Categories
ಸಿನಿ ಸುದ್ದಿ

ಕೆಜಿಎಫ್ ಚಾಪ್ಟರ್ – 2 ಸ್ಯಾಟಲೈಟ್ ರೈಟ್ಸ್ ಭಾರೀ ಮೊತ್ತಕ್ಕೆ ಸೇಲ್ ; ಕನ್ನಡಕ್ಕಷ್ಟೇ ಅಲ್ಲ, ಇಂಡಿಯಾಕ್ಕೂ ಇದು ಹೊಸ ದಾಖಲೆ !

ಕೆಜಿಎಫ್‌ 2 ಯಾವಾಗ ಬರುತ್ತೆ ಎನ್ನುವ ಪ್ರೇಕ್ಷಕರ ದೊಡ್ಡ ಕುತೂಹಲದ ನಡುವೆ ಅದು ಆಡಿಯೋ ರೈಟ್ಸ್‌, ಸ್ಯಾಟಲೈಟ್ಸ್‌ ರೈಟ್ಸ್‌ ಮಾರಾಟದಲ್ಲಿ ಹೊಸ ದಾಖಲೆ ಬರೆಯುತ್ತಿದೆ. ಕನ್ನಡ ಚಿತ್ರೋದ್ಯಮ ಈ ತನಕ ಕೇಳರಿಯದಂತಹ ಮೊತ್ತಕ್ಕೆ ಈಗ ಈ ಚಿತ್ರದ ಸ್ಯಾಟಲೈಟ್ಸ್‌ ರೈಟ್ಸ್‌ ಸೇಲ್‌ ಆಗಿದೆ. ಅದನ್ನು ಖರೀದಿಸಿದ್ದು ಯಾರು, ಎಷ್ಟು ಮೊತ್ತಕ್ಕೆ ಆ ಕಥೆ ಇಲ್ಲಿದೆ.

ಕರ್ನಾಟಕ ಅಥವಾ ಭಾರತ ಮಾತ್ರವಲ್ಲ ಇಡೀ ಜಗತ್ತು ಕಣ್ಣರಳಿಸಿ ಕಾಯುತ್ತಿರುವ ಕನ್ನಡದ ಒನ್ ಅಂಡ್ ಓನ್ಲೀ ಸಿನಿಮಾ ಕೆಜಿಎಫ್ ಚಾಪ್ಟರ್ – 2. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಇಷ್ಟೋತ್ತಿಗೆ ಈ ಸಿನಿಮಾ ತೆರೆ ಮೇಲೆ ಬಂದು ಮತ್ತೊಂದು ಹೊಸ ಇತಿಹಾಸ ಕ್ರಿಯೇಟ್‌ ಆಗುವುದು ಖಚಿತ ಇತ್ತೇನೋ, ಆದರೆ ಕೊರೋನಾ ಎಲ್ಲದಕ್ಕೂ ಅಡ್ಡಿ ಆಗಿದೆ. ಅದು ʼಕೆಜಿಎಫ್‌ 2ʼ ರಿಲೀಸ್‌ ಗೂ ತೊಂದರೆ ಉಂಟು ಮಾಡಿದೆ ಅನ್ನೋದು ನಿಮಗೂ ಗೊತ್ತು. ಆದರೂ ಅದರ ಮಾರ್ಕೆಟ್‌ ಹವಾ ಮಾತ್ರ ಒಂಚೂರು ಕಮ್ಮಿ ಆಗಿಲ್ಲ. ತೆರೆ ಮೇಲೆ ಬರೋದಿಕ್ಕೆ ಒಂದಷ್ಟು ದಿನ ಆಗ್ಬಬಹುದು ಅನ್ನೋದು ಬಿಟ್ಟರೆ ಸಿನಿಮಾ ಯಾವಾಗ ಬರುತ್ತೆ ಎನ್ನುವ ಪ್ರೇಕ್ಷಕರ ದೊಡ್ಡ ಕುತೂಹಲದ ನಡುವೆ ಆಡಿಯೋ ರೈಟ್ಸ್‌, ಸ್ಯಾಟಲೈಟ್‌ ರೈಟ್ಸ್‌ ಹಾಗೂ ಡಿಜಿಟಲ್‌ ರೈಟ್ಸ್‌ ಗಳ ಮಾರಾಟದಲ್ಲಿ ದಾಖಲೆ ಸೃಷ್ಟಿಸುತ್ತಲೇ ಬರುತ್ತಿರುವುದು ಮಾತ್ರ ರೋಚಕವೇ ಹೌದು.

ಸದ್ಯಕ್ಕೆ ‘ಕೆಜಿಎಫ್‌ 2’ ಸಿನಿಮಾಕ್ಕೆ ಸಂಬಂಧಿಸಿದಂತೆ ಆಡಿಯೋ ರೈಟ್ಸ್‌ ಹಾಗ ಸ್ಯಾಟಲೈಟ್ಸ್‌ ರೈಟ್ಸ್‌ ಅನ್ನು ಹೊಂಬಾಳೆ ಫಿಲಂಸ್‌ ಮಾರಾಟ ಮಾಡಿದೆ. ಅದರ ಆಡಿಯೋ ಹಕ್ಕುಗಳನ್ನು ಕನ್ನಡದ ಹೆಸರಾಂತ ಆಡಿಯೋ ಸಂಸ್ಥೆ ಲಹರಿ ಖರೀದಿ ಮಾಡಿದೆ. ಅದು ಭಾರೀ ದೊಡ್ಡ ಮೊತ್ತಕ್ಕೆ ಸೇಲ್‌ ಆಗಿದೆಯಂತೆ. ಲಹರಿ ಆಡಿಯೋ ಸಂಸ್ಥೆ ಮಾಲೀಕರಾದ ಲಹರಿ ವೇಲು ಹೇಳುವ ಪ್ರಕಾರ ಕನ್ನಡದಲ್ಲಿ ದಾಖಲೆ ಆಗುವಂತಹ ಮೊತ್ತಕ್ಕೆ ‘ಕೆಜಿಎಫ್‌ 2’ ಆಡಿಯೋ ಹಕ್ಕುಗಳನ್ನು ಖರೀದಿಸಲಾಗಿ ದೆಯಂತೆ. ಅದೇ ರೀತಿ ಈಗ ‘ಕೆಜಿಎಫ್‌ 2 ‘ಚಿತ್ರದ ಸ್ಯಾಟಲೈಟ್ಸ್‌ ರೈಟ್ಸ್‌ ಕೂಡ ಜೀ ಕನ್ನಡದ ಪಾಲಾಗಿದ್ದು, ಅದು ಕನ್ನಡದಲ್ಲಿ ಹಿಂದೆಂದೂ ಕಾಣದಂತಹ ದೊಡ್ಡ ಮೊತ್ತಕ್ಕೆ ಸೇಲ್‌ ಆಗಿದೆಯಂತೆ. ಸದ್ಯಕ್ಕೆ ಈ ʼಮೊತ್ತʼ ಎಷ್ಟು ಎನ್ನುವುದನ್ನು ಹೊಂಬಾಳೆ ಫಿಲಂಸ್‌ ಆಗಲಿ ಅಥವಾ ಜೀ ನೆಟ್‌ ವರ್ಕ್‌ ಆಗಲಿ ಎಲ್ಲೂ ಬಹಿರಂಗ ಪಡಿಸಿಲ್ಲ, ಆದರೆ ಎರಡು ಸಂಸ್ಥೆಗಳ ನಡುವೆ ಒಪ್ಪಂದ ಆಗಿರುವುದು ಅಧಿಕೃತವಾಗಿದೆ.

