Categories
ಸಿನಿ ಸುದ್ದಿ

ಡೈರೆಕ್ಟರ್ ಕ್ಯಾಪ್ ಹಾಕಲಿದ್ದಾರೆ ಅಪ್ಪು; ಶಿವಣ್ಣಂಗೆ ಪವರ್‌ಸ್ಟಾರ್ ಡೈರೆಕ್ಷನ್ ! ಹಿಂಗಿರಲಿದೆ ಅಣ್ತಮ್ಮಾಸ್ ಕಾಂಬಿನೇಷನ್ ?

  • ವಿಶಾಲಾಕ್ಷಿ

ದೊಡ್ಮನೆ ಫ್ಯಾನ್ಸ್ ಇಂತಹದ್ದೊಂದು ಸುದ್ದಿನಾ ನಿರೀಕ್ಷೆ ಮಾಡಿದ್ರೋ ಇಲ್ಲವೋ ಗೊತ್ತಿಲ್ಲ. ಆದರೆ, ದೊಡ್ಮನೆ ರಾಜಕುಮಾರ ತಮ್ಮ ಮನೆಯ ಅಭಿಮಾನಿ ದೇವರುಗಳು ಮಾತ್ರವಲ್ಲ ಸಕಲ ಸಿನಿಮಾಕುಲ ಸಂತೋಷಪಡುವಂತಹ, ಹಬ್ಬ ಮಾಡಿ ಸಂಭ್ರಮಿಸುವಂತಹ ಸಪ್ರೈಸಿಂಗ್ ಸುದ್ದಿಯೊಂದನ್ನು ನೀಡಿದ್ದಾರೆ. ಸಲಗ ಸಿನಿಮಾದ ಪ್ರೀ ರಿಲೀಸ್ ಇವೆಂಟ್‌ಗೆ ಸ್ಪೆಷಲ್ ಗೆಸ್ಟ್ ಆಗಿದ್ದ ಪವರ್‌ಸ್ಟಾರ್ ಡೈರೆಕ್ಟರ್ ಹ್ಯಾಟ್ ತೊಡುವ ಕನಸೊಂದನ್ನು ಹೊರ ಹಾಕಿದರು. ಕರುನಾಡ ಚಕ್ರವರ್ತಿಗೆ ಆಕ್ಷನ್ ಕಟ್ ಹೇಳುವ ಬಹು ದಿನದ ಆಸೆಯೊಂದನ್ನು ಅಣ್ಣನ ಮುಂದೆಯೇ ವ್ಯಕ್ತಪಡಿಸಿದರು. ಮುಂದೇನಾಯ್ತ ಅದರ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ.

ಅಣ್ಣಾವ್ರ ಮೂವರು ಮಕ್ಕಳು ಕೂಡಿ ಒಂದು ಸಿನಿಮಾ ಮಾಡ್ಬೇಕು, ದೊಡ್ಡ ಪರದೆಯ ಮೇಲೆ ದೊಡ್ಮನೆಯ ಮೂರು ವಜ್ರಗಳನ್ನು ಕಣ್ತುಂಬಿಕೊಳ್ಳಬೇಕು ಎನ್ನುವುದು ರಾಜ್‌ಕುಟುಂಬದ ಕೋಟ್ಯಾಂತರ ಅಭಿಮಾನಿಗಳ ಕೋರಿಕೆ. ಒಂದೊಳ್ಳೆ ಸ್ಕ್ರಿಪ್ಟ್ ಬಂದರೆ ಒಟ್ಟಿಗೆ ಕೂಡಿ ಚಿತ್ರ ಮಾಡ್ಬೇಕು ಅಂತ ರಾಜ್‌ತ್ರಯರು ಕೂಡ ನಿರ್ಧರಿಸಿದ್ದಾರೆ. ಯಾವಾಗ ಅಣ್ಣಾವ್ರ ಮೂರು ಮುತ್ತುಗಳು ಜೊತೆಗೂಡಿ ಬೆಳ್ಳಿತೆರೆಮೇಲೆ ದಿಬ್ಬಣ ಹೊರಡ್ತಾರೋ ಗೊತ್ತಿಲ್ಲ ಆದರೆ, ಪವರ್‌ಸ್ಟಾರ್ ಡೈರೆಕ್ಷನ್‌ನಲ್ಲಿ ಕರುನಾಡ ಚಕ್ರವರ್ತಿ ಶಿವರಾಜ್‌ಕುಮಾರ್ ಬಿಗ್‌ಸ್ಕ್ರೀನ್ ನಲ್ಲಿ ಧಗಧಗಿಸೋದು ಪಕ್ಕಾ. ಆ ದಿವ್ಯಕ್ಷಣ ಆದಷ್ಟು ಬೇಗ ಬರುತ್ತೆ ಎನ್ನುವ ಬಿಗ್‌ಬ್ರೇಕಿಂಗ್ ನ್ಯೂಸ್‌ವೊಂದನ್ನು ಪುನೀತ್‌ರಾಜ್‌ಕುಮಾರ್ ನೀಡಿದ್ದಾರೆ.

ದೊಡ್ಮನೆಯ ರಾಜಕುಮಾರ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್‌ಗೆ ಡೈರೆಕ್ಟರ್ ಹ್ಯಾಟ್ ತೊಡುವ ಕನಸಿದೆ. ಅದು ಇವತ್ತು ನಿನ್ನೆಯದಲ್ಲ ಬಹಳಷ್ಟು ವರ್ಷಗಳ ಹಿಂದೆಯೇ ಹುಟ್ಟುಕೊಂಡಿದ್ದು. ಆದರೆ, ಲೈಟ್ಸ್-ಕ್ಯಾಮೆರಾ-ಆಕ್ಷನ್ ಅಂತ ಹೇಳೋದಕ್ಕೆ ಅಪ್ಪುಗೂ ಬಿಡುವಿಲ್ಲ. ಅಟ್ ದಿ ಸೇಮ್ ಟೈಮ್ ಸೆಂಚುರಿಸ್ಟಾರ್ ಕೂಡ ಫ್ರೀ ಇಲ್ಲ. ಶಿವಣ್ಣ ಡೈರೆಕ್ಟರ್ಸ್ ಆಕ್ಟರ್ ಆಗಿರೋದ್ರಿಂದ, ಸಂಡೇ ಹೊರತುಪಡಿಸಿ ಉಳಿದೆಲ್ಲಾ ದಿನ ಮುಖಕ್ಕೆ ಬಣ್ಣ ಹಚ್ಚುವುದರಿಂದ ವರ್ಷಪೂರ್ತಿ ಬ್ಯುಸಿಯಾಗಿರುತ್ತಾರೆ. ಅಂದ್ಹಾಗೇ,
ಸೆಂಚುರಿಸ್ಟಾರ್ ಸಿನಿ ಅಕೌಂಟ್‌ನಲ್ಲಿ ಮಿನಿಮಮ್ ಅಂದರೆ ಹತ್ತು ಚಿತ್ರಗಳು ಕುಣಿಯುತ್ತಿರುತ್ತವೆ. ಹೀಗಾಗಿ, ಅಣ್ಣಂಗೆ ತಮ್ಮ ಆಕ್ಷನ್‌ಕಟ್ ಹೇಳೋದಕ್ಕೆ ಟೈಮ್ ಸಿಕ್ಕಿರಲಿಲ್ಲ. ಈಗ್ಲೂ ಅಪ್ಪು ಹಾಗೂ ಶಿವಣ್ಣ ಇಬ್ಬರು ಅವರವರ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ಮಧ್ಯೆ ಮುತ್ತಣ್ಣನಿಗೆ ಆಕ್ಷನ್‌ಕಟ್ ಹೇಳುವ ಸುವರ್ಣಗಳಿಗೆಗಾಗಿ ಅಣ್ಣಬಾಂಡ್ ಕಾತುರದಿಂದ ಕಾಯ್ತಿದ್ದಾರೆ.

ಹೌದು, ಡೈರೆಕ್ಷನ್ ಮಾಡಬೇಕು, ಮಾಡಿದರೆ ಮೊದಲ ಸಿನಿಮಾ ನಮ್ಮ ಅಣ್ಣ ಶಿವಣ್ಣಂಗೆ ಮಾಡಬೇಕು ಎನ್ನುವುದು ಅಪ್ಪು ಆಸೆ. ಆ ಮಹದಾಸೆಯನ್ನು ಸಲಗ' ಸಿನಿಮಾದ ಪ್ರಿರಿಲೀಸ್ ಇವೆಂಟ್ ಸಂದರ್ಭದಲ್ಲಿ ಎಲ್ಲರ ಮುಂದೆ ಹಂಚಿಕೊಂಡರು. ಅಭಿಮಾನಿ ದೇವರುಗಳನ್ನ ಥಿಯೇಟರ್‌ನಲ್ಲಿ ಎಡ್ಜ್ ಆಫ್ ದಿ ಸೀಟ್‌ನಲ್ಲಿ ಕೂರಿಸ್ಬೇಕು ಅಂತಹದ್ದೊಂದು ಸಿನಿಮಾ ಕೊಡ್ಬೇಕು ಎಂದು ನಟಸಾರ್ವಭೌಮ ಓಪನ್ನಾಗಿ ಹೇಳಿಕೊಂಡರು. ತಮ್ಮನ ಮಾತು ಕೇಳಿ ಥ್ರಿಲ್ಲಾದ ಸನ್ ಆಫ್ ಬಂಗಾರದ ಮನುಷ್ಯ ಸ್ಟೇಜ್ ಮೇಲೆ ಬಂದರು. ಯಾರೂ ಊಹಿಸದ ದಿವ್ಯಕ್ಷಣ ಕೂಡಿಬಂತು ಆಗಲೇ ಅಪ್ಪು ಆಕ್ಷನ್ ಹೇಳಿದರುಐ ಲವ್ ಯೂ, ಯೂ ಮಸ್ಟ್ ಲವ್ ಮೀ’ ಎನ್ನುತ್ತಾ ಎದುರಿಗಿದ್ದ ಉಪ್ಪಿ ಕಡೆ ಶಿವಣ್ಣ ಕೈ ತೋರಿಸಿದರು. ಕರುನಾಡ ಚಕ್ರವರ್ತಿಯ ಪ್ರೀತಿಗೆ ಮನಸೋತ ರಿಯಲ್‌ಸ್ಟಾರ್ ವೇದಿಕೆ ಮೇಲೆ ಬಂದು ಹ್ಯಾಟ್ರಿಕ್ ಹೀರೋನ ಅಪ್ಪಿಕೊಂಡರು. ಒಟ್ನಲ್ಲಿ ದುನಿಯಾ ವಿಜಯ್ ಅವರ `ಸಲಗ’ ಕಾರ್ಯಕ್ರಮ ಈ ಅದ್ಭುತ ಕ್ಷಣಕ್ಕೆ ಸಾಕ್ಷಿಯಾಯ್ತು.

