ಉಪೇಂದ್ರ ಅಂದ್ರೆ ಬರೀ ಸೂಪರ್ ಸ್ಟಾರ್ ಅಲ್ಲ… ಆರ್. ಚಂದ್ರು ಬಿಚ್ಚಿಟ್ಟರು ಉಪೇಂದ್ರ ಅವರ ಇನ್ನೊಂದು ಮುಖ !

ನಟ, ನಿರ್ದೇಶಕ, ಸಂಭಾಷಣೆಕಾರ, ಗೀತ ರಚನೆಕಾರ ಹಾಗೂ ನಿರ್ಮಾಪಕರು ಆದ ಉಪೇಂದ್ರ ಅವರಿಗೆ ಇಂದು ಹುಟ್ಟು ಹಬ್ಬ. ಅವರಿಗೆ ನಾನಾ ನಾಮಶೇಷಣಗಳಿವೆ. ಅವೆಲ್ಲಕ್ಕಿಂದ ಮುಖ್ಯವಾಗಿ ಅವರೊಬ್ಬ ಪ್ರಾಮಾಣಿಕ, ಒಳ್ಳೆಯರು ಎನ್ನುವುದು ನಿರ್ದೇಶಕ ಚಂದ್ರು ಅವರ ಬಣ್ಣನೆ. ಅದು ಹೇಗೆ? ಯಾಕೆ? ಆ ಬಗ್ಗೆ ಆರ್. ಚಂದ್ರು ಹೇಳಿದ್ದೇನು ಎನ್ನುವ ಸ್ಟೋರಿ ಇಲ್ಲಿದೆ ನೋಡಿ….

ಎಲ್ಲರೂ ನಿಮ್ಮನ್ನು ಬುದ್ಧಿವಂತ ಅಂತಾರೆ, ಅದ್ಭುತ ನಿರ್ದೇಶಕ ಅಂತಾರೆ, ರಿಯಲ್ ಸ್ಟಾರ್, ಸೂಪರ್ ಸ್ಟಾರ್ ಅಂತ ಎಲ್ಲ ಹೇಳುತ್ತಾರೆ, ಅದೆಲ್ಲವೂ ಸತ್ಯ. ಆದರೆ ಅದೆಲ್ಲಕ್ಕೂ ಮಿಗಿಲಾಗಿ ನೀವು ಪ್ರಾಮಾಣಿಕರು ಮತ್ತು ಒಳ್ಳೆಯ ಮನುಷ್ಯ….
ನಟ, ನಿರ್ದೇಶಕ ಉಪೇಂದ್ರ ಅವರ ಹುಟ್ಟು ಹಬ್ಬದ ಸಂದರ್ಭದಲ್ಲಿ ಉಪ್ಪಿ ಅವರ ಅಂತರ್ಯದ ಇನ್ನೊಂದು ವ್ಯಕ್ತಿತ್ವವನ್ನು ಹೀಗೆ ಬಿಚ್ಚಿಟ್ಟವರು ‘ಕಬ್ಜ ‘ ಚಿತ್ರದ ನಿರ್ದೇಶಕ ಹಾಗೂ ನಿರ್ಮಾಪಕ ಆರ್. ಚಂದ್ರು. ಅದು ಅವರಿಗೆ ಗೊತ್ತಾಗಿದ್ದು ಉಪೇಂದ್ರ ಅವರೊಂದಿಗಿದ್ದ ಆತ್ಮೀಯ ಒಡನಾಟ. ಅದಕ್ಕೆ ಸಾಕ್ಷಿ ʼಬ್ರಹ್ಮʼ, ʼಐ ಲವ್ ಯೂʼ ಜತೆಗೀಗ’ ಕಬ್ಜ’ ಚಿತ್ರ. ಕನ್ನಡದ ಚಿತ್ರರಂಗದ ಮಟ್ಟಿಗೆ ಆರ್. ಚಂದ್ರು ಒಬ್ಬ ಸಾಹಸಿ ನಿರ್ದೇಶಕ ಕಮ್ ನಿರ್ಮಾಪಕ. ಕಡು ಕಷ್ಟದಲ್ಲಿಯೇ ಸಿನಿಮಾ ಬದುಕನ್ನು ಅಪ್ಪಿ, ಒಪ್ಪಿ ತಲೆಗೆ ನಿರ್ದೇಶಕನ ಹ್ಯಾಟ್ ತೊಟ್ಟು ಗೆದ್ದು ಅಪರೂಪದ ವ್ಯಕ್ತಿ. ಅವರ ಸಾಹಸದ ಸ್ವಭಾವದಿಂದಲೇ ಅವರೀಗ ನಿರ್ಮಾಪಕರೂ‌ ಆಗಿದ್ದಾರೆನ್ನುವುದು ಎಲ್ಲರಿಗೂ ಗೊತ್ತು. ಅದರ ದೊಡ್ಡ ಸಾಹಸವೇ ಈಗ ‘ ಕಬ್ಜ’ ಚಿತ್ರ.