ಅವರೆಡು ಸಂಸ್ಥೆಗಳ ನಡುವೆ ಆಗಿರುವ ಒಪ್ಪಂದಕ್ಕೆ ಸಾಕ್ಷಿಯಾಗಿ ವರಮಹಾಲಕ್ಷ್ಮಿ ಹಬ್ಬದ ವಿಶೇಷ ಎನ್ನುವ ಹಾಗೆ ಹೊಂಬಾಳೆ ಫಿಲಂಸ್‌ ಮಾಧ್ಯಮಕ್ಕೆ ಅಧಿಕೃತ ಹೇಳಿಕೆ ರವಾನಿಸಿದೆ. ಹೊಂಬಾಳೆ ಫಿಲಂಸ್‌ ನ ಸಾರಥಿ ವಿಜಯ್‌ ಕಿರಗಂದೂರು ಹಾಗೂ ಜೀ ಕನ್ನಡ ಬ್ಯುಸಿನೆಸ್ ಹೆಡ್ ರಾಘವೇಂದ್ರ ಹುಣಸೂರ್ ಜೊತೆಗಿನ ಫೋಟೋ ಕೂಡ ರಿವೀಲ್‌ ಆಗಿವೆ. ದೇಶದ ಮನರಂಜನಾ ವಲಯದ ಅತೀ ದೊಡ್ಡ ನೆಟವರ್ಕ್‌ ಆದ ಜೀ ನೆಟ್‌ ವರ್ಕ್‌ ಜತೆಗನ ಒಪ್ಪಂದ ನನಗೆ ಅತೀವ ಖುಚಷಿ ತಂದಿದೆ. ದಕ್ಷಿಣದ ನಾಲ್ಕು ಭಾಷೆಗೂ ‘ಕೆಜಿಎಫ್‌ 2’ ಸ್ಯಾಟಲೈಟ್ಸ್‌ ರೈಟ್ಸ್‌ ಅನ್ನು ಜೀ ನೆಟ್‌ ವರ್ಕ್‌ ತನ್ನದಾಗಿಸಿಕೊಂಡಿದೆ. ಜೀ ನಿರೀಕ್ಷೆಯಂತೆ ಅದು ತನ್ನ ವೀಕ್ಷಕರ ವಲಯಕ್ಕೆ ದೊಡ್ಡ ಮನರಂಜನೆ ನೀಡುವುದು ಗ್ಯಾರಂಟಿ ಆಗಿದೆ. ಕೆಜಿಎಫ್‌ ಮೊದಲ ಭಾಗದಂತೆಯೇ ಚಾಫ್ಟರ್‌ 2 ಕೂಡ ಭಾರತೀಯ ಚಿತ್ರ ರಂಗದಲ್ಲಿ ದೊಡ್ಡ ಮೈಲುಗಲ್ಲು ಆಗುವುದು ಖಚಿತ ಎನ್ನುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಹಾಗೆಯೇ ಚಿತ್ರದ ನಾಯಕ ನಟ ಯಶ್‌ ಮತ್ತು ನಿರ್ದೇಶಕ ಪ್ರಶಾಂತ್‌ ನೀಲ್‌ ಕೂಡ ಜೀ ನೆಟ್‌ ವರ್ಕ್‌ ಜತೆಗಿನ ಒಪ್ಪಂದಕ್ಕೆ ಖುಷಿ ವ್ಯಕ್ತಪಡಿಸಿದ್ದಾರೆ.

