ಇದು ಕಲಿಯುಗ ಮಾತ್ರವಲ್ಲ ಸೋಷಿಯಲ್ ಯುಗ. ಕೊರೊನಾ ಬಂದ್ಮೇಲಂತೂ ಸಾಮಾಜಿಕ ಜಾಲತಾಣಕ್ಕೆ ಸಿಕ್ಕಾಪಟ್ಟೆ ಬೇಡಿಕೆ ಇದೆ. ಎಲ್ಲವೂ ಆನ್ ಲೈನ್ ಮಯವಾಗುತ್ತಿದೆ. ಇಂತಹ ಹೊತ್ತಲ್ಲಿ ಬಿಗ್ ಬಾಸ್ ಬೆಡಗಿ ಆನ್ ಲೈನ್ ನಲ್ಲೇ ಎಂಗೇಜ್ಮೆಂಟ್ ಮಾಡಿಕೊಂಡು ಸುದ್ದಿಯಾಗಿದ್ದಾರೆ.
ಬಿಗ್ ಬಾಸ್ ಅತೀ ದೊಡ್ಡ ರಿಯಾಲಿಟಿ ಶೋ. ಕಲರ್ಸ್ ಸಂಸ್ಥೆಯ ಹೆಮ್ಮೆಯ ಕಾರ್ಯಕ್ರಮ. ದೊಡ್ಮನೆಯ ಲ್ಲಿ ನಡೆಯುವ ಈ ಜಬರ್ದಸ್ತ್ ಪ್ರೋಗ್ರಾಂಗೆ ಹಾಗೂ ಕಿಚ್ಚನ ವೀಕೆಂಡ್ ಮಾತಿಗೆ ಮತ್ತು ಮಸ್ತಿಗೆ ವೀಕ್ಷಕರು ಕಣ್ಣರಳಿಸಿ ಕಾಯ್ತಾರೆ. ಇಂತಿಪ್ಪ ಈ ಬಿಗ್ ಹೌಸ್ ಶೋ ಎಂಟು ಸೀಸನ್ ಗಳನ್ನ ಯಶಸ್ವಿಯಾಗಿ ಮುಗಿಸಿದೆ. ಒಂಭತ್ತನೇ ಸೀಸನ್ ಗಾಗಿ ಕಿರುತೆರೆ ವೀಕ್ಷಕರು ಎದುರುನೋಡ್ತಿದ್ದಾರೆ. ಈ ಮಧ್ಯೆ ಬಿಗ್ ಬಾಸ್ ಸೀಸನ್ 8ರ ಸ್ಪರ್ಧಿ ವೈಜಯಂತಿ ಅಡಿಗ ಆನ್ ಲೈನ್ ನಲ್ಲೇ ಎಂಗೇಜ್ ಆಗಿ ಸಪ್ರೈಸ್ ಕೊಟ್ಟಿದ್ದಾರೆ.
ವೈಜಯಂತಿ ಅಡಿಗ ಕೆಲವೇ ಕೆಲವು ದಿನಗಳ ಕಾಲ ಬಿಗ್ ಬಾಸ್ ನಲ್ಲಿದ್ದಂತವರು. ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ದೊಡ್ಮನೆ ಪ್ರವೇಶಿಸಿದ ವೈಜಯಂತಿ, ಅರಮನೆಯಂತಿರುವ ಸೆರೆಮನೆಯಲ್ಲಿ ನನ್ನ ಕೈಲಿ ಇರೋದಕ್ಕೆ ಆಗಲ್ಲ ಅಂತ ಕಣ್ಣೀರಿಟ್ಟಿದ್ದರು. ದಿನಪ್ರತಿಕಣ್ಮಣಿ ಕ್ಯಾಮರಾ ಮುಂದೆ ನಿಂತು ನನ್ನ ಕಳುಹಿಸಿಕೊಡಿ ನನಗೆ ಬಿಗ್ ಬಾಸ್ ಮನೆಯಲ್ಲಿ ಇರೋದಕ್ಕೆ ಆಗ್ತಿಲ್ಲ ಅಂತ ಬೇಡಿಕೊಳ್ತಿದ್ದರು. ಹೀಗಾಗಿ, ಕಿಚ್ಚ ವೈಜಯಂತಿಯವರಿಗೆ ಬಿಗ್ ಬಾಸ್ ಮಹತ್ವ ತಿಳಿಸಿಕೊಟ್ಟು ಬಿಳ್ಕೊಟ್ಟರು. ಇದರಿಂದ ಬ್ರೋಗೌಡ ಶಮಂತ್ ಸೇಫ್ ಆದರು. ಫೈನಲ್ಸ್ ವರೆಗೂ ಟಕ್ಕರ್ ಕೊಟ್ಟರು ಇದೆಲ್ಲ ನಿಮಗೆ ಗೊತ್ತಿದೆ.
