ಈಗಲೂ ಸಿನಿಮಾ ರಂಗ ಎಚ್ಚರಿಕೆ ವಹಿಸಿದಂತಿಲ್ಲ. ಆತುರವೋ, ಅಚಾತುರ್ಯವೋ, ಆವೇಶವೋ, ಅಬ್ಬರವೋ…. ಶೂಟಿಂಗ್ ಸೆಟ್ನಲ್ಲಿ ಅವಘಡಗಳು ನಡೆಯುತ್ತಲೇ ಇವೆ. ಎಚ್ಚರ ವಹಿಸಬೇಕಾದ ಕಡೆ ನಿರ್ಲಕ್ಷ್ಯ ತೋರುತ್ತಿರುವುದರ ಪರಿಣಾಮ ಅನಾಹುತಗಳು ನಡೆದು, ಅಮಾಯಕರು ಬಲಿಯಾಗುತ್ತಿರುವುದು ದುರಂತ. ಮೊನ್ನೆಯಷ್ಟೇ ಆಗಿರುವ ʼಲವ್ ಯು ರಚ್ಚುʼ ಚಿತ್ರದ ದುರಂತ ಕೂಡ ಇದರಿಂದ ಹೊರತಲ್ಲ. ಸಾಹಸ ದೃಶ್ಯದ ಸನ್ನಿವೇಶದಲ್ಲಿ ಒಬ್ಬ ಫೈಟರ್ ಸಾವನ್ನಪ್ಪಿದ್ದರೆ, ಇನ್ನೊಬ್ಬ ತೀವ್ರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾನೆ. ಮತ್ತೊಂದೆಡೆ ನಿರ್ಮಾಪಕ ಕೆ.ಮಂಜು ನಿರ್ಮಾಣದ ʼರಾಣಾʼ ಚಿತ್ರದ ಚಿತ್ರೀಕರಣದ ವೇಳೆಯೂ ಒಂದು ಅವಘಡ ನಡೆದು ಹೋಗಿದೆ. ಒಬ್ಬ ಛಾಯಾಗ್ರಾಹಕ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದೆಲ್ಲ ಆಕಸ್ಮಿಕವಾಗಿಯೇ ನಡೆದು ಹೋದರೂ, ಚಿತ್ರೀಕರಣಕ್ಕೆ ವಹಿಸಬೇಕಾದ ಎಚ್ಚರ ತಪ್ಪಿದ್ದೇ ಇದಕ್ಕೆ ಕಾರಣ ಅನ್ನೋದು ಅಷ್ಟೇ ಸತ್ಯ.
ಯಾಕೆ ಹಾಗೆ ? ಹಾಗೆ ನೋಡಿದರೆ ಕನ್ನಡ ಚಿತ್ರೋದ್ಯಮಕ್ಕೆ ʼಮಾಸ್ತಿಗುಡಿʼ ದುರಂತ ದೊಡ್ಡ ಪಾಠ ಆಗಬೇಕಿತ್ತು. ಸಾಹಸ ನಿರ್ದೇಶಕ ತೋರಿದ ವೈಫ ಲ್ಯದ ಪರಿಣಾಮ ಇಬ್ಬರು ನಟರು ಕಣ್ಣೇದುರೆ ಸಾವು ಕಂಡರು. ಅಲ್ಲಿಂದ ಏನಾ ಯ್ತು ಅನ್ನೋದೆಲ್ಲ ಉದ್ಯಮಕ್ಕೆ ಗೊತ್ತೇ ಇದೆ. ಅಲ್ಲಿ ಸ್ಟಂಟ್ ಮಾಸ್ಟರ್ ತೋರಿದ ನಿರ್ಲಕ್ಷ್ಯಕ್ಕೆ ನಿರ್ಮಾಪಕರು, ನಿರ್ದೇಶಕರ ಜತೆಗೆ ಕಲವಿದರು ಕೂಡ ಅದರ ನೋವು ಅನುಭವಿಸಬೇಕಾಗಿ ಬಂತು. ಇಷ್ಟಾಗಿ ಯೂ ಚಿತ್ರೋದ್ಯಮ ಪಾಠ ಕಲಿತಿಲ್ಲ ಅಂದ್ರೆ ಏನನ್ನಬೇಕೋ ಗೊತ್ತಿಲ್ಲ. ಹಾಗಂತ ಯಾರೇನು ಇಲ್ಲಿ ಬೇಕಂತ ಮಾಡುತ್ತಿಲ್ಲ. ಯಾರಿಗೂ ಈ ಅವಘ ಡಗಳು ಬೇಕಾಗಿಲ್ಲ. ಸುಸೂತ್ರವಾಗಿ ನಡೆಯುವ ಚಿತ್ರೀಕರಣ ಗಳೆಲ್ಲಿ ಇನ್ನೇನು ತೊಂದರೆ ತಂದುಕೊಂಡು ವಿನಾಕರಣ ಸಂಕಷ್ಟಕ್ಕೆ ಸಿಲುಕಿಕೊಳ್ಳುವ ಪರಿಸ್ಥಿತಿ ಕೂಡ ಯಾರಿಗೂ ಬೇಕಿಲ್ಲ. ಇಷ್ಟಾಗಿಯೂ ಇಂತ ಹ ದುರಂತ ನಡೆದಾಗ ಯಾರನ್ನು ಹೊಣೆಗಾರರನ್ನಾಗಿ ಮಾಡ ಬೇಕು?
ʼಲವ್ ಯೂ ರಚ್ಚುʼ ದುರಂತದಲ್ಲೀಗ ಚಿತ್ರದ ನಿರ್ಮಾಪಕರು, ನಿರ್ದೇಶಕರು ಹಾಗೂ ಸಾಹಸ ನಿರ್ದೇಶಕರು ಹೊಣೆಗಾರರಾಗಿದ್ದಾರೆ. ಮಾಡಿದ ತಪ್ಪಿಗೆ ಅವರೇನೋ,ಮಡಿದ ವ್ಯಕ್ತಿಯ ಕುಟಂಬಕ್ಕೆ ಒಂದಷ್ಟು ಪರಿಹಾರ ನೀಡಬಹುದು, ಇಲ್ಲವೇ ಕಾನೂನಿನಡಿ ಒಂದಷ್ಟು ಶಿಕ್ಷಿಗೂ ಗುರಿಯಾಗಬಹುದು, ಆದರೆ ಯಾರದೋ ನಿರ್ಲಕ್ಷ್ಯ ವಿನಾಕಾರಣ ಸತ್ತು ಹೋದ ವ್ಯಕ್ತಿ ಮತ್ತೆ ಬರುತ್ತಾನೆಯೇ? ಸಿನಿಮಾ ಶೂಟಿಂಗ್ ಈಗ ತೀರಾ ಆತುರಕ್ಕೆ ನಡೆಯುತ್ತಿವೆ. ಎಷ್ಟೋ ನಿರ್ಮಾಪಕರು ನಿಗದಿ ಮಾಡಿಕೊಂಡ ಶೆಡ್ಯೂಲ್ ಗಿಂತ ಮುಂಚೆಯೇ ಶೂಟಿಂಗ್ ಮುಗಿಸಿ ಅಂತ ನಿರ್ದೇಶಕರ ಮೇಲೆ ಒತ್ತಡ ಹಾಕುವ ಕಾರಣಕ್ಕೆ ಹಗಲು-ರಾತ್ರಿ ಶೂಟಿಂಗ್ ನಡೆದ ಉದಾಹರಣೆಗಳು ಸಾಕಷ್ಟಿವೆ. ಈ ರೀತಿಯ ಅವಸರಗಳು ಕೂಡ ಶೂಟಿಂಗ್ ಸೆಟ್ ನಲ್ಲಿ ಅವಘಡ ಸಂಭವಿಸುವುದಕ್ಕೂ ಕಾರಣ.
ಶಾಕ್ ಆಯ್ತಾ…ಶಾಕ್ ಆಗ್ಲೆಬೇಕು ಅಂತ ತಾನೇ ಕಲರ್ಸ್ ಬ್ಯುಸಿನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್ ಇಂತಹದ್ದೊಂದು ಪ್ಲ್ಯಾನ್ ಮಾಡಿದ್ದು. ಸೈಲೆಂಟಾಗಿ ಮಾಡಿದ ಆ ಮೆಗಾ ಪ್ಲ್ಯಾನ್ ಈ ಮಟ್ಟಿಗೆ ಸುದ್ದಿಸದ್ದು ಮಾಡ್ತಿರುವುದು. ಯಸ್, ಪರಂ ಮಾಡಿದ ಮಾಸ್ಟರ್ ಪ್ಲ್ಯಾನ್ಗೆ ಕಲರ್ಸ್ ಕನ್ನಡದ ಪ್ರೇಕ್ಷಕರು, ಬಿಗ್ಬಾಸ್ ರಿಯಾಲಿಟಿ ಶೋನ ವೀಕ್ಷಕರು ಮಾತ್ರವಲ್ಲ ಸ್ವತಃ ದೊಡ್ಮನೆ ಅಖಾಡವೇ ಶಾಕ್ ಆಗಿದೆ. ಸೀಸನ್ 8ರ ಗ್ರ್ಯಾಂಡ್ ಫಿನಾಲೆ ಮುಗೀತು ಇನ್ನೇನು ನನ್ನ ಅರಮನೆಗೆ ಬೀಗ ಹಾಕ್ತಾರೆ ಅಂತ ಬೇಸರದಲ್ಲಿದ್ದ ಬಿಗ್ಬಾಸ್ ಅರಮನೆ ಈಗ ಕೇಕೆ ಹಾಕಿಕೊಂಡು ಕುಣಿದಾಡ್ತಿದೆ. ಇಡೀ ಕರ್ನಾಟಕದ ಕಿರುತೆರೆಯ ಪ್ರೇಕ್ಷಕ ಮಹಾಷಯರು ಮತ್ತೆ ತನ್ನತ್ತ ತಿರುತಿರುಗಿ ನೋಡುತ್ತಾರಲ್ಲ ಅಷ್ಟು ಸಾಕು ಎನ್ನುತ್ತಿದೆ ಬಿಗ್ಬಾಸ್ ಮನೆ.
