Categories
ಸಿನಿ ಸುದ್ದಿ

ಸಲಗನಿಗೆ ಸಂತೋಷದಲ್ಲಿ ಸಂಭ್ರಮ; ಕೋಟಿಗೊಬ್ಬನಿಗೆ ನರ್ತಕಿಯ ಸ್ವಾಗತ!

ಹೆಂಗೆ ನಾವು, ಹೆಂಗೆ ಹೆಂಗೆ ನಾವು ಅಂತ ಸ್ಟಾರ್‌ಗಳಿಬ್ಬರು ಹೇಳ್ತಿದ್ದಾರೋ ಇಲ್ಲವೋ ಗೊತ್ತಿಲ್ಲ. ಆದರೆ, ಸ್ಯಾಂಡಲ್‌ವುಡ್‌ನ ಈ ಇಬ್ಬರು ಸೂಪರ್‌ಸ್ಟಾರ್‌ಗಳನ್ನು ತಲೆಮೇಲೆ ಹೊತ್ತು ಮೆರೆಸೋಕೆ ಸಜ್ಜಾಗುತ್ತಿರುವ ಹಾಗೂ ಒಂದೇ ಅಖಾಡದಲ್ಲಿರುವ ಸಂತೋಷ್ ಮತ್ತು ನರ್ತಕಿ ಚಿತ್ರಮಂದಿರಗಳು ಮಾತ್ರ `ಹೆಂಗೆ ನಾವು ಹೆಂಗೆ ಹೆಂಗೆ ನಾವು’ ಅಂತ ಡೈಲಾಗ್ ಹೊಡೆದುಕೊಂಡು ಖುಷಿಪಡುತ್ತಿವೆ. ಅದಕ್ಕೆ ಕಾರಣ ಭರ್ತಿ ಒಂದೂವರೆ ವರ್ಷಗಳ ನಂತರ ಒಟ್ಟೊಟ್ಟಿಗೆ ಇಬ್ಬರು ಸ್ಟಾರ್‌ನಟರುಗಳನ್ನು ಚಿತ್ರಮಂದಿರಕ್ಕೆ ವೆಲ್‌ಕಮ್ ಮಾಡಿಕೊಳ್ಳುವಂತಹ ಅವಕಾಶ ಸಿಕ್ಕಿದೆ. ಅಟ್ ದಿ ಸೇಮ್ ಟೈಮ್ ಥಿಯೇಟರ್ ಮುಂದೆ ಹಬ್ಬದ ಸಂಭ್ರಮ ಹಾಗೂ ಹೌಸ್‌ಫುಲ್ ಆಗುವಂತಹ ಗಳಿಗೆಯನ್ನು ನೋಡಲಿಕ್ಕೆ ಎರಡು ಥಿಯೇಟರ್‌ಗಳು ಕಾತುರದಿಂದ ಕಾಯ್ತಿವೆ.

ಇಬ್ಬರು ಸೂಪರ್‌ಸ್ಟಾರ್‌ಗಳು ಒಟ್ಟಿಗೆ ಅಖಾಡಕ್ಕೆ ಇಳಿಯುತ್ತಿದ್ದಾರೆ ಅಂದ್ರೆ, ಇಬ್ಬರು ಸ್ಟಾರ್‌ನಟರ ಸಿನಿಮಾಗಳು ಒಂದೇ ದಿನ ಬಿಡುಗಡೆಯಾಗುತ್ತಿವೆ ಅಂದ್ರೆ, ಅದನ್ನು ಬಣ್ಣದ ಲೋಕದ ಭಾಷೆಯಲ್ಲಿ ಸ್ಟಾರ್‌ವಾರ್ ಅಂತಾನೇ ಹೇಳ್ತಾರೆ. ಸದ್ಯ ಸ್ಯಾಂಡಲ್‌ವುಡ್‌ನ ಇಬ್ಬರು ಸ್ಟಾರ್‌ನಟರ ಸಿನಿಮಾಗಳು ಏಕಕಾಲಕ್ಕೆ ಥಿಯೇಟರ್‌ಗೆ ಗ್ರ್ಯಾಂಡ್ ಎಂಟ್ರಿಕೊಡಲಿಕ್ಕೆ ಭರ್ಜರಿ ತಯ್ಯಾರಿ ನಡೆದಿದೆ. ಆ ಸಿನಿಮಾಗಳ ಬಗ್ಗೆ ನಿಮಗೀಗಾಗಲೇ ತಿಳಿದಿದೆ. ಅಭಿನಯ ಚಕ್ರವರ್ತಿಯ ಮೋಸ್ಟ್ ಎಕ್ಸ್ಪೆಕ್ಟೆಡ್ ಕೋಟಿಗೊಬ್ಬ-೩ ಹಾಗೂ ಬ್ಲಾಕ್ ಕೋಬ್ರಾ ದುನಿಯಾ ವಿಜಯ್ ಅವರ ಹೈವೋಲ್ಟೇಜ್ `ಸಲಗ’ ಚಿತ್ರಗಳ ಬಿಡುಗಡೆಗೆ ಕೌಂಟ್‌ಡೌನ್ ಶುರುವಾಗಿದೆ. ಆಯುಧ ಪೂಜೆಯ ದಿನದಂದೇ ಗಂಧದಗುಡಿಯ ನಾಯಕರಿಬ್ಬರು ಅಖಾಡಕ್ಕೆ ಧುಮ್ಕುತ್ತಿರುವುದರಿಂದ ಸ್ಟಾರ್‌ವಾರ್ ಜೋರಾಗಲಿದೆ, ಬಾಕ್ಸ್ಆಫೀಸ್ ಅಂಗಳದಲ್ಲಿ ಕಾದಾಟ ನಡೆಯಲಿದೆ ಎನ್ನುವುದು ಗಾಂಧಿನಗರದ ಪಿಎಚ್‌ಡಿ ಪಂಡಿತರ ಮಾತು.

ಒಂದು ವಾರ ಅಂತರದಲ್ಲಿ ಸ್ಟಾರ್‌ನಟರಿಬ್ಬರ ಚಿತ್ರಗಳು ಬಿಡುಗಡೆಯಾದ್ರೇನೇ ಬಿಗ್‌ ಸ್ಕ್ರೀನ್ ನಲ್ಲಿ ಪೈಪೋಟಿ ಶುರುವಾಗುತ್ತೆ, ಬಾಕ್ಸ್ಆಫೀಸ್ ಡಬ್ಬದಲ್ಲಿ ತಿಕ್ಕಾಟ ಆರಂಭವಾಗುತ್ತೆ. ಅಂತ್ರದಲ್ಲಿ ಒಂದೇ ದಿನ ಮಾಸ್‌ಗೂ ಕ್ಲಾಸ್‌ಗೂ ಬಾಸ್‌ಗಳಾಗಿರುವ ಮಾಣಿಕ್ಯ ಹಾಗೂ ಜಯ್ಯಮ್ಮನ ಮಗ ಅಖಾಡಕ್ಕೆ ಇಳಿಯುತ್ತಾರೆ ಅಂದ್ರೆ ಸಹಜವಾಗಿ ನೆಕ್ ಟು ನೆಕ್ ಫೈಟ್‌. ಸ್ಟಾರ್ಟ್ ಆಗುತ್ತೆ. ಚಿತ್ರಮಂದಿರಗಳು ಹಂಚಿಕೆಯಾಗುತ್ತವೆ, ಬಾಕ್ಸ್ಆಫೀಸ್ ಮಂಕಾಗುತ್ತದೆ. ಇದರೊಟ್ಟಿಗೆ ಫ್ಯಾನ್ಸ್ ಫ್ಯಾನ್ಸ್ ನಡುವೆ ಸಣ್ಣಗೆ ಕಿಡಿ ಹೊತ್ತಿಕೊಳ್ಳುತ್ತದೆ. ನಮ್ಮ ಬಾಸ್ ಫಸ್ಟ್, ನಿಮ್ಮ ಬಾಸ್ ನೆಕ್ಸ್ಟ್, ನಮ್ಮ ಬಾಸ್ ಸಿನಿಮಾ ಇಷ್ಟು ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿದೆ, ನಿಮ್ಮ ಬಾಸ್ ಸಿನಿಮಾ ಅಷ್ಟೇ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿದೆ. ಹೀಗೆ ಏನೇನೋ ಮಾತನಾಡಿಕೊಳ್ಳುತ್ತಾ ಸುಖಾಸುಮ್ಮನೇ ಕಾದಾಟಕ್ಕೆ ರೆಡಿಯಾಗ್ತಾರೆ. ಸ್ಟಾರ್‌ಗಳ ಮಧ್ಯೆ ವಾರ್ ಶುರುವಾಗದೇ ಹೋದ್ರೂ ಕೂಡ ಫ್ಯಾನ್ಸ್ ವಾರ್ ಜೋರಾಗುತ್ತೆ.

ಇದ್ಯಾವುದು ಆಗ್ಬಾರ್ದು, ನಮ್ಮನಮ್ಮವರ ಮಧ್ಯೆ ಯಾವ ಯುದ್ದವೂ ನಡಿಯಬಾರ್ದು ಎನ್ನುವುದೇ ಎಲ್ಲರ ಆಶಯ. ಈ ಹಿನ್ನಲೆಯಲ್ಲಿ ಸಿನಿಲಹರಿ ತಂಡ `ಸಲಗ’ ಚಿತ್ರದ ನಿರ್ಮಾಪಕ ಕೆ. ಪಿ ಶ್ರೀಕಾಂತ್ ಅವರನ್ನು ಸಂಪರ್ಕ ಮಾಡಿದಾಗ ಅವರು ಹೇಳಿದ್ದಿಷ್ಟು. ನಿಜಕ್ಕೂ ಇದು ಸ್ಟಾರ್‌ವಾರ್ ಅಂತ ಪರಿಗಣಿಸಬೇಡಿ. ನಮ್ಮ ನಮ್ಮ ನಡುವೆ ಯಾವುದೇ ವೈಮನಸ್ಸು ಇಲ್ಲ, ಒಂದೇ ದಿನ ರಿಲೀಸ್ ಮಾಡ್ಲೆಬೇಕು ಎನ್ನುವ ಹಠಕ್ಕೂ ನಾವು ಬಿದ್ದಿಲ್ಲ. ಅಷ್ಟಕ್ಕೂ ಗಂಧದಗುಡಿಯಲ್ಲಿ ಹೆಲ್ದಿ ಕಾಂಪಿಟೇಷನ್ ಇದೆ ಬಿಟ್ರೆ ಈ ವಾರ್ ಗೀರ್ ಎಂತಹದ್ದು ಇಲ್ಲ ಎಂದರು. ಜೊತೆಗೆ ಹಬ್ಬದ ಸೀಸನ್‌ಗಳು ಬಂದಾಗ ಸ್ಟಾರ್‌ಗಳು ಅಖಾಡಕ್ಕೆ ಇಳಿಯೋದು ಸಹಜ. ನಮ್ಮ ಸ್ಟಾರ್‌ಗಳ ನಡುವೆ ಪರಭಾಷಾ ಸ್ಟಾರ್‌ಗಳು ಕೂಡ ಫೀಲ್ಡಿಗಿಳಿಯುತ್ತಾರೆ. ಆದರೆ, ಈ ಭಾರಿ ದಸರಾ ಹಬ್ಬಕ್ಕೆ ಪರಭಾಷಾ ಸಿನಿಮಾಗಳು ಬಿಡುಗಡೆಯಾಗುತ್ತಿಲ್ಲ. ಪ್ರತಿವರ್ಷ ಬೇರೆ ಭಾಷೆಯ ಚಿತ್ರಗಳೊಟ್ಟಿಗೆ ನಮ್ಮ ಭಾಷೆಯ ಚಿತ್ರಗಳು ಬಾಕ್ಸ್ಆಫೀಸ್ ಅಂಗಳದಲ್ಲಿ ಸೆಣಸಾಡಬೇಕಿತ್ತು. ಆದರೆ, ಈ ಭಾರಿ ಅಂತದ್ದೇನಿಲ್ಲ ನಮ್ಮ ಭಾಷೆಯ ಸಿನಿಮಾಗಳದ್ದೇ ಬೆಳ್ಳಿತೆರೆ ಹಾಗೂ ಬಾಕ್ಸ್ಆಫೀಸ್ ಅಖಾಡದಲ್ಲಿ ಅಬ್ಬರ ಅಂದರು.‌

`ಸಲಗ’ ನಿರ್ಮಾಪಕರ ಮಾತು ಹಂಡ್ರೆAಡ್ ಪರ್ಸೆಂಟ್ ನಿಜ. ಪರಭಾಷೆಯ ಸಿನಿಮಾಗಳು ಈ ಭಾರಿಯ ದಸರಾ ಹಬ್ಬಕ್ಕೆ ರಿಲೀಸ್ ಆಗದೇ ಇರೋದ್ರಿಂದ ಕನ್ನಡ ಸಿನಿಮಾಗಳಿಗೆ ಪ್ಲಸ್ ಆಗುತ್ತೆ. ಬಯಸಿದಷ್ಟು ಚಿತ್ರಮಂದಿರಗಳು ಸಿಗುತ್ತವೆ. ರಾಜ್ಯಾದ್ಯಂತ ಅವರಿಷ್ಟದ ಥಿಯೇಟರ್‌ಗಳಲ್ಲೇ ಸಿನಿಮಾನ ರಿಲೀಸ್ ಮಾಡ್ಬೋದು. ಹೀಗಾಗಿಯೇ ಸಲಗ ಚಿತ್ರತಂಡ ಆಯುಧ ಪೂಜೆಗೆ ಬಿಡುಗಡೆ ಮಾಡಿಯೇ ತೀರುತ್ತೇವೆ ಎಂದಿದ್ದಾರೆ. ಸಂತೋಷ್ ಚಿತ್ರಮಂದಿರದಲ್ಲಿ ಸಲಗ ಆರ್ಭಟ ಶುರುವಾಗಲಿದೆ. ಅದೇ ದಿನ ನರ್ತಕಿಯಲ್ಲಿ ಕೋಟಿಗೊಬ್ಬ-೩ ಚಿತ್ರ ಭರ್ಜರಿಯಾಗಿ ಬಿಡುಗಡೆಯಾಗ್ತಿದೆ. ಒಂದೇ ಅಖಾಡದಲ್ಲಿ ಎರಡು ಚಿತ್ರಮಂದಿರಗಳು ಇರೋದ್ರಿಂದ ಪೈಪೋಟಿ ಏಳಬಹುದು. ಆದರೆ, ಇಬ್ಬರು ಸ್ಟಾರ್‌ನಟರುಗಳಿಗೆ ಅವರದ್ದೇ ಆದ ಫ್ಯಾನ್ ಫಾಲೋಯಿಂಗ್ ಇರೋದ್ರಿಂದ ಥಿಯೇಟರ್ ಅಂತೂ ಹೌಸ್‌ಫುಲ್ ಆಗುತ್ತೆ ಅದರಲ್ಲಿ ನೋಡೌಟ್.

