Categories
ಸಿನಿ ಸುದ್ದಿ

ಹೊಂಬಾಳೆ ಫಿಲ್ಮ್ಸ್ ಹಬ್ಬದೂಟ; ಸೆಪ್ಟೆಂಬರ್ 22ಕ್ಕೆ ಸಿನಿ ಪ್ರೇಮಿಗಳಿಗೆ ಬಾಳೆದೆಲೆ ಬಾಡೂಟ !

ಗಂಧದಗುಡಿಯಲ್ಲಿ ಹೊಡೆದ ಹೊಂಬಾಳೆ ಗೊನೆಗೆ ಇವತ್ತು ಪಕ್ಕದ ರಾಜ್ಯದಲ್ಲಿ ಮಾತ್ರವಲ್ಲ ಹೊರದೇಶದಲ್ಲೂ ಬೇಡಿಕೆ‌ ಇದೆ. ಅದಕ್ಕೆ ಕಾರಣ ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ನಲ್ಲಿ ನಿರ್ಮಾಣಗೊಳ್ಳುವ ಚಿತ್ರಗಳು‌ ಸಿನಿಮಾ ಪ್ರೇಕ್ಷಕರಿಗೆ ಬಾಳೆದೆಲೆಯಲ್ಲಿ ಹಬ್ಬದೂಟ ಸವಿದಂತಿರುತ್ತದೆ. ಅಟ್ ದಿ‌ ಸೇಮ್ ಟೈಮ್ ಬಾಳೆದೆಲೆಯಲ್ಲಿಯೇ ಬಿರಿಯಾನಿ ಬಡಿದ್ಹಂಗೆ ಇರುತ್ತೆ. ಸದ್ಯ ಹಾಟ್ ಅಂಡ್ ಸ್ಮೈಸಿ ಸಮಾಚಾರ್ ಅಂದರೆ ಹೊಂಬಾಳೆ ಮುಖ್ಯಸ್ಥರು ಸೆಪ್ಟೆಂಬರ್ 22 ರಂದು ಹಬ್ಬದೂಟ ಬಡಿಸೋದಕ್ಕೆ ರೆಡಿಯಾಗಿರುವುದು.

ಹೌದು, ಪ್ರತಿಯೊಬ್ಬರಲ್ಲೂ ಹಸಿವಿದೆ, ಪ್ರತಿ ಅಗಳಿನಲ್ಲೂ ತಿನ್ನುವವರ ಹೆಸರಿದೆ.
‘ಅನ್ನದಾತೋ ಸುಖೀಭವ’ ಹೀಗಂತ ಬಾಳೆದೆಲೆಯಲ್ಲಿಯೇ ಬರೆದು ತಮ್ಮ ಹೊಂಬಾಳೆಯ 12ನೇ ಚಿತ್ರದ ಟೈಟಲ್ ಹಾಗೂ ಫಸ್ಟ್ ಲುಕ್ ನ ಇದೇ ಸೆಪ್ಟೆಂಬರ್ 22 ರಂದು ರಿವೀಲ್ ಮಾಡುವುದಾಗಿ ಹೊಂಬಾಳೆ ಮುಖ್ಯಸ್ಥರು ಸೋಷಿಯಲ್ ಮೀಡಿಯಾ ದಲ್ಲಿ ಅನೌನ್ಸ್ ಮಾಡಿದ್ದಾರೆ.

ಹೊಂಬಾಳೆಯ 12ನೇ ಚಿತ್ರದ ಹೀರೋ ಯಾರು? ನಿರ್ದೇಶಕರು ಯಾರು? ಈ ಕೂತೂಹಲದ ಪ್ರಶ್ನೆಗೆ ಉತ್ತರ ಬಾಳೆದೆಲೆಯ ಪೋಸ್ಟರ್ ಉತ್ತರ ಕೊಟ್ಟಿಲ್ಲ. ಆದರೆ, ಕಳೆದೆರಡು ದಿನಗಳ ಹಿಂದೆ ರಾಜಕುಮಾರ ಸಾರಥಿ ಸಂತೋಷ್ ಆನಂದ್ ರಾಮ್ ‌ಅವರು, ಪವರ್ ಸ್ಟಾರ್ ಗೆ ಮತ್ತೆ ಆಕ್ಷನ್ ಕಟ್ ಹೇಳ್ತಿರುವುದಾಗಿ ತಿಳಿಸಿದ್ದರು. ಹ್ಯಾಟ್ರಿಕ್ ಬಾರಿಸೋ ಜುಗಲ್ ಬಂಧಿಗೆ ಹೊಂಬಾಳೆ ಸಂಸ್ಥೆ ದುಡ್ಡುಹಾಕುವ ಸುದ್ದಿ ಈ ಹಿಂದೆಯೇ ಹೊರಬಿದ್ದಿತ್ತು. ಹೀಗಾಗಿ, ಹೊಂಬಾಳೆ ಬ್ಯಾನರ್ ನ 12ನೇ ಚಿತ್ರ ಪುನೀತ್-ಸಂತೋಷ್ ಆನಂದ್ ರಾಮ್ ಕಾಂಬೋದ ಮೂರನೇ ಚಿತ್ರ ಆಗಿರ್ಬೋದು ಅಂತ ಪ್ರಿಡಿಕ್ಟ್ ಮಾಡ್ಬೋದು.

ಸದ್ಯಕ್ಕೆ ಹೊಂಬಾಳೆ‌ ಫಿಲ್ಮ್ಸ್ ಸಿನಿಮಾ ತೋಟದಲ್ಲಿ ಆರು ಚಿತ್ರಗಳು ಅರಳುವ ಹಂತದಲ್ಲಿವೆ. ಕೆಜಿಎಫ್ ಚಾಪ್ಟರ್ 2, ಸಲಾರ್, ಭಗೀರ, ದ್ವಿತ್ವ, ರಿಚರ್ಡ್ ಆಂಟನಿ, ಕಾಂತಾರ, ಹೀಗೆ ಬ್ಯಾಕ್ ಟು‌ ಬ್ಯಾಕ್ ಚಿತ್ರಗಳು ಅದ್ದೂರಿಯಾಗಿ ನಿರ್ಮಾಣಗೊಳ್ತಿವೆ.

ಕೆಜಿಎಫ್ ಚಾಪ್ಟರ್ ೨ ಹಾಗೂ ಸಲಾರ್ ಗಾಗಿ ಇಡೀ ಇಂಡಿಯನ್ ಸಿನಿಮಾ ಇಂಡಸ್ಟ್ರಿಎದುರುನೋಡ್ತಿದೆ. ಈ ಮಧ್ಯೆಯೇ ಒಂದಾದ ಮೇಲೊಂದರಂತೆ ಹೊಂಬಾಳೆ ಸಂಸ್ಥೆ ಸಿನಿಮಾ ಅನೌನ್ಸ್ ಮಾಡ್ತಿದೆ. ಸೆ.22 ರಂದು 12 ನೇ ಚಿತ್ರದ ಶೀರ್ಷಿಕೆ ಹಾಗೂ ಫಸ್ಟ್ ಲುಕ್ ಹೊರಬರಲಿದೆ. ಹೇಗಿರಲಿದೆ ಟೈಟಲ್ ಕಮ್ ಫಸ್ಟ್ ಲುಕ್ ಜಸ್ಟ್ ವೇಯ್ಟ್ ಅಂಡ್ ವಾಚ್.

ವಿಶಾಲಾಕ್ಷಿ, ಎಂಟರ್ ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಮೈಸೂರಲ್ಲೊಂದು ಮ್ಯೂಸಿಕಲ್‌ ಲವ್‌ಸ್ಟೋರಿ! ಅನಿವಾಸಿ ಕನ್ನಡಿಗನೊಬ್ಬನ ಲವ್‌ ಹಿಸ್ಟರಿ


ಮೈಸೂರು ಅಂದಾಕ್ಷಣ ನೆನಪಾಗೋದೇ ಅರಮನೆ, ದಸರಾ ವೈಭವ. ಈಗ ಮೈಸೂರು ಹೆಸರಿನ ಸಿನಿಮಾವೊಂದು ಸದ್ದಿಲ್ಲದೆಯೇ ಚಿತ್ರೀಕರಣಗೊಂಡಿದೆ. ಹೌದು, ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಮೈಸೂರು ಹೆಸರಿನ ಸಿನಿಮಾ ರೆಡಿಯಾಗಿದ್ದು, ಇನ್ನೇನು ಪ್ರೇಕ್ಷಕರ ಮುಂದೆ ಬರೋಕೆ ಸಜ್ಜಾಗುತ್ತಿದೆ. ಇದು ರಾಜ್ಯದಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗನೊಬ್ಬನ ಲವ್‌ಸ್ಟೋರಿ ಹೊಂದಿದೆ.

ಸದ್ಯ ಚಿತ್ರೀಕರಣಗೊಂಡಿರುವ ಈ ಚಿತ್ರ ಬೆಂಗಳೂರು, ಮೈಸೂರು, ಚಿಕ್ಕಮಗಳೂರು, ಉಡುಪಿ, ಭುವನೇಶ್ವರ್ ಇತರೆ ಸ್ಥಳಗಳಲ್ಲಿ ಸುಮಾರು ನಲವತ್ತು ದಿನಗಳ ಕಾಲ ಚಿತ್ರೀಕರಣ ನಡೆದಿದೆ. ಕಿರುತೆರೆಯಲ್ಲಿ ಕೆಲಸ ಮಾಡಿ ಅನುಭವ ಇರುವ ವಾಸುದೇವ ರೆಡ್ಡಿ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಎಸ್. ಆರ್. ಕಂಬೈನ್ಸ್ ಬ್ಯಾನರ್‌ನಲ್ಲಿ ವಾಸುದೇವ ರೆಡ್ಡಿ ಚಿತ್ರವನ್ನು ನಿರ್ಮಿಸಿದ್ದಾರೆ. ಜಗದೀಶ್ (ಜೆ.ಕೆ), ಕೆ.ಆರ್.ಅಪ್ಪಾಜಿ (ಕೊಡವತ್ತಿ) ಈ ಚಿತ್ರದ ಸಹ‌ ನಿರ್ಮಾಪಕರಾಗಿದ್ದಾರೆ.


ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ವರ್ಷಗಳಿಂದ ಕಲಾವಿದನಾಗಿ ಗುರುತಿಸಿಕೊಂಡಿರುವ ಜ್ಯೂನಿಯರ್ ನರಸಿಂಹರಾಜು ಅವರ ಸಾರಥ್ಯದಲ್ಲಿ ಈ ಚಿತ್ರ ತಯಾರಾಗುತ್ತಿದೆ ಎಂಬುದು ವಿಶೇಷ.
ಸಂವಿತ್ ಈ ಚಿತ್ರದ ನಾಯಕರಾಗಿದ್ದಾರೆ. ಅವರು ತೆಲುಗು, ಬಂಗಾಳಿ, ಭೋಜಪುರಿ ಭಾಷೆಯ ಚಿತ್ರಗಳಲ್ಲಿ ಅಭಿನಯಿಸಿರುವ ಇವರಿಗೆ ಕನ್ನಡದ ಮೊದಲ ಚಿತ್ರವಿದು. ಇನ್ನು, ಪೂಜಾ ಈ ಚಿತ್ರದ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

ಜೂ.ನರಸಿಂಹರಾಜು, ಸತ್ಯಜಿತ್‌, ಕುರಿ ಪ್ರತಾಪ್, ಭಾಸ್ಕರ್ ಶೆಟ್ಟಿ, ಅಶೋಕ್ ಹೆಗ್ಡೆ, ಜೈ ಶ್ರೀ, ರವಿಕುಮಾರ್‌ ಇತರರು ಈ ಚಿತ್ರದಲ್ಲಿದ್ದಾರೆ. ರಘು ಶಾಸ್ತ್ರಿ, ರವಿಶಂಕರ್ ನಾಗ್, ಅನಿತಕೃಷ್ಣ ಬರೆದಿರುವ ಹಾಡುಗಳಿಗೆ ರಮಣಿ ಸುಂದರೇಶನ್, ಅನಿತಕೃಷ್ಣ, ವಿಜಯ್ ರಾಜ್ ಸಂಗೀತ ನೀಡಿದ್ದಾರೆ.
ಕೃಷ್ಣ ಮಳವಳ್ಳಿ ಸಂಭಾಷಣೆ ಬರೆದಿದ್ದಾರೆ. ಭಾಸ್ಕರ್ ವಿ ರೆಡ್ಡಿ ಛಾಯಾಗ್ರಹಣವಿದೆ. ಸಿದ್ದು ಭಗತ್ ಸಂಕಲನ ಮಾಡಿದರೆ, ಸ್ಟಾರ್ ನಾಗಿ, ಮೈಸೂರು ರಾಜು, ಸುಧಾಕರ್ ವಸಂತ್ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ಶ್ರೀಕಾಂತ್ ಸಾಹಸವಿದೆ.

Categories
ಸಿನಿ ಸುದ್ದಿ

‘ಮಚ್ಚಾ ನಾನ್ ಇದಿನೋ’ ಎಂದಿದ್ದರು ಚಿರು; ಸೈಮಾ ಅಂಗಳದಲ್ಲಿ ಸಾಬೀತು- ಗೆಳೆಯ ಪನ್ನಗನಿಗೆ ಬೆಸ್ಟ್ ಡೈರೆಕ್ಟರ್ ಅವಾರ್ಡ್!

ಡೋಂಟ್ ವರೀ ಮಚ್ಚಾ ನಾನ್ ನಿನ್ನ ಜೊತೆ ಇರುತ್ತೀನಿ ಹೀಗಂತ ಗೆಳೆಯ ಪನ್ನಗನಿಗೆ ಚಿರು ಸದಾ ಹೇಳ್ತಿದ್ದಂತಹ ಮಾತು. ಇದ್ದಷ್ಟು ದಿನ ಕೊಟ್ಟ ಮಾತಿಗೆ ಬದ್ದರಾಗಿದ್ದರು, ದೋಸ್ತಿಯ ಬೆನ್ನಿಗೆ ನಿಂತಿದ್ದರು. ಜೀವದ ಗೆಳೆಯ ಪನ್ನಗನ ಪ್ರತಿ ಹೆಜ್ಜೆಯಲ್ಲೂ ಹೆಜ್ಜೆಹಾಕಿದರು. ಇದೀಗ ದೈಹಿಕವಾಗಿ ಇಲ್ಲದ ಕ್ಷಣಗಳಲ್ಲೂ ಸ್ನೇಹಿತ ಪನ್ನಗನ ಯಶಸ್ಸಿಗೆ ಪರೋಕ್ಷವಾಗಿ ಕಾರಣರಾಗಿದ್ದಾರೆ ಯುವಸಾಮ್ರಾಟ್ ಚಿರಂಜೀವಿಯವರು. ಅದ್ಹೇಗೆ? ಎಂಥ? ಎಂಬುದರ ಕಥನ ಚಿಕ್ಕದಾಗಿ ನಿಮ್ಮ ಮುಂದೆ.

ಸ್ಯಾಂಡಲ್‌ವುಡ್‌ನ ಯುವಸಾಮ್ರಾಟ್ ಚಿರಂಜೀವಿ ಹಾಗೂ ಪನ್ನಗಭರಣ ಇಬ್ಬರು ಬೆಸ್ಟ್ ಫ್ರೆಂಡ್ಸ್. ಬರೀ ಬೆಸ್ಟ್ ಫ್ರೆಂಡ್ಸ್ ಅಲ್ಲ ಇಬ್ಬರು ಪ್ರಾಣಸ್ನೇಹಿತರು, ಜೀವದ ಗೆಳೆಯರು, ಕುಚುಕುಗಳು, ಚಡ್ಡಿದೋಸ್ತ್ ಗಳು ಎಲ್ಲಕ್ಕಿಂತ ಮಿಗಿಲಾಗಿ ಒಡಹುಟ್ಟಿದ ಅಣ್ಣತಮ್ಮಂದ್ರಿಗೆ ಸೆಡ್ಡು ಹೊಡೆದಂತೆ ಬಾಳಿ ತೋರಿಸಿದವರು. ರಕ್ತ ಹಂಚಿಕೊಂಡು ಹುಟ್ಟಿದವರಿಗಿಂತ ಮಿಗಿಲಾಗಿದ್ದ ಇವರಿಬ್ಬರನ್ನು ನೋಡಿ ಗೆಳೆತನ ಅಂದ್ರೆ ಹಿಂಗಿರಬೇಕು, ದೋಸ್ತಿ ಅಂದ್ರೆ ಹಿಂಗಿರಬೇಕು ಅಂತ ಮೆಚ್ಚುಗೆ ಪಡುತ್ತಿದ್ದರು. ಚಿರು ಹಾಗೂ ಪನ್ನಗ ಒಂದೇ ತಟ್ಟೆಯಲ್ಲಿ ತಿನ್ನುತ್ತಿದ್ದರು, ಕಷ್ಟ-ಸುಖ-ನೋವು-ನಲಿವಲ್ಲಿ ಜತೆಯಾಗಿದ್ದರು. ಸೋಲು-ಗೆಲುವು ಎಲ್ಲವನ್ನೂ ಕಂಡುಂಡು ಆಕಾಶದೆತ್ತರಕ್ಕೆ ಬೆಳೆದುನಿಲ್ಲೋಕೆ ಸಕಲ ತಯ್ಯಾರಿ ಮಾಡಿಕೊಂಡಿದ್ದರು. ವಾಯಪುತ್ರ ಚಿರು ಹಾಗೂ ಪ್ರಜ್ವಲ್ ಕಾಂಬಿನೇಷನ್‌ನಲ್ಲಿ ಮಹಾಸಿನಿಮಾ ಮಾಡೋದಕ್ಕೆ ನಿರ್ದೇಶಕ ಪನ್ನಗ ಪ್ಲ್ಯಾನ್ ಕೂಡ ಮಾಡಿದ್ದರು. ಹೀಗಿರುವಾಗಲೇ ಹೇಳದೇ ಕೇಳದೇ ಚಿರು ಉಸಿರು ಚೆಲ್ಲಿದರು. ಮುಂದೆಂದೂ ತಿರುಗಿ ಬಾರದ ಲೋಕಕ್ಕೆ ಹೊರಟೆಹೋದರು.

ರಾಜಮಾರ್ತಾಂಡ ಚಿರು ದೈಹಿಕವಾಗಿ ಕಣ್ಮರೆಯಾಗಿರಬಹುದು, ಆದರೆ ಎಲ್ಲರ ಕಣ್ಣಲ್ಲೂ, ಮನಸ್ಸಲ್ಲೂ, ಹೃದಯದಲ್ಲೂ ಶಿವಾರ್ಜುನನಾಗಿ ಅಚ್ಚಳಿಯದೇ ಉಳಿದಿದ್ದಾರೆ. ಚಿರು ಕುಟುಂಬಸ್ತರು ಮಾತ್ರವಲ್ಲ ಕರುನಾಡ ಮಂದಿ ಚಿರು ಬಿಟ್ಟೋದ ನೆನಪುಗಳನ್ನು ಆಗಾಗ ಮೆಲುಕು ಹಾಕ್ತಾರೆ. ಈ ರೀತಿಯಾಗಿ ಎಲ್ಲರೂ ನೆನಪಿಸಿಕೊಳ್ಳುವಂತೆ ಬಾಳಿಬದುಕಿದ ವಾಯುಪುತ್ರ ಚಿರಂಜೀವಿ ಸರ್ಜಾ, ತನ್ನ ಜೀವದ ಗೆಳೆಯನ ಯಶಸ್ಸಿಗೆ ಪರೋಕ್ಷವಾಗಿ ಕಾರಣರಾಗಿದ್ದಾರೆ. ದೈಹಿಕವಾಗಿ ಇಲ್ಲದ ಹೊತ್ತಲ್ಲೂ ಸ್ನೇಹಿತ ಪನ್ನಗಭರಣರ ಯಶಸ್ಸಿಗೆ ಬೆಂಗಾವಲಾಗಿ ನಿಂತಿದ್ದಾರೆ. ಬದುಕಿದ್ದಾಗ ಸದಾ ಹೇಳುತ್ತಿದ್ದ ಡೋಂಟ್ ವರೀ ಮಚ್ಚಾ ನಾನ್ ನಿನ್ನ ಜೊತೆ ಇರುತ್ತೀನಿ'ಎನ್ನುವ ಮಾತಿಗೆ ಯುವಸಾಮ್ರಾಟ್ ಬದ್ದರಾಗಿದ್ದಾರೆ. ಸೈಮಾ ಅಂಗಳದಲ್ಲಿ ಪ್ರಶಸ್ತಿ ಸ್ವೀಕರಿಸಿದ ಪನ್ನಗಭರಣ ಚಿರು ನನಗೆ ಲಕ್ಕಿಚಾರ್ಮ್’ ಅಂತ ಹೇಳಿಕೊಂಡಿದ್ದಾರೆ.