ಪ್ರತಿದಿನ ಒಂಭತ್ತು ಗಂಟೆ ಆದರೆ ಸಾಕು ಬಿಗ್ಬಾಸ್ ಬಿಗ್ಬಾಸ್' ಎನ್ನುವ ಜಿಂಗಲ್ ಮನೆಯ ಪಡಸಾಲೆಯಲ್ಲಿ ರಿಂಗಣಿಸುತ್ತಿತ್ತು. ಮದುವಣಗಿತ್ತಿಯಂತೆ ಸಿಂಗಾರಗೊಂಡ ಅರಮನೆಯನ್ನು ಕಿರುತೆರೆ ಪ್ರೇಕ್ಷಕರು ಕಣ್ಣರಳಿಸಿ ನೋಡ್ತಿದ್ದರು. ಸ್ಪರ್ಧಿಗಳ ನೀಡುವ ಮನರಂಜನೆಗೆ ಮನಸ್ಸು ಒಡ್ಡುತ್ತಿದ್ದರು. ವೀಕೆಂಡ್ನಲ್ಲಂತೂ ಬಿಗ್ಬಾಸ್ ಹವಾ ಜೋರಾಗಿರುತ್ತಿತ್ತು. ಅದಕ್ಕೆ ಕಾರಣ ಆಲ್ ಇಂಡಿಯಾ ಕಟೌಟ್ ಕಿಚ್ಚ ಎನ್ನುವುದು ಇಡೀ ಕರ್ನಾಟಕಕ್ಕೆ ಗೊತ್ತು. ಹೀಗೆ, ವೀಕೆಂಡ್ನಲ್ಲಿ ಹುಚ್ಚೆಬ್ಬಿಸುತ್ತಿದ್ದ ಬಿಗ್ಬಾಸ್ ಶೋ ಮುಗೀತು, ಮನರಂಜನೆಗೆ ಕೊರತೆಯಾಯ್ತು ಎನ್ನುವಷ್ಟರಲ್ಲಿ ಕಲರ್ಸ್ ಕನ್ನಡದ ಬ್ಯುಸಿನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್ ಅವರು ಪ್ಲ್ಯಾನ್ ಮಾಡಿದ್ದಾರೆ. 100 ದಿನದ ಬದಲಾಗಿ ಆರು ದಿನದಬಿಗ್ಬಾಸ್ ಫ್ಯಾಮಿಲಿ’ ಕಿರುಸೀಸನ್ ಆರಂಭಿಸಿದ್ದಾರೆ. ಕಲರ್ಸ್ ಕುಟುಂಬದ ಹದಿನೈದು ಮಂದಿ ಕಲಾವಿದರು ದೊಡ್ಮನೆ ಪ್ರವೇಶಿಸಿದ್ದಾರೆ. ಈಗಾಗಲೇ ಇದರ ಪ್ರೋಮೋ ಕೂಡ ರಿಲೀಸ್ ಆಗಿದ್ದು ಕೂತೂಹಲ ಗರಿಗೆದರುವಂತೆ ಮಾಡಿದೆ.
ಕಲರ್ಸ್ ಕುಟುಂಬದ ಸೂಪರ್ ಸ್ಟಾರ್ಸ್ ಗಳನ್ನು ನೋಡಿ ಬಿಗ್ಬಾಸ್ ಮನೆ ಖುಷಿಯಾಗಿದೆ, ದೊಡ್ಮನೆ ಅಂಗಳಕ್ಕೆ ಕಾಲಿಡುವ ಸೌಭಾಗ್ಯ ಸಿಕ್ಕವರು ಸಂತೋಷದಲ್ಲಿದ್ದಾರೆ. ಬಿಗ್ಬಾಸ್ ಸೀಸನ್ ೮ ಅದ್ದೂರಿಯಾಗಿ ಅಂತ್ಯಗೊಂಡ ಬೆನ್ನಲ್ಲೇ `ಬಿಗ್ಬಾಸ್ ಫ್ಯಾಮಿಲಿ’ ಶೋ ಆರಂಭಗೊಂಡಿರುವುದನ್ನು ಕಂಡು ಟಿವಿ ವೀಕ್ಷಕರು ಕೂಡ ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೇ, ಆರು ದಿನದ ಬಿಗ್ಬಾಸ್ ಫ್ಯಾಮಿಲಿ ಕಾರ್ಯಕ್ರಮ ಹೇಗಿರಬಹುದು ಅಂತ ಲೆಕ್ಕಚ್ಚಾರ ಶುರುವಿಟ್ಟುಕೊಂಡಿದ್ದಾರೆ. ದೊಡ್ಮನೆ ಅಖಾಡಕ್ಕೆ ಗ್ರ್ಯಾಂಡ್ ಎಂಟ್ರಿಕೊಟ್ಟಿರುವ ಕಿರುತೆರೆ ಸೂಪರ್ಸ್ಟರ್ಸ್ಗಳಿಗೆ ಉಘೇ ಉಘೇ ಎನ್ನುತ್ತಿರುವ ವೀಕ್ಷಕ ಮಹಾಪ್ರಭುಗಳು ಹದಿನೈದು ಮಂದಿ ಕಂಟೆಸ್ಟೆಂಟ್ಗೆ ಗುಡ್ ಲಕ್ ಹೇಳ್ತಿದ್ದಾರೆ.
ಬಿಗ್ಬಾಸ್ ಸೀಸನ್ 2ರ ವಿನ್ನರ್ ಅಕುಲ್ ಬಾಲಾಜಿ ಮತ್ತೆ ದೊಡ್ಮನೆಗೆ ಗ್ರ್ಯಾಂಡ್ ಎಂಟ್ರಿಕೊಟ್ಟಿದ್ದಾರೆ. ಕನ್ನಡತಿ ಧಾರಾವಾಹಿ ಖ್ಯಾತಿಯ ಕಿರಣ್ ರಾಜ್, ಗಿಣಿರಾಮ ಸೀರಿಯಲ್ ಕೋಸ್ಟಾರ್ಸ್ ಗೀತಾ ಸೀರಿಯಲ್ ಜೋಡಿ, ನನ್ನರಸಿ ರಾಧೆ ಧಾರಾವಾಹಿಯ ಅಗಸ್ತ್ಯ ಹಾಗೂ ಇಂಚರ, ಪದ್ಮಾವತಿಯ ಸೀರಿಯಲ್ ಹೀರೋ, ಮಂಗಳಗೌರಿ ಸೀರಿಯಲ್ನ ಕಥಾನಾಯಕ ರಾಜೀವ್, ಮಜಾಭಾರತದ ಸುಂದರಿ ಸೇರಿದಂತೆ ಈಗಾಗಲೇ ಬಿಗ್ಬಾಸ್ ಅಂಗಳಕ್ಕೆ ಬಂದುಹೋಗಿದ್ದ ನಿರಂಜನ್ ದೇಶ್ಪಾಂಡೆ ಕೂಡ ಈಗ ಬಿಗ್ಬಾಸ್ ಫ್ಯಾಮಿಲಿ'ಗೆ ಜೊತೆಯಾಗಿದ್ದಾರೆ. ಒಟ್ಟು ಹದಿನೈದು ಜನ ಕಲರ್ಸ್ ಕನ್ನಡದ ಸ್ಪರ್ಧಿಗಳು ದೊಡ್ಮನೆ ಅಖಾಡಕ್ಕೆ ಜಿಗಿದಿದ್ದಾರೆ.
ಒಂದು ವಾರದ ಮಟ್ಟಿಗೆ ನಡೆಯುವ ಶೋಗೆ ರಂಗುತುಂಬಿ ಕರುನಾಡ ಜನರನ್ನು ಮನರಂಜಿಸೋಕೆ ಮನಸ್ಸು ಮಾಡಿದ್ದಾರೆ. ವಿವಿಧ ರೀತಿಯ ಟಾಸ್ಕ್ ಗಳಿರಲಿದ್ದು, ಹದಿನೈದು ಜನ ಸ್ಪರ್ಧಿಗಳ ನಡುವೆ ಪೈಪೋಟಿ ನಡೆಯಲಿದೆ. ಗೆದ್ದವರಿಗೆಬಿಗ್ಬಾಸ್ ಫ್ಯಾಮಿಲಿ ಅವಾರ್ಡ್’ ಸಿಗಲಿದೆ. ಶನಿವಾರ ಹಾಗೂ ಭಾನುವಾರ ಸಂಜೆ ೪ಗಂಟೆಗೆ ಕಾರ್ಯಕ್ರಮ ಪ್ರಸಾರ ಆಗಲಿದೆ. ವೀಕೆಂಡ್ನಲ್ಲಿ ಕಾರ್ಯಕ್ರಮ ಆಯೋಜನೆಗೊಂಡಿರುವುದರಿಂದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರೇ ಈ ಕಾರ್ಯಕ್ರಮ ನಡೆಸಿಕೊಡಲಿದ್ದಾರೆನ್ನುವ ಕೂತೂಹಲ ಮನೆಮಾಡಿದೆ. ಆ ಕೌತುಕಕ್ಕೆ ಹಾಗೂ `ಬಿಗ್ಬಾಸ್ ಫ್ಯಾಮಿಲಿ ಅವಾರ್ಡ್’ ವಿನ್ನರ್ ಯಾರು ಎನ್ನುವ ಪ್ರಶ್ನೆಗೆ ವಾರಾಂತ್ಯದಲ್ಲಿ ಉತ್ತರ ಸಿಗಲಿದೆ.
ನಿರ್ದೇಶಕ ಬರಗೂರು ರಾಮಚಂದ್ರಪ್ಪ ನಿರ್ದೇಶನದ “ಮೂಕನಾಯಕ” ಸಿನಿಮಾಗೆ ಮತ್ತೊಂದು ಪ್ರಶಸ್ತಿ ಲಭಿಸಿದೆ. ನೋಯ್ಡಾದ ಅಂತರರಾಷ್ಟ್ರೀಯ ಸಿನಿಮಾ ಸ್ಪರ್ಧೆಯಲ್ಲಿ ದಶಕದ ಅತ್ಯುತ್ತಮ ಚಿತ್ರ ಪ್ರಶಸ್ತಿ ಲಭಿಸಿದೆ. ಹೌದು, ಕಳೆದ 2017 ರಲ್ಲಿ ಈ ಚಿತ್ರವನ್ನು ಮಾಡಲಾಗಿತ್ತು. ಬಾಲರಾಜ್ ಅವರ ನಿರ್ಮಾಣದ ಈ ಚಿತ್ರವನ್ನು ಬರಗೂರು ರಾಮಚಂದ್ರಪ್ಪ ಕಥೆ, ಚಿತ್ರಕಥೆ, ಸಂಭಾಷಣೆಯೊಂದಿಗೆ ನಿರ್ದೇಶಿಸಿದ್ದರು. ನೋಯ್ಡಾದ ಸಂಸ್ಥೆಯೊಂದು ಇನ್ಕ್ರೆಡಿಬಲ್ ಸಿನಿ ಅವಾರ್ಡ್ಸ್ಗಾಗಿ ಹತ್ತು ವರ್ಷಗಳ ಒಳಗೆ ನಿರ್ಮಾಣಗೊಂಡ ವಿಶ್ವದ ಎಲ್ಲಾ ಭಾಷೆಯ ಚಿತ್ರಗಳನ್ನೂ ಆಹ್ವಾನಿಸಿತ್ತು. “ಮೂಕ ನಾಯಕ” ಚಿತ್ರವನ್ನೂ ಸ್ಪರ್ಧೆಗೆ ಕಳಿಸಲಾಗಿತ್ತು. ಪ್ರವೇಶ ಪಡೆದ ಚಿತ್ರಗಳಲ್ಲಿ ಆಯ್ದ ಚಿತ್ರಗಳನ್ನು ವಿವಿಧ ವಿಭಾಗಗಳ ಸ್ಪರ್ಧೆಗೆ ನಾಮ ನಿರ್ದೇಶನ ಮಾಡಲಾಗಿತ್ತು. ಹೀಗೆ ನಾಮ ನಿರ್ದೇಶನಗೊಂಡ “ಮೂಕ ನಾಯಕ” ಚಿತ್ರವು ವಿಶ್ವದ ವಿವಿಧ ಭಾಷೆಗಳ ನಾಮ ನಿರ್ದೇಶಿತ ಚಿತ್ರಗಳೊಂದಿಗೆ ಸ್ಪರ್ಧಿಸಿ, ದಶಕದ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಭಾಜವಾಗಿದೆ.
ಮಾತು ಬಾರದ ಮೂಕ ಚಿತ್ರಕಲಾವಿದರ ಆಶಯ ಮತ್ತು ಅಭಿವ್ಯಕ್ತಿ ವಿನ್ಯಾಸವನ್ನು ಕೇಂದ್ರವಾಗಿಟ್ಟುಕೊಂಡಿರುವ ಈ ಚಿತ್ರವು ಚಿತ್ರಕಲೆಯ ವಿವಿಧ ಸಾಧ್ಯತೆಗಳನ್ನು ಸಾದರಪಡಿಸಿದೆ. ಸಮುದಾಯದತ್ತ ಸಿನಿಮಾ ಎಂಬ ಪರಿಕಲ್ಪನೆಯಡಿಯಲಿ ಚಿತ್ರಯಾತ್ರೆ ನಡೆಸಿ, ಈಗಾಗಲೇ ಅನೇಕ ಊರುಗಳಲ್ಲಿ ಈ ಚಿತ್ರ ಪ್ರದರ್ಶನ ಮಾಡಲಾಗಿದೆ. ಈ ಹಿಂದೆ ನಡೆದ ಬೆಂಗಳೂರು ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲೂ ಈ ಚಿತ್ರ ಪ್ರದರ್ಶನಕ್ಕೆ ಆಯ್ಕೆಯಾಗಿತ್ತು.
ಮೂಕ ಚಿತ್ರ ಕಲಾವಿದನ ಪಾತ್ರದಲ್ಲಿ ಗೋವಿಂದ್ ನಟಿಸಿದ್ದು, ಸೋದರಿ ಪಾತ್ರದಲ್ಲಿ “ಸ್ಪರ್ಶ” ರೇಖಾ ನಟಿಸಿದ್ದರು. ಅವರ ಪಾತ್ರಕ್ಕೆ ರಾಜ್ಯ ಸರ್ಕಾರದ ಉತ್ತಮ ಪೋಷಕ ನಟಿ ಪ್ರಶಸ್ತಿಯೂ ಸಿಕ್ಕಿತ್ತು. ಚಿತ್ರದಲ್ಲಿ ಸುಂದರರಾಜ್, ಯತಿರಾಜ್, ಶೀತಲ್ ಶೆಟ್ಟಿ, ವೆಂಕಟರಾಜ್ ಇತರರು ಇದ್ದಾರೆ. ನಾಗರಾಜ ಆದವಾನಿ ಛಾಯಾಗ್ರಹಣವಿದೆ. ಸುರೇಶ್ ಅರಸು ಸಂಕಲನವಿದೆ. ಶಮಿತಾ ಮಲ್ನಾಡ್ ಸಂಗೀತವಿದೆ.
ಖ್ಯಾತ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರು ನಡೆಸಿಕೊಡುತ್ತಿದ್ದ ಜನಪ್ರಿಯ ಕಾರ್ಯಕ್ರಮ “ಎದೆ ತುಂಬಿ ಹಾಡುವೆನು” ಈಗ ಮತ್ತೆ ಅವರ ನೆನಪಲ್ಲಿ ಶುರುವಾಗುತ್ತಿದೆ. ಈ ಕುರಿತಂತೆ ಕಲರ್ಸ್ ಕನ್ನಡದ ಮುಖ್ಯಸ್ಥ ಪರಮೇಶ್ವರ ಗುಂಡ್ಕಲ್ ಒಂದಷ್ಟು ಮಾಹಿತಿ ನೀಡಿದ್ದಾರೆ. “ನಾನು ಮೂರು ವರ್ಷಗಳ ಹಿಂದೆ ಚೆನ್ನೈ ನಲ್ಲಿ ಎಸ್. ಪಿ. ಬಿ. ಅವರನ್ನು ಭೇಟಿ ಮಾಡಿ, “ಎದೆ ತುಂಬಿ ಹಾಡುವೆನು” ಕಾರ್ಯಕ್ರಮವನ್ನು ಪುನಃ ಆರಂಭಿಸೋಣ ಎಂದು ಕೇಳಿದ್ದೆ. ಆಗ ಅವರು ನನ್ನ ಶೆಡ್ಯುಲ್ ನೋಡಿ ತಿಳಿಸುತ್ತೀನಿ ಅಂದರು. ಆನಂತರ ಅವರಿಂದ ನನಗೊಂದು ಕಾಗದ ಬಂತು. ನನ್ನ ಬೇರೆ ಕಾರ್ಯಕ್ರಮಗಳು ಈಗಾಗಲೇ ನಿಗದಿಯಾಗಿರುವುದರಿಂದ 2019 ರಲ್ಲಿ “ಎದೆ ತುಂಬಿ ಹಾಡುವೆನು” ಕಾರ್ಯಕ್ರಮ ಆರಂಭಿಸೋಣ ಅಂತ ಬರೆದಿದ್ದರು.
ನಂತರ ಕಾರ್ಯಕ್ರಮದ ರೂಪುರೇಷೆ ಸಿದ್ದಗೊಂಡು, ಆರಂಭ ಮಾಡೋಣ ಅಂದುಕೊಳ್ಳುತ್ತಿರುವಾಗ “ಕೊರೊನಾ” ಶುರುವಾಯಿತು. ನಂತರದ ದಿನಗಳಲ್ಲಿ ಎಸ್ ಪಿ ಬಿ ನಮ್ಮಿಂದ ದೂರವಾದರು. ಈಗ ಅವರ ನೆನಪಲ್ಲಿ ಈ ಕಾರ್ಯಕ್ರಮ ಇದೇ ಆಗಸ್ಟ್ 14 ರಿಂದ ಆರಂಭವಾಗಲಿದೆ. ರಾಜೇಶ್ ಕೃಷ್ಣನ್, ವಿ.ಹರಿಕೃಷ್ಣ ಹಾಗೂ ರಘು ದೀಕ್ಷಿತ್ ಈ ಕಾರ್ಯಕ್ರಮದ ತೀರ್ಪುಗಾರರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ವಿಶೇಷ ತೀರ್ಪುಗಾರರಾಗಿ ಎಸ್ ಪಿ ಬಿ ಅವರ ಪುತ್ರ ಎಸ್ ಪಿ ಚರಣ್ ಇರಲಿದ್ದಾರೆ. ಈಗಾಗಲೇ ಆಡಿಷನ್ ಮೂಲಕ ಹದಿನಾರರಿಂದ, ಹದಿನೆಂಟು ಗಾಯಕರನ್ನು ಆಯ್ಕೆ ಮಾಡಲಾಗಿದೆ ಎಂದು ಮಾಹಿತಿ ಕೊಟ್ಟರು ಪರಮೇಶ್ವರ ಗುಂಡ್ಕಲ್.
ತೀರ್ಪುಗಾರರಾಗಿರುವ ರಘು ದೀಕ್ಷಿತ್, “ನಾನು ಚಿಕ್ಕವನಾಗಿದಾಗ ನಮ್ಮಮ್ಮ ರೆಡಿಯೋ ಹಾಕಿದ ತಕ್ಷಣ ಎಸ್ ಪಿ ಬಿ ಅವರ ಹಾಡು ಬರುತಿತ್ತು. ಆಗಿನಿಂದ ಅವರ ಕಂಠಕ್ಕೆ ಅಭಿಮಾನಿ ನಾನು. ಅಂತಹ ಮಹಾನ್ ಗಾಯಕ ನಡೆಸುಕೊಡುತ್ತಿದ್ದ ಕಾರ್ಯಕ್ರಮಕ್ಕೆ ನೀವು ತೀರ್ಪುಗಾರರಾಗಬೇಕು ಎಂದು ಪರಮೇಶ್ವರ್ ಅವರು ಹೇಳಿದಾಗ ನನ್ನ ಆನಂದಕ್ಕೆ ಪಾರವೇ ಇರಲಿಲ್ಲ ಎಂಬುದು ರಘು ದೀಕ್ಷಿತ್ ಮಾತು.
ಎಸ್ ಪಿ ಬಿ ಅವರ ಮಾನಸ ಪುತ್ರರೆಂದೇ ಖ್ಯಾತರಾಗಿರುವ ರಾಜೇಶ್ ಕೃಷ್ಣನ್, “ಈ ಕಾರ್ಯಕ್ರಮವನ್ನು ಎಸ್ ಪಿ ಬಿ ಅವರೆ ನಮ್ಮಲ್ಲಿ ನಿಂತು ನಡೆಸಿಕೊಡುತ್ತಾರೆ. ಅವರಿಂದ ನಾವು ತಿಳಿದುಕೊಂಡದ್ದನ್ನು, ಈಗಿನ ಗಾಯಕರಿಗೆ ತಿಳಿಸುವ ಪ್ರಯತ್ನ ಮಾಡುತ್ತಿದ್ದೇವೆ. ನಾನು ಹಂಸಲೇಖ ಅವರ ಬಳಿ ಟ್ರ್ಯಾಕ್ ಹಾಡುವ ಕಾಲದಲ್ಲಿ ನಾನು ಎಸ್ ಪಿ ಬಿ ಅವರು ಇಲ್ಲಿಗೆ ಬಂದಾಗ ತುಂಬಾ ಹತ್ತಿರದಿಂದ ನೋಡಿದವನು ನಾನು ಅವರು ನೀನು ಏಕೆ ನನ್ನ ಹಾಗೆ ಹಾಡುತ್ತೀಯಾ? ಎಂದು ಕೇಳಿದ್ದು ಉಂಟು.. ಅವರು ನನ್ನ ಮೇಲಿಟ್ಟಿದ ಪ್ರೀತಿ ಅಪಾರ. ಹೀಗೆ ಎಸ್ ಪಿ ಬಿ ಅವರೊಂದಿಗಿನ ಒಡನಾಟವನ್ನು ರಾಜೇಶ್ ಕೃಷ್ಣನ್ ನೆನಪಿಸಿಕೊಂಡರು.
ಕೆಲವು ವರ್ಷಗಳ ಹಿಂದೆ ಭಾನುವಾರ ರಾಮಾಯಣ ಹಾಗೂ ಮಹಾಭಾರತ ಎಂಬ ಎರಡು ಮಹಾನ್ ಧಾರಾವಾಹಿಗಳು ದೂರದರ್ಶನದಲ್ಲಿ ಬರುತ್ತಿದ್ದವು. ಕೋಟ್ಯಾಂತರ ಜನ ಅದನ್ನು ವೀಕ್ಷಿಸುತ್ತಿದ್ದರು. ಆನಂತರ ಅಷ್ಟೇ ಜನಪ್ರಿಯವಾಗಿದ್ದು “ಎದೆ ತುಂಬಿ ಹಾಡುವೆನು”. ನಾನು ಈಗ ಅವರು ನಡೆಸಿಕೊಡುತ್ತಿದ್ದ ಕಾರ್ಯಕ್ರಮದ ವಿಟಿ ನೋಡಿದಾಗ ಭಯವಾಗುತ್ತಿದೆ. ಅಲ್ಲಿ ಬರುವ ಹೊಸ ಗಾಯಕರಿಗಿಂತ ನಾವು ತಿಳಿದುಕೊಳ್ಳುವುದು ಸಾಕಷ್ಟಿದೆ. ತೀರ್ಪುಗಾರರಾಗಿ ಎಸ್ ಪಿ ಬಿ ಅವರು ಕಾರ್ಯಕ್ರಮ ನಡೆಸಿಕೊಡುತ್ತಿದ್ದ ರೀತಿ ಅನುಕರಣೀಯ. ಅವರ ಹೆಸರಿಗೆ ತೊಂದರೆಯಾಗದಂತೆ ಕಾರ್ಯಕ್ರಮ ನಡೆಸಿಕೊಡುವುದು ನಮ್ಮ ಕರ್ತವ್ಯ ಎಂದರು ವಿ.ಹರಿಕೃಷ್ಣ.