ಒಂದ್ವೇಳೆ ಯಾರಾದ್ರೂ ಒಬ್ಬರು ಹಿಂದೆಸರಿದಿದ್ದರೆ, ಒಂದು ಚಿತ್ರತಂಡ ದೊಡ್ಡ ಮನಸ್ಸು ಮಾಡಿ ಮುಂದಿನ ವಾರ ಬರೋಣ ಬಿಡು ಎಂದು ತೀರ್ಮಾನಿಸಿದ್ದರೆ, ಥಿಯೇಟರ್ ಹೌಸ್‌ಫುಲ್ ಆಗೋದ್ರ ಜೊತೆಗೆ ಮತ್ತೊಂದು ಶೋಗೆ ಆಗುವಷ್ಟು ಜನ ಹೊರಗಡೆ ನಿಂತಿರುತ್ತಿದ್ದರು. ಕನ್ನಡ ಸಿನಿಮಾ ಪ್ರೇಕ್ಷಕರೆಲ್ಲರೂ ಕೂಡ ಚಿತ್ರಮಂದಿರದತ್ತ ದೌಡಾಯಿಸಿ ಬಾಕ್ಸ್ಆಫೀಸ್‌ನಲ್ಲಿ ಒಳ್ಳೆಯ ಕಮಾಯಿ ಮಾಡಿಕೊಡುತ್ತಿದ್ದರು. ಆದರೆ, ಸಲಗ ಹಾಗೂ ಕೋಟಿಗೊಬ್ಬ-3 ಎರಡು ಕೂಡ ಬಹುನಿರೀಕ್ಷೆಯ ಸಿನಿಮಾಗಳಾಗಿರೋದ್ರಿಂದ, ಎರಡು ಚಿತ್ರಗಳನ್ನು ಫಸ್ಟ್ ಡೇ ಫಸ್ಟ್ ಶೋನೇ ನೋಡಬೇಕಾಗಿರೋದ್ರಿಂದ ಕನ್ನಡ ಪ್ರೇಕ್ಷಕರು ಡಿವೈಡ್ ಆಗ್ತಾರೆ. ಇದ್ರಿಂದ ಒಂದು ಚಿತ್ರತಂಡಕ್ಕೆ ಅಲ್ಲ ಬದಲಾಗಿ ಎರಡು ಚಿತ್ರತಂಡಕ್ಕೂ ಕೊಂಚ ನಷ್ಟವೇ. ಅದನ್ನು ಯಾರು ತುಂಬಿಕೊಡುವುದಕ್ಕೆ ಆಗಲ್ಲ ಯಾಕಂದ್ರೆ ಅದು ಅವರಿಬ್ಬರೇ ತೆಗೆದುಕೊಂಡಿರುವ ಡಿಸೈಡ್ ಅಲ್ಲವೇ.

ವಿಶಾಲಾಕ್ಷಿ ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಅವಕಾಶ ಸಿಗಲಿಲ್ಲ ಅಂದ್ರೆ ಆ ನಟಿಗೆ ಆತ್ಮಹತ್ಯೆಯೇ ಪರಿಹಾರ ಆಗಬೇಕಿತ್ತಾ?

ಬೆಳೆದ ಬೆಳೆ ಬರಲಿಲ್ಲ ಅಂತನೋ, ಬೆಳೆದ ಬೆಳೆಗೆ ನ್ಯಾಯಯುತ ಬೆಲೆ ಸಿಗಲಿಲ್ಲ ಅಂತಲೋ ಇಲ್ಲಿ ರೈತರ ಅತ್ಮಹತ್ಯೆ ನಡೆದಿವೆ. ಕಾರ್ಮಿಕರು ಕಾರ್ಖಾನೆ ಮುಚ್ಚಿ ತಮಗೆ ಕೆಲಸ ಇಲ್ಲದಂತಾಗಿದೆ ಅಂತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪಡೆದ ಸಾಲ ತೀರಿಸಲಾಗದೆ ಅದೆಷ್ಟೋ ಬಡ ಕುಟುಂಬಗಳು ಕೂಡ ಅತ್ಮಹತ್ಯೆ ಮಾಡಿಕೊಂಡಿವೆ.ಹಾಗೆಯೇ ಪರೀಕ್ಷೆಯಲ್ಲಿ ಫೇಲಾದೆ ಅಂತಲೋ, ಒಳ್ಳೆಯ ಅಂಕಬಂದಿಲ್ಲೋ ಅಂತಲೋ ಬೆಳೆಯಬೇಕಿದ್ದ ವಿದ್ಯಾರ್ಥಿಗಳು ಕೂಡ ನೇಣಿಗೆ ಶರಣಾಗಿದ್ದಾರೆ. ವರದಕ್ಷಿಣೆ ಕಿರುಕುಳ ತಾಳಲಾರದೆ ಅದೆಷ್ಟೋ ವಿವಾಹಿತ ಹೆಣ್ಣು ಮಕ್ಕಳು ತವರಿಗೆ ಬಾರಲಾರದೆ ಸ್ಮಶಾನದ ಪಾಲಾಗಿದ್ದಾರೆ. ಆದರೂ ಸಮಾಜ ಯಾವುದನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ. ಬದಲಿಗೆ ಅವೆಲ್ಲ ಪ್ರಕರಣಗಳಿಗೆ ಇನ್ನಾವುದೋ ಕಾರಣ ಸೇರಿಸಿ, ಅರ್ಥಕ್ಕೆ ಅಪಾರ್ಥ ಬರುವಂತೆಯೇ ಮಾಡಿದೆ. ಹಾಗಾಗಿ ಆತ್ಮಹತ್ಯೆಗಳ ಹಿಂದಿನ ನಿಜ ಕಾರಣಗಳು ಇಲ್ಲಿಮಣ್ಣು ಪಾಲಾಗಿ, ಯಾರಿಗೂ ನ್ಯಾಯ ಸಿಕ್ಕಿಲ್ಲ ಎನ್ನುವ ಕಟು ಸತ್ಯದ ನಡುವೆಯೇ ಕನ್ನಡದ ನಟಿಯೊಬ್ಬಳು ನಟಿಸಲು ಅವಕಾಶ ಸಿಗದೆ ಅತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ವರದಿ ಆಗಿದೆ.

ಆಕೆಯ ಹೆಸರು ಸೌಜನ್ಯ ಅಲಿಯಾಸ್ ಸವಿ ಮಾದಪ್ಪ. ಕೊಡಗು ಮೂಲದ ನಟಿ. ಒಂದೆರೆಡು ಸಿನಿಮಾಗಳಲ್ಲೂ ಅಭಿನಯಿಸಿದ್ದಳಂತೆ. ಈಗೀಗ ನಟಿಸಲು ಅವಕಾಶ ಸಿಗದೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಹೇಳಲಾಗಿದೆ. ಇದು ಬಿಟ್ಟರೆ ಇನ್ನೇನೋ ಕಾರಣವೂ ಇರಬಹುದು. ಅಥವಾ ಅದೇನಿಜವಾದ ಕಾರಣವೇ ಇರಬಹುದು. ಇರಲಿ, ಆಕೆ ಅವಕಾಶ ಸಿಗದ ಕಾರಣಕ್ಕಾಗಿಯೇ ಆತ್ಮಹತ್ಯೆ ಮಾಡಿಕೊಂಡಿ ದ್ದಾಳೆನ್ನುವುದೇ ನಿಜವಾಗಿದ್ದರೂ, ಚಿತ್ರರಂಗ ಅದನ್ನು ಗಂಭೀರವಾಗಿ ಪರಿಗಣಿಸುತ್ತೆ ಅಂತ ನಮಗೇನು ಅನಿಸೋದಿಲ್ಲ. ಯಾಕಂದ್ರೆ ಈ ಚಿತ್ರರಂಗವೂ ಸೇರಿ ಈ ಕಟ್ಟ ಸಮಾಜದ ಆಲೋಚನೆಗಳೇ ಬೇರೆ. ವಿವಾಹಿತವೋ ಅಥವಾ ಅವಿವಾಹಿತವೋ ವಯಸ್ಸಿನ ಒಂದು ಹುಡುಗಿ ಆತ್ಮಹತ್ಯೆ ಮಾಡಿಕೊಂಡಳು ಅಂದ್ರೆ ಸಮಾಜದಲ್ಲಿ ಮೊದಲು ಕೇಳಿ ಬರುವ ಮಾತೇ ಆಕೆಯ ಇತರೆ ರಿಲೇಷನ್ ಶಿಫ್ ಗಳ ಬಗ್ಗೆ. ಇದೇ ಮಾತು ಚಿತ್ರರಂಗಕ್ಕೂಅನ್ವಯವೇ ಹೌದು.

ಈ ವಾಸ್ತವ ಸಿನಿಮಾ ರಂಗಕ್ಕೆ ಹೊಸದಾಗಿ ಬರುವ ಪ್ರತಿಭೆಗಳಿಗೆ ಗೊತ್ತಿರಲಿ. ಹೋದವರು ಹೋದರಷ್ಟೇ ಅಂತಲೇ ನೋಡುತ್ತೆ ಈ ವ್ಯವಸ್ಥೆ. ಇನ್ನು ಹೊಸಪ್ರತಿಭೆಗಳನ್ನು ಚಿತ್ರೋದ್ಯಮ ನೋಡುವ ರೀತಿಯೇ ಇಲ್ಲಿ ವಿಚಿತ್ರ. ಹೊಸಪ್ರತಿಭೆಗಳು ಇಲ್ಲಿ ಒಂದು ಅವಕಾಶ ಪಡೆಯಬೇಕಾದರೆ ಸಿಕ್ಕಾಪಟ್ಟೆ ಸರ್ಕಸ್ ಮಾಡ್ಬೇಕು. ನಿರ್ಮಾಪಕರು, ನಿರ್ದೇಶಕರ ಮನೆ ಬಾಗಿಲಿಗೆ ತಿರುಗಬೇಕು. ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಅವರ ಆಸೆ- ಆಕಾಂಕ್ಷೆಗಳನ್ನು ಈಡೇರಿಸಬೇಕು. ಅಂತಹದರಲ್ಲಿ ಒಂದು ಅವಕಾಶ ಸಿಕ್ಕರೂ, ಅದರಲ್ಲಿಯೇ ಇಲ್ಲಿ ನೆಲೆ ಕಂಡುಕೊಳ್ಳುವುದು ಅಷ್ಟೇನು ಸುಲಭ ಇಲ್ಲ. ಅದೊಂಥರ ಅದೃಷ್ಟದಾಟ. ಅಂತಹದರಲ್ಲಿ ಅವಕಾಶಕ್ಕಾಗಿ ಅದೆಷ್ಟು ಹೊಸ ಪ್ರತಿಭೆಗಳು, ಇಲ್ಲಿಗೆ ಬಂದು ವಾಪಾಸ್ ಹೋಗಿವೆಯೋ ಗೊತ್ತಿಲ್ಲ. ಆದರೆ ಅವರೆಲ್ಲ ಮನನೊಂದು ಆತ್ಮಹತ್ಯೆ ಮಾಡಿಕೊಂಡಿಲ್ಲ.ಈ ಹುಡುಗಿ ಮಾತ್ರ, ಬದುಕೋದಿಕ್ಕೆಆಗುತ್ತಿಲ್ಲ ಅಂತ ಮತ್ತೆ ಬಾರದ ಲೋಕಕ್ಕೆಪಯಣ ಬೆಳೆಸಿಬಿಟ್ಟಿದ್ದಾಳೆ. ಪಾಪಾ, ಆಕೆಯ ಅಪ್ಪ- ಅಮ್ಮ ಕುಟುಂಬ ಅದೆಷ್ಟು ನೊಂದಿದೆಯೋ, ಇಂತಹ ಸ್ಥಿತಿ ಇನ್ನಾರಿಗೂ ಇಲ್ಲಿ ಬರುವುದು ಬೇಡ . ಯಾಕಂದ್ರೆ, ಅವಕಾಶ ಸಿಕ್ಕಿಲ್ಲ ಮನನೊಂದರೆ ಅದಕ್ಕೆ ಆತ್ಮಹತ್ಯೆಯೇ ಪರಿಹಾರ ಅಲ್ಲ. ಹೊಸ ದಾರಿ, ಅವಕಾಶಗಳ ಕಡೆಗೆ ಆಲೋಚಿಸಬೇಕು, ಸಿಕ್ಕರೆ ಅಲ್ಲಿಗೆ ಜಂಪ್ ಆಗಬೇಕು.