ಪ್ರತಿಷ್ಠಿತ ಮನರಂಜನಾ ಟಿವಿ ಚಾನೆಲ್ ಜೀ ಸಂಸ್ಥೆ ಕನ್ನಡ – ತೆಲುಗು- ತಮಿಳು- ಮಲೆಯಾಳಂ ಭಾಷೆಯ ಸ್ಯಾಟಲೈಟ್ ಹಕ್ಕುಗಳನ್ನ ಕೊಂಡು ಕೊಂಡಿದೆ. ವಲ್ಡ್ ವೈಡ್ ತುಂಬ ಮನೆಮನಕ್ಕೆ ಜೀ‌ ಸಂಸ್ಥೆ ಕೆಜಿಎಫ್ ಚಾಪ್ಟರ್ – 2 ಚಿತ್ರವನ್ನ ತಲುಪಿಸಲು ತುದಿಗಾಲ ಮೇಲೆ ನಿಂತಿದೆ. ಕೆಜಿಎಫ್‌ ೨ ತಮ್ಮ ಸಂಸ್ಥೆ ಪಾಲಾಗಿದ್ದಕ್ಕೆ ಜೀ ಕನ್ನಡ ಬ್ಯುಸಿನೆಸ್‌ ಹೆಡ್‌ ರಾಘವೇಂದ್ರ ಹುಣಸೂರು ಕೂಡ ಎಕ್ಸೈಟ್‌ ಆಗಿದ್ದು, ಜೀ ನೆಟ್‌ ವರ್ಕ್‌ ಜರ್ನಿಯಲ್ಲೂ ಇದೊಂದು ದೊಡ್ಡ ಮೈಲುಗ ಲ್ಲುಆಗುವ ದೊಡ್ಡ ಭರವಸೆ ತಮಗಿದೆ ಎಂದು ಅನಿಸಿಕೆ ಹಂಚಿಕೊಂ ಡಿದ್ದಾರೆ. ಇನ್ನು ಒಟಿಟಿ ಫ್ಲಾಟ್‌ ಫಾರ್ಮ್‌ ನಲ್ಲಿಯೇ ಸಿನಿಮಾ ಬಿಡುಗಡೆ ಮಾಡಲು ಅಮೆಜಾನ್‌, ನೆಟ್‌ ಪ್ಲೆಕ್ಸ್‌ ಈಗ ಚಾತಕ ಪಕ್ಷಿಯಂತೆ ಕಾಯು ತ್ತಿವೆ. ಇದಕ್ಕಾಗಿ ಅವರು ನೂರಿನ್ನೂರು ಕೋಟಿ ಕೊಡುವುದಕ್ಕೂ ಸಿದ್ದವಿವೆ. ಆದರೆ 250 ಕೋಟಿ ಅಲ್ಲ 500 ಕೋಟಿ ಕೊಟ್ಟರೂ ಸಿನಿಮಾನ ಓಟಿಟಿ ಪ್ಲಾಟ್ ಫಾರ್ಮ್ ನಲ್ಲಿ ಬಿಡುಗಡೆ ಮಾಡಲ್ಲ. ಎಷ್ಟೇ ಟೈಮ್ ಹಿಡಿದರೂ ಪರವಾಗಿಲ್ಲ ಥಿಯೇಟರ್ ನಲ್ಲಿ ರಿಲೀಸ್ ಮಾಡ್ತೀವಿ ಅಂತ ಕೆಜಿಎಫ್ ೨ ಡಿಸೈಡ್‌ ಮಾಡಿದೆ. ಅದರಂತೆ ಬಿಗ್ ಸ್ಕ್ರೀನ್‌ನಲ್ಲಿ ರಿಲೀಸ್ ಆಗಲಿದೆ. ಯಾವಾಗ ? ಹೇಗೆ ಎನ್ನುವುದಕ್ಕೆ ಶೀಘ್ರದಲ್ಲೇ ತೆರೆ ಬೀಳಲಿದೆ.

  • ಎಂಟರ್‌ ಟೈನ್‌ ಮೆಂಟ್‌ ಬ್ಯೂರೋ , ಸಿನಿಲಹರಿ

Categories
ಸಿನಿ ಸುದ್ದಿ

ಕಾಂತಾರ-ವೈರಮುಡಿ ಕಥೆ ಏನಾಯ್ತು ? ಹ್ಯಾಟ್ರಿಕ್ ಹೀರೋ ಶಿವಣ್ಣನ ಮೀಟ್ ಮಾಡಿದ್ರು ರಿಷಬ್ ಶೆಟ್ಟಿ !?

ಕರುನಾಡ ಚಕ್ರವರ್ತಿ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅವ್ರನ್ನ ನಿರ್ದೇಶಕ ರಿಷಬ್ ಶೆಟ್ಟಿ ಭೇಟಿ ಮಾಡಿದ್ದಾರೆ. ಸದ್ದುಗದ್ದಲವಿಲ್ಲದೇ ಸೈಲೆಂಟಾಗಿ ಶಿವಣ್ಣನ್ನ ಮೀಟ್ ಮಾಡಿರುವ ರಿಷಬ್, ಮೊಬೈಲ್ ಕೈಗೆತ್ತಿಕೊಂಡು ಹಾಗೇ ಒಂದು ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. ಬ್ಯೂಟಿಫುಲ್ ಪೋಟೋ ಕ್ಯಾಪ್ಚರ್ ಮಾಡಿಕೊಂಡ ರಿಕ್ಕಿ ಡೈರೆಕ್ಟರ್ ಇಂದು ಬೆಳ್ಳಂಬೆಳಗ್ಗೆ ಶಿವಣ್ಣ ಅವರನ್ನು ಭೇಟಿ ಮಾಡುವ ಭಾಗ್ಯ ನನ್ನದಾಯ್ತು. ಹೊಸ ಹೆಜ್ಜೆಯೊಂದು ಇಡುವ ಬಗ್ಗೆ ಉತ್ಸುಕನಾ ಗಿದ್ದೇನೆ. ಹೀಗಂತ ಬರೆದುಕೊಂಡು ಫೋಟೋ ಸಮೇತ ಸೋಷಿಯಲ್ ಮೀಡಿಯಾಗೆ ಅಪ್‌ಲೋಡ್ ಮಾಡಿದ್ದಾರೆ.