2021ರ ಅದ್ಧೂರಿ ಸೈಮಾಗೆ ತೆರೆಬಿದ್ದಿದೆ. ಕನ್ನಡದ ನಿರ್ದೇಶಕ ಪನ್ನಗಭರಣರ ‘ಫ್ರೆಂಚ್ ಬಿರಿಯಾನಿ’ ಚಿತ್ರದ ನಿರ್ದೇಶನಕ್ಕೆ 2020ರ ಸೈಮಾ ಬೆಸ್ಟ್ ಡೈರೆಕ್ಟರ್ ಅವಾರ್ಡ್ ಸಿಕ್ಕಿದೆ. ಅತ್ಯುತ್ತಮ ನಿರ್ದೇಶಕನ ಪ್ರಶಸ್ತಿ ಮುಡಿಗೇರಿಸಿಕೊಂಡ ಪನ್ನಗಭರಣ ಇಡೀ ಚಿತ್ರತಂಡಕ್ಕೆ ಅವಾರ್ಡ್‌ ಅನ್ನು ಡೆಡಿಕೇಟ್ ಮಾಡಿದರು. ನನ್ನ ಕನಸು ನನಸಾಯ್ತು ಅಂತ ಸಂತೋಷಪಟ್ಟು ಸಂಭ್ರಮಿಸಿದ ಪನ್ನಗಭರಣ ಜೀವದ ಗೆಳೆಯ ಹೊತ್ತುತಂದ ಅದೃಷ್ಟಕ್ಕೆ ಅಚ್ಚರಿಗೊಂಡರು ಜೊತೆಗೆ ಆಕಾಶಕ್ಕೆ ಕೈಮುಗಿದರು.

ಹೌದು, ಸೈಮಾ ಅಂಗಳಕ್ಕೆ ಹೋಗುವಾಗ ಪನ್ನಗ ಚಿರುನಾ ಜೊತೆಗೆ ಕರ್ಕೊಂಡು ಹೋಗಿದ್ದರು. ಅದ್ಹೇಗೆ ಅಂದರೆ ಪನ್ನಗ ತೊಟ್ಟಿದ್ದ ಬ್ಲೇಜರ್ ಕಾಲರ್ ನಲ್ಲಿ ಚಿರು ಕಂಗೊಳಿಸುತ್ತಿದ್ದರು. ಪನ್ನಗರ ಪತ್ನಿ ನಿಖಿತಾ ಪ್ರಿಯಾಭರಣಗೆ ಚಿರು ಹಾಗೂ ಪನ್ನಗರ ನಡುವಿದ್ದ ಪ್ರೀತಿ ಬಾಂದವ್ಯದ ಬಗ್ಗೆ ಚೆನ್ನಾಗಿಯೇ ಗೊತ್ತು ಹಾಗೇ ಹತ್ತಿರದಿಂದ ನೋಡಿದ್ದಾರೆ. ಹೀಗಾಗಿಯೇ, ಬ್ಲೇಜರ್ ನ ಕಾಲರ್ ನಲ್ಲಿ ಯುವಸಾಮ್ರಾಟ್ ಫೋಟೋ ಪ್ರಿಂಟ್ ಹಾಕಿಸಿದರು. ಇದನ್ನೆಲ್ಲಾ ನೋಡಿ ಸ್ವತಃ ಪನ್ನಗ ಕೂಡ ಅಚ್ಚರಿಗೊಂಡರು. ಸೈಮಾ ಅಂಗಳದಲ್ಲಿ ದೋಸ್ತಿ ಜೊತೆ ಧಗಧಗಿಸಿದರು. ಅಲ್ಲಿಂದ ವಾಪಾಸ್ ಬರುವಾಗ ಬೆಸ್ಟ್ ಡೈರೆಕ್ಟರ್ ಅವಾರ್ಡ್ ಪಡೆದುಕೊಂಡು, ಕಾಲರ್ ಪಟ್ಟಿ ಎಗರಿಸುತ್ತಲೇ ಹೊರಬಂದರು ಪನ್ನಗ.

ಇದನ್ನೆಲ್ಲಾ ನೋಡಿದಾಗ ಪನ್ನಗ ಯಶಸ್ಸಿಗೆ ಚಿರು ಪರೋಕ್ಷವಾಗಿ ಬೆನ್ನೆಲುಬಾಗಿ ನಿಂತಿದ್ದಾರೆ ಅನ್ಸುತ್ತೆ. ಸ್ವರ್ಗದಿಂದಲೇ ಗೆಳೆಯನ ಈ ಸೈಮಾ ಸಕ್ಸಸ್ ಗೆ ಆಶೀರ್ವಾದ ಮಾಡಿದ್ದಾರೆ ಎನಿಸುತ್ತೆ. ಎನಿವೇ, ನಿರ್ದೇಶಕ ಪನ್ನಗ ಚಿರುನಾ ಲಕ್ಕಿ ಚಾರ್ಮ್ ಎಂದು‌ ನಂಬಿದ್ದಾರೆ. ಅವರ ನಂಬಿಕೆಗೆ ಸೈಮಾ ಕೊಟ್ಟಿರುವ ಬೆಸ್ಟ್ ಡೈರೆಕ್ಟರ್ ಅವಾರ್ಡ್ ಸಾಕ್ಷಿ . ಒಟ್ಟಿನಲ್ಲಿ ನಂಬಿಕೆಯೇ ದೇವರು, ಆ ದೇವರು ನಾವು ನಂಬಿದವರು ಅಲ್ಲವೇ.

ವಿಶಾಲಾಕ್ಷಿ , ಎಂಟರ್ ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಯಜಮಾನರ ಕೈ ಸೇರಿದ ಸೈಮಾ ಕಿರೀಟ !

ಚಾಲೆಂಜಿಂಗ್ ಸ್ಟಾರ್ ದರ್ಶನ್ ಯಜಮಾನ ಚಿತ್ರಕ್ಕೆ ಸೈಮಾ ಪ್ರಶಸ್ತಿ ಸಿಕ್ಕಿದೆ. ಒಡೆಯನ ಅನುಪಸ್ಥಿತಿಯಲ್ಲಿ ಅತ್ಯುತ್ತಮ ನಾಯಕ ನಟ ಪ್ರಶಸ್ತಿಯನ್ನು ಯಜಮಾನ ಚಿತ್ರದ ನಿರ್ಮಾಪಕಿ ಶೈಲಜಾ ನಾಗ್ ‌ಅವರು ಸ್ವೀಕರಿಸಿದ್ದರು. ಹೈದ್ರಾಬಾದ್ ನಿಂದ ಮರಳಿದ ಬೆನ್ನಲ್ಲೇ ಸೈಮಾ ಅವಾರ್ಡ್ ನ ಚಕ್ರವರ್ತಿಗೆ ತಲುಪಿಸಿದ್ದಾರೆ. ಖುಷಿ ಖುಷಿಯಾಗಿ ಕ್ಯಾಮೆರಾಗೆ ಒಂದು ಪೋಸ್ ಕೊಟ್ಟಿದ್ದಾರೆ. ಆ ಸಂತೋಷದ ಗಳಿಗೆಯ ಪಿಕ್ಚರ್ ಇದು.

ಅಂದ್ಹಾಗೇ,2021ರ ಸೈಮಾ ಅವಾರ್ಡ್ ಹೈದ್ರಾಬಾದ್ ಅಖಾಡದಲ್ಲಿ ಅದ್ದೂರಿಯಾಗಿ ತೆರೆಬಿದ್ದಿದೆ. ಯಾವತ್ತೂ ಕೂಡ ಸಿನಿಮಾ ಚಿತ್ರೋತ್ಸವದಲ್ಲಿ ಚಕ್ರವರ್ತಿ ಭಾಗಿಯಾಗಲ್ಲ. ಅದಕ್ಕೆ ಬಲವಾದ ಕಾರಣ ಇದೆ.

ಗುಂಪಲ್ಲಿ ಗೋವಿಂದ ಅಂತ ಎದ್ದುಬರುವ ಜಾಯಮಾನ ಗಂಧದಗುಡಿಯ ಮಂದಿಯ ಕಲಾವಿದರದ್ದಲ್ಲ‌ ಬಿಡಿ.ಯಾವತ್ತು ಕನ್ನಡ ಚಿತ್ರರಂಗದ ಸಿನಿಮಾ ಮಂದಿಗೆ ಫ್ರಂಟ್ ರೋ ನಲ್ಲಿ ಕೂರೋದಕ್ಕೆ ಅವಕಾಶ ಸಿಗುತ್ತೋ, ಅವತ್ತು ಫಿಲ್ಮ್ ಫೆಸ್ಟಿವಲ್ ನಲ್ಲಿ ಭಾಗಿಯಾಗ್ತೇನೆ. ಅಲ್ಲಿವರೆಗೂ, ಯಾವುದೇ ಕಾರಣಕ್ಕೆ ಚಿತ್ರೋತ್ಸವಕ್ಕೆ ಬಂದು ಹಿಂದೆ ಎಲ್ಲೋ ಮೂಲೆಯಲ್ಲಿ ಕನ್ನಡದ ಕಲಾವಿದರೆಲ್ಲ ಕೂರೋದಕ್ಕೆ ನಂಗೆ ಇಷ್ಟವಿಲ್ಲ.

ಹೀಗಾಗಿ, ನಾನು ಬರುವುದಿಲ್ಲ ಎನ್ನುವ ತೀರ್ಮಾನ ಡಿಬಾಸ್ ದರ್ಶನ್ ರದ್ದು. ಅವರ ನಿರ್ಧಾರ ಸರಿಯಾಗಿದೆ ಬಿಡ್ರಿ. ಯಾವತ್ತು ಕನ್ನಡ ಚಿತ್ರರಂಗದ ಸಾಧಕರನ್ನ ಫಿಲ್ಮ್ ಫೆಸ್ಟಿವಲ್ ನಲ್ಲಿ ಮೊದಲ ಸಾಲಿನಲ್ಲಿ ಕೂರಿಸುವ ತೀರ್ಮಾನಕ್ಕೆ ಚಿತ್ರೋತ್ಸವದ ಮಂದಿ ಬರ್ತಾರೋ, ಅಂದೇ ಬಾಕ್ಸ್ ಆಫೀಸ್ ಸುಲ್ತಾನ್ ಹೋಗಲಿ ಅಲ್ಲವೇ.‌

Categories
ಸಿನಿ ಸುದ್ದಿ

ಪೆಟ್ರೋಮ್ಯಾಕ್ಸ್‌ ಟ್ರೇಲರ್‌ನಲ್ಲಿದೆ ಮಜ ಎನಿಸೋ ಡೈಲಾಗ್ಸ್!‌ ನಗುವಿನಷ್ಟೇ, ಬೆಳಕು ಹರಿಸೋ ಸಂದೇಶವೂ ಇಲ್ಲಿದೆಯಂತೆ!!

