ನಟ ದುನಿಯಾ ವಿಜಯ್ ನಿರ್ದೇಶನ ಹಾಗೂ ಅಭಿನಯದ ಬಹು ನಿರೀಕ್ಷಿತ ಚಿತ್ರ ʼಸಲಗʼ ಶೀಘ್ರದಲ್ಲಿಯೇ ತೆರೆ ಕಾಣಲಿದೆ. ಈಗಾಗಲೇ ಅದರ ರಿಲೀಸ್ ಡೇಟ್ ಫಿಕ್ಸ್ ಆಗಿತ್ತಾದರೂ, ಸದ್ಯಕ್ಕೆ ಕೊರೋನಾ ಮತ್ತೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಮತ್ತೆ ರಿಲೀಸ್ ಡೇಟ್ ಮುಂದಕ್ಕೆ ಹೋಗಿದೆ. ನಿರ್ಮಾಪಕ ಕೆ.ಪಿ. ಶ್ರೀಕಾಂತ್ ಪ್ರಕಾರ, ಮುಂದಿನ ವಾರದಲ್ಲಿ ರಿಲೀಸ್ ಡೇಟ್ ಫಿಕ್ಸ್ ಆಗಲಿದೆಯಂತೆ. ಆದರೆ ರಿಲೀಸ್ಗೂ ಮುನ್ನ ಚಿತ್ರದ ಬಗ್ಗೆ ಸಖತ್ ಪ್ರಚಾರ ನಡೆಸಲು ಮುಂದಾಗಿರುವ ಚಿತ್ರ ತಂಡ ಗುರುವಾರ ಚಿತ್ರದ ಪ್ರಮೋಷನಲ್ ಸಾಂಗ್ ವೊಂದನ್ನು ರಿಲೀಸ್ ಮಾಡಿದೆ.
ಸಖತ್ ಕಿಕ್ ನೀಡುವ ಈ ಸಾಂಗ್ ನಲ್ಲಿ ಅಷ್ಟೇ ಖಡಕ್ ಆದ ಡೈಲಾಗ್ ಕೂಡ ಇವೆ. ಅದೇ ಕಾರಣಕ್ಕೆ ಈಗ ಈ ಪ್ರಮೋಷನಲ್ ಸಾಂಗ್ ರಿಲೀಸ್ ಆದ ಕೇವಲೇ ಕ್ಷಣಗಳಲ್ಲಿ ಸೋಷಲ್ ಮೀಡಿಯಾದಲ್ಲಿ ವೈರಲ್ ಅಗಿದ್ದು, ಚಿತ್ರದ ಬಗ್ಗೆ ದೊಡ್ಡ ಕ್ರೇಜ್ ಹುಟ್ಟು ವಂತೆ ಮಾಡಿದೆ. ಪ್ರಮೋಷನಲ್ ಸಾಂಗ್ ಗುರುವಾರ ಗ್ರಾಂಡ್ ಆಗಿಯೇ ರಿಲೀಸ್ ಆಗಿದೆ.
ದುನಿಯಾ ವಿಜಯ್ ಅಭಿಮಾನಿಗಳು ಗೌರಿಬಿದನೂರಿನಲ್ಲಿ ಚಿತ್ರದ ರಿಲೀಸ್ ಸಂಭ್ರಮದಂತೆಯೇ ಪೋಸ್ಟರ್ , ಕಟೌಟ್ ಗಳು ಮೂಲಕ ಪಟಾಕಿ ಸಿಡಿಸಿ, ಸಾಂಗ್ ರಿಲೀಸ್ ಮಾಡಿದ್ದಾರೆ. ಸಿದ್ದಿ ಸಮುದಾಯದ ಜನರು ಹಾಡುವ ಹಾಡಿನ ಒಂದಷ್ಟು ಸನ್ನಿವೇಶಗಳನ್ನು ಈ ಪ್ರಮೋಷನಲ್ ಸಾಂಗ್ ನಲ್ಲಿ ತೋರಿಸಲಾಗಿದೆ. ಹಾಗೆಯೇ ದುನಿಯಾ ವಿಜಯ್, ಧನಂಜಯ್, ಕಾಕ್ರೋಚ್ ಸುಧೀ ಹಾಗೂ ಯಶ್ ಶೆಟ್ಟಿ ಪಾತ್ರಗಳನ್ನು ರಿವೀಲ್ ಮಾಡಲಾಗಿದೆ. ಪಾತ್ರಗಳು, ಅಲ್ಲಿ ಡೈಲಾಗ್ ಗಳು ತೀವ್ರ ಕುತೂಹಲ ಹುಟ್ಟಿಸುತ್ತವೆ. ದುನಿಯಾ ವಿಜಯ್ ಅವರ ಸಿನಿ ಜರ್ನಿಯಲ್ಲಿ ಇದೊಂದು ಪಕ್ಕಾ ಮಾಸ್ ಸಿನಿಮಾ ಎನ್ನುವ ಲುಕ್ ಈ ಪ್ರಮೋಷನಲ್ ಸಾಂಗ್ ನಲ್ಲಿ ಕಾಣಿಸಿಕೊಂಡಿದೆ. ನಿರ್ಮಾಪಕ ಕೆ.ಪಿ. ಶ್ರೀಕಾಂತ್ ಸಿನಿಮಾವನ್ನು ರಿಚ್ ಆಗಿಯೇ ತೆರೆಗೆ ತಂದಿದ್ದು, ಸಿನಿಮಾ ಎಲ್ಲದರಲ್ಲೂ ಅದ್ದೂರಿತನ ತುಂಬಿಕೊಂಡಿದೆ.
ಹೊಂಬಾಳೆ.. ಹೊಂಬಾಳೆ..ಹೊಂಬಾಳೆ.. ಎಲ್ಲಿ ನೋಡಿದ್ರೂ ಇವ್ರದ್ದೇ ಹವಾ.. ಎಲ್ಲಿ ನೋಡಿದ್ರೂ ಇವ್ರದ್ದೇ ಕಾರುಬಾರು.. ಅದ್ಯಾವ ದಿವ್ಯಕ್ಷಣದಲ್ಲಿ ಹೊಂಬಾಳೆ ಎನ್ನುವ ಮೂರಕ್ಷರದ ಸಂಸ್ಥೆ ಹುಟ್ಟುಹಾಕಿದ್ರೋ ಏನೋ ಗೊತ್ತಿಲ್ಲ. ಇವತ್ತು ಈ ಫಿಲ್ಮ್ ಸಂಸ್ಥೆಗೆ ಭೂಮಿತೂಕದ ಬೆಲೆಬಂದಿದೆ. ಗಂಧದ ಗುಡಿ ಮಾತ್ರವಲ್ಲ ಸಮಸ್ತ ಏಳುಕೋಟಿ ಕನ್ನಡಿಗರು ಹೆಮ್ಮೆಪಡುವ ನಿರ್ಮಾಣ ಸಂಸ್ಥೆಯಾಗಿದೆ.
ಸೌತ್ ಸಿನಿಮಾ ಇಂಡಸ್ಟ್ರಿ ಸ್ಟಾರ್ಸ್ ಡೈರೆಕ್ಟರ್ಸ್ ಹಾಗೂ ಹೀರೋಸ್ ಮಾತ್ರವಲ್ಲ ಭಾರತೀಯ ಚಿತ್ರರಂಗವೇ ಹೊಂಬಾಳೆ ಮೇಲೆ ಕಣ್ಣಿಟ್ಟಿದೆ. ಒಂದೇ ಒಂದು ಭಾರಿ ಈ ಸಂಸ್ಥೆ ತಮ್ಮ ಚಿತ್ರಕ್ಕೆ ಬಂಡವಾಳ ಹೂಡಿದರೆ ಸಾಕು ಎನ್ನುವ ಮಹಾದಾಸೆ ಇಟ್ಟುಕೊಂಡಿದ್ದಾರೆ. ಆ ಮಹಾಕನಸಿನ ಸಾಕಾರಕ್ಕಾಗಿ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಹರಸಾಹಸ ಪಡ್ತಿದ್ದಾರೆ. ಆದರೆ ಒಂದು ಮಾತ್ರ ಸತ್ಯ ಗಾಳಿಯಲ್ಲಿ ಗುಂಡು ಹಾರಿಸೋರಿಗೆ, ಸಿನಿಮಾ ನನ್ನ ಪ್ಯಾಷನ್ ಬುಟಾಟಿಕೆ ಬಿಡುವವರಿಗೆ ಹೊಂಬಾಳೆ ಸೊಪ್ಪು ಹಾಕಲ್ಲ ಅಷ್ಟೇ ಯಾಕೇ ಅಂತವರನ್ನ ಹತ್ತಿರಕ್ಕೂ ಸೇರಿಸಲ್ಲ.
