ಸಿಕ್ಕ ಸಿಕ್ಕ ಪಾತ್ರಗಳನ್ನು ಒಪ್ಪಿಕೊಳ್ಳುವುದಕ್ಕಿಂತ ಸವಾಲಿನ ಪಾತ್ರಕ್ಕೆ ಜೀವ ತುಂಬುತ್ತೇನೆ ಎಂದಿದ್ದ ಸವಿಮಾದಪ್ಪ ಅವರು, ಅವಕಾಶ ಸಿಕ್ಕಿಲ್ಲ ಎನ್ನುವ ಕಾರಣಕ್ಕೆ ಸಾಯುವ ನಿರ್ಧಾರ ಮಾಡಿದ್ರಾ? ನಿಜಕ್ಕೂ ನಟಿ ಸವಿಮಾದಪ್ಪ ಸಾವಿನ ಹಿಂದೆ ಚಾನ್ಸ್ ಸಿಕ್ಕಿಲ್ಲ ಎನ್ನುವ ಕಾರಣ ಇದೆಯಾ ಅಥವಾ ಮೇಲ್ನೋಟಕ್ಕೆ ಕಂಡುಬರುತ್ತಿರುವ ಸತ್ಯವಾ ಪೊಲೀಸರ ತನಿಖೆಯಿಂದ ಬಯಲಾಗಬೇಕಿದೆ
ಕೂರ್ಗ್ ಚೆಲುವೆ, ಸ್ಯಾಂಡಲ್‌ವುಡ್‌ನ ಸುಂದರಿ ಸವಿಮಾದಪ್ಪ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನುವ ಸುದ್ದಿ ಲಭ್ಯವಾಗಿದೆ. ಅವಕಾಶಗಳಿಲ್ಲದೇ ಮನನೊಂದು ನೇಣಿಗೆ ಕೊರಳೊಡ್ಡಿದ್ದಾರೆನ್ನಲಾಗ್ತಿದೆ. ಚೌಕಟ್ಟು ಚಿತ್ರದ ಮೂಲಕ ನಟಿ ಸವಿಮಾದಪ್ಪ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದರು.
ಈ ಚಿತ್ರದ ನಿರ್ಮಾಪಕ ಮಂಜುನಾಥ್ ಅವ್ರನ್ನ ಸಿನಿಲಹರಿ ತಂಡ ಸಂಪರ್ಕ ಮಾಡಿದಾಗ, ಬಣ್ಣದ ಲೋಕದಲ್ಲಿ ಅವಕಾಶಗಳು ಕಡಿಮೆ ಆಯ್ತು ಎನ್ನುವ ಕಾರಣದಿಂದ ಸಾವಿಗೆ ಶರಣಾಗಿದ್ದಾರೆ ಎನ್ನುವ ಸುದ್ದಿ ನಮಗೆ ತಿಳಿದುಬಂದಿದೆ ಎಂದರು. ಸವಿಮಾದಪ್ಪ ಅವ್ರಿಗೆ ಚಿತ್ರರಂಗಕ್ಕೆ ಬರಲು ಅವರ ತಂದೆಯೇ ಪ್ರೇರಣೆಯಂತೆ. ಈ ಹಿಂದೆ ಸುದ್ದಿಗೋಷ್ಟಿಯಲ್ಲಿ ಖುದ್ದಾಗಿ ಹೇಳಿಕೊಂಡಿದ್ದರು. ದರ್ಶನ್ ಅಂದ್ರೆ ತುಂಬಾ ಇಷ್ಟ, ಅವರ ಸಿನಿಮಾಗಳನ್ನು ನೋಡಿಕೊಂಡು ಬೆಳೆದಿರುವುದಾಗಿ ತಿಳಿಸಿದ್ದರು.
ಚಿಕ್ಕಂದಿನಿಂದಲೂ ನಟನೆಯಲ್ಲಿ ತುಂಬಾ ಆಸಕ್ತಿಯಿದ್ದು, ಅಭಿನಯದ ಜೊತೆಗೆ ಸಿನಿಮಾಟೋಗ್ರಫಿ ಮಾಡುವ ಆಸಕ್ತಿಯಿದೆ ಎಂದಿದ್ದರು. ಸಿಕ್ಕ ಸಿಕ್ಕ ಪಾತ್ರಗಳನ್ನು ಒಪ್ಪಿಕೊಳ್ಳುವುದಕ್ಕಿಂತ ಸವಾಲಿನ ಪಾತ್ರಕ್ಕೆ ಜೀವ ತುಂಬುತ್ತೇನೆ ಎಂದಿದ್ದ ಸವಿಮಾದಪ್ಪ ಅವರು, ಅವಕಾಶ ಸಿಕ್ಕಿಲ್ಲ ಎನ್ನುವ ಕಾರಣಕ್ಕೆ ಸಾಯುವ ನಿರ್ಧಾರ ಮಾಡಿದ್ರಾ?
ನಿಜಕ್ಕೂ ನಟಿ ಸವಿಮಾದಪ್ಪ ಸಾವಿನ ಹಿಂದೆ ಚಾನ್ಸ್ ಸಿಕ್ಕಿಲ್ಲ ಎನ್ನುವ ಕಾರಣ ಇದೆಯಾ ಅಥವಾ ಮೇಲ್ನೋಟಕ್ಕೆ ಕಂಡುಬರುತ್ತಿರುವ ಸತ್ಯವಾ ಪೊಲೀಸರ ತನಿಖೆಯಿಂದ ಬಯಲಾಗಬೇಕಿದೆ.