ನಿಜ, ಚಿತ್ರೋದ್ಯಮ ಇವತ್ತು ಅನೇಕ ಬಿಕ್ಕಟ್ಟು ಗಳ ನಡುವಿದೆ. ಅನೇಕ ಲೋಪದೋಷಗಳನ್ನು ತುಂಬಿಕೊಂಡಿದೆ. ಹೊಸಬರು ಅವಕಾಶಕ್ಕೆ ಪರದಾಡುವ ಪರಿಸ್ಥಿತಿಯೂ ಇಲ್ಲಿದೆ. ಬಿದ್ದವರಿಗೆ ಇಲ್ಲಿ ಅವಮಾನ, ಅಪಮಾನ, ನಿಂದನೆ ಇದ್ದೆ ಇದೆ. ಅವೆಲ್ಲವನ್ನು ಸಹಿಸೋದಿಕ್ಕೆ ಆಗುತ್ತಿಲ್ಲ ಅಂದ್ರೆ ಹೊಸ ಪ್ರತಿಭೆಗಳಿಗೆ ಇನ್ನೇನೋ ಹೊಸ ಕೆಲಸ ಹುಡುಕುವತ್ತ ಬೇರೆಯವರು ಪ್ರೇರಣೆ ಆಗಲಿ. ಅದು ಬಿಟ್ಟು ಆತ್ಮಹತ್ಯೆ ಯೇ ಪರಿಹಾರ ಅಂತಂದುಕೊಂಡರೆ, ರೈತರ ಆತ್ಮಹತ್ಯೆಗಳ ಹಾಗೆ ಇಲ್ಲೂ ಸರಣಿ ಆತ್ಮಹತ್ಯೆ ಗಳು ನಡೆದು ಹೋದವಾ? ಸಮಾಜ ಕೂಡ ತನ್ನ ಮನಸ್ಥಿತಿ ಬದಲಾಯಿಸಿಕೊಳ್ಳಲಿ, ನಡೆಯಬಾರದ ಆತ್ಮಹತ್ಯೆಗಳು ನಡೆದು ಹೋದಾಗ, ಅವುಗಳಿಗೆ ಇನ್ನಾವುದೋ ಕಾರಣದ ಗಾಳಿ ಸುದ್ದಿ ಹರಿಬಿಟ್ಟು, ಅವರ ಕುಟುಂಬದವರನ್ನು ನೋಯಿಸುವುದು ಕೈ ಬಿಡಬೇಕು. ಹಾಗೆಯೇ ಯಾವಾವುದೋ ಕನಸು ಹೊತ್ತು ಸಿನಿಮಾರಂಗಕ್ಕೆ ಬರುವ ಯುವ ಮನಸ್ಸು ಗಳು ಬಂದು ಹತಾಸೆ ಸಿಲುಕದಂತೆನೋಡಿಕೊಳ್ಳಬೇಕಿದೆ. ಹಾಗೆಯೇ ಎಲ್ಲೋ ಒಂದು ಅವಕಾಶ ಸಿಕ್ಕಿತು ಅಂತ ಬಣ್ಣದ ಜಗತ್ತಿಗೆ ಬರುವ ಯುವ ಜನರು ಕೂಡ, ಭ್ರಮೆಯಿಂದ ಹೊರ ಬಂದು ಇಲ್ಲಿ ವಾಸ್ತವ ಲೋಕ ಏನೆಂದು ಅರ್ಥ ಮಾಡಿಕೊಳ್ಳಲಿ.
ಎಂಟರ್‌ ಟೈನ್‌ ಮೆಂಟ್‌ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಡೋಂಟ್ ಅಂಡರೆಸ್ಟಿಮೇಟ್ ಪ್ಲೀಸ್; ಆತ್ಮಹತ್ಯೆಗೆ ಮುನ್ನ ಸವಿ ಮಾದಪ್ಪ ಹೀಗಂದಿದ್ಯಾರಿಗೆ?

ಈ ನಟಿಮಣಿಯ ಮನಸನ್ನು ಹಿಂಸಿಸುತ್ತಿದ್ದ ಆ ನೋವೇನು? ಆ ಸಂಕಟವೇನು? ಅದ್ಯಾವ ಘಟನೆ ಈ ನಟಿಮಣಿಯನ್ನು ಘಾಸಿಗೊಳಿಸ್ತು? ಅದ್ಯಾವ ಘಟನೆ ಈಕೆಯನ್ನು ಆಘಾತಕ್ಕೆ ದೂಡ್ತು? ಈ ಜೀವನಾನೇ ಬೇಡ ಅಂತ ಈ ನಟಿ ಅದ್ಯಾಕೆ ನಿರ್ಧರಿಸಿದರು? ಸಾಯೋದಕ್ಕೆ ಇಷ್ಟವಿಲ್ಲ ಆದರೂ ಸತ್ತೆ ಸಾಯ್ತೀನಿ ಅಂತ ಅದ್ಯಾಕೆ ಕೊರಳಿಗೆ ನೇಣು ಕುಣಿಕೆಯನ್ನು ಸರಿದುಕೊಂಡ್ರು? ಡೆತ್‌ನೋಟ್ ಬರೆಯೋದಕ್ಕೂ ಆಗ್ತಿಲ್ಲ, ಆಗ್ತಿಲ್ಲ ಎನ್ನುತ್ತಲೇ, ಮೆಂಟಲಿ ಕೊರಗುತ್ತಲೇ ಅದ್ಯಾಕೆ ನಾಲ್ಕು ಪುಟಗುಳುಳ್ಳ ಡೆತ್‌ನೋಟ್‌ನ ಬರೆದು ಮುಗಿಸಿದರು? ಸಾಯೋದಕ್ಕೆ ದೊಡ್ಡ ಮನಸ್ಸು ಮಾಡಿದ ಈ ನಟಿ ಅದ್ಯಾಕೆ ಬದುಕೋದಕ್ಕೆ ಬಂಡ ಧೈರ್ಯ ಮಾಡಲಿಲ್ಲ?

ಚೌಕಟ್ಟು ಹಾಗೂ ಫನ್ ಸಿನಿಮಾದ ನಾಯಕಿ ಸೌಜನ್ಯ ಅಲಿಯಾಸ್ ಸವಿಮಾದಪ್ಪ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೆಂಗಳೂರು ದಕ್ಷಿಣ ಭಾಗದ ದೊಡ್ಡಬೆಲೆಯಲ್ಲಿ ಘಟನೆ ನಡೆದಿದ್ದು, ಕುಂಬಳಗೋಡು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೊಡಗು ಜಿಲ್ಲೆ ಕುಶಾಲನಗರ ಮೂಲದವರಾದ ಸೌಜನ್ಯ ಬೆಂಗಳೂರಿನ ದೊಡ್ಡಬೆಲೆ ಗ್ರಾಮದ ಅಪಾರ್ಟ್ಮೆಂಟ್‌ವೊಂದರಲ್ಲಿ ನೆಲೆಸಿದ್ದರು. ಇಂದು ಬೆಳಗ್ಗೆ ಅಪಾರ್ಟ್ಮೆಂಟ್‌ನಲ್ಲಿ ಸೂಸೈಡ್ ಮಾಡಿಕೊಂಡು ಉಸಿರು ಚೆಲ್ಲಿದ್ದಾರೆ. ನಟಿಯ ಮೃತದೇಹದ ಬಳಿ ಡೆತ್‌ನೋಟ್ ಪತ್ತೆಯಾಗಿದ್ದು ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಸೌಜನ್ಯ ಅಲಿಯಾಸ್ ಸವಿಮಾದಪ್ಪ ಗೀಚಿಟ್ಟಿರುವ ಡೆತ್‌ನೋಟ್ ಎನ್ನಲಾದ ನಾಲ್ಕು ಪುಟಗಳುಳ್ಳ ಡೆತ್‌ನೋಟ್‌ನಿಂದ ಹಲವು ಅಂಶಗಳು ಬೆಳಕಿಗೆ ಬಂದಿವೆ. ಆತ್ಮಹತ್ಯೆ ಮಾಡಿಕೊಳ್ಳುವದಕ್ಕೆ ಮೂರು ದಿನದ ಮುಂಚಿತವಾಗಿಯೇ ಡೆತ್‌ನೋಟ್ ಬರೆಯಲು ಆರಂಭಿಸಿದ್ದರಂತೆ. ಮೊದಲ ಪುಟ ೨೭ರಂದು ಬರೆದಿದ್ದು, ಕೊನೆಯ ಪುಟವನ್ನು ಇಂದು ಬೆಳಗ್ಗೆ ಅಂದ್ರೆ ೩೦ನೇ ತಾರೀಖ್‌ನಂದು ಬರೆದಿದ್ದಾರಂತೆ.ನನ್ನ ಸಾವಿಗೆ ನಾನೇ ಕಾರಣ ಅಪ್ಪ-ಅಮ್ಮ ದಯವಿಟ್ಟು ಕ್ಷಮಿಸಿ ಬಿಡಿ ಎಂದಿರುವ ನಟಿ ಸವಿಮಾದಪ್ಪ, ಸಾಯೋದಕ್ಕೆ ಇಷ್ಟವಿಲ್ಲ ಹಾಗಂತ ಬದುಕೋದಕ್ಕೆ ಆಗ್ತಿಲ್ಲ. ಆರೋಗ್ಯ ಚೆನ್ನಾಗಿಲ್ಲ ಎನ್ನುವುದಕ್ಕಿಂತ ಜೀವನದಲ್ಲಿ ತೀರಾ ನೊಂದುಬಿಟ್ಟಿದ್ದೇನೆ. ಹೀಗಾಗಿ, ಬದುಕೋದಕ್ಕೆ ಕಷ್ಟವಾಗ್ತಿದೆ ಎಂದು ಡೆತ್‌ನೋಟ್ ಬರೆದಿಟ್ಟು ನೇಣಿಗೆ ಕೊರಳೊಡ್ಡಿದ್ದಾರೆ ಎನ್ನಲಾಗ್ತಿದೆ.

ಅಷ್ಟಕ್ಕೂ, ಪೊಲೀಸರ ಕೈಗೆ ಲಭ್ಯವಾಗಿರುವ ಈ ಡೆತ್‌ನೋಟ್ ನಿಜಕ್ಕೂ ನಟಿ ಸವಿಮಾದಪ್ಪ ಅವರೇ ಬರೆದಿದ್ದಾ ಅಥವಾ ಈ ನಟಿಯ ಆತ್ಮಹತ್ಯೆಯ ಹಿಂದೆ ಯಾರದ್ದಾದರೂ ಕೈವಾಡವಿದೆಯಾ ಗೊತ್ತಿಲ್ಲ? ಈಗಷ್ಟೇ ಪೊಲೀಸರ ತನಿಖೆ ಆರಂಭಗೊಂಡಿದೆ. ನಟಿಯ ಪೋಷಕರು ಈಕೆಯ ಬರವಣಿಗೆಯ ಅಕ್ಷರಗಳನ್ನು ಐಡೆಂಟಿಫೈ ಮಾಡಿದರೆ, ಅಥವಾ ನಟಿ ಈ ಹಿಂದೆ ಯಾವುದಾದರೂ ಪುಸ್ತಕದಲ್ಲಿ ಅಕ್ಷರಗಳನ್ನು ಗೀಚಿಟ್ಟಿದ್ದರೆ ಫೈಂಡ್‌ಔಟ್ ಮಾಡೋದಕ್ಕೆ ಈಸಿಯಾಗುತ್ತದೆ ಅದೇ ಹಾದಿಯಲ್ಲಿ ಖಾಕಿ ಪಡೆಯ ತನಿಖೆ ಸಾಗುತ್ತಿದೆ.

ಅಚ್ಚರಿ ಅಂದ್ರೆ ಕಳೆದ ಎರಡು ದಿನಗಳ ಹಿಂದೆ ನಟಿ ಸವಿಮಾದಪ್ಪ ಅವರು ಇನ್ಸ್ ಟಾಗ್ರಾಮ್‌ನಲ್ಲಿ ಕೆಲವೊಂದು ಪೋಸ್ಟ್ಗಳನ್ನು ಹಾಕಿದ್ದಾರೆ. ಅದರಲ್ಲಿ, ಇದೊಂದು ಪೋಸ್ಟ್ ನೋಡುಗರನ್ನು ಬಹುವಾಗಿ ಕಾಡುತ್ತೆ. ಹೌದು, `ನೆವರ್ ಅಂಡರೆಸ್ಟಿಮೇಟ್ ಎನಿವನ್’ ಯಾಕಂದ್ರೆ, ಫನ್ನಿ ಎನಿಸುವ ವ್ಯಕ್ತಿಗಳ ಜೀವನದಲ್ಲೂ ನೋವಿನ ಕಥೆ ಇರುತ್ತೆ ಅದು ಯಾರಿಗೂ ಗೊತ್ತಿರುವುದಿಲ್ಲ ಅಷ್ಟೇ. ಹೀಗಂತ ಬರೆದು ಕೆಫೆ ಕಾಫಿ ಡೇ ಮುಂದೆ ನಿಂತು ಕ್ಲಿಕಿಸಿಕೊಂಡಿರುವ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ನಟಿ ಸವಿಯವರ ಈ ಟ್ವೀಟ್ ಗಮನಿಸಿದರೆ ಇವರ ಜೀವನದಲ್ಲೂ ಯಾರಿಗೂ ಹೇಳಿಕೊಳ್ಳದಂತಹ, ಯಾರಿಗೂ ತಿಳಿಯದಂತಹ ನೋವು ಮನಸ್ಸನ್ನು ಹಿಂಡಿ ಹಿಂಸೆ ಮಾಡುತ್ತಿತ್ತು ಎನಿಸುತ್ತೆ.

ಅಷ್ಟಕ್ಕೂ, ಈ ನಟಿಮಣಿಯ ಮನಸನ್ನು ಹಿಂಸಿಸುತ್ತಿದ್ದ ಆ ನೋವೇನು? ಆ ಸಂಕಟವೇನು? ಅದ್ಯಾವ ಘಟನೆ ಈ ನಟಿಮಣಿಯನ್ನು ಘಾಸಿಗೊಳಿಸ್ತು? ಅದ್ಯಾವ ಘಟನೆ ಈಕೆಯನ್ನು ಆಘಾತಕ್ಕೆ ದೂಡ್ತು? ಈ ಜೀವನಾನೇ ಬೇಡ ಅಂತ ಈ ನಟಿ ಅದ್ಯಾಕೆ ನಿರ್ಧರಿಸಿದರು? ಸಾಯೋದಕ್ಕೆ ಇಷ್ಟವಿಲ್ಲ ಆದರೂ ಸತ್ತೆ ಸಾಯ್ತೀನಿ ಅಂತ ಅದ್ಯಾಕೆ ಕೊರಳಿನೆ ನೇಣು ಕುಣಿಕೆಯನ್ನು ಸರಿದುಕೊಂಡ್ರು? ಡೆತ್‌ನೋಟ್ ಬರೆಯೋದಕ್ಕೂ ಆಗ್ತಿಲ್ಲ, ಆಗ್ತಿಲ್ಲ ಎನ್ನುತ್ತಲೇ, ಮೆಂಟಲಿ ಕೊರಗುತ್ತಲೇ ಅದ್ಯಾಕೆ ನಾಲ್ಕು ಪುಟಗುಳುಳ್ಳ ಡೆತ್‌ನೋಟ್‌ನ ಬರೆದು ಮುಗಿಸಿದರು? ಸಾಯೋದಕ್ಕೆ ದೊಡ್ಡ ಮನಸ್ಸು ಮಾಡಿದ ಈ ನಟಿ ಅದ್ಯಾಕೆ ಬದುಕೋದಕ್ಕೆ ಬಂಡ ಧೈರ್ಯ ಮಾಡಲಿಲ್ಲ? ಈ ಯಾವ ಪ್ರಶ್ನೆಗೂ ಸದ್ಯಕ್ಕೆ ಉತ್ತರವಿಲ್ಲ. ಪೊಲೀಸ್ ತನಿಖೆ ಆಗ್ಬಹುದು? ಕಾರಣ ಇದೇ ಅಂತ ಷರಾ ಬರೆದು ಪತ್ರದ ಮೂಲಕ ತಿಳಿಸಬಹುದು. ಆದರೆ, ಉಸಿರು ಚೆಲ್ಲಿದ ನಟಿ ಮತ್ತೆ ಬರುವುದಿಲ್ಲ, ಹೆತ್ತವರ ಕ್ಷಣಕ್ಷಣಕ್ಕೂ ಹೊಟ್ಟಗೆ ಬೆಂಕಿ ಹಾಕಿಕೊಂಡು ಮರುಗುವುದು ನಿಲ್ಲಲ್ಲ. ಆದರೂ, ಪೊಲೀಸ್ ತನಿಖೆಯಿಂದ ಯಾವ ಮಾಹಿತಿ ಹೊರಬೀಳುತ್ತೋ ಕಾದುನೋಡಬೇಕು.