ಅಪ್ಪನ ನೇತೃತ್ವದಲ್ಲಿ ಮೂಡಿಬರುತ್ತಿದ್ದ, ” ಎದೆ ತುಂಬಿ ಹಾಡುವೆನು” ಕಾರ್ಯಕ್ರಮವನ್ನು ಮತ್ತೆ ಆರಂಭಿಸುತ್ತಿರುವುದಕ್ಕೆ. ಕಲರ್ಸ್ ವಾಹಿನಿಗೆ ಧನ್ಯವಾದ ಎಂದರು ಎಸ್ ಪಿ ಬಿ ಪುತ್ರ ಎಸ್ ಪಿ ಚರಣ್. ರಾಮೋಜಿರಾವ್ ಅವರು ತೆಲುಗಿನಲ್ಲಿ “ಪಾಡುತ ತಿಯಗ” ಎಂಬ ಕಾರ್ಯಕ್ರಮ ನಡೆಸುತ್ತಿದ್ದರು. ಆನಂತರ ಅಪ್ಪ ಈ ಕಾರ್ಯಕ್ರಮವನ್ನು ಕನ್ನಡದಲ್ಲಿ “ಎದೆ ತುಂಬಿ ಹಾಡುವೆನು” ಎಂಬ ಶೀರ್ಷಿಕೆಯಿಂದ ಆರಂಭಿಸಿದರು. ಕಾರ್ಯಕ್ರಮ ಅತ್ಯಂತ ಜನಪ್ರಿಯವೂ ಆಯಿತು. ಈ ಟಿವಿ ಅವರು ಈ ಕಾರ್ಯಕ್ರಮ ನಿಲಿಸಿದಾಗ ಅಪ್ಪನಿಗೆ ಬೇಸರವಾಗಿದ್ದು ಉಂಟು. ತೆಲುಗು, ಕನ್ನಡದಲ್ಲಿ ಜನಪ್ರಿಯವಾಗಿದ್ದ ಈ ಕಾರ್ಯಕ್ರಮವನ್ನು ತಮಿಳಿನಲ್ಲಿ ಮಾಡಲಿಲ್ಲ ಎಂಬ ಕೊರಗು ಅಪ್ಪನಲ್ಲಿತ್ತು ಎಂದರು ಚರಣ್.
ನಮ್ಮ ಬಾಲ್ಯದಲ್ಲಿ ಅಪ್ಪನೊಂದಿಗೆ ಹೆಚ್ಚು ಸಮಯ ಕಳೆಯಲಿಲ್ಲ.. ಅಪ್ಪ ಯಾವಗಲೂ ಬ್ಯುಸಿ ಇರುತ್ತಿದ್ದರು. ನನ್ನ ಕಿರಿಯ ಸಹೋದರನಂತಿರುವ ರಾಜೇಶ್ ಕೃಷ್ಣನ್ ಅಪ್ಪನೊಂದಿಗೆ ಸಾಕಷ್ಟು ಸಮಯ ಕಳೆದಿದ್ದಾರೆ ಎಂದು ಚರಣ್ ಹಿಂದಿನ ದಿನಗಳನ್ನು ಮೆಲಕು ಹಾಕಿದರು.
ಕೆಜಿಎಫ್ ಸುಂದರಿ ಅರೆಸ್ಟ್ ಅಂದಾಕ್ಷಣ ಅರೆಕ್ಷಣ ಶಾಕ್ ಆಗೋದು ಸತ್ಯ. ಚಿನ್ನದ ಸಾಮ್ರಾಜ್ಯದ ಯುವರಾಣಿ ಕಣ್ಮುಂದೆ ಬರೋದು ಖಚಿತ. ಆದರೆ ಇದು ಕಥಾನಾಯಕಿಯ ಕಥೆಯಲ್ಲ ಸೆಲ್ಫ್ ಮೇಡ್ ಷೆಹಜಾದ್ ಜೊತೆ ಕುಣಿದು ಕುಪ್ಪಳಿಸಿದ ಸೆಕ್ಸಿ ಗರ್ಲ್ ಸ್ಟೋರಿ.
ಯಾರಪ್ಪ ಆ ಮಾದಕ ಮದನಾರಿ ಅಂತೀರಾ? ಮತ್ಯಾರು ಅಲ್ಲಾರ್ರೀ ಕೆಜಿಎಫ್ ಚಾಪ್ಟರ್ 1 ಹಿಂದಿ ಅವತರಣಿಕೆಯ ‘ಗಲಿ ಗಲಿ ಮೇ’ ಸ್ಪೆಷಲ್ ಸಾಂಗ್ ನಲ್ಲಿ ರಾಕಿಭಾಯ್ ಜೊತೆ ಲೆಗ್ ಶೇಕ್ ಮಾಡುತ್ತಾ, ಕಣ್ಣಲ್ಲೇ ಕಥಕ್ಕಳಿ ಆಡಿದ ಮನಮೋಹಕ ಬೆಡಗಿ ಮೌನಿರಾಯ್.
ಸರ್ರೀ ಎಲ್ಲಾ ಓಕೆ, ಕೆಜಿಎಫ್ ಸುಂದರಿ ಅರೆಸ್ಟ್ ಅಂದರಲ್ಲ ಅದರ ಬಗ್ಗೆ ಕ್ಲ್ಯಾರಿಟಿ ಕೊಡಿ ಎನ್ನುವವರಿಗೆ ಉತ್ತರ ಕೊಡ್ಲೆಬೇಕು ಕೊಡ್ತೀವಿ. ಹೆಡ್ಡಿಂಗ್ ನಲ್ಲೇ ಕೆಜಿಎಫ್ ಸುಂದರಿನಾ ಅರೆಸ್ಟ್ ಮಾಡಿದ್ದು ಪೊಲೀಸರಲ್ಲ ಅಂತ ಹೇಳಿಬಿಟ್ಟಿದ್ದೇವೆ.ಹಾಗಾದ್ರೆ ಮತ್ತಿನ್ಯಾರು ಎನ್ನುವ ಕೌತುಕದ ಪ್ರಶ್ನೆಗೆ ಉತ್ತರ ಪಡ್ಡೆಹೈಕ್ಳು ಹಾಗೂ ಫ್ಯಾನ್ ಫಾಲೋಯರ್ಸ್.
ಬಿಟೌನ್ ಹಾಟ್ ಬ್ಯೂಟಿ, ಸ್ಟ್ರಾಬೆರಿಯಷ್ಟೇ ಸೊಗಸಾದ ಸ್ವೀಟಿ ಮೌನಿರಾಯ್ ಗೆ ಕೋಟಿಗಟ್ಟಲೇ ಫ್ಯಾನ್ಸ್ ಇದ್ದಾರೆ. ಮಾದಕ ಮೈಮಾಟದಿಂದ ಮಾತ್ರವಲ್ಲ ಮಜ್ಬೂತ್ ಅಭಿನಯದ ಮೂಲಕವೂ ಮೌನಿ ಚಿತ್ರ ಪ್ರೇಮಿಗಳ ಹೃದಯ ಗೆದ್ದಿದ್ದಾರೆ. ಇತ್ತೀಚೆಗೆ ಟೂ ಪೀಸ್ ಹಾಕಿಕೊಂಡು, ಫೋಟೋಶೂಟ್ ಮಾಡಿಸೋಣವೆಂದು ಸ್ವಿಮ್ಮಿಂಗ್ ಫುಲ್ ಗಿಳಿದ ಮೌನಿ ಫ್ಯಾನ್ಸ್ ಫಾಲೋಯರ್ಸ್ ಹಾರ್ಟ್ನ ಬ್ರೇಕ್ ಮಾಡಿದರು. ಇದರ ಬೆನ್ನಲ್ಲೇ ಪಡ್ಡೆಹೈಕ್ಳು ಮೌನಿಯನ್ನ ಕೆಂಪಾದ ಹೃದಯದ ಲಾಕಪ್ ನಲ್ಲಿ ಬಂಧಿಸಿಬಿಟ್ಟರು. ಅರೆಸ್ಟ್ ಆದ ಮೌನಿ ಕೇಕೆಹಾಕಿದರು.
ನಟ- ನಟಿಯರನ್ನ ಅಭಿಮಾನಿ ದೇವರುಗಳು ತಮ್ಮ ಹೃದಯ ಸಿಂಹಾಸನದಲ್ಲಿ ಬಂಧಿಸಿಕೊಂಡು ಪೂಜೆ ಮಾಡ್ತಾರೆ. ಅದರಂತೇ, ಮೌನಿರಾಯ್ ನ ಕೂಡ ಅವರ ಫ್ಯಾನ್ಸ್ ಫಾಲೋಯರ್ಸ್ ಅಭಿಮಾನಿಸುತ್ತಾರೆ. ಈ ಮಧ್ಯೆ ಪಡ್ಡೆಹೈಕ್ಳು ಆಗಾಗ ಮಾದಕ ನಟಿಯರನ್ನ ಅರೆಸ್ಟ್ ಮಾಡುತ್ತಲೇ ಇರುತ್ತಾರೆ. ವೆದರ್ ಕೈಕೊಟ್ಟಾಗ ಹಾಗೂ ಚಳಿಗಾಲ ಬಂದಾಗ ಸೆಕ್ಸಿಬೊಂಬೆಗಳನ್ನು ಕಣ್ತುಂಬಿಕೊಂಡು ಮೈಮನಸ್ಸನ್ನು ತಂಪುಮಾಡಿಕೊಳ್ತಾರೆ. ಹೀಗ್ ಮಾಡೋದು ಪಡ್ಡೆಹೈಕ್ಳ ತಪ್ಪಲ್ಲ ಸೃಷ್ಠಿಕರ್ತ ಬ್ರಹ್ಮನದ್ದೇ ತಪ್ಪು ತಪ್ಪು ತಪ್ಪು
ಸರ್ಕಾರದ ಹಣ ದುರುಪಯೋಗದ ಆರೋಪದಲ್ಲಿ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್ ವಿರುದ್ಧ ನಿರ್ಮಾಪಕ ಹಾಗೂ ನಿರ್ದೇಶಕ ಮದನ್ ಪಟೇಲ್ ಅವರು ಭ್ರಷ್ಟಚಾರ ನಿಗ್ರಹ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರಿಗೆ ದೂರು ಸಲ್ಲಿಸಿದ್ದಾರೆ. ಕರ್ನಾಟಕ ಚಲನಚಿತ್ರ ಅಕಾಡೆಮಿ ನಡೆಸುವ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಿಗೆ ತಗಲು ಖರ್ಚು ವೆಚ್ಚಗಳ ಕುರಿತು ವಿಧಾನ ಪರಿಷತ್ ಸದಸ್ಯ ಮೋಹನಗ ಕೊಂಡಜ್ಜಿ ಪರಿಷತ್ ಸಭೆ ಯಲ್ಲಿ ಪ್ರಸ್ತಾಪಿಸಿ, ಅದಕ್ಕೆ ಸಂಬಂಧಿಸಿದಂತೆ ಮಾಹಿತಿ ಹಕ್ಕಿನಡಿ ಪಡೆ ದಾಖಲೆಗಳನ್ನು ಉಲ್ಲೇಖಿಸಿ ಮದನ್ ಪಟೇಲ್ ದೂರು ನೀಡಿದ್ದು, ಹಾಲಿ ಅಧ್ಯಕ್ಷರಾದ ಸುನೀಲ್ ಪುರಾಣಿಕ್ ಅವರು ಭಾರೀ ಪ್ರಮಾಣದಲ್ಲಿ ಸರ್ಕಾರದ ಹಣವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ. ಈ ಸಂಬಂಧ ಸರಿಯಾದ ತನಿಖೆ ನಡೆಯಬೇಕೆಂದು ಮನವಿ ಮಾಡಿದ್ದಾರೆ.
ಚಿನ್ನದ ಸಾಮ್ರಾಜ್ಯಕ್ಕೆ ಒಡೆಯರಾದವರಿಗೆ ಸಮುದ್ರಕ್ಕೆ ಅಧಿಪತಿಯಾಗುವಾಸೆ !