“ವಾರ್ತೆಗಳು ಓದುತ್ತಿರುವವರು ಗೋಪಾಲ ಉಲ್ಲಾಳ. ಕಂದಕದಲ್ಲಿ ಬೇಸಾಯ ಮಾಡಲು ಸುಮಾರು ೬೫ ವರ್ಷದ ವ್ಯಕ್ತಿ ಮೃತಪಟ್ಟಿರೋದು ಬೆಳಕಿಗೆ ಬಂದಿದೆ. ಸಾಮಾನ್ಯವಾಗಿ ಹೊಲ, ಗದ್ದೆ, ತೋಟಗಳಲ್ಲಿ ಬೇಸಾಯ ಮಾಡುವ ಪದ್ಧತಿ ಬಿಟ್ಟು ನೇರವಾಗಿ ಕಂದಕಕ್ಕೆ ಬಿದ್ದಿರುವ ಬಗ್ಗೆ ಕೃಷಿ ಸಚಿವರು ಬೇಸರ ವ್ಯಕ್ತಪಡಿಸಿದ್ದಾರೆ. ಈಗ ಜಾಹಿರಾತು. ನಂತರ ವಾರ್ತೆಗಳು ಮುಂದುವರೆಯುವುದು…”
ಸದ್ಯದ ಮಟ್ಟಿಗೆ ಮೇಲಿನ ಈ ಡೈಲಾಗ್‌ಗಳು ಸಾಕಷ್ಟು ಸುದ್ದಿ ಮಾಡುತ್ತಿವೆ. ಹೌದು, ಈ ಡೈಲಾಗ್‌ಗಳು ಜೋರು ಸುದ್ದಿಯಾಗಿರೋದಂತೂ ನಿಜ. ಅದು “ಪೆಟ್ರೋಮ್ಯಾಕ್ಸ್”‌ ಸಿನಿಮಾದ್ದು.

“ಪೆಟ್ರೋಮ್ಯಾಕ್ಸ್‌” ಅಂದಾಕ್ಷಣ, ಬೇರೆ ಏನೇನೋ ನೆನಪಾಗುತ್ತೆ. ಆದರೆ, ಇದು ಅದಲ್ಲ. ಬದುಕಿಗೊಂದು ಭರವಸೆ ಮೂಡಿಸಿದ್ದೇ ಈ ಪೆಟ್ರೋಮ್ಯಾಕ್ಸ್‌ ಅನ್ನೋದನ್ನು ಇಡೀ ತಂಡ ಹೇಳುತ್ತಿದೆ. ಅಂದಹಾಗೆ, ಇದು ವಿಜಯ ಪ್ರಸಾದ್‌ ನಿರ್ದೇಶನದ ಚಿತ್ರ. ಇಲ್ಲಿ ನೀನಾಸಂ ಸತೀಶ್‌ ಇದ್ದಾರೆ. ಅವರಿಗೆ ಹರಿಪ್ರಿಯಾ ಜೋಡಿ. ಉಳಿದಂತೆ ಸಾಕಷ್ಟು ಕಲಾವಿದರು ಇಲ್ಲಿ ಕಾಣಿಸಿಕೊಂಡಿದ್ದಾರೆ. ವಿಜಯ್‌ ಪ್ರಸಾದ್‌ ಅಂದಾಕ್ಷಣ, ನೆನಪಾಗೋದೇ ಮತ್ತದೇ “ನೀರ್‌ದೋಸೆ”. ಅಲ್ಲಿ ಬರೀ ಡೈಲಾಗ್‌ನಿಂದಲೇ ಸಾಕಷ್ಟು ಮೋಡಿ ಮಾಡಿದ್ದ ವಿಜಯ್‌ಪ್ರಸಾದ್‌, ಈಗ “ಪೆಟ್ರೋಮ್ಯಾಕ್ಸ್‌” ಹಿಂದೆ ನಿಂತಿದ್ದಾರೆ. ಈ ಚಿತ್ರದ ಟ್ರೇಲರ್‌ ಸೋಮವಾರ ಬಿಡುಗಡೆಯಾಗಿದೆ. ಟ್ರೇಲರ್‌ ಸಾಕಷ್ಟು ವೀಕ್ಷಣೆ ಪಡೆದಿರುವುದಷ್ಟೇ ಅಲ್ಲ, ಅದು ಎಲ್ಲೆಡೆ ಸುದ್ದಿಗೂ ಗ್ರಾಸವಾಗಿದೆ. ಟ್ರೇಲರ್‌ನಲ್ಲಿರುವ ಡೈಲಾಗ್‌ಗಳೇ ಸಿನಿಮಾದ ಜೀವಾಳ ಅನ್ನುವಷ್ಟರ ಮಟ್ಟಿಗೆ ಟ್ರೇಲರ್‌ ಮೂಡಿಬಂದಿದೆ. ಟ್ರೇಲರ್‌ ನೋಡಿದವರಿಗೆ ನಿಜಕ್ಕೂ ಸಿನಿಮಾ ನೋಡಲೇಬೇಕೆನಿಸದೇ ಇರದು. ಅಷ್ಟರಮಟ್ಟಿಗೆ ನಿರ್ದೇಶಕ ವಿಜಯ್‌ಪ್ರಸಾದ್‌ ಅವರು ಅದನ್ನು ಕಟ್ಟಿಕೊಟ್ಟಿದ್ದಾರೆ.

ಟ್ರೇಲರ್‌ ನೋಡಿದವರಿಗೆ ಬರೀ ಪೋಲಿ ಮಾತುಗಳು ಕೇಳಿಸುತ್ತವೆ. ಹಾಗಂತ. ಇಲ್ಲಿ ಬರೀ ಪೋಲಿತನವಿಲ್ಲ. ಸಿನಿಮಾದಲ್ಲಿ ಪೆಟ್ರೋಮ್ಯಾಕ್ಸ್‌ನ ಭರವಸೆಯ ಬೆಳಕೂ ಕೂಡ ಇರಲಿದೆ ಎಂಬುದನ್ನು ಸ್ವತಃ ನಿರ್ದೇಶಕ ವಿಜಯ್‌ ಪ್ರಸಾದ್‌ ಹೇಳಿದ್ದಾರೆ. ಅವರು ಪೋಲಿ ಮಾತುಗಳ ಜೊತೆ ಜೊತೆಯಲ್ಲಿ “ಈ ಪ್ರೆಟ್ರೋಮ್ಯಾಕ್ಸ್‌ ಬದುಕಿನ ಅವಿಭಾಜ್ಯ ಅಂಗ” ಅಂತಾನೂ ಹೇಳಿದ್ದಾರೆ. ಅದು ಹೇಗೆ ಅನ್ನೋದನ್ನು ಸಿನಿಮಾದಲ್ಲೇ ನೋಡಬೇಕು. ಇನ್ನು, ಟ್ರೇಲರ್‌ ಬಗ್ಗೆ ಹೇಳುವುದಾದರೆ, ಒಂದು ಮಜ ಎನಿಸುವ ಟ್ರೇಲರ್‌ ಕಟ್ಟಿಕೊಟ್ಟಿದ್ದಾರೆ. ಅದರಲ್ಲೂ ಸಂಭಾಷಣೆಯೇ ಟ್ರೇಲರ್‌ನ ಹೈಲೈಟ್‌ ಅನ್ನಬಹುದು. ಟ್ರೇಲರ್‌ನ ಒಂದು ಡೈಲಾಗ್‌ ಹೀಗಿದೆ.

” ನಮ್ಮೂರಲ್ಲಿ ಒಬ್ಬ ಹುಡುಗಿ ಇದಾಳೆ. ಬಿಎಸ್ಸಿ ಓದಿದ್ದಾಳೆ. ನೀನು ಏನಾದ್ರೂ ಹೂ ಅಂದ್ರೆ ನಾಳೇನೆ ಕರೆಸಿಬಿಡ್ತೀನಿ” ಅಂತ ಒಂದು ಪಾತ್ರ ಹೀರೋ ಮುಂದೆ ಹೇಳುತ್ತೆ. ಆಗ ಹೀರೋ ಹೇಳುವ ಡೈಲಾಗ್‌ ಇದು. “ದಯವಿಟ್ಟು ಕ್ಷಮಿಸಿ, ನಂದಿಕಂಬ ನಿಲ್ಸೋಕೋಸ್ಕರ ಜಾತ್ರೆನೆ ಮಾಡಿಕೊಳ್ಳೋಕ್ಕಾಗಲ್ಲ…” ಅನ್ನೋ ಮಾತಿಗೆ ಜೋರು ನಗೆ ಬರದೇ ಇರದು. ಟ್ರೇಲರ್‌ನಲ್ಲಿ ಬರುವ ಪ್ರತಿ ಪಾತ್ರಗಳೂ ಕೂಡ ಪಂಚಿಂಗ್‌ ಡೈಲಾಗ್‌ ಹೇಳುವ ಮೂಲಕ ಟ್ರೇಲರ್‌ ಅನ್ನು ಇನ್ನಷ್ಟು ನೋಡಿಸಿಕೊಂಡು ಹೋಗುವಂತೆ ಮಾಡಿವೆ.
ಕೊನೇ ಮಾತು: ನಿರ್ದೇಶಕ ವಿಜಯ್‌ ಪ್ರಸಾದ್‌ ಹೇಳೋದಿಷ್ಟು. “ಪೆಟ್ರೋಮ್ಯಾಕ್ಸ್‌ ಅಂದ್ರೆ ತಾಯಾಣೆ ಅದಲ್ಲ..” ಹೀಗೆ ಅವರು ಹೇಳೋಕೆ ಕಾರಣವೇನು? ಅದನ್ನು ಸಹ ಸಿನಿಮಾದಲ್ಲೇ ನೋಡಬೇಕು. ಮುಖಪುಟದಲ್ಲಿ ಬಂದ ವಿಜಯ್‌ ಪ್ರಸಾದ್‌, ನಮ್ಮ “ಪೆಟ್ರೋಮ್ಯಾಕ್ಸ್‌”ಗೆ ಹೆಗಲು ಕೊಟ್ಟವರಿಗೆಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ. ಅದರಲ್ಲೂ, ಅಕಾಶದಲ್ಲಿ ಮೋಡಗಳು ಹೇಗೆ ಇರುತ್ತವೋ, ಹಾಗೆಯೇ ಚಿತ್ರದಲ್ಲೂ ಚೇಷ್ಟೇಗಳೂ ಇರುತ್ತವೆ. ನಿಮ್ಮ ಆಶೀರ್ವಾದ ಇರಲಿ ಅಂತಾರೆ ನಿರ್ದೇಶಕರು.