ವಿಶಾಲಾಕ್ಷಿ, ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಡೆತ್‌ನೋಟ್ ಬರೆದಿಟ್ಟು ನೇಣಿಗೆ ಶರಣಾದ ಸ್ಯಾಂಡಲ್‌ವುಡ್‌ ನಟಿ-ಅವಕಾಶಗಳಿಲ್ಲದೇ ಮನನೊಂದಿದ್ದರಂತೆ ಸವಿ ಮಾದಪ್ಪ !?

ಸಿಕ್ಕ ಸಿಕ್ಕ ಪಾತ್ರಗಳನ್ನು ಒಪ್ಪಿಕೊಳ್ಳುವುದಕ್ಕಿಂತ ಸವಾಲಿನ ಪಾತ್ರಕ್ಕೆ ಜೀವ ತುಂಬುತ್ತೇನೆ ಎಂದಿದ್ದ ಸವಿಮಾದಪ್ಪ ಅವರು, ಅವಕಾಶ ಸಿಕ್ಕಿಲ್ಲ ಎನ್ನುವ ಕಾರಣಕ್ಕೆ ಸಾಯುವ ನಿರ್ಧಾರ ಮಾಡಿದ್ರಾ? ನಿಜಕ್ಕೂ ನಟಿ ಸವಿಮಾದಪ್ಪ ಸಾವಿನ ಹಿಂದೆ ಚಾನ್ಸ್ ಸಿಕ್ಕಿಲ್ಲ ಎನ್ನುವ ಕಾರಣ ಇದೆಯಾ ಅಥವಾ ಮೇಲ್ನೋಟಕ್ಕೆ ಕಂಡುಬರುತ್ತಿರುವ ಸತ್ಯವಾ ಪೊಲೀಸರ ತನಿಖೆಯಿಂದ ಬಯಲಾಗಬೇಕಿದೆ

ಕೂರ್ಗ್ ಚೆಲುವೆ, ಸ್ಯಾಂಡಲ್‌ವುಡ್‌ನ ಸುಂದರಿ ಸವಿಮಾದಪ್ಪ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನುವ ಸುದ್ದಿ ಲಭ್ಯವಾಗಿದೆ. ಅವಕಾಶಗಳಿಲ್ಲದೇ ಮನನೊಂದು ನೇಣಿಗೆ ಕೊರಳೊಡ್ಡಿದ್ದಾರೆನ್ನಲಾಗ್ತಿದೆ. ಚೌಕಟ್ಟು ಚಿತ್ರದ ಮೂಲಕ ನಟಿ ಸವಿಮಾದಪ್ಪ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದರು.

ಈ ಚಿತ್ರದ ನಿರ್ಮಾಪಕ ಮಂಜುನಾಥ್ ಅವ್ರನ್ನ ಸಿನಿಲಹರಿ ತಂಡ ಸಂಪರ್ಕ ಮಾಡಿದಾಗ, ಬಣ್ಣದ ಲೋಕದಲ್ಲಿ ಅವಕಾಶಗಳು ಕಡಿಮೆ ಆಯ್ತು ಎನ್ನುವ ಕಾರಣದಿಂದ ಸಾವಿಗೆ ಶರಣಾಗಿದ್ದಾರೆ ಎನ್ನುವ ಸುದ್ದಿ ನಮಗೆ ತಿಳಿದುಬಂದಿದೆ ಎಂದರು. ಸವಿಮಾದಪ್ಪ ಅವ್ರಿಗೆ ಚಿತ್ರರಂಗಕ್ಕೆ ಬರಲು ಅವರ ತಂದೆಯೇ ಪ್ರೇರಣೆಯಂತೆ. ಈ ಹಿಂದೆ ಸುದ್ದಿಗೋಷ್ಟಿಯಲ್ಲಿ ಖುದ್ದಾಗಿ ಹೇಳಿಕೊಂಡಿದ್ದರು. ದರ್ಶನ್ ಅಂದ್ರೆ ತುಂಬಾ ಇಷ್ಟ, ಅವರ ಸಿನಿಮಾಗಳನ್ನು ನೋಡಿಕೊಂಡು ಬೆಳೆದಿರುವುದಾಗಿ ತಿಳಿಸಿದ್ದರು.

ಚಿಕ್ಕಂದಿನಿಂದಲೂ ನಟನೆಯಲ್ಲಿ ತುಂಬಾ ಆಸಕ್ತಿಯಿದ್ದು, ಅಭಿನಯದ ಜೊತೆಗೆ ಸಿನಿಮಾಟೋಗ್ರಫಿ ಮಾಡುವ ಆಸಕ್ತಿಯಿದೆ ಎಂದಿದ್ದರು. ಸಿಕ್ಕ ಸಿಕ್ಕ ಪಾತ್ರಗಳನ್ನು ಒಪ್ಪಿಕೊಳ್ಳುವುದಕ್ಕಿಂತ ಸವಾಲಿನ ಪಾತ್ರಕ್ಕೆ ಜೀವ ತುಂಬುತ್ತೇನೆ ಎಂದಿದ್ದ ಸವಿಮಾದಪ್ಪ ಅವರು, ಅವಕಾಶ ಸಿಕ್ಕಿಲ್ಲ ಎನ್ನುವ ಕಾರಣಕ್ಕೆ ಸಾಯುವ ನಿರ್ಧಾರ ಮಾಡಿದ್ರಾ?

ನಿಜಕ್ಕೂ ನಟಿ ಸವಿಮಾದಪ್ಪ ಸಾವಿನ ಹಿಂದೆ ಚಾನ್ಸ್ ಸಿಕ್ಕಿಲ್ಲ ಎನ್ನುವ ಕಾರಣ ಇದೆಯಾ ಅಥವಾ ಮೇಲ್ನೋಟಕ್ಕೆ ಕಂಡುಬರುತ್ತಿರುವ ಸತ್ಯವಾ ಪೊಲೀಸರ ತನಿಖೆಯಿಂದ ಬಯಲಾಗಬೇಕಿದೆ.

Categories
ಸಿನಿ ಸುದ್ದಿ

ರಾಜನಿವಾಸದಲ್ಲಿ ನಿಂತ ಶ್ರೀನಗರ ಕಿಟ್ಟಿ- ಹೊಸ ಅವತಾರದಲ್ಲಿ ಕಿಟ್ಟಪ್ಪ !!

ಕನ್ನಡದಲ್ಲೀಗ ಸಿನಿಮಾಗಳ ಕಲರವ ಶುರುವಾಗಿದೆ. ಒಂದರ ಮೇಲೊಂದರಂತೆ ಸಿನಿಮಾಗಳು ಬಿಡುಗಡೆಗೆ ಸಜ್ಜಾಗುತ್ತಿವೆ. ಕೆಲವು ಸಿನಿಮಾಗಳು ಸದ್ದಿಲ್ಲದೆಯೇ ಮುಕ್ತಾಯಗೊಂಡಿವೆ. ಆ ಸಾಲಿಗೆ ಈಗ “ರಾಜನಿವಾಸ” ಎಂಬ ಸಿನಿಮಾ ಕೂಡ ಚಿತ್ರೀಕರಣ ಮುಗಿಸಿದ್ದು, ಇನ್ನೇನು ಇಷ್ಟರಲ್ಲೇ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗುತ್ತಿದೆ.

ಅದರಲ್ಲೂ, ಶ್ರೀನಗರ ಕಿಟ್ಟಿ ಈ ಸಿನಿಮಾದಲ್ಲಿ ಸ್ಪೆಷಲ್‌ ರೋಲ್‌ ಮಾಡಿದ್ದಾರೆ ಅನ್ನೋದೇ ವಿಶೇಷ. ಇತ್ತೀಚೆಗಷ್ಟೇ, ಶ್ರೀನಗರ ಕಿಟ್ಟಿ ಅವರು “ಗೌಳಿʼ ಸಿನಿಮಾ ಮೂಲಕ ನ್ಯೂ ಎಂಟ್ರಿ ಕೊಟ್ಟಿದ್ದು ಗೊತ್ತೇ ಇದೆ. ಈಗ “ರಾಜ ನಿವಾಸ” ಸಿನಿಮಾದಲ್ಲೂ ಅಂಥದ್ದೊಂದು ಹೊಸ ಪಾತ್ರದ ಮೂಲಕ ಗಮನಸೆಳೆಯುತ್ತಿದ್ದಾರೆ. ಅದ್ಧೂರಿ ವೆಚ್ಚದಲ್ಲಿ ತಯಾರಾಗಿರುವ ಈ ಚಿತ್ರ ಡಿಎಎಂ36 ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿದೆ ಸುಮಾರು 57 ದಿನಗಳ ಕಾಲ ಚಿಕ್ಕಮಗಳೂರು ಹಾಗೂ ಬೆಂಗಳೂರಿನ ಸುತ್ತಮುತ್ತಲ ತಾಣದಲ್ಲಿ ಚಿತ್ರೀಕರಣಗೊಂಡಿದೆ.

ಚಿತ್ರದಲ್ಲಿ ರಾಘವ್ ಕೃತಿಕಾ, ಬಲರಾಜವಾಡಿ ಇತರರು ಕಾಣಿಸಿಕೊಂಡಿದ್ದಾರೆ. ಇಲ್ಲಿ ಶ್ರೀನಗರ ಕಿಟ್ಟಿ ಅವರು ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಅವರ ಹೊಸ ಲುಕ್‌ ಈಗಾಗಲೇ ರಿವೀಲ್‌ ಆಗಿದೆ. ತುಂಬಾ ಸ್ಟೈಲಿಷ್‌ ಎನಿಸುವ ಫೋಟೋಗಳು ಬಿಡುಗಡೆಯಾಗಿದ್ದು, ಅದೊಂದು ಹೊಸ ರೀತಿಯ ಪಾತ್ರ ಎಂಬುದನ್ನು ಸಾಬೀತುಪಡಿಸುತ್ತಿದೆ.

ಇನ್ನು, ಮಿಥುನ್ ಸುವರ್ಣ ನಿರ್ದೇಶಕರು. ದಾ.ಪಿ.ಆಂಜನಪ್ಪ ಹಾಗೂ ಲೋಕೇಶ್ ಎನ್.ಗೌಡ ಅವರು ನಿರ್ಮಾಪಕರು. ವಿಶೇಷವೆಂದರೆ, ದಸರಾ ಹಬ್ಬಕ್ಕೆ “ರಾಜ ನಿವಾಸ” ಚಿತ್ರದ ಶೀರ್ಷಿಕೆ ಪೋಸ್ಟರ್ ನಾಲ್ಕು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

Categories
ಸಿನಿ ಸುದ್ದಿ

ದಸರಾಗೆ ಶ್ರೀ ಕೃಷ್ಣ ಜೀ ಮೇಲ್ ಡಾಟ್‌ ಕಾಮ್‌!

ನಾಗಶೇಖರ್‌ ನಿರ್ದೇಶನದ ಚಿತ್ರವೊಂದು ಈಗ ಸದ್ದಿಲ್ಲದೆಯೇ ಬಿಡುಗಡೆಗೆ ಸಜ್ಜಾಗಿದೆ. ಹೌದು, ಸಂದೇಶ್‌ ಪ್ರೊಡಕ್ಷನ್ಸ್‌ ಮೂಲಕ ನಿರ್ಮಾಣವಾಗಿರುವ ಡಾರ್ಲಿಂಗ್‌ ಕೃಷ್ಣ ಹೀರೋ ಆಗಿರುವ [email protected]ಸಿನಿಮಾ ಈಗ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ವಿಜಯದ ದಶಮಿ ಹಬ್ಬದಂದು ರಾಜ್ಯಾದ್ಯಂತ ಅದ್ಧೂರಿಯಾಗಿ ಬಿಡುಗಡೆ ಮಾಡಲು ಸಿನಿಮಾತಂಡ ತಯಾರು ಮಾಡಿಕೊಂಡಿದೆ. ಕನ್ನಡದಲ್ಲಿ ಈಗಾಗಲೇ ಹಲವು ಯಶಸ್ವಿ ಚಿತ್ರಗಳನ್ನು ನೀಡಿರುವ ಸಂದೇಶ್ ನಾಗರಾಜ್‌, ಈಗ ಮತ್ತೊಂದು ಮಜವಾದ ಸಿನಿಮಾ ಮಾಡಿ, ಅದನ್ನು ದಸರಾ ಹಬ್ಬಕ್ಕೆ ರಿಲೀಸ್‌ ಮಾಡಲು ಸಿದ್ಧತೆ ನಡೆಸುತ್ತಿದ್ದಾರೆ. ಈ ಚಿತ್ರಕ್ಕೆ ಬೃಂದಾ ಎನ್ ಜಯರಾಂ ಅವರ ಸಹ ನಿರ್ಮಾಣವಿದೆ.


