ದೇವರ ಮೊರೆ ಹೋದ ನಟಿ ಸಮಂತಾ ; ಪ್ರಶ್ನೆ ಮಾಡಿದವರಿಗೆ ಬುದ್ದಿ ಇದೆಯಾ ಎಂದ ಸ್ಯಾಮ್ ?

ನಟಿ ಸಮಂತಾ ದೇವರ ಮೊರೆ ಹೋಗಿದ್ದಾರೆ. ತಿರುಪತಿ ತಿಮ್ಮಪ್ಪನ ಸನ್ನಿಧಿಗೆ ಭೇಟಿಕೊಟ್ಟಿದ್ದಾರೆ. ದಾಂಪತ್ಯದಲ್ಲಿ ಕಲಹ, ಅಕ್ಕಿನೇನಿ ಕುಟುಂಬ ತೊರೆದಿದ್ದಾರೆ ಎನ್ನುವ ಅಂತೆ- ಕಂತೆ ಸಮಾಚಾರದ ನಡುವೆ ತಿರುಪತಿ ತಿಮ್ಮಪ್ಪನ ದರ್ಶನ‌ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದಾರೆ

ಸೌತ್ ಸಿನಿಮಾ ಬ್ಯೂಟಿ, ಮಾಯಬಜಾರ್ ನ ಬಹುಬೇಡಿಕೆಯ ನಟಿ ಸಮಂತಾ ಈಗೀಗ ಹೆಚ್ಚು ಸುದ್ದಿಯಾಗುತ್ತಿದ್ದಾರೆ. ಸಮಂತಾ ಅಕ್ಕಿನೇನಿ ಅಂತ ಇದ್ದ ಹೆಸರನ್ನ ಬದಲಿಸಿಕೊಂಡು ಬರೀ ಎಸ್ ಅಂತ ಹಾಕಿಕೊಂಡಿದ್ದೇ ಬಂತು ದಿನಕ್ಕೊಂದು ರೀತಿ ಸುದ್ದಿಗಳು ಸಮಂತಾ ಸುತ್ತ ಹಬ್ಬುತ್ತವೆ. ಅಕ್ಕಿನೇನಿ ಕುಟುಂಬದಿಂದ ದೂರವಾಗಿರಬಹುದು, ನಾಗಚೈತನ್ಯ ಜೊತೆಗಿನ ಸಂಬಂಧಕ್ಕೆ ಎಳ್ಳುನೀರು ಬಿಟ್ಟಿರಬಹುದು ಅಂತೆಲ್ಲಾ ಮಾತನಾಡಿಕೊಳ್ತಿದ್ದಾರೆ. ಆದರೆ, ಗಾಸಿಪ್ ಟೋಪಿ ಹಾಕಿಕೊಂಡು ಕುಣಿಯುತ್ತಿರುವ ಯಾವ ಸುದ್ದಿಗೂ ಸಮಂತಾ ಆಗಲೀ, ಅಕ್ಕಿನೇನಿ ಕುಟುಂಬಸ್ಥರಾಗಲಿ ಕ್ಲ್ಯಾರಿಟಿ ಕೊಡ್ತಿಲ್ಲ.

ಸಮಂತಾ- ನಾಗಚೈತನ್ಯ ಮಾಧರಿ ಜೋಡಿಯಾಗಬೇಕಿದ್ದವರು. ಲವ್ ಲೈಫ್ ಲೀಡ್ ಮಾಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟವರು. ಇದ್ದರೆ ಇವ್ರಂತ ಜೋಡಿ ಇರಬೇಕು ಅಂತ ಸ್ಯಾಮ್ ಹಾಗೂ ಚೈ ಫ್ಯಾನ್ಸ್ ಗರ್ವದಿಂದ ಹೇಳಿಕೊಂಡಿದ್ದುಂಟು. ರೀಲ್ ನಲ್ಲಿ ಸೈ ಎನಿಸಿಕೊಂಡಿದ್ದ ತಾರಾಜೋಡಿ ರಿಯಲ್ ಲೈಫ್ ನಲ್ಲೂ ಜೈಕಾರ ಹಾಕಿಸಿಕೊಂಡಿದ್ದು ಸತ್ಯ. ಆದರೆ, ಏಕಾಏಕಿ ಮನಂ ಕಪಲ್ಸ್ ಮಧ್ಯೆ ಏನಾಯ್ತು? ಏಕಾಏಕಿ ಎಸ್ ಅಂತ ಸಮಂತಾ ಹೆಸರು ಬದಲಾಯಿಸಿಕೊಳ್ಳೋಕೆ ಕಾರಣ ಏನು? ಇದ್ಯಾವುದಕ್ಕೂ ಸದ್ಯಕ್ಕೆ ಉತ್ತರ ಇಲ್ಲ.

