ಶೇ. ೧೦೦ ಸೀಟು ಭರ್ತಿಗೆ ಮನವಿ ಮಾಡಿದ ವಾಣಿಜ್ಯ ಮಂಡಳಿ ನಿಯೋಗ

ಚಿತ್ರಮಂದಿರಗಳಲ್ಲಿ ಶೇಕಡಾ ನೂರರಷ್ಟು ಸೀಟು ಭರ್ತಿಗೆ ಅವಕಾಶ ನೀಡಬೇಕು, ಹಾಗೆಯೇ ಒಳಾಂಗಣ ಚಿತ್ರೀಕರಣಕ್ಕೂ ಅವಕಾಶ ಕೊಡಬೇಕು ಅಂತ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್‌ ನೇತೃತ್ವದ ನಿಯೋಗ ಶನಿವಾರ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದೆ.
ಸಿಎಂ ಅಧಿಕೃತ ನಿವಾಸ ಕಾವೇರಿಯಲ್ಲಿ ಶನಿವಾರ ಬೆಳಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದ ನಿಯೋಗ, ಚಿತ್ರರಂಗದ ಭವಿಷ್ಯ ಕರಾಳವಾಗಿದೆ. ಶೇಕಡಾ 50 ರಷ್ಟು ಸೀಟು ಭರ್ತಿಯೊಂದಿಗೆ ಟಾಕೀಸ್‌ ತೆರೆಯಿರಿ ಅಂದ್ರೆ ಅದು ಅಷ್ಟು ಸುಲಭ ಇಲ್ಲ. ಈಗಿರುವ ಸರ್ಕಾರದ ಆದೇಶದಂತೆ ನಾವು ಶೇಕಡಾ 50 ರಷ್ಟು ಸೀಟು ಭರ್ತಿಯೊಂದಿಗೆ ಟಾಕೀಟ್‌ ತೆರೆದು ಚಿತ್ರ ಪ್ರದರ್ಶನ ನಡೆಸಿದರೆ ಟಾಕೀಸ್‌ ನಿರ್ವಹಣೆಯ ಖರ್ಚು ಕೂಡ ಬರುವುದು ಕಷ್ಟ. ಹಾಗಾಗಿ ಸರ್ಕಾರವೇನಾದರೂ ಶೇಕಡಾ ನೂರರಷ್ಟು ಸೀಟು ಭರ್ತಿಗೆ ಅವಕಾಶ ಮಾಡಿ ಕೊಟ್ಟರೆ, ಚಿತ್ರಮಂದಿರದ ಮಾಲೀಕರು ಬದುಕುತ್ತಾರೆ, ಸಿನಿಮಾ ನಿರ್ಮಾಪಕ ರು ಉಳಿಯುತ್ತಾರೆ. ಇದಕ್ಕೆ ಸರ್ಕಾರ ಅವಕಾಶ ಮಾಡಿಕೊಡಬೇಕು ಎಂಬುದಾಗಿ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದೆ.

ಈ ಸಂಬಂಧ ಮುಖ್ಯಮಂತ್ರಿಗಳಿಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್‌, ಕಾರ್ಯದರ್ಶಿ ಎನ್.ಎಂ. ಸುರೇಶ್‌ ಹಾಗೂ ಊಪಾಧ್ಯಕ್ಷ ಉಮೇಶ್‌ ಉಣಕಾರ್‌, ಚಿತ್ರೋದ್ಯಮದ ಪರವಾಗಿ ಅಧಿಕೃತ ಮನವಿ ಪತ್ರವನ್ನು ನೀಡಿ, ಚಿತ್ರರಂಗದ ಸವಾಲುಗಳು, ಮುಂದಿನ ಪರಿಸ್ಥಿತಿಗಳನ್ನು ವಿವರಿಸಿದೆ. ಮೂಲಕ ಸರ್ಕಾರ ನೂರರಷ್ಟು ಸೀಟು ಭರ್ತಿಗೆ ಅವಕಾಶ ಮಾಡಿಕೊಡ ಬೇಕೆಂದು ಕೇಳಿಕೊಂಡಿದೆ. ಈ ಕುರಿತು ಸಿನಿ ಲಹರಿ ಜತೆಗೆ ಮಾತನಾಡಿದ ವಾಣಿಜ್ಯ ಮಂಡಳಿ ಉಪಾಧ್ಯಕ್ಷ ಉಮೇಶ್‌ ಬಣಕಾರ್‌ ಹೇಳಿದ್ದಿಷ್ಟು…

ʼ ಈಗಿರುವ ಪರಿಸ್ಥಿತಿ ನೋಡಿದರೆ ಶೇಕಡಾ 50 ರಷ್ಟು ಸೀಟು ಭರ್ತಿಯೊಂ ದಿಗೆ ಟಾಕೀಸ್‌ ಒಪನ್‌ ಮಾಡಿ ಅನ್ನೋದು ಉಪಯೋಗ ಇಲ್ಲ. ಯಾಕಂದ್ರೆ ಜನ ಅಷ್ಟು ಸಲುಭವಾಗಿ ಟಾಕೀಸ್‌ ಗೆ ಬರುತ್ತಾರೆ ನ್ನುವ ಗ್ಯಾರಂಟಿ ಇಲ್ಲ. ಹಾಗೊಂದು ವೇಳೆ ನೂರರಷ್ಟು ಸೀಟು ಭರ್ತಿಗೆ ಅವಕಾಶ ಸಿಕ್ಕರೆ ಅವರಿಗೂ ಒಂದು ಧೈರ್ಯ ಬರುತ್ತೆ. ನಿರ್ಮಾಪಕರು ಕೂಡ ಧೈರ್ಯದಿಂದ ಸಿನಿಮಾ ರಿಲೀಸ್‌ ಮಾಡುತ್ತಾರೆ. ಇದೇ ಕಾರಣಕ್ಕೆ ವಾಣಿಜ್ಯ ಮಂಡಳಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ, ಮನವಿ ಸಲ್ಲಿದೆ. ಅದಕ್ಕವರು ಸಕರಾತ್ಮಕ ಸ್ಪಂದನೆ ಮಾಡಿದ್ದಾರೆ. ಇಷ್ಟರಲ್ಲಿಯೇ ಸರ್ಕಾರದ ಆದೇಶ ಹೊರಬೀಳುವ ಸಾಧ್ಯತೆಗಳಿವೆ.

Related Posts

error: Content is protected !!