ಕನ್ನಡ ಚಿತ್ರರಂಗ ಕಂಡ ಅತ್ಯಾದ್ಬುತ ನಟಿ ಇವರು. ಕರುನಾಡಿನ ಹೆಮ್ಮೆಯ ಮನೆಮಗಳು ಅಂದ್ರೂ ಕೂಡ ತಪ್ಪಿಲ್ಲ. ಭರ್ತಿ ಮೂರು ದಶಕಗಳಿಂದ ಬೆಳ್ಳಿತೆರೆಯನ್ನು ಆಳುತ್ತಾ, ಪಂಚಭಾಷಾ ತಾರೆಯಾಗಿ ಮಿನುಗುತ್ತಿರುವ ಮಹಾನಟಿ ಇವ್ರು. ಇದೀಗ ಇವ್ರು ಹಿಂದೆಂದೂ ಕಾಣದ ಹೊಸ ಅವತಾರದೊಂದಿಗೆ ಬೆಳ್ಳಿತೆರೆಯನ್ನು ಬೆಚ್ಚಿಬೀಳಿಸೋದಕ್ಕೆ ಬರುತ್ತಿದ್ದಾರೆ. ಅಂದ ಹಾಗೆ, ಈ ನಟಿಗೆ ಅಡ್ವಾನ್ಸ್ ರೂಪದಲ್ಲಿ ಚೆಕ್ಕೋ ಅಥವಾ ಅಥವಾ ನಗದು ಕಳುಹಿಸಿ ಕೊಡುವ ಮುನ್ನವೇ ಆ ಸ್ಟಾರ್ ಡೈರೆಕ್ಟರ್ ಒಬ್ಬರು ಸಿಗಾರ್' ಕಳುಹಿಸಿ ಕೊಟ್ಟಿದ್ದರಂತೆ. ಅಷ್ಟಕ್ಕೂ, ಆ ಡೈರೆಕ್ಟರ್ ಯಾರು ?
ಸಿಗಾರ್’ ಸಸ್ಪೆನ್ಸ್ ಸೀಕ್ರೆಟ್ ಏನು? ಅದೆಲ್ಲದರ ಥ್ರಿಲ್ಲಿಂಗ್ ಕಹಾನಿಯ ವಿವರ ಇಲ್ಲಿದೆ ನೋಡಿ.
ಮಹಾನಟಿ-ಸ್ಟಾರ್ ಡೈರೆಕ್ಟರ್-ಸಿಗಾರ್ ಎಂದಾಕ್ಷಣ ಸಹಜವಾಗೇ ಕೂತೂಹಲ ಹೆಚ್ಚುತ್ತೆ. ಇನ್ನೂ ಆ ಕುತೂಹಲ ಹಿಡಿದಿಡಲು ಸಾಧ್ಯ ವಿಲ್ಲ. ಹಾಗಾಗಿ ಚಂದನವನದ ಆ ಮಹಾನಟಿ ಹೆಸರನ್ನು ಮೊದಲು ಹೇಳಿಬಿಡ್ತೀವಿ. ಆ ಮಹಾನಟಿ ಬೇರಾರು ಅಲ್ಲ ಒನ್ ಅಂಡ್ ಒನ್ಲೀ ಶ್ರುತಿ.ಅವರ ಸಿಂಗಾರ್ ಕಥೆ ಬಿಚ್ಚಿಡುವ ಮೊದಲು ಕರ್ನಾಟಕ ಮಧ್ಯಪಾನ ಸಂಯಮ ಮಂಡಳಿ'ಯ ಅಧ್ಯಕ್ಷರಾಗಿ ನೇಮಕ ಗೊಂಡಿರುವ ನಟಿ ಶ್ರುತಿಗೆ ಶುಭಾಶಯ ಕೋರಿ ಬಿಡ್ತೇವೆ. ರಾಜ್ಯ ಸರ್ಕಾರ ಹೊಸ ಜವಾಬ್ದಾರಿ ವಹಿಸಿದ ಬೆನ್ನಲ್ಲೇ ನಟಿ ಶ್ರುತಿ ತಮ್ಮ ಮಗಳ ಜೊತೆಗೆ ಧರ್ಮಸ್ಥಳದ ಶ್ರೀ ಮಂಜುನಾಥನ ಸನ್ನಿಧಿಗೆ ಭೇಟಿಕೊಟ್ಟು ಆಶೀರ್ವಾದ ಪಡೆದಿದ್ದಾರೆ. ರಾಜ್ಯದ ಜನರ ಸಹಕಾರ ಹೀಗೆ ಇರಲಿ ಅಭಿಮಾನಿಗಳ ಬೆಂಬಲ ನಿರಂತರವಾಗಿರಲೆಂದು ಬೇಡಿದ್ದಾರೆ. ಈ ನಡುವೆ ಖಾಸಗಿ ಪತ್ರಿಕೆಗೆ ಸಂದರ್ಶನ ನೀಡಿದ್ದು ಶಿವರಾಜ್‌ಕುಮಾರ್, ಪುನೀತ್‌ರಾಜ್‌ಕುಮಾರ್‌ರಂತಹ ಸ್ಟಾರ್ ಹೀರೋಗಳಿಗೆ ಆಕ್ಷನ್ ಕಟ್ ಹೇಳಿರುವ ನಿರ್ದೇಶಕರೊಬ್ಬರು ಮನೆಗೆ
ಸಿಗಾರ್’ ಕಳುಹಿಸಿಕೊಟ್ಟ ಸೀಕ್ರೆಟ್ ರಿವೀಲ್ ಮಾಡಿದ್ದಾರೆ.