`ಸಲಗ’ ಪ್ರಿರಿಲೀಸ್ ಇವೆಂಟ್‌ನಲ್ಲಿ ದೊಡ್ಮನೆಯ ದೊಡ್ಡಸಿನಿಮಾ ಸುದ್ದಿಯೊಂದು ಸ್ಪೋಟಕಗೊಳ್ಳುತ್ತೆ ಅಂತ ಯಾರು ನಿರೀಕ್ಷೆ ಮಾಡಿರಲಿಲ್ಲ. ಹೀಗೆ, ಯಾರೂ ನಿರೀಕ್ಷಿಸದ ಸುದ್ದಿಯೊಂದನ್ನು ಪವರ್‌ಸ್ಟಾರ್ ಎಕ್ಸ್ ಕ್ಲೂಸೀವ್ ಆಗಿ ಕೊಟ್ಟೇಬಿಟ್ಟರು. ಸಪ್ರೈಸಿಂಗ್ ಸುದ್ದಿ ಜೊತೆ ಅಣ್ತಮ್ಮಾಸ್ ಆಕ್ಷನ್ ಕಟ್ ಹೇಳುವ ದೃಶ್ಯವೂ ಸೋಷಿಯಲ್ ಮೀಡಿಯಾದಲ್ಲಿ ಮೆರವಣಿಗೆ ಹೊರಟಿದ್ದನ್ನು ನೋಡಿ ದೊಡ್ಮನೆ ಫ್ಯಾನ್ಸ್ ದೀಪಾವಳಿಗೂ ಮುನ್ನವೇ ಪಟಾಕಿ ಹೊಡೆದಿದ್ದಾರೆ.

ಒಟ್ನಲ್ಲಿ, ದೊಡ್ಮನೆ ಅಭಿಮಾನಿ ದೇವರುಗಳ ಪಾಲಿಗೆ ಇದು ದೊಡ್ಡ ಸುದ್ದಿ. ಅಂದ್ಹಾಗೇ, ಒಬ್ಬ ಕಲಾವಿದನೊಳಗೆ ಒಬ್ಬ ನಿರ್ದೇಶಕ ಇರುತ್ತಾನೆ, ಒಬ್ಬ ನಿರ್ದೇಶಕನೊಳಗೆ ಒಬ್ಬ ಕಲಾವಿದ ಇರುತ್ತಾನೆ ಎನ್ನುವ ಮಾತಿದೆ. ಇದಕ್ಕೆ ಉದಾಹರಣೆಯಾಗಿ ರಿಯಲ್‌ಸ್ಟಾರ್ ಉಪ್ಪಿ-ಕ್ರೇಜಿಸ್ಟಾರ್ ರವಿಚಂದ್ರನ್-ಕಿಚ್ಚ ಸುದೀಪ್- ದುನಿಯಾ ವಿಜಯ್-ರಿಷಬ್ ಶೆಟ್ಟಿ- ರಕ್ಷಿತ್ ಶೆಟ್ಟಿ ಹೀಗೆ ಹಲವು ಧ್ರುವತಾರೆಗಳು ಕಣ್ಮುಂದೆ ಇದ್ದಾರೆ. ಇದಕ್ಕೆ, ಆದಷ್ಟು ಬೇಗ ಪವರ್‌ಸ್ಟಾರ್ ಕೂಡ ಸೇರ್ಪಡೆಯಾಗಲಿದ್ದಾರೆ. ಆ ಸುವರ್ಣಕ್ಷಣ ಆದಷ್ಟು ಬೇಗ ಕೂಡಿಬರಲಿ, ಅಣ್ತಮ್ಮಾಸ್ ಹವಾ ಆಕಾಶ ಮುಟ್ಟಲಿ.

ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಕನ್ನಡದ ಹುಡುಗಿ ಕೃತಿಕಾ ಈಗ ನಿರ್ಮಾಪಕಿ! ಸುಕೃಶಿಯ ಉತ್ತರಾಂಗ ಪ್ರಸಂಗ…

ತಮ್ಮ ಪಾರ್ಟ್ನರ್‌ ಜೊತೆ ಸುಕೃಶಿ ಕ್ರಿಯೇಷನ್ಸ್‌ ಎಂಬ ಹೊಸ ನಿರ್ಮಾಣ ಸಂಸ್ಥೆ ಹುಟ್ಟುಹಾಕಿರುವ ಕೃತಿಕಾ, ಆ ಮೂಲಕ ಅವರು “ಉತ್ತರಾಂಗ” ಎಂಬ ಹೆಸರಿನ ಶೀರ್ಷಿಕೆಯನ್ನು ಅನಾವರಣ ಮಾಡಿದ್ದಾರೆ. ಈ ಮೂಲಕ ಕೃತಿಕಾ ನಿರ್ಮಾಪಕಿಯಾಗಿಯೂ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಇನ್ನು, ಈ ಚಿತ್ರದಲ್ಲಿ ಕೃತಿಕಾ ಪ್ರಮುಖ ಆಕರ್ಷಣೆಯಾಗಿದ್ದು, ಅವರಿಗೆ ಹೀರೋ ಯಾರು ಮತ್ತು ಸಿನಿಮಾದಲ್ಲಿ ಯಾರೆಲ್ಲಾ ಇರುತ್ತಾರೆ ಅನ್ನುವುದು ಇಷ್ಟರಲ್ಲೇ ಗೊತ್ತಾಗಲಿದೆ.

ಈ ಬಣ್ಣದ ಲೋಕವೇ ಹಾಗೆ. ಇಲ್ಲಿ ಬಂದವರಿಗೆ ಎಲ್ಲದರಲ್ಲೂ ತೊಡಗಿಸಿಕೊಳ್ಳಬೇಕೆಂಬ ಹಂಬಲ ಇದ್ದೇ ಇರುತ್ತೆ. ಈಗಾಗಲೇ ಹೀರೋ ನಿರ್ದೇಶಕರಾಗಿದ್ದಾರೆ. ನಿರ್ದೇಶಕ ಹೀರೋ ಆಗಿದ್ದಾರೆ. ನಿರ್ಮಾಪಕ ಕೂಡ ನಿರ್ದೇಶಕ, ಹೀರೋ ಆಗಿದ್ದೂ ಉಂಟು! ಹಾಗೆಯೇ ಅದೆಷ್ಟೋ ನಟಿಯರು ಕೂಡ ನಿರ್ಮಾಣದತ್ತ ವಾಲಿರುವುದು ಹೊಸದೇನಲ್ಲ. ಆ ಸಾಲಿಗೆ ಈಗ ನಟಿ ಕೃತಿಕಾ ಕೂಡ ಈಗ ನಿರ್ಮಾಪಕಿಯಾಗಿದ್ದಾರೆ. ಹೀಗೆಂದರೆ ಅಚ್ಚರಿಯಾಗಬಹುದು. ಆದರೂ ಇದು ಸತ್ಯ. ಸ್ವತಃ ಕೃತಿಕಾ ಅವರೇ ಈ ವಿಷಯವನ್ನು ಸ್ಪಷ್ಟಪಡಿಸಿದ್ದಾರೆ. “ಸಿನಿಲಹರಿ” ಜೊತೆ ಈ ವಿಷಯ ಹಂಚಿಕೊಂಡಿರುವ ಕೃತಿಕಾ ತಮ್ಮ ಸಿನಿಮಾದ ಕುರಿತು ಒಂದಷ್ಟು ಹೇಳಿಕೊಂಡಿದ್ದಾರೆ.


ತಮ್ಮ ಪಾರ್ಟ್ನರ್‌ ಜೊತೆ ಸುಕೃಶಿ ಕ್ರಿಯೇಷನ್ಸ್‌ ಎಂಬ ಹೊಸ ನಿರ್ಮಾಣ ಸಂಸ್ಥೆಯನ್ನು ಹುಟ್ಟುಹಾಕಿರುವ ಕೃತಿಕಾ, ಆ ಮೂಲಕ ಅವರು “ಉತ್ತರಾಂಗ” ಎಂಬ ಹೆಸರಿನ ಶೀರ್ಷಿಕೆಯನ್ನು ಅನಾವರಣ ಮಾಡಿದ್ದಾರೆ. ಈ ಮೂಲಕ ಕೃತಿಕಾ ನಿರ್ಮಾಪಕಿಯಾಗಿಯೂ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಇನ್ನು, ಈ ಚಿತ್ರದಲ್ಲಿ ಕೃತಿಕಾ ಪ್ರಮುಖ ಆಕರ್ಷಣೆಯಾಗಿದ್ದು, ಅವರಿಗೆ ಹೀರೋ ಯಾರು ಮತ್ತು ಸಿನಿಮಾದಲ್ಲಿ ಯಾರೆಲ್ಲಾ ಇರುತ್ತಾರೆ ಅನ್ನುವುದು ಇಷ್ಟರಲ್ಲೇ ಗೊತ್ತಾಗಲಿದೆ.

ಈ “ಉತ್ತರಾಂಗ” ಸಿನಿಮಾಗೆ ಶಿವಾನಿ ಎನ್ನುವವರು ನಿರ್ದೇಶನ ಮಾಡುತ್ತಿದ್ದಾರೆ. ಇವರೊಂದಿಗೆ ಕೃತಿಕಾ ನಿರ್ಮಾಣ ಮಾಡುತ್ತಿದ್ದಾರೆ. ನಿರ್ದೇಶಕ ಶಿವಾನಿ ಅವರಿಗೆ ಇದು ಚೊಚ್ಚಲ ನಿರ್ದೇಶನದ ಸಿನಿಮಾ. ಈ ಹಿಂದೆ ಅವರು ಹಲವಾರು ಆಲ್ಬಂ ಸಾಂಗ್‌ ಮತ್ತು ಕಿರುಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ. ಆ ಅನುಭವದ ಮೇಲೆ ಅವರೇ ಕಥೆ ಮತ್ತು ಚಿತ್ರಕಥೆ ಬರೆದು “ಉತ್ತರಾಂಗ” ಸಿನಿಮಾ ನಿರ್ದೇಶಿಸುತ್ತಿದ್ದಾರೆ.

ಇದೊಂದು ಸಸ್ಪೆನ್ಸ್‌ ಥ್ರಿಲ್ಲರ್‌ ಅಂಶಗಳನ್ನು ಒಳಗೊಂಡಿರುವ ಸಿನಿಮಾ. ಉಳಿದಂತೆ ಕಥೆಯ ಒನ್‌ ಲೈನ್‌ ಏನು, ಯಾವಾಗ ಶುರುವಾಗಲಿದೆ, ಎಲ್ಲೆಲ್ಲಿ ಚಿತ್ರೀಕರಣಗೊಳ್ಳಲಿದೆ ಎಂಬಿತ್ಯಾದಿ ಪ್ರಶ್ನೆಗಳಿಗೆ ಇಷ್ಟರಲ್ಲೇ ಉತ್ತರ ಕೊಡುವುದಾಗಿ ಹೇಳುತ್ತಾರೆ ಕೃತಿಕಾ.


