ಕಲಾವಿದರಿಗೆ ʼಸ್ಟಾರ್ʼ ಅಂತಾರೆ. ಸ್ಟಾರ್ ಅಂದ್ರೆ ಮಿನುಗುವ ನಕ್ಷತ್ರ ಅನ್ನೋದು ನಿಮಗೂ ಗೊತ್ತಿದೆ. ನಿಜವಾದ ನಕ್ಷತ್ರಗಳು ಆಗಸದಲ್ಲಿ ಮಿನುಗಿದರೆ, ಕಲಾವಿದರು ಬೆಳ್ಳಿಪರದೆ ಮೇಲೆ ಮಿನುಗುವ ನಕ್ಷತ್ರ ಗಳು.ಅಂತೆಯೇ ಸ್ಟಾರ್ ಎನಿಸಿಕೊಂಡ ಈಗಿನ ಕಲಾವಿದರೆಲ್ಲ ಅದೆಷ್ಟು ಮಿನುಗು ತ್ತಾರೋ ಗೊತ್ತಿಲ್ಲ, ಆದರೆ ಕನ್ನಡ ಚಿತ್ರರಂಗ ಕಂಡ ಅತ್ಯಾ ದ್ಭುತ ನಟಿ, ಅಭಿನಯ ಶಾರದೆ ಜಯಂತಿ ಅಂದ್ರೆ ಬೆಳ್ಳಿ ಪರದೆ ಮೇಲೆ ನಿರಂತರವಾಗಿ ಮಿನುಗಿದ ನಕ್ಷತ್ರ. ಅಂತಹ ಬೆಳ್ಳಿ ನಕ್ಷತ್ರವೇ ಈಗ ಕಳಚಿ ಬಿದ್ದಿದೆ. ಅವರಿನ್ನು ನೆನಪು ಮಾತ್ರ ಎನ್ನುವ ಸಂಕಟ ಇಡೀ ಸಿನಿಮಾ ರಸಿಕರಲ್ಲಿ ಮನೆ ಮಾಡಿದೆ.
ಹಿರಿಯ ನಟಿ ಜಯಂತಿ ಕನ್ನಡ ಚಿತ್ರರಂಗ ಕಂಡ ಅಪರೂಪದ ನಟಿ. ಈಗಿನ ತಲೆಮಾರಿಗೆ ಇಂತಹ ನಟಿಯರನ್ನು ಇನ್ನೆಂದೂ ಕಾಣಲು ಸಾಧ್ಯವೇ ಇಲ್ಲ. ಪಂಡರಿಬಾಯಿ, ಲೀಲಾವತಿ, ಸರೋಜದೇವಿ, ಕಲ್ಪನಾ , ಭಾರತಿ ಹಾಗೂ ಜಯಂತಿ ಅವರೆಲ್ಲ ಆ ಕಾಲದಲ್ಲಿ ನಾಯಕಿಯರಾಗಿ ಕನ್ನಡ ಚಿತ್ರರಂಗ ಬಹುಕಾಲ ಆಳಿದವರು. ನಿರಂತರವಾದ ಅವರ ಅಳ್ವಿಕೆಗೆ ಕಾರಣವಾಗಿದ್ದೇ ನಟನೆಯ ಮೇಲಿದ್ದ ಅವರ ಆಸಕ್ತಿ ಮತ್ತು ಬದ್ಧತೆ. ನೇಮ್ ಅಂಡ್ ಫೇಮ್ ಎನ್ನುವುದಕ್ಕಿಂದ ನಟನೆಯ ಹಸಿವಿಗಾಗಿಯೇ ಅವರೆಲ್ಲ ಅದೆಷ್ಟೋ ಸಿನಿಮಾಗಳಲ್ಲಿ ನಟಿಸಿದ್ದು ಇದೆ. ಈ ಕಾಲಕ್ಕೆ ಅದೆಲ್ಲ ಸಾಧ್ಯವೇ? ಅದೆಲ್ಲಕ್ಕಿಂದ ಮುಖ್ಯವಾಗಿ ಖಾಸಗಿ ಬದುಕಿನಲ್ಲಿ ಸಂತೋಷಕ್ಕಿಂತ ನೋವನ್ನೇ ಉಂಡ ನಟಿ ಜಯಂತಿ ಅವರಂತೂ ತಮ್ಮ ಇಡೀ ಜೀವನವನ್ನೂ ನಟನೆಗಾಗಿಯೇ ಮೀಸಲಿ ಟ್ಟಿದ್ದರೂ ಎನ್ನುವುದಕ್ಕೆ ಅವರು ಅಭಿನಯಿಸಿದ ಸಿನಿಮಾಗಳ ಸಂಖ್ಯೆ ಸಾಕ್ಷಿ.
ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಸೇರಿದಂತೆ 5೦೦ಕ್ಕೂ ಹೆಚ್ಚು ಚಿತ್ರಗಳಲ್ಲಿ ಬಣ್ಣ ಹಚ್ಚಿದ ಮಹಾನಟಿ ಅವರು. ಸಿನಿಮಾ ಅಂದ್ರೆ ಆಗ ಒಂದಷ್ಟು ಮಡಿ, ಮೈಲಿಗೆಗಳು ಇದ್ದ ಕಾಲದಲ್ಲೇ ನಾಯಕಿ ಆಗಿ ಬಂದವರು ನಟಿ ಜಯಂತಿ. ಒಂದ್ರೀತಿ ಅವರ ಹಾದಿಯ ಆರಂಭವೇ ಸಂಪ್ರಾದಾಯಗಳನ್ನು ಧಿಕ್ಕರಿಸಿ ಬಂದಿದ್ದು. ಸಿನಿಮಾ ಅಂದ್ರೆ ಹೀಗೆಯೇ ಅಂತ ಬೇಲಿ ಹಾಕಿಕೊಂಡಿದ್ದಾಗ ಹದಿ ಹರೆಯದ ಯುವತಿಯೊಬ್ಬಳು ಕ್ಯಾಮೆರಾ ಮುಂದೆ ಈಜುಡುಗೆ ತೊಡುವುದೆಂದರೆ ಅದು ಅಷ್ಟು ಸುಲಭ ವೇನು ಆಗಿರಲಿಲ್ಲ, ಹಾಗೆಲ್ಲ ಮಾಡಿದರೆ ದೊಡ್ಡ ಪ್ರತಿರೋಧವೇ ವ್ಯಕ್ತವಾಗಲಿದ್ದ ಕಾಲವದು. ಅಂತಹ ದಿನಮಾನದಲ್ಲೇ ನಟಿ ಜಯಂತಿ ಅವರು ಮಿಸ್ ಲೀಲಾವತಿ ಚಿತ್ರದಲ್ಲಿಈಜುಡುಗೆ ತೊಟ್ಟು ಕ್ಯಾಮೆರಾ ಮುಂದೆ ನಿಂತಿದ್ದರು ಎನ್ನುವುದಕ್ಕೆ ನೇಮ್ ಅಂಡ್ ಫೇಮ್ ಕಾರಣ ಅಂತೆನ್ನಲಾಗದು.ಆ ಮೂಲಕ ದೊಡ್ಡ ಕ್ರಾಂತಿಗೆ ಕಾರಣವಾದರು ಅನ್ನೋ ದು ಈಗ ಸುಲಭವಾಗಿ ಹೇಳುವ ಮಾತಾದರೂ, ಆಗ ಅದನ್ನ ವರು ಅರಗಿಸಿಕೊಂಡಿದ್ದೇ ಬಹುದೊಡ್ಡ ಸಾಹಸ. ಪಾತ್ರ ಯಾವು ದದಾರೂ ಸರಿ ಲೀಲಾಜಾಲವಾಗಿ ಅಭಿನಯಿಸುತ್ತಿದ್ದ ಜಯಂತಿ ಅವರಿಗೆ ನಟನೆಯೇ ಸಂಗಾತಿಯಂತಾಗಿತ್ತು. ಹಾಗಾಗಿ ಪಾತ್ರಗಳನ್ನ ಅರಸಿ, ಪರಭಾಷೆಗಳಿಗೂ ಹೋದರು. ಅಲ್ಲೂ ತಮ್ಮ ಮನೋಜ್ಜ ಅಭಿನಯದ ಮೂಲಕ ಮನೆ ಮಾತಾಗಿದ್ದರು ಎನ್ನುವುದು ಕನ್ನಡದ ಹೆಮ್ಮೆಯೇ ಹೌದು.
ಮಿಸ್ ಲೀಲಾವತಿ ಚಿತ್ರದಲ್ಲಿನ ಅವರ ಪಾತ್ರಕ್ಕೆ ರಾಷ್ಟ್ರ ಪ್ರಶಸ್ತಿ ಬಂತು ಎನ್ನುವುದು ನಿಜವೇ ಆಗಿದ್ದರೂ, ಜಯಂತಿ ಅವರು ಕನ್ನಡಿಗರ ಮನೆ ಮಾತಾಗಿದ್ದು ನಾಗರಾಹಾವು ಚಿತ್ರದಲ್ಲಿನ ಒನಕೆ ಒಬವ್ವ ಪಾತ್ರದ ಮೂಲಕ. ಈಗಲೂ ಜಯಂತಿ ಅಂದ್ರೆ ಕನ್ನಡಿಗರ ಮನದಲ್ಲಿ ಚಿತ್ರದುರ್ಗದ ಕಲ್ಲಿನಕೋಟೆ, ಅಲ್ಲಿಗೆ ದೆಂಡೆತ್ತಿ ಬಂದಿದ್ದ ಹೈದರಾಲಿ ಸೈನ್ಯ, ಆ ಸೈನ್ಯವನ್ನು ಬಗ್ಗ ಬಡಿದ ವೀರ ವನಿತೆ ಒನಕೆ ಒಬವ್ವ ಳ ಪರಾಕ್ರ ಮವೇ ನದಿಯಂತೆ ಹರಿದುಹೋಗುತ್ತದೆ. ಅಂತಹದೊಂದು ಬೆಳ್ಳಿ ಪರದೆಯ ನಕ್ಷತ್ರವೇ ಈಗ ಕಳಚಿ ಬಿದ್ದಿದೆ.