Categories
ಸಿನಿ ಸುದ್ದಿ

ಹ್ಯಾಟ್ರಿಕ್ ಬಾರಿಸೋಕೆ ಮತ್ತೆ ಒಂದಾದ ರಾಜಕುಮಾರ ಜೋಡಿ !

ದೊಡ್ಮನೆ ಅಭಿಮಾನಿ ದೇವರುಗಳು ಹಬ್ಬ ಮಾಡಿ ಸಂಭ್ರಮಿಸುವಂತಹ ಸುದ್ದಿಯೊಂದು ಹೊರಬಿದ್ದಿದೆ.ರಾಜಕುಮಾರ ಹಾಗೂ ಯುವರತ್ನದಂತಹ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾ ಕೊಟ್ಟಂತಹ ಜೋಡಿ ಮತ್ತೆ ಮತ್ತೆ ಒಂದಾಗಿದೆ. ಮೂರನೇ ಭಾರಿಗೆ ಈ ಜಬರ್ದಸ್ತ್ ಕಾಂಬೋ ಜೊತೆಯಾಗಿರುವುದು ಅಭಿಮಾನಿ ದೇವರುಗಳಲ್ಲಿ ಮಾತ್ರವಲ್ಲ ಮಾಯಬಜಾರ್ ನಲ್ಲೂ ನಿರೀಕ್ಷೆ ಹೆಚ್ಚಿಸಿದೆ.

ಅಪ್ಪು ಮತ್ತು ಸಂತೋಷ್ ಮತ್ತೆ ಒಂದಾಗಬೇಕು ಎನ್ನುವುದು ದೊಡ್ಮನೆ ಭಕ್ತರ ಆಶಯವಾಗಿತ್ತು. ನಿರ್ದೇಶಕ ಸಂತೋಷ್ ಆನಂದ್ ರಾಮ್ ಹೋದಲ್ಲಿ ಬಂದಲ್ಲಿ ಫ್ಯಾನ್ಸ್ ಪವರ್ ಸ್ಟಾರ್ ಗೆ ಮತ್ತೆ ಯಾವಾಗ ಡೈರೆಕ್ಷನ್ ಮಾಡ್ತೀರ ಅಂತ ಕೇಳ್ತಿದ್ದರು. ಫೈನಲೀ, ಪುನೀತ್ ಹಾಗೂ ಸಂತೋಷ್ ಕಾಂಬೋ ಹ್ಯಾಟ್ರಿಕ್ ಬಾರ್ಸೋಕೆ ಸಜ್ಜಾಗಿದೆ.

ರಾಜಕುಮಾರ ಹಾಗೂ ಯುವರತ್ನ ಚಿತ್ರ ನಿರ್ಮಿಸಿದ್ದ ಹೊಂಬಾಳೆ ಸಂಸ್ಥೆಯೇ ಪವರ್ ಫುಲ್ ಕಾಂಬೋ ಚಿತ್ರಕ್ಕೆ ಬಂಡವಾಳ ಹೂಡ್ತಿದೆ. ಈ‌ ಖುಷಿಯ ಸಮಾಚಾರವನ್ನ ಸ್ಟಾರ್ ಡೈರೆಕ್ಟರ್ ಸಂತೋಷ್ ಆನಂದ್ ರಾಮ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅಪ್ಪು ಫ್ಯಾನ್ಸ್ ಫುಲ್ ಎಕ್ಸೈಟ್ ಆಗಿದ್ದಾರೆ.

Categories
ಸಿನಿ ಸುದ್ದಿ

ಬಿಗ್ ಬಾಸ್ ಬೆಡಗಿಯ ಆನ್ ಲೈನ್ ಎಂಗೇಜ್ ಮೆಂಟ್ ; ಅಂದು ದೊಡ್ಮನೆಯಲ್ಲಿಈ ನಟಿ ಕಿಚ್ಚನಿಗೆ ಕೇಳಿದ್ದೇನು ಗೊತ್ತಾ ?

ಇದು ಕಲಿಯುಗ ಮಾತ್ರವಲ್ಲ ಸೋಷಿಯಲ್ ಯುಗ. ಕೊರೊನಾ ಬಂದ್ಮೇಲಂತೂ ಸಾಮಾಜಿಕ ಜಾಲತಾಣಕ್ಕೆ ಸಿಕ್ಕಾಪಟ್ಟೆ ಬೇಡಿಕೆ ಇದೆ. ಎಲ್ಲವೂ ಆನ್ ಲೈನ್ ಮಯವಾಗುತ್ತಿದೆ. ಇಂತಹ ಹೊತ್ತಲ್ಲಿ ಬಿಗ್ ಬಾಸ್ ಬೆಡಗಿ ಆನ್ ಲೈನ್ ನಲ್ಲೇ ಎಂಗೇಜ್ಮೆಂಟ್ ಮಾಡಿಕೊಂಡು ಸುದ್ದಿಯಾಗಿದ್ದಾರೆ.

ಬಿಗ್ ಬಾಸ್ ಅತೀ ದೊಡ್ಡ ರಿಯಾಲಿಟಿ ಶೋ. ಕಲರ್ಸ್ ಸಂಸ್ಥೆಯ ಹೆಮ್ಮೆಯ ಕಾರ್ಯಕ್ರಮ. ದೊಡ್ಮನೆಯ ಲ್ಲಿ ನಡೆಯುವ ಈ ಜಬರ್ದಸ್ತ್ ಪ್ರೋಗ್ರಾಂಗೆ ಹಾಗೂ ಕಿಚ್ಚನ ವೀಕೆಂಡ್ ಮಾತಿಗೆ ಮತ್ತು ಮಸ್ತಿಗೆ ವೀಕ್ಷಕರು ಕಣ್ಣರಳಿಸಿ ಕಾಯ್ತಾರೆ. ಇಂತಿಪ್ಪ ಈ ಬಿಗ್ ಹೌಸ್ ಶೋ ಎಂಟು ಸೀಸನ್ ಗಳನ್ನ ಯಶಸ್ವಿಯಾಗಿ ಮುಗಿಸಿದೆ. ಒಂಭತ್ತನೇ ಸೀಸನ್ ಗಾಗಿ ಕಿರುತೆರೆ ವೀಕ್ಷಕರು ಎದುರುನೋಡ್ತಿದ್ದಾರೆ.‌ ಈ ಮಧ್ಯೆ ಬಿಗ್ ಬಾಸ್ ಸೀಸನ್ 8ರ ಸ್ಪರ್ಧಿ ವೈಜಯಂತಿ ಅಡಿಗ ಆನ್ ಲೈನ್ ನಲ್ಲೇ ಎಂಗೇಜ್ ಆಗಿ ಸಪ್ರೈಸ್ ಕೊಟ್ಟಿದ್ದಾರೆ.

ವೈಜಯಂತಿ ಅಡಿಗ ಕೆಲವೇ ಕೆಲವು ದಿನಗಳ ಕಾಲ ಬಿಗ್ ಬಾಸ್ ನಲ್ಲಿದ್ದಂತವರು. ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ದೊಡ್ಮನೆ ಪ್ರವೇಶಿಸಿದ ವೈಜಯಂತಿ, ಅರಮನೆಯಂತಿರುವ ಸೆರೆಮನೆಯಲ್ಲಿ ನನ್ನ ಕೈಲಿ ಇರೋದಕ್ಕೆ ಆಗಲ್ಲ ಅಂತ ಕಣ್ಣೀರಿಟ್ಟಿದ್ದರು. ದಿನಪ್ರತಿಕಣ್ಮಣಿ ಕ್ಯಾಮರಾ ಮುಂದೆ ನಿಂತು ನನ್ನ ಕಳುಹಿಸಿಕೊಡಿ ನನಗೆ ಬಿಗ್ ಬಾಸ್ ಮನೆಯಲ್ಲಿ ಇರೋದಕ್ಕೆ ಆಗ್ತಿಲ್ಲ‌ ಅಂತ ಬೇಡಿಕೊಳ್ತಿದ್ದರು. ಹೀಗಾಗಿ, ಕಿಚ್ಚ ವೈಜಯಂತಿಯವರಿಗೆ ಬಿಗ್ ಬಾಸ್ ಮಹತ್ವ ತಿಳಿಸಿಕೊಟ್ಟು ಬಿಳ್ಕೊಟ್ಟರು. ಇದರಿಂದ ಬ್ರೋಗೌಡ ಶಮಂತ್ ಸೇಫ್ ಆದರು. ಫೈನಲ್ಸ್ ವರೆಗೂ ಟಕ್ಕರ್ ಕೊಟ್ಟರು ಇದೆಲ್ಲ‌ ನಿಮಗೆ ಗೊತ್ತಿದೆ.

ಅಂದು ಬಿಗ್ ಬಾಸ್ ಮನೆಯಿಂದ ಹೊರಬಂದು ಸುದ್ದಿಯಾಗಿದ್ದ ವೈಜಯಂತಿಯವರು ಇಂದು ಆನ್ ಲೈನ್‌ನಲ್ಲೇ ಪ್ರಿಯಕರನ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡು ಸದ್ದು ಮಾಡುತ್ತಿದ್ದಾರೆ. ವೈಜಯಂತಿ ಪ್ರೀತ್ಸಿರುವ ಹುಡುಗ ಸೂರಜ್ ಫಾರಿನ್ ನಲ್ಲಿ ಸೆಟಲ್ ಆಗಿದ್ದಾರೆ. ಕೊರೊನಾ ಆವಾಂತರದಿಂದ ಕರ್ನಾಟಕಕ್ಕೆ ಬರಲಾಗುತ್ತಿಲ್ಲ. ಹೀಗಾಗಿ, ಆನ್ ಲೈನ್ ನಲ್ಲಿ ಲೈವ್ ಬಂದು ನಟಿ ಹಾಗೂ ಬಿಗ್ ಬಾಸ್ ಸ್ಪರ್ಧಿ ಜೊತೆ ಸೂರಜ್ ಎಂಗೇಜ್ ಆಗಿದ್ದಾರೆ. ವೈಜಯಂತಿ ಕುಟುಂಬಸ್ಥರ ಸಮ್ಮುಖದಲ್ಲಿ ನಿಶ್ಚಿತಾರ್ಥ ನೆರವೇರಿದೆ. ಈ ಸುಂದರ ಕ್ಷಣಗಳನ್ನ ಫೋಟೋದಲ್ಲಿ ಸೆರೆಹಿಡಿದು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ನಟಿ ವೈಜಯಂತಿ ಅಡಿಗ ಹಂಚಿಕೊಂಡಿದ್ದಾರೆ.