`ಸಿಗಾರ್’ ಹಿಡಿದು ಖಡಕ್ ಲುಕ್ ಕೊಟ್ಟರಲ್ಲ ಶ್ರುತಿ !
ನಟಿ ಶ್ರುತಿಯವರ ಮನೆಗೆ ಸಿಗಾರ್' ಕಳುಹಿಸಿಕೊಟ್ಟಿದ್ದು ಬೇರ‍್ಯಾರು ಅಲ್ಲ ಭಜರಂಗಿಯ ಸಾರಥಿ ನಿರ್ದೇಶಕ ಎ ಹರ್ಷ ಅವರು. ಅಷ್ಟಕ್ಕೂ,
ಸಿಗಾರ್’ನ ಎನ್‌ವೆಲಪ್ ಕವರ್‌ನಲ್ಲಿ ಹಾಕಿ ಪೋಸ್ಟ್ ಮಾಡಿದ್ರೋ ಅಥವಾ ಯಾರಾದ್ರೋ ಹುಡುಗರ ಕೈಯಲ್ಲಿ ಕಳುಹಿಸಿ ಕೊಟ್ಟರೋ ಗೊತ್ತಿಲ್ಲ, ಸಿಗಾರ್' ಅಂತೂ ಶ್ರುತಿಯವರ ಮನೆ ತಲುಪಿದೆ. ಇದನ್ನು ನೋಡಿದ ತಕ್ಷಣ ಹರ್ಷ ಅವರಿಗೆ ಕಾಲ್ ಮಾಡಿದ ಶ್ರುತಿ
, ಎಲ್ಲರೂ ಅಡ್ವಾನ್ಸ್ ಕಳುಹಿಸಿಕೊಟ್ಟರೆ, ನೀವು ಸಿಗಾರ್ ಕಳುಹಿಸಿದ್ದೀರಲ್ಲ ಡೈರೆಕ್ಟ್ರೇ .. ಅಂತ ಕಿಂಡಲ್ ಮಾಡಿದ್ದಾರೆ. ಸಿಗಾರ್‌ನ ಕೈಯಲ್ಲಿ ಹಿಡಿಯೋದು ಹೇಗೆ, ಕ್ಯಾಮೆರಾಗೆ ಪೋಸ್ ನಿಡೋದು ಹೇಗೆ ಅಂತ ಪ್ರಾಕ್ಟೀಸ್ ಮಾಡಿಕೊಂಡಿದ್ದಾರೆ. ಯಾಕಂದ್ರೆ, ಭಜರಂಗಿ-೨' ಚಿತ್ರದಲ್ಲಿ ನಟಿ ಶ್ರುತಿಯವರು
ಸಿಗಾರ್’ ಹಿಡಿದು ಖಡಕ್ ಲುಕ್ ಕೊಡ್ಬೇಕು, ಸಿನಿಮಾಪ್ರೇಮಿಗಳನ್ನು ಹುಚ್ಚೆಬಿಸ್ಬೇಕು. ಇದನ್ನ ಮೊದಲ ನೋಟದಲ್ಲೇ ಮಾಡುವಲ್ಲಿ ಶ್ರುತಿ ಯಶಸ್ವಿಯಾಗಿದ್ದಾರೆ.
ಹೊಡೆದಾಡುತ್ತಾರಾ ಅಥವಾ ಕಣ್ಣೋಟದಲ್ಲೇ ಕಟ್ಟಿಹಾಕ್ತಾರಾ ?
