ಗೌಡ್ರಿಗೆ ಡಿ ಬಾಸ್ ವಿಶ್ ಮಾಡಿದ್ರಾ; ಡಬ್ಬಲ್ ಕಾಲ್‌ಶೀಟ್ ಕಥೆ ಏನಾಯ್ತು?

  • ವಿಶಾಲಾಕ್ಷಿ

ಇಡೀ ಗಾಂಧಿನಗರದ ಮಂದಿಯ ಕಣ್ಣು ಇವತ್ತು ಡಿ ಬಾಸ್ ಮೇಲಿದೆ ಅಂದರೆ ಬಹುಷಃ ತಪ್ಪಾಗಲಿಕ್ಕಿಲ್ಲ. 25 ಕೋಟಿ ಮ್ಯಾಟರ್‌ಗೆ ಕ್ಲ್ಯಾರಿಟಿ ಸಿಗುತ್ತೋ ಬಿಡುತ್ತೋ ಗೊತ್ತಿಲ್ಲ ಆದರೆ, ಸಾರಥಿ ಹಾಗೂ ಉಮಾಪತಿಯ ನಡುವೆ ಎಲ್ಲವೂ ಚೆನ್ನಾಗಿದೆ ಎಂಬುದಕ್ಕಂತೂ ಕನ್‌ಕ್ಲೂಶನ್ ಸಿಗುತ್ತೆ ಅಂತ ಕಾಯ್ತಿದ್ದಾರೆ. ಆದರೆ, ಮಂಗಳವಾರ ಮಾರ್ನಿಂಗ್ ಮುಗಿದು ಮಧ್ಯಾಹ್ನ ಬಂದರೂ ಕೂಡ ಯಾವುದೂ ಸೂಚನೆ ಸಿಗುತ್ತಿಲ್ಲ. ಹೀಗಾಗಿ, ಕೆಲವರು ಕೇಕೆ ಹೊಡೆಯುತ್ತಿದ್ದಾರೆ ಇನ್ನೂ ಕೆಲವರು ಬೇಸರಪಟ್ಟಿಕೊಳ್ಳುತ್ತಿದ್ದಾರೆ.

ಸಾರಥಿ ಹಾಗೂ ಉಮಾಪತಿ ಒಂದಾಗಬೇಕು ಅಂತ ಎಷ್ಟು ಮಂದಿ ಬಯಸ್ತಿದ್ದಾರೋ ಅಷ್ಟೇ ಮಂದಿ ಇಬ್ಬರು ದೂರ ಆಗ್ಬೇಕು ಅಂತ ಬಯಸ್ತಿದ್ದಾರೆ. ಇದು ಗಾಂಧಿನಗರದ ಕೆಲವು ಮಂದಿಯ ಸಹಜ ಪ್ರಕ್ರಿಯೆ ಬಿಡಿ. ಆಕ್ಟರ್ ಆಕ್ಟರ್ ಆಗಿದ್ದರೆ, ಪ್ರೊಡ್ಯೂಸರ್ ಪ್ರೊಡ್ಯೂಸರ್ ಆಗಿದ್ದರೆ ಮಾತ್ರ ಸಹಿಸಿಕೊಳ್ತಾರೆ ಅದನ್ನು ಬಿಟ್ಟು ನಾವು ರಾಮ-ಲಕ್ಷ್ಮಣರಂತಿರ‍್ತೀವಿ ಅಂತ ಹೊರಟರೆ ಮುಗೀತು ಸಂಬಂಧ ಮುರಿಯೋಕೆ, ಸ್ನೇಹ ಸೇತುವೆಯನ್ನು ಉರುಳಿಸೋಕೆ ಕಾಯ್ತಾ ಇರ್ತಾರೆ. ಹೀಗೆ, ಯಾರೋ ಹಾಕಿದ ಗಾಳದಿಂದ ಸಾರಥಿ-ಉಮಾಪತಿ ಸಂಬಂಧದ ಸೇತುವೆ ಉರುಳುತ್ತಿದೆಯೋ ಅಥವಾ ಸದ್ದಿಲ್ಲದೇ ಗಟ್ಟಿಯಾಗ್ತಿದೆಯೋ ಗೊತ್ತಾಗ್ತಿಲ್ಲ.

ದಚ್ಚು ಹೆಸರಲ್ಲಿ 25 ಕೋಟಿ ದೋಖಾ ಪ್ರಕರಣ ಬೆಳಕಿಗೆ ಬಂದಾಗಿನಿಂದ ದರ್ಶನ್ ಹಾಗೂ ಉಮಾಪತಿಯವರ ನಡುವೆ ಮನಸ್ತಾಪ ಮೂಡಿರುವುದು ಮೇಲ್ನೋಟಕ್ಕೆ ಎದ್ದು ಕಾಣುವ ಸತ್ಯ. ಆರೋಪ-ಪ್ರತ್ಯಾರೋಪ ಏನೇ ಇದ್ದರೂ ಕೂಡ ಒಬ್ಬರನ್ನೊಬ್ಬರು ಬಿಟ್ಟುಕೊಡ್ತಿಲ್ಲ ಎಂಬುದು ಕೂಡ ಅಷ್ಟೇ ದಿಟ. ಮೊದಲು, 25 ಕೋಟಿ ವಂಚನೆಯ ಪ್ರಕರಣದ ಸತ್ಯಾಸತ್ಯತೆ ಆಚೆ ಬರಲಿ ಮುಂದೇನಾಗ್ಬೇಕೋ ಅದಾಗುತ್ತೆ ಅಂತ ಇಬ್ಬರು ತೀರ್ಮಾನ ಮಾಡಿದ್ದಾರೆ.