ನಾಗಶೇಖರ್‌ ಅವರೇ ನಿರ್ದೇಶನದ ಜೊತೆಗೆ ಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ. ಚಿತ್ರಕಥೆಗೆ ನಾಗಶೇಖರ್‌ ಜೊತೆಯಲ್ಲಿ ಪ್ರೀತಂ ಗುಬ್ಬಿ ಸಾಥ್‌ ನೀಡಿದ್ದಾರೆ. ಇನ್ನು, ಹೀರೋ ಡಾರ್ಲಿಂಗ್‌ ಕೃಷ್ಣ ಅವರ ಜೊತೆಗೆ ಭಾವನಾ ಮೆನನ್‌ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಚಂದನ್ ಗೌಡ ಕೂಡ ಇಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಅತಿಥಿ ಪಾತ್ರದಲ್ಲಿ ರಿಷಬ್ ಶೆಟ್ಟಿ ಕೂಡ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಚಿತ್ರದಲ್ಲಿ ದತ್ತಣ್ಣ, ಸಾಧು ಕೋಕಿಲ, ಅಚ್ಯುತರಾವ್, ಸಾತ್ವಿಕ್ (ಕಾರ್ಪೊರೇಟರ್), ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಇತರರು ನಟಿಸಿದ್ದಾರೆ.

ಈ ಹಿಂದೆ ಸಂದೇಶ್ ಪ್ರೊಡಕ್ಷನ್ಸ್ ಮೂಲಕ ನಿರ್ಮಾಣವಾಗಿದ್ದ “ಅಮರ್” ಚಿತ್ರಕ್ಕೂ ನಾಗಶೇಖರ್‌ ಅವರೇ ನಿರ್ದೇಶಕರಾಗಿದ್ದರು. ಈಗ ಹೊಸ ಸಿನಿಮಾಗೂ ಅವರ ನಿರ್ದೇಶನವಿದೆ. ಚಿತ್ರದ ಐದು ಹಾಡುಗಳಿಗೆ ಕವಿರಾಜ್ ಗೀತಸಾಹಿತ್ಯವಿದೆ. ಸತ್ಯ ಹೆಗಡೆ ಕ್ಯಾಮೆರಾ ಹಿಡಿದಿದ್ದಾರೆ. ಇನ್ನುಳಿದಂತೆ ಚಿತ್ರಕ್ಕೆ ದೀಪು ಎಸ್. ಕುಮಾರ್ ಸಂಕಲನವಿದೆ. ಅರುಣ್ ಸಾಗರ್ ಕಲಾ ನಿರ್ದೇಶನವಿದೆ.

Categories
ಸಿನಿ ಸುದ್ದಿ

ಮತ್ತೆ ಅದೃಷ್ಟ ಪರೀಕ್ಷೆಗಿಳಿದ ಜಗ್ಗೇಶ್ ಜೇಷ್ಠಪುತ್ರ ; ಕಾಗೆಮೊಟ್ಟೆಗೆ ಕೌಂಟ್‌ಡೌನ್ ಶುರು; ಗೆದ್ದು ಗಹಗಹಿಸ್ತಾರಾ ಗುರು?

ಹಿರಿಯ ಜಗ್ಗೇಶ್‌ ಪುತ್ರ ಗುರುರಾಜ್‌ ಮತ್ತೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಕಾಗೆ ಮೊಟ್ಟೆ ಮೂಲಕ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದು, ಇಲ್ಲಿ ಗೆದ್ದು ಗಹಗಹಿಸ್ತಾರಾ ?

ತಂದೆಯಂತೆ ಸಿನಿಮಾನ ಪ್ರೀತಿಸುತ್ತಾರೆ ಮತ್ತು ಕಲಾ ಸರಸ್ವತಿಯನ್ನು ಆರಾಧಿಸುತ್ತಾರೆ. ಅಭಿನಯಕ್ಕಾಗಿ ಹಂಬಲಿಸುತ್ತಾರೆ, ಅರಸಿಕೊಂಡು ಬರುವ ಪಾತ್ರಗಳನ್ನು ಕಣ್ಣಿಗೆ ಒತ್ತಿಕೊಳ್ತಾರೆ. ಅಪ್ಪನಂತೆಯೇ ಕಲಾಸೇವೆ ಮಾಡುವುದಕ್ಕೆ ಗುರುರಾಜ್ ಒಂಟಿಕಾಲಿನಲ್ಲಿಯೇ ಸಿದ್ದರಾಗಿದ್ದಾರೆ. ಆದರೆ, ಅದ್ಯಾಕೋ ಏನೋ ಗೊತ್ತಿಲ್ಲ ಗುರುರಾಜ್‌ನ ಅದೃಷ್ಟ ಕೈಹಿಡಿಯುತ್ತಿಲ್ಲ, ಶ್ರಮವಹಿಸಿ-ಶ್ರದ್ದಾ-ಭಕ್ತಿಯಿಂದ ಗುರು ಸಿನಿಮಾ ಮಾಡಿದರಾದರೂ ಕೂಡ ಅಂದುಕೊಂಡಂತಹ ಸಕ್ಸಸ್ ಸಿಗುತ್ತಿಲ್ಲ. ಅದಾಗ್ಯೂ, ಕಲೆಯನ್ನು ಕೈಬಿಡದ ಗುರುರಾಜ್ ಕಲಾಸರಸ್ವತಿ ತನ್ನ ಕೈಹಿಡಿದೇ ಹಿಡಿಯುತ್ತಾಳೆಂದು ಎದುರುನೋಡ್ತಿದ್ದಾರೆ.

ಕಾಗೆಮೊಟ್ಟೆ'ಸಿನಿಮಾದ ಮೂಲಕ ಬಣ್ಣದ ಲೋಕದಲ್ಲಿ ಮತ್ತೆ ಅದೃಷ್ಟ ಪರೀಕ್ಷೆಗಿಳಿಯುತ್ತಿದ್ದಾರೆ.ಕಾಗೆಮೊಟ್ಟೆ' ನವರಸನಾಯಕ ಜಗ್ಗೇಶ್ ಜೇಷ್ಠಪುತ್ರ ಗುರುರಾಜ್ ನಟನೆಯ ಸಿನಿಮಾ. ರೌಡಿಸಂ ಹಿನ್ನಲೆ-ಭೂಗತ ಜಗತ್ತಿನ ನಂಟಿರುವ ಕಾಗೆಮೊಟ್ಟೆ'ಯಲ್ಲಿ ಗುರುರಾಜ್ ಖಡಕ್ಕಾಗಿಯೇ ಕಾಣಿಸಿಕೊಂಡಿದ್ದಾರೆ.ಮಾಸ್ ಕ್ಯಾರೆಕ್ಟರ್‌ಗಳಿಗೆ ಜೀವತುಂಬಲು ಹಪಹಪಿಸುವ ಗುರುರಾಜ್, ಕಬ್ಬಿಣದ ಸಲಾಕೆ ಹಿಡ್ಕೊಂಡು ಎದುರಾಳಿಗಳನ್ನು ಬಡಿದುಬರ‍್ಸಿದ್ದಾರೆ.ಔಟ್ ಅಂಡ್ ಔಟ್ ಮಾಸ್ ಅಪೀಲ್ ಇರುವ ಚಿತ್ರದಲ್ಲಿ ಕ್ಯೂಟ್ ಲವ್‌ಸ್ಟೋರಿ ಬೆಸೆದುಕೊಂಡಿದೆ.ಬಿ.ಕೆ ಚಂದ್ರಹಾಸ್ `ಕಾಗೆಮೊಟ್ಟೆ’ಗೆ ಆಕ್ಷನ್ ಕಟ್ ಹೇಳಿದ್ದಾರೆ. ಗುರುರಾಜ್‌ಗೆ ತನುಜಾ ಜೊತೆಯಾಗಿದ್ದಾರೆ. ಸ್ಕೂಲ್ ಯೂನಿಫಾರ್ಮ್ ಡ್ರಸ್‌ನಲ್ಲಿ ಸಖತ್ ಕ್ಯೂಟ್ ಆಗಿಯೇ ಕಾಣಿಸಿಕೊಂಡಿದ್ದಾರೆ.

ಆಗಲೇ ಹೇಳಿದಂತೆ ಗುರು ಪ್ರತಿಭೆಗೆ ತಕ್ಕ ಪ್ರತಿಫಲ ಸಿಕ್ಕಿಲ್ಲ. ಅಂದುಕೊಂಡಂತಹ ಯಶಸ್ಸು ಗುರು ಪಾಲಾಗಿಲ್ಲ. ಹಾಗಂತ, ದೃತಿಗೆಡದ ಗುರುರಾಜ್ ಜಗ್ಗೇಶ್ ತನ್ನನ್ನು ಅರಸಿಕೊಂಡು ಬರುವ ಪಾತ್ರಗಳಿಗೆ ಜೀವತುಂಬುತ್ತಿದ್ದಾರೆ. ಸದ್ಯ ಕಾಗೆಮೊಟ್ಟೆ ಚಿತ್ರದ ಮೇಲೆ ಒಂದಿಷ್ಟು ನಿರೀಕ್ಷೆಗಳನ್ನಿಟ್ಟುಕೊಂಡು ಕಾಯ್ತಿದ್ದಾರೆ. ಮಗನ ಸಿನಿಮಾ ಬಗ್ಗೆ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಜಗ್ಗೇಶ್, `ನನ್ನ ಮಗನಿಗೆ ಬುಧಾದಿತ್ಯ ಯೋಗವಿದೆ. ಎರಡು ಗ್ರಹಗಳು ಒಟ್ಟಿಗೆ ಸೇರುವ ಯೋಗ ಬರುವುದು ಅಪರೂಪ ಅದು ಗುರುಗೆ ಇದೆ. ಅಂದ್ಹಾಗೇ, ಗುರು ಜಾತಕದಲ್ಲಿ ಸೋಲು ಎನ್ನುವುದೇ ಇಲ್ಲ ಆದರೆ ಒಳ್ಳೆಯ ಟೈಮ್ ಬರಬೇಕು, ಆ ಟೈಮ್‌ಗೋಸ್ಕರ ಗುರು ಕಾಯಬೇಕು ಎಂದರು.

ನನ್ನ ಮಗ ಗುರುಗೆ ತೆಲುಗು-ತಮಿಳು ಇಂಡಸ್ಟ್ರಿಯಿಂದ ಆಫರ್‌ಗಳು ಬಂದಿದ್ವು, ದೊಡ್ಡ ದೊಡ್ಡ ನಿರ್ದೇಶಕರು ಸಂಪರ್ಕ ಮಾಡಿದ್ದರು. ಆದರೆ, ಪರಭಾಷೆಗೆ ಹೋಗೋದಕ್ಕೆ ನಾನೇ ಅಡ್ಡಗಾಲು ಹಾಕಿದ್ದೆ. ಏನೇ ಮಾಡಿದರೂ ಕನ್ನಡದಲ್ಲೇ ಮಾಡೋಣ, ನಮ್ಮ ನೆಲದಲ್ಲೇ ದುಡಿದು ತಿನ್ನೋಣ ಎಂದಿದ್ದೆ. ಆದ್ರೀಗ ನಾನು ಅವತ್ತು ಮಾಡಿದ್ದು ತಪ್ಪು ಎನಿಸುತ್ತಿದ್ದೆ. ನನ್ನ ಮಗನ ಭವಿಷ್ಯಕ್ಕೆ ನಾನೇ ಕಲ್ಲಾಕಿದೆ ಎನ್ನುವ ಗಿಲ್ಟ್ ಕಾಡುತ್ತಿದೆ. ಒಂದ್ವೇಳೆ ನಾನು ಅವನನ್ನು ತಡೆಯದೇ ಹೋಗಿದ್ದರೆ, ಇಷ್ಟೊತ್ತಿಗೆ ಸ್ಟಾರ್ ಆಗಿ ಬೆಳೆದು ನಿಂತಿರುತ್ತಿದ್ದ ಎಂದು ಮಾಧ್ಯಮದ ಮುಂದೆ ಹೇಳಿಕೊಂಡರು. ಬೆವರು ಹರಿಸಿ ಮಾಡಿರುವ ‘ಕಾಗೆಮೊಟ್ಟೆ'ಗೆ ಒಳ್ಳೆಯದಾಗಬೇಕು,ಸಂತೋಷ್ ಆನಂದ್ ರಾಮ್ ಥರ ಬೆಳೆದು ನಿಲ್ಲುವ ಶಕ್ತಿ ಕಾಗೆಮೊಟ್ಟೆ’ ಡೈರೆಕ್ಟರ್‌ಗಿದೆ ಎಂದು ಚಂದಹಾಸ್‌ನ ಕೊಂಡಾಡಿದರು.

ಅಂದ್ಹಾಗೇ, ಕಾಗೆಮೊಟ್ಟೆ ಟ್ರೈಲರ್ ಮೂಲಕ ಭರವಸೆ ಮೂಡಿಸಿದೆ. `ಕೆಲವರಿಗೆ ದೂರದಲ್ಲಿ ಇರೋ ಬೆಂಗಳೂರನ್ನು ಒಂದ್ಸಲ ನೋಡಬೇಕು ಅನ್ನೋ ಆಸೆ. ಆದರೆ, ಇವರಿಗೆ ಬೆಂಗಳರ‍್ನ ಆಳಬೇಕು ಅನ್ನೋ ಆಸೆ’ ಈ ಡೈಲಾಗ್ ಜೊತೆಗೆ ಕಾಗೆಮೊಟ್ಟೆಗೆ ಪಿಳ್ಯಗೋವಿ ಕೃಷ್ಣ ಕಥೆ ಟ್ಯಾಗ್‌ಲೈನ್ ಇರೋದ್ರಿಂದ ಕೂತೂಹಲ ಇಮ್ಮಡಿಯಾಗಿದೆ. ಮೂವರು ಹಳ್ಳಿಯುವಕರು ಬೆಂಗಳೂರಿಗೆ ಬಂದು ಭೂಗತ ಜಗತ್ತಿನ ದೊರೆಯನ್ನು ಹೊಡೆದುರುಳಿಸಿ ಸಿಂಹಾಸನಕ್ಕೇರಬೇಕು ಎನ್ನುವ ಗುರಿ ಹೊಂದಿರುತ್ತಾರೆ. ಅವರು ಗುರಿ ಮುಟ್ಟುತ್ತಾರೆ, ಅಂಡರ್‌ವರ್ಲ್ಡ್ ಡಾನ್‌ನ ಮಟ್ಟಹಾಕುತ್ತಾರಾ ಈ ಪ್ರಶ್ನೆಗೆ ಉತ್ತರ ಸಿನಿಮಾ ನೋಡಿನೇ ತಿಳಿಬೇಕು. ಗುರುರಾಜ್ ಜೊತೆಗೆ ಮಾದೇಶ್ ಹಾಗೂ ಹೇಮಂತ್ ರೆಡ್ಡಿ ಲೀಡ್ ರೋಲ್‌ನಲ್ಲಿ ಧಗಧಗಿಸಿದ್ದಾರೆ. ಶರತ್ ಲೋಹಿತಾಶ್ವ, ರಾಜ್ ಬಹದ್ದೂರ್, ಸತ್ಯಜಿತ್, ಪೆಟ್ರೋಲ್ ಪ್ರಸನ್ನ ಸೇರಿದಂತೆ ಹಲವರು ತಾರಾಗಣದಲ್ಲಿದ್ದಾರೆ.

