Categories
ಸಿನಿ ಸುದ್ದಿ

ಸಂಕ್ರಾಂತಿಗೆ ಸಲಾರ್ ಗಿಫ್ಟ್ – ಪ್ರಭಾಸ್-ಪ್ರಶಾಂತ್ ಜೋಡಿ ಚಿತ್ರಕ್ಕೆ ಜ.15ರಂದು ಮುಹೂರ್ತ

ಸಲಾರ್ ಮುಹೂರ್ತಕ್ಕೆ ಹೈದರಾಬಾದ್ ಸಾಕ್ಷಿ

ತೆಲುಗಿನ ಖ್ಯಾತ ನಟ ಪ್ರಭಾಸ್ ಹಾಗೂ ಕನ್ನಡದ ಖ್ಯಾತ ನಿರ್ದೇಶಕ ಪ್ರಶಾಂತ್ ನೀಲ್ ಜೋಡಿ, ಈಗ ಮೋಡಿಗೆ ಸಜ್ಜಾಗಿದೆ. ಜನವರಿ 15ರಂದು ಚಿತ್ರಕ್ಕೆ ಮುಹೂರ್ತ ನಡೆಯಲಿದೆ.
ಹೊಂಬಾಳೆ ಫಿಲಂಸ್ ನ ವಿಜಯ್ ಕಿರಗಂದೂರು ನಿರ್ಮಾಣದ “ಸಲಾರ್” ಚಿತ್ರ ಹೈದರಾಬಾದ್ ನಲ್ಲಿ ಸೆಟ್ಟೇರಲಿದೆ. ಈ ಚಿತ್ರದಲ್ಲಿ ತಮ್ಮ ಹೊಸ ಗೆಟಪ್ ರಿವೀಲ್ ಮಾಡಲು ಕಾತರರಾಗಿದ್ದಾರೆ.

ಸಿನಿಮಾ ಅನೌನ್ಸ್ ಆಗುತ್ತಿದ್ದಂತೆಯೇ, ದೊಡ್ಡ ನಿರೀಕ್ಷೆ ಹುಟ್ಟಿಸಿತ್ತು. ಈಗ ಚಿತ್ರತಂಡ ಶೂಟಿಂಗ್ ಹೋಗಲು ಸಜ್ಜಾಗುತ್ತಿದೆ.
ಪ್ರಶಾಂತ್ ನೀಲ್ ನಿರ್ದೇಶನದ “ಸಲಾರ್” ಇಂಡಿಯನ್ ಸಿನಿಮಾ ಎಂದು ಚಿತ್ರ ನಿರ್ಮಾಣ ಸಂಸ್ಥೆಯೇ ಹೇಳಿಕೊಂಡಿದೆ. ಅದರಂತೆ ಇದೀಗ ಚಿತ್ರದ ಮುಹೂರ್ತಕ್ಕೆ ತಂಡ ತಯಾರಿ ನಡೆಸಿದ್ದು, ಶುಕ್ರವಾರ ಹೈದರಾಬಾದ್ ನಲ್ಲಿ ಬೆಳಗ್ಗೆ 11 ಗಂಟೆಗೆ ನೆರವೇರಲಿದೆ. ಈ ವಿಶೇಷ ಕಾರ್ಯಕ್ರಮಕ್ಕೆ ಚಿತ್ರರಂಗದ ಗಣ್ಯರ ದಂಡೇ ಸಾಕ್ಷಿಯಾಗಲಿದೆ.

ಮುಖ್ಯ ಅತಿಥಿಯಾಗಿ ರಾಜ್ಯದ ಉನ್ನತ ಶಿಕ್ಷಣ ಸಚಿವರು ಮತ್ತು ಉಪಮುಖ್ಯಮಂತ್ರಿಗಳೂ ಆಗಿರುವ ಡಾ. ಅಶ್ವತ್ಥನಾರಾಯಣ್ ಸಿ.ಎನ್ ಭಾಗವಹಿಸಲ್ಲಿದ್ದಾರೆ. ನಟ ರಾಕಿಂಗ್ ಸ್ಟಾರ್ ಯಶ್ ಈ ಮುಹೂರ್ತ ಕಾರ್ಯಕ್ರಮದಲ್ಲಿ ಇರಲಿದ್ದು, ಟಾಲಿವುಡ್ ನ ಖ್ಯಾತ ನಿರ್ದೇಶಕ ಎಸ್.ಎಸ್ ರಾಜಮೌಳಿ ಭಾಗವಹಿಸಲಿದ್ದಾರೆ.
ಈಗಾಗಲೇ ಫಸ್ಟ್ ಲುಕ್ ಪೋಸ್ಟರ್ ಮೂಲಕವೇ “ಸಲಾರ್” ಚಿತ್ರ ಈಗಾಗಲೇ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದೆ. ಪ್ರಭಾಸ್ ಲುಕ್ ಸಹ ಅಷ್ಟೇ ಕುತೂಹಲ ಕೆರಳಿಸಿದೆ. ಇದೀಗ ತಮ್ಮ ಲುಕ್ ಬಗ್ಗೆಯೂ ಪ್ರಭಾಸ್ ಮಾತನಾಡಿದ್ದಾರೆ. ‘ಈ ಸಿನಿಮಾದ ಮುಹೂರ್ತ ಮತ್ತು ಶೂಟಿಂಗ್ ನಲ್ಲಿ ಪಾಲ್ಗೊಳ್ಳುವುದಕ್ಕೆ ನಾನು ತುಂಬ ಕೌತುಕನಾಗಿದ್ದೇನೆ. ನನ್ನ ಲುಕ್ ಹೇಗಿರಲಿದೆ ಎಂಬುದನ್ನು ಅಭಿಮಾನಿಗಳಿಗೆ ತೋರಿಸಲು ಅಷ್ಟೇ ಉತ್ಸುಕನಾಗಿದ್ದೇನೆ ಎಂದಿದ್ದಾರೆ ಪ್ರಭಾಸ್.

ಶುಕ್ರವಾರ ಮುಹೂರ್ತ ಮುಗಿಸಿಕೊಂಡ ಸಿನಿಮಾ ಇದೇ ತಿಂಗಳ ಅಂತ್ಯಕ್ಕೆ ಚಿತ್ರೀಕರಣಕ್ಕೂ ಚಾಲನೆ ನೀಡಲಿದೆ. ಈಗಾಗಲೇ ಅದಕ್ಕಾಗಿ ಭರ್ಜರಿ ತಯಾರಿ ಶುರುವಾಗಿದೆ. ಇನ್ನುಳಿದ ಪಾತ್ರವರ್ಗದ ಮಾಹಿತಿಯನ್ನು ಮುಂದಿನ ದಿನಗಳಲ್ಲಿ ಚಿತ್ರತಂಡ ಬಹಿರಂಗ ಪಡಿಸಲಿದೆ.

Categories
ಸಿನಿ ಸುದ್ದಿ

ಲಂಕೆಗೆ ಖಳನಟಿ ಈ ನಾಯಕಿ ,ʼಸಿಲಿಕಾನ್‌ ಸಿಟಿʼ ಬೆಡಗಿ, ತೆರೆ ಮೇಲೆ ವಿಲನ್‌ ಆದ ಸ್ಟಾರ್‌ ನಟಿ !

ಗ್ಲಾಮರಸ್‌ ನಟಿ ಕಾವ್ಯ ಶೆಟ್ಟಿ ಈಗ ಬೆಳ್ಳಿ ತೆರೆಗೆ ವಿಲನ್‌ 

ಗ್ಲಾಮರಸ್‌ ನಟಿ ಕಾವ್ಯ ಶೆಟ್ಟಿ ಒಂದಷ್ಟು ಗ್ಯಾಪ್‌ ನಂತರ ಮತ್ತೆ ತೆರೆ ಮೇಲೆ ಬರಲು ರೆಡಿ ಆಗಿದ್ದಾರೆ. ೨೦೧೮ರಲ್ಲಿ ಸಂಹಾರ ಚಿತ್ರದೊಂದಿಗೆ ತೆರೆ ಮೇಲೆ ಕಾಣಿಸಿಕೊಂಡವರು, ಮತ್ತೇಲ್ಲೂ ಸದ್ದು ಮಾಡಿರಲಿಲ್ಲ. ಈಗ “ಲಂಕೆʼ ಹೆಸರಿನ ಚಿತ್ರದ ಮೂಲಕ ಹೊಸ ಅವತಾರದೊಂದಿಗೆ ತೆರೆ ಬರಲು ರೆಡಿ ಅಗಿದ್ದಾರೆ ಕಾವ್ಯ ಶೆಟ್ಟಿ. ಹೌದು, ಇಷ್ಟು ದಿನ ನಾಯಕಿಯಾಗಿ ತೆರೆ ಮೇಲೆ ಗ್ಲಾಮರಸ್‌ ಪಾತ್ರಗಳ ಮೂಕಕ ಮಿಂಚಿದ್ದ ಕಾವ್ಯ ಶೆಟ್ಟಿ, ಈಗ ತೆರೆ ಮೇಲೆ ವಿಲನ್‌ ಆಗಿ ಕಾಣಿಸಿಕೊಂಡಿದ್ದಾರಂತೆ. “ಲಂಕೆʼ ಚಿತ್ರ ಅದೇ ಕಾರಣಕ್ಕೆ ತಮಗೆ ವಿಶೇಷ ಎನ್ನುತ್ತಾರೆ.


ಅಂದ ಹಾಗೆ ಇದು ಲೂಸ್‌ ಮಾದ ಯೋಗೇಶ್‌ ನಾಯಕರಾಗಿ ಅಭಿನಯಿಸಿದ ಚಿತ್ರ. ಸಂಚಾರಿ ವಿಜಯ್‌ ಕಾವ್ಯ ಶೆಟ್ಟಿ, ಬಿಗ್‌ ಬಾಸ್‌ ಖ್ಯಾತಿಯ ಕೃಷಿ ತಾಪಂಡ, ಏಸ್ತರ್‌ ನರೋನಾ ಸೇರಿದಂತೆ ದೊಡ್ಡ ತಾರಾಗಣವೇ ಚಿತ್ರದಲ್ಲಿದೆ. ಕಳೆದ ವರ್ಷವೇ ಸೆಟ್ಟೇರಿ ಚಿತ್ರೀಕರಣ ಮುಗಿಸಿದ ಚಿತ್ರ ಇದು. ಸದ್ಯಕ್ಕೀಗ ಟೈಟಲ್‌ ಲಾಂಚ್‌ ಮಾಡುವ ಮೂಲಕ ಸುದ್ದಿ ಮಾಡಿದೆ. ಇದೇ ವೇಳೆ, ಗ್ಲಾಮರಸ್‌ ನಟಿ ಕಾವ್ಯ ಶೆಟ್ಟಿ ಅವರ ಪಾತ್ರದ ವಿಶೇಷತೆಯೂ ಇಲ್ಲಿ ರಿವೀಲ್‌ ಆಗಿದೆ. ಇದೇ ಮೊದಲ ತಾವು ತೆರೆ ಮೇಲೆ ವಿಲನ್‌ ಆಗಿ ಕಾಣಿಸಿಕೊಳ್ಳುತ್ತಿರುವುದನ್ನು ಅವರೇ ರಿವೀಲ್‌ ಮಾಡಿದ್ದಾರೆ.