ಅದೊಂದು ಕಾಲ ಇತ್ತು ಸ್ಟಾರ್ ಡೈರೆಕ್ಟರ್ ಮನೆ ಕದ ತಟ್ಟಬೇಕಿತ್ತು, ಡಿಮ್ಯಾಂಡಿಂಗ್ ಹೀರೋ ಕಾಲ್ ಶೀಟ್ ಗಿಟ್ಟಿಸಿಕೊಳ್ಳೋದಕ್ಕೆ ಹರಸಾಹಸ ಪಡಬೇಕಿತ್ತು ಆದ್ರೀಗ ಕಾಲ ಬದಲಾಗಿದೆ ಸ್ಟಾರ್ ಡೈರೆಕ್ಟರ್ ಗೆ ಹಾಗೂ ಹೀರೋಗೆ ಕೋಟಿ ಖಜಾನೆ ತೆರೆದಿಡುವ ನಿರ್ಮಾಣ ಸಂಸ್ಥೆಯ ಕಾಲ್ ಶೀಟ್ ಸಿಗಬೇಕಿದೆ. ಈ ಹೊತ್ತಿಗೆ ಇದು ಸುಲಭವಾಗಿಲ್ಲ ಅದು ಹೊಂಬಾಳೆಯಂತಹ ಸಂಸ್ಥೆಯ ಕಾಲ್ ಶೀಟ್ ಪಡೆಯುವುದು ಅಸಾಧ್ಯ. ಹಾಗಂತ ಅನ್ಯಥಾ ಭಾವಿಸಬಾರದು. ಯಾಕಂದ್ರೆ, ಯಶ್ ರಾಜ್, ಈರೋಸ್, ರೆಡ್ ಚಿಲ್ಲೀಸ್, ಆರ್ಕಾ ಮೀಡಿಯಾ, ಅನ್ನಪೂರ್ಣ, ಮೈತ್ರಿ, ಹೀಗೆ ಪ್ರತಿಷ್ಟಿತ ನಿರ್ಮಾಣ ಸಂಸ್ಥೆಗಳಿಗೆ ಸೆಡ್ಡು ಹೊಡೆಯುವ ಲೆವೆಲ್ಲಿಗೆ ಹೊಂಬಾಳೆ ಬೆಳೆದು ನಿಂತಿದೆ.
ಕೆಜಿಎಫ್ ಮೂಲಕ ಪ್ಯಾನ್ ಇಂಡಿಯಾ ತಲುಪಿ ಕನ್ನಡ ಚಿತ್ರರಂಗಕ್ಕೆ ಚಿನ್ನದ ಕಿರೀಟ ತೊಡಿಸಿದೆ.ಅಷ್ಟಕ್ಕೂ ನಾವು ಇವತ್ತು ಹೊಂಬಾಳೆ ಎನ್ನುವ ಹೆಮ್ಮೆಯ ಸಂಸ್ಥೆ ಬಗ್ಗೆ ಬರೆಯುತ್ತಿರುವುದಕ್ಕೆ ಕಾರಣ ಹನ್ನೊಂದನೇ ಸಿನಿಮಾ.ಇತ್ತೀಚಿಗಷ್ಟೇ 9 ಹಾಗೂ 10 ನೇ ಸಿನಿಮಾ ಬಗ್ಗೆ ಅನೌನ್ಸ್ ಮೆಂಟ್ ಮಾಡಿದ್ದರು. ಪವರ್ ಸ್ಟಾರ್ ಹಾಗೂ ಲೂಸಿಯಾ ಪವನ್ ಕಾಂಬಿನೇಷನ್ ನಲ್ಲಿ ದ್ವಿತ್ವ ಬರಲಿದೆ. ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ರಿಚರ್ಡ್ ಆಂಟನಿಯಾಗಿ ಬರಲಿದ್ದಾರೆ ಅಂತ ಅಧಿಕೃತವಾಗಿ ಅನೌನ್ಸ್ ಕೂಡ ಮಾಡಿದ್ದರು. ಇತ್ತೀಚೆಗಷ್ಟೇ, ಸೌತ್ ಸುಂದರಿ ತ್ರಿಷಾʼ ದ್ವಿತ್ವʼ ಗೆ ಜಾಯಿನ್ ಆಗಿದ್ದಾರೆ. ಹೊಂಬಾಳೆಯ ಹತ್ತನೇ ಚಿತ್ರದ ಹೊಣೆ ಹೊತ್ತಿರುವ ಶೆಟ್ಟರು ಅದ್ಯಾವ ಸುಂದರಿಯನ್ನು ಕರೆತರುತ್ತಾರೋ ಕಾದುನೋಡಬೇಕು.ಆದರೆ, ಈ ಮಧ್ಯೆ ಹೊಂಬಾಳೆ ಚಿತ್ರತಂಡ ಹನ್ನೊಂದನೇ ಸಿನಿಮಾಗೆ ಕೈಹಾಕಿದೆ.
ರಾಜ್ಯರಾಜಕಾರಣ ಧಗಧಗಿಸುತ್ತಿರುವಾಗ ಹನ್ನೊಂದನೇ ಸಿನಿಮಾ ಬಗ್ಗೆ ಬ್ರೇಕಿಂಗ್ ನ್ಯೂಸ್ ಕೊಟ್ಟಿರುವ ಹೊಂಬಾಳೆ, ಚಿತ್ರದ ಹೀರೋ ಹಾಗೂ ನಿರ್ದೇಶಕರ ಬಗ್ಗೆ ಹಿಂಟ್ ನ ಬಿಟ್ಟುಕೊಟ್ಟಿಲ್ಲ. ಆಗಸ್ಟ್ 06ರಂದು ಸಮಯ 11.43ಕ್ಕೆ ಸರಿಯಾಗಿ ಟೈಟಲ್ ಲಾಂಚ್ ಹಾಗೂ ಪೋಸ್ಟರ್ ಬಿಡುಗಡೆ ಮಾಡಲಿದ್ದೇನೆ ಎನ್ನುವ ಸುದ್ದಿ ರಿವೀಲ್ ಮಾಡಿದ್ದಾರೆ ಅಷ್ಟೇ.ಆದರೆ, ಪೋಸ್ಟರ್ ನಲ್ಲಿರುವ ‘ನಿನ್ನೊಳಗಿನ ಕಿಚ್ಚು ನಿನ್ನನ್ನು ಸುಡದಿರಲಿ’ ಎನ್ನುವ ಕ್ಯಾಪ್ಶನ್ ಇದೆಯಲ್ಲ ಅದು ಸಾಕಷ್ಟು ಕೂತೂಹಲ ಕೆರಳಿಸಿದೆ. ಕಿಚ್ಚು ಅಂದಾಕ್ಷಣ ಕಣ್ಣಲ್ಲೇ ಕೆಂಡ ಉಗುಳುವ ಹಲವು ನಾಯಕರು ಕಣ್ಮುಂದೆ ಬರುತ್ತಾರೆ. ನಿರ್ದಿಷ್ಟವಾಗಿ ಇವರಿಗೆ ಹೊಂಬಾಳೆ ದುಡ್ಡು ಹಾಕುತ್ತಿದೆ ಎಂದು ಪ್ರಿಡಿಕ್ಟ್ ಮಾಡುವುದು ಈಕ್ಷಣಕ್ಕೆ ಅಸಾಧ್ಯ. ಒಂದು ವೇಳೆ ಮಾಡಿದರೂ ಅಂತೆ- ಕಂತೆ ಅಂತ ಬಣ್ಣಬಣ್ಣದ ಟೋಪಿ ಹಾಕಿ ಮ್ಯಾಟರ್ ಸೇಲ್ ಮಾಡ್ಬೇಕು ಅಷ್ಟೇ. ಹಿಂಗ್ ಮಾಡೋದಕ್ಕಿಂತ ನಾಳೆವರೆಗೂ ಕಾಯೋಣ ಹೊಂಬಾಳೆ ಅನೌನ್ಸ್ ಮಾಡುವ ಹನ್ನೊಂದನೇ ಸಿನಿಮಾದ ನಾಯಕ ಹಾಗೂ ನಿರ್ದೇಶಕನನ್ನು ತಲೆಮೇಲೆ ಹೊತ್ತು ಮೆರೆಸೋಣ
ಬಿಗ್ ಬಾಸ್ ಸೀಸನ್ 8 ಫಿನಾಲೆ ಹಂತಕ್ಕೆ ಬಂದಿದೆ. ಈಗಲೂ ಅಲ್ಲಿರುವ ಈ ಕ್ಯೂಟ್ ಜೋಡಿ, ತಮ್ಮ ಮೋಹಕ ನೋಟ, ಮುತ್ತಿನಂತಹ ಮಾತು, ಕಚಗುಳಿ ಇಡುವ ನಗುವಿನ ಮೂಲಕ ಕನ್ನಡ ಕಿರುತೆರೆಯ ಕೋಟ್ಯಾಂತರ ವೀಕ್ಷಕರ ಮನೆ ಗೆಲ್ಲುತ್ತಿದೆ. ಇವರಲ್ಲಿಯೇ ಒಬ್ಬರು ಫಿನಾಲೆಯ ವೇದಿಕೆ ಮೇಲೆ ನಿಂತು ಟ್ರೋಫಿ ಗೆಲ್ಲೋದು ಖಚಿತ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಈ ನಡುವೆಯೇ ಈ ಜೋಡಿಯ ಬಗ್ಗೆ ಬಿಗ್ ಬಾಸ್ ಮನೆಯಾಚೆ ಅಂದ್ರೆ ಸಾರ್ವಜನಿಕ ವಲಯದಲ್ಲಿ ಕೆಟ್ಟ ಅಭಿಪ್ರಾಯ ಬರುವಂತೆ ಮಾಡುವ ಹುನ್ನಾರವೊಂದು ಸೋಷಲ್ ಮೀಡಿಯಾದಲ್ಲಿ ನಡೆದಿದೆ. ಇತ್ತೀಚೆಗೆ ಅಂದರೆ ಒಂದು ವಾರದ ಹಿಂದೆ ನಟಿ ದಿವ್ಯಾ ಉರುಡುಗ ಅವರ ಜತೆಗೆ ಇನ್ನಾರೋ ಹುಡುಗ ಇದ್ದ ಒಂದು ಫೋಟೋ ವೈರಲ್ ಆಯಿತು. ಮತ್ತೊಂದೆಡೆ ಅರವಿಂದ್ ಕೆ.ಪಿ. ಜತೆಗೆ ಇನ್ನಾರೋ ಒಂದು ಹುಡುಗಿ ಜತೆಗಿದ್ದ ಫೋಟೋ ಕೂಡ ವೈರಲ್ ಆಯಿತು. ಇಷ್ಟು ದಿನ ಎಲ್ಲೂ ಹರಿದಾಡದ ಈ ಫೋಟೋಗಳು ಈಗೇಕೆ ಸೋಷಲ್ ಮೀಡಿಯಾದಲ್ಲಿ ಹರಿದಾಡಿದವು? ಈ ಫೋಟೋಗಳಲ್ಲಿ ಇದ್ದಂತೆ ದಿವ್ಯಾ ಉರುಡುಗ ಅವರಿಗೆ ಬ್ರಾಯ್ ಫ್ರೆಂಡ್ ಇದ್ದದ್ದು ನಿಜವೇ? ಅತ್ತ ಅರವಿಂದ್ ಕೆ.ಪಿ. ಅವರಿಗೆ ಒಬ್ಬ ಗರ್ಲ್ ಫ್ರೆಂಡ್ ಇದ್ದದ್ದು ನಿಜವೇ? ಸೋಷಲ್ ಮೀಡಿಯಾದಲ್ಲಿ ಈ ಫೋಟೋಗಳು ವೈರಲ್ ಆಗುತ್ತಿದ್ದಂತೆ ಸಾರ್ವಜನಿಕ ವಲಯದಲ್ಲಿ ಇಂತಹ ಪ್ರಶ್ನೆಗಳು ಹುಟ್ಟಿದ್ದು ಅಷ್ಟೇ ಸಹಜ. ಆದರೆ ಅದರ ಹಿಂದಿನ ಅಸಲಿ ಕಹಾನಿ ಈಗ ಬಯಲಾಗಿದೆ.
