ಅಧ್ಯಾತ್ಮದತ್ತ ಒಲವು ತೋರಿದ್ದೇಕೆ ನಟಿ ಚೈತ್ರಾ ಕೋಟೂರ್‌ ?

ಬಿಗ್‌ ಬಾಸ್‌ ಖ್ಯಾತಿಯ ಬರಹಗಾರ್ತಿ ಹಾಗೂ ನಟಿ ಚೈತ್ರಾ ಕೊಟ್ಟೂರು ಅಧ್ಯಾತ್ಮದತ್ತ ವಾಲಿದ್ದಾರೆ. ಎಲ್ಲ ಬಿಟ್ಟು ಮಠ ಸೇರಿದ್ರೂ ಎನ್ನುವ ಹಾಗೆ ಸಿನಿಮಾ, ನಟನೆ, ನಿರ್ದೇಶನದ ಜತೆಗೆ ಬರವಣಿಗೆ ಅಂತೆಲ್ಲ ಅದು ಇದು ಬಿಟ್ಟು ಸದ್ದಿಲ್ಲದೆ ಸುದ್ದಿಯೂ ಮಾಡದೆ ಅವರೀಗ ಬೆಳಗಾವಿಯಲ್ಲಿರುವ ಓಶೋ ಧ್ಯಾನ ಶಿಬಿರದಲ್ಲಿ ಕಾಣಿಸಿಕೊಂಡಿದ್ದಾರೆ. ಚೈತ್ರಾ ಕೊಟೂರು ಅಲ್ಲಿರುವ ಸಾಕ್ಷಿಗೆ ಒಂದು ವಿಡಿಯೊಂದನ್ನು ಅವರು ತಮ್ಮ ಇನ್‌ ಸ್ಟಾಗ್ರಾಂನಲ್ಲಿ ಹಾಕಿಕೊಂಡಿದ್ದಾರೆ. ವಿಚಿತ್ರ ಅಂದ್ರೆ ಇಷ್ಟ ಬೇಗ ಅಧ್ಯಾತ್ಮದತ್ತ ಅವರು ಒಲವು ತೋರಿದಕ್ಕೆ ಕಾರಣವೇನು ಅಂತ.

ಅಂದ ಹಾಗೆ, ಆ ಬಗೆಗಿನ ನಿಗೂಢತೆ ಏನೆಂಬುದರ ಕುರಿತು ಹೆಚ್ಚೇನು ಹೇಳಬೇಕಿಲ್ಲ. ನಟಿ ಚೈತ್ರಾ ಇತ್ತೀಚೆಗೆ ಹೆಚ್ಚು ಸುದ್ದಿ ಆಗಿದ್ದು ಅವರ ಮದುವೆ ಕಾರಣಕ್ಕೆ.ಉದ್ಯಮಿ ನಾಗಾರ್ಜುನ್‌ ಎಂಬುಬರ ಜತೆಗೆ ಸರಳವಾಗಿ ವಿವಾಹವಾಗಿದ್ದರು. ಆದರೆ ಆ ಮದುವೆಗೆ ಎರಡು ಕುಟುಂಬಗಳು ಒಪ್ಪದ ಕಾರಣ ಆ ಮದುವೆ ಪೊಲೀಸ್‌ ಸ್ಟೇಷನ್‌ ಮೆಟ್ಟಲೇರಿತ್ತು.ಕೊನೆಗೆ ಆ ಮದುವೆ ಬಲವಂತವಾಗಿ ನಡೆದಿದ್ದು ಎಂದು ನಾಗಾರ್ಜುನ್‌ ದೂರಿದ್ದರು. ಕನ್ನಡ ಸಂಘಟನೆಯ ಕಾರ್ಯಕರ್ತರು ಎನ್ನಲಾದ ಕೆಲವರು ತಮ್ಮನ್ನು ಬಲವಂತವಾಗಿ ಎಳೆದುಕೊಂಡು ಬಂದು ಮದುವೆ ಮಾಡಿಸಿದ್ದಾರೆಂದು ಆತ ಪೊಲೀಸರ ಮುಂದೆ ಹೇಳಿಕೆ ನೀಡಿದ್ದ.

ಆದರೆ ನಟಿ ಚೈತ್ರಾ ಕೋಟೂರು ಇದನ್ನು ಅಲ್ಲಗಳೆದಿದ್ದರು. ಆತ ನನ್ನನ್ನು ಪ್ರೀತಿಸಿದ್ದ. ಕೊನೆಗೆ ಮೋಸ ಮಾಡಲು ಯತ್ನಿಸಿದ್ದ. ಹಾಗಾಗಿ ದೇವಸ್ಥಾನದಲ್ಲಿ ಸರಳವಾಗಿ ಮದುವೆ ನಡೆದಿತ್ತು ಎಂದಿದ್ದರು. ಕೊನೆಗೆ ಆ ಮದುವೆ ಮುರಿದು ಬಿದ್ದು, ನಟಿ ಚೈತ್ರಾ ಕೋಟೂರು ಆತ್ಮಹತ್ಯೆಗೆ ಯತ್ನಿಸಿದ್ದು ಆಗಿತ್ತು. ಇದೆಲ್ಲ ರಗಳೆಗಳ ನಡುವೆ ಮತ್ತೆ ಎಂದಿನಂತೆ ಸಿನಿಮಾ, ಬರವಣಿಗೆ ಅಂತೆಲ್ಲ ತೋಡಿಸಿಕೊಂಡಿದ್ದ ಚೈತ್ರಾ ಕೋಟೂರು ಈಗ ಅಧ್ಯಾತ್ಮದತ್ತ ವಾಲಿದ್ದಾರೆ. ಬೆಳಗಾವಿಯಲ್ಲಿರುವ ಒಶೋ ಧ್ಯಾನ ಶಿಬಿರದಲ್ಲಿ ಈಗ ಕಾಣಿಸಿಕೊಂಡಿರುವುದು ಕುತೂಹಲ ಮೂಡಿಸಿದೆ.

Related Posts

error: Content is protected !!