ಇದೇ ಅಕ್ಟೋಬರ್ 1 ರಂದು ಕಾಗೆಮೊಟ್ಟೆ' ಅದ್ದೂರಿಯಾಗಿ ರಿಲೀಸ್ ಆಗ್ತಿದೆ. ಸರ್ಕಾರ 100 ರಷ್ಟು ಆಸನ ಭರ್ತಿಗೆ ಅವಕಾಶ ನೀಡಿದ್ದು, ಕರ್ನಾಟಕ ರಾಜ್ಯಾದ್ಯಂತ ಭರ್ಜರಿಯಾಗಿ ಬಿಡುಗಡೆ ಮಾಡುವುದಕ್ಕೆಕಾಗೆಮೊಟ್ಟೆ’ ಚಿತ್ರತಂಡ ನಿರ್ಧರಿಸಿದೆ. ಸುಬ್ಬರಾಯಡು ಮತ್ತು ಎಚ್.ಎನ್. ಶ್ರೀನಿವಾಸಯ್ಯ ಈ ಇಬ್ಬರ ಜೊತೆ ಸೇರಿ ಕಾಗೆಮೊಟ್ಟೆ ನಿರ್ದೇಶಕ ಚಂದಹಾಸ್ ಅವರೇ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಶ್ರೀವತ್ಸ ಅವರ ಸಂಗೀತ ಚಿತ್ರಕ್ಕಿದೆ. ವಿ ನಾಗೇಂದ್ರ ಪ್ರಸಾದ್ ಸಂಭಾಷಣೆ ಬರೆದುಕೊಟ್ಟಿದ್ದಾರೆ. ಕೆ.ಎಂ ಪ್ರಕಾಶ್ ಸಂಕಲನ, ಪಿ.ಎಲ್ ರವಿಯವರ ಛಾಯಾಗ್ರಹಣ ಚಿತ್ರಕ್ಕಿದೆ. ರಿಯಾಲಿಟಿಗೆ ಹತ್ತಿರವಾಗಿ ಸಿನಿಮಾ ಮಾಡಿದ್ದಾರೆ. ನ್ಯಾಚುರಲ್ಲಾಗಿಯೇ ಇಡೀ ಸಿನಿಮಾ ಮೂಡಿಬಂದಿದೆ.

  • ವಿಶಾಲಾಕ್ಷಿ, ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ
Categories
ಸಿನಿ ಸುದ್ದಿ

ಅಕ್ಟೋಬರ್‌ 10 ರಿಂದ ಜೇಮ್ಸ್‌ ಸಾಂಗ್‌ ಶೂಟ್‌ ಶುರು – ಅದ್ದೂರಿ ಸೆಟ್‌ನಲ್ಲಿ ಅಪ್ಪು ಡಾನ್ಸು !

ಟಿ.ವಿ ರೈಟ್ಸ್‌ ಅತ್ಯಧಿಕ ಮೊತ್ತಕ್ಕೆ ಸೇಲ್‌ ಆದ ಕಾರಣಕ್ಕೆ ಭರ್ಜರಿ ಸುದ್ದಿಯಲ್ಲಿರುವ ಜೇಮ್ಸ್‌ ಚಿತ್ರಕ್ಕೆ ಈಗ ಸಾಂಗ್ ಶೂಟ್‌ ಶುರುವಾಗುತ್ತಿದೆ. ಹಾಗೆಯೇ ಫೈಟ್ಸ್‌ ಸೀನ್‌ ಕೂಡ ಶೂಟ್‌ ಆಗಬೇಕಿದೆಯಂತೆ. ಅದಕ್ಕೆ ದಿನಾಂಕವೂ ನಿಗದಿ ಆಗಿದೆ.

ಪವರ್‌ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಹಾಗೂ ನಿರ್ದೇಶಕ ಬಹದ್ದೂರ್‌ ಚೇತನ್‌ ಜೋಡಿಯ ಬಹುನಿರೀಕ್ಷಿತ ಅದ್ದೂರಿ ಚಿತ್ರ ʼಜೇಮ್ಸ್‌ ʼ ಚಿತ್ರೀಕರಣದ ಹಂತದಲ್ಲೇ ಸಖತ್‌ ಸೌಂಡ್‌ ಮಾಡುತ್ತಿದೆ. ಇನ್ನು ಹಾಡು ಹಾಗೂ ಫೈಟ್‌ ಸೀನ್‌ ಚಿತ್ರೀಕರಣ ಬಾಕಿ ಇರುವಾಗಲೇ ಅದರ ಟಿ.ವಿ ರೈಟ್ಸ್‌ ದಾಖಲೆ ಮೊತ್ತಕ್ಕೆ ಸೇಲ್‌ ಆಗಿದೆ. ಸ್ಟಾರ್‌ ಸುವರ್ಣ ವಾಹಿನಿಯು ದೊಡ್ಡ ಮೊತ್ತಕ್ಕೆ ʼಜೇಮ್ಸ್‌ ʼ ಟಿವಿ ರೈಟ್ಸ್‌ ಖರೀದಿ ಮಾಡಿದೆ. ಒಂದು ಮೂಲದ ಪ್ರಕಾರ ಪವರ್‌ ಸ್ಟಾರ ಪುನೀತ್‌ ರಾಜ್‌ ಕುಮಾರ್‌ ಅವರ ಸಿನಿಮಾಗಳ ಪೈಕಿ ಅತ್ಯಧಿಕ ಮೊತ್ತಕ್ಕೆ ಟಿವಿ ರೈಟ್ಸ್‌ ಸೇಲ್‌ ಆದ ಹೆಗ್ಗಳಿಕೆ ʼಜೇಮ್ಸ್‌ʼ ಚಿತ್ರದ್ದು ಎನ್ನಲಾಗಿದೆ. ಅಧಿಕೃತವಾಗಿ ಟಿ.ವಿ ರೈಟ್ಸ್‌ ಸೇಲ್‌ ಆಗಿದ್ದು ಎಷ್ಟು ಮೊತ್ತಕ್ಕೆ ಎನ್ನುವ ಮಾಹಿತಿ ಇಲ್ಲವಾಗಿದ್ದರೂ, ಚಿತ್ರ ತಂಡವೇ ನೀಡುವ ಪ್ರಕಾರ 15 ಕೋಟಿಗೂ ಅಧಿಕವಂತೆ. ಇನ್ನು ಚಿತ್ರೀಕರಣದ ಹಂತದಲ್ಲಿಯೇ ಜೇಮ್ಸ್‌ ಭಾರೀ ಸೌಂಡ್‌ ಮಾಡುತ್ತಿರುವುದು ಭಾರೀ ಕುತೂಹಲ ಮೂಡಿಸಿದೆ.

ಚಂದನವನದಲ್ಲಿ ʼಜೇಮ್ಸ್‌ ʼ ದೊಡ್ಡ ಹವಾ ಶುರುವಾಗುತ್ತಿದೆ. ಸದ್ಯಕ್ಕೀಗ ಟಾಕಿ ಪೋಷನ್‌ ಚಿತ್ರಿಕರಣ ಮುಗಿಸಿರುವ ʼಜೇಮ್ಸ್‌ʼ ಚಿತ್ರಕ್ಕೆ ಅಕ್ಟೋಬರ್‌ 10 ರಿಂದ ಹಾಡು ಹಾಗೂ ಸಾಹಸ ದೃಶ್ಯಗಳ ಚಿತ್ರೀಕರಣ ಶುರುವಾಗುತ್ತಿದೆಯಂತೆ. ಆ ಮೂಲಕ ಇನ್ನೊಂದು ಹಂತದಲ್ಲಿ ಸೌಂಡ್‌ ಮಾಡಲು ರೆಡಿಯಾಗಿದೆ.ನಿರ್ದೇಶಕ ಬಹದ್ದೂರ್‌ ಚೇತನ್‌ಕುಮಾರ್‌ ಈಗ ಅದರಲ್ಲಿಯೇ ಬ್ಯುಸಿ ಆಗಿದ್ದಾರೆ. ನಿರ್ದೇಶಕ ಚೇತನ್‌ ಕುಮಾರ್‌ ಅವರು ಈ ಚಿತ್ರ ಕಥೆ, ಚಿತ್ರಕಥೆ ರೆಡಿ ಮಾಡಿಕೊಂಡಿದ್ದಾಗ ಹಾಡುಗಳ ಚಿತ್ರೀಕರಣಕ್ಕೆ ವಿದೇಶಕ್ಕೆ ಹೋಗುವ ಪ್ಲಾನ್‌ ಹಾಕಿಕೊಂಡಿದ್ದರಂತೆ. ಆದರೆ ಈಗ ಎಲ್ಲವೂ ಉಲ್ಟಾ ಆಗಿದೆ. ಕೊರೋನಾ ಹಿನ್ನೆಲೆಯಲ್ಲಿ ರಾಜ್ಯದ ವಿವಿಧೆಡೆಗಳಲ್ಲಿಯೇ ಹಾಡುಗಳ ಚಿತ್ರೀಕರಣಕ್ಕೆ ಸಿದ್ದತೆ ನಡೆಸಿದ್ದಾರಂತೆ. ಒಂದಷ್ಟು ದೃಶ್ಯಗಳನ್ನು ಅದ್ದೂರಿ ಸೆಟ್‌ನಲ್ಲೂ ಚಿತ್ರೀಕರಣ ನಡೆಸುವ ಪ್ಲಾನ್‌ ಚಿತ್ರತಂಡದ್ದು.

ಹಾಡು ಮತ್ತು ಸಾಹಸ ದೃಶ್ಯಗಳ ಚಿತ್ರೀಕರಣ ಶುರುವಾಗುವ ಕುರಿತು ಸಿನಿಲಹರಿ ಜತೆಗೆ ಮಾತನಾಡಿದ ನಿರ್ದೇಶಕ ಚೇತನ್‌ ಕುಮಾರ್‌ ಚಿತ್ರೀಕರಣದ ವಿಶೇಷತೆ ವಿವರಿಸಿದರು. ʼಸದ್ಯಕ್ಕೀಗ ಮೂರು ಹಾಡು ಹಾಗೂ ಒಂದು ಫೈಟ್‌ ಸೀನ್‌ ಶೂಟಿಂಗ್‌ ಬಾಕಿ ಇದೆ. ಈಗ ಅದನ್ನು ಚಿತ್ರೀಕರಿಸಲು ಪ್ಲಾನ್‌ ಹಾಕಿಕೊಂಡಿದ್ದೇವೆ. ಅಕ್ಟೋಬರ್‌ 10 ರಿಂದ ಚಿತ್ರೀಕರಣ ಶುರುವಾಗುತ್ತಿದೆ. ಸದ್ಯಕ್ಕೆ ಲೋಕೇಷನ್‌ ಫೈನಲ್‌ ಆಗಿಲ್ಲ. ಹಾಡಿನ ಸನ್ನಿವೇಶಗಳಿಗೆ ಸೂಕ್ತ ಎನಿಸುವ ಲೋಕೇಷನ್‌ ಬೇಕಿದೆ. ಇಷ್ಟರಲ್ಲಿಯೇ ಫೈನಲ್‌ ಮಾಡಿಕೊಂಡು ಚಿತ್ರೀಕರಣಕ್ಕೆ ಕಾಲಿಡಲಿದ್ದೇವೆʼ ಎಂದರು. ಇನ್ನು ಚಿತ್ರೀಕರಣದ ಹಂತದಲ್ಲಿಯೇ ಜೇಮ್ಸ್‌ ಚಿತ್ರದ ಸಾಟಲೈಟ್‌ ರೈಟ್ಸ್‌ ಅತ್ಯಧಿಕ ಮೊತ್ತಕ್ಕೆ ಸೇಲ್‌ ಆಗಿರುವುದು ಸಹಜವಾಗಿಯೇ ಅವರಿಗೆ ಖುಷಿ ಕೊಟ್ಟಿದೆ. ʼ ನಿಜಕ್ಕೂ ಇದು ಖುಷಿ ಸಮಾಚಾರ. ದೊಡ್ಡ ಮೊತ್ತಕ್ಕೆ ಟಿ.ವಿ ರೈಟ್ಸ್‌ ಸೇಲ್‌ ಆಗಿದೆ. ಒಂದು ಚಿತ್ರಕ್ಕೆ ಬಂಡವಾಳ ಹಾಕುವ ಒಬ್ಬ ನಿರ್ಮಾಪಕನ ಮುಖದಲ್ಲಿ ನಗು ಕಾಣುವುದು ಹೀಗೆಯೇ. ಅವರಿಗೂ ಉತ್ಸಾಹ ಹೆಚ್ಚಾಗಿದೆ ಎನ್ನುತ್ತಾರೆ ನಿರ್ದೇಶಕ ಚೇತನ್‌ ಕುಮಾರ್.

  • ಎಂಟರ್‌ ಟೈನ್‌ ಮೆಂಟ್‌ ಬ್ಯೂರೋ ಸಿನಿಲಹರಿ
Categories
ಸಿನಿ ಸುದ್ದಿ

ನಿರ್ದೇಶಕ ಸಂತೋಷ್ ಆನಂದ್ ರಾಮ್ ಗೆ ಅವಮಾನ; ‘ಅಗ್ರಜ’ ಸೆಟ್ ನಲ್ಲಿ ಆನಂದ್ ಭವಿಷ್ಯ ನಿರ್ಧಾರ ಜಗ್ಗೇಶ್ ನುಡಿದ ಮಾತು ನಿಜವಾಯ್ತು !