ಒಂದು ಮೂಲಗಳ ಪ್ರಕಾರ ಈ ಫೋಟೋಗೆಳೆರೆಡು ಯಾರೋ ಕ್ರಿಯೇಟ್ ಮಾಡಿದ್ದೇ ಆಗಿದೆ. ಹಾಗೆಯೇ ಮತ್ತೊಂದು ಇಂಟರೆಸ್ಟಿಂಗ್ ಸಂಗತಿ ಅಂದ್ರೆ ಬಿಗ್ ಬಾಸ್ ಮನೆಯೊಳಗಡೆ ಇರುವ ಒಬ್ಬ ಕಂಟೆಸ್ಟೆಂಡ್ ಪರವಾದ ವ್ಯಕ್ತಿಗಳೇ ಈ ಫೋಟೋಗಳನ್ನು ಎಡಿಟ್ ಮೂಲಕ ಕ್ರಿಯೇಟ್ ಮಾಡಿ, ಅರವಿಂದ್ ಹಾಗೂ ದಿವ್ಯಾ ಉರುಡುಗ ಜೋಡಿಯ ಬಗ್ಗೆ ಕೆಟ್ಟ ಅಭಿಪ್ರಾಯ ಬರುವಂತೆ ಮಾಡಲು ಹೊರಟಿರುವ ಸಂಗತಿಯನ್ನು ಮೂಲಗಳು ಬಹಿರಂಗ ಪಡಿಸಿವೆ. ಸದ್ಯಕ್ಕೆ ಈ ಎಡಿಟ್ ಫೋಟೋ ಹಿಂದಿನ ಸೂತ್ರಧಾರಿ ಯಾರು ಅಂತ ಖಚಿತವಾಗಿ ಗೊತ್ತಿಲ್ಲ. ಆದರೆ ಅಲ್ಲಿರುವ ವ್ಯಕ್ತಿಯೇ ಈ ಎಡಿಟ್ ಫೋಟೋಗಳ ಹಿಂದಿನ ಸೂತ್ರಧಾರಿ ಎನ್ನುವ ಸುದ್ದಿ ಮಾತ್ರ ಹರಿದಾಡುತ್ತಲೇ ಇದೆ.
ಕನ್ನಡ ಕಿರುತೆರೆಯ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಫಿನಾಲೆ ಹಂತಕ್ಕೆ ಬಂದಿದೆ. ಇದೇ ವಾರ ಅದರ ಫಿನಾಲೆ ಎಪಿಸೋಡ್ ಪ್ರಸಾರವಾಗುತ್ತಿದೆ. ಸದ್ಯಕ್ಕೆ ಬಿಗ್ ಬಾಸ್ ಬಗ್ಗೆ ದೊಡ್ಡ ಕುತೂಹಲ ಇರೋದು ʼಸೀಸನ್ ೮ʼ ವಿನ್ನರ್ ಯಾರು ಅಂತ. ಸಾಮಾನ್ಯವಾಗಿ ಬಿಗ್ ಬಾಸ್ ಫಲಿತಾಂಶ ವೀಕ್ಷಕರ ವೊಟಿಂಗ್ ವ್ಯವಸ್ಥೆ ಮೇಲೆ ನಡೆಯೋ ದ್ರಿಂದ ತಕ್ಷಣಕ್ಕೆ ಅದರ ವಿನ್ನರ್ ಯಾರು ಅಂತ ನಿಖರವಾಗಿ ಹೇಳುವುದು ಕಷ್ಟ. ಆದರೆ ಈಗ ಬಿಗ್ಬಾಸ್ ಫೈನಲ್ಗೆ ಬಹುತೇಕ ಅರವಿಂದ್ ಕೆ.ಪಿ., ಮಂಜು ಪಾವಗಡ ಹಾಗೂ ವೈಷ್ಣವಿ ಗೌಡ ಬರುವುದು ಗ್ಯಾರಂಟಿ.
ಉಳಿದಂತೆ ಇದರಲ್ಲಿ ಗೆಲ್ಲೋದು ಯಾರು ಅನ್ನೋದೇ ದೊಡ್ಡ ಕುತೂಹಲ. ಈಗ ಬಿಗ್ ಬಾಸ್ ಮನೆಯಲ್ಲಿ ಐವರು ಸ್ಪರ್ಧಿಗಳಿದ್ದಾರೆ. ಪ್ರಶಾಂತ್ ಸಂಬರಗಿ, ವೈಷ್ಣವಿ ಗೌಡ, ಮಂಜು ಪಾವಗಡ, ಅರವಿಂದ್ ಕೆ.ಪಿ ಹಾಗೂ ದಿವ್ಯಾ ಉರುಡುಗ. ಈ ಪೈಕಿ ಫಿನಾಲೆಯಲ್ಲಿ ಎಲಿಮಿನೇಟ್ ಆಗುವವರು ಯಾರು ಎನ್ನುವುದು ಕೂಡ ಅಷ್ಟೇ ಕುತೂಹಲ ಹುಟ್ಟಿಸಿದೆ. ಬಿಗ್ ಬಾಸ್ ರಿಯಾಲಿಟಿ ಶೋ ಅನ್ನು ಆರಂಭದಿಂದ ವೀಕ್ಷಿಸುತ್ತಾ ಬಂದವರಿಗೆ ಅರವಿಂದ್ ಕೆ.ಪಿ, ಮಂಜು ಪಾವಗಡ ಹಾಗೂ ವೈಷ್ಣವಿ ಗೌಡ ಅವರ ಪರ್ಫಾರ್ಮೆನ್ಸ್ ಬಗ್ಗೆ ಗೊತ್ತೇ ಇದೆ. ಆರಂಭದಿಂದಲೂ ಇಲ್ಲಿ ತನಕ ಈ ಮೂವರು ಯಾವುದೇ ಅಬ್ಬರ ಇಲ್ಲದೆ, ಯಾವುದೇ ವಿವಾದಕ್ಕೂ ಸಿಲುಕದೆ ಅತ್ಯಂತ ಜಾಣ ತನದಿಂದ ಆಟ ಆಡುತ್ತಾ ಬಂದಿದ್ದಾರೆ. ಸಹಜವಾಗಿಯೇ ಇವರ ಬಗ್ಗೆ ಸಾರ್ವಜನಿಕ ವಲಯದಲ್ಲೂ ಒಳ್ಳೆಯ ಅಭಿಪ್ರಾಯಗಳೇ ಇವೆ. ಹಾಗೆಯೇ ಇವರ ಆಟದ ವೈಖರಿಗೂ ಕಿಚ್ಚ ಸುದೀಪ್ ಕಡೆಯಿಂದಲೂ ಸಾಕಷ್ಟು ಮೆಚ್ಚುಗೆಯೂ ಸಿಕ್ಕಿದೆ. ಹಾಗಾಗಿ ಈ ಮೂವರಲ್ಲಿ ಒಬ್ಬರ ಬಿಗ್ ಬಾಸ್ ʼಸೀಸನ್ ೮ʼ ರ ಟ್ರೋಫಿ ಎತ್ತುವುದು ಗ್ಯಾರಂಟಿ ಎನ್ನುವ ಮಾತು ಸಾರ್ವಜನಿಕ ವಲಯದಲ್ಲೂ ಇದೆ. ಹಾಗಂತ ಪ್ರಶಾಂತ್ ಸಂಬರಗಿ, ದಿವ್ಯ ಉರುಡುಗ ಅವರೇನು ಕಮ್ಮಿ ಇಲ್ಲ. ಆರಂಭದಿಂದ ಇಲ್ಲಿ ತನಕ ಬಿಗ್ ಬಾಸ್ ಮನೆಯಲ್ಲಿ ಎಲಿಮಿನೇಟ್ ಆಗದೆ ಉಳಿದುಕೊಂಡಿದ್ದಾರೆಂದರೆ, ಅವರನ್ನು ಅಷ್ಟು ಸುಲಭವಾಗಿ ಕಡೆಗಣಿಸುವಂತಿಲ್ಲ. ಅವರು ಕೂಡ ಫಿನಾಲೆಗೆ ಕಾಲಿಟ್ಟು ಸುದೀಪ್ ಅವರ ಅಕ್ಕ-ಪಕ್ಕ ನಿಂತರೂ ಅಚ್ಚರಿ ಇಲ್ಲ.
