾದರಿಯಲ್ಲಿ ತೋರಿಸುವುದಕ್ಕೆ ಹೊರಟ ಸಿನಿಮಾ. ಪೋಸ್ಟರ್‌ ಲಾಂಚ್‌ ಹಿನ್ನೆಲೆಯಲ್ಲಿ ಬಂದ ವರದಿಗಳ ಪ್ರಕಾರ ಚಿತ್ರದ ನಾಯಕ, ದೇಶದ ಬುಡಕಟ್ಟು ಜನರ ಪರವಾಗಿ ಕೋರ್ಟ್‌ನಲ್ಲಿ ವಾದಿಸುವ ಒಬ್ಬ ಜನಪರ ಲಾಯರ್. ಅಲ್ಲಿಂದ ಆತನಿಗೆ ವ್ಯವಸ್ಥೆಯಲ್ಲಿ ಏನೆಲ್ಲ ಸವಾಲು ಏದುರಾದವು‌, ಅವುಗಳನ್ನು ಆತ ಏದುರಿಸಿದ ಏನ್ನುವ ಎಳೆಗಳೇ ಚಿತ್ರಕಥೆಯ ಹೈಲೆಟ್ಸ್‌ ಅಂತೆ.

ಅದೇನೆ ಇರಲಿ, ಸಿನಿಮಾದ ಕಥೆ ಏನು ಎನ್ನುವುದರ ಫುಲ್‌ ಡಿಟೈಲ್ಸ್‌ ಸಿನಿಮಾ ಬಂದಾಗ ನಿಮಗೂ ಸಿಗುತ್ತೆ. ಅದರಾಚೆ ಇಲ್ಲಿ ವಿಶೇಷ ಎನಿಸಿದ್ದು ಸೂರ್ಯ ಅವರಂತಹ ಒಬ್ಬ ಕರ್ಮಷಿಯಲ್‌ ಹೀರೋ, ಇಂತಹ ಸಾಮಾಜಿಕ ಕಾಳಜಿಯ ಕಥೆಯೊಳಗೂ ತಾನು ನಟಿಸಬಲ್ಲೆ ಅಂತ ಮುಂದಾಗಿದ್ದು. ಹಾಗಂತ ಅವರಿಗೇನು ಇದು ಹೊಸದಲ್ಲ, ನಟನೆಯನ್ನು ಒಂದ್ರೀತಿ ಪ್ರಯೋಗಾತ್ಮಕ ಎನ್ನುವ ಹಾಗೆಯೇ ಸ್ವೀಕರಿಸಿದ ಅಪರೂಪದ ನಟ ಅವರು. ಅದಕ್ಕೆ ಸಾಕ್ಷಿ ಇತ್ತೀಚೆಗಷ್ಟೇ ಬಂದು ಹೋದʼ ಸೂರರೈ ಪೋಟ್ರುʼ ಸಿನಿಮಾ. ಇದು ಕನ್ನಡದವರೇ ಆದ ಏರ್‌ಡೆಕ್ಕನ್‌ ವಿಮಾನ ಸಂಸ್ಥೆಯ ಮಾಲೀಕರಾಗಿದ್ದ ಕ್ಯಾಪ್ಟನ್‌ ಗೋಪಿನಾಥ್‌ ಅವರ ಜೀವನದ ಕಥೆ. ಅದರಲ್ಲಿಯೇ ಅತ್ಯಾದ್ಬುತವಾಗಿ ನಟಿಸಿದ್ದ ಸೂರ್ಯ, ಕನ್ನಡದಲ್ಲೂ ಮನೆ ಮಾತಾದರು ಎನ್ನುವುದು ಅಷ್ಟೇ ಸತ್ಯ. ಈಗ ಅಂತಹದೇ ಮತ್ತೊಂದು ಜನಪ್ರಿಯ ವ್ಯಕ್ತಿಯ ಕಥೆಯಲ್ಲಿ ಸೂರ್ಯ ನಾಯಕರಾಗಿದ್ದು ಕನ್ನಡದಲ್ಲೂ ಸದ್ದು ಮಾಡಿದೆ.

ಪೋಸ್ಟರ್‌ ಈಗಾಗಲೇ ತಮಿಳು, ಮಲಯಾಳಂ ಹಾಗೂ ಕನ್ನಡದಲ್ಲೂ ಬಂದಿವೆ. ದೊಡ್ಡ ಕುತೂಹಲ ಅಂಬೇಡ್ಕರ್‌ ಅವರ ನ್ಯಾಯವಾದಿ ಬದುಕಿನೊಂದಿಗೆ ತೆರೆದುಕೊಂಡಿದೆ. ಅಂಬೇಡ್ಕರ್‌ ಅನುಯಾಯಿ ಗಳಂತೂ ಸೂರ್ಯ ಅವರ ಹೊಸ ಅವತಾರದಲ್ಲಿ ಅಂಬೇಡ್ಕರ್‌ ಅವರ ವಕೀಲಿ ವೃತ್ತಿಯ ಕಾರ್ಯ ಶೈಲಿಯನ್ನು ಕಣ್ತುಂಬಿಕೊಳ್ಳಲು ಕಾತರದಲ್ಲಿದ್ದಾರೆ. ಆ ಮಟ್ಟಿಗೆ ಜೈ ಭೀಮ್ ಸಿನಿಮಾ ಬರೀ ಪೋಸ್ಟರ್‌ ಮೂಲಕವೇ ದೊಡ್ಡ ಹವಾ ಎಬ್ಬಿಸಿದೆ. ಉಳಿದಂತೆ ಈ ಸಿನಿಮಾವು ೨ಡಿ ಎಂಟರ್‌ಟೈನ್‌ಮೆಂಟ್‌ ಸಂಸ್ಥೆ ಮೂಲಕ ನಿರ್ಮಾಣವಾಗುತ್ತಿದೆ. ಜ್ಞಾನವೆಲ್‌ ಆಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಹೆಸರಾಂತ ನಟ ಪ್ರಕಾಶ್‌ ರೈ ಸೇರಿದಂತೆ ಹಲವರು ಈ ಚಿತ್ರದಲ್ಲಿದ್ದಾರೆಂಬ ಮಾಹಿತಿ ಇದೆ.

Categories
ಸಿನಿ ಸುದ್ದಿ

ಶೇ. ೧೦೦ ಸೀಟು ಭರ್ತಿಗೆ ಮನವಿ ಮಾಡಿದ ವಾಣಿಜ್ಯ ಮಂಡಳಿ ನಿಯೋಗ

ಚಿತ್ರಮಂದಿರಗಳಲ್ಲಿ ಶೇಕಡಾ ನೂರರಷ್ಟು ಸೀಟು ಭರ್ತಿಗೆ ಅವಕಾಶ ನೀಡಬೇಕು, ಹಾಗೆಯೇ ಒಳಾಂಗಣ ಚಿತ್ರೀಕರಣಕ್ಕೂ ಅವಕಾಶ ಕೊಡಬೇಕು ಅಂತ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್‌ ನೇತೃತ್ವದ ನಿಯೋಗ ಶನಿವಾರ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದೆ.
ಸಿಎಂ ಅಧಿಕೃತ ನಿವಾಸ ಕಾವೇರಿಯಲ್ಲಿ ಶನಿವಾರ ಬೆಳಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದ ನಿಯೋಗ, ಚಿತ್ರರಂಗದ ಭವಿಷ್ಯ ಕರಾಳವಾಗಿದೆ. ಶೇಕಡಾ 50 ರಷ್ಟು ಸೀಟು ಭರ್ತಿಯೊಂದಿಗೆ ಟಾಕೀಸ್‌ ತೆರೆಯಿರಿ ಅಂದ್ರೆ ಅದು ಅಷ್ಟು ಸುಲಭ ಇಲ್ಲ. ಈಗಿರುವ ಸರ್ಕಾರದ ಆದೇಶದಂತೆ ನಾವು ಶೇಕಡಾ 50 ರಷ್ಟು ಸೀಟು ಭರ್ತಿಯೊಂದಿಗೆ ಟಾಕೀಟ್‌ ತೆರೆದು ಚಿತ್ರ ಪ್ರದರ್ಶನ ನಡೆಸಿದರೆ ಟಾಕೀಸ್‌ ನಿರ್ವಹಣೆಯ ಖರ್ಚು ಕೂಡ ಬರುವುದು ಕಷ್ಟ. ಹಾಗಾಗಿ ಸರ್ಕಾರವೇನಾದರೂ ಶೇಕಡಾ ನೂರರಷ್ಟು ಸೀಟು ಭರ್ತಿಗೆ ಅವಕಾಶ ಮಾಡಿ ಕೊಟ್ಟರೆ, ಚಿತ್ರಮಂದಿರದ ಮಾಲೀಕರು ಬದುಕುತ್ತಾರೆ, ಸಿನಿಮಾ ನಿರ್ಮಾಪಕ ರು ಉಳಿಯುತ್ತಾರೆ. ಇದಕ್ಕೆ ಸರ್ಕಾರ ಅವಕಾಶ ಮಾಡಿಕೊಡಬೇಕು ಎಂಬುದಾಗಿ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದೆ.