ಅದೃಷ್ಟ ಅಂದ್ರೆ ಇದೆ ಅಲ್ವಾ ? ಹೌದು, ಅದೊಂದು ಬೆಳವಣಿಗೆ ಮಾತ್ರ ಕನ್ನಡ ಚಿತ್ರ ರಂಗದಲ್ಲಿ ಭಾರೀ ಚರ್ಚೆ ಹುಟ್ಟು ಹಾಕಿದೆ. ಕೊರೋನಾ ಅಂತ ಇಡೀ ಚಿತ್ರೋದ್ಯಮವೇ ಸೈಲೆಂಟ್ ಆಗಿ ಸೈಡಿಗೆ ಕುಳಿತಿರುವಾಗ ಕನ್ನಡದ ಆ ಸ್ಟಾರ್ ಜೋಡಿಗೆ ಬಿಗ್ ಆಫರ್ ಒಲಿದು ಬಂದಿದೆ. ಅವರಿಬ್ಬರು ಆಕ್ಟರ್ ಅಷ್ಟೇ ಅಲ್ಲ, ಡೈರೆಕ್ಟರ್ ಕೂಡ ಹೌದು. ಅವರು ಇದುವರೆಗೂ ಆವೆರೆಡು ಅವತಾರ ತೋರಿಸಿದ್ದು ಅವರದೇ ಬ್ಯಾನರ್ ಸಿನಿಮಾಗಳ ಮೂಲಕ.
ಫಾರ್ ಏ ಚೇಂಜ್ ಈಗವರು ಕನ್ನಡದ ಪ್ರತಿಷ್ಠಿತ ಪ್ರೊಡಕ್ಷನ್ ಹೌಸ್ ಎಂದೇ ಖ್ಯಾತಿ ಪಡೆದಿರುವ ಹೊಂಬಾಳೆ ಫಿಲಂಸ್ ನಲ್ಲಿ ನಟನೆಯ ಜತೆಗೆ ನಿರ್ದೇಶನಕ್ಕೂ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಇದು ಅಷ್ಟು ಸುಲಭದ ಮಾತಲ್ಲ. ಸ್ಟಾರ್ ಡೈರೆಕ್ಟರ್ ಗಳೇ ಇವತ್ತು ಅವಕಾಶ ಎದುರು ನೋಡು ತ್ತಾ ಕುಳಿತಿರುವಾಗ, ಈ ಸ್ಟಾರ್ ಜೋಡಿಗೆ ಮಾತ್ರ ಎರಡು ಅವತಾರಕ್ಕೆ ಅವಕಾಶ ಸಿಕ್ಕಿದೆ. ಇದು ಸಾಧ್ಯವಾಗಿದ್ದುದಾದ್ರೂ ಹೇಗೆ ? ಅಷ್ಟು ದೊಡ್ಡ ಪ್ರೊಡಕ್ಷನ್ ಹೌಸ್ಗೆ ಆ ಸ್ಟಾರ್ ಜೋಡಿ ಮಾಡಿದ ಮೋಡಿಯಾದ್ರು ಎಂಥಹದು ?
ಅಂದ ಹಾಗೆ, ನಾವಿಲ್ಲಿ ಹೇಳಹೊರಟಿದ್ದು ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಹಾಗೂ ಡಿಟೆಕ್ಟಿವ್ ದಿವಾಕರ್ ಖ್ಯಾತಿಯ ರಿಷಬ್ ಶೆಟ್ಟಿ ಅವರ ಬಗ್ಗೆ. ಇವರಿಬ್ಬರು ಕರವಾಳಿ ಮೂಲದವರು ಅನ್ನೋದು ಮಾತ್ರವಲ್ಲ ಅತ್ಯಾಪ್ತ ಸ್ನೇಹಿತರು ಹೌದು. ‘ಕಿರಿಕ್ ಪಾರ್ಟಿ’ ಮೂಲಕ ಕನ್ನಡದಲ್ಲಿ ದೊಡ್ಡ ಹವಾ ಸೃಷ್ಟಿಸಿದ ಜೋಡಿ. ಸ್ಪೆಷಲ್ ಅಂದ್ರೆ, ಅಲ್ಲಿಂದಲೇ ಇವರಿಬ್ಬರಿಗೂ ದೊಡ್ಡ ಮಟ್ಟದ ನೇಮ್ ಅಂಡ್ ಫೇಮ್ ಎರಡು ಸಿಕ್ಕವು ಅನ್ನೋದೆಲ್ಲ ಹಳೇ ಮಾತೇ. ʼರಿಕ್ಕಿʼ ಮೂಲಕ ರಿಷಬ್ ಶೆಟ್ಟಿ ಡೈರೆಕ್ಟರ್ ಹ್ಯಾಟ್ ತೊಟ್ಟರೆ, ವೃತ್ತಿಯಲ್ಲಿ ಟೆಕ್ಕಿಯಾಗಿದ್ದ ರಕ್ಷಿತ್ ಶೆಟ್ಟಿ ‘ ಉಳಿದವರು ಕಂಡಂತೆ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು ಮಾತ್ರವಲ್ಲ, ಅಲ್ಲಿ ಅವರೇ ನಾಯಕರು ಆಗಿದ್ದರು. ಇನ್ನು ರಿಷಬ್ ಶೆಟ್ಟಿ ಡೈರೆಕ್ಟರ್ ಆಗುವ ಮುನ್ನ ʼಅಟ್ಟಹಾಸʼ ಹಾಗೂ ʼಲೂಸಿಯಾʼ ಚಿತ್ರಗಳಿಗೆ ಬಣ್ಣ ಹಚ್ಚಿ ನಟರಾದವರು. ಅಲ್ಲಿಂದ ಶುರುವಾದ ಅವರಿಬ್ಬರ ಜರ್ನಿಯಲ್ಲೀಗ ಬಿಗ್ ಟರ್ನಿಂಗ್ ಪಾಯಿಂಟ್.
ಯಾಕಂದ್ರೆ, ಅವರೀಗ ಆ್ಯಕ್ಟರ್ ಜತೆಗೆ ಡೈರೆಕ್ಟರ್ ಅವತಾರೊಂದಿಗೆ ತೆರೆ ಮೇಲೆ ಬರುತ್ರಿರುವುದು ‘ಕೆಜಿಎಫ್ ‘ಖ್ಯಾತಿಯ ಹೊಂಬಾಳೆ ಫಿಲಂಸ್ ನಿರ್ಮಾಣದ ಚಿತ್ರಗಳ ಮೂಲಕ. ಹೊಂಬಾಳೆ ಫಿಲಂಸ್ ಅಂದ್ರೆ ಇವತ್ತು ಭಾರತೀಯ ಚಿತ್ರರಂಗದಲ್ಲಿ ಮನೆ ಮಾತಾದ ಪ್ರೊಡಕ್ಷನ್ ಹೌಸ್. ಹಾಗೊಂದು ಹವಾ ಕ್ರಿಯೇಟ್ ಮಾಡಿದ್ದು ಯಶ್ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಷನ್ ಚಿತ್ರ ‘ಕೆಜಿಎಫ್’. ಅದೇ ಕಾರಣಕ್ಕೆ ಇವತ್ತು ಫ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಫ್ಯಾನ್ಸ್ ‘ಕೆಜಿಎಫ್ 2’ ಗೆ ಕಾಯುತ್ತಿದ್ದಾರೆ. ಎಲ್ಲವೂ ಅಂದುಕೊಂಡಂತಾಗಿದ್ದರೆ ಈ ಚಿತ್ರ ಇಷ್ಟರಲ್ಲಿಯೇ ಬಂದು, ಮತ್ತೊಂದು ಚರಿತ್ರೆ ಸೃಷ್ಟಿಸುತ್ತೋ ಏನೋ. ಆದರೆ ಕೊರೋನಾ, ಲಾಕ್ ಡೌನ್ ಅಂತ ಎಲ್ಲವೂ ಏರುಪೇರು ಆಗಿದೆ. ಈ ವರ್ಷದ ಅಂತ್ಯಕ್ಕೆ ಕೆಜಿಎಫ್ ಬಂದರೂ ಬರಬಹುದು. ಅದರಾಚೆ ಹೊಂಬಾಳೆ ಬಗ್ಗೆ ಕುತೂಹಲ ಇರೋದು, ಕೊರೋನಾ ಕಾಲದಲ್ಲೂ ಅದು ಬ್ಯಾಕ್ ಟು ಬ್ಯಾಕ್ ಸಿನಿಮಾ ಅನೌನ್ಸ್ ಮಾಡ್ತಿರೋ ಸಾಹಸಕ್ಕೆ.
ಕೊರೋನಾ ಮೊದಲ ಅಲೆ ಕಡಿಮೆ ಆಗಿ ಲಾಕ್ ಡೌನ್ ತೆರವಾದ ನಂತರ ಪ್ರಭಾಸ್ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಷನ್ ಮೂಲಕ ʼಸಲಾರ್ʼ ಅನೌನ್ಸ್ ಅಯಿತು. ಸಲಾರ್ ಅದ್ದೂರಿ ವೆಚ್ಚದ ಸಿನಿಮಾ. ಆ ಚಿತ್ರಕ್ಕೆ ಹೊಂಬಾಳೆ ಫಿಲಂಸ್ ಖರ್ಚು ಮಾಡ್ತಿರೋದು ಹತ್ತಿಪ್ಪತ್ತು ಕೋಟಿ ಅಲ್ಲ, ಕನಿಷ್ಟ ಮೂನ್ನೂರು ಕೋಟಿ ಅಂತೆ. ಆದಾದ ನಂತರ ಮತ್ತೆ ಪವರ್ ಸ್ಟಾರ್ ಕಾಂಬಿನೇಷನ್ ನಲ್ಲಿ ʼದ್ವಿತ್ವʼ ಲಾಂಚ್ ಆಗಿದೆ. ಆದಾದ ಮೇಲೆ ರಕ್ಷಿತ್ ಶೆಟ್ಟಿ ನಟನೆ ಹಾಗೂ ನಿರ್ದೇಶನದ ʼರಿಚರ್ಡ್ ಆಂಟನಿʼ ಚಿತ್ರ. ಅದರ ಬೆನ್ನಲೇ ಈಗ ರಿಷಬ್ ಶೆಟ್ಟಿ ನಟನೆ ಹಾಗೂ ನಿರ್ದೇಶನದ ʼಕಾಂತಾರ ʼಚಿತ್ರ. ಡಿಫೆರೆಂಟ್ ಕಾನ್ಸೆಪ್ಟ್ ಮೂಲಕ ಬಂದಿರುವ ಇದರ ಪೋಸ್ಟರ್ ಈಗ ಸಿಕ್ಕಾಪಟ್ಟೆ ಸುದ್ದಿಯಲ್ಲಿದೆ. ಅದಕ್ಕೆ ಕಾರಣವೂ ಇದೆ. ಶಿವರಾಜ್ ಕುಮಾರ್ ಅಭಿನಯ ಹಾಗೂ ಚಂದ್ರಶೇಖರ್ ಬಂಡಿಯಪ್ಪ ನಿರ್ದೇಶನ ಒಂದು ಸಿನಿಮಾದ ಪೋಸ್ಟರ್ ಇದೆ ರೀತಿಯಲ್ಲಿತ್ತು. ಹಾಗಾಗಿ ಅದೇ ಸಿನಿಮಾ ಕಥೆ, ರಿಷಬ್ ಶೆಟ್ಟಿ ಅವರ ಕಾಂತಾರ ಚಿತ್ರದಲ್ಲೂ ಇದೆಯಾ ಅನ್ನೋದು ಫ್ಯಾನ್ಸ್ ಗೆ ಇರುವ ಡೌಟು.
