ಅಕ್ಟೋಬರ್‌ 10 ರಿಂದ ಜೇಮ್ಸ್‌ ಸಾಂಗ್‌ ಶೂಟ್‌ ಶುರು – ಅದ್ದೂರಿ ಸೆಟ್‌ನಲ್ಲಿ ಅಪ್ಪು ಡಾನ್ಸು !

ಟಿ.ವಿ ರೈಟ್ಸ್‌ ಅತ್ಯಧಿಕ ಮೊತ್ತಕ್ಕೆ ಸೇಲ್‌ ಆದ ಕಾರಣಕ್ಕೆ ಭರ್ಜರಿ ಸುದ್ದಿಯಲ್ಲಿರುವ ಜೇಮ್ಸ್‌ ಚಿತ್ರಕ್ಕೆ ಈಗ ಸಾಂಗ್ ಶೂಟ್‌ ಶುರುವಾಗುತ್ತಿದೆ. ಹಾಗೆಯೇ ಫೈಟ್ಸ್‌ ಸೀನ್‌ ಕೂಡ ಶೂಟ್‌ ಆಗಬೇಕಿದೆಯಂತೆ. ಅದಕ್ಕೆ ದಿನಾಂಕವೂ ನಿಗದಿ ಆಗಿದೆ.

ಪವರ್‌ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಹಾಗೂ ನಿರ್ದೇಶಕ ಬಹದ್ದೂರ್‌ ಚೇತನ್‌ ಜೋಡಿಯ ಬಹುನಿರೀಕ್ಷಿತ ಅದ್ದೂರಿ ಚಿತ್ರ ʼಜೇಮ್ಸ್‌ ʼ ಚಿತ್ರೀಕರಣದ ಹಂತದಲ್ಲೇ ಸಖತ್‌ ಸೌಂಡ್‌ ಮಾಡುತ್ತಿದೆ. ಇನ್ನು ಹಾಡು ಹಾಗೂ ಫೈಟ್‌ ಸೀನ್‌ ಚಿತ್ರೀಕರಣ ಬಾಕಿ ಇರುವಾಗಲೇ ಅದರ ಟಿ.ವಿ ರೈಟ್ಸ್‌ ದಾಖಲೆ ಮೊತ್ತಕ್ಕೆ ಸೇಲ್‌ ಆಗಿದೆ. ಸ್ಟಾರ್‌ ಸುವರ್ಣ ವಾಹಿನಿಯು ದೊಡ್ಡ ಮೊತ್ತಕ್ಕೆ ʼಜೇಮ್ಸ್‌ ʼ ಟಿವಿ ರೈಟ್ಸ್‌ ಖರೀದಿ ಮಾಡಿದೆ. ಒಂದು ಮೂಲದ ಪ್ರಕಾರ ಪವರ್‌ ಸ್ಟಾರ ಪುನೀತ್‌ ರಾಜ್‌ ಕುಮಾರ್‌ ಅವರ ಸಿನಿಮಾಗಳ ಪೈಕಿ ಅತ್ಯಧಿಕ ಮೊತ್ತಕ್ಕೆ ಟಿವಿ ರೈಟ್ಸ್‌ ಸೇಲ್‌ ಆದ ಹೆಗ್ಗಳಿಕೆ ʼಜೇಮ್ಸ್‌ʼ ಚಿತ್ರದ್ದು ಎನ್ನಲಾಗಿದೆ. ಅಧಿಕೃತವಾಗಿ ಟಿ.ವಿ ರೈಟ್ಸ್‌ ಸೇಲ್‌ ಆಗಿದ್ದು ಎಷ್ಟು ಮೊತ್ತಕ್ಕೆ ಎನ್ನುವ ಮಾಹಿತಿ ಇಲ್ಲವಾಗಿದ್ದರೂ, ಚಿತ್ರ ತಂಡವೇ ನೀಡುವ ಪ್ರಕಾರ 15 ಕೋಟಿಗೂ ಅಧಿಕವಂತೆ. ಇನ್ನು ಚಿತ್ರೀಕರಣದ ಹಂತದಲ್ಲಿಯೇ ಜೇಮ್ಸ್‌ ಭಾರೀ ಸೌಂಡ್‌ ಮಾಡುತ್ತಿರುವುದು ಭಾರೀ ಕುತೂಹಲ ಮೂಡಿಸಿದೆ.

