ತಾಕತ್ತಿದ್ದರೆ ಒಪನ್‌ ಡಿಬೇಟ್‌ ಗೆ ಬರ್ತೀಯಾ? – ಪ್ರಶಾಂತ್‌ ಸಂಬರಗಿಗೆ ಚಂದ್ರಚೂಡ್‌ ಸವಾಲು

ಅಂದುಕೊಂಡಂತೆ ಬಿಗ್‌ ಬಾಸ್‌ ಮುಗಿಯುತ್ತಿದ್ದಂತೆ ಪ್ರಶಾಂತ್‌ ಸಂಬರಗಿ ಹಾಗೂ ಚಕ್ರವರ್ತಿ ಚಂದ್ರಚೂಡ್‌ ನಡುವೆ ಗುದುಮುರಗಿ ಶುರುವಾಗಿದೆ. ದೊಡ್ಮನೆಯಿಂದ ಹೊರ ಬರುತ್ತಿದ್ದಂತೆ ಪ್ರಶಾಂತ್‌ ಸಂಬರಗಿ, ಟಿವಿ ಸಂದರ್ಶನಗಳಲ್ಲಿ ಬ್ಯುಸಿ ಆಗಿದ್ದಾರೆ. ಸೋಮವಾರ ಒಂದು ಖಾಸಗಿ ವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಚಕ್ರವರ್ತಿ ಚಂದ್ರಚೂಡ್‌ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.ಇದರಿಂದ ಪತ್ರಕರ್ತ ಹಾಗೂ ಬರಹಗಾರ ಚಕ್ರವರ್ತಿ ಚಂದ್ರಚೂಡ್‌ ಕೆಂಡಾಮಂಡಲವಾಗಿದ್ದು, ಪ್ರಶಾಂತ್‌ ಸಂಬರಗಿ ಅವರು, ಚಾನೆಲ್‌ ಗಳಲ್ಲಿ ಸ್ವಕುಚ ಮರ್ಧನ ಮಾಡಿಕೊಳ್ಳೋದನ್ನು ಬಿಡಲಿ. ತಾಕತ್ತಿದ್ದರೆ ಮುಖಾಮುಖಿ ಮಾತುಕತೆಗೆ ಬರಲಿ ಎಂದು ಸವಾಲ್‌ ಹಾಕಿದ್ದಾರೆ. ಈ ಕುರಿತು ಸೋಷಲ್‌ ಮೀಡಿಯಾದಲ್ಲಿ ಚಕ್ರವರ್ತಿ ಚಂದ್ರಚೂಡ್‌ ಹಾಕಿರುವ ಸ್ಟೇಟಸ್‌ ಹೀಗಿದೆ…