” ನನ್ನ ಮಟ್ಟಿಗೆ ಇದೊಂದಉ ವಿಶೇಷವಾದ ಪಾತ್ರ, ಫಸ್ಟ್‌ ಟೈಮ್‌ ವಿಲನ್‌ ಆಗಿ ಕಾಣಸಿಕೊಳ್ಳುತ್ತಿದ್ದೇನೆ. ಲಂಕೆಯಲ್ಲಿ ಒಂಥರ ನಾನು ರಾವಣ. ನಿಜಕ್ಕು ಅದು ಹೇಗಿದೆ ಅನ್ನೋದು ಚಿತ್ರ ನೋಡಿದಾಗ ಗೊತ್ತಾಗಲಿದೆʼ ಎಂದರು ಕಾವ್ಯ ಶೆಟ್ಟಿ. ಹಾಗೆ ನೋಡಿದರೆ ನೆಗೆಟಿವ್‌ ಶೇಡ್‌ ಪಾತ್ರ ಅನ್ನೋದು ಹೊಸದಲ್ಲ. ನಾಗತಿ ಹಳ್ಳಿ ಚಂದ್ರಶೇಖರ್‌ ನಿರ್ದೇಶನದ ಇಷ್ಟಕಾಮ್ಯ ಚಿತ್ರದಲ್ಲಿಯೇ ಅವರ ಪಾತ್ರಕ್ಕೆ ನೆಗೆಟಿವ್‌ ಶೇಡ್‌ ಇತ್ತು. ಈಗ ಇನ್ನೊಂದು ಬಗೆಯಂತೆ. ಅದು ಹೇಗೆ ಅನ್ನೋದಕ್ಕೆ ಚಿತ್ರ ನೋಡಬೇಕಂತೆ. ರಾಮ್‌ ಪ್ರಸಾದ್‌ ನಿರ್ದೇಶನದ ಈ ಚಿತ್ರಕ್ಕೆ ಪಟೇಲ್‌ ಶ್ರೀನಿವಾಸ್‌ ಹಾಗೂ ಸುರೇಖಾ ನಿರ್ಮಾಣ ಮಾಡಿದ್ದಾರೆ.

Categories
ಸಿನಿ ಸುದ್ದಿ

ಅಯೋಧ್ಯೆ ರಾಮನಿಗೆ ಒಂದು ಲಕ್ಷ ದೇಣಿಗೆ -ರಾಮಮಂದಿರ ನಿರ್ಮಾಣಕ್ಕೆ ನಟಿ ಪ್ರಣೀತಾ ಕಿರು ಕಾಣಿಕೆ

ದೇಶದಲ್ಲಿ ಅಯೋಧ್ಯೆ ಶ್ರೀರಾಮಮಂದಿರ ನಿರ್ಮಾಣದ ವಿಷಯ ಈಗ ಕೇಂದ್ರಬಿಂದುವಾಗಿದೆ. ಈಗಾಗಲೇ ಅಯೋಧ್ಯೆಯ ಶ್ರೀರಾಮಮಂದಿರದ ನಿರ್ಮಾಣ ಕಾರ್ಯಕ್ಕೆ ನಿಧಿ ಸಮರ್ಪಣಾ ಅಭಿಯಾನವೊಂದು ಶುರುವಾಗಿದೆ. ಈ ನಿಟ್ಟಿನಲ್ಲಿ ಇದೀಗ ಕನ್ನಡದ ನಟಿ ಪ್ರಣೀತಾ ಅವರು ಒಂದು ಲಕ್ಷ ರುಪಾಯಿ ದೇಣಿಗೆ ನೀಡುವ ಮೂಲಕ ತಮ್ಮ ಭಕ್ತಿ ಸಮರ್ಪಿಸಿದ್ದಾರೆ.

ಈ ಕುರಿತು ಅವರು ತಮ್ಮ ಸೋಶಿಯಲ್‌ ಮೀಡಿಯಾದಲ್ಲಿ ವಿಡಿಯೋವೊಂದನ್ನು ಹಾಕಿದ್ದು, ಆ ಮೂಲಕ ತಮ್ಮ ಅಭಿಮಾನಿಗಳಿಗೆ ಹಾಗೂ ಭಕ್ತರಿಗೆ ಮನವಿ ಮಾಡಿದ್ದಾರೆ. “ನಿಮಗೆಲ್ಲರಿಗೂ ಗೊತ್ತಿರುವವಂತೆ. ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣ ಕಾರ್ಯ ಶುರುವಾಗಿದೆ. ದೇಶದೆಲ್ಲೆಡೆ ನಿಧಿ ಸಮರ್ಪಣಾ ಕಾರ್ಯ ನಡೆದಿದೆ. ಈ ಕಾರ್ಯಕ್ಕೆ ನಾನು ನನ್ನ ಸಣ್ಣ ಸೇವೆ ಸಲ್ಲಿಸಿದ್ದೇನೆ. ನೀವು ಕೈ ಜೋಡಿಸಿ” ಎಂದು ಮನವಿ ಮಾಡಿದ್ದಾರೆ.
ಪ್ರಣೀತಾ ಸದ್ಯಕ್ಕೆ ತೆಲುಗು ಸಿನಿಮಾದಲ್ಲಿ ಬಿಝಿಯಾಗಿದ್ದಾರೆ. ಕನ್ನಡದಲ್ಲಿ ಅನೇಕ ಸಿನಿಮಾಗಳನ್ನು ಕೊಟ್ಟಿರುವ ಪ್ರಣೀತಾ, ಆಗಾಗ ಸಮಾಜ ಸೇವೆಯ ಕಾರ್ಯಗಳಲ್ಲಿ ತೊಡಗಿಕೊಳ್ಳುತ್ತಿರುತ್ತಾರೆ. ಈಗ ಶ್ರೀರಾಮಮಂದಿರ ನಿರ್ಮಾಣ ಕಾರ್ಯಕ್ಕೂ ದೇಣಿಗೆ ನೀಡಿದ್ದಾರೆ.

Categories
ಸಿನಿ ಸುದ್ದಿ

ನಾಟ್‌ ಪ್ರೀಪೇರ್‌, ನಂಗೇನು ಗೊತ್ತಿಲ್ಲ ! ಹಾಗಿದ್ಮೇಲೆ ಈ ನಟ-ನಟಿಯರು ಅಲ್ಲಿಗ್ಯಾಕೆ ಬರ್ಬೇಕು?

ಲಂಕೆ  ಟೈಟಲ್‌  ಲಾಂಚ್‌ ನಲ್ಲೂ ಒಬ್ಬ ನಟಿಯ ಮಾತು ಮುಗಿದಿದ್ದೇ  ಹೀಗೆ…

ಎಲ್ಲಿಗೆ ? ತಕ್ಷಣ ಹೀಗೊಂದು ಪ್ರಶ್ನೆ ನಿಮ್ಮಲ್ಲೂ ಕಾಡಬಹುದು. ವಿಷಯ ಇನ್ನೇನೂ ಅಲ್ಲ. ಇಲ್ಲಿ ಹೇಳ ಹೊರಟಿದ್ದು ಸಿನಿಮಾ ಪ್ರಚಾರ ಕಾರ್ಯಕ್ರಮ ಅಥವಾ ಸಿನಿಮಾ ಸಂಬಂಧಿತ ಪ್ರೆಸ್‌ಮೀಟ್‌ಗಳಲ್ಲಿನ ಅವಾಂತರಗಳ ಕುರಿತು. ಅದ್ಹೇಂಗೆ ಅಂತ ವಿವರಿಸಿ ಹೇಳುವುದಕ್ಕೂ ಮುಂಚೆ ಈ ʼಪ್ರೆಸ್‌ಮೀಟ್‌ʼ ಎನ್ನುವುದರ ಬಗ್ಗೆ ಒಂದಷ್ಟು ಮಾಹಿತಿ ಅಗತ್ಯ. ಇದೆಲ್ಲ ಸಿನಿಮಾ ಮಂದಿಗೆ, ರಾಜಕಾರಣಿಗಳಿಗೆ, ಸಾರ್ವಜನಿಕ ಕ್ಷೇತ್ರಗಳಲ್ಲಿರುವವರೆಗೆ ಗೊತ್ತು. ಅದರಾಚೆ ತೀರಾ ಸಾಮಾನ್ಯ ಜನರಿಗೆ ಹೆಚ್ಚಾಗಿ ಮಾಹಿತಿ ಇರೋದಿಲ್ಲ ಅನ್ನೋದು ಅಷ್ಟೇ ಸತ್ಯ. ಆ ದೃಷ್ಟಿಯಿಂದ ʼ ಪ್ರೆಸ್‌ಮೀಟ್‌ʼ ಬಗ್ಗೆ ವಿವರಿಸುವುದಾದರೆ, ಇದೊಂದು ಮಾಧ್ಯಮ ಹಾಗೂ ಪ್ರಚಾರ ಬಯಸುವವರ ಮುಖಾಮುಖಿ. ಆ ಮೂಲಕ ಜನರಿಗೆ ತಲುಪುವ ಪ್ರಯತ್ನ.