ಈ ಸಂಬಂಧ ಮುಖ್ಯಮಂತ್ರಿಗಳಿಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್‌, ಕಾರ್ಯದರ್ಶಿ ಎನ್.ಎಂ. ಸುರೇಶ್‌ ಹಾಗೂ ಊಪಾಧ್ಯಕ್ಷ ಉಮೇಶ್‌ ಉಣಕಾರ್‌, ಚಿತ್ರೋದ್ಯಮದ ಪರವಾಗಿ ಅಧಿಕೃತ ಮನವಿ ಪತ್ರವನ್ನು ನೀಡಿ, ಚಿತ್ರರಂಗದ ಸವಾಲುಗಳು, ಮುಂದಿನ ಪರಿಸ್ಥಿತಿಗಳನ್ನು ವಿವರಿಸಿದೆ. ಮೂಲಕ ಸರ್ಕಾರ ನೂರರಷ್ಟು ಸೀಟು ಭರ್ತಿಗೆ ಅವಕಾಶ ಮಾಡಿಕೊಡ ಬೇಕೆಂದು ಕೇಳಿಕೊಂಡಿದೆ. ಈ ಕುರಿತು ಸಿನಿ ಲಹರಿ ಜತೆಗೆ ಮಾತನಾಡಿದ ವಾಣಿಜ್ಯ ಮಂಡಳಿ ಉಪಾಧ್ಯಕ್ಷ ಉಮೇಶ್‌ ಬಣಕಾರ್‌ ಹೇಳಿದ್ದಿಷ್ಟು…

ʼ ಈಗಿರುವ ಪರಿಸ್ಥಿತಿ ನೋಡಿದರೆ ಶೇಕಡಾ 50 ರಷ್ಟು ಸೀಟು ಭರ್ತಿಯೊಂ ದಿಗೆ ಟಾಕೀಸ್‌ ಒಪನ್‌ ಮಾಡಿ ಅನ್ನೋದು ಉಪಯೋಗ ಇಲ್ಲ. ಯಾಕಂದ್ರೆ ಜನ ಅಷ್ಟು ಸಲುಭವಾಗಿ ಟಾಕೀಸ್‌ ಗೆ ಬರುತ್ತಾರೆ ನ್ನುವ ಗ್ಯಾರಂಟಿ ಇಲ್ಲ. ಹಾಗೊಂದು ವೇಳೆ ನೂರರಷ್ಟು ಸೀಟು ಭರ್ತಿಗೆ ಅವಕಾಶ ಸಿಕ್ಕರೆ ಅವರಿಗೂ ಒಂದು ಧೈರ್ಯ ಬರುತ್ತೆ. ನಿರ್ಮಾಪಕರು ಕೂಡ ಧೈರ್ಯದಿಂದ ಸಿನಿಮಾ ರಿಲೀಸ್‌ ಮಾಡುತ್ತಾರೆ. ಇದೇ ಕಾರಣಕ್ಕೆ ವಾಣಿಜ್ಯ ಮಂಡಳಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ, ಮನವಿ ಸಲ್ಲಿದೆ. ಅದಕ್ಕವರು ಸಕರಾತ್ಮಕ ಸ್ಪಂದನೆ ಮಾಡಿದ್ದಾರೆ. ಇಷ್ಟರಲ್ಲಿಯೇ ಸರ್ಕಾರದ ಆದೇಶ ಹೊರಬೀಳುವ ಸಾಧ್ಯತೆಗಳಿವೆ.

Categories
ಸಿನಿ ಸುದ್ದಿ

ಮತ್ತೆ ಕ್ಯಾಮೆರಾ ಎದುರಿಸಿ ಖುಷಿಪಟ್ಟ ಮೇಘನಾ ರಾಜ್ !

ಈ ಸುದ್ದಿಯನ್ನು ಕೇಳೋದಕ್ಕೆ ಒಂದು ಖುಷಿ. ಈ ಕ್ಷಣಕ್ಕಾಗಿ ಚಿರಂಜೀವಿ ಸರ್ಜಾ ಹಾಗೂ ಮೇಘನಾ ಸರ್ಜಾರ ಅಭಿಮಾನಿಗಳು ಕಾತುರದಿಂದ ಕಾದಿದ್ದರು. ನಟಿ ಮೇಘನಾ ಮತ್ತೆ ಕ್ಯಾಮೆರಾ ಎದುರಿಸಬೇಕು ಎನ್ನುವ ಆಸೆ ಕನಸನ್ನು ಫ್ಯಾನ್ಸ್ ಇಟ್ಟುಕೊಂಡಿದ್ದರು ಆ ಕನಸು ಈಗ ಈಡೇರಿದೆ.

ಜೂನಿಯರ್ ಚಿರುಗೆ ಒಂಭತ್ತು ತಿಂಗಳು ತುಂಬಿದ ದಿನದಂದೇ ಮೇಘನಾ ಕ್ಯಾಮೆರಾ ಮುಂದೆ ಬಂದಿದ್ದಾರೆ. ಈ ಸುಂದರ ಕ್ಷಣವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಕೈಯಲ್ಲಿ ಸ್ಕ್ರಿಪ್ಟ್ ಪೇಪರ್ ಹಿಡಿದಿರುವ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ.

ಅಷ್ಟಕ್ಕೂ, ಇದು ಯಾವ ಚಿತ್ರದ್ದು? ಏನ್ ಕಥೆ ಎಂಬ ಗುಟ್ಟನ್ನ ಮೇಘನಾ ಬಿಟ್ಟುಕೊಟ್ಟಿಲ್ಲ. ಅಂದ್ಹಾಗೇ, ಮೇಘನಾ ಕೈಯಲ್ಲಿ `ಸೆಲ್ಫೀ ಮಮ್ಮಿ ಗೂಗಲ್ ಡ್ಯಾಡಿ’ ಹಾಗೂ ಬುದ್ದಿವಂತ-೨ ಚಿತ್ರಗಳಿವೆ. ಈ ಸಿನಿಮಾದ ಶೂಟಿಂಗ್‌ಗೆ ಮರಳಿದ್ದಾರೋ ಅಥವಾ ಹೊಸ ಸಿನಿಮಾಗೆ ಜೀವತುಂಬುತ್ತಿದ್ದಾರೋ ಇನ್ನಷ್ಟೇ ರಿವೀಲ್ ಆಗ್ಬೇಕಿದೆ.

ಒಟ್ನಲ್ಲಿ ಸರ್ಜಾ ಕುಟುಂಬದ ಅಭಿಮಾನಿ ದೇವರುಗಳ ಕನಸು ನನಸಾಗಿದೆ. ಬೆಳ್ಳಿಮೋಡಗಳಲ್ಲಿ ಮರೆಯಾಗಿರುವ ಚಿರು ಆಶೀರ್ವಾದ ಕೂಡ ಮೇಘನಾ ಮೇಲಿದೆ. ಮೇಘನಾ ಈ ಹಿಂದೆ ಹೇಳಿಕೊಂಡಂತೆ ಮತ್ತೆ ಕ್ಯಾಮೆರಾ ಮುಂದೆ ಬಂದು ಫ್ಯಾನ್ಸ್ಗೆ ಸಪ್ರೈಸ್ ಕೊಟ್ಟಿದ್ದಾರೆ. ಮಗನಿಗೆ ಒಂಭತ್ತು ತಿಂಗಳು ತುಂಬಿದ ಖುಷಿಯನ್ನ ಕ್ಯಾಮೆರಾ ಎದುರಿಸುವ ಮೂಲಕ ಸಂಭ್ರಮಿಸಿದ್ದಾರೆ. ಆದಷ್ಟು ಬೇಗ ತಮ್ಮ ಅಪ್‌ಕಮ್ಮಿಂಗ್ ಸಿನಿಮಾ ಹಾಗೂ ಪಾತ್ರದ ಬಗ್ಗೆ ಮೇಘನಾ ಹೇಳಿಕೊಳ್ಳಲಿ. ಫ್ಯಾನ್ಸ್ ಮಾತ್ರವಲ್ಲ ಬೆಳ್ಳಿಪರದೆಯೂ ಖುಷಿಯಾಗುವಂತೆ ಮಾಡಲಿ ಎಂಬುದೇ ಎಲ್ಲರ ಹಾರೈಕೆ

Categories
ಸಿನಿ ಸುದ್ದಿ

ಅಧ್ಯಾತ್ಮದತ್ತ ಒಲವು ತೋರಿದ್ದೇಕೆ ನಟಿ ಚೈತ್ರಾ ಕೋಟೂರ್‌ ?

ಬಿಗ್‌ ಬಾಸ್‌ ಖ್ಯಾತಿಯ ಬರಹಗಾರ್ತಿ ಹಾಗೂ ನಟಿ ಚೈತ್ರಾ ಕೊಟ್ಟೂರು ಅಧ್ಯಾತ್ಮದತ್ತ ವಾಲಿದ್ದಾರೆ. ಎಲ್ಲ ಬಿಟ್ಟು ಮಠ ಸೇರಿದ್ರೂ ಎನ್ನುವ ಹಾಗೆ ಸಿನಿಮಾ, ನಟನೆ, ನಿರ್ದೇಶನದ ಜತೆಗೆ ಬರವಣಿಗೆ ಅಂತೆಲ್ಲ ಅದು ಇದು ಬಿಟ್ಟು ಸದ್ದಿಲ್ಲದೆ ಸುದ್ದಿಯೂ ಮಾಡದೆ ಅವರೀಗ ಬೆಳಗಾವಿಯಲ್ಲಿರುವ ಓಶೋ ಧ್ಯಾನ ಶಿಬಿರದಲ್ಲಿ ಕಾಣಿಸಿಕೊಂಡಿದ್ದಾರೆ. ಚೈತ್ರಾ ಕೊಟೂರು ಅಲ್ಲಿರುವ ಸಾಕ್ಷಿಗೆ ಒಂದು ವಿಡಿಯೊಂದನ್ನು ಅವರು ತಮ್ಮ ಇನ್‌ ಸ್ಟಾಗ್ರಾಂನಲ್ಲಿ ಹಾಕಿಕೊಂಡಿದ್ದಾರೆ. ವಿಚಿತ್ರ ಅಂದ್ರೆ ಇಷ್ಟ ಬೇಗ ಅಧ್ಯಾತ್ಮದತ್ತ ಅವರು ಒಲವು ತೋರಿದಕ್ಕೆ ಕಾರಣವೇನು ಅಂತ.