ಕನ್ನಡದ ಮಟ್ಟಿಗೀಗ ಬಹು ನಿರೀಕ್ಷಿತ ಸಿನಿಮಾವೇ ಆಗಿರುವ ʼಕಬ್ಜʼ ಚಿತ್ರವು ಆರ್. ಚಂದ್ರು ಹಾಗೂ ನಟ ಉಪೇಂದ್ರ ಜೋಡಿಯ ಮೂರನೇ ಸಿನಿಮಾ. ಹಾಗೆ ನೋಡಿದರೆ ಅವರ ಹಿಂದಿನ ಅವೆರೆಡು ಸಿನಿಮಾಗಳಿಗೆ ಹೋಲಿಸಿದರೆ ಈ ಸಿನಿಮಾ ಹಲವು ಕಾರಣಕ್ಕೆ ವಿಶೇಷ ಹೊಂದಿರುವ ಸಿನಿಮಾ. ಬಿಗ್‌ ಬಜೆಟ್‌ ಸಿನಿಮಾ ಮಾತ್ರವಲ್ಲ ಚಂದ್ರು ಸಿನಿಮಾ ಕೆರಿಯರ್‌ ನಲ್ಲಿ ಮೊದಲ ಬಾರಿಗೆ ಪ್ಯಾನ್‌ ಇಂಡಿಯಾ ಎನ್ನುವ ಹೆಗ್ಗಳಿಕೆ ಕೂಡ ಅದಕ್ಕಿದೆ. ಹಾಗೆಯೇ ಅದರ ಕಥೆಯ ಜತೆಗೆ ಕಲರ್‌, ಸೆಟ್‌, ಟಿಂಟ್‌ ಜತೆಗೆ ಹಲವು ವೈಶಿಷ್ಟ್ಯಗಳು ಇಲ್ಲಿವೆ. ಅದೇ ಕಾರಣಕ್ಕೆ ಈ ಸಿನಿಮಾ ಶುರುವಾಗಿ ಫಸ್ಟ್‌ ಲುಕ್‌ ರಿವೀಲ್‌ ಆದಾಗಿನಿಂದಲೂ ಸಾಕಷ್ಟು ಕುತೂಹಲ ಮೂಡಿಸಿದೆ. ಅದೇ ಕಾರಣಕ್ಕೆ ಉಪೇಂದ್ರ ಅವರ ಹುಟ್ಟುಹಬ್ಬಕ್ಕೆ ಕಬ್ಜದ ವಿಶೇಷ ಏನು ಅಭಿಮಾನಿಗಳಿಗೆ ನಿರೀಕ್ಷೆಗೆ ಈಗ ಉತ್ತರ ಸಿಕ್ಕಿದೆ.