ನಿಜಕ್ಕೂ, ಮಜಿಲಿ ಸಂಸಾರದಲ್ಲಿ ಬಿರುಗಾಳಿ ಎದ್ದಿದೆಯಾ? ಮಹಾನಟಿಯ ಸುಂದರ ದಾಂಪತ್ಯದಲ್ಲಿ ಬಿರುಕು ಮೂಡಿದೆಯಾ? ಕೋಲಾಹಲ ಸೃಷ್ಟಿಯಾಗಿದೆಯಾ? ಒಂದ್ವೇಳೆ ಅಕ್ಕಿನೇನಿ ಕುಟುಂಬದಿಂದ ಬೇರಾಗುವ ಸಂದರ್ಭ- ಸನ್ನಿವೇಶ ಸೃಷ್ಟಿಯಾಗಿದ್ರೆ ಮಾವ ನಾಗಾರ್ಜುನ್‌ ಅವರ ಹುಟ್ಟುಹಬ್ಬಕ್ಕೆ ಶುಭಾಶಯ ತಿಳಿಸುತ್ತಿರಲಿಲ್ಲ ಅನ್ಸುತ್ತೆ, ನಾಗಚೈತನ್ಯ ಲವ್ ಸ್ಟೋರಿಗೆ ವಿಶ್ ಮಾಡ್ತಿರಲಿಲ್ಲ. ಆದರೆ, ಸಮಂತಾ ಈ ಎರಡು ಮಾಡಿದ್ದಾರೆ. ಹೀಗಾಗಿ, ಅಕ್ಕಿನೇನಿ ಕುಟುಂಬಕ್ಕೆ ಗುಡ್ ಬೈ ಹೇಳ್ತಾರೆ ಎನ್ನುವುದು ಡೌಟು. ಗುಡ್ ಬೈ ಹೇಳದಿರಲಿ, ಮನಂ ಫ್ಯಾಮಿಲಿಯ ಜೊತೆಗೆ ಮನಸಾರೆ ಜೀವಿಸಲಿ ಎನ್ನುವುದೇ ಎಲ್ಲರ ಆಶಯ.

ಅಂದ್ಹಾಗೇ, ಅಂತೆ- ಕಂತೆ ಸಮಾಚಾರ ಧಗಧಗಿಸುತ್ತಿರುವ ಹೊತ್ತಲ್ಲಿ
ನಟಿ ಸಮಂತಾ ದೇವರ ಮೊರೆ ಹೋಗಿದ್ದಾರೆ. ತಿರುಪತಿ ತಿಮ್ಮಪ್ಪನ ಸನ್ನಿಧಿಗೆ ಭೇಟಿಕೊಟ್ಟಿದ್ದಾರೆ. ಈ ಹೊತ್ತಲ್ಲಿ ಸಮಂತಾಗೆ ಮಾಧ್ಯಮದವರು ಪ್ರಶ್ನೆ ಮಾಡಿದ್ದಾರೆ.‌ ದೇವಸ್ಥಾನಕ್ಕೆ ಬಂದಾಗ ಪ್ರಶ್ನೆ ಮಾಡಿದ್ದಕ್ಕೆ ಸ್ಯಾಮ್ ಗರಂ ಆಗಿದ್ದಾರೆ. ಬುದ್ದಿ ಇದೆಯಾ ಇಲ್ಲವಾ ಹೇಳಿಬಿಡಿ ಎನ್ನುತ್ತಲೇ ದೇವಸ್ತಾನದ ಒಳಗೆ ಎಂಟ್ರಿಕೊಟ್ಟಿದ್ದಾರೆ. ಸಾಮಾಜಿಕ ಲೋಕದಲ್ಲಿರುವವರಿಗೆ ಹೋದಲ್ಲಿ ಬಂದಲ್ಲಿ ಪ್ರಶ್ನೆಗಳು ಎದುರಾಗುವುದು ಸಹಜ. ಆದರೆ, ನೆಮ್ಮದಿ ಅರಸಿ ದೇಗುಲಕ್ಕೆ ಹೋದಾಗ ವೈಯಕ್ತಿಕವಾಗಿ ಕೆದಕಿ ಕೊಶ್ಚನ್ ಮಾಡಿದಾಗ ಬೇಸರವಾಗೋದು ಸಹಜ.‌ ಆ ಬೇಸರವನ್ನ ಕ್ಯಾಮೆರಾ ಮುಂದೆಯೇ ವ್ಯಕ್ತಪಡಿಸಿದ್ದಾರೆ. ಆದಷ್ಟು ಬೇಗ ಮಹಾನಟಿಯ ಬೇಸರ ದೂರಾಗಲಿ, ವೈಯಕ್ತಿಕ ಬದುಕಲ್ಲಿ ಏನಾದರೂ ಏರುಪೇರಾಗಿದ್ದಲ್ಲಿ ತಿರುಪತಿ ತಿಮ್ಮಪ್ಪ‌ ಅದನ್ನೆಲ್ಲ ಸರಿಪಡಿಸಲಿ. ಮನಂ ಜೋಡಿ ನೂರು ಕಾಲ ಒಂದಾಗಿ ಬಾಳಲಿ ಅಲ್ಲವೇ.

  • ಎಂಟರ್ ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Related Posts

error: Content is protected !!