ಅಂದ ಹಾಗೆ, ಆ ಬಗೆಗಿನ ನಿಗೂಢತೆ ಏನೆಂಬುದರ ಕುರಿತು ಹೆಚ್ಚೇನು ಹೇಳಬೇಕಿಲ್ಲ. ನಟಿ ಚೈತ್ರಾ ಇತ್ತೀಚೆಗೆ ಹೆಚ್ಚು ಸುದ್ದಿ ಆಗಿದ್ದು ಅವರ ಮದುವೆ ಕಾರಣಕ್ಕೆ.ಉದ್ಯಮಿ ನಾಗಾರ್ಜುನ್‌ ಎಂಬುಬರ ಜತೆಗೆ ಸರಳವಾಗಿ ವಿವಾಹವಾಗಿದ್ದರು. ಆದರೆ ಆ ಮದುವೆಗೆ ಎರಡು ಕುಟುಂಬಗಳು ಒಪ್ಪದ ಕಾರಣ ಆ ಮದುವೆ ಪೊಲೀಸ್‌ ಸ್ಟೇಷನ್‌ ಮೆಟ್ಟಲೇರಿತ್ತು.ಕೊನೆಗೆ ಆ ಮದುವೆ ಬಲವಂತವಾಗಿ ನಡೆದಿದ್ದು ಎಂದು ನಾಗಾರ್ಜುನ್‌ ದೂರಿದ್ದರು. ಕನ್ನಡ ಸಂಘಟನೆಯ ಕಾರ್ಯಕರ್ತರು ಎನ್ನಲಾದ ಕೆಲವರು ತಮ್ಮನ್ನು ಬಲವಂತವಾಗಿ ಎಳೆದುಕೊಂಡು ಬಂದು ಮದುವೆ ಮಾಡಿಸಿದ್ದಾರೆಂದು ಆತ ಪೊಲೀಸರ ಮುಂದೆ ಹೇಳಿಕೆ ನೀಡಿದ್ದ.

ಆದರೆ ನಟಿ ಚೈತ್ರಾ ಕೋಟೂರು ಇದನ್ನು ಅಲ್ಲಗಳೆದಿದ್ದರು. ಆತ ನನ್ನನ್ನು ಪ್ರೀತಿಸಿದ್ದ. ಕೊನೆಗೆ ಮೋಸ ಮಾಡಲು ಯತ್ನಿಸಿದ್ದ. ಹಾಗಾಗಿ ದೇವಸ್ಥಾನದಲ್ಲಿ ಸರಳವಾಗಿ ಮದುವೆ ನಡೆದಿತ್ತು ಎಂದಿದ್ದರು. ಕೊನೆಗೆ ಆ ಮದುವೆ ಮುರಿದು ಬಿದ್ದು, ನಟಿ ಚೈತ್ರಾ ಕೋಟೂರು ಆತ್ಮಹತ್ಯೆಗೆ ಯತ್ನಿಸಿದ್ದು ಆಗಿತ್ತು. ಇದೆಲ್ಲ ರಗಳೆಗಳ ನಡುವೆ ಮತ್ತೆ ಎಂದಿನಂತೆ ಸಿನಿಮಾ, ಬರವಣಿಗೆ ಅಂತೆಲ್ಲ ತೋಡಿಸಿಕೊಂಡಿದ್ದ ಚೈತ್ರಾ ಕೋಟೂರು ಈಗ ಅಧ್ಯಾತ್ಮದತ್ತ ವಾಲಿದ್ದಾರೆ. ಬೆಳಗಾವಿಯಲ್ಲಿರುವ ಒಶೋ ಧ್ಯಾನ ಶಿಬಿರದಲ್ಲಿ ಈಗ ಕಾಣಿಸಿಕೊಂಡಿರುವುದು ಕುತೂಹಲ ಮೂಡಿಸಿದೆ.

Categories
ಸಿನಿ ಸುದ್ದಿ

ರೀ ಡೈರೆಕ್ಟ್ರೇ, ಎಲ್ರೂ ಅಡ್ವಾನ್ಸ್ ಕಳುಹಿಸಿಕೊಟ್ಟರೆ ನೀವೇನ್ರಿ ಸಿಗಾರ್ ಕಳಿಸಿದ್ದೀರಿ !

ಕನ್ನಡ ಚಿತ್ರರಂಗ ಕಂಡ ಅತ್ಯಾದ್ಬುತ ನಟಿ ಇವರು. ಕರುನಾಡಿನ ಹೆಮ್ಮೆಯ ಮನೆಮಗಳು ಅಂದ್ರೂ ಕೂಡ ತಪ್ಪಿಲ್ಲ. ಭರ್ತಿ ಮೂರು ದಶಕಗಳಿಂದ ಬೆಳ್ಳಿತೆರೆಯನ್ನು ಆಳುತ್ತಾ, ಪಂಚಭಾಷಾ ತಾರೆಯಾಗಿ ಮಿನುಗುತ್ತಿರುವ ಮಹಾನಟಿ ಇವ್ರು. ಇದೀಗ ಇವ್ರು ಹಿಂದೆಂದೂ ಕಾಣದ ಹೊಸ ಅವತಾರದೊಂದಿಗೆ ಬೆಳ್ಳಿತೆರೆಯನ್ನು ಬೆಚ್ಚಿಬೀಳಿಸೋದಕ್ಕೆ ಬರುತ್ತಿದ್ದಾರೆ. ಅಂದ ಹಾಗೆ, ಈ ನಟಿಗೆ ಅಡ್ವಾನ್ಸ್ ರೂಪದಲ್ಲಿ ಚೆಕ್ಕೋ ಅಥವಾ ಅಥವಾ ನಗದು ಕಳುಹಿಸಿ ಕೊಡುವ ಮುನ್ನವೇ ಆ ಸ್ಟಾರ್‌ ಡೈರೆಕ್ಟರ್ ಒಬ್ಬರು ಸಿಗಾರ್' ಕಳುಹಿಸಿ ಕೊಟ್ಟಿದ್ದರಂತೆ. ಅಷ್ಟಕ್ಕೂ, ಆ ಡೈರೆಕ್ಟರ್ ಯಾರು ?ಸಿಗಾರ್’ ಸಸ್ಪೆನ್ಸ್ ಸೀಕ್ರೆಟ್ ಏನು? ಅದೆಲ್ಲದರ ಥ್ರಿಲ್ಲಿಂಗ್ ಕಹಾನಿಯ ವಿವರ ಇಲ್ಲಿದೆ ನೋಡಿ.

ಮಹಾನಟಿ-ಸ್ಟಾರ್‌ ಡೈರೆಕ್ಟರ್-ಸಿಗಾರ್ ಎಂದಾಕ್ಷಣ ಸಹಜವಾಗೇ ಕೂತೂಹಲ ಹೆಚ್ಚುತ್ತೆ. ಇನ್ನೂ ಆ ಕುತೂಹಲ ಹಿಡಿದಿಡಲು ಸಾಧ್ಯ ವಿಲ್ಲ. ಹಾಗಾಗಿ ಚಂದನವನದ ಆ ಮಹಾನಟಿ ಹೆಸರನ್ನು ಮೊದಲು ಹೇಳಿಬಿಡ್ತೀವಿ. ಆ ಮಹಾನಟಿ ಬೇರಾರು ಅಲ್ಲ ಒನ್‌ ಅಂಡ್‌ ಒನ್ಲೀ ಶ್ರುತಿ.ಅವರ ಸಿಂಗಾರ್ ಕಥೆ ಬಿಚ್ಚಿಡುವ ಮೊದಲು ಕರ್ನಾಟಕ ಮಧ್ಯಪಾನ ಸಂಯಮ ಮಂಡಳಿ'ಯ ಅಧ್ಯಕ್ಷರಾಗಿ ನೇಮಕ ಗೊಂಡಿರುವ ನಟಿ ಶ್ರುತಿಗೆ ಶುಭಾಶಯ ಕೋರಿ ಬಿಡ್ತೇವೆ. ರಾಜ್ಯ ಸರ್ಕಾರ ಹೊಸ ಜವಾಬ್ದಾರಿ ವಹಿಸಿದ ಬೆನ್ನಲ್ಲೇ ನಟಿ ಶ್ರುತಿ ತಮ್ಮ ಮಗಳ ಜೊತೆಗೆ ಧರ್ಮಸ್ಥಳದ ಶ್ರೀ ಮಂಜುನಾಥನ ಸನ್ನಿಧಿಗೆ ಭೇಟಿಕೊಟ್ಟು ಆಶೀರ್ವಾದ ಪಡೆದಿದ್ದಾರೆ. ರಾಜ್ಯದ ಜನರ ಸಹಕಾರ ಹೀಗೆ ಇರಲಿ ಅಭಿಮಾನಿಗಳ ಬೆಂಬಲ ನಿರಂತರವಾಗಿರಲೆಂದು ಬೇಡಿದ್ದಾರೆ. ಈ ನಡುವೆ ಖಾಸಗಿ ಪತ್ರಿಕೆಗೆ ಸಂದರ್ಶನ ನೀಡಿದ್ದು ಶಿವರಾಜ್‌ಕುಮಾರ್, ಪುನೀತ್‌ರಾಜ್‌ಕುಮಾರ್‌ರಂತಹ ಸ್ಟಾರ್‌ ಹೀರೋಗಳಿಗೆ ಆಕ್ಷನ್ ಕಟ್ ಹೇಳಿರುವ ನಿರ್ದೇಶಕರೊಬ್ಬರು ಮನೆಗೆಸಿಗಾರ್’ ಕಳುಹಿಸಿಕೊಟ್ಟ ಸೀಕ್ರೆಟ್‌ ರಿವೀಲ್ ಮಾಡಿದ್ದಾರೆ.

`ಸಿಗಾರ್’ ಹಿಡಿದು ಖಡಕ್ ಲುಕ್ ಕೊಟ್ಟರಲ್ಲ ಶ್ರುತಿ !