ಚಂದನವನದಲ್ಲಿ ʼಜೇಮ್ಸ್‌ ʼ ದೊಡ್ಡ ಹವಾ ಶುರುವಾಗುತ್ತಿದೆ. ಸದ್ಯಕ್ಕೀಗ ಟಾಕಿ ಪೋಷನ್‌ ಚಿತ್ರಿಕರಣ ಮುಗಿಸಿರುವ ʼಜೇಮ್ಸ್‌ʼ ಚಿತ್ರಕ್ಕೆ ಅಕ್ಟೋಬರ್‌ 10 ರಿಂದ ಹಾಡು ಹಾಗೂ ಸಾಹಸ ದೃಶ್ಯಗಳ ಚಿತ್ರೀಕರಣ ಶುರುವಾಗುತ್ತಿದೆಯಂತೆ. ಆ ಮೂಲಕ ಇನ್ನೊಂದು ಹಂತದಲ್ಲಿ ಸೌಂಡ್‌ ಮಾಡಲು ರೆಡಿಯಾಗಿದೆ.ನಿರ್ದೇಶಕ ಬಹದ್ದೂರ್‌ ಚೇತನ್‌ಕುಮಾರ್‌ ಈಗ ಅದರಲ್ಲಿಯೇ ಬ್ಯುಸಿ ಆಗಿದ್ದಾರೆ. ನಿರ್ದೇಶಕ ಚೇತನ್‌ ಕುಮಾರ್‌ ಅವರು ಈ ಚಿತ್ರ ಕಥೆ, ಚಿತ್ರಕಥೆ ರೆಡಿ ಮಾಡಿಕೊಂಡಿದ್ದಾಗ ಹಾಡುಗಳ ಚಿತ್ರೀಕರಣಕ್ಕೆ ವಿದೇಶಕ್ಕೆ ಹೋಗುವ ಪ್ಲಾನ್‌ ಹಾಕಿಕೊಂಡಿದ್ದರಂತೆ. ಆದರೆ ಈಗ ಎಲ್ಲವೂ ಉಲ್ಟಾ ಆಗಿದೆ. ಕೊರೋನಾ ಹಿನ್ನೆಲೆಯಲ್ಲಿ ರಾಜ್ಯದ ವಿವಿಧೆಡೆಗಳಲ್ಲಿಯೇ ಹಾಡುಗಳ ಚಿತ್ರೀಕರಣಕ್ಕೆ ಸಿದ್ದತೆ ನಡೆಸಿದ್ದಾರಂತೆ. ಒಂದಷ್ಟು ದೃಶ್ಯಗಳನ್ನು ಅದ್ದೂರಿ ಸೆಟ್‌ನಲ್ಲೂ ಚಿತ್ರೀಕರಣ ನಡೆಸುವ ಪ್ಲಾನ್‌ ಚಿತ್ರತಂಡದ್ದು.

ಹಾಡು ಮತ್ತು ಸಾಹಸ ದೃಶ್ಯಗಳ ಚಿತ್ರೀಕರಣ ಶುರುವಾಗುವ ಕುರಿತು ಸಿನಿಲಹರಿ ಜತೆಗೆ ಮಾತನಾಡಿದ ನಿರ್ದೇಶಕ ಚೇತನ್‌ ಕುಮಾರ್‌ ಚಿತ್ರೀಕರಣದ ವಿಶೇಷತೆ ವಿವರಿಸಿದರು. ʼಸದ್ಯಕ್ಕೀಗ ಮೂರು ಹಾಡು ಹಾಗೂ ಒಂದು ಫೈಟ್‌ ಸೀನ್‌ ಶೂಟಿಂಗ್‌ ಬಾಕಿ ಇದೆ. ಈಗ ಅದನ್ನು ಚಿತ್ರೀಕರಿಸಲು ಪ್ಲಾನ್‌ ಹಾಕಿಕೊಂಡಿದ್ದೇವೆ. ಅಕ್ಟೋಬರ್‌ 10 ರಿಂದ ಚಿತ್ರೀಕರಣ ಶುರುವಾಗುತ್ತಿದೆ. ಸದ್ಯಕ್ಕೆ ಲೋಕೇಷನ್‌ ಫೈನಲ್‌ ಆಗಿಲ್ಲ. ಹಾಡಿನ ಸನ್ನಿವೇಶಗಳಿಗೆ ಸೂಕ್ತ ಎನಿಸುವ ಲೋಕೇಷನ್‌ ಬೇಕಿದೆ. ಇಷ್ಟರಲ್ಲಿಯೇ ಫೈನಲ್‌ ಮಾಡಿಕೊಂಡು ಚಿತ್ರೀಕರಣಕ್ಕೆ ಕಾಲಿಡಲಿದ್ದೇವೆʼ ಎಂದರು. ಇನ್ನು ಚಿತ್ರೀಕರಣದ ಹಂತದಲ್ಲಿಯೇ ಜೇಮ್ಸ್‌ ಚಿತ್ರದ ಸಾಟಲೈಟ್‌ ರೈಟ್ಸ್‌ ಅತ್ಯಧಿಕ ಮೊತ್ತಕ್ಕೆ ಸೇಲ್‌ ಆಗಿರುವುದು ಸಹಜವಾಗಿಯೇ ಅವರಿಗೆ ಖುಷಿ ಕೊಟ್ಟಿದೆ. ʼ ನಿಜಕ್ಕೂ ಇದು ಖುಷಿ ಸಮಾಚಾರ. ದೊಡ್ಡ ಮೊತ್ತಕ್ಕೆ ಟಿ.ವಿ ರೈಟ್ಸ್‌ ಸೇಲ್‌ ಆಗಿದೆ. ಒಂದು ಚಿತ್ರಕ್ಕೆ ಬಂಡವಾಳ ಹಾಕುವ ಒಬ್ಬ ನಿರ್ಮಾಪಕನ ಮುಖದಲ್ಲಿ ನಗು ಕಾಣುವುದು ಹೀಗೆಯೇ. ಅವರಿಗೂ ಉತ್ಸಾಹ ಹೆಚ್ಚಾಗಿದೆ ಎನ್ನುತ್ತಾರೆ ನಿರ್ದೇಶಕ ಚೇತನ್‌ ಕುಮಾರ್.

  • ಎಂಟರ್‌ ಟೈನ್‌ ಮೆಂಟ್‌ ಬ್ಯೂರೋ ಸಿನಿಲಹರಿ

Related Posts

error: Content is protected !!