ಅದೇನೆ ಇರಲಿ, ಬಿಡಿ, ರಿಯಾಲಿಟಿ ಮುಂದೆ ಗೊತ್ತಾಗುತ್ತೆ. ಅದು ಬಿಟ್ಟರೆ ನಾವಿಲ್ಲಿ ಪಾಯಿಂಟ್ ಔಟ್ ಮಾಡ್ತಿರೋದು, ಹೊಂಬಾಳೆಯಂತಹ ದೊಡ್ಡ ಬ್ಯಾನರ್ನಲ್ಲಿ ಇಬ್ಬರು ಶೆಟ್ರು ನಾಯಕರಾಗುವ ಜತೆಗೆ ಡೈರೆಕ್ಟರ್ ಅವಕಾಶವನ್ನು ಹೇಗೆ ಗಿಟ್ಟಿಸಿಕೊಂಡ್ರು ಅಂತ. ಇದು ನಮದ್ದಲ್ಲ, ಇಡೀ ಇಂಡಸ್ಟ್ರಿನಲ್ಲಿರೋ ದೊಡ್ಡ ಕುತೂಹಲವೂ ಹೌದು. ಯಾಕಂದ್ರೆ ಹೊಂಬಾಳೆ ಫಿಲಂಸ್ನಲ್ಲಿ ಬಂದ ಅಷ್ಟು ಸಿನಿಮಾಗಳಲ್ಲಿ ಇದುವರೆಗೂ ನಾಯಕರೇ ಬೇರೆ, ನಿರ್ದೇಶಕರೇ ಬೇರೆ. ಮೊದಲ ಸಿನಿಮಾದಿಂದಲೂ ಬರೀ ಸ್ಟಾರ್ ನಟರನ್ನೇ ಪೋಕಸ್ ಮಾಡಿದೆ. ಬಜಾರ್ ನಲ್ಲಿ ಓಡುವ ಕುದುರೆಗಷ್ಟೇ ದುಡ್ಡು ಕಟ್ಟಿದೆ. ಫಾರ್ ಏ ಚೇಂಜ್ ಈಗ ರಕ್ಷಿತ್ ಶೆಟ್ಟಿ ಹಾಗೂ ರಿಷಬ್ ಶೆಟ್ಟಿ ಅವರಿಗೆ ನಟನೆಯ ಜತೆಗೆ ನಿರ್ದೇಶನಕ್ಕೂ ಅವಕಾಶ ಕೊಟ್ಟಿದೆ. ಆ ಮೂಲಕ ಹೊಂಬಾಳೆ ತೇರು ಈಗ ಕರಾವಳಿ ಕಡೆ ಮುಖ ಮಾಡಿದೆ. ಘಟ್ಟ ಇಳಿದು, ಪಟ್ಟ ಏರುವ ಆಸೆ ಹೊತ್ತಿದೆ. ಮುಗ್ಗರಿಸಿದರೆ ಮುಂದಿರೋದು ಸಮುದ್ರ ಎನ್ನುವ ಎಚ್ಚರವೂ ಅದಕ್ಕಿಲ್ಲ ಎನ್ನುವಂತೆಯೂ ಇಲ್ಲ. ಹೇಗೋ ಏನೋ ಎನ್ನವುದಕ್ಕಿಂತ ಇಬ್ಬರು ಶೆಟ್ರು ಮೇಲೂ ಆಗಾಧವಾದ ವಿಶ್ವಾಸ ಹೊತ್ತಿದೆ. ಚಿನ್ನದ ಸಾಮ್ರಾಜ್ಯಕ್ಕೆ ಒಡೆಯರಾದವರಿಗೆ ಸಮುದ್ರಕ್ಕೆ ಅಧಿಪತಿಯಾಗುವಾಸೆ ಇಟ್ಟುಕೊಂಡಿದೆ. ಅದಕ್ಕೆ ಕಾರಣ ಅವರಿಬ್ಬರ ಹಿನ್ನೆಲೆ.
ಕರಾವಳಿಯ ಮೂಲದ ಆ ಇಬ್ಬರು ಶೆಟ್ರು ಬುದ್ದಿವಂತರು. ಪ್ರತಿಭಾವಂ ತರು ಕೂಡ. ಸಿನಿ ದುನಿಯಾದಲ್ಲಿ ಆಕ್ಟರ್ ಆಗಿ ಗೆದ್ದ ಹಾಗಿಯೇ ಡೈರೆಕ್ಟ ರ್ ಆಗಿಯೂ ಸಕ್ಸಸ್ ಕಂಡಿದ್ದಾರೆ. ಇವರಿಬ್ಬರು ತುಂಬಾ ಡಿಫೆರೆಂಟ್ ಅಂತ ಅನ್ನೋದಿಕ್ಕೆ ಇಷ್ಟು ಸಾಕು. ಹೊಂಬಾಳೆ ಫಿಲಂಸ್ ಲೆಕ್ಕಚಾರದ ಹಿಂದೆಯೂ ಇದಿದ್ದು ಕೂಡ ಅದೇ ನಿರೀಕ್ಷೆ. ಯಾಕಂದ್ರೆ, ದೊಡ್ಡ ಸಂಸ್ಥೆ ಯಾವುತ್ತೂ ರಿಸ್ಕ್ ತೆಗೆದುಕೊಳ್ಳೋದಕ್ಕೆ ರೆಡಿ ಇರೋದಿಲ್ಲ. ನಿರ್ದೇಶಕ ಹಾಗೂ ನಟ ಇಬ್ಬರು ಪವರ್ ಫುಲ್ ಅಂದರೆ ಮಾತ್ರ ಕಾಸು ಬಿಚ್ಚುತ್ತದೆ. ಅದರಲ್ಲಿ ಒಬ್ಬರು ಕೊಂಚ ಡಲ್ ಎನಿಸಿದರೂ ಖಜಾನೆ ಬಾಗಿಲು ಓಪನ್ ಮಾಡಲ್ಲ. ಇಷ್ಟಾಗಿಯೂ ರಕ್ಷಿತ್ ಶೆಟ್ಟಿ ಅವರಿಗೊಂದು ಸಿನಿಮಾ, ಅವರ ಸ್ನೇಹಿತ ರಿಷಬ್ ಶೆಟ್ಟಿ ಅವರಿಗೊಂದು ಸಿನಿಮಾ ವನ್ನು ಈ ಕೊರೋನಾ ನಡುವೆಯೂ ಹೊಂಬಾಳೆ ಫಿಲಂಸ್ ಅನೌನ್ಸ್ ಮಾಡುತ್ತದೆ ಅಂದ್ರೆ, ನಿರ್ದೇಶನದ ಜೊತೆಗೆ ಅವರಲ್ಲೊಬ್ಬ ಅಭಿನಯ ಕಲಾವಿದ ಇದ್ದಾನೆ ಅವನಿಗಾಗಲೇ ಜನರಿಂದ ವಿಜಯದ ಹಾರ ಹಾಕಿಸಿಕೊಂಡಿದ್ದಾನೆ ಎನ್ನುವ ಕಾರಣಕ್ಕೆ. ಸದ್ಯಕ್ಕೆ ಇಬ್ಬರೂ ಈಗ ಕರಾವಳಿಯ ಕಥೆಗಳನ್ನೇ ಮುಂದಿಟ್ಟುಕೊಂಡೇ ಸಿನಿಮಾ ಮಾಡುವ ಸಿದ್ದತೆ ನಡೆಸಿದ್ದಾರೆ. ಎರಡು ಸಿನಿಮಾಗಳ ಮೊದಲ ಪೋಸ್ಟರ್ ಗಳು ಈಗಾಗಲೇ ದೊಡ್ಡ ಹವಾ ಎಬ್ಬಿಸಿವೆ. ಆ ಮೂಲಕ ಹೊಂಬಾಳೆ ಬ್ಯಾನರ್ ಮೂಲಕ ಮುಂದೆ ಪ್ಯಾನ್ ಇಂಡಿಯಾ ಲೆವೆನ್ ನಲ್ಲಿ ದಂತ ಕಥೆ ಸೃಷ್ಟಿಸುತ್ತಾರೆ ಎನ್ನುವುದು ದೊಡ್ಡ ಕುತೂಹಲ ಹುಟ್ಟಿಸಿದೆ. ಆ ಇಬ್ಬರು ಶೆಟ್ರಿಗೆ ಸಿನಿಲಹರಿ ಕಡೆಯಿಂದ ಆಲ್ ದಿ ಬೆಸ್ಟ್.
ಆರಂಭದಿಂದಲೂ ತನ್ನ ಶೀರ್ಷಿಕೆಯ ಮೂಲಕವೇ ನಿರೀಕ್ಷೆ ಹುಟ್ಟಿಸಿರುವ, ತೀರ್ಥಳ್ಳಿ ಹುಡುಗ ದಿಗಂತ್ ಅಭಿನಯದ ಚಿತ್ರ ಮಾರಿಗೋಲ್ಡ್. ಈಗಾಗಲೇ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಪ್ರಗತಿಯಲ್ಲಿದ್ದು, ಚಿತ್ರದ ಡಬ್ಬಿಂಗ್ ಕಾರ್ಯ ಮುಗಿದು, ಹಿನ್ನೆಲೆ ಸಂಗೀತದ ಕೆಲಸ ಕೊನೇ ಹಂತದಲ್ಲಿದೆ. ಇಷ್ಟರಲ್ಲೇ ಸೆನ್ಸಾರ್ ಅಂಗಳಕ್ಕೆ ಹೋಗಲು ಸಿದ್ದವಾಗಿರುವ ‘ಮಾರಿಗೋಲ್ಡ್’ ಚಿತ್ರ. ಸದ್ಯದಲ್ಲೇ ಪ್ರೇಕ್ಷಕರ ಮುಂದೆ ಬರಲಿದೆ. ಪಕ್ಕಾ ಕ್ರೈಮ್ ಥ್ರಿಲ್ಲರ್ ಕಥಾನಕ ಹೊಂದಿರುವ ಈ ಚಿತ್ರವನ್ನು ರಾಘವೇಂದ್ರ ಎಂ.ನಾಯಕ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಇದು ರಾಘವೇಂದ್ರ ನಾಯಕ್ ಅವರಿಗೆ ಮೊದಲ ನಿರ್ದೇಶನದ ಚಿತ್ರ.
ದಿಗಂತ್, ಸಂಗೀತಾ
ಈಗಾಗಲೇ ವಿಭಿನ್ನ ಗೆಟಪ್ನ ದಿಗಂತ್ ಅವರ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದ್ದು, ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಅಲ್ಲದೆ ಇದೇ ಮೊದಲ ಬಾರಿಗೆ ದಿಗಂತ್ ಹೊಸ ರೀತಿಯ ಪಾತ್ರದ ಮೂಲಕ ಪ್ರೇಕ್ಷಕರಿಗೆ ಮೋಡಿ ಮಾಡಲಿದ್ದಾರೆ. “ಮಾರಿಗೋಲ್ಡ್” ಅಂದಾಕ್ಷಣ, ಅದೊಂದು ಅಂಡರ್ವರ್ಲ್ಡ್ ಸಿನಿಮಾ ಇರಬಹುದಾ ಎಂಬ ಪ್ರಶ್ನೆ ಎದುರಾಗುತ್ತದೆ. ಆದರೆ, ಅದು ಅಂಡರ್ವರ್ಲ್ಡ್ ಸಿನಿಮಾನಾ ಅಥವಾ ರೌಡಿಸಂ ಕುರಿತಾದ ಕಥೆಯೇ ಎಂಬುದಕ್ಕೆ ಚಿತ್ರ ರಿಲೀಸಾಗೋವರೆಗೆ ಕಾಯಬೇಕು.