ಕೊರೊನಾ ಹಾವಳಿ ಕಡಿಮೆಯಾಗುತ್ತಿದ್ದಂತೆಯೇ ಚಿತ್ರರಂಗ ಮತ್ತೆ ಗರಿಗೆದರಿದ್ದು ಗೊತ್ತೇ ಇದೆ. ಹಾಗಾಗಿ, ಇಲ್ಲಿ ಹೊಸಬರು ಮತ್ತು ಹಳಬರು ಮತ್ತದೇ ಉತ್ಸಾಹದಲ್ಲಿ ತಮ್ಮ ಸಿನಿಮಾ ಕೆಲಸಗಳತ್ತ ನಿರತರಾಗಿದ್ದಾರೆ. ಇನ್ನು, “ಟಗರು” ಖ್ಯಾತಿಯ ಪುಟ್ಟಿ ಎಂದೇ ಹೆಸರಾಗಿರುವ ಮಾನ್ವಿತಾ ಕಾಮತ್ ಕೂಡ ಸದ್ದಿಲ್ಲದೆಯೇ ಹೊಸದೊಂದು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಹೌದು, “ದಿಯಾ” ಖ್ಯಾತಿಯ ಪೃಥ್ವಿ ಅಂಬರ್ ಜೊತೆ ಮಾನ್ವಿತಾ ಕಾಮತ್ ನಟಿಸುತ್ತಿದ್ದಾರೆ ಅನ್ನೋ ವಿಷಯ ಹರಡಿದೆ.
ಅಂದಹಾಗೆ, ಸಬೂ ಅಲೋಶಿಯಸ್ ಮತ್ತು ಅರುಣ್ ಕುಮಾರ್ ಜೋಡಿ ನಿರ್ದೇಶಿಸುತ್ತಿರುವ ಈ ಸಿನಿಮಾದ ಚಿತ್ರೀಕರಣ ಅದಾಗಲೇ ಮೆಲ್ಲನೆ ಶುರುವಾಗಿದೆ. “ದಿಯಾ” ಸಿನಿಮಾ ಸಕ್ಸಸ್ ಆಗಿದ್ದೇ ತಡ, ನಟ ಪೃಥ್ವಿ ಅಂಬರ್ ಅವರು ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಶಿವರಾಜಕುಮಾರ್ ಅಭಿನಯದ “ಬೈರಾಗಿ” ಚಿತ್ರದಲ್ಲೂ ಪೃಥ್ವಿ ಅಂಬರ್ ನಟಿಸುತ್ತಿದ್ದಾರೆ.
ಈ ಚಿತ್ರವನ್ನು ವಿಜಯ್ ಮಿಲ್ಟನ್ ನಿರ್ದೇಶಿಸುತ್ತಿದ್ದಾರೆ. ಅಷ್ಟೇ ಅಲ್ಲ, ಪೃಥ್ವಿ ಅಂಬರ್ ಅವರು ತಮಿಳು ಸಿನಿಮಾದಲ್ಲೂ ನಟಿಸುವ ಅವಕಾಶ ಬಂದಿದ್ದು, ಅಲ್ಲಿಯೂ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು, ಮಾನ್ವಿತಾ ಕಾಮತ್ ಕೂಡ ಇತ್ತೀಚೆಗೆ ನಿರ್ದೇಶಕ ಪಿ.ಸಿ.ಶೇಖರ್ ನಿರ್ದೇಶನದ ಹೊಸ ಚಿತ್ರಕ್ಕೂ ಆಯ್ಕೆಯಾಗಿದ್ದಾರೆ.
ಕನ್ನಡದ ಬೆಡಗಿ ರಶ್ಮಿಕಾ ಮಂದಣ್ಣ, ನೋಡ ನೋಡುತ್ತಿದ್ದಂತೆಯೇ, ಸಾಕಷ್ಟು ಸುದ್ದಿ ಮಾಡಿಬಿಟ್ಟರು. ಕನ್ನಡದಿಂದ ಟಾಲಿವುಡ್, ಕಾಲಿವುಡ್ಗೆ ಜಂಪ್ ಮಾಡಿರುವ ರಶ್ಮಿಕಾ ಬಾಲಿವುಡ್ ಅಂಗಳಕ್ಕೂ ಜಿಗಿದಿರುವ ಸುದ್ದಿ ಹೊಸದೇನಲ್ಲ. ಮೊದಲ ಬಾಲ್ನಲ್ಲೇ ಸಿಕ್ಸರ್ ಬಾರಿಸಿದಂತೆ, ಮೊದಲ ಹಿಂದಿ ಸಿನಿಮಾದಲ್ಲೇ ಬಾಲಿವುಡ್ ಲೆಜೆಂಡ್ ಅಮಿತಾಬ್ ಬಚ್ಚನ್ ಅವರೊಂದಿಗೆ ನಟಿಸುವ ಅವಕಾಶ ಪಡೆದರು. “ಗುಡ್ ಬೈ” ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಅವರು ಅಮಿತಾಬ್ ಬಚ್ಚನ್ ಜೊತೆ ಮಗಳ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಯಾವುದೇ ಕಲಾವಿದ ಅಥವಾ ಕಲಾವಿದೆಗೆ ಅಮಿತಾಬ್ ಜೊತೆ ನಟಿಸಬೇಕೆಂಬ ಹಂಬಲ ಇದ್ದೇ ಇರುತ್ತೆ. ಆದರೆ, ಅದು ಅದೃಷ್ಟವಂತರಿಗೆ ಮಾತ್ರ ಆ ಅವಕಾಶ ಸಿಗುತ್ತೆ. ಅಂಥದ್ದೊಂದು ಅವಕಾಶ ರಶ್ಮಿಕಾ ಮಂದಣ್ಣ ಅವರಿಗೆ ಬಹುಬೇಗ ಸಿಕ್ಕಿದ್ದು, ನಿಜಕ್ಕೂ ತಮಾಷೆಯ ಮಾತಲ್ಲ. ಅಂದಹಾಗೆ, ರಶ್ಮಿಕಾ ಮಂದಣ್ಣ ಅವರು, “ಗುಡ್ ಬೈ” ಸಿನಿಮಾದಲ್ಲಿ ಅಮಿತಾಬ್ ಬಚ್ಚನ್ ಅವರೊಂದಿಗೆ ನಟಿಸಿದ ಅನುಭವ ಕುರಿತು ಮಾಧ್ಯಮಗಳ ಜೊತೆ ಮಾತಾಡಿದ್ದಾರೆ. “ನಾನು ನಿಜಕ್ಕೂ ಅದೃಷ್ಟವಂತೆ. ಬಾಲಿವುಡ್ ಹಿರಿಯ ನಟ, ಅಮಿತಾಬ್ ಬಚ್ಚನ್ ಅವರ ಜೊತೆ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದು, ಅದ್ಭುತ ಅನುಭವ.
ಯಾವುದೇ ಚಿತ್ರತಂಡವಿರಲಿ, ಅಲ್ಲಿ ಸಾಕಷ್ಟು ದಿನಗಳ ಕಾಲ ಚಿತ್ರೀಕರಣದಲ್ಲಿ ತೊಡಗಿದರೆ, ಅಲ್ಲಿ ನಟಿಸುವ ಕಲಾವಿದರೊಂದಿಗೆ ಒಂದಷ್ಟು ಸಲುಗೆ ಇದ್ದೇ ಇರುತ್ತೆ. ಆ ನಂತರ ಅವರೊಂದಿಗೆ ಕ್ಯಾಮೆರಾ ಮುಂದೆ ನಿಂತು ಅಭಿನಯಿಸುವುದು ಸುಲಭವಾಗುತ್ತೆ. ನನಗೂ ಇಲ್ಲಿ ಹಾಗೆಯೇ ಆಗಿದೆ. ಅಮಿತಾಬ್ ಬಚ್ಚನ್ ಅವರೊಟ್ಟಿಗೆ ಬಹಳ ಕಂಫರ್ಟ್ ಆಗಿ ಕೆಲಸ ಮಾಡಿದೆ. ಆ ಚಿತ್ರದ ನಿರ್ದೇಶಕರು ಹಾಗೂ ಸೆಟ್ನಲ್ಲಿದ್ದ ಎಲ್ಲರಿಗೂ ನನ್ನ ಕೆಲಸ ಇಷ್ಟವಾಗಿದೆʼ ಎಂದು ರಶ್ಮಿಕಾ ಹೇಳಿಕೊಂಡಿದ್ದಾರೆ.