ಅಂದಹಾಗೆ, ಸಿನಿಮಾಗೆ “ಗೋಧಿಬಣ್ಣ ಸಾಧಾರಣ ಮೈಕಟ್ಟು” ಸಿನಿಮಾಗೆ ಕ್ಯಾಮೆರಾ ಹಿಡಿದಿದ್ದ ನಂದಕಿಶೋರ್‌ ಅವರು ಈ ಸಿನಿಮಾಗೂ ಕ್ಯಾಮೆರಾ ಹಿಡಿಯುತ್ತಿದ್ದಾರೆ.

ಉಳಿದಂತೆ ಸಂಗೀತ ನಿರ್ದೇಶಕರು ಯಾರು ಅನ್ನುವುದನ್ನೂ ಇಷ್ಟರಲ್ಲೇ ಚಿತ್ರತಂಡ ಹೇಳಲಿದೆ. ಅದೇನೆ ಇರಲಿ, ಕೃತಿಕಾ ಮೊದಲ ಬಾರಿಗೆ ನಿರ್ಮಾಣ ಸಂಸ್ಥೆ ಹುಟ್ಟುಹಾಕಿ, ಆ ಮೂಲಕ ಒಂದು ಹೊಸ ಬಗೆಯ ಕಥೆ ಇಟ್ಟುಕೊಂಡು ಸಿನಿಮಾ ಮಾಡಲು ಮುಂದಾಗಿರುವುದು ನಿಜಕ್ಕೂ ಖುಷಿಯ ವಿಷಯ. ಅವರ ಈ ಪ್ರಯತ್ನಕ್ಕೆ ಗೆಲುವು ಸಿಗಲಿ ಅನ್ನುವುದು “ಸಿನಿಲಹರಿ” ಆಶಯ.

Categories
ಸಿನಿ ಸುದ್ದಿ

ಶೂಟಿಂಗ್ ಗೆ ರೆಡಿಯಾದ ಟೆನೆಂಟ್ ಟೀಮ್!

ಯುವ ಪ್ರತಿಭೆ ಶ್ರೀಧರ್ ಶಾಸ್ತ್ರಿ ನಿರ್ದೇಶನದಲ್ಲಿ ಮೂಡಿ ಬರಲಿರುವ ಹೊಸ ಸಿನಿಮಾ ‘ಟೆನೆಂಟ್’. ಟೈಟಲ್ ಹಾಗೂ ಚಿತ್ರದ ಥೀಮ್ ಪೋಸ್ಟರ್ ಬಿಡುಗಡೆ ಮಾಡಿ ಗಮನ ಸೆಳೆಯುತ್ತಿರುವ ಚಿತ್ರತಂಡ, ಮುಂದಿನ ವಾರದಿಂದ ಚಿತ್ರೀಕರಣ ಆರಂಭಿಸಲಿದೆ.

‘ಅನ್ ಲಾಕ್’ ಕಿರುಚಿತ್ರದ ಮೂಲಕ ಗುರುತಿಸಿಕೊಂಡಿದ್ದ ಶ್ರೀಧರ್ ಶಾಸ್ತ್ರಿ, ಇದೇ ಮೊದಲ ಬಾರಿಗೆ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ. ಚಿತ್ರಕ್ಕೆ ಕಥೆ, ಚಿತ್ರಕಥೆ ಜವಾಬ್ದಾರಿಯನ್ನು ಶ್ರೀಧರ್ ಶಾಸ್ತ್ರಿಯವರೇ ಹೊತ್ತುಕೊಂಡಿದ್ದಾರೆ.

ಧರ್ಮ ಕೀರ್ತಿರಾಜ್, ತಿಲಕ್ ಶೇಖರ್, ಸೋನು ಗೌಡ, ರಾಕೇಶ್ ಮಯ್ಯ, ಉಗ್ರಂ ಮಂಜು. ಚಿತ್ರದ ತಾರಾಬಳಗಲ್ಲಿದ್ದಾರೆ.

ಲಾಕ್ ಡೌನ್ ಸಂದರ್ಭದಲ್ಲಿ ನಡೆಯುವ ಕ್ರೈಂ ಥ್ರಿಲ್ಲರ್ ಸಿನಿಮಾ ಟೆನೆಂಟ್. ಬಾಡಿಗೆದಾರ ಹಾಗೂ ಮಾಲೀಕನ ನಡೆಯುವ ಕಥೆ ಚಿತ್ರದಲ್ಲಿದೆ.

ಮನೋಹರ್ ಜೋಶಿ ಛಾಯಾಗ್ರಹಣ, ಗಿರೀಶ್ ಒತ್ತೂರು ಸಂಗೀತ ನಿರ್ದೇಶನ ಚಿತ್ರಕ್ಕಿದೆ. ಮಾಸ್ಟರ್ ಚಾಯ್ಸ್ ಕ್ರಿಯೇಷನ್ ಬ್ಯಾನರ್ ನಡಿ ಟಿ.ನಾಗರಾಜ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

Categories
ಸಿನಿ ಸುದ್ದಿ

ಕನ್ನೇರಿ ಫಸ್ಟ್ ಲುಕ್ ರಿಲೀಸ್ ಮಾಡಿದ ನಾಗತಿಹಳ್ಳಿ ಮೇಷ್ಟ್ರು

ನೀನಾಸಂ ಮಂಜು ನಿರ್ದೇಶನದ ‘ಕನ್ನೇರಿ’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ನೈಜ ಘಟನೆ ಆಧಾರಿತ ಮಹಿಳಾ ಪ್ರಧಾನ ಚಿತ್ರವಿದು. ಬಿಡುಗಡೆಗೆ ಸಜ್ಜಾಗಿರುವ ಈ ಚಿತ್ರದ ಫಸ್ಟ್ ಲುಕ್ ಅನ್ನು ನಾಗತಿಹಳ್ಳಿ ಚಂದ್ರಶೇಖರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.

ಚಿತ್ರದಲ್ಲಿ ಅರ್ಚನಾ ಮಧುಸೂಧನ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು,
ಅನಿತಾ ಭಟ್, ಎಂ.ಕೆ.ಮಠ್, ಅರುಣ್ ಸಾಗರ್, ಕರಿಸುಬ್ಬು, ಸರ್ದಾರ್ ಸತ್ಯ ಒಳಗೊಂಡ ಪ್ರತಿಭಾನ್ವಿತ ಕಲಾವಿದರ ತಂಡ ಚಿತ್ರದಲ್ಲಿದೆ.

ಚಿತ್ರೀಕರಣ ಕಂಪ್ಲೀಟ್ ಮಾಡಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿ ಇರುವ ಚಿತ್ರತಂಡ, ಫಸ್ಟ್ ಲುಕ್ ಬಿಡುಗಡೆ ಮಾಡುವ ಮೂಲಕ ಚಿತ್ರದ ಪ್ರಚಾರ ಕಾರ್ಯ ಆರಂಭಿಸಿದೆ.

ಬುಡ್ಡಿ ದೀಪ ಸಿನಿಮಾ ಹೌಸ್ ಬ್ಯಾನರ್ ನಡಿ ಪಿ.ಪಿ ಹೆಬ್ಬಾರ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಗಣೇಶ್ ಹೆಗ್ಡೆ ಛಾಯಾಗ್ರಹಣ , ಮಣಿಕಾಂತ್ ಕದ್ರಿ ಸಂಗೀತ ನಿರ್ದೇಶನ, ಸುಜಿತ್ ನಾಯಕ್ ಸಂಕಲನ ಕನ್ನೇರಿ ಚಿತ್ರಕ್ಕಿದೆ.

Categories
ಸಿನಿ ಸುದ್ದಿ

ಅನಿತಾಭಟ್‌ ಈಗ ಮೇಡಮ್‌ ಇಂದಿರಾ! ಮತ್ತೊಂದು ಸೈಕಲಾಜಿಕಲ್‌ ಥ್ರಿಲ್ಲರ್‌ ಜೊತೆ ಬರೋಕೆ ರೆಡಿಯಾದ್ರು ಭಟ್ರು!!

“ಇಂದಿರಾ” ಅಂದಾಕ್ಷಣ, ತಕ್ಷಣವೇ ನೆನಪಾಗೋದೇ ಮೇಡಮ್‌ ಇಂದಿರಾಗಾಂಧಿ! ಹಾಗಂತ, ಅವರ ಜೀವನ ಚರಿತ್ರೆಯ ಸಿನಿಮಾವಂತೂ ಅಲ್ಲ. ಅದರಲ್ಲೂ ಅವರ ಬದುಕಿನ ಅಂಶಗಳೂ ಇಲ್ಲಿ ಸುಳಿದಾಡುವುದಿಲ್ಲ. “ಇಂದಿರಾ” ಅನ್ನೋದು ಕಥಾ ನಾಯಕಿಯ ಪಾತ್ರವಷ್ಟೇ. ಉಳಿದಂತೆ ಇದೊಂದು ಎಮೋಷನಲ್‌ ಜರ್ನಿ ಸಿನಿಮಾವಂತೆ.