ನಟಿ ಶ್ರುತಿಯವರ ಮನೆಗೆ ಸಿಗಾರ್' ಕಳುಹಿಸಿಕೊಟ್ಟಿದ್ದು ಬೇರ‍್ಯಾರು ಅಲ್ಲ ಭಜರಂಗಿಯ ಸಾರಥಿ ನಿರ್ದೇಶಕ ಎ ಹರ್ಷ ಅವರು. ಅಷ್ಟಕ್ಕೂ,ಸಿಗಾರ್’ನ ಎನ್‌ವೆಲಪ್‌ ಕವರ್‌ನಲ್ಲಿ ಹಾಕಿ ಪೋಸ್ಟ್ ಮಾಡಿದ್ರೋ ಅಥವಾ ಯಾರಾದ್ರೋ ಹುಡುಗರ ಕೈಯಲ್ಲಿ ಕಳುಹಿಸಿ ಕೊಟ್ಟರೋ ಗೊತ್ತಿಲ್ಲ, ಸಿಗಾರ್' ಅಂತೂ ಶ್ರುತಿಯವರ ಮನೆ ತಲುಪಿದೆ. ಇದನ್ನು ನೋಡಿದ ತಕ್ಷಣ ಹರ್ಷ ಅವರಿಗೆ ಕಾಲ್ ಮಾಡಿದ ಶ್ರುತಿ, ಎಲ್ಲರೂ ಅಡ್ವಾನ್ಸ್ ಕಳುಹಿಸಿಕೊಟ್ಟರೆ, ನೀವು ಸಿಗಾರ್ ಕಳುಹಿಸಿದ್ದೀರಲ್ಲ ಡೈರೆಕ್ಟ್ರೇ .. ಅಂತ ಕಿಂಡಲ್ ಮಾಡಿದ್ದಾರೆ. ಸಿಗಾರ್‌ನ ಕೈಯಲ್ಲಿ ಹಿಡಿಯೋದು ಹೇಗೆ, ಕ್ಯಾಮೆರಾಗೆ ಪೋಸ್ ನಿಡೋದು ಹೇಗೆ ಅಂತ ಪ್ರಾಕ್ಟೀಸ್ ಮಾಡಿಕೊಂಡಿದ್ದಾರೆ. ಯಾಕಂದ್ರೆ, ಭಜರಂಗಿ-೨' ಚಿತ್ರದಲ್ಲಿ ನಟಿ ಶ್ರುತಿಯವರುಸಿಗಾರ್’ ಹಿಡಿದು ಖಡಕ್ ಲುಕ್ ಕೊಡ್ಬೇಕು, ಸಿನಿಮಾಪ್ರೇಮಿಗಳನ್ನು ಹುಚ್ಚೆಬಿಸ್ಬೇಕು. ಇದನ್ನ ಮೊದಲ ನೋಟದಲ್ಲೇ ಮಾಡುವಲ್ಲಿ ಶ್ರುತಿ ಯಶಸ್ವಿಯಾಗಿದ್ದಾರೆ.

ಹೊಡೆದಾಡುತ್ತಾರಾ ಅಥವಾ ಕಣ್ಣೋಟದಲ್ಲೇ ಕಟ್ಟಿಹಾಕ್ತಾರಾ ?

೧೯೮೯ ರಿಂದ ಇಲ್ಲಿಯವರೆಗೆ ಸುಮಾರು ೩೦ ವರ್ಷಗಳಿಂದ ಶ್ರುತಿ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಸಿನಿಮಾ ಸೇರಿದಂತೆ ರಾಜಕೀಯ ದಲ್ಲೂ ಗುರುತಿಸಿಕೊಂಡಿರುವ ಶ್ರುತಿ, ತಮ್ಮ ಸಿನಿಮಾ ಕೆರಿಯರ್‌ನಲ್ಲೇ ಹಿಂದೆಂದೂ ಮಾಡಿರದ ಪಾತ್ರವೊಂದನ್ನು ಭಜರಂಗಿ-೨' ಚಿತ್ರದಲ್ಲಿ ಮಾಡಿದ್ದಾರೆ. ಹೋಮ್ಲಿ ಕ್ಯಾರೆಕ್ಟರ್, ಸಾಫ್ಟ್ ರೋಲ್, ಎಮೋಷ ನಲ್ ಪಾತ್ರಗಳಿಗೆ ಜೀವತುಂಬುತ್ತಿದ್ದ ನಟಿ ಶ್ರುತಿ ಇದೇ ಮೊದಲ ಭಾರಿಗೆ ರಗಡ್ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಹಣೆಗೆ ಕುಂಕುಮ, ಕೈತುಂಬಾ ಬಳೆತೊಟ್ಟುಕೊಂಡಿದ್ದರೂ ಕೂಡ ಕೈಲಿ ಹಿಡಿದಿರುವ ಸಿಗಾರ್’ ಹಾಗೂ ಕ್ಯಾಮೆರಾಗೆ ಕೊಟ್ಟಿರುವ ಪೋಸ್ ಇದೆಯಲ್ಲ ಅದು ಪ್ರೇಕ್ಷಕ ಮಹಾಶಯರನ್ನು ಹುಬ್ಬೇರಿಸುವಂತೆ ಮಾಡ್ತಿದೆ.

ಭಜರಂಗಿ-೨' ಚಿತ್ರದ ಪಾತ್ರಕ್ಕೋಸ್ಕರ ಶ್ರುತಿ ತುಂಬಾ ಬದಲಾಗಿ ದ್ದಾರೆ. ʼಆಸೆಗೊಬ್ಬ ಮೀಸೆಗೊಬ್ಬʼ ಚಿತ್ರದಲ್ಲಿ ಶಿವಣ್ಣನ ಜೊತೆ ಶ್ರುತಿಯವರನ್ನು ನೋಡಿದವರುʼಭಜರಂಗಿ-೨’ ನಲ್ಲಿ ಹ್ಯಾಟ್ರಿಕ್ ಹೀರೋ ಜೊತೆ ಶ್ರುತಿ ನೋಡಿದಾಗ ಬೆಚ್ಚಿಬೀಳೋದು ಭಜರಂಗಿ ಮೇಲಾಣೆ ಸತ್ಯ. ಯಾಕಂದ್ರೆ, ಸ್ವತಃ ಶ್ರುತಿಯವರೇ ಈ ಪಾತ್ರದ ಬಗ್ಗೆ ಸಿಕ್ಕಾಪಟ್ಟೆ ಎಕ್ಸೈಟ್ ಆಗಿದ್ದಾರೆ. ನಿರ್ದೇಶಕ ಹರ್ಷ ಅವರು ಪಾತ್ರದ ಬಗ್ಗೆ ನರೇಷನ್ ಕೊಟ್ಟಾಗ ಶ್ರುತಿ ಈ ಪಾತ್ರ ನನ್ನಿಂದ ಮಾಡಲು ಸಾಧ್ಯವೇ ಅಂತ ಹಿಂದೇಟು ಹಾಕಿದ್ದರಂತೆ. ಆದರೆ, ಡೈರೆಕ್ಟರು ಈ ಪಾತ್ರವನ್ನು ನಿಮಗೋ ಸ್ಕರವೇ ಸೃಷ್ಟಿ ಮಾಡಿದ್ದೇನೆ ಎಂದಾಗ ಒಂದು ಕೈ ನೋಡೆಬಿ ಡೋಣ ಅಂತ ಒಪ್ಪಿಕೊಂಡು ಮಾಡಿದ್ದಾರೆ. ಕಣ್ಣೋಟದಲ್ಲೇ ಕಟ್ಟಿಹಾಕಿರುವ ನಟಿ ಶ್ರುತಿ ಎದುರಾಳಿಗಳ ಜೊತೆ ಹೊಡೆದಾಡ್ತಾರಾ ಅಥವಾ ಲುಕ್ಕಲ್ಲೇ ಕೊಲ್ತಾರಾ ಅನ್ನೋದು ಸೆಪ್ಟೆಂಬರ್ ೧೦ರಂದು ಗೊತ್ತಾಗಲಿದೆ. ಗಣೇಶನ ಹಬ್ಬದಂದು `ಭಜರಂಗಿ-೨’ ಚಿತ್ರ ಅದ್ದೂರಿಯಾಗಿ ತೆರೆಗೆ ಬರಲಿದೆ. ಭಜರಂಗಿಯ ಸ್ವಾಗತಕ್ಕೆ ಎಲ್ಲರೂ ಸಜ್ಜಾಗಬೇಕಿದೆ.

ವಿಶಾಲಾಕ್ಷಿ, ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಹಾವೇರಿಯಲ್ಲಿ ದರ್ಶನ್‌, ಸಾಲುಗಟ್ಟಿ ನಿಂತರು ಅಭಿಮಾನಿ ಭಕ್ತರು- ಸಾವಿರ ಅಲಿಗೇಷನ್ಸ್‌ ಬರ್ಲಿ, ಹಿಂಗೈತಿ ನೋಡಿ ಚಕ್ರವರ್ತಿ ಹವಾ!

ಮೈಸೂರಿನ ಪ್ರಿನ್ಸ್ ಹೋಟೆಲ್‌ನ ಸಪ್ಲೈಯರ್ ಮೇಲೆ ದರ್ಶನ್ ಹಲ್ಲೆ ನಡೆಸಿದ್ದಾರೆ ಎನ್ನುವ ಆರೋಪವು ಮೇಕಪ್ ಮಾಡಿಕೊಂಡು ಬಜಾರ್‌ಗೆ ಎಂಟ್ರಿಕೊಟ್ಟಿದ್ದೇ ತಡ ದಾಸನ ಕಥೆ ಮುಗೀತು ಗುರು ಅಂತ ನಾಲಿಗೆ ಅಲುಗಾಡಿಸಿದವರು ಒಬ್ಬಿಬ್ಬರಲ್ಲ. ದಾಸನಿಗೆ ಬುದ್ಧಿ ಬರಲ್ಲ ಬುಡು ಗುರು, ಒಂದ್ಸಲ್ಲ ಅಲ್ಲಾ ಎರಡು ಸಲ ಅಲ್ಲಾ ಪದೇ ಪದೇ ತಪ್ಪು ಮಾಡ್ತಾನೆ ಇದ್ದಾರೆ. ಇನ್ಮೇಲೆ ಅವರ ಫ್ಯಾನ್ಸು ಕೂಡ ಅವರನ್ನ ಸಪೋರ್ಟ್ ಮಾಡಲ್ಲ ಅಂತ ಕೆಲವುರ ಬೇಜಾನ್‌ ಮಾತನಾಡಿ ಕೊಂಡರಲ್ಲದೇ, ದರ್ಶನ್‌ ಇಮೇಜ್‌ ಹಾಳುಮಾಡಿ ಕೊಂಡರು ಅಂತಲೂ ಗುಸುಗುಟ್ಟಿದ್ದರು. ಅಷ್ಟು ಮಾತ್ರವಲ್ಲ, ಇನ್ಮೇಲೆ ಅಖಾಡದಲ್ಲಿ ದಾಸನ ಆಟ ನಡೆಯಕ್ಕಿಲ್ಲ ಅಂತ ಕೆಲವರು ಮಟಮಟ ಮಧ್ಯಾಹ್ನ ಗುಂಡಾಕಿ ಸಂಭ್ರಮಪಟ್ಟರು. ಆದ್ರೆ ಅದೆಲ್ಲವೂ ಸುಳ್ಳು ಅನ್ನೋತ್ತೆ ದರ್ಶನ್‌ ಹಾವೇರಿ ಎಂಟ್ರಿ. ಅದ್ಹೇಂಗೆ ಅಂತ ಗೊತ್ತಾಗಬೇಕಾದ್ರೆ, ನೀವು ಈ ಸ್ಟೋರಿನಾ ನೋಡ್ಲೆಬೇಕು..