ವಿಶೇಷವಾಗಿ ಸಿನಿಮಾ ಮಂದಿಗೆ ಈ ರೀತಿಯ ಪ್ರಚಾರ ಅತ್ಯಗತ್ಯ. ತಾವು ಮಾಡಿದ ಸಿನಿಮಾದ ಕುರಿತು ಮಾಹಿತಿ ನೀಡಿ, ಅವರನ್ನು ಚಿತ್ರಮಂದಿರಕ್ಕೆ ಕರೆತರಬೇಕಾದ್ರೆ ಮಾಧ್ಯಮದವರೊಂದಿಗಿನ ಸಿನಿಮಾದವರ ಮುಖಾಮುಖಿ ಬೇಕೇ ಬೇಕು. ಹಾಗಂತ ಈ ಪ್ರೆಸ್‌ಮೀಟ್‌ ಕರೆಯೋದು ಅಂದ್ರೆ ಅಷ್ಟು ಸುಲಭ ಅಲ್ಲ. ಈ ಕಾಲಮಾನಕ್ಕೆ ಇದೊಂದು ದುಬಾರಿಯ ಮೀಟ್ !‌ ಆದರೂ, ಕಷ್ಟಪಟ್ಟು ಸಿನಿಮಾ ಮಾಡಿದ ನಿರ್ಮಾಪಕ ಅದನ್ನು ಜನರ ಬಳಿಗೆ ಒಯ್ಯಬೇಕಾದರೆ ಈಗ ಪ್ರಚಾರ ಅನ್ನೋದು ಅಷ್ಟೆ ಅಗತ್ಯ. ಅದಕ್ಕಾಗಿ ಅವರು ಒಂದು ಪ್ರೆಸ್‌ಮೀಟ್‌ ಆಯೋಜಿಸಬೇಕಾದ್ರೆ, ಅದಕ್ಕೊಂದು ಸುಸಜ್ಜಿತವಾದ ಜಾಗ ಫಿಕ್ಸ್‌ ಮಾಡ್ಬೇಕು. ಅದಕ್ಕೆ ಹಲವು ದಿನಗಳಿಂದ ಸಿದ್ಧತೆ ನಡೆಸಬೇಕು. ಸಿನಿಮಾ ಕಲಾವಿದರೆಲ್ಲರನ್ನು ಒಂದೆಡೆ ಸೇರಿಸಬೇಕು, ಇದಕ್ಕೆಲ್ಲ ಲಕ್ಷಾಂತರ ರೂ. ಖರ್ಚು ಮಾಡಬೇಕು, ಇದೆಲ್ಲ ಹೆಣಗಾಟದರ ನಡುವೆ ನಿರ್ಮಾಪಕ ಸುಸ್ತಾಗಿ ಮಾತನಾಡದೆ ಮೌನವಹಿಸುವಾಗ, ನಿರ್ದೇಶಕರು ಸೇರಿ ಕಲಾವಿದರೇ ಆ ಚಿತ್ರದ ಬಗ್ಗೆ ಮಾಧ್ಯಮಕ್ಕೆ ಸಮಗ್ರ ಸುದ್ದಿ ನೀಡಬೇಕು. ಅದು ಬಿಟ್ಟು, ಗ್ಲಾಮರಸ್‌ ಆಗಿ ಬಂದು ವೇದಿಕೆಯ ಮೇಲೆ ಕುಳಿತು, ಮೋಜಿನಲ್ಲಿ ಚುಯಿಂಗ್‌ ಗಮ್‌ ಜಿಗಿಯುತ್ತಾ ಕೈಗೆ ಮೈಕ್‌ ಹಿಡಿದು ಮಾತನಾಡುವಾಗ ” ನಾಟ್‌ ಪ್ರೀಪೇರ್‌, ನಂಗೇನು ಗೊತ್ತಿಲ್ಲʼ ಅಂತ ಮೈಕ್‌ ಕೆಳಗಿಟ್ಟರೆ, ಅಷ್ಟೇಲ್ಲ ಖರ್ಚು ಮಾಡಿ ಸುದ್ದಿಗೋಷ್ಠಿ ಕರೆಯುವ ನಿರ್ಮಾಪಕರ ಕತೆಯೇನು?

ಒಂದು ಪ್ರೆಸ್‌ಮೀಟ್‌ ಆಯೋಜಿಸಬೇಕಾದ್ರೆ, ಅದಕ್ಕೊಂದು ಸುಸಜ್ಜಿತವಾದ ಜಾಗ ಫಿಕ್ಸ್‌ ಮಾಡ್ಬೇಕು. ಅದಕ್ಕೆ ಹಲವು ದಿನಗಳಿಂದ ಸಿದ್ಧತೆ ನಡೆಸಬೇಕು. ಸಿನಿಮಾ ಕಲಾವಿದರೆಲ್ಲರನ್ನು ಒಂದೆಡೆ ಸೇರಿಸಬೇಕು, ಇದಕ್ಕೆಲ್ಲ ಲಕ್ಷಾಂತರ ರೂ. ಖರ್ಚು ಮಾಡಬೇಕು, ಇದೆಲ್ಲ ಹೆಣಗಾಟದರ ನಡುವೆ ನಿರ್ಮಾಪಕ ಸುಸ್ತಾಗಿ ಮಾತನಾಡದೆ ಮೌನವಹಿಸುವಾಗ, ನಿರ್ದೇಶಕರು ಸೇರಿ ಕಲಾವಿದರೇ ಆ ಚಿತ್ರದ ಬಗ್ಗೆ ಮಾಧ್ಯಮಕ್ಕೆ ಸಮಗ್ರ ಸುದ್ದಿ ನೀಡಬೇಕು.

ಅ ಬಗ್ಗೆ ಎಷ್ಟು ಜನ ಕಲಾವಿದರು ಯೋಚಿಸುತ್ತಾರೋ ಇಲ್ಲವೋ ಗೊತ್ತಿಲ್ಲ, ಇತ್ತೀಚೆಗೆ ಸಿನಿಮಾ ಸುದ್ದಿಗೋಷ್ಠಿಗಳಲ್ಲಿ “ನಾಟ್‌ ಪ್ರೀಪೇರ್‌, ನಂಗೇನು ಗೊತ್ತಿಲ್ಲʼ ಎನ್ನುವ ಮಾತು ತುಂಬಾ ಕಾಮನ್‌ ಅಗಿದೆ. ಅತ್ಯಂತ ದುಬಾರಿ ಎನಿಸುವ ಸ್ಟಾರ್ ಹೊಟೇಲ್‌ ಗಳಲ್ಲಿನ ಸುದ್ದಿಗೋಷ್ಠಿಗಳಲ್ಲೂ ಕೆಲವರು ಸಿನಿಮಾದಲ್ಲಿನ ತಮ್ಮ ಪಾತ್ರ, ಸಿನಿಮಾದ ವಿಶೇಷತೆ ಕುರಿತು ಮಾತನಾಡುವ ಬದಲಿಗೆ ನಾಟ್‌‌ ಪ್ರೀಪೆರ್‌ ಅಂತ ಮಾತು ಮುಗಿಸಿ ಬಿಡುತ್ತಾರೆ. ಇಲ್ಲವೇ ಬರೀ ಥ್ಯಾಂಕ್ಸ್‌ ಗಿವಿಂಗ್‌ ಗಷ್ಟೇ ತಮ್ಮ ಮಾತು ಮೀಸಲಿರಿಸಿ, ಮೈಕ್‌ ಕೆಳಗಿಟ್ಟು ಕ್ಯಾಮೆರಾ ಕಡೆ ಮುಖ ಮಾಡುತ್ತಾರೆ. ಮಂಗಳವಾರದ ಸಂಜೆ ಕರೆದಿದ್ದ ʼಲಂಕೆʼ ಸಿನಿಮಾ ಟೈಟಲ್‌ ಲಾಂಚ್‌ ಕಾರ್ಯಕ್ರಮದಲ್ಲೂ ಒಬ್ಬ ನಟಿ ಮಾತು ಇದೇ ಆಗಿತ್ತು. ಸದ್ಯಕ್ಕೆ ಇಲ್ಲಿ ಅವರ ಹೆಸರು ಬೇಡ. ಮುಂದಿನ ದಿನವೂ ಅವರು ಹೀಗೆ ಮಾಡಿದರೆ, ಅವರ ಹೆಸರು ಬಹಿರಂಗ. ಅವರನ್ನ ಬಿಟ್ಟು ಬಿಡಿ, ಕೊನೆ ಪಕ್ಷ ನಿರ್ದೇಶಕರು, ನಿರ್ಮಾಪಕರಿಗೂ ಬುದ್ಧಿ ಬೇಡವೇ? ಹಾಗಂತ ಅನೇಕ ಸುದ್ದಿ ಗೋಷ್ಠಿಗಳಲ್ಲಿ ಆಕ್ಷೇಪಗಳು ಕೇಳಿಬಂದಿದ್ದ ಸತ್ಯ.

Categories
ಸಿನಿ ಸುದ್ದಿ

200 ಎಕರೆ ಎಸ್ಟೇಟು, ನಿರ್ಜನ ಪ್ರದೇಶ, 24 ಜನ, ಒಂದು ತಿಂಗಳು, ನನ್‌ ಲೈಫ್‌ಲ್ಲಿ ಆ ಅನುಭವ ಕಂಡಿದ್ದೇ ಅದೇ ಫಸ್ಟು…!..

  ಆ  ” ಹೀರೋ ʼ ಕುರಿತು ನಟ, ನಿರ್ದೇಶಕ ರಿಷಬ್‌ ಶೆಟ್ಟಿ ಹೀಗೆ ಹೇಳಿದ್ದರ ಹಿಂದಿನ ಕತೆಯೇ ರೋಚಕ…!!!.

ವಿಷಯಕ್ಕೆ ಬರೋಣ, ರಿಷಬ್‌ ಶೆಟ್ಟಿ ಹೇಳಿದ ಈ ಕತೆ ಯಾವುದಕ್ಕೆ ಸಂಬಂಧಿಸಿದ್ದು? ಎಲ್ಲೋ ಹೋಗಿ ಲಾಕ್‌ ಆಗಿ ಅನುಭವಿಸಿದ ಹಾರರ್‌ ಕತೆಯಾ ಅಥವಾ ನಕ್ಸಲೈಟೋ, ಇಲ್ಲವೇ ಯಾವುದಾದ್ರೂ ದರೋಡೆ ಗ್ಯಾಂಗ್‌ನವರ ಕೈಗೆ ಸಿಲುಕಿ, ತಪ್ಪಿಸಿಕೊಂಡು ಬಂದಿದ್ದರ ರಾಬಿನ್‌ ಹುಡ್‌ ಥರದ ಸ್ಟೋರಿಯಾ ? ಅಸಲಿಗೆ, ಈ ಕತೆ ಅದ್ಯಾವುದಕ್ಕೂ ಲಿಂಕ್‌ ಆಗಿದ್ದಲ್ಲ. ಬದಲಿಗೆ ಇದು ಅವರ ” ಹೀರೋʼ ಸಿನಿಮಾದ ಚಿತ್ರೀಕರಣಕ್ಕೆ ಸಂಬಂಧಿಸಿದ್ದು. ರಿಷಬ್‌ ಶೆಟ್ಟಿ ಫಿಲಂಸ್‌ ಮೂಲಕ ಭರತ್‌ ರಾಜ್‌ ನಿರ್ದೇಶನ ಹಾಗೂ ರಿಷಬ್‌ ಶೆಟ್ಟಿ ನಾಯಕರಾಗಿ ಅಭಿನಯಿಸಿರುವ ʼಹೀರೋʼ ಚಿತ್ರ ಈಗ ಚಿತ್ರೀಕರಣ ಮುಗಿಸಿ, ರಿಲೀಸ್‌ಗೆ ರೆಡಿ ಆಗಿದೆ. ನಾಳೆ( ಜ.14) ಸಂಕ್ರಾಂತಿ ಹಬ್ಬಕ್ಕೆ ಈ ಚಿತ್ರದ ಮೊದಲ ಅಫೀಷಿಯಲ್‌ ಟ್ರೈಲರ್‌, ಯುಟ್ಯೂಬ್‌ ಚಾನೆಲ್ ಮೂಲಕ ಲಾಂಚ್‌ ಆಗುತ್ತಿದೆ. ಸಹಜವಾಗಿಯೇ ಅದರ ಬಗ್ಗೆ ದೊಡ್ಡ ನಿರೀಕ್ಷೆಯೂ ಇದೆ.