ಕನ್ನಡದ ಗ್ಲಾಮರಸ್‌ ನಟಿ ಎನಿಸಿಕೊಂಡಿರುವ ಅನಿತಾಭಟ್, ಇತ್ತೀಚೆಗಷ್ಟೇ ಹೊಸಬಗೆಯ ಸಿನಿಮಾ ನಿರ್ಮಾಣ ಮಾಡುವ ಮೂಲಕ ಸುದ್ದಿಯಲ್ಲಿದ್ದರು. ಈಗ ಮತ್ತೊಂದು ಸುದ್ದಿಯಲ್ಲಿದ್ದಾರೆ. ಹೌದು, ಅನಿತಾಭಟ್‌ “ಅನಿತಾಭಟ್‌ ಕ್ರಿಯೇಷನ್ಸ್‌ ಮೂಲಕ ಸಿನಿಮಾ ನಿರ್ಮಾಣ ಮಾಡಿದ ಬಗ್ಗೆ ಈ ಹಿಂದೆ ಹೇಳಲಾಗಿತ್ತು. ಅವರ ನಿರ್ಮಾಣದ ಸಿನಿಮಾದಲ್ಲಿ ಸ್ವತಃ ಅನಿತಾಭಟ್‌ ವಿಶೇಷ ಪಾತ್ರದಲ್ಲೂ ಕಾಣಿಸಿಕೊಂಡಾಗಿದೆ. ಅ ಚಿತ್ರ ಇನ್ನೇನು ಪ್ರೇಕ್ಷಕರ ಮುಂದೆ ಬರಲು ರೆಡಿಯಾಗಿದೆ. ಅದರ ಬೆನ್ನಲ್ಲೇ, ಅನಿತಾಭಟ್‌ ಮತ್ತೊಂದು ಸಿನಿಮಾ ಮಾಡಿದ್ದಾರೆ ಅನ್ನೋದೇ ಈ ಹೊತ್ತಿನ ವಿಶೇಷ.
ಹೌದು, ನಟಿ ಅನಿತಾಭಟ್‌ ತಮ್ಮ “ಅನಿತಾ ಭಟ್‌ ಕ್ರಿಯೇಷನ್ಸ್‌” ಮೂಲಕ ಡಾಟ್‌ ಟಾಕೀಸ್‌ನಡಿ ಹೊಸ ಬಗೆಯ ಸಿನಿಮಾ ಮಾಡಿದ್ದಾರೆ. ಆ ಸಿನಿಮಾದ ಫಸ್ಟ್‌ ಲುಕ್‌ ಪೋಸ್ಟರ್‌ ಅನ್ನು ಪವರ್‌ ಸ್ಟಾರ್‌ ಪುನೀತ್‌ ರಾಜಕುಮಾರ್‌ ಅವರು ಬಿಡುಗಡೆ ಮಾಡುವ ಮೂಲಕ ಶುಭ ಹಾರೈಸಿದ್ದಾರೆ. ಅಂದಹಾಗೆ, ಆ ಚಿತ್ರಕ್ಕೆ “ಇಂದಿರಾ” ಅಂತ ನಾಮಕರಣ ಮಾಡಲಾಗಿದೆ.

“ಇಂದಿರಾ” ಅಂದಾಕ್ಷಣ, ತಕ್ಷಣವೇ ನೆನಪಾಗೋದೇ ಮೇಡಮ್‌ ಇಂದಿರಾಗಾಂಧಿ! ಹಾಗಂತ, ಅವರ ಜೀವನ ಚರಿತ್ರೆಯ ಸಿನಿಮಾವಂತೂ ಅಲ್ಲ. ಅದರಲ್ಲೂ ಅವರ ಬದುಕಿನ ಅಂಶಗಳೂ ಇಲ್ಲಿ ಸುಳಿದಾಡುವುದಿಲ್ಲ. “ಇಂದಿರಾ” ಅನ್ನೋದು ಕಥಾ ನಾಯಕಿಯ ಪಾತ್ರವಷ್ಟೇ. ಉಳಿದಂತೆ ಇದೊಂದು ಎಮೋಷನಲ್‌ ಜರ್ನಿ ಸಿನಿಮಾವಂತೆ. ಈ ಸಿನಿಮಾ ಕುರಿತಂತೆ ಸ್ವತಃ ಅನಿತಾಭಟ್‌ ಹೇಳುವುದಿಷ್ಟು. “ನಾನು “ಇಂದಿರಾ” ಎಂಬ ಸಿನಿಮಾದಲ್ಲಿ ಇಂದಿರಾ ಎಂಬ ಪಾತ್ರ ನಿರ್ವಹಿಸುತ್ತಿದ್ದೇನೆ. ಅದೊಂದು ವಿಭಿನ್ನ ಮತ್ತು ವಿಶೇಷವಾಗಿರುವಂತಹ ಪಾತ್ರವದು. ಚಿತ್ರದಲ್ಲಿ ನನಗೊಂದು ಅಪಘಾತ ಆಗುತ್ತದೆ. ಅದರಿಂದಾಗಿ ನಾನು ಅಂಧೆ ಆಗ್ತೀನಿ. ಅಷ್ಟೇ ಅಲ್ಲ, ನನ್ನ ಮೆಮೋರಿ ಕೂಡ ಲಾಸ್‌ ಆಗುತ್ತೆ. ಅಪಘಾತ ಆಗಿದ್ದು ಯಾಕೆ, ಮಾಡಿದ್ದು ಯಾರು? ಉದ್ದೇಶ ಪೂರ್ವಕವಾಗಿಯೇ ಅಪಥಾಗ ಮಾಡಲಾಯಿತಾ ಎಂಬಿತ್ಯಾದಿ ಪ್ರಶ್ನೆಗಳ ಸುತ್ತವೇ ಕಥೆ ಸಾಗುತ್ತದೆ. ಅದಕ್ಕೆ ಉತ್ತರ ಸಿನಿಮಾ ನೋಡಬೇಕು” ಎನ್ನುತ್ತಾರೆ ಅನಿತಾಭಟ್.‌

ಇನ್ನು, ಚಿತ್ರದಲ್ಲಿ ವಿಶೇಷ ಪಾತ್ರಳೂ ಇವೆ. ನೀತುಶೆಟ್ಟಿ, ಷಫಿ, ಚಕ್ರವರ್ತಿ ಚಂದ್ರಚೂಡ್‌ ಇವರು ಪ್ರಮುಖ ಪಾತ್ರಗಳಲ್ಲಿ ಗಮನಸೆಳೆಯುತ್ತಾರೆ. ನಾನು ಅಂಧೆಯಾಗಿ ಮೆಮೋರಿ ಲಾಸ್‌ ಮಾಡಿಕೊಂಡ ಬಳಿಕ ನೋಡಿಕೊಳ್ಳುವ ಮೂರು ಪಾತ್ರಗಳಿವು. ನಾನು ಚೆನ್ನಾಗಿದ್ದಾಗ ಅವರೆಲ್ಲಾ ಹೇಗೆ ಕನೆಕ್ಟ್‌ ಆದರು ಅನ್ನೋದು ನಂತರ ರಿವೀಲ್‌ ಆಗುತ್ತಾ ಹೋಗುತ್ತೆ. ಇನ್ನು, ಅಪಘಾತವಾಗಿದ್ದರೂ, ನನ್ನ ಗಂಡ ಪತ್ತೆ ಆಗಲ್ಲ. ಅವನು ಎಲ್ಲಿ ಹೋದ ಅನ್ನೋದು ಪ್ರಶ್ನೆ ಗಾಢವಾಗಿ ಕಾಡುತ್ತದೆ. ಇಲ್ಲಿ ರೆಹಮಾನ್‌ ಹಾಸನ್‌ ಗಂಡನ ಪಾತ್ರ ಮಾಡಿದ್ದಾರೆ. ಅವರ ಪಾತ್ರವೂ ಇಲ್ಲಿ ಪ್ರಮುಖವಾಗಿದೆ.

ಅಂದಹಾಗೆ, ಇದೊಂದು ಸೈಕಲಾಜಿಕಲ್‌ ಥ್ರಿಲ್ಲರ್‌ ಚಿತ್ರ. ಭ್ರೈನ್‌ ಮನುಷ್ಯನ ಜೀವನವನ್ನು ಹೇಗೆ ಕಂಟ್ರೋಲ್‌ ಮಾಡುತ್ತೆ ಅನ್ನುವುದರ ಸುತ್ತ ನಡೆಯೋ ಕಥೆ ಅದು. ಭ್ರಮೆಯಿಂದ ಆಚೆ ಬರೋದು ಹೇಗೆ ಎಂಬಿತ್ಯಾದಿ ಕುರಿತಂತೆ ಮತ್ತು ಮೆಂಟಲಿ ಹೆಲ್ತ್‌ ಎಷ್ಟು ಮುಖ್ಯ ಎಂಬುದರ ಬಗ್ಗೆ ಹೇಳಲಾಗಿದೆ” ಎನ್ನುತ್ತಾರೆ ಅನಿತಾಭಟ್.‌ ಇನ್ನು, ಈ ಚಿತ್ರವನ್ನು ರಿಷಿಕೇಶ್‌ ನಿರ್ದೇಶನ ಮಾಡಿದ್ದಾರೆ. ಅವರೇ ಕ್ಯಾಮೆರಾ ಹಿಡಿದಿದ್ದು, ಸಂಕಲನದ ಜೊತೆಗೆ ಪೋಸ್ಟರ್‌ ಡಿಜೈನ್‌ ಮತ್ತು ಡಿಐ ಕೂಡ ಅವರೇ ಮಾಡಿದ್ದಾರೆ. ಇದು ಕನ್ನಡ ಮತ್ತು ತೆಲುಗಿನಲ್ಲಿ ತಯಾರಾಗಿದೆ.

Categories
ಸಿನಿ ಸುದ್ದಿ

ಕಬ್ಜ ಅಖಾಡಕ್ಕೆ ದಬಾಂಗ್ ವಿಲನ್ ಎಂಟ್ರಿ; ಬಘೀರನಾಗಿ ನವಾಬ್ ಷಾ ಅಬ್ಬರ – ಆರ್ಭಟ ! ಹಿಂದಿಗಿಂತ ಕನ್ನಡ ಚಿತ್ರರಂಗ ಬೆಸ್ಟ್ ಎಂದರು ಬಿಟೌನ್ ನವಾಬ್ !

ಪರಭಾಷಾ ನಟರುಗಳು ಗಂಧದಗುಡಿಗೆ ಲಗ್ಗೆ ಇಡೋದು ಹೊಸದೇನಲ್ಲ. ದಿಗ್ಗಜರ ಕಾಲದಿಂದಲೂ ಹೊರ ರಾಜ್ಯದ ಕಲಾವಿದರು ಕನ್ನಡ ಚಿತ್ರರಂಗಕ್ಕೆ ಬಲಗಾಲಿಟ್ಟು ಬಂದು ಹೋಗಿದ್ದಾರೆ. ಸಾಹಸಸಿಂಹ ವಿಷ್ಣುವರ್ಧನ್ ಅವರೊಟ್ಟಿಗೆ ಹದಿನೇಳು ವರ್ಷಗಳ ಹಿಂದೆ ಸ್ಕ್ರೀನ್ ಶೇರ್ ಮಾಡಿದ್ದ ಬಿಟೌನ್ ನವಾಬ್. ಇದೀಗ ಮತ್ತೊಮ್ಮೆ ಸ್ಯಾಂಡಲ್‌ವುಡ್‌ಗೆ ಎಂಟ್ರಿಕೊಟ್ಟಿದ್ದಾರೆ. ರಿಯಲ್‌ಸ್ಟಾರ್ ಉಪೇಂದ್ರ ಅಭಿನಯದ ಹೈವೋಲ್ಟೇಜ್ `ಕಬ್ಜ’ ಅಖಾಡಕ್ಕೆ ಧುಮ್ಕಿದ್ದಾರೆ