ಶೆಟ್ರು ಹಾಗೂ ಶಿವಣ್ಣರನ್ನ ಒಟ್ಟಿಗೆ ನೋಡಿದ್ಮೇಲೆ ಥ್ರಿಲ್ಲಾಗಲೆಬೇಕು ಅಟ್ ದಿ ಸೇಮ್ ಟೈಮ್ ತಲೆಗೆ ಹುಳಬಿಟ್ಟುಕೊಳ್ಳಲೆಬೇಕು. ಯಾಕಂದ್ರೆ, ಕಾಂತಾರ-ವೈರಮುಡಿಯ ಕನ್‌ಪ್ಯೂಶನ್ ಕಥೆಗೆ ಇನ್ನೂ ಕ್ಲ್ಯಾರಿಟಿ ಸಿಕ್ಕಿಲ್ಲವಲ್ಲ. ಕಳೆದ ಎರಡು ವಾರಗಳ ಹಿಂದೆ ಕಾಂತಾರ ವರ್ಸಸ್ ವೈರಮುಡಿ ಎನ್ನುವಂತಹ ಸಂದರ್ಭ ಸೋಷಿಯಲ್ ಮೀಡಿಯಾದಲ್ಲಿ ಸೃಷ್ಟಿಯಾಗಿದ್ದು ನಿಮಗೆಲ್ಲ ಗೊತ್ತಿರುತ್ತೆ ಅನ್ಸುತ್ತೆ. ಜನಪ್ರಿಯ ನಿರ್ಮಾಣ ಸಂಸ್ಥೆ ಹೊಂಬಾಳೆಕಾಂತಾರ’ ಟೈಟಲ್ ಅನೌನ್ಸ್ ಮಾಡ್ತು. ನಟನೆಯ ಜೊತೆಗೆ ನಿರ್ದೇಶನದ ಜವಾಬ್ದಾರಿ ಹೊತ್ತ ರಿಷಬ್ ಶೆಟ್ಟಿ, ಜಟ್ಟಿ ವೇಷದಲ್ಲಿ ಕಾಣಸಿಕೊಂಡರು. ಕೋಣಗಳು ಓಟ ಕಿತ್ತಿರುವ ಪೋಸ್ಟರ್ ಮೂಲಕ ಶೆಟ್ಟರು ಕಣಕ್ಕಿಳಿದರು. ಆಗಲೇ ಸೋಷಿಯಲ್ ಲೋಕ ಕೆಂಡದಂತೆ ಧಗಧಗಿಸಿತು. ಪೈಲ್ವಾನ್ ಅವತಾರದಲ್ಲಿ ಹುಚ್ಚೆಬ್ಬಿಸಿದ್ದ ಶಿವಣ್ಣನ `ವೈರಮುಡಿ’ ಸಿನಿಮಾದ ಪೋಸ್ಟರ್ ಮತ್ತೆ ರಾರಾಜಿಸ್ತು. ಕಂಬಳದ ಕಥೆಯನ್ನೊಳಗೊಂಡು ವೈರಮುಡಿ ಚಿತ್ರ ತಯಾರಾಗುತ್ತಿದೆ ರಥಾವರ ಡೈರೆಕ್ಟರ್ ಎರಡು ವರ್ಷ ಬೆವರು ಸುರಿಸಿ ಕಥೆ ಮಾಡಿಕೊಂಡಿದ್ದಾರೆ. ಹ್ಯಾಟ್ರಿಕ್ ಹೀರೋ ಡೇಟ್ ನೋಡಿಕೊಂಡು ಶೂಟಿಂಗ್ ಹೋಗೋದಕ್ಕೆ ಸಿದ್ದತೆ ಮಾಡಿಕೊಳ್ತಿದ್ದಾರೆ. ಹೀಗಿರುವಾಗ ಶೆಟ್ಟರು ಯಾಕೇ ಕೋಣಗಳನ್ನು ಓಡಿಸಿಕೊಂಡು ಬಂದ್ರಪ್ಪ ಅಂತ ಚರ್ಚೆಯಾಯ್ತು.

ಕಿರಿಕ್ ಡೈರೆಕ್ಟರ್ ಕಂಬಳದ ಕಥೆಯನ್ನೇ ಕಾಂತಾರ' ಚಿತ್ರದಲ್ಲಿ ದಂತಕತೆ ಮಾಡೋದಕ್ಕೆ ಹೊರಟರಾ? ಹೀಗೊಂದು ಸಂಶಯ ಬಂದು ಶಿವಣ್ಣನ ಅಭಿಮಾನಿಗಳು ಹಾಗೂ ರಥಾವರ ನಿರ್ದೇಶಕರ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದರು. ಸಿನಿಲಹರಿ ಜೊತೆ ಮಾತನಾಡುತ್ತಾ ವೈರಮುಡಿಗೋಸ್ಕರ ಪಟ್ಟ ಶ್ರಮದ ಬಗ್ಗೆ ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ ಬಿಚ್ಚಿಟ್ಟರು.ಕಾಂತಾರ’ ಸಿನಿಮಾ ಕಂಬಳ ಕುರಿತಾಗಿದೆಯೋ ಅಥವಾ ಮತ್ಯಾವುದೋ ಕಥೆಯನ್ನೋ ಹೇಳಲಿದೆಯೋ ಗೊತ್ತಿಲ್ಲ. ಒಂದ್ವೇಳೆ ಕಾಂತಾರ' ಕರಾವಳಿಯ ಜಾನಪದ ಕ್ರೀಡೆ ಕಂಬಳದ್ದೇ ಕಥೆಯಾದರೆ ನಿಜಕ್ಕೂ ಕೃತಿಚೌರ್ಯವೇ ಅಂತ ಬಂಡಿಯಪ್ಪ ನೊಂದುಕೊಂಡರು. ಇದಾಗಿ ಹೆಚ್ಚುಕಮ್ಮಿ 13 ದಿನಗಳು ಕಳೆದಿವೆ ಆದರೆ ರಿಷಬ್ ಶೆಟ್ಟಿಯವರೇ ಆಗಲೀ, ಹೊಂಬಾಳೆ ಸಂಸ್ಥೆಯೇ ಆಗಲಿಕಾಂತಾರ’ ಸಿನಿಮಾದ ತಿರುಳಿನ ಬಗ್ಗೆ ಬಿಟ್ಟುಕೊಟ್ಟಿಲ್ಲ. ಇತ್ತ ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ ಯಾವ ನಿರ್ಧಾರಕ್ಕೆ ಬಂದ್ರೋ ಗೊತ್ತಿಲ್ಲ. ಈ ಬಗ್ಗೆ ಶಿವಣ್ಣ ಜೊತೆಗೆ ಏನಾದರೂ ಮಾತುಕತೆ ನಡೆಸಿದ್ದಾರೋ ಏನೋ ಆ ಬಗ್ಗೆ ಹೆಚ್ಚಿನ ಡೀಟೈಲ್ಸ್ ಲಭ್ಯವಾಗಿಲ್ಲ. ಈ ಮಧ್ಯೆ ನಿರ್ದೇಶಕ ರಿಷಬ್ ಶೆಟ್ಟಿ ಹ್ಯಾಟ್ರಿಕ್ ಹೀರೋನಾ ಭೇಟಿ ಮಾಡಿ ಕೂತೂಹಲ ಕೆರಳಿಸಿದ್ದಾರೆ.