ಸಪ್ಲೈಯರ್ ಮೇಲೆ ಸಾರಥಿ ಹಲ್ಲೆ ಮಾಡಿದ್ದಾರೆನ್ನುವ ಆರೋಪ ಚಕ್ರವರ್ತಿಯ ಇಮೇಜ್‌ನ ಡ್ಯಾಮೇಜ್ ಮಾಡೋದಿಕ್ಕೋ ಅಥವಾ ಸ್ಟಾರ್‌ಡಮ್‌ಗೆ ದಕ್ಕೆ ತರಬೇಕು ಅನ್ನೋದಕ್ಕೆ ಮಾಡಿದ ಕುತಂತ್ರವೋ ಅಥವಾ ನಿಜವಾಗಲೂ ಸಾರಥಿ ವೇಟರ್ ಮೇಲೆ ಹಲ್ಲೆ ನಡೆಸಿದ್ದಾರೋ ಗೊತ್ತಿಲ್ಲ. ಪ್ರಕರಣ ತನಿಖೆಯ ಹಂತದಲ್ಲಿರುವಾಗ್ಲೇ, ಡಿಬಾಸ್ ಬಜಾರ್‌ ನಲ್ಲಿ ಬೆಲೆತೂಕ ಕಳ್ಕೊಂಡು ಬಿಟ್ಟರು, ತಮ್ಮ ಇಮೇಜ್‌ನ ತಾವೇ ಹಾಳುಮಾಡಿಕೊಂಡರು, ತಮ್ಮ ಸ್ಟಾರ್‌ಡಮ್‌ಗೆ ತಾವೇ ದಕ್ಕೆ ತಂದು ಕೊಂಡರು ಅಂತ ಬಹುತೇಕರು ಮಾತನಾಡಿಕೊಂಡಿದ್ದರು. ಆದರೆ, ಡಿ ಬಾಸ್ ದರ್ಶನ್ ಆಟಕ್ಕೆ-ಓಟಕ್ಕೆ ಬ್ರೇಕ್ ಹಾಕುವ ತಾಕತ್ತೂ ಯಾರಿಗೂ ಇಲ್ಲ ಅನ್ನೋದು ಮತ್ತೊಮ್ಮೆ ಪ್ರೂ ಆಗಿದೆ. ವೈಯಕ್ತಿಕ ಜಿದ್ದಿನಿಂದಲೋ ಅಥವಾ ಮತ್ಯಾವುದೋ ಕಾರಣದಿಂದಲೋ ಸಾರಥಿಯನ್ನ ನಿಂದಿಸುವ, ತೇಜೋವಧೆ ಮಾಡುವ, ಹೆಸರಿಗೆ ಮಸಿಬಳಿಯುವ ಕೆಲಸಕ್ಕೆ ಕೈಹಾಕಿದ ಮಾತ್ರಕ್ಕೆ ಚಕ್ರವರ್ತಿಯ ಸದ್ದಡುಗುತ್ತೆ ಅಂತ ತಿಳಿದರೆ ನಿಜಕ್ಕೂ ಅದು ಸುಳ್ಳು ಅನ್ನೋದನ್ನು ಸಾರಥಿ ಸೈನಿಕ ಪಡೆ ಮತ್ತೊಮ್ಮೆ ಸಾಬೀತು ಮಾಡಿದೆ.

ಅಂತಹದೊಂದು ಘಟನೆಗೆ ಬುಧವಾರ ಹಾವೇರಿ ಜಿಲ್ಲೆ ಸಾಕ್ಷಿ ಆಯಿತು. ಅಕ್ಷರಶಃ ಅದು ಸಾಧ್ಯವಾಗಿದ್ದು ಹಾವೇರಿ ಜಿಲ್ಲೆಯ ದರ್ಶನ್‌ ಅಭಿಮಾನಿ ಬಳಗದಿಂದ. ಹೌದು, ಡಿಬಾಸ್ ಹಾವೇರಿಗೆ ಬಂದಿದ್ದಾರಂತೆ, ಶಾಸಕ ಸುರೇಶ್‌ಗೌಡರ ಅತಿಥಿಗೃಹದಲ್ಲಿ ವಾಸ್ತವ್ಯ ಹೂಡಿದ್ದಾರಂತೆ ಎನ್ನುವ ಸುದ್ದಿ ಕಿವಿಗೆ ಬಿದ್ದಿದ್ದೇ ತಡ, ಹಾವೇರಿ ಸುತ್ತಮುತ್ತಲಿನ ಎಲ್ಲಾ ಅಭಿಮಾನಿಗಳು ಬ್ಯಾಡಗಿಗೆ ಬಂದು ಸೇರಿದ್ರು. ಶಾಸಕ ಸುರೇಶ್‌ಗೌಡರಿಗೆ ಸೇರಿದ ಅತಿಥಿಗೃಹ ಹಾಗೂ ಅವರ ಮನೆಮುಂದೆ ಜಮಾವಣೆಗೊಂಡರು. ಡಿಬಾಸ್‌ಗೆ ಜೈಕಾರ ಹಾಕುತ್ತಾ ಆರಾಧ್ಯದೈವನನ್ನು ಕಣ್ತುಂಬಿಕೊಡರು. ಅದಕ್ಕೆ ಸಾಕ್ಷಿ ಈ ಫೋಟೋಗಳು.

ಅಂದ್ಹಾಗೇ, ದಚ್ಚುನಾ ನೋಡೋದಕ್ಕೆ ಇನ್ಮುಂದೆ ಜನ ಸೇರಲ್ಲ, ಹೋದಲ್ಲಿ ಬಂದಲ್ಲಿ ಮುತ್ತಿಗೆ ಹಾಕಲ್ಲ ಎನ್ನುವ ಭ್ರಮೆಯಲ್ಲಿ ಕೆಲವರು ಇದ್ದರು. ಇನ್ಮುಂದೆ ದರ್ಶನ್ ಹವಾ ಕಮ್ಮಿಯಾಯ್ತು ಬಿಡ್ರಿ ಎಂಬ ಸುದ್ದಿಯನ್ನು ಹಬ್ಬಿಸಿದ್ದರು. ಆದರೆ, ಆ ಸುದ್ದಿನಾ ಸಾರಥಿ ಸೈನಿಕರು ಸುಳ್ಳು ಮಾಡಿದ್ದಾರೆ. ಯಾರು ಎಷ್ಟೇ ಆರೋಪ ಮಾಡಿದರೂ, ನಿಮ್ಮ ಮೇಲೆ ನೂರಲ್ಲ ಸಾವಿರಾರು ಆಪಾದನೆಗಳು ಕೇಳಿಬಂದ್ರೂ ಕೂಡ ನಿಮ್ಮೊಟ್ಟಿಗೆ ಸದಾ ನಾವಿರುತ್ತೇನೆ ಅನ್ನೋದನ್ನ ಸಾಬೀತುಪಡಿಸಿದ್ದಾರೆ. ಅದಕ್ಕೆ ಹಾವೇರಿಯಲ್ಲಿ ಜಮಾವಣೆಗೊಂಡಿದ್ದ ಅಭಿಮಾನಿಗಳೇ ಸಾಕ್ಷಿ. ದರ್ಶನ್‌ ಅಂದ್ರೆನೆ ಹಾಗೆ, ಅವರು ಲೋಕಲೋ, ಹೈ ಕ್ಲಾಸೋ ಗೊತ್ತಿಲ್ಲ. ದರ್ಶನ್‌ ಅಂದ್ರೆ ಮುಗಿ ಬಿಳ್ತಾರೆ ಫ್ಯಾನ್ಸು.