ಸಂತೋಷ್ ಆನಂದ್ ರಾಮ್ ಇವತ್ತು ಸ್ಯಾಂಡಲ್ ವುಡ್ನ ಸ್ಟಾರ್ ಡೈರೆಕ್ಟರ್. ಸೌತ್ ಸಿನಿಮಾ ಇಂಡಸ್ಟ್ರಿ ತಿರುಗಿ ನೋಡುವಂತಹ ಸಿನಿಮಾ ಕೊಟ್ಟಿದ್ದಾರೆ. ಗಂಧದಗುಡಿಯ ಇಬ್ಬರು ಸ್ಟಾರ್ ನಟರಿಗೆ ಬಿಗ್ ಬ್ರೇಕ್ ಕೊಟ್ಟಿದ್ದಾರೆ. ತಮ್ಮ ಸಿನಿಕರಿಯರ್ ನ ಮೈಲೇಜ್ ಹೆಚ್ಚಿಸಿಕೊಂಡಿದ್ದಾರೆ. ಯುವನಟರಿಂದ ಹಿಡಿದು ಸ್ಟಾರ್ ನಟರು ಕೂಡ ಸಂತೋಷ್ ಆನಂದ್ ರಾಮ್ ನಿರ್ದೇಶನದಲ್ಲಿ ಅಭಿನಯಿಸೋಕೆ ಕಾತರಿಸುತ್ತಿದ್ದಾರೆ. ಇಂತಿಪ್ಪ ಜನಪ್ರಿಯ ಹಾಗೂ ಬಹುಬೇಡಿಕೆಯ ನಿರ್ದೇಶಕ ಸಂತೋಷ್ ಆನಂದ್ ರಾಮ್ ಭಾರೀ ಅವಮಾನ ಎದುರಿಸಿದ್ದಾರೆ. ಅವತ್ತು ಸ್ಟಾರ್ ನಿರ್ದೇಶಕರೊಬ್ಬರಿಂದ ಬಾಯಿಗೆ ಬಂದ ಹಾಗೇ ತೆಗಳಿಸಿಕೊಂಡ ಸಂತೋಷ್ ಆನಂದ್ ರಾಮ್ ಇವತ್ತು ಆ ನಿರ್ದೇಶಕರಿಗೆ ಸೆಡ್ಡು ಹೊಡೆಯುವ ರೇಂಜ್ಗೆ ಬೆಳೆದು ನಿಂತಿದ್ದಾರೆ.

ಅವಮಾನ- ಅಪಮಾನ- ನಿಂದನೆ-ನೋವು- ಕಷ್ಟ-ದುಃಖ- ಸೋಲು-ತುಳಿತ ಇದ್ಯಾವುದನ್ನು ನೋಡದೇ ಯಶಸ್ಸಿನ ಉತ್ತುಂಗಕ್ಕೇರುವುದಕ್ಕೆ ಸಾಧ್ಯವಿಲ್ಲ. ಗೆಲುವಿನ ಗದ್ದುಗೆ ಏರಿ ಗಹಗಹಿಸೋದಕ್ಕೆ ಅವಕಾಶ ಸಿಕ್ಕುವುದಿಲ್ಲ. ಒಂದ್ವೇಳೆ ಸಿಕ್ಕರೂ ಕೂಡ ಅದು ಅವರುಗಳ ಸಕ್ಸಸ್ ಆಗಿರುವುದಿಲ್ಲ‌ ಬದಲಾಗಿ ಗಾಡ್ ಫಾದರ್ ಗಳ ಯಶಸ್ಸಾಗಿರುತ್ತೆ. ಯಾಕಂದ್ರೆ, ಇವರುಗಳು ಬೆನ್ನೆಲುಬಾಗಿ ನಿಂತಿದ್ದರಿಂದಲೇ ಅವಮಾನ ಎದುರಿಸದೇ ಕೆಲವರು ಮೇಲಕ್ಕೇರುತ್ತಾರೆ ಬಿಡಿ. ಅವರನ್ನು ಪಕ್ಕಕಿಡೋಣ ನಾವು ಮಾತನಾಡ್ತಿರುವುದು ಕಷ್ಟಜೀವಿಗಳ ಬಗ್ಗೆ, ಹೋರಾಡಿ ಗೆದ್ದವರ ಬಗ್ಗೆ.

ಸಂತೋಷ್ ಆನಂದ್ ರಾಮ್ ಚಂದನವನದ ಸ್ಟಾರ್ ಡೈರೆಕ್ಟರ್. ಕನ್ನಡ ಚಿತ್ರರಂಗ ಹೆಮ್ಮೆ ಪಡುವಂತಹ ನಿರ್ದೇಶಕ. ರಾಕಿಂಗ್ ಸ್ಟಾರ್ ಹಾಗೂ ಪವರ್ ಸ್ಟಾರ್ ಗೆ ಬಿಗ್ ಬ್ರೇಕ್ ಕೊಟ್ಟಂತಹ ಚಿತ್ರಬ್ರಹ್ಮ. ಯುವನಿರ್ದೇಶಕನನ್ನು ನಂಬಿ ಅವಕಾಶ ಕೊಟ್ಟ ಆ ಇಬ್ಬರು ಸ್ಟಾರ್ ಗಳು ಸಂತೋಷ್ ಆನಂದ್ ರಾಮ್ ಪಾಲಿಗೆ ರಿಯಲ್ ಗಾಡ್ ಫಾದರ್ ಗಳು. ಅಪಾರವಾದ ಪ್ರತಿಭೆ, ಸಿನಿಮಾನ ಪ್ರೀತ್ಸೋ ರೀತಿಗೆ ರಾಕಿ ಹಾಗೂ ಅಪ್ಪು ಇಬ್ಬರು ಕ್ಲೀನ್ ಬೋಲ್ಡ್. ಹೀಗಾಗಿಯೇ, ಸಂತೋಷ್ ಆನಂದ್ ರಾಮ್ ಗೆ ಕಾಲ್ ಶೀಟ್ ಕೊಟ್ಟರು. ಇಬ್ಬರು ಸ್ಟಾರ್ ನಟರುಗಳು ತನ್ನ ಮೇಲಿಟ್ಟಿದ್ದ ನಂಬಿಕೆಯನ್ನು ಆನಂದ್ ರಾಮ್ ಉಳಿಸಿಕೊಂಡರು. ಇದೆಲ್ಲಾ ನಿಮಗೆ ಗೊತ್ತಿರುವ ವಿಚಾರವೇ. ಆದರೆ, ಸಂತೋಷ್ ಆನಂದ್ ರಾಮ್ ಗೆ ಸೆಟ್ನಲ್ಲಿ ಅವಮಾನ ಮಾಡಿ, ಮನಬಂದಂತೆ ಮಾತನಾಡಿ ನಿಂದಿಸುತ್ತಿದ್ದ ಆ ನಿರ್ದೇಶಕರ ಬಗ್ಗೆ ನಿಮಗೆ ತಿಳಿದಿರಲಿಕ್ಕಿಲ್ಲ. ಈ ಬಗ್ಗೆ ಮಾಧ್ಯಮದ ಮುಂದೆ ಮಾತನಾಡಿದ ಜಗ್ಗೇಶ್ ಬಿಚ್ಚಿಟ್ಟಿದ್ದೇನು ಹೇಳ್ತೀವಿ‌ ನೋಡಿ.

ನವರಸನಾಯಕ ಜಗ್ಗೇಶ್ ಗೆ ಸಂತೋಷ್ ಆನಂದ್ ರಾಮ್ ಡೈರೆಕ್ಟ್ ಮಾಡ್ತಿರುವ ವಿಷ್ಯ ಈಗಾಗಲೇ ತಿಳಿದೇ ಇದೆ. ರಾಘವೇಂದ್ರ ಸ್ಟೋರ್ಸ್ ಚಿತ್ರದ ಮೂಲಕ ಇಬ್ಬರು ಒಂದಾಗ್ತಿದ್ದಾರೆ. ಹೊಂಬಾಳೆ ಸಂಸ್ಥೆ ಬಂಡವಾಳ ಹೂಡ್ತಿದೆ. ಈ ಬಗ್ಗೆ ಹೆಚ್ಚಿನ ಗುಟ್ಟು ಬಿಟ್ಟುಕೊಡದ ಜಗ್ಗಣ್ಣ, ಮಗ ಗುರುರಾಜ್ ನಟನೆಯ ಕಾಗೆಮೊಟ್ಟೆ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಸಂತೋಷ್ ಆನಂದ್ ರಾಮ್ ಎದುರಿಸಿದ ಅವಮಾನ ಹಾಗೂ ಬೆಳೆದುನಿಂತ ಪರಿಯ ಬಗ್ಗೆ ಹೆಮ್ಮೆಪಟ್ಟರು. ಸಂತೋಷ್ ಆನಂದ್ ರಾಮ್ ದೊಡ್ಡ ಮಟ್ಟಕ್ಕೆ ಎದ್ದುನಿಲ್ತಾನೆ ಎಂದು ಅವತ್ತೇ ನಾನು ಹೇಳಿದ್ದೆ, ನನ್ನ ಮಾತು ಸತ್ಯವಾಗಿದೆ ಎನ್ನುತ್ತಾ ಖುಷಿಪಟ್ಟರು.

ಹೌದು, ಜಗ್ಗಣ್ಣ ನುಡಿದ ಭವಿಷ್ಯ ನಿಜವಾಗಿದೆ. ಸಂತೋಷ್ ಆನಂದ್ ರಾಮ್ ಸ್ಟಾರ್ ಡೈರೆಕ್ಟರ್ ಪಟ್ಟಕ್ಕೇರಿದ್ದಾರೆ. ಇದಕ್ಕೆ ಕಾರಣ ಸಂತೋಷ್ ಮೆದುಳೊಳಗೆ ಉದುಗಿರುವ ಅಘಾದವಾದ ಪ್ರತಿಭೆ. ಆದರೆ, ಆ ಪ್ರತಿಭೆಯ ಬಗ್ಗೆ ಅರಿಯದೇ ‘ ಅಗ್ರಜ’ ಸಿನಿಮಾ ಸೆಟ್ ನಲ್ಲಿ ನಿರ್ದೇಶಕ ಮನಬಂದಂತೆ ಮಾತನಾಡುತ್ತಿದ್ದರಂತೆ. ಇದನ್ನು ಖುದ್ದು ಕೇಳಿಸಿಕೊಂಡು ಮರುಗಿದ ಜಗ್ಗಣ್ಣ, ಎಲ್ಲರ ಮುಂದೆ ಸಂತೋಷ್ ಆನಂದ್ ರಾಮ್ ನ ನಿಲ್ಲಿಸಿ ಮುಂದೊಂದು ದಿನ ಯಾವ್ ಮಟ್ಟಕ್ಕೆ ಬೆಳೆದು ನಿಲ್ತಾನೆ‌ ನೋಡ್ತಾಯಿರಿ ಎಂದಿದ್ದರಂತೆ.

ಮೊದಲು ಅವಮಾನ ನಂತರ ಸನ್ಮಾನ ಎನ್ನುವ ಮಾತಿದೆ. ಸೋತ ಜಾಗದಲ್ಲೇ ಗೆಲ್ಲಬೇಕು, ಬಿದ್ದ ಜಾಗದಲ್ಲೇ ಎದ್ದು ನಿಲ್ಲಬೇಕು ಎನ್ನುವ ವಾಕ್ಯವಿದೆ. ಅದರಂತೇ, ಅವಮಾನಗೊಂಡ ಜಾಗದಲ್ಲೇ ಸಂತೋಷ್ ಸನ್ಮಾನ ಮಾಡಿಸಿಕೊಳ್ತಿದ್ದಾರೆ. ಸವಾಲುಗಳಿಗೆ ಸೆಡ್ಡುಹೊಡೆದು ಗಟ್ಟಿಯಾಗಿ ನಿಂತುಕೊಂಡಿದ್ದಾರೆ. ಎಷ್ಟರ ಮಟ್ಟಿಗೆ ಅಂದ್ರೆ, ಕಾಲೆಳೆದು ಹೀಯಾಳಿಸಿದವರು ಕೂಡ ಸಂತೋಷ್ ಆನಂದ್ ರಾಮ್ ಪೋಟೋನ ಡಿಪಿಯಾಗಿಸಿಕೊಳ್ಳುವಷ್ಟು

ಗೆಲ್ಲಬೇಕು ನೀ ನಿಲ್ಲೋವರೆಗೂ, ನಿಲ್ಲಬೇಕು ನೀ ಗೆಲ್ಲೋವರೆಗೂ, ಛಲದಿಂದ ನಿಲ್ಲು, ನಗುವಲ್ಲೇ ಕೊಲ್ಲು, ಅವಮಾನ ಮಾಡಿದವರ ಪವರ್ ಆಫ್ ಯೂತ್ ಅಂತ ಯುವರತ್ನ ಚಿತ್ರದ ಹಾಡೊಂದಕ್ಕೆ ಲಿರಿಕ್ಸ್ ಬರೆದಿದ್ದಾರೆ. ಆ ಲಿರಿಕ್ಸ್ ನಂತೆಯೇ ದೊಡ್ಡ ಮಟ್ಟಕ್ಕೆ ಬೆಳೆದಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ನಟನೆಯ ರಾಕಿ ಚಿತ್ರಕ್ಕೆ ಲಿರಿಕ್ಸ್ ಬರೆಯೋ ಮೂಲಕ ಸಿನಿಕರಿಯರ್ ಶುರುಮಾಡಿದರು. ಭಜರಂಗಿ ಹರ್ಷ ಅವರೊಟ್ಟಿಗೆ ಸಹಾಯಕ ನಿರ್ದೇಶಕರಾಗಿದ್ದರು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಚಿಂಗಾರಿ ಚಿತ್ರಕ್ಕೆ ಡೈಲಾಗ್ ಬರೆದುಕೊಟ್ಟರು ಜೊತೆಗೆ ಡೈರೆಕ್ಷನ್ ಡಿಪಾರ್ಟ್ ಮೆಂಟ್ ನಲ್ಲಿ ಕೆಲಸ ಮಾಡಿದರು. ಅಗ್ರಜ ಹಾಗೂ ಗಜಕೇಸರಿಗೆ ಮತ್ತೆ ಡೈಲಾಗ್ ಬಾಣಬಿಟ್ಟರು. ಸಂತೋಷ್ ಸಾಹಿತ್ಯಕ್ಕೆ ಮತ್ತು ಸಂಭಾಷಣೆಗೆ ಇದ್ದ ಪವರ್ ನ ಗುರ್ತಿಸಿದ ರಾಕಿಭಾಯ್ ಅವಕಾಶ ಕೊಟ್ಟರು.