ಚಿತ್ರದಲ್ಲಿ ರಶ್ಮಿಕಾ ಅವರು ಅಮಿತಾಬ್ ಬಚ್ಚನ್ ಮಗಳ ಪಾತ್ರ ಮಾಡಿದ್ದಾರೆ. ಅದೊಂದು ಅಪ್ಪ-ಮಗಳ ಸಂಬಂಧ ಕುರಿತ ಕಥೆ. ಇಡೀ ಸಿನಿಮಾ ಅಪ್ಪ-ಮಗಳ ಸುತ್ತವೇ ಸುತ್ತುತ್ತದೆ. ಇನ್ನು, ಈ ಚಿತ್ರಕ್ಕೆ ವಿಕಾಸ್ ಭಾಲ್ ನಿರ್ದೇಶಕರು. ಬಾಲಾಜಿ ಮೋಶನ್ ಪಿಕ್ಚರ್ಸ್, ರಿಲಯನ್ಸ್ ಎಂಟರ್ಟೈನ್ಮೆಂಟ್ ನಿರ್ಮಾಣ ಮಾಡಿದೆ. ಹಿರಿಯ ನಟಿ ನೀನಾ ಗುಪ್ತಾ, ಶಿವಿನ್ ನಾರಂಗ್ ಇತರರು ನಟಿಸಿದ್ದಾರೆ. ಸದ್ಯ ರಶ್ಮಿಕಾ ಮಂದಣ್ಣ ಅವರು, ಬ್ಯುಝಿಯಾಗಿದ್ದಾರೆ. ತೆಲುಗಿನ ‘ಪುಷ್ಪ’ ಚಿತ್ರದ ಶೂಟಿಂಗ್ ನಡೆಯುತ್ತಿದೆ. ‘ಆಡುವಾಳ್ಳು ಮೀಕು ಜೋಹಾರ್ಲುʼ ಚಿತ್ರ ಕೂಡ ಇತ್ತೀಚೆಗೆ ಸೆಟ್ಟೇರಿದೆ. ಇದರೊಂದಿಗೆ ಸ್ಟಾರ್ ನಟ ವಿಜಯ್ ಜೊತೆಗೆ ಹೊಸ ಸಿನಿಮಾದಲ್ಲಿ ನಟಿಸಲಿದ್ದಾರೆ. ಹಿಂದಿಯಲ್ಲೂ ಸಿದ್ಧಾರ್ಥ್ ಮಲ್ಹೋತ್ರಾ ಜೊತೆಗೆ ‘ಮಿಷನ್ ಮಜ್ನು’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅದೇನೆ ಇರಲಿ, ಬಾಲಿವುಡ್ನಲ್ಲಿ ಗಟ್ಟಿ ನೆಲೆಯೂರುವ ಸಲುವಾಗಿ ಮುಂಬೈನಲ್ಲಿ ರಶ್ಮಿಕಾ ಮಂದಣ್ಣ ಹೊಸ ಮನೆ ಖರೀದಿಸಿದ್ದೂ ಹೌದು.
ಚಿತ್ರರಂಗ ಈಗ ಸಂಕಷ್ಟದಲ್ಲಿದೆ. ಸದ್ಯಕ್ಕೆ ಶೇಕಡಾ 50 ರಷ್ಟು ಸೀಟು ಭರ್ತಿಯೊಂದಿಗೆ ಚಿತ್ರಮಂದಿರಗಳು ಓಪನ್ ಆಗಲು ಅವಕಾಶ ಸಿಕ್ಕಿದೆ. ಹಾಗೆಯೇ ಚಿತ್ರೀಕರಣಕ್ಕೂ ಅನುಮತಿ ನೀಡಿದೆ. ಆದರೆ ಲಾಕ್ ಡೌನ್ ಕಾರಣದಿಂದ ಉದ್ಯಮ ಈಗ ಭಾರೀ ಆರ್ಥಿಕ ಹೊಡೆತಕ್ಕೆ ಸಿಲುಕಿದೆ. ಈ ಹೊತ್ತಲ್ಲಿ ಸರ್ಕಾರದಿಂದ ಒಂದಷ್ಟು ರಿಯಾಯಿತಿಗಳು ಸಿಕ್ಕರೆ ಉದ್ಯಮ ಚೇತರಿಕೆ ಕಾಣಬಹುದು ಅಂತಲೂ ಉದ್ಯಮದ ಜನರ ನಿರೀಕ್ಷೆ ಹೊಂದಿದ್ದಾರೆ. ಈ ಹೊತ್ತಲ್ಲಿಯೇ ನಿರ್ಮಾಪಕರೂ ಆದ ಬೆಂಗೂರಿನ ಆರ್.ಆರ್. ನಗರ ಶಾಸಕ ಮುನಿರತ್ನ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಂಪುಟದಲ್ಲಿ ಸಚಿವರಾಗಿರೋದು ಚಿತ್ರೋದ್ಯಮದ ಪಾಲಿಗೆ ಹೊಸ ಭರವಸೆಯಂತೂ ಮೂಡಿಸಿದೆ. ಹಾಗಂತ ಮುನಿರತ್ನ ಅವರೇನು ಚಿತ್ರೋದ್ಯಮಕ್ಕೆ ಸ್ವರ್ಗವನ್ನೇ ಸೃಷ್ಟಿಸಿ ಬಿಡುತ್ತಾರೆ ಅಂತಲ್ಲ. ಸರ್ಕಾರದ ಮಟ್ಟದಲ್ಲಿ ಉದ್ಯಮದ ಪರವಾಗಿ ಗಟ್ಟಿ ಧ್ವನಿಯಾಗುವ ನಂಬಿಕೆಯಂತೂ ಇದೆ. ಯಾಕಂದ್ರೆ ಚಿತ್ರೋದ್ಯಮದ ಸಂಕಷ್ಟಗಳೇನು ಅನ್ನೋದನ್ನು ಅವರು ಹತ್ತಿರದಿಂದ ನೋಡಿದ್ದಾರೆ. ತಾವೇ ನಿರ್ಮಾಪಕರಾಗಿ ಅದನ್ನು ಅನುಭವಿಸಿದ್ದಾರೆ. ಉದ್ಯಮವನ್ನೇ ನಂಬಿಕೊಂಡು ಎಷ್ಟೇಲ್ಲ ಜನ ಇಲ್ಲಿದ್ದಾರೆನ್ನುವುದು ಅವರಿಗೆ ಗೊತ್ತಿದೆ. ಹಾಗಾಗಿ ಅವರ ಬಳಿ ಉದ್ಯಮದ ಕಷ್ಟಗಳನ್ನ ಹೇಳಿಕೊಂಡರೆ ಕನಿಷ್ಠ ಸರ್ಕಾರದ ಕಿವಿಗಾದರೂ ತಲುಪಿಸಬಹುದು ಅಂತಲೂ ಇದೆ. ಅದೇ ಕಾರಣಕ್ಕೆ ಮುನಿರತ್ನ ಸಚಿವರಾಗಿರೋದು ಸಹಜವಾಗಿಯೇ ಚಿತ್ರೋದ್ಯಮದಲ್ಲಿ ಸಂತಸ ಮೂಡಿಸಿದೆ.
ಮುಂದೆ ಚಿತ್ರೋದ್ಯಮಕ್ಕೆ ಭವಿಷ್ಯ ಇದೀಯಾ? ಲಾಕ್ ಡೌನ್ ಸೃಷ್ಟಿಸಿದ ಅವಾಂತರದಿಂದ ಹೀಗೊಂದು ಆತಂಕ ಇದ್ದೇ ಇದೆ. ಯಾಕಂದ್ರೆ ಕೊರೋನಾ, ಕೊರೋನಾ ಅಂತ ಸಿನಿಮಾ ಚಟುವಟಿಕೆಗಳೆಲ್ಲಾ ಬಂದ್ ಆಗಿ, ಚಿತ್ರಮಂದಿರಗಳು ಬಾಗಿಲು ಮುಚ್ಚಿದರೆ, ಇದನ್ನ ನಂಬಿಕೊಂಡವರು ಮಣ್ಣು ತಿನ್ನಬೇಕಷ್ಟೇ. ಕೊರೋನಾ ಶುರುವಾದ ಈ ಒಂದೂವರೆ ವರ್ಷದ ಭೀಕರತೆ ಅಕ್ಷರಶ: ಸಿನಿಮಾ ಮಂದಿಗೆ ಮಣ್ಣು ತಿನ್ನಿಸಿದೆ. ಅದರಿಂದ ಒಂದಷ್ಟು ಚೇತರಿಕೆ ಕಾಣಬೇಕಾದರೆ, ಸರ್ಕಾರವು ಉದ್ಯಮದ ಕೈ ಹಿಡಿಯಲೇಬೇಕಿದೆ. ಇದು ಯಾವ ಥರ? ಈ ಪ್ರಶ್ನೆಗೆ ತಕ್ಷಣವೇ ಉತ್ತರ ಕಂಡುಕೊಳ್ಳುವುದು ಕಷ್ಟ. ಕಾಲ ಕಾಲಕ್ಕೆ ಸರ್ಕಾರ ಉದ್ಯಮವನ್ನು ಅನುದಾನದ ಮೂಲಕವೇ, ಆರ್ಥಿಕ ನೆರವಿನ ಮೂಲಕವೋ, ತೆರೆಗೆಯ ರಿಯಾಯಿತಿಯ ಮೂಲಕವೋ ಕೈಹಿಡಿದು ಪ್ರೋತ್ಸಾಹಿಸುತ್ತಾ ಬಂದರೆ, ಚಿತ್ರೋದ್ಯಮಕ್ಕೆ ಒಂದಷ್ಟು ಚೇತರಿಕೆ ಸಿಗುವುದು ಖಚಿತ. ಆ ಕೆಲಸಕ್ಕೆ ಮುನಿರತ್ನ ಅವರು ಸರ್ಕಾರ ಮತ್ತು ಉದ್ಯಮದ ಗಟ್ಟಿ ಸೇತುವೆಯಾದರೆ ಸಾಕು ಎನ್ನುವ ಮಾತನ್ನು ಉದ್ಯಮದ ಮಂದಿ ಹೇಳುತ್ತಿದ್ದಾರೆ.