ಕಾರಣ ಇಷ್ಟೇ, “ಬೆಲ್ ಬಾಟಮ್‌‌ʼ ಚಿತ್ರದ ಬಹುದೊಡ್ಡ ಸಕ್ಸಸ್‌ ನಂತರ ರಿಷಬ್‌ ಶೆಟ್ಟಿ ನಾಯಕರಾಗಿ ಕಾಣಿಸಿಕೊಳ್ಳುತ್ತಿರುವ ಚಿತ್ರ ಇದು. ಹಾಗೆಯೇ ನಿರ್ಮಾಪಕರಾಗಿ ” ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆʼ ಚಿತ್ರದ ಮೂಲಕ ಕಂಡ ಬಹುದೊಡ್ಡ ಗೆಲುವಿನ ನಂತರ ನಿರ್ಮಾಣ ಮಾಡಿದ ಚಿತ್ರ ʼಹೀರೋʼ. ವಿಶೇಷ ಅಂದ್ರೆ ಈ ಚಿತ್ರ ಶುರುವಾಗಿದ್ದೂ, ಚಿತ್ರೀಕರಣ ಮುಗಿಸಿಕೊಂಡು ಬಂದಿದ್ದೂ ಎರಡು ಚಿತ್ರ ತಂಡಕ್ಕೆ ಗೊತ್ತೇ ಆಗಿಲ್ಲವಂತೆ. ಅಂದ್ರೆ, ಶುರುವಾಗಿದ್ದಷ್ಟೇ ಬೇಗ, ಚಿತ್ರೀಕರಣವೂ ಮುಗಿದಿದೆಯಂತೆ. ಅದರಲ್ಲೂ ಲಾಕ್‌ ಡೌನ್‌ ಸಮಯದಲ್ಲೇ ಈ ಚಿತ್ರಕ್ಕೆ ಚಿತ್ರೀಕರಣ ನಡೆದಿದೆ. ಇದು ಪಕ್ಕಾ ಕಮರ್ಷಿಯಲ್‌ ಚಿತ್ರವಾದರೂ, ಆ ಸಿನಿಮಾಗಳ ಚಿತ್ರೀಕರಣದ ಹಾಗೆ ಸೆಟ್‌ನಲ್ಲೂ ಇರುವಷ್ಟು ಜನರೇ ಇಲ್ಲದೆ, ಕೇವಲ ೨೪ ಜನ ಸೆಟ್‌ನಲ್ಲಿದ್ದು ನಿಗದಿತ ಸಮಯದಲ್ಲಿ ಶೂಟಿಂಗ್‌ ಮುಗಿಸಿಕೊಂಡು ಬಂದಿದ್ದು, ರಿಷಬ್‌ ಶೆಟ್ಟಿ ಸಿನಿ ಜರ್ನಿಯಲ್ಲೇ ಇದು ಫಸ್ಟ್‌ ಅಂತೆ. ಟ್ರೈಲರ್‌ ಲಾಂಚ್‌ ಹಿನ್ನೆಲೆಯಲ್ಲಿ ಜ. 13 ರಂದು ಬುಧವಾರ ಚಿತ್ರ ತಂಡದೊಂದಿಗೆ ಮಾಧ್ಯಮದ ಮುಂದೆ ಬಂದಿದ್ದ ನಟ, ನಿರ್ದೇಶಕ ಕಮ್‌ ನಿರ್ಮಾಪಕ ರಿಷಬ್‌ ಶೆಟ್ಟಿ, ʼಹೀರೋʼ ಚಿತ್ರೀಕರಣದ ಆ ರೋಚಕ ಸಂಗತಿಗಳನ್ನು ತೆರೆದಿಟ್ಟರು.

” ಈ ಚಿತ್ರದ ಆಗಿದ್ದೇ ಲಾಕ್‌ ಡೌನ್‌ ಸಮಯದಲ್ಲಿ. ಲಾಕ್‌ಡೌನ್‌ ಇದೆ ಅಂತ ಊರಿಗೆ ಹೋದಾಗ ಎರಡು ತಿಂಗಳು ಕೆಲಸ ಇಲ್ದೆ ಒದ್ದಾಡಿ ಬಿಟ್ಟೆ. ಏನೋ ಮಿಸ್‌ ಮಾಡಿಕೊಳ್ಳುತ್ತಿದ್ದೇನೆ ಅಂತೆನಿಸಿತು. ಹಾಗಾಗಿ ಅಲ್ಲಿಂದ ಮಿಸೆಸ್‌ ಕರ್ಕೊಂಡು ಬೆಂಗಳೂರಿಗೆ ಬಂದು ಬಿಟ್ಟೆ. ಬಂದ್ಮೇಲೆ ಒಂದಷ್ಟು ಗೆಳೆಯರನ್ನು ಅವರಿದ್ದ ಜಾಗಗಳಿಂದಲೇ ಫೋನ್‌ ಮೂಲಕ ಸಂಪರ್ಕಿಸಿ, ಈ ಸಿನಿಮಾದ ಬಗ್ಗೆ ಹೇಳಿದೆ. ಆಗಲೇ ನಿರ್ದೇಶಕ ಭರತ್‌ ರಾಜ್‌ ಕತೆ ಬರೆದಿದ್ರು. ಉಳಿದಂತೆ ಸ್ಕ್ರಿಫ್ಟ್‌ ವರ್ಕ್‌ ತುಂಬಾನೆ ಅರ್ಜೆಂಟ್‌ ಆಗಿ ನಡೆದು ಹೋದವು. ಕಲಾವಿದರು ಬೇಕಲ್ವಾ ಅಂತ ಯೋಚಿಸುತ್ತಿದ್ದಾಗ, ಯಾರೆಲ್ಲ ಕೆಲಸ ಇಲ್ದೆ ಮನೆಯಲ್ಲೇ ಕುಳಿತಿದ್ದಾರೋ ಅವರನ್ನೇ ಆಯ್ಕೆ ಮಾಡ್ಕೊಳೋಣ ಅಂತ ಡಿಸೈಡ್‌ ಮಾಡಿದೆವು. ಜತೆಗೆ ಅವರ ಸೇಫ್ಟಿ ಬಗ್ಗೆಯೋ ಅಷ್ಟೇ ಕೇರ್‌ ವಹಿಸಿದೆವು, ಶೂಟಿಂಗ್‌ ಮುಗಿಯೋ ತನಕ ಮನೆಗೆ ಬರೋ ಹಾಗಿಲ್ಲ ಅಂತ ಸೂಚನೆ ಕೊಟ್ಟೆವು. ಅದಕ್ಕೆ ತಕ್ಕಂತೆ ಲೊಕೇಷನ್‌ ಹಂಟಿಂಗ್‌ ಶುರುವಾಯ್ತು. ನಿರ್ಜನವಾದ 200 ಎಕರೆ ಪ್ರದೇಶದ ಒಂದು ಕಾಫಿ ಎಸ್ಟೇಟ್‌ ಸಿಕ್ಕಿತು. ಕಲಾವಿದರು, ತಾಂತ್ರಿಕ ವರ್ಗದವರು ಸೇರಿ ೨೪ ಜನರ ತಂಡದೊಂದಿಗೆ ಅಲ್ಲಿಗೆ ಹೋದೆವು. ಅಲ್ಲಿಗೆ ಹೋದ ನಂತರ ಆದ ಅನುಭವೇ ಅದ್ಭುತʼ ಎನ್ನುತ್ತಾ ಮುಂದೆ ಹೇಳಲಿದ್ದ ತಮ್ಮ ಅನುಭವದ ಕತೆಗೆ ಮತ್ತಷ್ಟು ಕುತೂಹಲದ ಟ್ವಿಸ್ಟ್‌ ಕೊಟ್ಟರು ನಟ ರಿಷಬ್‌ ಶೆಟ್ಟಿ.

ಲಾಕ್‌ ಡೌನ್‌ ಸಮಯದಲ್ಲಿ ಅನೇಕರಿಗೆ ಹತ್ತಾರು ರೀತಿಯ ಅನುಭವ ಆಗಿವೆ. ಪ್ರತಿಯೊಬ್ಬರದು ಒಂದೊಂದು ಬಗೆ. ಒಬ್ಬ ಸಿನಿಮಾ ಮೇಕರ್‌ ಆಗಿ ರಿಷಬ್‌ ಕಂಡಿದ್ದು ಕೂಡ ಒಂದು ಸಿನಿಮ್ಯಾಟಿಕ್‌ ಅನುಭವವೇ. ಅದನ್ನವರು ಹೀಗೆ ವಿವರಿಸುತ್ತಾರೆ..” ಕತೆಯಲ್ಲಿ ಅಶೋಕ ವನದ ಸನ್ನಿವೇಶ ಇದೆ. ಅದಕ್ಕೆ ತಕ್ಕಂತೆಯೇ ಇರಲಿ ಅಂತ ನಾವು ಊರ ಹೊರಗಿನ ಆ ಎಸ್ಟೇಟ್‌ ಹುಡುಕಿಕೊಂಡಿದ್ದೆವು. ಊರಿನಿಂದ ಅದು ತುಂಬಾ ದೂರ ಅದು. ಏನಾದ್ರೂ ಬೇಕಿದ್ದರೆ, ಸಿಟಿ ಗೆ ಹೋಗಿ ಬರೋದಿಕ್ಕೆ ಒಂದಿನ ಬೇಕಿತ್ತು. ಹಾಗಾಗಿ ನಾವು ಮತ್ತೆ ಸಿಟಿಗೆ ಹೋಗಿ ಬರುವ ತಾಪತ್ರಯಗಳನ್ನು ದೂರ ವಿಟ್ಟು, ವಾಸ್ತವ್ಯ, ಅಡುಗೆ-ಉಡುಗೆಯ ಸರಕು ಸರಂಜಾಮುಗಳ ಸಮೇತ ಅಲ್ಲಿಗೆ ಹೋಗಿದ್ದೆವು. ತಂಡದ ಹಿರಿಕರು, ಅನುಭವಿಗಳು ಆದ ಪ್ರಮೋದ್‌ ಶೆಟ್ಟಿ ಹಾಗೂ ನಟ ಮಂಜುನಾಥ್‌ ಗೌಡ ಒಂದೇ ದಿನದಲ್ಲಿ ಸೆಟ್‌ ಪ್ರಾಪರ್ಟಿ ತಂದುಕೊಟ್ಟರು. ಸುಹಾಸ್‌ ಅಡುಗೆ ನೋಡಿಕೊಂಡರು. ಕೇವಲ ೨೪ ಜನ ಮಾತ್ರ ನಾವಲ್ಲಿದ್ದೆವು. ಕಲಾವಿದರಾಗಿ ಕ್ಯಾಮೆರಾ ಎದುರಿಸಿದವರೇ, ಸೆಟ್‌ ಬಾಯ್‌ ಆಗಿ ಕೆಲಸ ಮಾಡಿದರು. ಬಹುಶಃ, ಒಂದು ಕಮರ್ಷಿಯಲ್‌ ಸಿನಿಮಾಕ್ಕೆ ಇಷ್ಟು ಕಡಿಮೆ ಜನ ಇಟ್ಕೊಂಡು ಚಿತ್ರೀಕರಣ ಮಾಡಿದ್ದು ಇದೇ ಮೊದಲಿರಬೇಕು. ನನ್ನ ಸಿನಿ ಜರ್ನಿಗೆ ಇದೇ ಮೊದಲು. ಲೈಫ್‌ ನಲ್ಲಿ ಅಂತಹ ಅನುಭವ ಕಂಡೇ ಇರಲಿಲ್ಲ. ಸಿನಿಮಾದಲ್ಲಿ ರಕ್ತ ಇದೆ, ಹಾಗೆಯೇ ಅದರ ಚಿತ್ರೀಕರಣಕ್ಕೂ ಕೆಲವರು ರಕ್ತ ಹರಿಸಿದ್ದಾರೆ. ನಿದ್ದೆ – ನೀರಡಿಕೆ  ಬಿಟ್ಟು ಚಿತ್ರೀಕರಣ ಮಾಡಿದ್ದೇವೆ. ಮಜಾ ಮಾಡ್ಲಿಕ್ಕೆ ಬಂದಿದ್ದೇವೆ ಅಂತ ಯಾರಿಗೂ ಎನಿಸಲಿಲ್ಲ. ಅದೆಲ್ಲದರ ಪ್ರತಿಫಲವೇ ʼಹೀರೋʼ. ಅಂತ ಅದರ ಚಿತ್ರೀಕರಣದ ಅನುಭವ ಹೇಳಿಕೊಂಡರು ರಿಷಬ್‌ ಶೆಟ್ಟಿ.