ನಟಿ ವೈಜಯಂತಿ ಅಡಿಗ ಖ್ಯಾತ ಹೋಟೆಲ್ ಉದ್ಯಮಿ ವಾಸುದೇವ ಅಡಿಗ ಅವರ ಮಗಳು. ಅಮ್ಮಚ್ಚಿಯೆಂಬ ನೆನಪು ಸಿನಿಮಾದಲ್ಲಿ ವೈಜಯಂತಿ ಅಭಿನಯಿಸಿದ್ದಾರೆ. ವೈಲ್ಡ್ ಕಾರ್ಡ್ ಮೂಲಕ ಬಿಗ್ ಬಾಸ್ ಅನುಭವ ಪಡೆದುಕೊಂಡರು. ಈಗ ಬ್ಯಾಚುಲರ್ ಲೈಫ್ ಗೆ ಗುಡ್ ಬೈ ಹೇಳುವ ತವಕದಲ್ಲಿದ್ದಾರೆ. ಪ್ರಿಯಕರ ಸೂರಜ್ ಜೊತೆ ವೈಜಯಂತಿ ದಾಂಪತ್ಯ ಜೀವನಕ್ಕೆ‌ ಕಾಲಿರಿಸಲಿದ್ದಾರೆ. ಸದ್ಯಕ್ಕೆ ಎಂಗೇಜ್ ಆಗಿದ್ದಾರೆ, ಶೀಘ್ರದಲ್ಲೇ ಮದುವೆಯ ಅಪ್ ಡೇಟ್ ನೀಡ್ತಾರೆ.

  • ಎಂಟರ್ ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಉಪೇಂದ್ರ ಅಂದ್ರೆ ಬರೀ ಸೂಪರ್ ಸ್ಟಾರ್ ಅಲ್ಲ… ಆರ್. ಚಂದ್ರು ಬಿಚ್ಚಿಟ್ಟರು ಉಪೇಂದ್ರ ಅವರ ಇನ್ನೊಂದು ಮುಖ !

ನಟ, ನಿರ್ದೇಶಕ, ಸಂಭಾಷಣೆಕಾರ, ಗೀತ ರಚನೆಕಾರ ಹಾಗೂ ನಿರ್ಮಾಪಕರು ಆದ ಉಪೇಂದ್ರ ಅವರಿಗೆ ಇಂದು ಹುಟ್ಟು ಹಬ್ಬ. ಅವರಿಗೆ ನಾನಾ ನಾಮಶೇಷಣಗಳಿವೆ. ಅವೆಲ್ಲಕ್ಕಿಂದ ಮುಖ್ಯವಾಗಿ ಅವರೊಬ್ಬ ಪ್ರಾಮಾಣಿಕ, ಒಳ್ಳೆಯರು ಎನ್ನುವುದು ನಿರ್ದೇಶಕ ಚಂದ್ರು ಅವರ ಬಣ್ಣನೆ. ಅದು ಹೇಗೆ? ಯಾಕೆ? ಆ ಬಗ್ಗೆ ಆರ್. ಚಂದ್ರು ಹೇಳಿದ್ದೇನು ಎನ್ನುವ ಸ್ಟೋರಿ ಇಲ್ಲಿದೆ ನೋಡಿ….

ಎಲ್ಲರೂ ನಿಮ್ಮನ್ನು ಬುದ್ಧಿವಂತ ಅಂತಾರೆ, ಅದ್ಭುತ ನಿರ್ದೇಶಕ ಅಂತಾರೆ, ರಿಯಲ್ ಸ್ಟಾರ್, ಸೂಪರ್ ಸ್ಟಾರ್ ಅಂತ ಎಲ್ಲ ಹೇಳುತ್ತಾರೆ, ಅದೆಲ್ಲವೂ ಸತ್ಯ. ಆದರೆ ಅದೆಲ್ಲಕ್ಕೂ ಮಿಗಿಲಾಗಿ ನೀವು ಪ್ರಾಮಾಣಿಕರು ಮತ್ತು ಒಳ್ಳೆಯ ಮನುಷ್ಯ….
ನಟ, ನಿರ್ದೇಶಕ ಉಪೇಂದ್ರ ಅವರ ಹುಟ್ಟು ಹಬ್ಬದ ಸಂದರ್ಭದಲ್ಲಿ ಉಪ್ಪಿ ಅವರ ಅಂತರ್ಯದ ಇನ್ನೊಂದು ವ್ಯಕ್ತಿತ್ವವನ್ನು ಹೀಗೆ ಬಿಚ್ಚಿಟ್ಟವರು ‘ಕಬ್ಜ ‘ ಚಿತ್ರದ ನಿರ್ದೇಶಕ ಹಾಗೂ ನಿರ್ಮಾಪಕ ಆರ್. ಚಂದ್ರು. ಅದು ಅವರಿಗೆ ಗೊತ್ತಾಗಿದ್ದು ಉಪೇಂದ್ರ ಅವರೊಂದಿಗಿದ್ದ ಆತ್ಮೀಯ ಒಡನಾಟ. ಅದಕ್ಕೆ ಸಾಕ್ಷಿ ʼಬ್ರಹ್ಮʼ, ʼಐ ಲವ್ ಯೂʼ ಜತೆಗೀಗ’ ಕಬ್ಜ’ ಚಿತ್ರ. ಕನ್ನಡದ ಚಿತ್ರರಂಗದ ಮಟ್ಟಿಗೆ ಆರ್. ಚಂದ್ರು ಒಬ್ಬ ಸಾಹಸಿ ನಿರ್ದೇಶಕ ಕಮ್ ನಿರ್ಮಾಪಕ. ಕಡು ಕಷ್ಟದಲ್ಲಿಯೇ ಸಿನಿಮಾ ಬದುಕನ್ನು ಅಪ್ಪಿ, ಒಪ್ಪಿ ತಲೆಗೆ ನಿರ್ದೇಶಕನ ಹ್ಯಾಟ್ ತೊಟ್ಟು ಗೆದ್ದು ಅಪರೂಪದ ವ್ಯಕ್ತಿ. ಅವರ ಸಾಹಸದ ಸ್ವಭಾವದಿಂದಲೇ ಅವರೀಗ ನಿರ್ಮಾಪಕರೂ‌ ಆಗಿದ್ದಾರೆನ್ನುವುದು ಎಲ್ಲರಿಗೂ ಗೊತ್ತು. ಅದರ ದೊಡ್ಡ ಸಾಹಸವೇ ಈಗ ‘ ಕಬ್ಜ’ ಚಿತ್ರ.

ಕನ್ನಡದ ಮಟ್ಟಿಗೀಗ ಬಹು ನಿರೀಕ್ಷಿತ ಸಿನಿಮಾವೇ ಆಗಿರುವ ʼಕಬ್ಜʼ ಚಿತ್ರವು ಆರ್. ಚಂದ್ರು ಹಾಗೂ ನಟ ಉಪೇಂದ್ರ ಜೋಡಿಯ ಮೂರನೇ ಸಿನಿಮಾ. ಹಾಗೆ ನೋಡಿದರೆ ಅವರ ಹಿಂದಿನ ಅವೆರೆಡು ಸಿನಿಮಾಗಳಿಗೆ ಹೋಲಿಸಿದರೆ ಈ ಸಿನಿಮಾ ಹಲವು ಕಾರಣಕ್ಕೆ ವಿಶೇಷ ಹೊಂದಿರುವ ಸಿನಿಮಾ. ಬಿಗ್‌ ಬಜೆಟ್‌ ಸಿನಿಮಾ ಮಾತ್ರವಲ್ಲ ಚಂದ್ರು ಸಿನಿಮಾ ಕೆರಿಯರ್‌ ನಲ್ಲಿ ಮೊದಲ ಬಾರಿಗೆ ಪ್ಯಾನ್‌ ಇಂಡಿಯಾ ಎನ್ನುವ ಹೆಗ್ಗಳಿಕೆ ಕೂಡ ಅದಕ್ಕಿದೆ. ಹಾಗೆಯೇ ಅದರ ಕಥೆಯ ಜತೆಗೆ ಕಲರ್‌, ಸೆಟ್‌, ಟಿಂಟ್‌ ಜತೆಗೆ ಹಲವು ವೈಶಿಷ್ಟ್ಯಗಳು ಇಲ್ಲಿವೆ. ಅದೇ ಕಾರಣಕ್ಕೆ ಈ ಸಿನಿಮಾ ಶುರುವಾಗಿ ಫಸ್ಟ್‌ ಲುಕ್‌ ರಿವೀಲ್‌ ಆದಾಗಿನಿಂದಲೂ ಸಾಕಷ್ಟು ಕುತೂಹಲ ಮೂಡಿಸಿದೆ. ಅದೇ ಕಾರಣಕ್ಕೆ ಉಪೇಂದ್ರ ಅವರ ಹುಟ್ಟುಹಬ್ಬಕ್ಕೆ ಕಬ್ಜದ ವಿಶೇಷ ಏನು ಅಭಿಮಾನಿಗಳಿಗೆ ನಿರೀಕ್ಷೆಗೆ ಈಗ ಉತ್ತರ ಸಿಕ್ಕಿದೆ.