ಆರಂಭದಲ್ಲೀಗ ಚಿತ್ರಮಂದಿರಗಳ ನೂರರಷ್ಟು ಸೀಟಉ ಭರ್ತಿ ಸವಾಲಿದೆ. ಕೊರೋನಾ ಕಾರಣಕ್ಕೆ ಸರ್ಕಾರ ಈಗ ಶೇಕಡಾ 50 ರಷ್ಟು ಸೀಟು ಭರ್ತಿಯೊಂದಿಗೆ ಮಾತ್ರ ಚಿತ್ರ ಪ್ರದರ್ಶನ ನಡೆಸಲು ಅನುಮತಿ ನೀಡಿದೆ. ಆದರೆ ಚಿತ್ರಮಂದಿರ ಪೂರ್ಣ ಪ್ರಮಾಣದಲ್ಲಿ ಸೀಟು ಭರ್ತಿಗೆ ಅವಕಾಶ ಸಿಗುವ ತನಕ ಸಿನಿಮಾ ರಂಗಕ್ಕೆ ಭವಿಷ್ಯ ಇಲ್ಲ ಅನ್ನೋದು ಸಿನಿಮಾ ರಂಗದ ಆತಂಕ. ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಸರಿಯಾಗಿ ಮಾತನಾಡಿ, ಸಿನಿಮಾ ಉದ್ಯಮದ ವಾಸ್ತವವನ್ನು ಸರ್ಕಾರಕ್ಕೆ ಮನವರಿ ಕೆ ಮಾಡಿಕೊಡಬೇಕಿದೆ. ಮುನಿರತ್ನ ಅವರಿಂದ ಇದು ಸಾಧ್ಯವಾಗುತ್ತೆ. ಆ ನಿಟ್ಟಿನಲ್ಲಿ ಅವರನ್ನು ಉದ್ಯಮ ಬಳಸಿಕೊಳ್ಳಬೇಕು ಅಂತಲೂ ಹೇಳುತ್ತಿ ವೆ ಮೂಲಗಳು. ಉಳಿದಂತೆ ಸಿನಿಮಾ ಉದ್ಯಮ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದೆ. ಆ ಬಗ್ಗೆ ಮುಂದೆ ಆಲೋಚಿ ಸಬಹುದು ಅನ್ನುತ್ತಾರೆ ಉದ್ಯಮದ ಹಿರಿಯ ನಿರ್ಮಾ ಪಕರೊಬ್ಬರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸಚಿವ ಸಂಪುಟ ರಚನೆಗೆ ಕೊನೆಗೂ ಮುಕ್ತಿ ಸಿಕ್ಕಿದೆ. ಬುಧವಾರ ನೂತನ ಸಚಿವರಾಗಿ ೨೯ ಮಂದಿ ಶಾಸಕರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇದರಲ್ಲಿ ಕನ್ನಡ ಚಿತ್ರರಂಗಕ್ಕೂ ಒಂದು ಮಂತ್ರಿ ಸ್ಥಾನ ಸಿಕ್ಕಿದೆ. ಅಂದ್ರೆ ಸಿನಿಮಾ ನಿರ್ಮಾಪಕರೂ ಆದ ಬೆಂಗಳೂರಿನ ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನ ಅವರಿಗೆ ಕೊನೆಗೂ ಮಂತ್ರಿ ಸ್ಥಾನ ಸಿಕ್ಕಿದೆ. ಸಚಿವ ಸ್ಥಾನದ ಕಾರಣಕ್ಕಾಗಿಯೇ ಅವರು ಈ ಹಿಂದೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದಾರಾರೂ, ಆ ಸಂದರ್ಭದಲ್ಲಿ ಅವರಿಗೆ ಮಂತ್ರಿ ಸ್ಥಾನ ಕೈ ತಪ್ಪಿ ಹೊಗಿತ್ತು. ಈಗ ಮಂತ್ರಿ ಆಗುವ ಅದೃಷ್ಟ ಅವರಿಗೆ ಸಿಕ್ಕಿದೆ.
ಬುಧವಾರ ಮಧ್ಯಾಹ್ನ ಬೆಂಗಳೂರಿನ ರಾಜಭವನದಲ್ಲಿ ನಡೆದ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಮುನಿರತ್ಮ ಅವರು ನೂತನ ಸಚಿವರಾಗಿ ದೇವರ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ರಾಜಕಾರಣಿ ಆಗಿದ್ದರೂ ನಿರ್ಮಾಪಕರಾಗಿ ಹಲವು ವರ್ಷಗಳಿಂದ ಚಿತ್ರೋದ್ಯಮ ಜತೆಗೆ ಗುರುತಿಸಿಕೊಡಿರುವ ಅವರು, ʼಆಂಟಿ ಪ್ರೀತ್ಸೆʼ,ʼ ರಕ್ತ ಕಣ್ಣೀರುʼ, ʼಅನಾಥರುʼ, ʼಕಠಾರಿ ವೀರ ಸುರಸುಂದರಾಂಗಿʼ ಹಾಗೂ ʼಮುನಿರತ್ಮ ಕುರುಕ್ಷೇತ್ರʼಗಳನ್ನು ನಿರ್ಮಾಣ ಮಾಡಿದ ಖ್ಯಾತಿ ಅವರದು. ಅದೆಲ್ಲಕ್ಕಿಂತ ಮುಖ್ಯವಾಗಿ ಸ್ಟಾರ್ ಸಿನಿಮಾಗಳನ್ನೇ ನಿರ್ಮಾಣ ಮಾಡಿದ್ದು ಮಾತ್ರವಲ್ಲ, ಬಿಗ್ ಬಜೆಟ್ ಸಿನಿಮಾ ಮಾಡಿದ ಖ್ಯಾತಿಯೂ ಅವರಿಗಿದೆ.
ಅದರ ಜತೆಗೆ ಹಿಂದೆ ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷರು ಆಗಿದ್ದರು. ಹಾಗೆಯೇ ಕನ್ನಡದ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅವರ ಸಂಬಂಧಿಯೂ ಹೌದು. ಈ ಮೂಲಕ ನಿರ್ಮಾಪಕರು ಆದ ಶಾಸಕ ಮುನಿರತ್ನ ಅವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಸಚಿವ ಸ್ಥಾನ ಸಿಕ್ಕಿರುವುದಕ್ಕೆ ಇಡೀ ಚಿತ್ರರಂಗವೇ ಖುಷಿ ಪಟ್ಟಿದೆ. ಹಾಗಂತ ಸಿನಿಮಾದಿಂದ ಸಚಿವರಾಗುತ್ತಿರುವವರಲ್ಲಿ ಇವರೇ ಮೊದಲಿಗರಲ್ಲ. ಸಿನಿಮಾಕ್ಕೂ ರಾಜಕಾರಣಕ್ಕೂ ಇರುವ ನಂಟಿನ ಇತಿಹಾಸ ದೊಡ್ಡದ್ದು. ರಾಮಕೃಷ್ಣ ಹೆಗಡೆ ಮಂತ್ರಿ ಮಂಡಲದಲ್ಲಿ ಹಿರಿಯ ನಟ ಅನಂತ್ ನಾಗ್ ಮಂತ್ರಿಯಾಗಿದ್ದು. ಆಮೇಲೆ ಜೆ.ಎಚ್. ಪಟೇಲ್ ಕಾಲಕ್ಕೂ ಆವರು ಮಂತ್ರಿ ಆಗಿದ್ದರು.
ಮುಂದೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಅವಧಿಯಲ್ಲಿ ಹಿರಿಯ ನಟ ಅಂಬರೀಷ್ ವಸತಿ ಸಚಿವರಾಗಿದ್ದರು. ಹಾಗೆಯೇ ಜಯಮಾಲಾ, ಉಮಾಶ್ರೀ ಕೂಡ ಸಚಿವರಾದರು. ಸದ್ಯಕ್ಕೀಗ ಸಿನಿಮಾ ರಂಗದಿಂದ ಬಿಜೆಪಿ ಸರ್ಕಾರದ ಅವದಿಯಲ್ಲಿ ಹಿರಿಯ ನಟಿ ತಾರಾ, ಶ್ರುತಿ ನಿಗಮ ಮಂಡಳಿ ಅಧ್ಯಕ್ಷರಾಗಿದ್ದರೆ, ನಿರ್ಮಾಪಕ, ನಟ ಹಾಗೂ ನಿರ್ದೇಶಕ ಸುನೀಲ್ ಪುರಾಣಿಕ್ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾಗಿದ್ದಾರೆ. ಈ ನಡುವೆ ರಾಜಕಾರಣಿಯೂ ಆಗಿರುವ ಬಿ.ಸಿ. ಪಾಟೀಲ್ ಅವರಿಗೂ ಸಿನಿಮಾ ನಂಟಿದೆ. ನಟರಾಗಿಯೇ ಅವರು ದೊಡ್ಡ ಯಶಸ್ಸು ಕಂಡವರು. ಆಮೂಲಕವೇ ರಾಜಕೀಯಕ್ಕೂ ಹೋದವರು. ಈಗ ಅವರು ಕೂಡ ಎರಡನೇ ಬಾರಿಗೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದು, ಸಿನಿಮಾ ರಂಗ ಇವರಿಗೆ ಶುಭಾಶಯ ಕೋರಿದೆ.