ಜಗತ್ತೇ ನಿಮ್ಮ ವಿರುದ್ದ ನಿಂತರೂ ಆ ಜಗತ್ತಿನ ವಿರುದ್ದ ನಾವು ನಿಲ್ತೇವೆ' ಹೀಗಂತ ಡಿಬಾಸ್ ಫ್ಯಾನ್ಸ್ ಬರೀ ಮಾತಿಗೆ ಹೇಳಿಲ್ಲ.ವಿ ಸ್ಟ್ಯಾಂಡ್‌ ವಿತ್ ಡಿಬಾಸ್’ ಎನ್ನುವ ಕ್ಯಾಂಪೇನ್ ಬರೀ ಅಭಿಯಾನವಾಗಿ ಉಳಿದಿಲ್ಲ ಮಾತುಕೊ ಟ್ಟಂತೆ ಡಿಬಾಸ್ ಸೆಲೆಬ್ರಿಟಿಗಳು ನಡೆದುಕೊಳ್ತಿದ್ದಾರೆ. ನಮ್ಮ ಬಾಸ್ ಪರವಾಗಿ ಯಾರೂ ಮಾತನಾಡದೇ ಇದ್ದರೂ ಪರವಾಗಿಲ್ಲ ನಾವು ಯಾವತ್ತೂ ಬಾಸ್ ಪರವಾಗಿ ರ‍್ತೇವೆ ಎಂಬುದನ್ನು ಪ್ರೂ ಮಾಡಿ ತೋರಿಸುತ್ತಿದ್ದಾರೆ. ಇಷ್ಟೆಲ್ಲಾ ಓದಿದ ಮೇಲೂ ದಾಸ ದರ್ಶನ್‌ ಅವರ ಇಮೇಜ್‌ನ ಡ್ಯಾಮೇಜ್ ಮಾಡ್ಬೇಕು, ಸ್ಟಾರ್‌ಡಮ್‌ಗೆ ಪೆಟ್ಟುಕೊಡ್ಬೇಕು ಅಂತ ಯಾರಾದ್ರೂ ಸ್ಕೆಚ್ ಹಾಕ್ತಾ ಇದ್ದರೆ ಒಂದು ಅರ್ಥ ಮಾಡ್ಕೊಬೇಕು. ಚಕ್ರವರ್ತಿಯ ಇಮೇಜ್‌ನ ಡ್ಯಾಮೇಜ್ ಮಾಡೋದು ಅಷ್ಟು ಸುಲಭದ ಕೆಲಸ ಅಲ್ಲ. ಯಾಕಂದ್ರೆ, ಯಾರಿಗೋ ಬಕೆಟ್ ಹಿಡಿದು ಡಿಬಾಸ್ ಬ್ರಾಂಡ್‌ ಆಗಿಲ್ಲ, ದಾಸನಿಗೆ ಸ್ಟಾರ್‌ಡಮ್ ಏಕಾಏಕಿ ಬಂದಿಲ್ಲ, ಸಾಮಾನ್ಯ ಲೈಟ್‌ಬಾಯ್ ಆಗಿದ್ದ ದಚ್ಚು ಚಕ್ರವರ್ತಿಯಾಗೋದಕ್ಕೆ ಎಷ್ಟು ಕಷ್ಟ ಪಟ್ಟಿದ್ದಾರೆ ಎಂಬುದು ತಾಯಿ ಚಾಮುಂಡೇಶ್ವರಿಗೆ ಗೊತ್ತು. ಹೀಗಾಗಿ, ಸುಖಾಸುಮ್ಮನೇ ಆರೋಪ ಮಾಡಿ ಸಾರಥಿನಾ ಕಟ್ಟಿಹಾಕೋದಕ್ಕೆ ಟ್ರೈ ಮಾಡ್ಬೇಡಿ.

ವಿಶಾಲಾಕ್ಷಿ, ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಆನಂದ್ ಆಡಿಯೋ ಮೂಲಕ ಹೊರ ಬಂತು “ಲಂಕೆ” ಲಿರಿಕಲ್ ಸಾಂಗ್ !

ಲೂಸ್ ಮಾದ ಯೋಗೇಶ್ ನಾಯಕನಾಗಿ ನಟಿಸಿರುವ “ಲಂಕೆ” ಚಿತ್ರದ ಲಿರಿಕಲ್ ಸಾಂಗ್ ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ. ರಾಮಪ್ರಸಾದ್ ಎಂ.ಡಿ.ಬರೆದಿರುವ “ನೋಡು ನೋಡು ಯೋಗಿ ಬಾಸು ಮಾಸು ಎಂಟ್ರಿ ಕೊಟ್ಟೇಬಿಟ್ಟ. ಧೂಳಿನಿಂದ ಎದ್ದು ಬಂದು ಅಂಬಾರಿ ಏರೇ ಬಿಟ್ಟ” ಎಂಬ ಹಾಡನ್ನು ಖ್ಯಾತ ಗಾಯಕ ಆಂಥೋನಿ ದಾಸ್ ಹಾಡಿದ್ದಾರೆ. ಕಾರ್ತಿಕ್ ಶರ್ಮ ಸಂಗೀತ ನೀಡಿದ್ದಾರೆ. ಬುಧುವಾರ ಬಿಡುಗಡೆಯಾಗಿರುವ ಈ ಲಿರಿಕಲ್ ಸಾಂಗ್ ಸಾಕಷ್ಟು ಸಂಖ್ಯೆಯಲ್ಲಿ ವೀಕ್ಷಣೆಗೊಂಡು ಮೆಚ್ಚುಗೆಗೆ ಪಾತ್ರವಾಗಿದೆ.

ಸಾಹಸ ಪ್ರಧಾನ ಈ ಚಿತ್ರವನ್ನು ರಾಮ್ ಪ್ರಸಾದ್ ಎಂ.ಡಿ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ. ರಾಮಪ್ರಾಸಾದ್ ಹಾಗೂ ಗುರುರಾಜ ದೇಸಾಯಿ ಸಂಭಾಷಣೆ ಬರೆದಿದ್ದಾರೆ. ದಿ ಗ್ರೇಟ್ ಎಂಟರ್ ಟೈನರ್ ಲಾಂಛನದಲ್ಲಿ ಪಟೇಲ್ ಶ್ರೀನಿವಾಸ್(ನಾಗವಾರ) ಹಾಗೂ ಸುರೇಖ ರಾಮಪ್ರಸಾದ್ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ರಮೇಶ್ ಬಾಬು ಛಾಯಾಗ್ರಹಣ, ಶಿವರಾಜ್ ಮೇಹು ಸಂಕಲನ, ರವಿವರ್ಮ, ಪಳನಿರಾಜ್, ಅಶೋಕ್ ಸಾಹಸ ನಿರ್ದೇಶನ ಹಾಗೂ ಧನಂಜಯ್, ಮೋಹನ್ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ಲೂಸ್ ಮಾದ ಯೋಗೇಶ್ ಚಿತ್ರದ ನಾಯಕನಾಗಿ ಅಭಿನಯಿಸಿದ್ದು, ಇತ್ತೀಚೆಗೆ ನಿಧನರಾದ ಸಂಚಾರಿ ವಿಜಯ್ ಸಹ ಈ‌ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.ಕೃಷಿ ತಾಪಂಡ, ಕಾವ್ಯ ಶೆಟ್ಟಿ, ಶರತ್ ಲೋಹಿತಾಶ್ವ, ಶೋಭ್ ರಾಜ್, ಡ್ಯಾನಿ ಕುಟ್ಟಪ್ಪ, ಸುಚೇಂದ್ರ ಪ್ರಸಾದ್, ವಾಣಿಶ್ರೀ, ಗಾಯಿತ್ರಿ ಜಯರಾಂ, ಎಸ್ಟರ್ ನರೋನ, ಪ್ರಶಾಂತ್ ಸಿದ್ದಿ, ಆದ್ಯ ನಾಯಕ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Categories
ಸಿನಿ ಸುದ್ದಿ

ಸ್ಟುಡಿಯೋ ಒಳಗಡೆ ಒಬ್ಬರೇ ನಿಂತು ಕ್ಯಾಮೆರಾ ಆಫ್ ಆಗ್ಬಾರ್ದು ಅಂತ ನಟರಾಜ್ ಹೇಳಿದ್ದೇಕೆ…?

‘ರಾಮಾ ರಾಮಾ ರೇ’ ಖ್ಯಾತಿಯ ನಟ ನಟರಾಜ್ ಹಾಗೇಕೆ ಹೇಳಿದ್ರೂ ಗೊತ್ತಿಲ್ಲ. ಆದ್ರೆ ಹೇಳುತ್ತಲೇ ಅವರೀಗ ‘ಮ್ಯಾನ್ ಆಫ್ ದಿ ಮ್ಯಾಚ್’ ಚಿತ್ರದ ಡಬ್ಬಿಂಗ್ ಮುಗಿಸಿದ್ದಾರೆ. ಡಬ್ಬಿಂಗ್ ಮುಗಿಸಿದ್ದರ ಕುರಿತು ಸೋಷಲ್ ಮೀಡಿಯಾದಲ್ಲಿ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಅಂದ ಹಾಗೆ, ‘ಮ್ಯಾನ್ ಆಫ್ ದಿ ಮ್ಯಾಚ್’ ಸತ್ಯ ಪ್ರಕಾಶ್ ನಿರ್ದೇಶನ ಚಿತ್ರ. ಒಂದಲ್ಲ ಎರಡಲ್ಲ ಚಿತ್ರದ ಒಂದಷ್ಟು ಗ್ಯಾಪ್ ನಂತರ ಈ ಚಿತ್ರದ ನಿರ್ದೇಶನಕ್ಕೆ ಕೈ ಹಾಕಿದ್ದಾರೆ. ವಿಶೇಷ ಅಂದ್ರೆ ನಿರ್ದೇಶನದ ಜತೆಗೀಗ ನಿರ್ಮಾಣದ ಸಾಹಸಕ್ಕೂ ಇಳಿದಿದ್ದಾರೆ.