ರಘುವರ್ಧನ್, ನಿರ್ಮಾಪಕರು
ಆರ್.ವಿ.ಕ್ರಿಯೇಷನ್ಸ್ ಮೂಲಕ ರಘುವರ್ಧನ್ ಫಿಲ್ಮ್ಸ್ ಬ್ಯಾನರ್ ನಲ್ಲಿ ರಘುವರ್ಧನ್ ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ರಘುವರ್ಧನ್ ಅವರು ಮೂಲತಃ ನಿರ್ದೇಶಕರಾಗಿದ್ದರೂ, ಯುವ ನಿರ್ದೇಶಕ ರಾಘವೇಂದ್ರ ಅವರಿಗೆ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ಅದಕ್ಕೆ ಕಾರಣ, ರಾಘವೇಂದ್ರ ಎಂ.ನಾಯಕ್ ಅವರು ಮಾಡಿಕೊಂಡಿದ್ದ ಕಥೆ. ಚೆನ್ನಾಗಿದ್ದರಿಂದ, ಚಿತ್ರವನ್ನು ಸಹ ಅವರೇ ನಿರ್ದೇಶಿಸಲಿ ಎಂದು ರಘುವರ್ಧನ್ ಅವಕಾಶ ನೀಡಿದ್ದಾರೆ. ಅಲ್ಲದೆ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಿಸಿದ್ದಾರೆ. ಈ ಹಿಂದೆ ತಿಮ್ಮರಾಯ, ಬದ್ರಿ, ಗುಣವಂತ, ಮಿಸ್ಟರ್ ಎಲ್.ಎಲ್.ಬಿ. ಮೊದಲಾದ ಚಿತ್ರಗಳನ್ನು ರಘುವರ್ಧನ್ ನಿರ್ದೇಶಿಸಿದ್ದರು
ರಾಘವೇಂದ್ರ ಎಂ.ನಾಯಕ್, ನಿರ್ದೇಶಕರು
ಈ ಚಿತ್ರಕ್ಕೆ ವೀರ್ ಸಮರ್ಥ್ ಅವರ ಸಂಗೀತವಿದ್ದು, ಯೋಗರಾಜ್ ಭಟ್, ಕವಿರಾಜ್ ಮತ್ತು ವಿಜಯ್ ಭರಮಸಾಗರ ಅವರು ಸಾಹಿತ್ಯ ಬರೆದಿದ್ದಾರೆ. ಕೆ.ಎಸ್.ಚಂದ್ರಶೇಖರ್ ಕ್ಯಾಮೆರಾ ಹಿಡಿದರೆ, ಕೆ.ಎಂ.ಪ್ರಕಾಶ್ ಸಂಕಲನವಿದೆ. ರಘು ನಿಡುವಳ್ಳಿ ಸಂಭಾಷಣೆ ಬರೆದಿದ್ದಾರೆ. ಅರ್ಜುನ್ ರಾಜ್ ಸಾಹಸ, ಕಲೈ ಅವರ ನೃತ್ಯ. ನಿರ್ದೇಶನವಿದೆ.
ದಿಗಂತ್ ಅವರಿಗೆ ಇದೊಂದು ಹೊಸಬಗೆಯ ಚಿತ್ರವಂತೆ. ಅದರಲ್ಲೂ ದಿಗಂತ್ ಮೊದಲ ಬಾರಿಗೆ ಈ ರೀತಿಯ ಪಾತ್ರ ನಿರ್ವಹಿಸಿದ್ದಾರೆ, ಬೆಂಗಳೂರು, ಸಕಲೇಶಪುರದ ಸುತ್ತಮುತ್ತಲ ತಾಣಗಳಲ್ಲಿ ಚಿತ್ರೀಕರಣಗೊಂಡಿರುವ ಈ ಚಿತ್ರದಲ್ಲಿ ಸಂಗೀತಾ ಶೃಂಗೇರಿ ನಾಯಕಿಯಾಗಿದ್ದಾರೆ. ಉಳಿದಂತೆ ಸಂಪತ್ಕುಮಾರ್, ಕಾಕ್ರೋಚ್ ಸುಧಿ, ಯಶ್ಶೆಟ್ಟಿ, ವಜ್ರಾಂಗ್ ಶೆಟ್ಟಿ, ಬಾಲ ರಾಜ್ವಾಡಿ, ಗಣೇಶ್ರಾವ್, ಭಾಸ್ಕರ್ ಪಾಂಡವಪುರ, ಮನಮೋಹನ್ ರೈ, ಮಹಾಂತೇಶ್ ಹೀರೆಮಠ, ಮಿಮಿಕ್ರಿ ಗೋಪಿ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ.
ನಿರ್ದೇಶಕ ಪ್ರೇಮ್ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಅರೇ, ಮತ್ಯಾವ ಸ್ಟಾರ್ ನಟ ಅವರ ವಿರುದ್ಧ ಮಾತಾಡಿದ್ರು ಅನ್ನೋ ಪ್ರಶ್ನೆ ಈಗ ಸಹಜ. ಅದಕ್ಕೆ ಕಾರಣ, ಇತ್ತೀಚೆಗಷ್ಟೇ ಪ್ರೇಮ್ ಅವರನ್ನು ಕುರಿತಂತೆ ನಟ ದರ್ಶನ್ ಅವರು ಅವರೇನು ದೊಡ್ಡ ಪುಡಂಗಾನ ಅಂದಿದ್ದರು. ಆ ಮಾತು ಜೋರು ಸುದ್ದಿ ಮಾಡಿತ್ತು. ಅಷ್ಟೇ ಅಲ್ಲ, ಅತ್ತ ಪ್ರೇಮ್ ಅವರನ್ನೂ ಕೆರಳಿಸುವಂತೆ ಮಾಡಿದ್ದು ಸುಳ್ಳಲ್ಲ. ಪ್ರೇಮ್ ಕೂಡ ತಮ್ಮ ಫೇಸ್ಬುಕ್ ಖಾತೆಯಲ್ಲಿ ದರ್ಶನ್ ವಿರುದ್ಧ ಮಾತಾಡಿದ್ದರು. ಆ ಮಧ್ಯೆ ರಕ್ಷಿತಾ ಪ್ರೇಮ್ ಎಂಟ್ರಿಯಾಗಿ, ದರ್ಶನ್ ಜೊತೆಗಿದ್ದ ಒಂದು ಫೋಟೋ ಹಾಕಿಕೊಂಡು ಒಂದು ಸ್ಟೇಟಸ್ ಹಾಕಿಕೊಂಡಿದ್ದರು. ಅಲ್ಲಿಗೆ ಎಲ್ಲವೂ ಸುಖಾಂತ್ಯಗೊಂಡಿತ್ತು. ಈಗ ಪ್ರೇಮ್ ಅವರ ಹೊಸ ಸುದ್ದಿ ಅಂದರೆ, ಅವರೊಂದು ಹೊಸ ಸಿನಿಮಾ ಕಥೆಯನ್ನು ಮುಗಿಸಿದ್ದಾರೆ.
ಹೌದು, ಹೀಗಂತ ಸ್ವತಃ ಪ್ರೇಮ್ ಅವರೇ ಸೋಶಿಯಲ್ ಮೀಡಿಯಾದಲ್ಲೊಂದು ವಿಡಿಯೋ ಹಂಚಿಕೊಂಡು ಹೇಳಿಕೊಂಡಿದ್ದಾರೆ. ಸದ್ಯ ಪ್ರೇಮ್ ರಕ್ಷಿತಾ ಅವರ ಸಹೋದರ ರಾಣ ಅವರಿಗೆ “ಏಕ್ ಲವ್ ಯಾ” ಸಿನಿಮಾ ಮಾಡಿದ್ದಾರೆ. ಅದು ಇಷ್ಟರಲ್ಲೇ ಪ್ರೇಕ್ಷಕರ ಮುಂದೆ ಬರಲು ತಯಾರಾಗುತ್ತಿದೆ. ಇದರ ಮಧ್ಯೆ ಪ್ರೇಮ್ ಕೂಡ ಸದ್ದಿಲ್ಲದೆಯೇ ಒಂದು ಸಿನಿಮಾದ ಚಿತ್ರಕಥೆ ಮುಗಿಸಿದ ಬಗ್ಗೆ ಹೇಳಿಕೊಂಡಿದ್ದು, ಆ ಚಿತ್ರಕಥೆಗೆ ವಿಶೇಷ ಪೂಜೆ ಮಾಡಿ, ಕುಂಬಳಕಾಯಿ ಒಡೆದು ಖುಷಿಗೊಂಡಿದ್ದಾರೆ. ಹಾಗಾದರೆ, ಪ್ರೇಮ್ ಈ ಬಾರಿ ಯಾವ ಜಾನರ್ ಸಿನಿಮಾ ಮಾಡ್ತಾರೆ? ಸಹಜವಾಗಿಯೇ ಎಲ್ಲರಲ್ಲೂ ಕಾಡುವ ಪ್ರಶ್ನೆ ಇದು. ಪ್ರೇಮ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ವಿಷಯವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಅವರ ಮುಂದಿನ ಸಿನಿಮಾ ಪಕ್ಕಾ ಆಕ್ಷನ್ ಸಿನಿಮಾ ಆಗಿರುತ್ತೆ ಅನ್ನುವುದು ದಟ್ಟವಾಗಿದೆ.
ಅಷ್ಟಕ್ಕೂ ಪ್ರೇಮ್ ಹಂಚಿಕೊಂಡಿರುವ ಆ ವಿಡಿಯೋದಲ್ಲೇನಿದೆ ಗೊತ್ತಾ? “ಯಾರಾದರೂ ಯುದ್ಧದಲ್ಲಿ ಹುತಾತ್ಮರಾದರೆ ಅವರ ಸ್ವಾಗತಕ್ಕಾಗಿ ಸ್ವರ್ಗ ಕಾಯುತ್ತಿರುತ್ತದೆ. ಒಂದೊಮ್ಮೆ ಯುದ್ಧದಲ್ಲಿ ಗೆದ್ದರೆ, ಅವರಿಗಾಗಿ ಅಧಿಕಾರದ ಕಿರೀಟ ಕಾಯುತ್ತಿರುತ್ತದೆ. ಒಟ್ಟಾರೆ ಯುದ್ಧ ಒಳ್ಳೆಯದೇ. ಯುದ್ಧ ಈಗ ಶುರುವಾಗುತ್ತಿದೆ…ʼ ಎಂದಿದ್ದಾರೆ ಪ್ರೇಮ್. ಚಿತ್ರಕತೆ ಕೆಲಸವನ್ನು ಮುಗಿಸಿದ್ದೇನೆ ಸಿನಿಮಾ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಆಗಸ್ಟ್ 2021ರಲ್ಲಿಯೇ ಹಂಚಿಕೊಳ್ಳಲಿದ್ದೇನೆ’ ಎಂದಿರುವ ಪ್ರೇಮ್ ಅವರಿಗೆ ಇದು 9ನೇ ಚಿತ್ರ. 2003ರಲ್ಲಿ ‘ಕರಿಯಾ’ ಚಿತ್ರದ ಮೂಲಕ ನಿರ್ದೇಶಕರಾಗಿ ಚಿತ್ರರಂಗ ಪ್ರವೇಶಿಸಿದ ಪ್ರೇಮ್, ಆ ಬಳಿಕ ಒಂದೊಂದೇ ಹಿಟ್ ಸಿನಿಮಾ ಕೊಟ್ಟರು. ಆ ಮೂಲಕ ಅವರು ಗಾಂಧಿನಗರದಲ್ಲಿ ಗಟ್ಟಿ ಬೇರೂರಿದರು.