ದೊಡ್ಮನೆ ಕಾರ್ಯಕ್ರಮನಾ ಮಿಸ್ ಮಾಡದೇ ನೋಡುವವರಿಗೆ ಕಿಚ್ಚನ ಕೈ ತುತ್ತಿನ ಕಹಾನಿ ಏನು ಎಂಬುದು ಗೊತ್ತಿರುತ್ತೆ. ಬೈ ಚಾನ್ಸ್ ಮಿಸ್ ಮಾಡಿಕೊಂಡಿರುವವರು ಯಾರಾದರೂ ಇದ್ದರೆ, ಈ ಸ್ಟೋರಿ ನೋಡಿದರೆ ಆ ಕಹಾನಿ ಏನು ಅಂತ ತಿಳಿಯುತ್ತೆ. ಸ್ಯಾಂಡಲ್ವುಡ್ ಬಾದ್ಷಾ ಕುಕ್ಕಿಂಗ್ನಲ್ಲಿ ಮಾಸ್ಟರ್ ಎಂಬುದು ಎಲ್ಲರಿಗೂ ಗೊತ್ತಿರುವ ವಿಷ್ಯ. ಅಮ್ಮನ ಕೈತುತ್ತಿಗಾಗಿ ಮಕ್ಕಳು ಕಾಯುವಂತೆ, ಕಿಚ್ಚನ ಕೈತುತ್ತಿಗಾಗಿ ಸಾವಿರ, ಲಕ್ಷ ಅಲ್ಲ.. ಕೋಟ್ಯಾಂತರ ಮಂದಿಯಿದ್ದಾರೆ ಎಂದರೂ ತಪ್ಪಾಗಲಿಕ್ಕಿಲ್ಲ. ಅಭಿನಯ ಚಕ್ರವರ್ತಿಯ ನಟನೆಯ ಪ್ರತಿ ಸಿನಿಮಾಗೋಸ್ಕರ ಎಷ್ಟು ಕಾತುರದಿಂದ ಕಾಯ್ತಾರೋ ಅಷ್ಟೇ ಕೌತುಕದಿಂದ ಸುದೀಪ್ ಕೈರುಚಿಯನ್ನ ನೋಡೋದಕ್ಕೆ ಎದುರು ನೋಡ್ತಿರ್ತಾರೆ. ಆದರೆ, ಎಲ್ಲರಿಗೂ ಮಾಣಿಕ್ಯನಿಂದ ಕೈ ತುತ್ತು ಹಾಕಿಸಿಕೊಳ್ಳುವ ಅವಕಾಶ ಸಿಕ್ಕೋದಿಲ್ಲ. ಕೆಲವೇ ಕೆಲವು ಮಂದಿಗೆ ಮಾತ್ರ ಕೋಟಿಗೊಬ್ಬ ತಮ್ಮ ಕೈಯ್ಯಾರೆ ಮಾಡಿದ ಮೃಷ್ಣಾನ ಭೋಜನವನ್ನು ಸವಿಯೋದಕ್ಕೆ ಚಾನ್ಸ್ ಸಿಗುತ್ತೆ. ಅಂತಹದ್ದೊಂದು ಲಕ್ಕಿ ಚಾನ್ಸ್ ಬಿಗ್ಬಾಸ್ ಮನೆಯ ಆರು ಸದಸ್ಯರಿಗೆ ಸಿಕ್ಕಿತ್ತು.
ಬಿಗ್ಬಾಸ್ ಮನೆಯ ಸದಸ್ಯರಿಗೆ ಕಿಚ್ಚನ ಕೈತುತ್ತು ತಿನ್ನುವ ಅವಕಾಶ ಹಂಡ್ರೆಂಡ್ ಪರ್ಸೆಂಟ್ ಸಿಕ್ಕೆ ಸಿಗುತ್ತೆ. ಪ್ರತಿವರ್ಷ ಕಿಚ್ಚ ತಮ್ಮ ಕೈಯ್ಯಾರೆ ವೆರೈಟಿ-ವೆರೈಟಿ ಫುಡ್ ಪ್ರಿಪೇರ್ ಮಾಡಿ ದೊಡ್ಮನೆ ಸದಸ್ಯರಿಗೆ ಕಳುಹಿಸಿಕೊಡ್ತಾರೆ. ಬಿಗ್ಬಾಸ್ ಫೈನಲ್ಸ್ ಮುಗಿದ್ಮೇಲೆ ಮನೆಯ ಎಲ್ಲಾ ಸದಸ್ಯರನ್ನು ಒಮ್ಮೆ ತಮ್ಮ ಶಾಂತಿ ನಿವಾಸಕ್ಕೆ ಕರೆಸಿಕೊಂಡು ಅವರಿಷ್ಟದ ಅಡುಗೆಯನ್ನು ತಾವೇ ಖುದ್ದಾಗಿ ಮಾಡಿಬಡಿಸುತ್ತಾರೆ. ಅದರಂತೇ, ಇದೀಗ ಬಿಗ್ಬಾಸ್ ಸೀಸನ್ 8ರ ಆರು ಜನ ಸ್ಪರ್ಧಿಗಳಿಗೆ ಕಿಚ್ಚ ತಮ್ಮ ಶಾಂತಿನಿವಾಸದಲ್ಲಿ ಅಡುಗೆ ಮಾಡಿ ಕಳುಹಿಸಿಕೊಟ್ಟಿದ್ದಾರೆ.
ಮುದ್ದುಬೊಂಬೆ ವೈಷ್ಣವಿ ಪ್ಯೂರ್ ವೆಜಿಟೇರಿಯನ್ ಆಗಿರೋದ್ರಿಂದ ಸ್ಪೆಷಲ್ಲಾಗಿ ವೆಜ್ ಐಟಮ್ನ ಪ್ರಿಪೇರ್ ಮಾಡಿದರು. ಅರವಿಂದ್, ದಿವ್ಯಾ ಉರುಡುಗ, ದಿವ್ಯಾ ಸುರೇಶ್, ಪ್ರಶಾಂತ್ ಸಂಬರ್ಗಿ, ಮಂಜು ಪಾವಗಡ ನಾನ್ವೆಜ್ ಬರ್ಸೋದ್ರಿಂದ ಚಿಕನ್ ಪಕೋಡಾ, ಚಿಕನ್ ಬಿರಿಯಾನಿ, ರ್ರಿ ಜೊತೆಗೆ ಒಂದಿಷ್ಟು ನಾನ್ವೆಜ್ ಐಟಮ್ ತಯ್ಯಾರಿಸಿದರು. ಇದರೊಟ್ಟಿಗೆ ಸ್ಪೆಷಲ್ ಕೇಕ್, ಐಸ್ಕ್ರೀಮ್ ಇಟ್ಟು ಸಪರೇಟ್ ಆಗಿ ಪ್ಯಾಕ್ ಮಾಡಿ ಬಿಗ್ಹೌಸ್ಗೆ ಪಾರ್ಸಲ್ ಮಾಡಿದರು.
ಅಷ್ಟಕ್ಕೂ, ಬಿಗ್ಬಾಸ್ ಸ್ಪರ್ಧಿಗಳಿಗೆ ಕಿಚ್ಚನ ಕೈರುಚಿಯನ್ನು ಸವಿಯುವಂತಹ ಅವಕಾಶ ಸಿಕ್ಕಿದ್ದು ದಿವ್ಯಾ ಉರುಡುಗ ಅವ್ರಿಂದ. ಹೌದು, ಬಿಗ್ಬಾಸ್ಗೆ ಕಾಲಿಟ್ಟ ಗಳಿಗೆಯಿಂದ ಇಲ್ಲಿಯವರೆಗೆ ಈಡೇರದ ನಿಮ್ಮ ಆಸೆ-ಕನಸು ಯಾವುದಾದರೂ ಇದ್ದರೆ ಅದನ್ನ ನೀವು ಗಾರ್ಡನ್ ಏರಿಯಾದಲ್ಲಿ ಇಟ್ಟಿರುವ ಕಿವಿಯಾಕೃತಿಯ ಮುಂದೆ ಬಂದು ಹೇಳಿಕೊಳ್ಳಿ. ಸಾಧ್ಯವಾದರೆ ಆ ಆಸೆಯನ್ನು ಬಿಗ್ಬಾಸ್ ಈಡೇರಿಸುತ್ತಾರೆಂದು ಸೂಚಿಸಲಾಗಿತ್ತು. ಅದರಂತೇ, ಮನೆಯಲ್ಲಿರುವ ಆರು ಮಂದಿ ಸ್ಪರ್ಧಿಗಳು ಗಾರ್ಡನ್ ಏರಿಯಾಗೆ ಒಂದೊಂದು ಬೇಡಿಕೆಯನ್ನು ಕಿವಿಯಾಕೃತಿಯ ಮುಂದೆ ಹೇಳಿಕೊಂಡಿದ್ದರು.