ಬಿಟೌನ್ ನವಾಬ್ ಲುಕ್- ಗೆಟಪ್ ಸಖತ್ ಟೆರಿಫಿಕ್‌ ಆಗಿದೆ. 6.5 ಹೈಟ್ ನಲ್ಲಿ ಘಟೋದ್ಗಜನಂತೆ ಕಾಣುವ ನವಾಬ್, ಕಬ್ಜದಲ್ಲಿ ಬಘೀರನಾಗಿ ಘರ್ಜಿಸಲಿದ್ದಾರೆ. ಪವರ್ ಫುಲ್ ಡಾನ್‌ ಆಗಿ ಇಡೀ ಸೌತ್ ಇಂಡಿಯಾನ ಕಂಟ್ರೋಲ್ ಮಾಡ್ತಾರಂತೆ. ನವಾಬ್ ಔಟ್ ಫಿಟ್ ಅಂಡ್ ಕ್ರೂಷಿಯಲ್ ಟ್ಯಾಟೂ ನೋಡಿದರೆ ಗೊತ್ತಾಗುತ್ತೆ ಬಘೀರ ಎಷ್ಟು ಭಯಂಕರ ಅಂತ. ಇಡೀ ಸೌತ್ ಸಿನಿಮಾ ಇಂಡಸ್ಟ್ರಿಯನ್ನಾಳಿರುವ ಇವರು ಹಿಂದಿ ಚಿತ್ರರಂಗಕ್ಕಿಂತ ಕನ್ನಡ ಚಿತ್ರರಂಗವೇ ಬೆಸ್ಟ್ ಎಂದು ‌ಕೊಂಡಾಡಿದ್ದಾರೆ

ಕತ್ರಿಗುಪ್ಪೆಯಿಂದ ಕಿಕ್‌ಸ್ಟಾರ್ಟ್ ಪಡೆದುಕೊಂಡು ಸೆಟ್ಟೇರಿದ ಕನ್ನಡದ ಕಬ್ಜ' ಚಿತ್ರ, ಕೋಟಿ ಮೇಕಿಂಗ್- ಕಾಸ್ಟ್ಲೀ ಸ್ಟಾರ್‌ ಕಾಸ್ಟ್ ನಿಂದಲೇ ಕತ್ರಿಗುಪ್ಪೆ ಗಡಿದಾಟಿಕೊಂಡು ಇಡೀ ವರ್ಲ್ಡ್ ವೈಡ್ ‌ ಖ್ಯಾತಿ ಹೊಂದುತ್ತಿದೆ.ಕಬ್ಜ’ ಹವಾ ಅಟ್ ಪ್ರಸೆಂಟ್ ಹೆಂಗಿದೆ ಅಂದರೆ ಆಲ್ ಓವರ್ ಇಂಡ್ಯಾ ಮತ್ತೊಮ್ಮೆ ಕನ್ನಡ ಚಿತ್ರರಂಗದತ್ತ ತಿರುಗಿ ನೋಡ್ತಿದೆ. ಹೀಗೆ, ಪ್ಯಾನ್ ಇಂಡಿಯಾ ತುಂಬೆಲ್ಲಾ ಸದ್ದು ಮಾಡುತ್ತಿರುವ ಕಬ್ಜ ಚಿತ್ರತಂಡಕ್ಕೆ ಬಿಟೌನ್ ನವಾಬ್ ಸೇರ್ಪಡೆಗೊಂಡಿದ್ದಾರೆ.

ನವಾಬ್ … ಬಿಟೌನ್ ನವಾಬ್… ಪಂಚಭಾಷಾ ನಟ, ಅಭಿನಯದಲ್ಲಿ ನಟಭಯಂಕರ. ಹಿಂದಿ- ತೆಲುಗು- ತಮಿಳು- ಮಲೆಯಾಂ ಹೀಗೆ ಸೌತ್ ಸಿನಿಮಾ ಇಂಡಸ್ಟ್ರಿ ಸುತ್ತಿ ಬಂದಿರುವ ನವಾಬ್ ಷಾ, ಸಾಹಸಸಿಂಹ ವಿಷ್ಣುವರ್ಧನ್ ಅಭಿನಯದ ಜೇಷ್ಠ ಚಿತ್ರದ ಮೂಲಕ ಕನ್ನಡಕ್ಕೆ ಎಂಟ್ರಿಕೊಟ್ಟಿದ್ದರು. ಇದೀಗ ಹದಿನೇಳು ವರ್ಷಗಳು ಕಳೆದ ಮೇಲೆ ನವಾಬ್ ಮತ್ತೆ ಸ್ಯಾಂಡಲ್ ವುಡ್ ಗೆ ಬಂದಿದ್ದಾರೆ.‌ ಕೋಟಿಗೊಬ್ಬ 3 ಚಿತ್ರದಲ್ಲಿ ಕಿಚ್ಚನ ಜೊತೆ ಕಾದಾಡಿದ ಬೆನ್ನಲ್ಲೇ ರಿಯಲ್ ಸ್ಟಾರ್ ಉಪ್ಪಿಯ ಕಬ್ಜದಲ್ಲಿ ಕಮಾಲ್ ಮಾಡೋದಕ್ಕೆ ಬೆಂಗಳೂರಿಗೆ ಬಂದಿಳಿದಿದ್ದಾರೆ.

ಸಿಲಿಕಾನ್ ಸಿಟಿಯಲ್ಲಿರುವ ಮಿನರ್ವ ಮಿಲ್ ನಲ್ಲಿ ಕಬ್ಜ ಚಿತ್ರದ ಶೂಟಿಂಗ್ ನಡೀತಿದೆ. ಕೋಟಿ ಕೋಟಿ ಖರ್ಚು ಮಾಡಿ ವೆರೈಟಿ ವೆರೈಟಿ ಸೆಟ್ ಹಾಕಿಸಿದ್ದಾರೆ. ಕೆಜಿಎಫ್ ಕಲಾ ನಿರ್ದೇಶಕ ಶಿವಕುಮಾರ್ ‘ ಕಬ್ಜ’ ಚಿತ್ರಕ್ಕೆ ಸೆಟ್ ನಿರ್ಮಿಸಿ ಕೊಟ್ಟಿದ್ದಾರೆ. ಅದ್ದೂರಿ ಸೆಟ್ ನಲ್ಲಿ ಈಗಾಗಲೇ ನಾಲ್ಕು ಹಂತದ ಚಿತ್ರೀಕರಣ ಮುಗಿಸಿರುವ ಟೀಮ್, ಈಗ ಐದನೇ ಹಂತದ ಟಾಕಿಪೋರ್ಶನ್ ಚಿತ್ರೀಕರಣದಲ್ಲಿ ನಿರತವಾಗಿದೆ. ಸದ್ಯ, ಉಪ್ಪಿ ಹಾಗೂ ನವಾಬ್ ಕಾಂಬಿನೇಷನ್‌ ಸೀಕ್ವೆನ್ಸ್ ಶೂಟ್ ಮಾಡುವುದರಲ್ಲಿ ಚಿತ್ರತಂಡ ಬ್ಯುಸಿಯಾಗಿದೆ.

ಬಿಟೌನ್ ನವಾಬ್ ಲುಕ್- ಗೆಟಪ್ ಸಖತ್ ಟೆರಿಫಿಕ್‌ ಆಗಿದೆ. 6.5 ಹೈಟ್ ನಲ್ಲಿ ಘಟೋದ್ಗಜನಂತೆ ಕಾಣುವ ನವಾಬ್, ಕಬ್ಜಾದಲ್ಲಿ ಬಘೀರನಾಗಿ ಘರ್ಜಿಸಲಿದ್ದಾರೆ. ಪವರ್ ಫುಲ್ ಡಾನ್‌ ಆಗಿ ಇಡೀ ಸೌತ್ ಇಂಡಿಯಾನ ಕಂಟ್ರೋಲ್ ಮಾಡ್ತಾರಂತೆ. ನವಾಬ್ ಔಟ್ ಫಿಟ್ ಅಂಡ್ ಕ್ರೂಷಿಯಲ್ ಟ್ಯಾಟೂ ನೋಡಿದರೆ ಗೊತ್ತಾಗುತ್ತೆ ಬಘೀರ ಎಷ್ಟು ಭಯಂಕರ ಅಂತ. ಆಗಲೇ ಹೇಳಿದ ಹಾಗೇ ನವಾಬ್ ಕನ್ನಡಕ್ಕೆ ಹೊಸಬರಲ್ಲ. ಇಡೀ ಸೌತ್ ಸಿನಿಮಾ ಇಂಡಸ್ಟ್ರಿಯನ್ನಾಳಿರುವ ಇವರು ಹಿಂದಿ ಚಿತ್ರರಂಗಕ್ಕಿಂತ ಕನ್ನಡ ಚಿತ್ರರಂಗವೇ ಬೆಸ್ಟ್ ಎಂದು ‌ಕೊಂಡಾಡಿದರು. ಸ್ಯಾಂಡಲ್ ವುಡ್ ಅಂಗಳದಲ್ಲಿ ಕೆಲಸ ಮಾಡಲಿಕ್ಕೆ ಕಂಫರ್ಟಬಲ್ ಫೀಲ್ ಇರುತ್ತೆ, ಇಲ್ಲಿನ ಸಿನಿಮಾ ಮಂದಿಯೂ ಕಂಫರ್ಟ್ ಝೋನ್ ಕ್ರಿಯೇಟ್ ಮಾಡಿಕೊಡ್ತಾರೆ.
ಜೊತೆಗೆ ಒಳ್ಳೊಳ್ಳೆ ಕ್ಯಾರೆಕ್ಟರ್ ಗಳು ಸಿಗುತ್ತಿವೆ ನನಗೆ ಎಂದು ನವಾಬ್ ಖುಷಿಯಿಂದ ಹೇಳಿಕೊಂಡರು.

ಲೆಜೆಂಡರಿ ಡೈರೆಕ್ಟರ್ ಅಂಡ್ ಆಕ್ಟರ್ ಉಪೇಂದ್ರರೊಟ್ಟಿಗೆ ಆಕ್ಟ್ ಮಾಡೋದಕ್ಕೆ ಇದೇ ಮೊದಲ ಬಾರಿಗೆ ಅವಕಾಶ ಸಿಕ್ಕಿದೆ.‌ ಚಂದ್ರು ಸಾರ್ ಒಬ್ಬ ಗ್ರೇಟ್ ಡೈರೆಕ್ಟರ್, ಇಲ್ಲಿವರೆಗೂ ಬೆಸ್ಟ್ ಫಿಲ್ಮ್ಸ್ ಗಳನ್ನು ಕೊಟ್ಟಿದ್ದಾರೆ. ನನಗೆ ಕಬ್ಜದಲ್ಲಿ ಡಾನ್ ಪಾತ್ರಕ್ಕೆ ರೆಡ್ ಕಾರ್ಪೆಟ್ ಹಾಕಿದ್ದು ನನಗೆ ಸಂತೋಷವಾಗಿದೆ ಅಂತಾರೇ ನವಾಬ್. ನವಾಬ್ ರಂತೇ ಭಯಾನಕ ಖಳನಾಯಕರು ಕಬ್ಜ ಕೋಟೆಯಲ್ಲಿದ್ದಾರೆ.
ಜಗಪತಿ ಬಾಬು, ರಾಹುಲ್ ದೇವ್, ಕಾಮರಾಜನ್, ಜಾನ್ ಕೊಕ್ಕಿನ್, ಅನುಪ್ ರೇವಣ್ಣ ಸೇರಿದಂತೆ ಅದ್ದೂರಿ ತಾರಾಬಳಗ ಚಿತ್ರದಲ್ಲಿದೆ.

