ದೊಡ್ಮನೆ ಅಭಿಮಾನಿ ದೇವರುಗಳು ಹಬ್ಬ ಮಾಡಿ ಸಂಭ್ರಮಿಸುವಂತಹ ಸುದ್ದಿಯೊಂದು ಹೊರಬಿದ್ದಿದೆ.ರಾಜಕುಮಾರ ಹಾಗೂ ಯುವರತ್ನದಂತಹ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾ ಕೊಟ್ಟಂತಹ ಜೋಡಿ ಮತ್ತೆ ಮತ್ತೆ ಒಂದಾಗಿದೆ. ಮೂರನೇ ಭಾರಿಗೆ ಈ ಜಬರ್ದಸ್ತ್ ಕಾಂಬೋ ಜೊತೆಯಾಗಿರುವುದು ಅಭಿಮಾನಿ ದೇವರುಗಳಲ್ಲಿ ಮಾತ್ರವಲ್ಲ ಮಾಯಬಜಾರ್ ನಲ್ಲೂ ನಿರೀಕ್ಷೆ ಹೆಚ್ಚಿಸಿದೆ.
ಅಪ್ಪು ಮತ್ತು ಸಂತೋಷ್ ಮತ್ತೆ ಒಂದಾಗಬೇಕು ಎನ್ನುವುದು ದೊಡ್ಮನೆ ಭಕ್ತರ ಆಶಯವಾಗಿತ್ತು. ನಿರ್ದೇಶಕ ಸಂತೋಷ್ ಆನಂದ್ ರಾಮ್ ಹೋದಲ್ಲಿ ಬಂದಲ್ಲಿ ಫ್ಯಾನ್ಸ್ ಪವರ್ ಸ್ಟಾರ್ ಗೆ ಮತ್ತೆ ಯಾವಾಗ ಡೈರೆಕ್ಷನ್ ಮಾಡ್ತೀರ ಅಂತ ಕೇಳ್ತಿದ್ದರು. ಫೈನಲೀ, ಪುನೀತ್ ಹಾಗೂ ಸಂತೋಷ್ ಕಾಂಬೋ ಹ್ಯಾಟ್ರಿಕ್ ಬಾರ್ಸೋಕೆ ಸಜ್ಜಾಗಿದೆ.
ರಾಜಕುಮಾರ ಹಾಗೂ ಯುವರತ್ನ ಚಿತ್ರ ನಿರ್ಮಿಸಿದ್ದ ಹೊಂಬಾಳೆ ಸಂಸ್ಥೆಯೇ ಪವರ್ ಫುಲ್ ಕಾಂಬೋ ಚಿತ್ರಕ್ಕೆ ಬಂಡವಾಳ ಹೂಡ್ತಿದೆ. ಈ ಖುಷಿಯ ಸಮಾಚಾರವನ್ನ ಸ್ಟಾರ್ ಡೈರೆಕ್ಟರ್ ಸಂತೋಷ್ ಆನಂದ್ ರಾಮ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅಪ್ಪು ಫ್ಯಾನ್ಸ್ ಫುಲ್ ಎಕ್ಸೈಟ್ ಆಗಿದ್ದಾರೆ.