ಅಂದ ಹಾಗೆ,  ರಿಲೀಸ್‌ ಗೆ ರೆಡಿಯಾಗಿರುವ ಹೀರೋ ಸಿನಿಮಾ ಅತೀ ಶೀಘ್ರದಲ್ಲೇ ತೆರೆಗೆ ಬರಲಿರುವುದು ಗ್ಯಾರಂಟಿ ಅಂತೆ.

Categories
ಸಿನಿ ಸುದ್ದಿ

ಬರಲಿದೆ ಡಾ.ರಾಜ್‌ಕುಮಾರ್‌ ರಸ್ತೆ ಕಾದಂಬರಿ – ವಿನಾಯಕರಾಮ ಕಲಗಾರು ಅವರ ಕಾಮಗಾರಿ ಶುರು

 

ಜನವರಿ 27ಕ್ಕೆ ಲೋಕಾರ್ಪಣೆ

ಪತ್ರಕರ್ತ ವಿನಾಯಕರಾಮ್‌ ಕಲಗಾರು ಒಳ್ಳೆಯ ಬರಹಗಾರ. ಅದಕ್ಕಿಂತಲೂ ಹೆಚ್ಚು ಅಷ್ಟೇ ಸೊಗಸಾದ ಮಾತುಗಾರ. ಹಾಗಾಗಿಯೇ ಅವರು, ಹಲವು ಚಿತ್ರಗಳಿಗೆ ಮಾತುಗಳನ್ನೂ ಪೋಣಿಸಿದ್ದಾರೆ. ಹಲವಾರು ವಾಹಿನಿಗಳ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ ವಿನಾಯಕರಾಮ್‌ ಕಲಗಾರು, ಕೆಲವು ವಾಹಿನಿಗಳಲ್ಲಿ ಪ್ರಸಾರಗೊಂಡ ರಿಯಾಲಿಟಿ ಶೋಗಳ ಸೂತ್ರದಾರ ಕೂಡ. ಅವರ ಬಗ್ಗೆ ಇಲ್ಲೇಕೆ ಇಷ್ಟೊಂದು ಪೀಠಿಕೆ ಅಂದರೆ, ಸಿನಿಮಾರಂಗದಲ್ಲೇ ಅತೀ ಹೆಚ್ಚು ಒಡನಾಟ ಇಟ್ಟುಕೊಂಡಿರುವ ವಿನಾಯಕರಾಮ್‌ ಕಲಗಾರು, ಸಿನಿಮಾ ನಿರ್ದೇಶನ ಮಾಡುವ ಬಗ್ಗೆ ಈ ಹಿಂದೆಯೇ ಹೇಳಿದ್ದರು. ತಮ್ಮ ಚೊಚ್ಚಲ ನಿರ್ದೇಶನದ ಚಿತ್ರಕ್ಕೆ “ಡಾ.ರಾಜಕುಮಾರ ರಸ್ತೆ” ಎಂದೂ ಹೆಸರಿಟ್ಟಿದ್ದರು. ಹಾಗಂತ ಅವರ ಆ ಸಿನಿಮಾ ಕನಸು ಇನ್ನೂ ಮುಗಿದಿಲ್ಲ. ನನಸು ಮಾಡಿಕೊಳ್ಳುವ ಹಾದಿಯಲ್ಲೇ ಅವರಿದ್ದಾರೆ. ಹಾಗಾಗಿಯೇ ರಾಜ್‌ಕುಮಾರ್‌ ರಸ್ತೆಯಲ್ಲಿ ನಿಂತಿದ್ದಾರೆ.

ವಿನಾಯಕರಾಮ್‌ ಕಲಗಾರು

ಹೌದು, ವಿನಾಯಕರಾಮ್‌ ಕಲಗಾರು ಸಿನಿಮಾ ಮಾಡುವುದು ದಿಟ. ಅದಕ್ಕೂ ಮೊದಲು ಅವರೀಗ ಕಾದಂಬರಿ ಹಿಂದೆ ನಿಂತಿದ್ದಾರೆ. “ಡಾ.ರಾಜ್‌ಕುಮಾರ್‌ ರಸ್ತೆ” ಹೆಸರಿನ ಕಾದಂಬರಿ ಬರೆದು ಮುಗಿಸಿರುವ ಅವರು, ಅದನ್ನು ಬಿಡುಗಡೆ ಮಾಡುವ ಉತ್ಸಾಹದಲ್ಲಿದ್ದಾರೆ. ಆ ಅಪರೂಪದ ಪುಸ್ತಕವನ್ನು ಅಣ್ಣಾವ್ರ ಮುತ್ತಿನಂಥ ಮೂವರು ಮಕ್ಕಳಿಗೆ ಅರ್ಪಣೆ ಮಾಡುವ ಹುರುಪಿನಲ್ಲಿದ್ದಾರೆ. ಅದಕ್ಕಾಗಿ ಈಗಾಗಲೇ ಸಾಕಷ್ಟು ತಯಾರಿಯೂ ನಡೆಸಿದ್ದಾರೆ. ಜನವರಿ ೨೭ರಂದು “ಡಾ.ರಾಜ್‌ಕುಮಾರ್‌ ರಸ್ತೆ ಕಾದಂಬರಿ ಅಧ್ಯಾಯಗಳ ರೂಪದಲ್ಲಿ ಲೋಕಾರ್ಪಣೆಗೊಳ್ಳಲಿದೆ. ಕೆ.ಪಿ.ಶ್ರೀಕಾಂತ್‌ ಅವರು ಕಾದಂಬರಿಯ ಮೊದಲ ಎಪಿಸೋಡ್‌ ಅನ್ನು ತಮ್ಮ ಸೋಶಿಯಲ್‌ ಮೀಡಿಯಾದಲ್ಲಿ ಬಿಡುಗಡೆ ಮಾಡಲಿದ್ದಾರೆ.

ಇಷ್ಟಕ್ಕೂ ಜನವರಿ 27ರಂದು ಪುಸ್ತಕ ಬಿಡುಗಡೆ ಯಾಕೆ ಗೊತ್ತಾ? ಆ ದಿನದಂದು “ಡಾ.ರಾಜ್‌ಕುಮಾರ್‌ ರಸ್ತೆ”ಗೆ ನಾಮಕರಣ ಮಾಡಲಾಗಿತ್ತು. ಆ ಕಾರಣಕ್ಕಾಗಿಯೇ ಜನವರಿ ೨೭ರಂದು ವಿನಾಯಕರಾಮ್‌ ಕಲಗಾರು ತಮ್ಮ ಪುಸ್ತಕವನ್ನು ಅಂದು ಬಿಡುಗಡೆ ಮಾಡುವ ಹುಮ್ಮಸ್ಸಿನಲ್ಲಿದ್ದಾರೆ. ತಮ್ಮ “ಡಾ.ರಾಜ್‌ಕುಮಾರ್‌ ರಸ್ತೆ” ಬಗ್ಗೆ ಹೇಳುವ ವಿನಾಯಕರಾಮ್‌ ಕಲಗಾರು, “ಇಲ್ಲಿ ಬರುವ ಪಾತ್ರಗಳು ಮತ್ತು ಚಿತ್ರಗಳು ಕೇವಲ ಕಾಲ್ಪನಿಕ. ಅದಕೆ ರಾಜಕುಮಾರ ಎಂಬ ರಮಣೀಯ ಹೆಸರೇ ಆ ಎಲ್ಲ ಕಥನ ಕಹಾ‌ನಿಯ ನಾವಿಕ. ಈ ಕಾದಂಬರಿ ನನ್ನ ಬದುಕಿನ ಮುಖಪುಟ. ಇಲ್ಲಿ ಯಾರೂ ಅರಿಯದೇ ಇರೋ ಅಚ್ಚರಿಗಳ ಗುಚ್ಛ ಸಹಿತ ರೋಚಕ ಪಟ ಇದಾಗಲಿದೆ. ಇದು ಬರೀ ಕಾದಂಬರಿ ಅಲ್ಲ. ಇಲ್ಲಿ ತೆರೆದುಕೊಳ್ಳುತ ಹೋಗುವ ಪಾತ್ರ-ಚಿತ್ರಗಳು ನನ್ನನ್ನೇ ಭಯ ಬೀಳಿಸುವ ಸತ್ಯಾಂಶ ಸಂಭೂತರು! ಆದರೆ, ಇದು ಕಾಲ್ಪನಿಕ…100% ವೈಮಾನಿಕ… ನನ್ನ ಕಣ್ಣಳತೆಗೂ ಮೀರಿದ ‘ರಾಜತಾಂತ್ರಿಕ’ ಘಟನಾ ಗುಚ್ಛಗಳ ಗಮನಾರ್ಹ ಗ್ಯಾಲರಿ” ಎಂಬುದು ಅವರ ಮಾತು.


ಅದೇನೆ ಇರಲಿ, ರಸ್ತೆ ಅನ್ನುವ ಪದವನ್ನು ಕೇಳಿದರೆ ಸಾಕು, ಅಲ್ಲಿ ಒಂದಷ್ಟು ಕಲರ್‌ಫುಲ್‌ ಕನಸುಗಳ ಮೆರವಣಿಗೆಯ ನೆನಪಾಗುತ್ತೆ. ಒಂದೊಂದು ರಸ್ತೆಯೂ ಒಂದೊಂದು ಕಥೆ ಹೇಳುತ್ತೆ. ಅಂಥದ್ದೊಂದು ರಸ್ತೆಗೆ ಸಾಕಷ್ಟು ಇತಿಹಾಸವೂ ಉಂಟು. ಈಗ ಡಾ.ರಾಜ್‌ಕುಮಾರ್‌ ರಸ್ತೆ ಮೇಲೊಂದು ಕಾದಂಬರಿ ಬರೆದಿದ್ದಾರೆ. ಆ ಹೆಸರಿನ ರಸ್ತೆ ಅಂದಾಕ್ಷಣ ಅದೊಂದು ಮುಗಿಯದ ಸಂಭ್ರಮವೇ ಸರಿ. ಸದ್ಯ, ಕಾದಂಬರಿ ಬಿಡುಗಡೆ ಮಾಡಿ, ನಂತರದ ದಿನಗಳಲ್ಲಿ ಸಿನಿಮಾ ಮಾಡುವ ಉದ್ದೇಶ ಅವರದು. ಅವರ ಹೊಸ ಹೆಜ್ಜೆಗೆ “ಸಿನಿಲಹರಿ”ಯ ಶುಭಹಾರೈಕೆ.