ಸದ್ಯ, ಬೆಂಗಳೂರಿನಲ್ಲಿ ಕಬ್ಜ ಚಿತ್ರೀಕರಣ ಭರದಿಂದ ಸಾಗ್ತಿದ್ದು, ಹೈದ್ರಾಬಾದ್-ಮಂಗಳೂರು ಸೇರಿದಂತೆ ಫಾರಿನ್ ನಲ್ಲೂ ಶೂಟಿಂಗ್ ನಡೆಯಲಿದೆಯಂತೆ. 45 ದಿನಗಳ ಕಾಲ ಮಿನರ್ವ ಮಿಲ್ ನಲ್ಲಿ ಧಗಧಗಿಸಲಿರುವ ಕಬ್ಜ ಟೀಮ್ ಆ ಮೇಲೆ ಹೈದ್ರಾಬಾದ್ ಗೆ ಶಿಫ್ಟ್ ಆಗಲಿದ್ದಾರೆ.

ವಿಶಾಲಾಕ್ಷಿ, ಎಂಟರ್ ಟೈನ್ಮೆಂಟ್ ಬ್ಯೂರೋ‌ ಸಿನಿಲಹರಿ

Categories
ಸಿನಿ ಸುದ್ದಿ

ಒಂಟಿ ‘ಸಲಗ’ಕ್ಕೆ ಪವರ್ ಸ್ಟಾರ್ ಸಾಥ್; ಟ್ರೈಲರ್ ಬಿಡುಗಡೆಗೆ ಅಪ್ಪು ಸ್ಪೆಷಲ್ ಗೆಸ್ಟ್ !

ದುನಿಯಾ ವಿಜಯ್ ಅಭಿನಯದ ಮೋಸ್ಟ್ ಎಕ್ಸ್ ಪೆಕ್ಟೆಡ್ ಸಿನಿಮಾ ಸಲಗ. ನಾಡಹಬ್ಬ ದಸರಾದಂದು ಬೆಳ್ಳಿತೆರೆ ಅಂಗಳದಲ್ಲಿ ಸಲಗ ಘೀಳಿಡಲಿದೆ. ನಡೆದಿದ್ದೇ ದಾರಿ ಎನ್ನುತ್ತಾ ಗ್ರ್ಯಾಂಡ್ ಎಂಟ್ರಿಕೊಡ್ತಿರುವ ಒಂಟಿಸಲಗಕ್ಕೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸಾಥ್ ಕೊಡ್ತಿದ್ದಾರೆ. ಅಕ್ಟೋಬರ್ 10 ರಂದು ಅದ್ದೂರಿಯಾಗಿ ನಡೆಯಲಿರುವ ಸಲಗ ಟ್ರೇಲರ್ ಲಾಂಚ್ ಕಾರ್ಯಕ್ರಮಕ್ಕೆ ದೊಡ್ಮನೆ ರಾಜಕುಮಾರ ವಿಶೇಷ ಅತಿಥಿಯಾಗಿ ಆಗಮಿಸಲಿದ್ದಾರೆ.

ಬ್ಲ್ಯಾಕ್‌ಕೋಬ್ರಾ ದುನಿಯಾ ವಿಜಯ್ ಅಭಿಮಾನಿಗಳಿಗೆ ಮಾತ್ರವಲ್ಲ ಎಲ್ಲಾ ಸೂಪರ್ ಸ್ಟಾರ್ ಗಳ ಫ್ಯಾನ್ಸ್ ಗೂ ಕೂಡ ಸಲಗ ಸ್ಟ್ಯಾಮಿನಾ ಎಂತಹದ್ದು ಅನ್ನೋದು ಗೊತ್ತಾಗಿದೆ. ಇಲ್ಲಿವರೆಗೂ ಸಲಗನ ಸಿನಿಮಾ ಸಾಮ್ರಾಜ್ಯದಿಂದ ಹೊರಬಂದಿರುವ ಒಂದೊಂದು ಪೋಸ್ಟರ್, ಟೀಸರ್, ಸಾಂಗ್ಸ್ ಹಾಗೂ ಮೇಕಿಂಗ್ ಝಲಕ್ ಒಂಟಿಸಲಗ ಮೇಲಿರುವ ನಿರೀಕ್ಷೆಯನ್ನು ತಾರಕಕ್ಕೇರಿಸಿದೆ. ಅಷ್ಟಕ್ಕೂ, ಇಲ್ಲಿವರೆಗೂ ನೀವು ನೋಡಿರುವುದು ಜಸ್ಟ್ ಟ್ರೈಲರ್ ಅಷ್ಟೇ ಪಿಕ್ಚರ್ ಅಭಿ ಬಾಕಿ‌ಹೈ..

ಸಲಗ ಸಿನಿಮಾವನ್ನು ಫಸ್ಟ್ ಡೇ ಫಸ್ಟ್ ಶೋ ಯಾಕೇ ಚಿತ್ರಮಂದಿರಕ್ಕೆ ಬಂದು‌ ನೋಡಬೇಕು ? ಔಟ್ ಅಂಡ್ ಔಟ್ ಮಾಸ್ ಎಲಿಮೆಂಟ್ಸ್ ಇರುವ ಸಲಗದಲ್ಲಿ ಮತ್ತೆ ಏನೆಲ್ಲಾ ಇದೆ. ಅಂಡರ್ ವಲ್ಡ್ ಸಬ್ಜೆಕ್ಟ್ ಗೆ ಒಂದು ಕ್ಯೂಟ್ ಲವ್ ಸ್ಟೋರಿ ಹೇಗೆ ಬೆಸೆದುಕೊಂಡಿದೆ ಇದೆಲ್ಲದಕ್ಕೂ ಆನ್ಸರ್ ಸಿಗಬೇಕು ಅಂದರೆ ಚಿತ್ರಮಂದಿರಕ್ಕೆ ಬರ್ಲೆಬೇಕು. ಅದಕ್ಕೂ, ಮುನ್ನ ಸಲಗ ಫಿಲ್ಮ್ ಟೀಮ್ ಟ್ರೈಲರ್ ತೋರ್ಸೋಕೆ‌ ಮುಂದಾಗಿದ್ದಾರೆ.

ಪವರ್ ಸ್ಟಾರ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಟ್ರೇಲರ್ ಬಿಡುಗಡೆ ಮಾಡಲಿದ್ದಾರೆ. ಅಲ್ಲಿಂದಲೇ ಕಿಕ್ ಸ್ಟಾರ್ಟ್ ಪಡೆದುಕೊಂಡು ಯೂಟ್ಯೂಬ್ ಲೋಕದಲ್ಲಿ ಮೆರವಣಿಗೆ ಹೊರಡಲಿರುವ ಸಲಗ ಚಿತ್ರಪ್ರೇಮಿಗಳನ್ನು ಹುಚ್ಚೆಬ್ಬಿಸಿ ಥಿಯೇಟರ್ ಗೆ ಬರುವಂತೆ ಮಾಡೋದು ಸತ್ಯ‌ ಎನ್ನುತ್ತೆ‌ ಸಲಗ ಸಾಮ್ರಾಜ್ಯ. ಹಿಂಗಾಗಿದ್ದಲ್ಲಿ ಒಂಟಿಸಲಗನ ಅಬ್ಬರ ಆರ್ಭಟ ಮುಗಿಲನ್ನು ಸೀಳಿಕೊಂಡು ಹೋಗೋದು ಖರ್ರೇ. ನೋಡೋಣ‌ ಅದೇನಾಗಲಿದೆ ಅಂತ.

  • ಎಂಟರ್ ಟೈನ್ಮೆಂಟ್ ಬ್ಯೂರೋ ಸಿನಿಲಹರಿ
Categories
ಸಿನಿ ಸುದ್ದಿ

ಬೆಳ್ಳಿತೆರೆಯ ಮೇಲೆ ಅಣ್ಣಾವ್ರ ಮೊಮ್ಮಗಳು – ಇದೇ ವಾರ ತೆರೆ ಕಾಣುತ್ತಿರುವ ʼನಿನ್ನ ಸನಿಹಕೆʼ ಚಿತ್ರದಲ್ಲಿ ಧನ್ಯ ರಾಮ್‌ಕುಮಾರ್‌ !

ದೊಡ್ಮನೆಯ ಮತ್ತೊಂದು ಕುಡಿ ಬೆಳ್ಳಿತೆರೆಗೆ ಎಂಟ್ರಿ ಆಗ್ತಿದೆ. ಅಣ್ಣಾವ್ರ ಮಗಳು ಪೂರ್ಣಿಮಾ ಹಾಗೂ ನಟ ರಾಮ್‌ ಕುಮಾರ್‌ ದಂಪತಿಗಳ ಪುತ್ರಿ ಧನ್ಯ ರಾಮ್‌ ಕುಮಾರ್‌ ಇದೇ ಮೊದಲು ಬಣ್ಣ ಹಚ್ಚಿ ಬೆಳ್ಳಿ ತೆರೆಗೆ ಎಂಟ್ರಿಯಾಗಿರುವ ʼನಿನ್ನ ಸನಿಹಕೆʼ ಚಿತ್ರ ಇದೇ ವಾರ ತೆರೆ ಕಾಣುತ್ತಿದೆ. ಧನ್ಯ ರಾಮ ಕುಮಾರ್‌ ನಾಯಕಿ ಆಗಿಯಾಗಿ ಅಭಿನಯಿಸಿದ ಮೊದಲ ಚಿತ್ರ ಇದು. ಯುವ ಪ್ರತಿಭೆ ಸೂರಜ್‌ ಗೌಡ ಈ ಚಿತ್ರದ ನಾಯಕ ನಟ. ಇದೇ ಶುಕ್ರವಾರ ಈ ಚಿತ್ರ ರಾಜ್ಯಾದ್ಯಂತ ‌ತೆರೆಕಾಣುತ್ತಿದೆ.

