ಮತ್ತೆ ಕ್ಯಾಮೆರಾ ಎದುರಿಸಿ ಖುಷಿಪಟ್ಟ ಮೇಘನಾ ರಾಜ್ !

ಈ ಸುದ್ದಿಯನ್ನು ಕೇಳೋದಕ್ಕೆ ಒಂದು ಖುಷಿ. ಈ ಕ್ಷಣಕ್ಕಾಗಿ ಚಿರಂಜೀವಿ ಸರ್ಜಾ ಹಾಗೂ ಮೇಘನಾ ಸರ್ಜಾರ ಅಭಿಮಾನಿಗಳು ಕಾತುರದಿಂದ ಕಾದಿದ್ದರು. ನಟಿ ಮೇಘನಾ ಮತ್ತೆ ಕ್ಯಾಮೆರಾ ಎದುರಿಸಬೇಕು ಎನ್ನುವ ಆಸೆ ಕನಸನ್ನು ಫ್ಯಾನ್ಸ್ ಇಟ್ಟುಕೊಂಡಿದ್ದರು ಆ ಕನಸು ಈಗ ಈಡೇರಿದೆ.

ಜೂನಿಯರ್ ಚಿರುಗೆ ಒಂಭತ್ತು ತಿಂಗಳು ತುಂಬಿದ ದಿನದಂದೇ ಮೇಘನಾ ಕ್ಯಾಮೆರಾ ಮುಂದೆ ಬಂದಿದ್ದಾರೆ. ಈ ಸುಂದರ ಕ್ಷಣವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಕೈಯಲ್ಲಿ ಸ್ಕ್ರಿಪ್ಟ್ ಪೇಪರ್ ಹಿಡಿದಿರುವ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ.

ಅಷ್ಟಕ್ಕೂ, ಇದು ಯಾವ ಚಿತ್ರದ್ದು? ಏನ್ ಕಥೆ ಎಂಬ ಗುಟ್ಟನ್ನ ಮೇಘನಾ ಬಿಟ್ಟುಕೊಟ್ಟಿಲ್ಲ. ಅಂದ್ಹಾಗೇ, ಮೇಘನಾ ಕೈಯಲ್ಲಿ `ಸೆಲ್ಫೀ ಮಮ್ಮಿ ಗೂಗಲ್ ಡ್ಯಾಡಿ’ ಹಾಗೂ ಬುದ್ದಿವಂತ-೨ ಚಿತ್ರಗಳಿವೆ. ಈ ಸಿನಿಮಾದ ಶೂಟಿಂಗ್‌ಗೆ ಮರಳಿದ್ದಾರೋ ಅಥವಾ ಹೊಸ ಸಿನಿಮಾಗೆ ಜೀವತುಂಬುತ್ತಿದ್ದಾರೋ ಇನ್ನಷ್ಟೇ ರಿವೀಲ್ ಆಗ್ಬೇಕಿದೆ.

ಒಟ್ನಲ್ಲಿ ಸರ್ಜಾ ಕುಟುಂಬದ ಅಭಿಮಾನಿ ದೇವರುಗಳ ಕನಸು ನನಸಾಗಿದೆ. ಬೆಳ್ಳಿಮೋಡಗಳಲ್ಲಿ ಮರೆಯಾಗಿರುವ ಚಿರು ಆಶೀರ್ವಾದ ಕೂಡ ಮೇಘನಾ ಮೇಲಿದೆ. ಮೇಘನಾ ಈ ಹಿಂದೆ ಹೇಳಿಕೊಂಡಂತೆ ಮತ್ತೆ ಕ್ಯಾಮೆರಾ ಮುಂದೆ ಬಂದು ಫ್ಯಾನ್ಸ್ಗೆ ಸಪ್ರೈಸ್ ಕೊಟ್ಟಿದ್ದಾರೆ. ಮಗನಿಗೆ ಒಂಭತ್ತು ತಿಂಗಳು ತುಂಬಿದ ಖುಷಿಯನ್ನ ಕ್ಯಾಮೆರಾ ಎದುರಿಸುವ ಮೂಲಕ ಸಂಭ್ರಮಿಸಿದ್ದಾರೆ. ಆದಷ್ಟು ಬೇಗ ತಮ್ಮ ಅಪ್‌ಕಮ್ಮಿಂಗ್ ಸಿನಿಮಾ ಹಾಗೂ ಪಾತ್ರದ ಬಗ್ಗೆ ಮೇಘನಾ ಹೇಳಿಕೊಳ್ಳಲಿ. ಫ್ಯಾನ್ಸ್ ಮಾತ್ರವಲ್ಲ ಬೆಳ್ಳಿಪರದೆಯೂ ಖುಷಿಯಾಗುವಂತೆ ಮಾಡಲಿ ಎಂಬುದೇ ಎಲ್ಲರ ಹಾರೈಕೆ

Related Posts

error: Content is protected !!