ಅಂದು ಬಿಗ್ ಬಾಸ್ ಮನೆಯಿಂದ ಹೊರಬಂದು ಸುದ್ದಿಯಾಗಿದ್ದ ವೈಜಯಂತಿಯವರು ಇಂದು ಆನ್ ಲೈನ್‌ನಲ್ಲೇ ಪ್ರಿಯಕರನ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡು ಸದ್ದು ಮಾಡುತ್ತಿದ್ದಾರೆ. ವೈಜಯಂತಿ ಪ್ರೀತ್ಸಿರುವ ಹುಡುಗ ಸೂರಜ್ ಫಾರಿನ್ ನಲ್ಲಿ ಸೆಟಲ್ ಆಗಿದ್ದಾರೆ. ಕೊರೊನಾ ಆವಾಂತರದಿಂದ ಕರ್ನಾಟಕಕ್ಕೆ ಬರಲಾಗುತ್ತಿಲ್ಲ. ಹೀಗಾಗಿ, ಆನ್ ಲೈನ್ ನಲ್ಲಿ ಲೈವ್ ಬಂದು ನಟಿ ಹಾಗೂ ಬಿಗ್ ಬಾಸ್ ಸ್ಪರ್ಧಿ ಜೊತೆ ಸೂರಜ್ ಎಂಗೇಜ್ ಆಗಿದ್ದಾರೆ. ವೈಜಯಂತಿ ಕುಟುಂಬಸ್ಥರ ಸಮ್ಮುಖದಲ್ಲಿ ನಿಶ್ಚಿತಾರ್ಥ ನೆರವೇರಿದೆ. ಈ ಸುಂದರ ಕ್ಷಣಗಳನ್ನ ಫೋಟೋದಲ್ಲಿ ಸೆರೆಹಿಡಿದು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ನಟಿ ವೈಜಯಂತಿ ಅಡಿಗ ಹಂಚಿಕೊಂಡಿದ್ದಾರೆ.
ನಟಿ ವೈಜಯಂತಿ ಅಡಿಗ ಖ್ಯಾತ ಹೋಟೆಲ್ ಉದ್ಯಮಿ ವಾಸುದೇವ ಅಡಿಗ ಅವರ ಮಗಳು. ಅಮ್ಮಚ್ಚಿಯೆಂಬ ನೆನಪು ಸಿನಿಮಾದಲ್ಲಿ ವೈಜಯಂತಿ ಅಭಿನಯಿಸಿದ್ದಾರೆ. ವೈಲ್ಡ್ ಕಾರ್ಡ್ ಮೂಲಕ ಬಿಗ್ ಬಾಸ್ ಅನುಭವ ಪಡೆದುಕೊಂಡರು. ಈಗ ಬ್ಯಾಚುಲರ್ ಲೈಫ್ ಗೆ ಗುಡ್ ಬೈ ಹೇಳುವ ತವಕದಲ್ಲಿದ್ದಾರೆ. ಪ್ರಿಯಕರ ಸೂರಜ್ ಜೊತೆ ವೈಜಯಂತಿ ದಾಂಪತ್ಯ ಜೀವನಕ್ಕೆ ಕಾಲಿರಿಸಲಿದ್ದಾರೆ. ಸದ್ಯಕ್ಕೆ ಎಂಗೇಜ್ ಆಗಿದ್ದಾರೆ, ಶೀಘ್ರದಲ್ಲೇ ಮದುವೆಯ ಅಪ್ ಡೇಟ್ ನೀಡ್ತಾರೆ.
- ಎಂಟರ್ ಟೈನ್ಮೆಂಟ್ ಬ್ಯೂರೋ ಸಿನಿಲಹರಿ