ಆರ್.‌ ಚಂದ್ರು ಅವರು ಶುಕ್ರವಾರ ಅನೌನ್ಸ್‌ ಮಾಡಿದ್ದ ಹಾಗೆ, ಶನಿವಾರ ಬೆಳಗ್ಗೆಯೇ ಉಪ್ಪಿ ಬರ್ತ್‌ ಡೇ ಗಿಫ್ಟ್‌ ಆಗಿ ಕಬ್ಜ ಚಿತ್ರದ ಸ್ಪೆಷಲ್‌ ಮೋಷನ್‌ ಪೋಸ್ಟರ್‌ ರಿವೀಲ್‌ ಮಾಡಿದ್ದಾರೆ. ಅವರೇ ಹೇಳಿದ್ದ ಹಾಗೆಯೇ ಈ ಪೋಸ್ಟರ್‌ ನಲ್ಲಿ ಕಬ್ಜ ಚಿತ್ರದ ಸೆಟ್‌, ಕಲರ್‌, ಟಿಂಟ್‌ ಎಲ್ಲವನ್ನು ತೋರಿಸುವ ಹಾಗೆ ಪೋಸ್ಟರ್‌ ಡಿಸೈನ್‌ ಮಾಡಿಸಿ, ಸೋಷಲ್‌ ಮೀಡಿಯಾ ಮೂಲಕ ಲಾಂಚ್‌ ಮಾಡಿದ್ದಾರೆ. ಎರಡು ಭಾಷೆಗಳಲ್ಲಿ ಈ ಪೋಸ್ಟರ್‌ ಔಟ್‌ ಆಗಿದೆ. ಆ ಮೂಲಕ ಉಪೇಂದ್ರ ಅವರಿಗೆ ಹುಟ್ಟು ಹಬ್ಬದ ಶುಭಾಶಯ ಕೋರಿದ್ದಾರೆ. ಅದರ ಜತೆಗೆ ಕಜ್ಬ ಚಿತ್ರದ ಬಹುನಿರೀಕ್ಷಿತ ಟೀಸರ್‌ ರಿಲೀಸ್‌ ಡೇಟ್‌ ಅನ್ನು ರಿವೀಲ್‌ ಮಾಡಿದ್ದಾರೆ. ದೀಪಾವಳಿಗೆ ಕಬ್ಜ ಚಿತ್ರದ ಮೋಸ್ಟ್‌ ಎಕ್ಸ್‌ಪೆಕ್ಟೆಡ್‌ ಟೀಸರ್‌ ಲಾಂಚ್‌ ಆಗುತ್ತಿದೆ. ಮೋಷನ್‌ ಪೋಸ್ಟರ್‌ ಲಾಂಚ್‌ ಜತೆಗೆ ಟೀಸರ್‌ ಲಾಂಚ್‌ ಡೇಟ್‌ ಅನ್ನು ಸೋಷಲ್‌ ಮೀಡಿಯಾದಲ್ಲಿ ಅನೌನ್ಸ್‌ ಮಾಡುವ ಸಂದರ್ಭದಲ್ಲಿ ನಿರ್ದೇಶಕ ಚಂದ್ರು ಅವರು ತಾವು ಹತ್ತಿರದಿಂದ ಕಂಡ ಉಪೇಂದ್ರ ಅವರ ವ್ಯಕ್ತಿತ್ವದ ಇನ್ನೊಂದು ಮುಖವನ್ನು ಇಲ್ಲಿ ಬಿಚ್ಚಿಟ್ಟಿರುವುದು ವಿಶೇಷ.

ಎಲ್ಲರೂ ನಿಮ್ಮನ್ನು ಬುದ್ಧಿವಂತ ಅಂತಾರೆ, ಅದ್ಭುತ ನಿರ್ದೇಶಕ ಅಂತಾರೆ, ರಿಯಲ್ ಸ್ಟಾರ್, ಸೂಪರ್ ಸ್ಟಾರ್ ಅಂತ ಎಲ್ಲ ಹೇಳುತ್ತಾರೆ, ಅದೆಲ್ಲವೂ ಸತ್ಯ. ಆದರೆ ಅದೆಲ್ಲಕ್ಕೂ ಮಿಗಿಲಾಗಿ ನೀವು ಪ್ರಾಮಾಣಿಕರು ಮತ್ತು ಒಳ್ಳೆಯ ಮನುಷ್ಯ… ಅಂತ ಚಂದ್ರು ಅವರು ಉಪೇಂದ್ರ ಅವರನ್ನು ಬಣ್ಣಿಸಿದ್ದಾರೆ. ಚಂದ್ರು ಕಂಡಂತೆ ಉಪೇಂದ್ರ ಅವರ ನಿಜವಾದ ವ್ಯಕ್ರಿತ್ವ ಇರೋದೇ ಹಾಗೆ. ಉಪೇಂದ್ರ ಅಂದ್ರೆ ಬುದ್ದಿವಂತ, ಸೂಪರ್‌ ಸ್ಟಾರ್‌, ರಿಯಲ್‌ ಸ್ಟಾರ್‌, ಫಿಲ್ಟರ್‌ ಲೆಸ್‌ ಆಕ್ಟರ್‌ ಎನ್ನುವವುದು ಎಷ್ಟು ನಿಜವೋ ಹಾಗೆಯೇ ಪ್ರಾಮಾಣಿಕರು ಹಾಗೂ ಒಳ್ಳೆಯರು ಹೌದು. ಅವರಿಗೆ ಸಿನಿಲಹರಿ ಕಡೆಯಿಂದಲೂ ಹುಟ್ಟು ಹಬ್ಬದ ಶುಭಾಶಯ.

  • ಎಂಟರ್‌ ಟೈನ್‌ ಮೆಂಟ್‌ ಬ್ಯುರೋ ಸಿನಿ ಲಹರಿ

Related Posts

error: Content is protected !!