ಆರ್.‌ ಚಂದ್ರು ಅವರು ಶುಕ್ರವಾರ ಅನೌನ್ಸ್‌ ಮಾಡಿದ್ದ ಹಾಗೆ, ಶನಿವಾರ ಬೆಳಗ್ಗೆಯೇ ಉಪ್ಪಿ ಬರ್ತ್‌ ಡೇ ಗಿಫ್ಟ್‌ ಆಗಿ ಕಬ್ಜ ಚಿತ್ರದ ಸ್ಪೆಷಲ್‌ ಮೋಷನ್‌ ಪೋಸ್ಟರ್‌ ರಿವೀಲ್‌ ಮಾಡಿದ್ದಾರೆ. ಅವರೇ ಹೇಳಿದ್ದ ಹಾಗೆಯೇ ಈ ಪೋಸ್ಟರ್‌ ನಲ್ಲಿ ಕಬ್ಜ ಚಿತ್ರದ ಸೆಟ್‌, ಕಲರ್‌, ಟಿಂಟ್‌ ಎಲ್ಲವನ್ನು ತೋರಿಸುವ ಹಾಗೆ ಪೋಸ್ಟರ್‌ ಡಿಸೈನ್‌ ಮಾಡಿಸಿ, ಸೋಷಲ್‌ ಮೀಡಿಯಾ ಮೂಲಕ ಲಾಂಚ್‌ ಮಾಡಿದ್ದಾರೆ. ಎರಡು ಭಾಷೆಗಳಲ್ಲಿ ಈ ಪೋಸ್ಟರ್‌ ಔಟ್‌ ಆಗಿದೆ. ಆ ಮೂಲಕ ಉಪೇಂದ್ರ ಅವರಿಗೆ ಹುಟ್ಟು ಹಬ್ಬದ ಶುಭಾಶಯ ಕೋರಿದ್ದಾರೆ. ಅದರ ಜತೆಗೆ ಕಜ್ಬ ಚಿತ್ರದ ಬಹುನಿರೀಕ್ಷಿತ ಟೀಸರ್‌ ರಿಲೀಸ್‌ ಡೇಟ್‌ ಅನ್ನು ರಿವೀಲ್‌ ಮಾಡಿದ್ದಾರೆ. ದೀಪಾವಳಿಗೆ ಕಬ್ಜ ಚಿತ್ರದ ಮೋಸ್ಟ್‌ ಎಕ್ಸ್‌ಪೆಕ್ಟೆಡ್‌ ಟೀಸರ್‌ ಲಾಂಚ್‌ ಆಗುತ್ತಿದೆ. ಮೋಷನ್‌ ಪೋಸ್ಟರ್‌ ಲಾಂಚ್‌ ಜತೆಗೆ ಟೀಸರ್‌ ಲಾಂಚ್‌ ಡೇಟ್‌ ಅನ್ನು ಸೋಷಲ್‌ ಮೀಡಿಯಾದಲ್ಲಿ ಅನೌನ್ಸ್‌ ಮಾಡುವ ಸಂದರ್ಭದಲ್ಲಿ ನಿರ್ದೇಶಕ ಚಂದ್ರು ಅವರು ತಾವು ಹತ್ತಿರದಿಂದ ಕಂಡ ಉಪೇಂದ್ರ ಅವರ ವ್ಯಕ್ತಿತ್ವದ ಇನ್ನೊಂದು ಮುಖವನ್ನು ಇಲ್ಲಿ ಬಿಚ್ಚಿಟ್ಟಿರುವುದು ವಿಶೇಷ.

ಎಲ್ಲರೂ ನಿಮ್ಮನ್ನು ಬುದ್ಧಿವಂತ ಅಂತಾರೆ, ಅದ್ಭುತ ನಿರ್ದೇಶಕ ಅಂತಾರೆ, ರಿಯಲ್ ಸ್ಟಾರ್, ಸೂಪರ್ ಸ್ಟಾರ್ ಅಂತ ಎಲ್ಲ ಹೇಳುತ್ತಾರೆ, ಅದೆಲ್ಲವೂ ಸತ್ಯ. ಆದರೆ ಅದೆಲ್ಲಕ್ಕೂ ಮಿಗಿಲಾಗಿ ನೀವು ಪ್ರಾಮಾಣಿಕರು ಮತ್ತು ಒಳ್ಳೆಯ ಮನುಷ್ಯ… ಅಂತ ಚಂದ್ರು ಅವರು ಉಪೇಂದ್ರ ಅವರನ್ನು ಬಣ್ಣಿಸಿದ್ದಾರೆ. ಚಂದ್ರು ಕಂಡಂತೆ ಉಪೇಂದ್ರ ಅವರ ನಿಜವಾದ ವ್ಯಕ್ರಿತ್ವ ಇರೋದೇ ಹಾಗೆ. ಉಪೇಂದ್ರ ಅಂದ್ರೆ ಬುದ್ದಿವಂತ, ಸೂಪರ್‌ ಸ್ಟಾರ್‌, ರಿಯಲ್‌ ಸ್ಟಾರ್‌, ಫಿಲ್ಟರ್‌ ಲೆಸ್‌ ಆಕ್ಟರ್‌ ಎನ್ನುವವುದು ಎಷ್ಟು ನಿಜವೋ ಹಾಗೆಯೇ ಪ್ರಾಮಾಣಿಕರು ಹಾಗೂ ಒಳ್ಳೆಯರು ಹೌದು. ಅವರಿಗೆ ಸಿನಿಲಹರಿ ಕಡೆಯಿಂದಲೂ ಹುಟ್ಟು ಹಬ್ಬದ ಶುಭಾಶಯ.

  • ಎಂಟರ್‌ ಟೈನ್‌ ಮೆಂಟ್‌ ಬ್ಯುರೋ ಸಿನಿ ಲಹರಿ
Categories
ಸಿನಿ ಸುದ್ದಿ

ದೇವರ ಮೊರೆ ಹೋದ ನಟಿ ಸಮಂತಾ ; ಪ್ರಶ್ನೆ ಮಾಡಿದವರಿಗೆ ಬುದ್ದಿ ಇದೆಯಾ ಎಂದ ಸ್ಯಾಮ್ ?

ನಟಿ ಸಮಂತಾ ದೇವರ ಮೊರೆ ಹೋಗಿದ್ದಾರೆ. ತಿರುಪತಿ ತಿಮ್ಮಪ್ಪನ ಸನ್ನಿಧಿಗೆ ಭೇಟಿಕೊಟ್ಟಿದ್ದಾರೆ. ದಾಂಪತ್ಯದಲ್ಲಿ ಕಲಹ, ಅಕ್ಕಿನೇನಿ ಕುಟುಂಬ ತೊರೆದಿದ್ದಾರೆ ಎನ್ನುವ ಅಂತೆ- ಕಂತೆ ಸಮಾಚಾರದ ನಡುವೆ ತಿರುಪತಿ ತಿಮ್ಮಪ್ಪನ ದರ್ಶನ‌ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದಾರೆ

ಸೌತ್ ಸಿನಿಮಾ ಬ್ಯೂಟಿ, ಮಾಯಬಜಾರ್ ನ ಬಹುಬೇಡಿಕೆಯ ನಟಿ ಸಮಂತಾ ಈಗೀಗ ಹೆಚ್ಚು ಸುದ್ದಿಯಾಗುತ್ತಿದ್ದಾರೆ. ಸಮಂತಾ ಅಕ್ಕಿನೇನಿ ಅಂತ ಇದ್ದ ಹೆಸರನ್ನ ಬದಲಿಸಿಕೊಂಡು ಬರೀ ಎಸ್ ಅಂತ ಹಾಕಿಕೊಂಡಿದ್ದೇ ಬಂತು ದಿನಕ್ಕೊಂದು ರೀತಿ ಸುದ್ದಿಗಳು ಸಮಂತಾ ಸುತ್ತ ಹಬ್ಬುತ್ತವೆ. ಅಕ್ಕಿನೇನಿ ಕುಟುಂಬದಿಂದ ದೂರವಾಗಿರಬಹುದು, ನಾಗಚೈತನ್ಯ ಜೊತೆಗಿನ ಸಂಬಂಧಕ್ಕೆ ಎಳ್ಳುನೀರು ಬಿಟ್ಟಿರಬಹುದು ಅಂತೆಲ್ಲಾ ಮಾತನಾಡಿಕೊಳ್ತಿದ್ದಾರೆ. ಆದರೆ, ಗಾಸಿಪ್ ಟೋಪಿ ಹಾಕಿಕೊಂಡು ಕುಣಿಯುತ್ತಿರುವ ಯಾವ ಸುದ್ದಿಗೂ ಸಮಂತಾ ಆಗಲೀ, ಅಕ್ಕಿನೇನಿ ಕುಟುಂಬಸ್ಥರಾಗಲಿ ಕ್ಲ್ಯಾರಿಟಿ ಕೊಡ್ತಿಲ್ಲ.

ಸಮಂತಾ- ನಾಗಚೈತನ್ಯ ಮಾಧರಿ ಜೋಡಿಯಾಗಬೇಕಿದ್ದವರು. ಲವ್ ಲೈಫ್ ಲೀಡ್ ಮಾಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟವರು. ಇದ್ದರೆ ಇವ್ರಂತ ಜೋಡಿ ಇರಬೇಕು ಅಂತ ಸ್ಯಾಮ್ ಹಾಗೂ ಚೈ ಫ್ಯಾನ್ಸ್ ಗರ್ವದಿಂದ ಹೇಳಿಕೊಂಡಿದ್ದುಂಟು. ರೀಲ್ ನಲ್ಲಿ ಸೈ ಎನಿಸಿಕೊಂಡಿದ್ದ ತಾರಾಜೋಡಿ ರಿಯಲ್ ಲೈಫ್ ನಲ್ಲೂ ಜೈಕಾರ ಹಾಕಿಸಿಕೊಂಡಿದ್ದು ಸತ್ಯ. ಆದರೆ, ಏಕಾಏಕಿ ಮನಂ ಕಪಲ್ಸ್ ಮಧ್ಯೆ ಏನಾಯ್ತು? ಏಕಾಏಕಿ ಎಸ್ ಅಂತ ಸಮಂತಾ ಹೆಸರು ಬದಲಾಯಿಸಿಕೊಳ್ಳೋಕೆ ಕಾರಣ ಏನು? ಇದ್ಯಾವುದಕ್ಕೂ ಸದ್ಯಕ್ಕೆ ಉತ್ತರ ಇಲ್ಲ.