ಆದರೆ, ಅಲ್ಲಿವರೆಗೂ ತಾಳ್ಮೆಯಿಂದ ಕಾಯೋದಕ್ಕೆ ತಯ್ಯಾರಿಲ್ಲದ ಕೆಲವು ಮಂದಿ ಕಳೆದ ವರ್ಷ ರಾಬರ್ಟ್' ಪ್ರೊಡ್ಯೂಸರ್ ಬರ್ತ್ಡೇಗೆ ಡಿಬಾಸ್ ಸೋಷಿಯಲ್ ಮೀಡಿಯಾದಲ್ಲಿ ವಿಶ್ ಮಾಡಿದ್ದರು. ಆದರೆ ಈ ವರ್ಷ ಉಮಾಪತಿಯವರ ಹುಟ್ಟುಹಬ್ಬಕ್ಕೆ ಶುಭಕೋರಿಲ್ಲ. ಹೀಗಾಗಿ, ಇಬ್ಬರ ನಡುವೆ ಎಲ್ಲವೂ ಸರಿಯಿಲ್ಲ ಎಂಬುದು ಸ್ಪಷ್ಟವಾಗ್ತಿದೆಯೆಂದು ಮಾತನಾಡಿಕೊಳ್ತಿದ್ದಾರೆ. ಅಲ್ಲಾ ಗುರು ಡಿಬಾಸ್ ವಿಶ್ ಮಾಡುವುದು ಊರವರಿಗೆಲ್ಲಾ ಗೊತ್ತಾಗ್ಬೇಕು ಅಂತೇನಿಲ್ಲವಲ್ಲ, ನೇರವಾಗಿ ಫೋನ್ ಮಾಡಿ ಶುಭಾಷಯ ತಿಳಿಸಿರಬಹುದು.ನಿರ್ಮಾಪಕರೇ ತಂದಿಟ್ಟು ತಮಾಷೆ ನೋಡ್ತಿರುವವರು ಆದಷ್ಟು ಬೇಗ ತಗಲಾಕಿಕೊಳ್ಳಲಿ ಆ ಮೇಲೆ ಆಟ ಶುರುವಿಟ್ಟುಕೊಳ್ಳೋಣ’ ಹೀಗಂತ ಡಿಬಾಸ್ ಹೇಳಿದ್ದರೂ ಹೇಳಿರಬಹುದು ಯಾರಿಗೂ ಗೊತ್ತು ಸ್ವಾಮಿ.

ಸಾರಥಿ ಹಾಗೂ ಉಮಾಪತಿಯವರ ನಡುವಿನ ಸಂಬಂಧದ ಬಗ್ಗೆ ಸುಮ್‌ಸುಮ್ಮನೇ ಸುಳ್‌ಸುದ್ದಿ ಹಬ್ಬಿಸುವವರು ಹಳೆಯ ಇನ್ಸಿಡೆಂಟ್‌ನ ಒಮ್ಮೆ ರೀಕಾಲ್ ಮಾಡಿಕೊಳ್ಳಿ. ಪರಸ್ಪರ ಇಬ್ಬರು ಏನೇ ಆರೋಪ ಮಾಡಿದರೂ ಕೂಡ ಖಾಸಗಿ ಹೋಟೆಲ್ ನಲ್ಲಿ ಇಬ್ಬರು ಸಿಟ್ಟಿಂಗ್ ಕೂತು ಕ್ಯಾಮೆರಾಗೆ ಒಂದು ಫೋಸ್ ಕೊಟ್ಟರು. ನಮ್ಮ ನಿರ್ಮಾಪಕರು ನಿರ್ಮಾಪಕರೇ ಅಂತ ದಚ್ಚು ಸ್ಟೇಟ್‌ಮೆಂಟ್ ಕೊಟ್ಟರೆ, `ಸಿನಿಮಾ ಆಂಗಲ್‌ನಲ್ಲಿ ಹೇಳೋದಾದರೆ ದರ್ಶನ್ ಇಂಜಿನ್ ಇದ್ದ ಹಾಗೇ, ನಾವು ಹಿಂದೆ ಇರುವ ಭೋಗಿಗಳು.. ಅವರು ಮುಂದೆ ಹೋದರೆ ನಾನು ಹಿಂದೆ ಇರುವುದಾಗಿ ನಿರ್ಮಾಪಕ ಉಮಾಪತಿಯವರು ಹೇಳಿಕೊಂಡಿದ್ದಾರೆ.

ಈ ಮಧ್ಯೆ ದೊಡ್ಮನೆ ಆಸ್ತಿ ವಿಚಾರದ ಸಂಗತಿಯ ಹೇಳಿಕೆಯಲ್ಲಿ ಕೊಂಚ ಆಚೀಚೆ ಆಗಿದೆ ಅದೇನು ಎಂಬುದು ಅವರಿಬ್ಬರು ಕೂತ್ಕೊಂಡು ಬಗೆಹರಿಸಿಕೊಳ್ತಾರಾ ಅನ್ನೋದರ ಜೊತೆಗೆ ಇಬ್ಬರು ಒಂದಾಗಿ ಸಿನಿಮಾ ಮಾಡ್ತಾರಾ ಇಲ್ಲವಾ ಎಂಬುದು ಕೂಡ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ. ಆ ಪ್ರಶ್ನೆಗೆ ಉತ್ತರ ಸಿಗಬೇಕು ಅಂದರೆ ತಾಳ್ಮೆಯಲ್ಲಿ ಶ್ರೀರಾಮನಂತೆ ಕಾಯದೇ ಬೇರೆದಾರಿಯಿಲ್ಲ. ಕಾಯಿರಿ ಕಾದಷ್ಟು ಒಳ್ಳೆಯದೇ ಅಲ್ಲವಾ

ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Related Posts

error: Content is protected !!