ವೈಟ್ ಅಂಡ್‌ ಗ್ರೇ ಪಿಕ್ಚರ್ಸ್ ಲಾಂಛನದಲ್ಲಿ ಅಕ್ಷಯ್ ರಾಜಶೇಖರ್ ಹಾಗೂ ರಂಗನಾಥ ಈ ಚಿತ್ರ ನಿರ್ಮಿಸಿ, ತೆರೆಗೆ ತರುತ್ತಿದ್ದಾರೆ. ಚಿತ್ರದ ಶೀರ್ಷಿಕೆಯೇ ಹೇಳುವಂತೆ ಇದೊಂದು ಮುದ್ದಾದ ಪ್ರೇಮ ಕಥೆಯ ಚಿತ್ರ. ಚಿತ್ರದ ನಾಯಕ ಆದಿತ್ಯ ಹಾಗೂ ನಾಯಕಿ ಅಮೃತಾ ಲಿವಿಂಗ್‌ ರಿಲೇಷನ್ ಶಿಫ್‌ ನಲ್ಲಿರುವ ಕಥೆಯನ್ನು ರೋಮ್ಯಾಂಟಿಕ್‌ ಕಾಮಿಡಿಯಾಗಿ ಹೇಳಲಾಗಿದೆಯಂತೆ. ಚಿತ್ರಕ್ಕೆ ನಟ ಸೂರಜ್ ಗೌಡ ಕಥೆ, ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಅಲ್ಲದೆ ಚಿತ್ರದ ನಾಯಕನಾಗಿಯೂ ಕಾಣಿಸಿಕೊಂಡಿದ್ದಾರೆ. ಅಭಿಲಾಷ್ ಕಲತಿ ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದಾರೆ. ರಘು ದೀಕ್ಷಿತ್ ಅವರ ಸಂಗೀತ ಸಂಯೋಜನೆ, ವಾಸುಕಿ ವೈಭವ್ ಅವರ ಸಾಹಿತ್ಯ ಚಿತ್ರಕ್ಕಿದೆ.

ಈಗಾಗಲೇ ಸುಮಧುರ ಹಾಡುಗಳು ಹಾಗೂ ಕುತೂಹಲಭರಿತ ಟ್ರೇಲರ್‌ ಮೂಲಕ ಸಾಕಷ್ಟು ಕೂತೂಹಲ ಮೂಡಿಸಿದೆ. ಚಿತ್ರ ಪ್ರೇಮಿಗಳಲ್ಲಿ ಇದೇ ಕಾರಣಕ್ಕೆ ದೊಡ್ಡ ನಿರೀಕ್ಷೆ ಮೂಡಿಸಿದೆ.ಉಳಿದಂತೆ ತಾರಾಗಣದಲ್ಲಿ ಮಂಜುನಾಥ್ ಗೌಡ, ಅರುಣಾ ಬಾಲರಾಜ್, ಚಿತ್ಕಲಾ ಬಿರಾದಾರ್, ಕರಿಸುಬ್ಬು, ರಜನಿಕಾಂತ್, ಸೌಮ್ಯ ಭಟ್, ನಂದಗೋಪಾಲ್ ಇದ್ದಾರೆ. ಸುರೇಶ್ ಆರ್ಮಗಂ ಅವರ ಸಂಕಲನ, ವರದರಾಜ ಕಾಮತ್ ಅವರ ಕಲಾನಿರ್ದೇಶನ, ಮೋಹನ್ ನ್ರತ್ಯ ನಿರ್ದೇಶನ ಈ ಚಿತ್ರಕ್ಕಿದೆ.

  • ಎಂಟರ್‌ ಟೈನ್‌ ಮೆಂಟ್‌ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ದಸರಾ ಆರಂಭಕ್ಕೆ “ಮುಗಿಲ್ ಪೇಟೆ” ವಿಡಿಯೋ ಸಾಂಗ್ !

ನಾಳೆಯಿಂದ ದಸರಾ ಶುರುವಾಗುತ್ತಿದೆ. ದಸರಾ ಮೊದಲ ದಿನವೇ ನಾಳೆ ಮನು ರಂಜನ್‌ ಅಭಿನಯದ ʼಮುಗಿಲ್‌ ಪೇಟೆʼ ಚಿತ್ರದ ವಿಡಿಯೋ ಸಾಂಗ್‌ ರಿಲೀಸ್‌ ಆಗುತ್ತಿದೆ. ನಾಡಹಬ್ಬದ ಸಂಭ್ರಮಕ್ಕಾಗಿ ಚಿತ್ರಪ್ರೇಮಿಗಳಿಗೆ ಚಿತ್ರತಂಡದ ಉಡುಗೊರೆ ಇದು. ದೀಪಾವಳಿಗೆ ಈ ಚಿತ್ರ ತೆರೆ ಕಾಣುತ್ತಿದೆ. ಸದ್ಯಕ್ಕೆ ರಿಲೀಸ್‌ ಸಿದ್ದತೆಯಲ್ಲಿರುವ ಚಿತ್ರ ತಂಡ ಪಬ್ಲಿಸಿಟಿ ಕಾರ್ಯಕ್ಕೆ ಮುಂದಾಗಿದೆ. ಈಗ ದಸರಾ ಪ್ರಯುಕ್ತ ನಾಳೆ ಅಂದರೆ, ಗುರುವಾರ ಚಿತ್ರದ ವಿಡಿಯೋ ಸಾಂಗ್‌ ವೊದನ್ನು ರಿಲೀಸ್‌ ಮಾಡುತ್ತಿದೆ. ಈ ಚಿತ್ರಕ್ಕೆ ಸಂಗೀತ ನೀಡಿದವರು ಯಶಸ್ವಿ ಸಂಗೀತ ನಿರ್ದೇಶಕ ಶ್ರೀಧರ್‌ ಸಂಭ್ರಮ್.‌

ಅಂದಹಾಗೆ, ʼಮುಗಿಲ್‌ ಪೇಟೆʼ ಹೆಸರೇ ಕುತೂಹಲ ಹುಟ್ಟಿಸುವಂತೆ ಇದೊಂದು ಪಕ್ಕಾ ಪ್ರೇಮ ಕಥಾ ಹಂದರ ಚಿತ್ರ. ಮನುರಂಜನ್‌ ಹಾಗೂ ಕಯಾದು ಲೋಹರ್‌ ಪ್ರಮುಖ ತಾರಾಗಣದ ಚಿತ್ರ. ದಸರಾ ಅಂಗವಾಗಿ ಚಿತ್ರ ತಂಡ ಬಿಡುಗಡೆ ಮಾಡುತ್ತಿರುವ ಬಿಡುಗಡೆ ಮಾಡುತ್ತಿರುವ ಹಾಡಿಗೆ ನಿರ್ದೇಶಕ ಭರತ್‌ ನಾವುಂದ ಗೀತೆ ರಚನೆ ಮಾಡಿದ್ದಾರೆ. ಶ್ರೀಧರ್ ಸಂಭ್ರಮ್ ಸಂಗೀತ ನೀಡಿದ್ದಾರೆ. ನಕುಲ್ ಈ ಹಾಡಿಗೆ ಧ್ವನಿಯಾಗಿದ್ದಾರೆ. ಈ ಹಾಡು ನಾಡ ಹಬ್ಬದ ಸಂಭ್ರಮಕ್ಕಾಗಿ ಚಿತ್ರಪ್ರೇಮಿಗಳಿಗೆ ಚಿತ್ರತಂಡದ ಉಡುಗೊರೆ ಆಗಿ ಹೊರ ಬರುತ್ತಿದೆ. ಈಗಾಗಲೇ ಈ ಚಿತ್ರದ ಟ್ರೇಲರ್‌ ಹೊರ ಬಂದು, ಸಾಕಷ್ಟು ಮೆಚ್ಚುಗೆ ಪಡೆದಿದೆ. ಪ್ರೇಕ್ಷಕರಲ್ಲಿ ಚಿತ್ರದ ಬಗ್ಗೆ ದೊಡ್ಡ ಕುತೂಹಲವೂ ಇದೆ.

ಮೋತಿ ಮೇಕರ್ಸ್‌ ಲಾಂಛನದಲ್ಲಿ ರಕ್ಷಾ ವಿಜಯ್‌ ಕುಮಾರ್‌ ಅವರು ನಿರ್ಮಾಣ ಮಾಡಿರುವ ಈ ಚಿತ್ರಕ್ಕೆ ನಿರ್ದೇಶಕ ಭರತ್‌ ನಾವುಂದ ಅವರೇ ಚಿತ್ರಕತೆ ಬರೆದು ಆಕ್ಷನ್‌ ಕಟ್‌ ಹೇಳಿದ್ದಾರೆ. ಕತೆಗೆ ತಕ್ಕಂತೆ ಈ ಚಿತ್ರಕ್ಕೆ ವಿಶೇಷವಾದ ತಾಣಗಳಲ್ಲಿಯೇ ಚಿತ್ರೀಕರಣ ನಡೆದಿದೆ. ಚಿತ್ರದಲ್ಲಿ ಮನುರಂಜನೆ ಹಾಗೂ ಕಯಾದು ಲೋಹರ್‌ ಅವರೊಂದಿಗೆ ರಿಷಿ, ಅವಿನಾಶ್, ತಾರಾ ಅನುರಾಧ, ಸಾಧುಕೋಕಿಲ, ರಂಗಾಯಣ ರಘು ಸೇರಿದಂತೆ ದೊಡ್ಡ ತಾರಾಗಣವೇ ಇದೆ. ರವಿವರ್ಮ (ಗಂಗು)ಅವರ ಛಾಯಾಗ್ರಹಣ “ಮುಗಿಲ್ ಪೇಟೆ” ಯ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದೆ.‌ ಅರ್ಜುನ್ ಕಿಟ್ಟು ಸಂಕಲನ, ಡಾ. ರವಿವರ್ಮ, ವಿಜಯ್ ಸಾಹಸ ನಿರ್ದೇಶನ, ಹರ್ಷ, ಮುರಳಿ , ಮೋಹನ್ ನೃತ್ಯ ನಿರ್ದೇಶನವಿರುವ ಈ ಚಿತ್ರಕ್ಕೆ ಹನುಮಂತು ಅವರ ನಿರ್ಮಾಣ ನಿರ್ವಹಣೆಯಿದೆ.

  • ಎಂಟರ್‌ಟೈನ್‌ ಮೆಂಟ್‌ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಸಹೋದರ ಚಿರು ಚಿತ್ರಕ್ಕೆ ಧ್ರುವ ಉಸಿರು;`ರಾಜಮಾರ್ತಾಂಡ’ ಸಿನಿಮಾ ಡಬ್ಬಿಂಗ್ ಮಾಡಿಕೊಟ್ಟರು ಆಕ್ಷನ್‌ಪ್ರಿನ್ಸ್- ಯುವಸಾಮ್ರಾಟನಿಗೆ ದಚ್ಚು ಬಲ !