ನಿಜಕ್ಕೂ, ಮಜಿಲಿ ಸಂಸಾರದಲ್ಲಿ ಬಿರುಗಾಳಿ ಎದ್ದಿದೆಯಾ? ಮಹಾನಟಿಯ ಸುಂದರ ದಾಂಪತ್ಯದಲ್ಲಿ ಬಿರುಕು ಮೂಡಿದೆಯಾ? ಕೋಲಾಹಲ ಸೃಷ್ಟಿಯಾಗಿದೆಯಾ? ಒಂದ್ವೇಳೆ ಅಕ್ಕಿನೇನಿ ಕುಟುಂಬದಿಂದ ಬೇರಾಗುವ ಸಂದರ್ಭ- ಸನ್ನಿವೇಶ ಸೃಷ್ಟಿಯಾಗಿದ್ರೆ ಮಾವ ನಾಗಾರ್ಜುನ್‌ ಅವರ ಹುಟ್ಟುಹಬ್ಬಕ್ಕೆ ಶುಭಾಶಯ ತಿಳಿಸುತ್ತಿರಲಿಲ್ಲ ಅನ್ಸುತ್ತೆ, ನಾಗಚೈತನ್ಯ ಲವ್ ಸ್ಟೋರಿಗೆ ವಿಶ್ ಮಾಡ್ತಿರಲಿಲ್ಲ. ಆದರೆ, ಸಮಂತಾ ಈ ಎರಡು ಮಾಡಿದ್ದಾರೆ. ಹೀಗಾಗಿ, ಅಕ್ಕಿನೇನಿ ಕುಟುಂಬಕ್ಕೆ ಗುಡ್ ಬೈ ಹೇಳ್ತಾರೆ ಎನ್ನುವುದು ಡೌಟು. ಗುಡ್ ಬೈ ಹೇಳದಿರಲಿ, ಮನಂ ಫ್ಯಾಮಿಲಿಯ ಜೊತೆಗೆ ಮನಸಾರೆ ಜೀವಿಸಲಿ ಎನ್ನುವುದೇ ಎಲ್ಲರ ಆಶಯ.

ಅಂದ್ಹಾಗೇ, ಅಂತೆ- ಕಂತೆ ಸಮಾಚಾರ ಧಗಧಗಿಸುತ್ತಿರುವ ಹೊತ್ತಲ್ಲಿ
ನಟಿ ಸಮಂತಾ ದೇವರ ಮೊರೆ ಹೋಗಿದ್ದಾರೆ. ತಿರುಪತಿ ತಿಮ್ಮಪ್ಪನ ಸನ್ನಿಧಿಗೆ ಭೇಟಿಕೊಟ್ಟಿದ್ದಾರೆ. ಈ ಹೊತ್ತಲ್ಲಿ ಸಮಂತಾಗೆ ಮಾಧ್ಯಮದವರು ಪ್ರಶ್ನೆ ಮಾಡಿದ್ದಾರೆ.‌ ದೇವಸ್ಥಾನಕ್ಕೆ ಬಂದಾಗ ಪ್ರಶ್ನೆ ಮಾಡಿದ್ದಕ್ಕೆ ಸ್ಯಾಮ್ ಗರಂ ಆಗಿದ್ದಾರೆ. ಬುದ್ದಿ ಇದೆಯಾ ಇಲ್ಲವಾ ಹೇಳಿಬಿಡಿ ಎನ್ನುತ್ತಲೇ ದೇವಸ್ತಾನದ ಒಳಗೆ ಎಂಟ್ರಿಕೊಟ್ಟಿದ್ದಾರೆ. ಸಾಮಾಜಿಕ ಲೋಕದಲ್ಲಿರುವವರಿಗೆ ಹೋದಲ್ಲಿ ಬಂದಲ್ಲಿ ಪ್ರಶ್ನೆಗಳು ಎದುರಾಗುವುದು ಸಹಜ. ಆದರೆ, ನೆಮ್ಮದಿ ಅರಸಿ ದೇಗುಲಕ್ಕೆ ಹೋದಾಗ ವೈಯಕ್ತಿಕವಾಗಿ ಕೆದಕಿ ಕೊಶ್ಚನ್ ಮಾಡಿದಾಗ ಬೇಸರವಾಗೋದು ಸಹಜ.‌ ಆ ಬೇಸರವನ್ನ ಕ್ಯಾಮೆರಾ ಮುಂದೆಯೇ ವ್ಯಕ್ತಪಡಿಸಿದ್ದಾರೆ. ಆದಷ್ಟು ಬೇಗ ಮಹಾನಟಿಯ ಬೇಸರ ದೂರಾಗಲಿ, ವೈಯಕ್ತಿಕ ಬದುಕಲ್ಲಿ ಏನಾದರೂ ಏರುಪೇರಾಗಿದ್ದಲ್ಲಿ ತಿರುಪತಿ ತಿಮ್ಮಪ್ಪ‌ ಅದನ್ನೆಲ್ಲ ಸರಿಪಡಿಸಲಿ. ಮನಂ ಜೋಡಿ ನೂರು ಕಾಲ ಒಂದಾಗಿ ಬಾಳಲಿ ಅಲ್ಲವೇ.

  • ಎಂಟರ್ ಟೈನ್ಮೆಂಟ್ ಬ್ಯೂರೋ ಸಿನಿಲಹರಿ
Categories
ಸಿನಿ ಸುದ್ದಿ

ನಟಿ ಶ್ರುತಿ ಹುಟ್ಟು ಹಬ್ಬಕ್ಕೆ ಭಜರಂಗಿ-2 ಟೀಮ್ ಸ್ಪೆಷಲ್ ಗಿಫ್ಟ್ !

32 ವರ್ಷಗಳ ಸಿನಿಜರ್ನಿಯಲ್ಲಿ ಇದೇ ಮೊದಲ ಭಾರಿಗೆ ಹಿಂದೆಂದೂ‌ ಎತ್ತಿರದ ಅವತಾರ ಎತ್ತಿದ್ದಾರೆ. ಬಹುನಿರೀಕ್ಷೆಯ ಭಜರಂಗಿ 2 ಚಿತ್ರದಲ್ಲಿ ಖಡಕ್ಕಾಗಿ ಕಾಣಿಸಿಕೊಂಡಿದ್ದಾರೆ. ಕೈಯಲ್ಲಿ ಸಿಗಾರ್ ಹಿಡಿದು
ಲುಕ್ ಕೊಟ್ಟಿರುವ ಪೋಸ್ಟರ್ ಈಗಾಗಲೇ ರಿಲೀಸ್ ಆಗಿ ಹವಾ ಎಬ್ಬಿಸಿತ್ತು. ಈಗ ಬರ್ತ್ ಡೇ ಗೆ ಬಿಡುಗಡೆಯಾಗಿರುವ ಮಗದೊಂದು ಲುಕ್ ಧಮ್ ಗಿಂತ ಹೆಚ್ಚೇ ಹುಚ್ಚೆಬ್ಬಿಸಿದೆ.

ಚಂದನವನ ಕಂಡ‌ ಚೆಂದದ ಚೆಲುವೆ ನಟಿ ಶ್ರುತಿ ಬರ್ತ್ ಡೇ ಸಂಭ್ರಮದಲ್ಲಿದ್ದಾರೆ. 45 ನೇ ವಸಂತಕ್ಕೆ ಕಾಲಿಟ್ಟಿರುವ ಶ್ರುತಿ, ಕುಟುಂಬದ ಜೊತೆ ತಿರುಪತಿ ತಿಮ್ಮಪ್ಪನ‌ ದರ್ಶನ ಪಡೆದಿದ್ದಾರೆ. ಅಭಿಮಾನಿಗಳು, ಸ್ನೇಹಿತರು,ಹಿತೈಷಿಗಳು ಸೇರಿದಂತೆ ಎಲ್ಲರಿಂದ ನಟಿ ಶ್ರುತಿಗೆ ಶುಭಾಶಯಗಳ ಮಹಾಪೂರ ಹರಿದುಬರ್ತಿದೆ.

32 ವರ್ಷಗಳ ಸಿನಿಜರ್ನಿಯಲ್ಲಿ ಇದೇ ಮೊದಲ ಭಾರಿಗೆ ಹಿಂದೆಂದೂ‌ ಎತ್ತಿರದ ಅವತಾರ ಎತ್ತಿದ್ದಾರೆ. ಬಹುನಿರೀಕ್ಷೆಯ ಭಜರಂಗಿ 2 ಚಿತ್ರದಲ್ಲಿ ಖಡಕ್ಕಾಗಿ ಕಾಣಿಸಿಕೊಂಡಿದ್ದಾರೆ.
ಕೈಯಲ್ಲಿ ಸಿಗಾರ್ ಹಿಡಿದು ಲುಕ್ ಕೊಟ್ಟಿರುವ ಪೋಸ್ಟರ್ ಈಗಾಗಲೇ ರಿಲೀಸ್ ಆಗಿ ಹವಾ ಎಬ್ಬಿಸಿತ್ತು. ಈಗ ಬರ್ತ್ ಡೇ ಗೆ ಬಿಡುಗಡೆಯಾಗಿರುವ ಮಗದೊಂದು ಲುಕ್ ಧಮ್ ಗಿಂತ ಹೆಚ್ಚೇ ಹುಚ್ಚೆಬ್ಬಿಸಿದೆ.

ಶ್ರುತಿಯವರ ಲುಕ್-ಗೆಟಪ್ ಖಡಕ್ ಖಳನಾಯಕಿ ಅನ್ನೋದು ಮೇಲ್ನೋಟಕ್ಕೆ ಗೊತ್ತಾಗುತ್ತೆ. ಕಾಟನ್ ಸೀರೆ,ಹಣೆಗೆ ಚಂದಿರನಂತಹ ಬಿಂದಿ, ಕೈ ಬೆರಳಿಗೆ ಸಿಲ್ವರ್ ಉಂಗುರ, ಕೈ ಖಡಗ ತೊಟ್ಟು ಸುರಳಿ ಕೂದಲ ಬಿಟ್ಟುಕೊಂಡು ಖಡಕ್ಕಾಗಿಯೇ ಪೋಸ್ ಕೊಟ್ಟಿದ್ದಾರೆ.‌ ನಟಿ ಶ್ರುತಿ ಫ್ಯಾನ್ಸ್ ಮಾತ್ರವಲ್ಲ ಚಿತ್ರಪ್ರೇಮಿಗಳೆಲ್ಲ ಕಾತುರರಾಗಿದ್ದಾರೆ.
ಭಜರಂಗಿ ಅಖಾಡಲ್ಲಿ ಹೇಗಿರಲಿದೆ ನಟಿ ಶ್ರುತಿಯ ಅಬ್ಬರ ಆರ್ಭಟ ಜಸ್ಟ್ ವೇಯ್ಟ್ ಅಂಡ್ ವಾಚ್. ಅತೀ ಶೀಘ್ರದಲ್ಲೇ ಭಜರಂಗಿ 2 ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಆಗಲಿದೆ.

error: Content is protected !!