ನಿರ್ದೇಶಕ ರಿಷಬ್ ಶೆಟ್ಟಿ ಸೆಂಚುರಿಸ್ಟಾರ್ ಶಿವಣ್ಣರನ್ನು ಭೇಟಿ ಮಾಡಿರುವ ಉದ್ದೇಶ ಹೊಸ ಸಿನಿಮಾ. ಯಸ್, ದೊಡ್ಮನೆ ಸ್ಟಾರ್ ಶಿವಣ್ಣನಿಗೆ ಕಿರಿಕ್ ಡೈರೆಕ್ಟರ್ ರಿಷಬ್ ಶೆಟ್ಟಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಶಿವಣ್ಣನ ಜೊತೆಗೆ ರಿಷಬ್ ಸಿನಿಮಾ ಮಾಡ್ತಾರೆ ಎನ್ನುವ ಸುದ್ದಿ ಹರಿದಾಡಿತ್ತು. ಆದರೆ, ಯಾವ ಸಿನಿಮಾ? ಪ್ರೊಡ್ಯೂಸರ್ ಯಾರು? ಶಿವಣ್ಣ ಯಾವಾಗ ಡೇಟ್ ಕೊಟ್ಟಿದ್ದಾರೆ? ಯಾವಾಗ ಸಿನಿಮಾ ಸೆಟ್ಟೇರುತ್ತೆ? ಇದ್ಯಾವ ಪ್ರಶ್ನೆಗೂ ಉತ್ತರ ಸಿಕ್ಕಿರಲಿಲ್ಲ. ಆ ಎಲ್ಲಾ ಕೂತೂಹಲದ ಪ್ರಶ್ನೆಗೆ ಶೆಟ್ರು ಹಾಗೂ ಶಿವಣ್ಣರ ಭೇಟಿಯಿಂದ ಉತ್ತರ ಸಿಕ್ಕಿದೆ. 124 ನೇ ಸಿನಿಮಾ ಇತ್ತೀಚೆಗಷ್ಟೇ ಸೆಟ್ಟೇರಿದೆ. ನೀ ಸಿಗೋವರೆಗೂ ಸಿನಿಮಾದಲ್ಲಿ ಸದ್ಯ ಶಿವಣ್ಣ ಬ್ಯುಸಿಯಾಗಿದ್ದಾರೆ. 125 ನೇ ಚಿತ್ರವಾದ `ವೇದ’ದಲ್ಲಿಯೂ ತೊಡಗಿಸಿಕೊಳ್ಳಲಿದ್ದಾರೆ. ಈ ಎರಡು ಸಿನಿಮಾನ ಬ್ಯಾಲೆನ್ಸ್ ಮಾಡಿಕೊಂಡು ರಿಷಬ್ ಶೆಟ್ಟಿಯವರ ಅಖಾಡಕ್ಕೆ ಹ್ಯಾಟ್ರಿಕ್ ಹೀರೋ ಧುಮಕಲಿದ್ದಾರೆ.

ಹೌದು, 126 ನೇ ಸಿನಿಮಾವನ್ನು ಶಿವಣ್ಣ ರಿಷಬ್ ಜೊತೆಗೆ ಮಾಡಲಿದ್ದಾರೆ. ಶೆಟ್ಟರು ಹಾಗೂ ಶಿವಣ್ಣ ಕಾಂಬಿನೇಷನ್ ಸಿನಿಮಾಗೆ ಜನಪ್ರಿಯ ನಿರ್ಮಾಪಕರಾದ ಜಯ್ಯಣ್ಣ ಬಂಡವಾಳ ಹೂಡಲಿದ್ದಾರೆ. ಇವತ್ತು ಅನ್ನದಾತರಾದ ಜಯಣ್ಣರೊಟ್ಟಿಗೆ ಜೊತೆಗೆ ಕರುನಾಡ ಚಕ್ರವರ್ತಿ ಯನ್ನ ರಿಷಬ್ ಭೇಟಿಮಾಡಿದ್ದಾರೆ. ಫೋಟೋ ಸಮೇತ ಸೋಷಿಯಲ್ ಮೀಡಿಯಾಗೆ ಅಪ್‌ಲೋಡ್ ಕೂಡ ಮಾಡಿದ್ದಾರೆ. ಅಲ್ಲಿಗೆ ಚಂದ್ರಶೇಖರ್ ಬಂಡಿಯಪ್ಪರೊಟ್ಟಿಗೆ ಸಿನಿಮಾ ಮಾಡುವ ಮೊದಲೇ ಶಿವರಾಜ್‌ ಕುಮಾರ್, ರಿಷಬ್ ಶೆಟ್ಟಿಯವರ ನಿರ್ದೇಶನದ ಸಿನಿಮಾದಲ್ಲಿ ಮಿಂಚಲಿದ್ದಾರೆ.ನಂತರವಷ್ಟೇ ಚಂದ್ರಶೇಖರ್ ಬಂಡಿಯಪ್ಪ ನಿರ್ದೇಶ ನದ ಸಿನಿಮಾದಲ್ಲಿ ಶಿವಣ್ಣ ಧಗಧಗಿಸಲಿದ್ದಾರೆ. ಏನಾಗಲಿದೆ 127 ನೇ ವೈರಮುಡಿಯ ಕಥೆ ಕಾದುನೋಡಬೇಕಿದೆ.

  • ವಿಶಾಲಾಕ್ಷಿ, ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಬರಲಿದೆ `ಡ್ರೋಣ್ ಪ್ರಥಮ್’ ಸಿನ್ಮಾ; ಪ್ರಥಮ್ ಜೊತೆ ಡ್ರೋಣ್ ಹಾರಿಸ್ತಾರೆ ಪೋರ್ನ್ ಬ್ಯೂಟಿ !