‘ ಮ್ಯಾನ್ ಆಫ್ ದಿ ಮ್ಯಾಚ್’ ಚಿತ್ರದ ನಿರ್ಮಾಣದಲ್ಲಿ ಪಿಆರ್ ಕೆ ಪ್ರೋಡಕನ್ಸ್ ಜತೆಗೆ ಸತ್ಯ ಫಿಕ್ಚರ್ಸ್ ಹಾಗೂ ಮಯೂರ ಪಿಕ್ಚರ್ಸ್ ಕೂಡ ಸಾಥ್ ನೀಡಿವೆ. ಈ ಚಿತ್ರದ ಚಿತ್ರೀಕರಣ ಮುಗಿದು ಈಗ ಡಬ್ಬಿಂಗ್ ಕೆಲಸಗಳು ನಡೆಯುತ್ತಿವೆ.ಈ ಚಿತ್ರದಲ್ಲಿ ನಟ ನಟರಾಜ್ ಕೂಡ ಪ್ರಮುಖ ಪಾತ್ರದಲ್ಲಿದ್ದಾರೆ. ಉಳಿದಂತೆ ಒಂದಷ್ಟು ಹೊಸ ಮುಖಗಳೇ ಚಿತ್ರದ ಪಾತ್ರವರ್ಗದಲ್ಲಿದ್ದು, ಅವರೆಲ್ಲರ ಮಾಹಿತಿ ಸದ್ಯಕ್ಕೆ ನಿಗೂಢವಾಗಿದೆ. ಮುಂದಕ್ಕೆ ಅವೆಲ್ಲವೂ ರಿವೀಲ್ ಆಗಲಿದೆ. ಈ ನಡುವೆ ಮ್ಯಾನ್ ಆಫ್ ದಿ ಮ್ಯಾಚ್ ಚಿತ್ರದಲ್ಲಿನ ತಮ್ಮ ಪಾತ್ರದ ಡಬ್ಬಿಂಗ್ ಕೆಲಸ ಮುಗಿಸಿರುವ ಬಗ್ಗೆ ನಟರಾಜ್ ಸೋಷಲ್ ಮೀಡಿಯಾದಲ್ಲಿ ಒಂದಷ್ಟು ಪೋಟೋ ಹಾಗೂ ಸಣ್ಣದೊಂದು ವಿಡಿಯೋ ರಿವೀಲ್ ಮಾಡಿದ್ದಾರೆ. ಆ ವಿಡಿಯೋದಲ್ಲಿ ನಟರಾಜ್, ಹೇಳಿದ್ದು ಅರ್ಥ ಆಯ್ತು ಅಂತ ಅನ್ಕೊಂಡಿದ್ದೀನಿ, ಯಾವುದೇ ಕ್ಯಾಮೆರಾಗಳು ಆಫ್ ಆಗರ್ಬಾದು… ಅಂತ ಹೇಳುವ ಸಂಭಾಷಣೆಯ ಹಿನ್ನೆಲೆ ಸದ್ಯಕ್ಕೆ ನಿಗೂಢ. ಅದು ಗೊತ್ತಾಗುವುದು ಚಿತ್ರ ನೋಡಿದಾಗಲೆ. ಆ ಮೂಲಕ ಡಬ್ಬಿಂಗ್ ಮುಗಿಸಿರುವ ನಟರಾಜ್, ಚಿತ್ರದ ಕುರಿತು ಸಿನಿ ಲಹರಿ ಜತೆಗೆ ಒಂದಷ್ಟು ಮಾಹಿತಿ ಹಂಚಿಕೊಂಡರು.

‘ ನಿರ್ದೇಶಕರ ನಿರೀಕ್ಷೆಯಂತೆಯೇ ಚಿತ್ರ ಚೆನ್ನಾಗಿ ಮೂಡಿ ಬಂದಿದೆ. ಚಿತ್ರೀಕರಣವನ್ನು ನಾವು ಲೆಕ್ಕಚಾರ ಹಾಕಿಕೊಂಡಂತೆಯೇ ಅಚ್ಚು ಕಟ್ಟಾಗಿ ಅಂದುಕೊಂಡಷ್ಟು ದಿನಗಳಲ್ಲೇ ಮುಗಿಸಿದ್ದೇವೆ. ಚಿತ್ರದಲ್ಲಿ ಬಹಳಷ್ಟು ಕಲಾವಿದರು ಹೊಸಬರೇ ಇದ್ದಾರೆ. ನಿರ್ದೇಶಕ ರಾದ ಸತ್ಯ ಪ್ರಕಾಶ್ ಸಾಕಷ್ಟು ಶ್ರಮ ಹಾಕಿ ಎಲ್ಲವನ್ನು ಅಚ್ಚುಕಟ್ಟಾಗಿ ತೆರೆಗೆ ತಂದಿದ್ದಾರೆ. ಸಿನಿಮಾ ಬಗ್ಗೆ ನನಗೂ ಸಾಕಷ್ಟು ನಿರೀಕ್ಷೆ ಇದೆ’ ಎಂದರು. ಈ ಚಿತ್ರದ ಚಿತ್ರೀಕರಣದ ಅಂತಿಮ ಹಂತದ ಚಿತ್ರೀಕರಣದ ವೇಳೆ ಸೆಟ್ ಗೆ ನಟ ಪುನೀತ್ ರಾಜ್ ಕುಮಾರ್ ಭೇಟಿ ನೀಡಿ ಚಿತ್ರೀಕರಣ ವೀಕ್ಷಣೆ ನಡೆಸಿದ್ದರು. ಅವರ ಆಗಮನದಿಂದ ಚಿತ್ರ ತಂಡ ಥ್ರಿಲ್ ಆಗಿತ್ತು. ಇದೀಗ ಚಿತ್ರೀಕರಣ ಮುಗಿಸಿ, ಡಬ್ಬಿಂಗ್ ಕೆಲಸಗಳಲ್ಲಿ ಬ್ಯುಸಿ ಆಗಿದೆ.

Categories
ಸಿನಿ ಸುದ್ದಿ

ಮಾತಿನ ಮನೆಯಿಂದ ಸಂಗೀತದ ಮನೆಗೆ ಶಿಫ್ಟ್‌ ಆದ ರಂಗಸಮುದ್ರ !

ಬಹು ನಿರೀಕ್ಷಿತ ಸ್ಯಾಂಡ್ ವುಡ್ ನ ರೆಟ್ರೋ ಚಿತ್ರ ರಂಗಸಮುದ್ರ ಮಾತಿನ ಮನೆಯಿಂದ ಸಂಗೀತದ ಮನೆಗೆ ಶಿಫ್ಟ್ ಆಗಿದೆ. ಹೊಯ್ಸಳ ಕ್ರಿಯೇಷನ್ಸ್ ಲಾಂಛನದಲ್ಲಿ ಹೊಯ್ಸಳ ಕೊಣನೂರು ನಿರ್ಮಿಸುತ್ತಿರುವ ರಂಗಸಮುದ್ರ ಚಲನಚಿತ್ರದ ಡಬ್ಬಿಂಗ್ ಪೂರ್ಣಗೊಂಡಿದೆ.
ಚಿತ್ರದ ಪ್ರಮುಖ ಭೂಮಿಕೆಯಲ್ಲಿರುವ ರಂಗಾಯಣ ರಘು ಅವರು ಡಬ್ಬಿಂಗ್ ಕಾರ್ಯದಲ್ಲಿ ಭಾಗಿಯಾಗಿದ್ದರು. ಚಿತ್ರದ ಕಲಾವಿದರಾದ ಸಂಪತ್ ರಾಜ್, ಕಾರ್ತಿಕ್, ಉಗ್ರಂ ಮಂಜು ಮತ್ತು ನಾಯಕಿ ದಿವ್ಯ ಹಾಗೂ ಸಹ ಕಲಾವಿದರ ಭಾಗದ ಡಬ್ಬಿಂಗ್ ಈಗಾಗಲೇ ಪೂರ್ಣಗೊಂಡಿದೆ. ಎರಡ್ಮೂರು ದಶಕಗಳ ಹಿಂದಿನ ಮಾನವೀಯ ಸೆಲೆಯ ಗ್ರಾಮೀಣ ಕಥಾ ವಸ್ತುವನ್ನು ರಂಗಸಮುದ್ರ ಚಿತ್ರದಲ್ಲಿ ಅನಾವರಣಗೊಳಿಸಲಾಗಿದೆ. ಚಿತ್ರದ ನಿರ್ದೇಶಕರಾಗಿರುವ ರಾಜ್ ಕುಮಾರ್ ಅಸ್ಕಿ ಅವರೇ ಕಥೆ-ಚಿತ್ರಕಥೆ ಮತ್ತು ಸಂಭಾಷಣೆಯನ್ನು ಬರೆದಿದ್ದಾರೆ.

ಕಲ್ಯಾಣ ಕರ್ನಾಟಕದ ಜವಾರಿ ಭಾಷೆ, ಕರಾವಳಿ, ಮೈಸೂರು ಕರ್ನಾಟಕ ಭಾಗದ ಸಂಭಾಷಣೆಯ ಸೊಗಸು ಚಿತ್ರದಲ್ಲಿದೆ. ಭಾಷಾ ವೈವಿದ್ಯತೆಯ ಜುಗಲ್ ಬಂಧಿ ಜೊತೆಗೆ ಭಾಂಧವ್ಯದ ಬೆಸುಗೆಯ ಕಥಾ ಹಂದರ ಚಿತ್ರದ ಹೈಲೈಟ್ ಆಗಿದೆ. ಚಿತ್ರದ ಚಿತ್ರೀಕರಣ ಕೂಡ ಮೈಸೂರ, ಬೆಂಗಳೂರು, ವಿಜಯಪುರ, ಬಾಗಲಕೋಟೆ ಜಿಲ್ಲೆಗಳ ವಿವಿಧ ಪ್ರದೇಶಗಳು ಮತ್ತು ಮಹಾರಾಷ್ಟ್ರದ ಗಡಿಭಾಗದಲ್ಲಿ ಚಿತ್ರೀಕರಣ ನಡೆಸಲಾಗಿದೆ. ರಂಗಸಮುದ್ರ ಚಿತ್ರಕ್ಕೆ ಗೀತ ಸಾಹಿತ್ಯ ವಾಗೀಶ್ ಚನ್ನಗಿರಿ, ಸಂಗೀತ ದೇಸೀ ಮೋಹನ್, ಸಂಕಲನ ಶ್ರೀಕಾಂತ್ ಹಾಗೂ ಹಿರಿಯ ತಂತ್ರಜ್ಞ ಗಿರಿ ಛಾಯಾಗ್ರಹಣ ಇದೆ.

Categories
ಸಿನಿ ಸುದ್ದಿ

ನಟ ದರ್ಶನ್‌ ವಿರುದ್ಧ ದೂರು – ಚಿತ್ರರಂಗದಿಂದ ಐದು ವರ್ಷ ಬ್ಯಾನ್‌ ಮಾಡ್ಬೇಕಂತೆ,ಆದರೆ ಕೆಲವರ ವಿರೋಧಕ್ಕೆ ತಿರುಗೇಟು ಕೊಟ್ಟ ಹಾಗಿದೆ ದರ್ಶನ್‌ ಪರವಾದ ಅಭಿಯಾನ !