ತಮ್ಮದೇ ಶೈಲಿಯಲ್ಲಿ ಸಿನಿಮಾ ಮಾಡುವ ಪ್ರೇಮ್ಗೆ ಪ್ರೇಕ್ಷಕರ ನಾಡಿಮಿಡಿತ ಗೊತ್ತಿದೆ. ಅವರಿಗೆ ತಕ್ಕಂತೆಯೇ ಸಿನಿಮಾ ಕೊಡುವ ಜಾಣತನ ಪ್ರೇಮ್ಗಿದೆ. ಸ್ಟಾರ್ ಮಾತ್ರವಲ್ಲ, ಹೊಸಬರನ್ನೂ ಇಟ್ಟುಕೊಂಡು ಸಾಬೀತು ಮಾಡಿರುವ ಪ್ರೇಮ್, ಒಂದು ಸಿನಿಮಾ ಮಾಡ್ತಾರೆ ಅಂದರೆ, ಅದೊಂದು ರೀತಿ ಕುತೂಹಲವಂತೂ ಹೌದು. ಪ್ರೇಮ್ ಸೋಲು ಕಂಡಿದ್ದೂ ಇದೆ, ಗೆಲುವಿನ ಮೆಟ್ಟಿಲನ್ನೂ ಏರಿದ್ದೂ ಇದೆ. ನಿರೀಕ್ಷೆ ಇಟ್ಟುಕೊಂಡ ಸಿನಿಮಾಗಳು ಸಹ ಕೈ ಕೊಟ್ಟಿದ್ದ ಉದಾಹರಣೆ ಇದ್ದರೂ, ಪ್ರೇಮ್ ಮಾತ್ರ, ತಮ್ಮ ಪಾಡಿಗೆ ತಾವು ಸಿನಿಮಾ ಮಾಡುತ್ತಿದ್ದಾರೆ. “ವಿಲನ್” ಮೂಲಕ ಶಿವರಾಜಕುಮಾರ್ ಮತ್ತು ಸುದೀಪ್ ಅವರನ್ನು ಇಟ್ಟುಕೊಂಡು ದೊಡ್ಡ ಮಟ್ಟದ ಚಿತ್ರ ಕೊಟ್ಟರು. ಭಾರೀ ಕುತೂಹಲ ಕೆರಳಿಸಿದ್ದ ಆ ಚಿತ್ರ, ತಕ್ಕಮಟ್ಟಿಗೆ ಮೆಚ್ಚುಗೆ ಪಡೆದುಕೊಂಡಿತು. ಆ ಬಳಿಕ ಅವರು, “ಏಕ್ ಲವ್ ಯಾ” ಸಿನಿಮಾಗೆ ಅಣಿಯಾದರು.
ಈಗ ಆ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಇಷ್ಟರಲ್ಲೇ ಪ್ರೇಕ್ಷಕರ ಮುಂದೆ ಬರಲಿದೆ. ಅಂದಹಾಗೆ, ರಕ್ಷಿತಾ ಅವರ ಸಹೋದರನಿಗಾಗಿಯೇ, ಒಂದೊಳ್ಳೆಯ ಲವ್ ಸ್ಟೋರಿ ಹೆಣೆದಿರುವ ಪ್ರೇಮ್, ಈಗಾಗಲೇ ಚಿತ್ರದ ಒಂದು ಸಾಂಗ್ ಬಿಟ್ ಬಿಡುಗಡೆ ಮಾಡಿ, ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದ್ದಾರೆ. ಅದೇನೆ ಇರಲಿ, ಪ್ರೇಮ್ ಈಗ ಹೊಸ ಸಿನಿಮಾದ ಚಿತ್ರಕಥೆ ಸಿದ್ಧಪಡಿಸಿದ್ದಾರೆ. ಈ ಬಾರಿ ಸ್ಟಾರ್ ಹಿಂದೆ ಹೋಗ್ತಾರೋ ಅಥವಾ ಹೊಸಬರನ್ನು ಕರೆತರುತ್ತಾರೋ ಅನ್ನುವುದನ್ನು ಕಾದು ನೋಡಬೇಕಿದೆ.
ಅಂದುಕೊಂಡಂತೆ ಬಿಗ್ ಬಾಸ್ ಮುಗಿಯುತ್ತಿದ್ದಂತೆ ಪ್ರಶಾಂತ್ ಸಂಬರಗಿ ಹಾಗೂ ಚಕ್ರವರ್ತಿ ಚಂದ್ರಚೂಡ್ ನಡುವೆ ಗುದುಮುರಗಿ ಶುರುವಾಗಿದೆ. ದೊಡ್ಮನೆಯಿಂದ ಹೊರ ಬರುತ್ತಿದ್ದಂತೆ ಪ್ರಶಾಂತ್ ಸಂಬರಗಿ, ಟಿವಿ ಸಂದರ್ಶನಗಳಲ್ಲಿ ಬ್ಯುಸಿ ಆಗಿದ್ದಾರೆ. ಸೋಮವಾರ ಒಂದು ಖಾಸಗಿ ವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಚಕ್ರವರ್ತಿ ಚಂದ್ರಚೂಡ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.ಇದರಿಂದ ಪತ್ರಕರ್ತ ಹಾಗೂ ಬರಹಗಾರ ಚಕ್ರವರ್ತಿ ಚಂದ್ರಚೂಡ್ ಕೆಂಡಾಮಂಡಲವಾಗಿದ್ದು, ಪ್ರಶಾಂತ್ ಸಂಬರಗಿ ಅವರು, ಚಾನೆಲ್ ಗಳಲ್ಲಿ ಸ್ವಕುಚ ಮರ್ಧನ ಮಾಡಿಕೊಳ್ಳೋದನ್ನು ಬಿಡಲಿ. ತಾಕತ್ತಿದ್ದರೆ ಮುಖಾಮುಖಿ ಮಾತುಕತೆಗೆ ಬರಲಿ ಎಂದು ಸವಾಲ್ ಹಾಕಿದ್ದಾರೆ. ಈ ಕುರಿತು ಸೋಷಲ್ ಮೀಡಿಯಾದಲ್ಲಿ ಚಕ್ರವರ್ತಿ ಚಂದ್ರಚೂಡ್ ಹಾಕಿರುವ ಸ್ಟೇಟಸ್ ಹೀಗಿದೆ…
ಪ್ರಶಾಂತ್ ಸಂಬರ್ಗಿ – ನೀವು ಬರಹಗಾರನ ಮುಖವಾಡ ಹೋರಾಟದ ಮುಖವಾಡ ಇತ್ಯಾದಿ ಇತ್ಯಾದಿ ವಾಂತಿ ಮಾಡಿಕೊಳ್ಳುತ್ತಿದ್ದೀರಿ.ನಾನು ನೀವು ಹೊರಬರುವ ತನಕ ಮಾತನಾಡಬಾರದೆಂದು ನೈತಿಕ ಪ್ರಜ್ಝೆಯಿಂದ ಮೌನವಿದ್ದೆ.ನಿಮ್ಮ ಹೋರಾಟ ನನ್ನ ಜನಪರ ಹೋರಾಟಗಳು ನನ್ನ ಬರಹ ನಿಮ್ಮದು ಸಮಾಜದ ಕೆಲಸ ನಿಮ್ಮ ಸಮಾಜ ಕೆಲಸ ಎರಡನ್ನೂ ಚರ್ಚೆ ಮಾಡೋಣವೇ ಒಂದೇ ವೇದಿಕೆಯಲ್ಲಿ ಯಾರಿಗೆ ಕಪ್ಪು ಮಸಿ ಬಳಿದಿದ್ದಾರೆಂದು ನೋಡೋಣವೇ ? ನೀವೊಂದು ಚಾನಲ್ ನಾನೊಂದು ಚಾನಲ್ ಹೀಗೆ ಕಾಲ ಹರಣ ಬೇಡ .ನನ್ನ ಕೆಲಸಗಳನ್ನ ದಾಖಲಾತಿ ಸಹಿತ ತರುವೆ. open debate ಬರ್ತೀರಾ ? ಯಾವ ಮಾಧ್ಯಮ ? ಎಲ್ಲಿ ಯಾವತ್ತು ಯಾವಾಗ ತಾಖತ್ತಿದ್ದರೆ … ಕಿತ್ತೂರು ರಾಣಿ ಚನ್ನಮ್ಮನ ಮೊಮ್ಮಗವೆಂಬುದು ಹುಸಿ ಪ್ರಚಾರವಾಗದೇ ಅಸಲಿಯಾಗಿದ್ದರೆ…. ನೋಡೋಣವೇ …ನಿಮ್ಮ ಇಂಚಿಂಚೂ ದಾಖಲಾತಿಯೊಂದಿಗೆ ಬರುವೆ ನನ್ನ 20 ವರುಷದ ಪತ್ರಿಕೋದ್ಯಮದ ಮೇಲಾಣೆ(ನಿಮ್ಮ ರೀತಿಯಲ್ಲಿ ಆಣೆ) , ಹೇಡಿ ಥರ ಚಾನಲ್ ಗಳಲ್ಲಿ ಸ್ವಕುಚ ಮರ್ಧನ ಮಾಡಿಕೊಳ್ಳೋದಲ್ಲ… ತಾಕತ್ತಿದೆಯಾ ಸಂಬರ್ಗಿ?…
ಪ್ರಶಾಂತ್ ಸಂಬರಗಿ ಹಾಗೂ ಚಕ್ರವರ್ತಿ ಚಂದ್ರಚೂಡ್ ನಡುವೆ ಏನ್ ಆಗಿದೆಯೋ ಗೊತ್ತಿಲ್ಲ, ಆದರೆ ಬಿಗ್ಬಾಸ್ ಮನೆಯೊಳಗಡೆ ಪ್ರಶಾಂತ್ ಸಂಬರಗಿ ಮತ್ತು ಚಕ್ರವರ್ತಿ ಚಂದ್ರಚೂಡ್ ಸ್ನೇಹಿತರಂತೆಯೇ ಇದ್ದರು. ಇದಾಗಿ ಅಲ್ಲಿಂದ ಚಕ್ರವರ್ತಿ ಚಂದ್ರಚೂಡ್ ಹೊರ ಬಂದ ನಂತರ, ಚಂದ್ರಚೂಡ್ ಸಿನಲಹರಿ ಜತೆಗೆ ಮಾತನಾಡುತ್ತಾ, ಬಿಗ್ ಬಾಸ್ ಮುಗಿಲಿ, ಪ್ರಶಾಂತ್ ಸಂಬರಗಿ ಅವರನ್ನು ಸುಮ್ಮನೆ ಬಿಡೋದಿಲ್ಲ ಎಂದಿದ್ದರು. ಅದು ಯಾವ ಕಾರಣಕ್ಕೋ ಗೊತ್ತಿಲ್ಲ. ಈಗ ಮಾತ್ರ ಇಬ್ಬರ ನಡುವೆ ಯುದ್ದ ಶುರುವಾಗಿದೆ. ಸದ್ಯಕ್ಕೆ ಇದು ಮಾತಿನ ಸಮರಕ್ಕೆ ಸಿಮೀತವಾಗಿದೆ. ಮುಂದಿನ ದಿನಗಳಲ್ಲಿ ಏನಾಗುತ್ತೋ ಗೊತ್ತಿಲ್ಲ.