ಬಿಗ್‌ಬಾಸ್ ಸೀಸನ್ 4ರ ವಿನ್ನರ್.. ಒಳ್ಳೆಹುಡುಗ ಅಂತನೇ ಜನಪ್ರಿಯಗೊಂಡಿರುವ ಸ್ಯಾಂಡಲ್‌ವುಡ್ ಸೆನ್ಸೇಷನಲ್ ಆಕ್ಟರ್ ಪ್ರಥಮ್ ಆಗಾಗ ಬಿಗ್‌ಬ್ರೇಕಿಂಗ್ ನ್ಯೂಸ್‌ಗಳನ್ನ ಕೊಡ್ತಾ ಇ ರ‍್ತಾರೆ. ಕಳೆದ ಆರು ತಿಂಗಳ ಹಿಂದೆ ಸೋಷಿಯಲ್ ಮೀಡಿಯಾದಲ್ಲಿ ಡ್ರೋಣ್' ಹೆಸರಲ್ಲಿ ಸಿನಿಮಾ ಮಾಡುವುದಾಗಿ ಅನೌನ್ಸ್ ಮಾಡಿದ್ದರು. ಪ್ರಥಮ್ ಪೇಜ್‌ನಲ್ಲಿ ಡ್ರೋಣ್ ಕಂಡಾಗಲೇ ಇದು ಪಕ್ಕಾಡ್ರೋಣ್ ಪ್ರತಾಪ್’ ಕುರಿತಾದ ಸಿನ್ಮಾ ಇರ‍್ಬೋದು ಅಂತ ಎಲ್ಲರೂ ನಿರೀಕ್ಷೆ ಮಾಡಿದ್ದರು. ಜನರ ನಿರೀಕ್ಷೆ ಕೊನೆಗೂ ನಿಜವಾಗಿದೆ ಒಳ್ಳೆಹುಡುಗ ಪ್ರಥಮ್ `ಡ್ರೋಣ್ ಪ್ರಥಮ್’ ಹೆಸರಲ್ಲೇ ಸಿನಿಮಾ ಮಾಡೋದಕ್ಕೆ ತೀರ್ಮಾನ ಮಾಡಿದ್ದಾರೆ. ಡ್ರೋಣ್ ಹಾರ‍್ಸೋಕೆ ಪ್ರಥಮ್ ಜೊತೆ ಪೋರ್ನ್ ಬ್ಯೂಟಿ ಕೈ ಜೋಡಿಸಲಿದ್ದಾರಂತೆ. ಆ ನೀಲಿರಾಣಿ ಯಾರು? ಸಿನಿಮಾದ ಕಂಪ್ಲೀಟ್ ಅಪ್‌ಡೇಟ್ ಏನು? ಆ ಬಗ್ಗೆ ತಿಳಿದುಕೊ ಳ್ಳುವುದಕ್ಕೂ ಮುನ್ನ ಸ್ವತಃ ಪ್ರಥಮ್ ಡ್ರೋಣ್ ಬಗ್ಗೆ ಹಿಂದೊಮ್ಮೆ ಬಿಚ್ಚಿಟ್ಟ ಕಥೆಯನ್ನೊಮ್ಮೆ ನೋಡ್‌ಬಿಡೋಣ.

ಮುಂದಿನ ಸಿನಿಮಾ ಹೆಸರು ಡ್ರೋಣ್.. ಒಂದು ಮಜವಾದ ಸಿನಿಮಾ.. ೧೫ ಕೆಜಿ ರೆಡ್ಯೂಸ್ ಆಗ್ತಿದ್ದೀನಿ.. ಟೀಸರ್ ನಿಮಗೆ ಬಂಪರ್..ಕೆಲವು ಟ್ರೋಲ್ ಪೇಜ್‌ರ ಮನವಿಯ ಮೇರೆಗೆ ಕಾಪಿ ರೈಟಿಂಗ್ ಬರದಂತೆ ಲೀಗಲ್ ಟೀಮ್ ಜೊತೆ ಪ್ರೊಸೀಡ್ ಮಾಡ್ತಿದ್ದೇವೆ ನಿರೀಕ್ಷಿಸಿ. ಹೀಗಂತ, ಪಿಂಕ್ ಲೆಟರ್‌ನಲ್ಲಿ ಅಕ್ಷರಗಳನ್ನ ಪ್ರಕಟಿಸಿದ್ದ ಪ್ರಥಮ್ ಅವರು. ಪ್ರಖ್ಯಾತ ನಿರ್ದೇಶಕರು ಡ್ರೋಣ್'ಚಿತ್ರ ನಿರ್ದೇಶನ ಮಾಡ್ತಾರೆ. ಗೌರಿಗಣೇಶ,ಉಂಡುಹೋದ ಕೊಂಡು ಹೋದ, ಯಾರಿಗೂ ಹೇಳ್ಬೇಡಿ ಶೈಲಿಯಲ್ಲಿ ಮೂಡಿಬರಲಿದೆ.ನಿಮ್ಗೆ ಡ್ರೋಣ್ ಅಂದ್ರೆ ಗೊತ್ತಲ್ವಾ? ನಿಮ್ಮತಲೆಯಲ್ಲಿ ಏನ್ ಬಂತೋ ಅದೇ ನಿಜ. ಅದೇ ಸಿನಿಮಾ ಆಗ್ತಿದೆ ಲೀಗಲ್ ಟೀಮ್ ಪ್ರೊಸಿಡಿಂಗ್‌ನಲ್ಲಿ ಇದೆ. ಕಾನೂ ನ್ಮಾತಕವಾಗಿ ಯಾವುದೇ ಸಮಸ್ಯೆಯಾಗದಂತೆ ನಿಮ್ಮನ್ನ ನಗಿಸೋ ಜೊತೆಗೆ ಕಾಡುವ ಸಿನಿಮಾ ಡ್ರೋಣ್..ಹೀಗಂತ ಸೋಷಿಯಲ್ ಪೇಜ್‌ನಲ್ಲಿ ಪ್ರಥಮ್ ಬರೆದುಕೊಂಡಿದ್ದರು. ಇದೀಗ ಖಾಸಗಿ ಪತ್ರಿಕೆಯೊಂದಕ್ಕೆ ಸಂದರ್ಶನ ನೀಡಿಡ್ರೋಣ್’ ಕಹಾನಿ ಮೇ ಟ್ವಿಸ್ಟ್ ನ ಬ್ರೇಕ್ ಮಾಡಿದ್ದಾರೆ.