Categories
ಸಿನಿ ಸುದ್ದಿ

ಮಕ್ಕಳ ತಂಟೆಗೆ ಬರಬೇಡಿ ಅಂತಾರೆ ಕೋಡ್ಲು ರಾಮಕೃಷ್ಣ – ಕೊರೊನಾ ಎಫೆಕ್ಟ್‌ ಬಳಿಕ ಮಕ್ಕಳ ಮನಸ್ಥಿತಿಯ ಚಿತ್ರಣ

ಮಕ್ಕಳ ತಂಟೆಗೆ ಬಂದ್ರೆ ಹುಷಾರ್…!‌
– ಈ ಮಾತನ್ನು ನಾವ್‌ ಹೇಳುತ್ತಿಲ್ಲ. ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ವಿಭಿನ್ನ ಚಿತ್ರಗಳನ್ನು ನಿರ್ದೇಶಿಸುವ ಮೂಲಕ ಸೈ ಎನಿಸಿಕೊಂಡಿರುವ ಕೋಡ್ಲು ರಾಮಕೃಷ್ಣ ಹೇಳುತ್ತಿದ್ದಾರೆ. ಹೌದು, ಅವರೀಗ ಮಕ್ಕಳ ಚಿತ್ರವೊಂದನ್ನು ನಿರ್ದೇಶನ ಮಾಡಿದ್ದಾರೆ. ಆ ಚಿತ್ರಕ್ಕೆ “ಮಕ್ಕಳ ತಂಟೆಗೆ ಬಂದ್ರೆ ಹುಷಾರ್” ಎಂದು ನಾಮಕರಣ ಮಾಡಲಾಗಿದೆ. ಇದೊಂದು ಸಂದೇಶ ಸಾರುವ ಸಿನಿಮಾ. ಈ ಚಿತ್ರದ ಬಗ್ಗೆ ಹೇಳುವುದಾದರೆ, “ಮಕ್ಕಳ ನಿತ್ಯ ಚಟುವಟಿಕೆ, ಪೋಷಕರ ಜೀವನ ಶೈಲಿ, ಮೊಬೈಲ್ ಗೀಳು, ಶ್ರೀಮಂತ, ಮಧ್ಯಮ ಹಾಗೂ ಬಡವರ ಮನೆ ಮಕ್ಕಳು ಕೊರೊನಾ ಬರುವ ಮೊದಲು ಹಾಗೂ ನಂತರ ಹೇಗಿದ್ದಾರೆ? ಎನ್ನುವುದೇ ಈ ಚಿತ್ರದ ಕಥಾ ಹಂದರ.


ಚಿತ್ರೀಕರಣ ಮುಗಿದು, ಸೆನ್ಸಾರ್ ಕೂಡ ಆಗಿದೆ. ಸೆನ್ಸಾರ್ ಮಂಡಳಿ ಸಿನಿಮಾ ವೀಕ್ಷಿಸಿ, ಮೆಚ್ಚುಗೆ ವ್ಯಕ್ತಪಡಿಸಿದೆ. ಸಂಕ್ರಾಂತಿಗೆ ಚಿತ್ರದ ಟ್ರೇಲರ್ ಬಿಡುಗಡೆಯಾಗಲಿದೆ. ಭುವನ್ ಫಿಲಂಸ್ ಬ್ಯಾನರ್‌ನಲ್ಲಿ ನಾರಾಯಣ್ ಹಾಗೂ ಕೋಡ್ಲು ರಾಮಕೃಷ್ಣ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ದೀಪು (ರಾಮನಗರ) ಈ ಚಿತ್ರದ ಸಹ ನಿರ್ಮಾಪಕರಾಗಿದ್ದಾರೆ.


ಕ್ರಿಶ್ ಜೋಶಿ ಅವರ ಕಥೆಗೆ ಕೋಡ್ಲು ರಾಮಕೃಷ್ಣ ಹಾಗೂ ರಾಮಮೂರ್ತಿ ಚಿತ್ರಕಥೆ ರಚಿಸಿದ್ದಾರೆ. ಕ್ರಿಶ್ ಜೋಶಿ ಅವರ ಜೊತೆಗೂಡಿ ಕೋಡ್ಲು ರಾಮಕೃಷ್ಣ ಸಂಭಾಷಣೆ ಬರೆದಿದ್ದಾರೆ. ಶಮಿತ ಮಲ್ನಾಡ್ ಸಂಗೀತ ನಿರ್ದೇಶನವಿದೆ., ನಾಗೇಂದ್ರ ಛಾಯಾಗ್ರಹಣ ಮಾಡಿದರೆ, ವಸಂತ್ ಕುಮಾರ್ ಸಂಕಲನವಿದೆ.

ಚಿತ್ರದಲ್ಲಿ ಮುಖ್ಯಮಂತ್ರಿ ಚಂದ್ರು, ವಿನಯಾ ಪ್ರಕಾಶ್, ಶಿವಧ್ವಜ್, ಪ್ರಥಮ ಪ್ರಕಾಶ್, ಟೆನ್ನಿಸ್ ಕೃಷ್ಣ, ಸುಧಾ ಬೆಳವಾಡಿ, ಕುಮಾರಿ ಐಶ್ವರ್ಯ, ಶ್ರೀಧರ್ ನಾಯಕ್ ಸ್ನೇಹ ಭಟ್, ಪ್ರಕಾಶ್, ಭವಾನಿ ಪ್ರಕಾಶ್, ಬೇಬಿ ಗಗನ, ಬೇಬಿ ಯಶಿಕಾ, ಬೇಬಿಶ್ರೀ, ಬೇಬಿ ಪ್ರತಿಷ್ಠ ದೇಶಪಾಂಡೆ, ಯುಕ್ತ ಹೆಗಡೆ, ಮಾಸ್ಟರ್ ವಿಷ್ಣು ಸಂಜಯ್, ಮಾಸ್ಟರ್ ತರುಣ್, ಮಾಸ್ಟರ್ ಸರ್ವಜ್ಞ, ಮಾಸ್ಟರ್ ಯುವರಾಜ್ ಮುಂತಾದವರು ಈ ಚಿತ್ರದಲ್ಲಿದ್ದಾರೆ.

Categories
ಸಿನಿ ಸುದ್ದಿ

ಸಂಕ್ರಾಂತಿಗೆ ಕೃಷ್ಣ ಟಾಕೀಸ್ ನಲ್ಲಿ ಸಂ – ಕ್ರಾಂತಿ, ಲಿರಿಕಲ್ ವಿಡಿಯೋ ಲಾಂಚ್ ಗೆ ನಟ ಅಜೇಯ ರಾವ್ ಪುತ್ರಿಯೇ ಗೆಸ್ಟ್ ! !

ಸಂಕ್ರಾಂತಿ ಗೆ ಸಂಗೀತದ ಸಂ-ಕ್ರಾಂತಿ

ನಟ ಅಜೇಯ ರಾವ್ ಈಗ  ‘ ಕೃಷ್ಣ ಟಾಕೀಸ್’ ‘‌  ಚಿತ್ರದ ಗುಂಗಿನಲ್ಲಿದ್ದಾರೆ. ಈ ವರ್ಷದ ಆರಂಭದ ಮಟ್ಟಿಗೆ ಇದು ಅವರಿಗೆ ಬಹು ನಿರೀಕ್ಚಿತ ಚಿತ್ರ. ಅವರ ಹಾಗೆಯೇ ‌ ಇಡೀ ಚಿತ್ರ ತಂಡಕ್ಕೂ ಕೂಡ. ಅದರಲ್ಲೂ ನಾಳಿನ‌ ( ಜ.14) ಸಂಕ್ರಾಂತಿ ‘ಕೃಷ್ಷ ಟಾಕೀಸ್ ‘ಚಿತ್ರ ತಂಡಕ್ಕೆ ತುಂಬಾನೆ ವಿಶೇಷ.ಯಾಕಂದ್ರೆ, ಸಂಕ್ರಾಂತಿ‌ಗೆ ಈ ಚಿತ್ರದ ಎರಡನೇ ಹಾಡಿನ ಲಿರಿಕಲ್ ವಿಡಿಯೋ ಲಾಂಚ್ ಆಗುತ್ತಿದೆ. ಸಂಕ್ರಾಂತಿ ಹಬ್ಬದ ಕೊಡುಗೆಯಾಗಿ ಸೋಷಲ್ ಮೀಡಿಯಾದಲ್ಲಿ ಲಾಂಚ್ ಆಗುತ್ತಿರುವ ಈ ಲಿರಿಕಲ್ ವಿಡಿಯೋ ವನ್ನು ಕೃಷ್ಷ ಅಜೇಯ ರಾವ್ ಪುತ್ರಿ ಪುಟಾಣಿ ಚೆರ್ರಿ ಲಾಂಚ್ ಮಾಡುತ್ತಿದ್ದಾಳೆ. ಅದೇ ಕಾರಣಕ್ಕೆ ಚಿತ್ರ ತಂಡ ಕಾತರದಲ್ಲಿದೆ.

ಗೋಕುಲ್ ಎಂಟರ್ಟೈನರ್ ಬ್ಯಾನರ್ ನಲ್ಲಿ ಗೋವಿಂದ್ ರಾಜು ನಿರ್ಮಾಣ ಮಾಡಿರುವ ಈ ಚಿತ್ರಕ್ಕೆ ವಿಜಯಾನಂದ್ ಆಕ್ಷನ್ ಕಟ್ ಹೇಳಿದ್ದಾರೆ. ಜನಪ್ರಿಯ ಸಂಗೀತ ನಿರ್ದೇಶಕ ಶ್ರೀಧರ್ ವಿ. ಸಂಭ್ರಮ್ ಸಂಗೀತ ಸಂಯೋಜನೆ ಮಾಡಿದ್ದು, ಸೊಗಸಾದ ಹಾಡುಗಳನ್ನು ಕೊಟ್ಟ ಖುಷಿ ಅವರಿಗೂ ಇದೆ. ಈಗ ಈ ಚಿತ್ರದ ಎರಡನೇ ಹಾಡಿನ ಲಿರಿಕಲ್ ವಿಡಿಯೋ ಲಾಂಚ್ ಆಗುತ್ತಿದೆ. ಹಾಡಿಗೆ ವಿಜಯಾನಂದ ರಚನೆ ಇದೆ.  ‘ ಚಿತ್ರದಲ್ಲೇ ಹೈಲೈಟ್ ಎನ್ನುವಂತಹ ತುಂಬಾ ಮುದ್ದಾದ ಹಾಡು ಇದು.