ಪ್ರಶಾಂತ್ ಸಂಬರ್ಗಿ – ನೀವು ಬರಹಗಾರನ ಮುಖವಾಡ ಹೋರಾಟದ ಮುಖವಾಡ ಇತ್ಯಾದಿ ಇತ್ಯಾದಿ ವಾಂತಿ ಮಾಡಿಕೊಳ್ಳುತ್ತಿದ್ದೀರಿ.ನಾನು ನೀವು ಹೊರಬರುವ ತನಕ ಮಾತನಾಡಬಾರದೆಂದು ನೈತಿಕ ಪ್ರಜ್ಝೆಯಿಂದ ಮೌನವಿದ್ದೆ.ನಿಮ್ಮ ಹೋರಾಟ ನನ್ನ ಜನಪರ ಹೋರಾಟಗಳು ನನ್ನ ಬರಹ ನಿಮ್ಮದು ಸಮಾಜದ ಕೆಲಸ ನಿಮ್ಮ ಸಮಾಜ ಕೆಲಸ ಎರಡನ್ನೂ ಚರ್ಚೆ ಮಾಡೋಣವೇ ಒಂದೇ ವೇದಿಕೆಯಲ್ಲಿ ಯಾರಿಗೆ ಕಪ್ಪು ಮಸಿ ಬಳಿದಿದ್ದಾರೆಂದು ನೋಡೋಣವೇ ? ನೀವೊಂದು ಚಾನಲ್ ನಾನೊಂದು ಚಾನಲ್ ಹೀಗೆ ಕಾಲ ಹರಣ ಬೇಡ .ನನ್ನ ಕೆಲಸಗಳನ್ನ ದಾಖಲಾತಿ ಸಹಿತ ತರುವೆ. open debate ಬರ್ತೀರಾ ? ಯಾವ ಮಾಧ್ಯಮ ? ಎಲ್ಲಿ ಯಾವತ್ತು ಯಾವಾಗ ತಾಖತ್ತಿದ್ದರೆ … ಕಿತ್ತೂರು ರಾಣಿ ಚನ್ನಮ್ಮನ ಮೊಮ್ಮಗವೆಂಬುದು ಹುಸಿ ಪ್ರಚಾರವಾಗದೇ ಅಸಲಿಯಾಗಿದ್ದರೆ…. ನೋಡೋಣವೇ …ನಿಮ್ಮ ಇಂಚಿಂಚೂ ದಾಖಲಾತಿಯೊಂದಿಗೆ ಬರುವೆ ನನ್ನ 20 ವರುಷದ ಪತ್ರಿಕೋದ್ಯಮದ ಮೇಲಾಣೆ(ನಿಮ್ಮ ರೀತಿಯಲ್ಲಿ ಆಣೆ) , ಹೇಡಿ ಥರ ಚಾನಲ್ ಗಳಲ್ಲಿ ಸ್ವಕುಚ ಮರ್ಧನ ಮಾಡಿಕೊಳ್ಳೋದಲ್ಲ… ತಾಕತ್ತಿದೆಯಾ ಸಂಬರ್ಗಿ?…

ಪ್ರಶಾಂತ್‌ ಸಂಬರಗಿ ಹಾಗೂ ಚಕ್ರವರ್ತಿ ಚಂದ್ರಚೂಡ್‌ ನಡುವೆ ಏನ್‌ ಆಗಿದೆಯೋ ಗೊತ್ತಿಲ್ಲ, ಆದರೆ ಬಿಗ್‌ಬಾಸ್‌ ಮನೆಯೊಳಗಡೆ ಪ್ರಶಾಂತ್‌ ಸಂಬರಗಿ ಮತ್ತು ಚಕ್ರವರ್ತಿ ಚಂದ್ರಚೂಡ್‌ ಸ್ನೇಹಿತರಂತೆಯೇ ಇದ್ದರು. ಇದಾಗಿ ಅಲ್ಲಿಂದ ಚಕ್ರವರ್ತಿ ಚಂದ್ರಚೂಡ್‌ ಹೊರ ಬಂದ ನಂತರ, ಚಂದ್ರಚೂಡ್‌ ಸಿನಲಹರಿ ಜತೆಗೆ ಮಾತನಾಡುತ್ತಾ, ಬಿಗ್‌ ಬಾಸ್‌ ಮುಗಿಲಿ, ಪ್ರಶಾಂತ್‌ ಸಂಬರಗಿ ಅವರನ್ನು ಸುಮ್ಮನೆ ಬಿಡೋದಿಲ್ಲ ಎಂದಿದ್ದರು. ಅದು ಯಾವ ಕಾರಣಕ್ಕೋ ಗೊತ್ತಿಲ್ಲ. ಈಗ ಮಾತ್ರ ಇಬ್ಬರ ನಡುವೆ ಯುದ್ದ ಶುರುವಾಗಿದೆ. ಸದ್ಯಕ್ಕೆ ಇದು ಮಾತಿನ ಸಮರಕ್ಕೆ ಸಿಮೀತವಾಗಿದೆ. ಮುಂದಿನ ದಿನಗಳಲ್ಲಿ ಏನಾಗುತ್ತೋ ಗೊತ್ತಿಲ್ಲ.

Related Posts

error: Content is protected !!