ಅದರಲ್ಲಿ ದಿವ್ಯಾ ಉರುಡುಗ ಬಯಕೆ ವಿಶೇಷವಾಗಿತ್ತು. ಸುದೀಪ್ ಸರ್ ತಾವೇ ಸ್ವತಃ ಕೈಯ್ಯಾರೆ ಅಡುಗೆ ಮಾಡಿ ಬಿಗ್ಬಾಸ್ಗೆ ಕಳುಹಿಸಬೇಕು ನಾವೆಲ್ಲರೂ ಅದನ್ನು ಸವಿಯಬೇಕು ಅಂತ ಬೇಡಿಕೆ ಇಟ್ಟಿದ್ದರು. ಕೊನೆಗೂ ಬಿಗ್ಬಾಸ್ ಕಿಚ್ಚ ಸ್ಯಾಂಡಲ್ವುಡ್ ಸುಂದ್ರಿ ದಿವ್ಯಾ ಉರುಡುಗರ ಬಯಕೆಯನ್ನು ಈಡೇರಿಸಿದರು. ಕಿಚ್ಚನ ಕೈರುಚಿಯನ್ನು ಸವಿದ ದೊಡ್ಮನೆಯ ಆರು ಸದಸ್ಯರು ನಾಳೆಗೂ ಒಂದು ಸ್ವಲ್ಪ ಇರಲಿ ಅಂತ ಫ್ರಿಜ್ನಲ್ಲಿರಿಸಿದ್ರು. ಇದರಲ್ಲೇ ಗೊತ್ತಾಗುತ್ತೆ ಶಾಂತಿನಿವಾಸದಲ್ಲಿ ಸ್ವಾತಿಮುತ್ತು ತಯ್ಯಾರಿಸಿದ ಅಡುಗೆ ಎಷ್ಟು ಪ್ರಿಯಕರವಾಗಿತ್ತು ಎಂಬುದು.
ಎನಿವೇ, ಅರಮನೆಯಂತಿರುವ ಸೆರೆಮನೆಯಲ್ಲಿ ಸದ್ಯ ಆರು ಮಂದಿ ಸ್ಪರ್ಧಿಗಳು ಉಳಿದಿದ್ದಾರೆ. ಬುಧವಾರ ರಾತ್ರಿ 11ಗಂಟೆಯೊಳಗಾಗಿ ಆರು ಜನರಲ್ಲಿ ಒಬ್ಬರು ದೊಡ್ಮನೆಯಿಂದ ಹೊರಬರುತ್ತಾರೆ. ಈಗಾಗಲೇ ಆ ಸ್ಪರ್ಧಿ ದಿವ್ಯಾ ಸುರೇಶ್ ಎನ್ನುವ ಸುದ್ದಿ ಜೋರಾಗಿ ಕೇಳಿರ್ತಿದೆ. ಅಧಿಕೃತವಾಗಿ ಹೊರಬಿದ್ದ ನಂತರ ಉಳಿದ ಐದು ಮಂದಿ ಫೈನಲ್ಸ್ ತಲುಪುತ್ತಾರೆ. ಅಂತಿಮ ಹಣಾಹಣಿಯಲ್ಲಿ ಐವರ ನಡುವೆ ಪೈಪೋಟಿ ಹೇಗಿರುತ್ತೆ? ಟಾಪ್ ಫೈವ್ ಸ್ಪರ್ಧಿಗಳಲ್ಲಿ ಕೊನೆಗೆ ಅದ್ಯಾರು ಕಿಚ್ಚನ ಅಕ್ಕ-ಪಕ್ಕದಲ್ಲಿ ನಿಲ್ತಾರೆ. ಅದ್ಯಾವ ಇಬ್ಬರು ಸ್ಪರ್ಧಿಗಳು ವಿನ್ನರ್-ರನ್ನರ್ ಅಪ್ಪಟ್ಟಕ್ಕೇರುತ್ತಾರೆ? ಅದ್ಯಾರಿಗೆ ಕಿರೀಟ ಮುಡಿಗೇರಿಸಿಕೊಳ್ಳುವ ಅವಕಾಶ ಸಿಗುತ್ತೆ? ಅದ್ಯಾರಿಗೆ 50 ಲಕ್ಷದ ಚೆಕ್ ಸಿಗುತ್ತೆ? ಈ ಕ್ಯೂರಿಯಾಸಿಟಿ ಕೊಶ್ಚನ್ಗೆ ಅಂತೆ-ಕಂತೆ ಉತ್ತರಕ್ಕಿಂತ ಭಾನುವಾರ ಸಿಗುವ ಉತ್ತರವೇ ಅಂತಿಮ. ಅಲ್ಲಿವರೆಗೆ ತಾಳ್ಮೆಯಿಂದ ಕಾಯಬೇಕು ಕಾಯೋಣ.
ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ನಟನೆಯ 123ನೇ ಸಿನಿಮಾ ‘ಬೈರಾಗಿ’ ಟಾಕಿ ಭಾಗದ ಚಿತ್ರೀಕರಣ ಮುಗಿಸಿದೆ. ತಮಿಳಿನ ಖ್ಯಾತ ಛಾಯಾಗ್ರಾಹಕ ಕಮ್ ನಿರ್ದೇಶಕ ವಿಜಯ್ ಮಿಲ್ಟನ್ ನಿರ್ದೇಶನವಿರುವ ಈ ಚಿತ್ರಕ್ಕೆ ನೂರಕ್ಕೂ ಹೆಚ್ಚು ದಿನ ಶೂಟಿಂಗ್ ನಡೆಸಲಾಗಿದೆ. ಈ ಚಿತ್ರದಲ್ಲಿ ಶಿವಣ್ಣ ನಾನಾ ಅವತಾರ ಎತ್ತಿದ್ದಾರೆ. ಅವರ ಹುಟ್ಟು ಹಬ್ಬದಂದು ಬಿಡುಗಡೆಯಾದ ಟೈಟಲ್ ಟೀಸರ್ ಎಲ್ಲರಿಗೂ ಮೆಚ್ಚುಗೆಯಾಗಿದ್ದು, ಟೈಟಲ್ ಹಾಗೂ ಲುಕ್ ಕಂಡು ಅಭಿಮಾನಿಗಳು ಬೆರಗಾಗಿದ್ದಾರೆ.
ಹುಲಿ ವೇಷ, ಹೇರ್ ಸ್ಟೈಲ್ ಹಾಗೂ ಅವರ ಡಿಫರೆಂಟ್ ಕಾಸ್ಟ್ಯೂಮ್’ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಮುಖ್ಯವಾಗಿ ಅನೂಪ್ ಸೀಳಿನ್ ಸಂಗೀತಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದ್ದು, ಸಾಕಷ್ಟು ಜನರು ಈಗಾಗಲೇ ಟೈಟಲ್ ಟೀಸರನ್ನು ಕಾಲರ್ ಟ್ಯೂನ್ ಮಾಡಿಕೊಂಡಿದ್ದಾರೆ.
‘ಟಗರು’ ಯಶಸ್ಸಿನ ಬಳಿಕ ಶಿವರಾಜ್ ಕುಮಾರ್ ಹಾಗೂ ‘ಡಾಲಿ’ ಧನಂಜಯ್ ಒಟ್ಟಿಗೆ ಕಾಣಿಸಿಕೊಳ್ಳುತ್ತಿರುವ ಸಿನಿಮಾ ಇದಾಗಿರುವುದರಿಂದ ಪ್ರಾರಂಭದಿಂದಲೇ ನಿರೀಕ್ಷೆ ಗರಿಗೆದರಿದೆ. ಇಬ್ಬರೂ ಬೇರೆ ಬೇರೆ ಗೆಟಪ್ ಮೂಲಕ ಮೋಡಿ ಮಾಡಲಿದ್ದಾರೆ ಎಂಬುದು ವಿಶೇಷ. ಈಗಾಗಲೇ ಅಧಿಕೃತವಾಗಿ ಬಿಡುಗಡೆಯಾಗಿರುವ ಶಿವಣ್ಣನ ಹುಲಿ ವೇಷದ ಗೆಟಪ್ ಎಲ್ಲೆಡೆ ವೈರಲ್ ಆಗಿದ್ದು, ಆಟೋ ಹಾಗೂ ಕಾರುಗಳ ಮೇಲೆ ಶಿವಣ್ಣನ ಪೋಸ್ಟರ್ ರಾರಾಜಿಸುತ್ತಿವೆ.
ಅಂಜಲಿ ಚಿತ್ರದ ನಾಯಕಿ. ‘ದಿಯಾ’ ಖ್ಯಾತಿಯ ಪೃಥ್ವಿ ಅಂಬರ್ ಚಿತ್ರದ ಪ್ರಮುಖ ಪಾತ್ರದಲ್ಲಿದ್ದಾರೆ. ಹಿರಿಯ ನಟ ಶಶಿಕುಮಾರ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಕೃಷ್ಣ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಕೃಷ್ಣ ಸಾರ್ಥಕ್ ಅದ್ದೂರಿಯಾಗಿ ನಿರ್ಮಿಸಿರುವ ಈ ಚಿತ್ರದಲ್ಲಿ ಸಾಕಷ್ಟು ನುರಿತ ಕಲಾವಿದರಿದ್ದಾರೆ. ಬಾಕಿ ಉಳಿದುಕೊಂಡಿರುವ ಹಾಡಿನ ಚಿತ್ರೀಕರಣಕ್ಕೆ ಸದ್ಯದಲ್ಲೇ ಮೈಸೂರಿಗೆ ತೆರಳಲಿದೆ ‘ಬೈರಾಗಿ’ ತಂಡ.