ಯಸ್, ಮಿಸ್ಟರ್ ಆಂಡ್ ಮಿಸಸ್ ರಾಮಾಚಾರಿಗೆ ಸಂತೋಷ್ ಡೈರೆಕ್ಟರ್ ಹ್ಯಾಟ್ ತೊಟ್ಟರು. ಮೊದಲ ಪ್ರಯತ್ನದಲ್ಲೇ ಗೆಲುವಿನ ಕಿರೀಟ ಮುಡಿಗೇರಿಸಿಕೊಂಡರು. ರಾಕಿಂಗ್ ಜೋಡಿಗೆ ಬಿಗ್ ಬ್ರೇಕ್ ಸಿಕ್ಕಂತೆ ಸಂತೋಷ್ ಕರಿಯರ್ ನೇ ಚೇಂಜ್ ಮಾಡ್ತು. ಅಲ್ಲಿಂದ, ದೊಡ್ಮನೆ ರಾಜಕುಮಾರನಿಗೆ ಆಕ್ಷನ್ ಕಟ್ ಹೇಳಿ ಗೆಲುವಿನ ಕೇಕೆ ಹಾಕಿದರು. ಯುವರತ್ನ ಚಿತ್ರದ ಮೂಲಕ ಗಡಿದಾಟಿದರು. ಈಗ ಮತ್ತೊಮ್ಮೆ ಪವರ್ ಸ್ಟಾರ್ ಗೆ ಆಕ್ಷನ್ ಕಟ್ ಹೇಳುವ ಚಾನ್ಸ್ ಸಿಕ್ಕಿದೆ. ಅದಕ್ಕೂ ಮುನ್ನನವರಸನಾಯಕನನ್ನು ನಿರ್ದೇಶನ ಮಾಡಲಿದ್ದಾರೆ.ಒಟ್ನಲ್ಲಿ ಸಂತೋಷ್ ಆನಂದವಾಗಿದ್ದಾರೆ. ವೃತ್ತಿಬದುಕು ಹಾಗೂ ವೈಯಕ್ತಿಕ ಬದುಕಿನಲ್ಲಿ ಸಂತೋಷ‌ ಕಂಡಿರುವ ಆನಂದ್ ರಾಮ್, ಗಡಿದಾಟಿ ಘರ್ಜಿಸಲಿ, ಪ್ಯಾನ್ ಇಂಡಿಯಾ ಡೈರೆಕ್ಟರ್ ಆಗಿ ಹೊರಹೊಮ್ಮಲಿ ಎನ್ನುವುದೇ ಸಿನಿಲಹರಿ ಆಶಯ

ವಿಶಾಲಾಕ್ಷಿ, ಎಂಟರ್ ಟೈನ್ಮೆಂಟ್ ಬ್ಯೂರೋ‌ಸಿನಿಲಹರಿ

Categories
ಸಿನಿ ಸುದ್ದಿ

ಹುಡ್ಗೀರ ಡಾರ್ಲಿಂಗ್.. ಲಕ್ಕಿಮ್ಯಾನ್ ಕೃಷ್ಣನ `ದಿಲ್’ ಪಸಂದ್ ; ಮೇಘಾ-ನಿಶ್ವಿಕಾ ಜೊತೆ ನಿಧಿಮಾ ಹಸ್ಬೆಂಡ್ ಡ್ಯುಯೆಟ್ !

ಜಿಲೇಬಿ, ದೂದ್‌ಪೇಡಾ ಆಯ್ತು, ಈಗ ದಿಲ್‌ಪಸಂದ್ ಟೈಮು. ಶುಗರ್ ಇದ್ದವರು ಇಲ್ಲದವರು ಎಲ್ಲರೂ ಕೂಡ ಒಮ್ಮೆಯಾದರೂ ದಿಲ್‌ಪಸಂದ್ ಟೇಸ್ಟ್ ಮಾಡಿರ್ತಾರೆ. ಮಿಕ್ಚರ್ ಆಫ್ ಸ್ವೀಟ್ಸ್ ಅಂಡ್ ಡ್ರೈ ಫ್ರೂಟ್ಸ್ ಒಳಗೊಂಡಿರುವ ದಿಲ್‌ಪಸಂದ್ ರುಚಿ ಹೇಗಿರುತ್ತೆ ಅಂತ ಎಲ್ಲರಿಗೂ ಗೊತ್ತಿರುತ್ತೆ. ಆದರೆ, ಗಾಂಧಿನಗರದಲ್ಲಿ ಹೊಸದಾಗಿ ತಯ್ಯಾರಾಗುತ್ತಿರುವ ಈ ದಿಲ್‌ಪಸಂದ್ ಸ್ವಾದದ ಬಗ್ಗೆ ಹೇಳಲೇಬೇಕು. ನೀವು ಒಮ್ಮೆ ಇದನ್ನು ನೋಡ್ಲೇಬೇಕು.

ಕನ್ನಡ ನಾಡಿನ ಸಿನಿರಸಿಕರ ದಿಲ್' ಕದಿಯೋದಕ್ಕೆ ನಿರ್ದೇಶಕರು ಒಂದಿಲ್ಲೊಂದು ಕಸರತ್ತು ಮಾಡುತ್ತಲೇ ಇರುತ್ತಾರೆ. ಸಿನಿಮಾ ಟೈಟಲ್- ಸಾಂಗ್ಸ್- ಡೈಲಾಗ್ಸ್-ಕಥೆ- ಚಿತ್ರಕಥೆ-ಸಂಭಾಷಣೆ-ಸ್ಟಾರ್‌ ಕಾಸ್ಟಿಂಗ್ ಹೀಗೆ ಎಲ್ಲದರಲ್ಲೂ ಹೊಸತನ ತೋರಿಸಿ, ತಾಜಾ ಸಮಾಚಾರ ಹೇಳಿ ಚಿತ್ರಪ್ರೇಮಿಗಳ ಹೃದಯ ಗೆಲ್ಲೋದಕ್ಕೆ ಹಪಹಪಿಸುತ್ತಾರೆ. ಅದರಂತೇ, ಇಲ್ಲೊಂದು ಚಿತ್ರತಂಡ ಪ್ರೇಕ್ಷಕಮಹಾಪ್ರಭುಗಳ ಹಾರ್ಟ್ ಕದಿಯೋದಕ್ಕೆ, ಬಿಗ್‌ ಸ್ಕ್ರಿನ್ ನಲ್ಲಿ ಮೆರೆಯೋದಕ್ಕೆ ಹಾಗೂ ಬಾಕ್ಸ್ಆಫೀಸ್ ಲೂಟಿ ಹೊಡೆಯೋದಕ್ಕೆದಿಲ್ ಪಸಂದ್’ ಹೆಸರಲ್ಲೇ ಸಿನಿಮಾ ಮಾಡ್ತಿದೆ.

ಹೆಣೈಕ್ಳ ಆಲ್‌ಟೈಮ್ ಡಾರ್ಲಿಂಗ್ ಹಾಗೂ ನಿಧಿಮಾ ಹಸ್ಬೆಂಡ್ ಕೃಷ್ಣ ದಿಲ್ ಪಸಂದ್' ಹೀರೋ. 'ಲವ್‌ಮಾಕ್ಟೇಲ್' ರುಚಿ ತೋರ್ಸಿ ಲವ್‌ಬರ್ಡ್ಸ್ ಪಾಲಿಗೆ ಹೀರೋ ಆಗಿರುವ ಕೃಷ್ಣ ಈಗ ಲಕ್ಕಿಮ್ಯಾನ್ ಆಗ್ಬಿಟ್ಟಿದ್ದಾರೆ. ಎಷ್ಟರ ಮಟ್ಟಿಗೆ ಅಂದ್ರೆಲಕ್ಕಿಮ್ಯಾನ್’ ಹೆಸರಲ್ಲಿ ಸಿನಿಮಾ ಮಾಡುವಷ್ಟು ಲಕ್ಕಿಫೇಲೋ ಕೃಷ್ಣ ಅವರು. ಬಣ್ಣದ ಜಗತ್ತಿಗೆ ರೈಟ್ ಟೈಮ್‌ನಲ್ಲಿ ಬಂದ್ರೋ ಅಥವಾ ರಾಂಗ್ ಟೈಮ್‌ನಲ್ಲಿ ಬಣ್ಣ ಹಚ್ಚಿದ್ರೋ ಇಲ್ಲವೋ ಗೊತ್ತಿಲ್ಲ. ಆದರೆ, ಜೀವನದಲ್ಲಿ ನಿಧಿಮಾ ಎಂಟ್ರಿಕೊಟ್ಟ ಕಥೆಯನ್ನೇ ಸಿನಿಮಾ ಆಗಿಸಿ ಸಿನಿಮಾಪ್ರೇಮಿಗಳಿಂದ ರೈಟ್ ಎನಿಸಿಕೊಂಡು, ಬೆಳ್ಳಿತೆರೆಯಿಂದ ಭೇಷ್ ಎನಿಸಿಕೊಂಡಿದ್ದಾರೆ. ಇಷ್ಟೇ ಅಲ್ಲ ಮಾಯಲೋಕದಲ್ಲಿ ಬೇಡಿಕೆ ಹೆಚ್ಚಿಸಿಕೊಂಡು ಡಿಮ್ಯಾಂಡಿಂಗ್ ನಾಯಕನಾಗಿ ಮೆರೆಯುತ್ತಿದ್ದಾರೆ.

ಡಾರ್ಲಿಂಗ್ ಕೃಷ್ಣ ಅವರ ಕೈಯಲ್ಲೀಗ ಏಳೆಂಟು ಸಿನಿಮಾಗಳಿವೆ. ಲವ್‌ಮಾಕ್ಟೇಲ್೨',ಶುಗರ್ ಫ್ಯಾಕ್ಟರಿ’, ಲವ್ ಮೀ ಆರ್ ಹೇಟ್ ಮೀ' ಹೀಗೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಿಗೆ ಸಹಿ ಹಾಕಿ ಶೈನ್ ಆಗ್ತಿರುವ ಡಾರ್ಲಿಂಗ್ ಈಗದಿಲ್ ಪಸಂದ್’ ಹೆಸರಿನ ಚಿತ್ರಕ್ಕೆ ನಾಯಕ ನಟನಾಗಿ ಸೇರಿಕೊಂಡಿದ್ದಾರೆ. ಮಳೆ, ಧೈರ್ಯಂ, ಶಿವಾರ್ಜುನ, ಲೌಡ್‌ಸ್ಪೀಕರ್ ಚಿತ್ರಗಳ ನಿರ್ದೇಶಕ ಶಿವತೇಜಸ್ ದಿಲ್‌ಪಸಂದ್' ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇತ್ತೀಚೆಗಷ್ಟೇ ಟೈಟಲ್ ಬಿಡುಗಡೆಯಾಗಿದೆ. ಕನ್ನಡ ನಾಡಿನ ಹೆಮ್ಮೆಯ ಹಾಗೂ ದಕ್ಷ ಐಪಿಎಸ್ ಅಧಿಕಾರಿ ರವಿ.ಡಿ. ಚೆನ್ನಣ್ಣನವರ್ದಿಲ್‌ಪಸಂದ್’ ಶೀರ್ಷಿಕೆ ಅನಾವರಣ ಮಾಡಿದ್ದಾರೆ.

‘ಜೊತೆಜೊತೆಯಲಿ’ ಸೀರಿಯಲ್ ಮೂಲಕ ಕರುನಾಡಿನ ಮನೆ-ಮನ ತಲುಪಿರುವ ಮೇಘಾಶೆಟ್ಟಿ ಹಾಗೂ ನಿಶ್ವಿಕಾ ನಾಯ್ಡು ಡಾರ್ಲಿಂಗ್ ಕೃಷ್ಣಗೆ ಜೊತೆಯಾಗಿದ್ದಾರೆ. ನಾನಿ, ಬರ್ಕ್ಲಿ, ಕಾಲಚಕ್ರ ಸಿನಿಮಾಗಳ ನಿರ್ದೇಶಕ ಸುಮಂತ್ ಕ್ರಾಂತಿ ಈಗ ಅನ್ನದಾತರಾಗಿ ಬಡ್ತಿಹೊಂದಿದ್ದಾರೆ. `ದಿಲ್ ಪಸಂದ್’ಗೆ ಬಂಡವಾಳ ಹೂಡಿದ್ದಾರೆ. ರೊಮ್ಯಾಂಟಿಕ್ ಲವ್ ಕಾಮಿಡಿ ಚಿತ್ರವಾಗಿದ್ದು ಅತೀ ದೊಡ್ಡ ತಾರಾಬಳಗ ಚಿತ್ರದಲ್ಲಿದೆ. ತಬಲನಾಣಿ, ರಂಗಾಯಣ ರಘು, ಸಾಧುಕೋಕಿಲ ಸೇರಿದಂತೆ ಹಲವರು ಪ್ರಮುಖ ಪಾತ್ರದಲ್ಲಿದ್ದಾರೆ. ಅರ್ಜುನ್ ಜನ್ಯಾ ಸಂಗೀತ, ಶೇಖರ್ ಚಂದ್ರು ಅವರ ಕ್ಯಾಮೆರಾ ಕೈಚಳಕ ಚಿತ್ರಕ್ಕಿದ್ದು, ಅಕ್ಟೋಬರ್ 04 ರಿಂದ ಫಿಲ್ಮಿ ಟೀಮ್ ಶೂಟಿಂಗ್ ಅಖಾಡಕ್ಕೆ ಧುಮ್ಕಲಿದೆ.
ವಿಶಾಲಾಕ್ಷಿ, ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

error: Content is protected !!