ನಟ ದರ್ಶನ್‌ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಸೋಮವಾರವಷ್ಟೇ ದರ್ಶನ್‌ ಹಿಂಬಾಲಿಕರಿಂದ ತಮಗೆ ಜೀವ ಬೆದರಿಕೆ ಕರೆಗಳು ಬರುತ್ತಿವೆ ಅಂತ ನಿರ್ದೇಶಕ ಇಂದ್ರಜಿತ್‌ ಲಂಕೇಶ್‌, ಸೈಬರ್‌ ಕ್ರೈಂಗೆ ದೂರು ನೀಡಿದ್ದರ ಬೆನ್ನಲೇ ಮಾನವ ಹಕ್ಕುಗಳು ರಕ್ಷಣೆ ಹಾಗೂ ಭ್ರಷ್ಟಾಚಾರ ನಿಗ್ರಹ ಸಂಸ್ಥೆ, ನಟ ದರ್ಶನ್‌ ವಿರುದ್ಧ ಕರ್ನಾಟಕ ವಾಣಿಜ್ಯ ಮಂಡಳಿಗೆ ದೂರು ನೀಡಿದೆ.

ದರ್ಶನ್‌ ಅವರು ಬಳಸುತ್ತಿರುವ ಪದ ಬಳಕೆ ಸರಿಯಿಲ್ಲ. ಮಾಧ್ಯಮಗಳಿಗೂ ಅಶ್ಲೀಲ ಪದಗಳಿಂದ ನಿಂದಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೆ ವಾಣಿಜ್ಯ ಮಂಡಳಿ ಎಚ್ಚರಿಕೆ ನೀಡಬೇಕು. ಒಬ್ಬ ನಟನಾಗಿ ಸಾರ್ವಜನಿಕ ಕ್ಷೇತ್ರದಲ್ಲಿದ್ದಾಗ ತುಂಬಾ ಎಚ್ಚರಿಕೆಯಿಂದ ಮಾತನಾಡಬೇಕು. ಆದರೆ ದರ್ಶನ್‌ ತುಂಬಾನೆ ಅಶ್ಲೀಲ ಪದ ಬಳಕೆ ಮಾಡಿ ಕೆಲವರನ್ನು ನಿಂದಿಸಿದ್ದಾರೆ. ಇದು ಚಿತ್ರರಂಗ ದೃಷ್ಟಿಯಿಂದ ಒಳ್ಳೆಯದಲ್ಲ. ಈ ಹಿನ್ನೆಲೆಯಲ್ಲಿ ಅವರಿಗೆ ಚಿತ್ರರಂಗದಿಂದ ಐದು ವರ್ಷ ಬ್ಯಾನ್‌ ಮಾಡಬೇಕು ಎಂದು ಮಾನವ ಹಕ್ಕುಗಳ ರಕ್ಷಣೆ ಹಾಗೂ ಭ್ರಷ್ಟಾಚಾರ ನಿಗ್ರಹ ಸಂಸ್ಥೆ ಒತ್ತಾಯಿಸಿದೆ. ಪದ ಬಳಕೆ ಮಾಡುವಾಗ ಎಚ್ಚರ ಇರಲಿ ಎಂದು ದರ್ಶನ್‌ ಅವರಿಗೆ ಕರ್ನಾಟಕ ವಾಣಿಜ್ಯ ಮಂಡಳಿ ವಾರ್ನಿಂಗ್‌ ಮಾಡಬೇಕು. ಈ ಕೆಲಸವನ್ನು ಮಂಡಳಿ ಮುಂದಿನ ನಾಲ್ಕುದಿನಗಳಲ್ಲಿ ಮಾಡಬೇಕು. ಹಾಗೆ ಮಾಡದಿದ್ದರೆ ಹೋರಾಟ ನಡೆಸುವುದಾಗಿ ಮಾನವ ಹಕ್ಕುಗಳು ರಕ್ಷಣೆ ಹಾಗೂ ಭ್ರಷ್ಟಾಚಾರ ನಿಗ್ರಹ ಸಂಸ್ಥೆಯ ಅಧ್ಯಕ್ಷ ಮೋಹನ್‌ ಎಚ್ಚರಿಕೆ ನೀಡಿದ್ದಾರೆ.


ಈ ಮಧ್ಯೆಯೇ ಸೋಷಲ್‌ ಮೀಡಿಯಾದಲ್ಲಿ ನಟ ದರ್ಶನ್‌ ಪರವಾಗಿ ಅಭಿಯಾನ ಶುರುವಾಗಿದೆ. ʼಜಗತ್ತೇ ನಿಮ್ಮ ವಿರುದ್ಧ ನಿಂತರು ಆ ಜಗತ್ತಿನ ವಿರುದ್ಧ ನಾವು ನಿಲ್ಲುತ್ತೇವೆ. ‘we stand with d boss’ʼ ಎನ್ನುವ ಅಭಿಯಾನ ಈಗ ಟ್ವಿಟರ್‌ ಹಾಗೂ ಇನ್‌ಸ್ಟಾಗ್ರಾಂನಲ್ಲಿ ವೈರಲ್‌ ಆಗುತ್ತಿದೆ.ಸಂದೇಶ್‌ ಪ್ರಿನ್ಸ್‌ ಹೋಟೆಲ್‌ ಸಿಬ್ಬಂದಿ ಮೇಲೆ ದರ್ಶನ್‌ ಹಲ್ಲೆ ಮಾಡಿದ್ದಾರೆ, ಅವರ ಹಿಂಬಾಲಿಕರಿಂದ ತಮಗೆ ಬೆದರಿಕೆ ಕರೆಗಳು ಬರುತ್ತಿವೆ ಅಂತ ಪತ್ರಕರ್ತ ಇಂದ್ರಜಿತ್‌ ಲಂಕೇಶ್‌ ಆರೋಪ ಮಾಡಿದ್ದಲ್ಲದೆ, ದರ್ಶನ್‌ ಹಿಂಬಾಲಕರ ವಿರುದ್ಧ ಈಗ ಸೈಬರ್‌ ಕ್ರೈಂಗೆ ದೂರು ನೀಡಿದ್ದರ ನಡುವೆಯೂ ದರ್ಶನ್‌ ಪರ ಅಭಿಯಾನಕ್ಕೆ ಸಾವಿರಾರು ಮಂದಿ ಪೋಸ್ಟ್‌ ಮಾಡಿದ್ದಾರೆ. ಸೆಲಿಬ್ರಿಟಿಗಳು ಜತೆಗೆ ರಾಜಕಾರಣಿಗಳು ಕೂಡ ದರ್ಶನ್‌ ಅವರಿಗೆ ಬೆಂಬಲ ಸೂಚಿಸಿ ಟ್ವಿಟ್‌ ಮಾಡಿದ್ದಾರೆ.ʼನಿಮ್ಮ ಸಂಕಷ್ಟದಲ್ಲಿ ನಾವಿದ್ದೇವೆ.ಯಾರು ನಿಮ್ಮ ಜೊತೆಗಿರುತ್ತಾರೋ ಇಲ್ಲವೋ ಗೊತ್ತಿಲ್ಲ.ನಾನಂತೂ ನಿಮ್ಮ ಜತೆಗಿರುತ್ತೇನೆ.ನಿಮ್ಮನ್ನು ನಾವು ಪ್ರತಿಸುತ್ತೇವೆ.ನಿಮಗೆ ನಮ್ಮ ಬೆಂಬಲ ಸದಾ ಇದೆʼ ಎಂದು ಡೆಡ್ಲಿ ಸೋಮ ಖ್ಯಾತಿಯ ನಟ ಆದಿತ್ಯ ಟ್ವಿಟ್‌ ಮಾಡಿದ್ದಾರೆ.

ಬಿಜೆಪಿ ಮುಖಂಡ ಹಾಗೂ ಸಂಸದ ಪಿ.ಸಿ. ಮೋಹನ್‌ ಕೂಡ ದರ್ಶನ್‌ ಪರವಾಗಿ ಟ್ವೀಟ್‌ ಮಾಡಿದ್ದು, ‘ಹಲವು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಕಲಾಸೇವೆ ಸಲ್ಲಿಸುತ್ತಿರುವ ದರ್ಶನ್ ತೂಗುದೀಪರವರು ನನಗೆ ಆತ್ಮೀಯರು. ಚಾಲೆಂಜಿಂಗ್ ಸ್ಟಾರ್ ಯಾರೇ ಕಷ್ಟ ಎಂದರೂ ಸಹಾಯಕ್ಕೆ ನಿಲ್ಲುತ್ತಾರೆ. ರೈತರ ಹೋರಾಟ, ರೈತರ-ಕಲಾವಿದರ ಕಷ್ಟ, ಪ್ರಾಣಿಗಳ ಸಂಕಷ್ಟ ಅಂತ ಬಂದಾಗ ಒಂದು ಹೆಜ್ಜೆ ಮುಂದೆ ಬರುವುದು ದರ್ಶನ್ ಎಂದು ಕರ್ನಾಟಕಕ್ಕೇ ತಿಳಿದಿದೆ. ಯಾವುದೇ ಆಧಾರವಿಲ್ಲದೆ ದರ್ಶನ್ ಅವರ ಮೇಲೆ ಅನಗತ್ಯ ಆರೋಪ ಮಾಡಿ, ಅವರ ತೇಜೋವಧೆಗೆ ಯತ್ನಿಸುತ್ತಿರುವುದು ಕನ್ನಡ ಚಿತ್ರರಂಗಕ್ಕೆ ಶೋಭೆ ತರುವುದಿಲ್ಲ. ಚಿತ್ರರಂಗದ ಹಿರಿಯರು ಹಾಗೂ ವಾಣಿಜ್ಯಮಂಡಳಿ ಮಧ್ಯಪ್ರವೇಶಿಸಿ ಎಲ್ಲಾ ಗೊಂದಲಗಳನ್ನು ನಿವಾರಿಸಬೇಕಾಗಿ ನನ್ನ ವಿನಂತಿ’ ಎಂದು ಉಲ್ಲೇಖಿಸಿದ್ದಾರೆ. ಕೆಲವರ ವಿರೋಧದ ನಡುವೆಯೂ ದರ್ಶನ್‌ ಹಲವರಿಗೆ ಬೇಕಾಗಿರೋದಕ್ಕೆ ಇದು ಸಾಕ್ಷಿ.

error: Content is protected !!