ಡ್ರೋಣ್' ಸಿನಿಮಾ ಮಾಡ್ತೀನಿ ಅಂತ ಅನೌನ್ಸ್ ಮಾಡಿದ್ದೆ ಅದರಂತೇ ಡ್ರೋಣ್ ಹಾರ‍್ಸೋಕೆ ನಿರ್ಧಾರ ಮಾಡಿದ್ದೇನೆ.ಡ್ರೋಣ್ ಪ್ರಥಮ್’ ಹೆಸರಲ್ಲೇ ಮೂವೀ ಮಾಡ್ಬೇಕು ಅಂತ ತೀರ್ಮಾನಿಸಿದ್ದಾಗಿದೆ. ನಟನೆ ಮಾತ್ರ ಮಾಡೋಣ ಎಂದುಕೊಂಡಿದ್ದೇ ಅದ್ಯಾಕೋ ಗೊತ್ತಿಲ್ಲ ನಿರ್ದೇಶನಕ್ಕೂ ಕೈಹಾಕಿದ್ದೇನೆ. ಕಳೆದ ನಾಲ್ಕು ತಿಂಗಳಿಂದ ಡ್ರೋಣ್ ಪ್ರತಾಪ್' ಮೇಲೆ ಸ್ಟಡಿ ಮಾಡಿದ್ದೇನೆ. ಎಲ್ಲೆಡೆ ಆತ ಕೊಟ್ಟಿರುವ ಭಾಷಣ ಹಾಗೂ ಸಂದರ್ಶನಗಳನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿ ಹಾವ-ಭಾವವನ್ನು ತಿಳಿದುಕೊಂಡಿದ್ದೇನೆ ಎಂದಿದ್ದಾರೆ. ಡ್ರೋಣ್ ಬಾಯ್‌ಗೆ ಓವರ್‌ನೈಟ್ ಸಿಕ್ಕಂತಹ ಹೈಪ್, ಜೊತೆಗೆ ಪ್ರತಾಪ್ ಹಾರ‍್ಸಿದ್ದು ಡ್ರೋಣ್ ಅಲ್ಲ ಕಲರ್ ಕಾಗೆ ಎಂದಾಗ ವಲ್ ವೈಡ್ ಮೀಡಿಯಾದಲ್ಲಿ ಸೃಷ್ಟಿಯಾದ ಸಂಚಲನ ಹಾಗೂ ತಲ್ಲಣದ ಕಥೆಡ್ರೋಣ್ ಪ್ರಥಮ್’ ಸಿನಿಮಾದಲ್ಲಿರಲಿದೆಯಂತೆ.

ಮಂಡ್ಯಹೈದ ಪ್ರತಾಪ್ ವಿವಿಧ ರೀತಿಯ ಡ್ರೋಣ್ ತಯ್ಯಾರು ಮಾಡಿದ್ದೇನೆ ಅಲ್ಲದೇ ಕಷ್ಟಪಟ್ಟು ಹಾರ‍್ಸಿದ್ದೇನೆ. ದೇಶ-ವಿದೇಶಗಳ ಸ್ಪರ್ಧೆಯಲ್ಲಿ ಕಾಂಪಿಟ್ ಮಾಡಿ ಇಂಡಿಯಾದ ಕೀರ್ತಿಪತಾಕೆಯನ್ನ ಹಾರ‍್ಸಿದ್ದೇನೆ ಅಂತ ಹೇಳಿಕೊಂಡು ಯುವ ವಿಜ್ಞಾನಿ' ಎನಿಸಿಕೊಂ ಡಿದ್ದ.ದಿನಗಳು ಕಳೆದಂತೆ ಪ್ರತಾಪ್ ಕಳ್ಳಾಟ ಬಯಲಾಯ್ತು. ಹಾರ‍್ಸಿ ದ್ದು ಡ್ರೋಣ್ ಅಲ್ಲ ಕಲರ್ ಕಲರ್ ಕಾಗೆ ಎನ್ನೋದು ಬಟಾಬಯ ಲಾಯ್ತು. ಹಿಂಗಾಗಿದ್ದೇ ತಡ ನಿರ್ದೇಶಕರೊಬ್ಬರು ಡ್ರೋಣ್ ಪ್ರತಾಪ್ ಹಾಕಿಕೊಂಡು ಸಿನಿಮಾ ಮಾಡೋದು ಬೇಡ ಅಂತ ನಿರ್ಧರಿಸಿಬಿಟ್ಟರು. ಆದರೆ, ಪ್ರಥಮ್ ಅಂದೇ ಪ್ರತಾಪ್ ಕಥೆಯನ್ನ ಸಿನಿಮಾ ಮಾಡ್ಬೇಕು ಅಂತ ಡಿಸೈಡ್ ಮಾಡಿದ್ರು ಅಂತ ಕಾಣುತ್ತೆ ಹೀಗಾಗಿಯೇ ಇಂದುಡ್ರೋಣ್ ಪ್ರಥಮ್’ ಹೆಸರಲ್ಲಿ ಸಿನಿಮಾ ಮಾಡ್ತಿದ್ದಾರೆ. ಸೀರಿಯಸ್ ಸಬ್ಜೆಕ್ಟ್ ನ ಹಾಸ್ಯ ರೂಪದಲ್ಲಿ ಕಟ್ಟಿಕೊಡು ವುದಕ್ಕೆ ನಿರ್ಧಾರ ಮಾಡಿದ್ದಾರೆ. ಡ್ರೋಣ್ ಹಾರ‍್ಸೋದಕ್ಕೆ ಪ್ರಥಮ್‌ಗೆ ಮುಂಬೈನ ಇಬ್ಬರು ನಾಯಕಿಯರು ಸಾಥ್ ಕೊಡಲಿದ್ದಾರಂತೆ. ಪೋರ್ನ್ ಸ್ಟಾರ್‌ವೊಬ್ಬರು ಪ್ರಥಮ್ ಪಕ್ಕದಲ್ಲಿ ನಿಲ್ಲಲಿದ್ದಾರಂತೆ. ಆ ನೀಲಿ ಸುಂದರಿ ಯಾರು ಅನ್ನೋದನ್ನ ಪ್ರಥಮ್ ಇನ್ನೂ ಬಿಟ್ಟುಕೊಟ್ಟಿಲ್ಲ.