ಬಹಳ ಸೊಗಸಾಗಿ‌ ಮೂಡಿ ಬಂದಿದೆ. ಇದರ ಲಿರಿಕಲ್ ವಿಡಿಯೋ ವನ್ನು ಈಗ ಚಿತ್ರದ ನಾಯಕ ನಟ ಕೃಷ್ಷ ಅಜೇಯ್ ರಾವ್ ಪುತ್ರಿ ಚೆರ್ರಿ ಲಾಂಚ್ ಮಾಡುತ್ತಿರುವುದು ತುಂಬಾ ತುಂಬಾ‌ ಖುಷಿ ತಂದಿದೆ’ ಎನ್ನುತ್ತಾರೆ ಸಂಗೀತ ನಿರ್ದೇಶಕ ಶ್ರೀಧರ್ ವಿ. ಸಂಭ್ರಮ್.

ಅಜೇಯ್ ರಾವ್ ಪುತ್ರಿ ಚೆರ್ರಿ

ಅಜೇಯ ರಾವ್ ನಟನೆಯ ಕೃಷ್ಣ ಸಿರೀಸ್ ನಲ್ಲಿ ಸೂಪರ್ ಡೂಪರ್ ಹಿಟ್ ಸಾಂಗ್ ಕೊಟ್ಟ ಖ್ಯಾತಿ ಸಂಕ್ರಾಂತಿ, ನಿರ್ದೇಶಕ ಶ್ರೀಧರ್ ಅವರದು‌. ಈಗ ಕೃಷ್ಣ ಟಾಕೀಸ್ ಮೂಲಕ ಮತ್ತೊಮ್ಮೆ ಮೋಡಿ ಮಾಡಲು ರೆಡಿ ಆಗಿದ್ದಾರೆ. ಸದ್ಯಕ್ಕೀಗ ಲಿರಿಕಲ್ ವಿಡಿಯೋ ದೊಂದಿಗೆ ಹವಾ ಎಬ್ಬಿಸಲು ಬರುತ್ತಿದ್ದಾರೆ‌. ಕೃಷ್ಷ ಟಾಕೀಸ್ ಎನ್ನುವ ಹೆಸರೇ ಹೇಳುವಂತೆ, ಇದು ಕೃಷ್ಷ ಹೆಸರಿನ ಟಾಕೀಸ್ ವೊಂದರಲ್ಲಿ‌ನಡೆಯುವ ಕತೆ. ಅದೇನು? ಯಾರಿಗೂ ಗೊತ್ತಿಲ್ಲ.‌ಅದು ಗೊತ್ತಾಗುವುದು ತೆರೆ ಮೇಲೆಯೇ. ಈ ಕತೆಯಲ್ಲಿ ಅಜೇಯ್ ರಾವ್ ಅವರಿಗೆ ಜೋಡಿಯಾಗಿ ಸಿಂಧು ಲೋಕನಾಥ್, ಅಪೂರ್ವ ಇದ್ದಾರೆ‌. ಉಳಿದಂತೆ ದೊಡ್ಡ ತಾರಾಗಣವೇ ಇದೆ.

Categories
ಸಿನಿ ಸುದ್ದಿ

ಲೂಸ್ ಮಾದ ಯೋಗಿ ಬಗ್ಗೆ ಇಂಡಸ್ಟ್ರಿ ನವರು ಯಾಕೆ ಹಾಗೆ ಹೇಳಿದ್ರು? ನಿರ್ದೇಶಕ ರಾಮ್ ಪ್ರಸಾದ್ ರಿವೀಲ್ ಮಾಡಿದ ಸುದ್ದಿ ಹೀಗಿದೆ…..

ಲಂಕೆ ಟೈಟಲ್ ಅನಾವರಣ ಕಾರ್ಯಕ್ರಮದಲ್ಲಿ ರಿವೀಲ್ ಆದ ಸುದ್ದಿ


ನಟ ಲೂಸ್ ಮಾದ ಯೋಗೇಶ್ ಈಗ’ ಲಂಕೆ ‘ ಚಿತ್ರದೊಂದಿಗೆ ತೆರೆ ಮೇಲೆ ಕಾಣಿಸಿಕೊಳ್ಳಲು ರೆಡಿಯಾಗಿದ್ದಾರೆ. ಈಗಾಗಲೇ ಈ ಚಿತ್ರ ಚಿತ್ರೀಕರಣ ಮುಗಿಸಿ, ಸೆನ್ಸಾರ್ ಹಂತಕ್ಕೆ ಕಾಲಿಟ್ಟಿದೆ. ಎಲ್ಲವೂ ಅಂದುಕೊಂಡಂತಾದರೆ, ಫೆಬ್ರವರಿ ಅಥವಾ ಮಾರ್ಚ್ ತಿಂಗಳಲ್ಲಿ ಈ ಚಿತ್ರ ಬಿಡುಗಡೆ ಆಗುವ ಸಾಧ್ಯತೆಗಳಿವೆ. ಲೂಸ್ ಮಾದ ಯೋಗೇಶ್, ಸಂಚಾರಿ ವಿಜಯ್, ಕಾವ್ಯ ಶೆಟ್ಟಿ ಸೇರಿದಂತೆ ದೊಡ್ಡ ತಾರಾಗಣವೇ ಈ ಚಿತ್ರದಲ್ಲಿದೆ. ಇನ್ನು ಶೀರ್ಷಿಕೆ ಯೇ ಹೇಳುವ ಹಾಗೆ ಇದು ರಾಮಾಯಣ ಕ್ಕೆ ಸಣ್ಣದೊಂಡು ಲಿಂಕ್ ಹೊಂದಿರುವ ಕತೆ.

ಅದೆಲ್ಲದರಾಚೆ ಇಂಟೆರೆಸ್ಟಿಂಗ್ ಸಂಗತಿ ಅಂದ್ರೆ ಲೂಸ್ ಮಾದ ಯೋಗೇಶ್ ಅವರು ಈ ಚಿತ್ರಕ್ಕೆ ನಾಯಕರಾಗಿದ್ದೇ ವಿಚಿತ್ರವಂತೆ. ಯಾಕಂದ್ರೆ ನಿರ್ದೇಶಕ ರಾಮ್ ಪ್ರಸಾದ್ ಅವರು ಚಿತ್ರಕ್ಕೆ ನಾಯಕ ಆಗ್ಬೇಕು ಅಂತ ಯೋಗೇಶ್ ಅವರ ಬಳಿಗೆ ಹೋಗುವ ಮುನ್ನ ಇಂಡಸ್ಟ್ರಿ ಅವರ ಬಗ್ಗೆ ಎನೇನೋ ಹೇಳಿತ್ತಂತೆ. ಹಾಗಾಗಿ ಅವರನ್ನು ಅಪ್ರೋಚ್ ಮಾಡೋದು ಹೇಗೋ ಏನೋ ಅಂತ ಯೋಚ್ನೆ ಮಾಡಿದ್ರಂತೆ. ಕೊನೆಗೆ ಭಯದಿಂದಲೇ ನಟ‌ಯೋಗಿ ಅವರನ್ನು ಭೇಟಿ ಮಾಡಿದಾಗ ಅವರ ನಿಜವಾದ ಪರಿಚಯ ವಾಯಿತ್ತಂತೆ. ಅವರ ಪ್ರಕಾರ ಯೋಗಿ ಅಂದ್ರೆನೇ ಬೇರೆ.


‘ ಯೋಗಿ ಅಂದ್ರೆ ಸಹೋದರ, ಯೋಗಿ ಅಂದ್ರೆ ಗೆಳೆಯ,ಯೋಗಿ ಅಂದ್ರೆ ಅಡೋರೆಬಲ್…ಏನ್ ಹೇಳಿದ್ರು ಕಮ್ಮಿನೇ…ಯೋಗಿ ಅಂದ್ರೆ ಏನು ಅಂತ ನಂಗೆ ಅವರನ್ನು ಭೇಟಿ ಮಾಡಿದ ಮೊದಲ ದಿನವೇ ಗೊತ್ತಾಯಿತು.ಯಾರೇರೋ ಏನೇನೋ ಹೇಳಿದ್ರಲ್ಲಾ ಅಂತ ನಂಗೆ ನಾನೇ ಅಚ್ಚರಿ ಪಟ್ಟೆ. ಅವರ ಜತೆಗೆ ಬೇಕಾದ್ರೆ ಇನ್ನು ಹತ್ತು ಸಿನಿಮಾ ಮಾಡಬಲ್ಲೆ. ಅಷ್ಟು ಸಹಕಾರದ ಮನೋಭಾವ ಇರುವ ನಟ’ ಅಂತ ಯೋಗಿ ಅವರನ್ನು ಮುಕ್ತ ಕಂಠದಿಂದ ಬಣ್ಣಿಸಿದರು ನಿರ್ದೆಶಕ ರಾಮ್ ಪ್ರಸಾದ್. ಕೊನೆಗೆ ಯೋಗಿ ಮಾತನಾಡುತ್ತಾ, ಯಾರು ಹಂಗೆ ಹೇಳಿದ್ದು ಅವ್ರ ನಂಬರ್ ಕೊಡಿ, ನಾನೇ ಅವರಿಗೆ ಕಾಟ ಕೊಡ್ತೀನಿ’ ಅಂತ ಕಾಮಿಡಿ ಮೂಲಕ ತಮ್ಮ ವಿರುದ್ಧ ಹೇಳಿದವರಿಗೆ ತಿರುಗೇಟು ಕೊಟ್ಟರು ಯೋಗೇಶ್.

Categories
ಸಿನಿ ಸುದ್ದಿ

ಚಡ್ಡಿದೋಸ್ತರ ಹಾಡು ಪಾಡು – ಕಡ್ಡಿ ಅಲ್ಲಾಡಿಸೋ ಮಂದಿಯ ಆಡಿಯೋ ಕಾರ್ಯಕ್ರಮ

ಕೌಂಡಿನ್ಯರ ಕಾದಂಬರಿಗೆ ಸಿನಿಮಾ ಸ್ಪರ್ಶ

ನಿರ್ದೇಶಕ “ಆಸ್ಕರ್‌” ಕೃಷ್ಣ ಈಗ ಹೊಸದೊಂದು ಚಿತ್ರ ಮಾಡಿದ್ದು ಗೊತ್ತೇ ಇದೆ. ಅದೀಗ ರಿಲೀಸ್‌ ಹಂತಕ್ಕ ಬಂದಿದೆ. ಹೌದು, ಈ ಹಿಂದೆ “ಆಸ್ಕರ್”, “ಮಿಸ್ ಮಲ್ಲಿಗೆ”, “ಮೊನಿಕಾ ಈಸ್ ಮಿಸ್ಸಿಂಗ್” ಮತ್ತು “ಮನಸಿನ ಮರೆಯಲಿ” ಸಿನಿಮಾ ನಿರ್ದೇಶಿಸಿದ್ದ ಕೃಷ್ಣ, ಈಗ “ಚಡ್ಡಿದೋಸ್ತ್‌ ಕಡ್ಡಿ ಅಲ್ಲಾಡ್‌ಸ್ಬುಟ್ಟ” ಚಿತ್ರ ಮಾಡಿದ್ದಾರೆ. ಅದರ ಹಾಡುಗಳು ಇತ್ತೀಚೆಗೆ ಬಿಡುಗಡೆಗೊಂಡವು. ಅಂದಹಾಗೆ, ಈ ಚಿತ್ರವನ್ನು ರೆಡ್ ಅಂಡ್ ವೈಟ್ ಖ್ಯಾತಿಯ ಸೆವೆನ್‍ರಾಜ್ ನಿರ್ಮಾಣ ಮಾಡಿದ್ದಾರೆ. ನಟಿ ಪ್ರೇಮಾ ಅಂದು ಆಡಿಯೋ ಬಿಡುಗಡೆಗೆ ಸಾಕ್ಷಿಯಾದರು.