೧೯೮೯ ರಿಂದ ಇಲ್ಲಿಯವರೆಗೆ ಸುಮಾರು ೩೦ ವರ್ಷಗಳಿಂದ ಶ್ರುತಿ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಸಿನಿಮಾ ಸೇರಿದಂತೆ ರಾಜಕೀಯ ದಲ್ಲೂ ಗುರುತಿಸಿಕೊಂಡಿರುವ ಶ್ರುತಿ, ತಮ್ಮ ಸಿನಿಮಾ ಕೆರಿಯರ್‌ನಲ್ಲೇ ಹಿಂದೆಂದೂ ಮಾಡಿರದ ಪಾತ್ರವೊಂದನ್ನು ಭಜರಂಗಿ-೨' ಚಿತ್ರದಲ್ಲಿ ಮಾಡಿದ್ದಾರೆ. ಹೋಮ್ಲಿ ಕ್ಯಾರೆಕ್ಟರ್, ಸಾಫ್ಟ್ ರೋಲ್, ಎಮೋಷ ನಲ್ ಪಾತ್ರಗಳಿಗೆ ಜೀವತುಂಬುತ್ತಿದ್ದ ನಟಿ ಶ್ರುತಿ ಇದೇ ಮೊದಲ ಭಾರಿಗೆ ರಗಡ್ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಹಣೆಗೆ ಕುಂಕುಮ, ಕೈತುಂಬಾ ಬಳೆತೊಟ್ಟುಕೊಂಡಿದ್ದರೂ ಕೂಡ ಕೈಲಿ ಹಿಡಿದಿರುವ
ಸಿಗಾರ್’ ಹಾಗೂ ಕ್ಯಾಮೆರಾಗೆ ಕೊಟ್ಟಿರುವ ಪೋಸ್ ಇದೆಯಲ್ಲ ಅದು ಪ್ರೇಕ್ಷಕ ಮಹಾಶಯರನ್ನು ಹುಬ್ಬೇರಿಸುವಂತೆ ಮಾಡ್ತಿದೆ.
ಭಜರಂಗಿ-೨' ಚಿತ್ರದ ಪಾತ್ರಕ್ಕೋಸ್ಕರ ಶ್ರುತಿ ತುಂಬಾ ಬದಲಾಗಿ ದ್ದಾರೆ. ʼಆಸೆಗೊಬ್ಬ ಮೀಸೆಗೊಬ್ಬʼ ಚಿತ್ರದಲ್ಲಿ ಶಿವಣ್ಣನ ಜೊತೆ ಶ್ರುತಿಯವರನ್ನು ನೋಡಿದವರು
ʼಭಜರಂಗಿ-೨’ ನಲ್ಲಿ ಹ್ಯಾಟ್ರಿಕ್ ಹೀರೋ ಜೊತೆ ಶ್ರುತಿ ನೋಡಿದಾಗ ಬೆಚ್ಚಿಬೀಳೋದು ಭಜರಂಗಿ ಮೇಲಾಣೆ ಸತ್ಯ. ಯಾಕಂದ್ರೆ, ಸ್ವತಃ ಶ್ರುತಿಯವರೇ ಈ ಪಾತ್ರದ ಬಗ್ಗೆ ಸಿಕ್ಕಾಪಟ್ಟೆ ಎಕ್ಸೈಟ್ ಆಗಿದ್ದಾರೆ. ನಿರ್ದೇಶಕ ಹರ್ಷ ಅವರು ಪಾತ್ರದ ಬಗ್ಗೆ ನರೇಷನ್ ಕೊಟ್ಟಾಗ ಶ್ರುತಿ ಈ ಪಾತ್ರ ನನ್ನಿಂದ ಮಾಡಲು ಸಾಧ್ಯವೇ ಅಂತ ಹಿಂದೇಟು ಹಾಕಿದ್ದರಂತೆ. ಆದರೆ, ಡೈರೆಕ್ಟರು ಈ ಪಾತ್ರವನ್ನು ನಿಮಗೋ ಸ್ಕರವೇ ಸೃಷ್ಟಿ ಮಾಡಿದ್ದೇನೆ ಎಂದಾಗ ಒಂದು ಕೈ ನೋಡೆಬಿ ಡೋಣ ಅಂತ ಒಪ್ಪಿಕೊಂಡು ಮಾಡಿದ್ದಾರೆ. ಕಣ್ಣೋಟದಲ್ಲೇ ಕಟ್ಟಿಹಾಕಿರುವ ನಟಿ ಶ್ರುತಿ ಎದುರಾಳಿಗಳ ಜೊತೆ ಹೊಡೆದಾಡ್ತಾರಾ ಅಥವಾ ಲುಕ್ಕಲ್ಲೇ ಕೊಲ್ತಾರಾ ಅನ್ನೋದು ಸೆಪ್ಟೆಂಬರ್ ೧೦ರಂದು ಗೊತ್ತಾಗಲಿದೆ. ಗಣೇಶನ ಹಬ್ಬದಂದು `ಭಜರಂಗಿ-೨’ ಚಿತ್ರ ಅದ್ದೂರಿಯಾಗಿ ತೆರೆಗೆ ಬರಲಿದೆ. ಭಜರಂಗಿಯ ಸ್ವಾಗತಕ್ಕೆ ಎಲ್ಲರೂ ಸಜ್ಜಾಗಬೇಕಿದೆ.
ವಿಶಾಲಾಕ್ಷಿ, ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