ಒಡಹುಟ್ಟಿದ ಅಣ್ಣ ಚಿರಂಜೀವಿ ‘ರಾಜಮಾರ್ತಾಂಡ'ಚಿತ್ರಕ್ಕೆ ಧ್ರುವ ಬೆನ್ನೆಲುಬಾಗಿ ನಿಂತಿರುವ ವಿಚಾರ ನಿಮಗೆಲ್ಲ ಗೊತ್ತೆಯಿದೆ.ಅರ್ಧಕ್ಕೆ ಬಿಟ್ಟೋದ ಅಣ್ಣನ ಸಿನಿಮಾವನ್ನು ಕಂಪ್ಲೀಟ್ ಮಾಡಿಕೊಡುವುದಾಗಿ ಆಕ್ಷನ್‌ಪ್ರಿನ್ಸ್ ಒಪ್ಪಿಕೊಂಡಿದ್ದರು. ಅದರಂತೇ,‘ರಾಜಮಾರ್ತಾಂಡ’ ಸಿನಿಮಾಗೆ ಧ್ರುವ ಉಸಿರಾಗುತ್ತಿದ್ದಾರೆ. ಅಣ್ಣನ ಚಿತ್ರಕ್ಕೆ ತಮ್ಮನ ಉಸಿರಿನ ಕಹಾನಿ ಇಲ್ಲಿದೆ

ಚಿರು-ಧ್ರುವ ಈ ಇಬ್ಬರು ಸಹೋದರರ ನಡುವಿದ್ದ ಅನ್ಯೋನ್ಯತೆ-ಪ್ರೀತಿ-ವಾತ್ಸಲ್ಯ-ಮಮಕಾರ-ಬೆಲೆಯೇ ಕಟ್ಟಲಾಗದ ಬಾಂದವ್ಯವನ್ನು ಆ ಭಗವಂತನಿಗೂ ನೋಡಲಿಕ್ಕೆ ಆಗಲಿಲ್ಲ ಅನ್ಸುತ್ತೆ. ಹೀಗಾಗಿನೇ, ಚಿರಂಜೀವಿಯನ್ನು ಹೇಳದೇ ಕೇಳದೇ ಹೊತೊಯ್ದುಬಿಟ್ಟ. ಧ್ರುವಸರ್ಜಾನ ಹಾಗೂ ರಾಯನ್‌ರಾಜ್ ಸರ್ಜಾನ ಅನಾಥರನ್ನಾಗುವಂತೆ ಮಾಡ್ಬಿಟ್ಟ. ಇವತ್ತಿಗೂ ಈ ಕ್ಷಣಕ್ಕೂ ಆಕ್ಷನ್‌ಪ್ರಿನ್ಸ್ ಧ್ರುವ ಸರ್ಜಾ ಅಣ್ಣನ ನೆನಪಲ್ಲೇ ಕಣ್ಣೀರಾಗುತ್ತಿದ್ದಾರೆ. `ಅಣ್ಣ ನಿನ್ನ ಬಿಟ್ಟು ಬದುಕೋದಕ್ಕೆ ಆಗ್ತಿಲ್ಲ ಕಣೋ’ ಎನ್ನುತ್ತಾ ಒಬ್ಬಂಟಿಯಾಗಿ ಒಳಗೊಳಗೆ ರೋಧಿಸುತ್ತಿದ್ದಾರೆ. ರಕ್ತಹಂಚಿಕೊಂಡು ಹುಟ್ಟಿ ಇದ್ದಷ್ಟು ದಿನ ಅಣ್ಣನೊಟ್ಟಿಗೆ ಆಡಿ ಬೆಳೆದ ದಿನಗಳನ್ನು ಕಣ್ಮುಂದೆ ತಂದುಕೊಂಡು ನೆನಪುಗಳೊಟ್ಟಿಗೆ ಧ್ರುವ ಜೀವಿಸುತ್ತಿದ್ದಾರೆ.

ಇವತ್ತು ಧ್ರುವ ಸರ್ಜಾ ಬರ್ತ್ಡೇ. ರಕ್ತಹಂಚಿಕೊಂಡು ಹುಟ್ಟಿದ ಅಣ್ಣನೇ ನನ್ನೊಟ್ಟಿಗೆ ಇಲ್ಲದಿರುವಾಗ ನನ್ನ ಹುಟ್ಟುಹಬ್ಬವನ್ನು ಸಂಭ್ರಮಿಸಿದರೇನು ಬಂತು ಎನ್ನುತ್ತಾ ತನ್ನ ಜನುಮದಿನದ ಆಚರಣೆಯನ್ನು ನಿಲ್ಲಿಸಿದ್ದಾರೆ. ಅಭಿಮಾನಿ ದೇವರುಗಳಿಗೆ ವಿನಂತಿ ಮಾಡಿಕೊಂಡು ನೀವು ಎಲ್ಲಿರುತ್ತೀರೋ ಅಲ್ಲಿಂದಲೇ ಶುಭಾಶಯ ತಿಳಿಸಿ, ಇಡೀ ಕರ್ನಾಟಕ ಜನತೆಯ ಆಶೀರ್ವಾದ ನನ್ನ ಮೇಲೆ ಇರಲಿ ಎಂದು ಕೋರಿದ್ದಾರೆ. ಸರ್ಜಾ ಕುಟುಂಬದ ಬೆಂಕಿ ಚೆಂಡಿಗೆ ಸೋಷಿಯಲ್ ಮೀಡಿಯಾದಿಂದ ಶುಭಾಷಯದ ಮಹಾಪೂರವೇ ಹರಿದುಬರುತ್ತಿದೆ. ಜನತೆಯ ಆಶೀರ್ವಾದವೇ ನನಗೆ ಶ್ರೀರಕ್ಷೆ ಎನ್ನುವ ಬಹದ್ದೂರ್ ಹುಡುಗ `ಮಾರ್ಟಿನ್’ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ.

ಮಾರ್ಟಿನ್' ಚಿತ್ರಕ್ಕಾಗಿ ತಯ್ಯಾರಿ ನಡೆಸುವ ಹೊತ್ತಲ್ಲಿ ಅಣ್ಣನರಾಜಮಾರ್ತಾಂಡ’ ಸಿನಿಮಾಗೂ ಜೀವಕೊಟ್ಟಿದ್ದಾರೆ. ಅರ್ಧಕ್ಕೆ ಬದುಕಿನ ಆಟ ಮುಗಿಸಿ ಅಣ್ಣ ಎದ್ದೋದ ಹೊತ್ತಲ್ಲಿ, ಸಹೋದರ ಸಿನಿಮಾಗಳು ಅರ್ಧಕ್ಕೆ ನಿಲ್ಲಬಾರ್ದು. ನಮ್ಮಣ್ಣನ್ನ ನಂಬಿಕೊಂಡು ದುಡ್ಡುಹಾಕಿರುವ ನಿರ್ಮಾಪಕರಿಗೆ ಲಾಸ್ ಆಗ್ಬಾರ್ದು ಎನ್ನುವ ಕಾರಣಕ್ಕೆ ಚಿರು ಸಿನಿಮಾಗೆ ಜೀವ ತುಂಬುವುದಕ್ಕೆ ಒಪ್ಪಿಕೊಂಡಿದ್ದರು. ಅದರಂತೇ, ಬಹುನಿರೀಕ್ಷೆಯ `ರಾಜಮಾರ್ತಾಂಡ’ ಸಿನಿಮಾದಲ್ಲಿನ ಚಿರು ಪಾತ್ರಕ್ಕೆ ಧ್ರುವ ವಾಯ್ಸ್ ಡಬ್ ಮಾಡಿಕೊಟ್ಟಿದ್ದಾರೆ. ಸದ್ಯಕ್ಕೆ, ೫೦ ಪರ್ಸೆಂಟ್ ಡಬ್ಬಿಂಗ್ ಅಷ್ಟೇ ಮುಗಿದಿದೆ ಉಳಿದ ಪೋರ್ಷನ್ ಮಾತುಕತೆಯನ್ನು ಬಿಡುವು ಮಾಡಿಕೊಂಡು ಮುಗಿಸಿಕೊಡುವುದಾಗಿ ಧ್ರುವ ಮಾತುಕೊಟ್ಟಿದ್ದಾರೆ.

ಚಿರು ‘ರಾಜಮಾರ್ತಾಂಡ'ಕ್ಕೆ ಆಕ್ಷನ್‌ಪ್ರಿನ್ಸ್ ಜೊತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಜೀವ ತುಂಬುತ್ತಾರೆನ್ನುವ ಸುದ್ದಿ ಹಿಂದಿನಿಂದಲೂ ಇದೆ.ರಾಜಮಾರ್ತಾಂಡ’ ಚಿತ್ರದಲ್ಲಿ ಯುವಸಾಮ್ರಾಟನ ಇಂಟ್ರುಡಕ್ಷನ್ ಸೀನ್‌ಗೆ ದಚ್ಚು ಬಲ ತುಂಬಲಿದ್ದಾರಂತೆ. ಅಷ್ಟಕ್ಕೂ, ಅದ್ಯಾವಾಗ ರಾಜಮಾರ್ತಾಂಡ' ಅಖಾಡಕ್ಕೆ ಗಜ ಎಂಟ್ರಿಕೊಡಬಹುದು ಎನ್ನುವ ಪ್ರಶ್ನೆಗೆ ಉತ್ತರವಿಲ್ಲ.ಆದರೆ, ಕೊಟ್ಟ ಮಾತನ್ನು ಯಾವತ್ತೂ ತಪ್ಪದ ದಾಸ ಸ್ಯಾಂಡಲ್‌ವುಡ್ ಯುವಸಾಮ್ರಾಟನ ಕನಸಿನ ಸಿನಿಮಾಗೆ ಶಕ್ತಿಯಾಗಿ ನಿಲ್ತಾರೆ ಅನ್ನೋದು ಮಾತ್ರ ಸತ್ಯ.ಚಿರಂಜೀವಿಯ ಮಹಾಕನಸಿಗೆ ದರ್ಶನ್-ಧ್ರುವ ಬಲ ತುಂಬಲಿ. ಬಿಗ್‌ಸ್ಕ್ರೀನ್ ಮೇಲೆ ಟೈಸನ್ ಖ್ಯಾತಿಯ ರಾಮ್‌ನಾರಾಯಣ್ ನಿರ್ದೇಶನದ- ಶಿವಕುಮಾರ್ ನಿರ್ಮಾಣದ ರಾಜಮಾರ್ತಾಂಡ’ ಧಗಧಗಿಸಲಿ ಅಲ್ಲವೇ.

ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

error: Content is protected !!