ಅವರೊಂದಿಗೆ ಎಸ್.ಎ. ಚಿನ್ನೇಗೌಡ, ಬಾಮ ಹರೀಶ್, ಬಾಮ. ಗಿರೀಶ್, ರವಿಚೇತನ್, ಶಿಲ್ಪ ಶ್ರೀನಿವಾಸ್ ಸೇರಿದಂತೆ ಚಿತ್ರರಂಗದ ಹಲವಾರು ಪ್ರಮುಖರು ಭಾಗವಹಿಸಿ ಚಿತ್ರತಂಡಕ್ಕೆ ಶುಭಕೋರಿದರು.
ತಮ್ಮ ಸಿನಿಮಾ ಕುರಿತು ಮಾತಿಗಿಳಿದ ನಿರ್ದೇಶಕ ಕೃಷ್ಣ, “ನನ್ನ ನಿರ್ದೇಶನದ ಐದನೇ ಚಿತ್ರವಿದು. “ಆಸ್ಕರ್”, “ಮಿಸ್ ಮಲ್ಲಿಗೆ”, “ಮೊನಿಕಾ ಈಸ್ ಮಿಸ್ಸಿಂಗ್” ಹಾಗೂ “ಮನಸಿನ ಮರೆಯಲಿ” ನಂತರ ಈ ಚಿತ್ರ ಮಾಡಿದ್ದೇನೆ. ಅಲ್ಲದೆ ಮೊದಲ ಸಲ ಪ್ರಮುಖ ಪಾತ್ರವೊಂದನ್ನು ಕೂಡ ಮಾಡಿದ್ದೇನೆ ಸೂಪರ್ ನ್ಯಾಚುರಲ್, ರೊಮ್ಯಾಂಟಿಕ್ ಥ್ರಿಲ್ಲರ್ ಹೀಗೆ ಎಲ್ಲಾ ಜಾನರ್ ಚಿತ್ರಗಳನ್ನು ಮಾಡಿದ ನಂತರ ಈ ಚಿತ್ರದ ಮೂಲಕ ಕ್ರೈಂ ಥ್ರಿಲ್ಲರ್ ಕಥೆಯೊಂದನ್ನು ಹೇಳ ಹೊರಟಿದ್ದೇನೆ. ಈ ಟೈಟಲ್ ಕೊಟ್ಟವರು ಚಿತ್ರದ ಮತ್ತೊಬ್ಬ ನಾಯಕ ಲೋಕೇಂದ್ರ ಸೂರ್ಯ. ಇಬ್ಬರು ಸ್ನೇಹಿತರ ಬಾಂಡಿಂಗ್, ಫ್ರೆಂಡ್‍ಷಿಪ್ ಮಧ್ಯೆ ನಡೆಯುವ ಹುಡುಗಾಟ, ತುಂಟಾಟ ಎಲ್ಲಾ ಇದೆ. ಇದರಲ್ಲಿ ಪೋಲೀಸ್, ವ್ಯಕ್ತಿಯ ಸೋಷಿಯಲ್ ಲೈಫ್ ಹೇಗೆಲ್ಲಾ ಇರುತ್ತೆ ಎಂಬುದನ್ನು ಹೇಳಲಾಗಿದೆ.

ಎಷ್ಟೋ ಸಲ ನಾವು ಕ್ರೈಂ ಮಾಡಿದ್ದರೂ ಅದರಿಂದ ಏನೂ ಆಗುವುದಿಲ್ಲ, ಕೆಲವೊಮ್ಮೆ ನಾವು ಏನೂ ಮಾಡದಿದ್ದರೂ ಅದು ನಮ್ಮನ್ನು ಸುತ್ತಿಕೊಂಡಿರುತ್ತೆ, ಇಲ್ಲೂ ಅಂಥದ್ದೇ ಕಥೆ ಇದೆ. ಲೋಕೇಂದ್ರ ಸೂರ್ಯ ಅವರ “ಅಟ್ಟಯ್ಯ ವರ್ಸಸ್‌ ಹಂದಿ ಕಾಯೋಳು” ಚಿತ್ರವನ್ನು ಚಿತ್ರೋತ್ಸವದಲ್ಲಿ ನೋಡಿ ಇಷ್ಟಪಟ್ಟೆ. ನಂತರ ಅವರನ್ನು ಭೇಟಿ ಮಾಡಿ ಮಾತಾಡಿದೆ. ಮೊದಲು ಬರೀ ಪಾತ್ರ ಮಾಡಲು ಬಂದವರು ನಂತರ ಎಲ್ಲದರಲ್ಲೂ ಇನ್‍ವಾಲ್ವ್ ಆಗಿಬಟ್ಟರು. ಅವರೇ ಚಿತ್ರಕಥೆ ಡೈಲಾಗ್ ಬರೆದರು. ಆಗಿನ್ನೂ ಪ್ರೊಡ್ಯೂಸರ್ ಇರಲಿಲ್ಲ, ಮೊದಲು ಇಬ್ಬರೇ ಸೇರಿ ಮಾಡೋಣ ಅಂದುಕೊಂಡಿದ್ದೆವು. ಆ ಸಮಯದಲ್ಲಿ ಸೆವೆನ್‍ರಾಜ್ ಸಿಕ್ಕರು, ನಾವೆಲ್ಲ ಇಲ್ಲಿ ಸೇರಿದ್ದೇವೆ ಎಂದರೆ ಅದಕ್ಕೆ ಕಾರಣ ಸೆವೆನ್‍ರಾಜ್. ನಾಯಕಿ ಪಾತ್ರಕ್ಕೆ ಹಲವರನ್ನು ಸಂಪರ್ಕಿಸಿದೆವು, ಯಾರೂ ಸರಿಯಾಗಲಿಲ್ಲ, ಸಿನಿಮಾ ಬಗ್ಗೆ ಅತೀವ ಪ್ರೀತಿ ಇಟ್ಟುಕೊಂಡಿರುವ ಬಹುಭಾಷಾ ನಟಿ ಗೌರಿ ನಾಯರ್ ನಮ್ಮ ನಾಯಕಿಯಾಗಿದ್ದು, ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಈ ಸಿನಿಮಾ ಬಳಿಕ ಅವರೀಗ ಬೇರೆ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಶ್ರದ್ದೆಯಿದ್ದರೆ ಮಾತ್ರ ಸಿನಿಮಾ ಮಾಡಬೇಕು ಎನ್ನುವದು ನನ್ನ ಪಾಲಿಸಿ, ನನ್ನ ಪಾತ್ರಕ್ಕೆ ಹೆಚ್ಚು ಮೇಕಪ್ ಬೇಕಿರಲಿಲ್ಲ, ಜೈಲಿಂದ ಹೊರಬಂದ ವ್ಯಕ್ತಿ ಹೇಗಿರ್ತಾನೋ ಆ ಥರದ ಪಾತ್ರ ನನ್ನದು ಎಂದರು ಅವರು.
ಬಹುತೇಕ ಕುಣಿಗಲ್, ತುಮಕೂರು, ಬೆಂಗಳೂರು ಸುತ್ತಮುತ್ತ ಚಿತ್ರದ ಶೂಟಿಂಗ್ ನಡೆಸಲಾಗಿದೆ. ಜನವರಿ ಅಂತ್ಯದಲ್ಲಿ ಅಥವಾ ಫೆಬ್ರವರಿಯಲ್ಲಿ ರಿಲೀಸ್ ಮಾಡುವ ಯೋಚನೆ ಅವರದು. ನಟ ಲೋಕೇಂದ್ರ ಸೂರ್ಯ, ಚಿತ್ರದಲ್ಲಿ ಗಡಾರಿ ಎನ್ನುವ ಪಾತ್ರ ಮಾಡಿದರೆ, ಆಸ್ಕರ್ ಕೃಷ್ಣ ಫ್ಯಾಷನ್ ರಾಜನಾಗಿ ಕಾಣಿಸಿಕೊಂಡಿದ್ದಾರೆ ಎಂದು ವಿವರಿಸಿದರು. ನಿರ್ಮಾಪಕ ಸೆವೆನ್ ರಾಜ್, “ಏಳು ನನ್ನ ಜೀವನದಲ್ಲಿ ಬಹುಮುಖ್ಯ ಪಾತ್ರ ನಿರ್ವಹಿಸಿದೆ, ನಾನು ಹುಟ್ಟಿದ್ದು ಏಳನೇ ತಾರೀಖು, ನನ್ನ ತಂದೆಗೆ ನಾನು ಏಳನೇ ಪುತ್ರ. ನನ್ನ ಹೆಸರು ಕೂಡ ಸೆವೆನ್‌ ರಾಜ್, ನಾನು ಚಿತ್ರರಂಗಕ್ಕೆ ಬರಬೇಕೆಂದು ಬಹಳ ಹಿಂದೆಯೇ ಪ್ರಯತ್ನಿಸಿದ್ದೆ, ಆಗಿರಲಿಲ್ಲ, ಈ ಚಿತ್ರದಲ್ಲಿ ಖಳನಾಯಕನಾಗಿ ಕಾಣಿಸಿಕೊಂಡಿದ್ದೇನೆ ಎಂದರು. ಕೌಂಡಿನ್ಯ ಅವರ ಕಾದಂಬರಿ ಆಧರಿಸಿ ಮಾಡಲಾಗಿರುವ ಈ ಚಿತ್ರದಲ್ಲಿ 2 ಹಾಡುಗಳಿದ್ದು, ಅನಂತ್ ಆರ್ಯನ್ ಅವರ ಸಂಗೀತವಿದೆ. ಗಗನ್ ಕುಮಾರ್ ಅವರ ಛಾಯಾಗ್ರಹಣ, ಮರಿಸ್ವಾಮಿ ಸಂಕಲನ, ಅಕುಲ್ ಅವರ ನೃತ್ಯನಿರ್ದೇಶನ ಹಾಗೂ ವೈಲೆಂಟ್‌ ಸಾಹಸ ನಿರ್ದೇಶನವಿದೆ.

error: Content is protected !!