ಕರ್ನಾಟಕದ ಅಳಿಯ ಸಿನಿಮಾದಲ್ಲಿ ಪ್ರಥಮ್ ಫುಲ್ ಬ್ಯುಸಿಯಾ ಗಿದ್ದಾರೆ. ನಿರ್ದೇಶಿಸಿ-ನಟಿಸಿರುವ ನಟ ಭಯಂಕರ ಸಿನಿಮಾ ಬಿಡುಗಡೆಗೆ ಎದುರು ನೋಡ್ತಿದ್ದಾರೆ. ಈ ನಡುವೆ `ಡ್ರೋಣ್ ಪ್ರಥಮ್’ ಸಿನಿಮಾದಲ್ಲಿ ತೊಡಗಿಸಿಕೊಳ್ಳೋದಕ್ಕೆ ಉತ್ಸುಕರಾಗಿದ್ದಾರೆ. ಶೀಘ್ರದಲ್ಲೇ ಮುಹೂರ್ತದ ದಿವ್ಯದಿನಾಂಕವನ್ನು ಅನೌನ್ಸ್ ಮಾಡ್ತಾರಂತೆ. ಪ್ರಥಮ್ ತಮ್ಮ ಚಿತ್ರದ ಲಾಂಚಿಂಗ್‌ಗೆ ರಾಜಕೀಯದ ಘಟಾನುಘಟಿ ನಾಯಕರನ್ನು ಕರೆಸುತ್ತಾರೆ. ಮಾಜಿ ಪ್ರಧಾನಿಗಳಾದ ಎಚ್.ಡಿ ದೇವೇಗೌಡ್ರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ನ್ಯಾಷನಲ್ ಲೀಡರ್ ಎಲ್.ಕೆ ಅಡ್ವಾಣಿಯವರು ಪ್ರಥಮ್ ಸಿನಿಮಾಗೆ ಫಸ್ಟ್ ಕ್ಲಾಪ್ ಮಾಡಿ ಶುಭ ಹಾರೈಸಿದ್ದಾರೆ. ಡ್ರೋಣ್ ಪ್ರಥಮ್ ಸಿನಿಮಾಗೂ ಹೆಸರಾಂತ ರಾಜಕೀಯ ನಾಯಕ ಬರಲಿದ್ದಾರಂತೆ. ಯಾರು ಏನು ಅನ್ನೋದನ್ನು ಶಾರ್ಟ್ಲೀ ಅನೌನ್ಸ್ ಮಾಡಲಿದ್ದಾರೆ ಪ್ರಥಮ್. ಅಲ್ಲಿವರೆಗೂ ವೇಯ್ಟ್ ಅಂಡ್ ಸೀ.

-ವಿಶಾಲಾಕ್ಷಿ, ಎಂಟರ್‌ಟೈನ್ಮೆಂಟ್‌,ಸಿನಿ ಲಹರಿ

Categories
ಸಿನಿ ಸುದ್ದಿ

ಕಾಲಿವುಡ್ ಗೆ ಮತ್ತೆ ಕಾಲಿಟ್ಟ ಹರಿಪ್ರಿಯಾ; ಸಸಿಕುಮಾರ್ ಗೆ ಜೋಡಿಯಾದ್ರು ಕನ್ನಡದ ಕುಮುದಾ !

ಕನ್ನಡದ ಮೋಸ್ಟ್‌ ಗ್ಲಾಮರಸ್‌ ನಟಿ ಹರಿಪ್ರಿಯಾ ಮತ್ತೆ ಕಾಲಿವುಡ್‌ ಗೆ ಕಾಲಿಟ್ಟಿದ್ದಾರೆ. ಒಂಭತ್ತು ವರ್ಷಗಳ ನಂತರ ಮತ್ತೆ ಅಲ್ಲಿ ಸೆಕೆಂಡ್‌ ಇನ್ನಿಂಗ್ಸ್‌ ಶುರು ಹಚ್ಚಿಕೊಂಡಿರುವ ಹರಿಪ್ರಿಯಾ, ಸತ್ಯ ಶಿವ ಡೈರೆಕ್ಟ್ ಮಾಡ್ತಿರು ವ ಚಿತ್ರದಲ್ಲಿ ನಾಯಕಿಯಾಗಿ ಧಗಧಗಿಸಿದ್ದಾರೆ.

ಕನ್ನಡದ ಮೋಸ್ಟ್ ಗ್ಲಾಮರಸ್ ನಟಿ ಹರಿಪ್ರಿಯಾ ಮತ್ತೆ ಕಾಲಿವುಡ್ ಗೆ ಕಾಲಿಟ್ಟಿದ್ದಾರೆ. ಕಳೆದ 9 ವರ್ಷಗಳ ನಂತರ ತಮಿಳಿನಲ್ಲಿ ಮತ್ತೆ ಗ್ರಾಂಡ್ ಎಂಟ್ರಿ ಕೊಟ್ಟು, ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದಾರೆ. ಕನ್ನಡದ ಲ್ಲಿಯೇ ಸಾಕಷ್ಟು ಬ್ಯುಸಿ ಇದ್ದರೂ, ಅವರು ಮತ್ತೆ ಪರಭಾಷೆಗಳತ್ತ ಮುಖ ಮಾಡಿರುವುದಕ್ಕೆ ಪರ್ಫಾರ್ಮೆನ್ಸ್ ಒರಿಯೆಂಟೆಡ್ ಪಾತ್ರಗಳು ಈಗ ಅಲ್ಲೂ ಸಿಗುತ್ತಿರುವುದು ಕಾರಣವಂತೆ. ಸದ್ಯಕ್ಕೆ ಅದೇ ಕಾರಣದಿಂದ ಅವರೀಗ ‘ನಾಡೋಡಿಗಳ್’ ಚಿತ್ರದ ಖ್ಯಾತಿಯ ನಟ ಸಸಿಕುಮಾರ್ ಜೋಡಿಯಾಗಿ ಹೊಸದೊಂದು ಚಿತ್ರದಲ್ಲಿ ಕಾಣಿಸಿಕೊಂಡಿದ್ದು, ಈಗಾಗಲೇ ಅದಕ್ಕೆ ಮಾತಿನ ಭಾಗದ ಚಿತ್ರೀಕರಣವೂ ಕಂಪ್ಲೀಟ್ ಆಗಿದೆಯಂತೆ.

ಈ ಚಿತ್ರಕ್ಕಿನ್ನು ಟೈಟಲ್ ಫಿಕ್ಸ್ ಆಗಿಲ್ಲ. ಶೀಘ್ರದಲ್ಲಿಯೇ ಚಿತ್ರ ತಂಡ ಚಿತ್ರದ ಟೈಟಲ್ ಅನೌನ್ಸ್ ಮಾಡುವ ಸಾಧ್ಯತೆ ಇದೆ ಎನ್ನುವ ಸಂಗತಿ ಯನ್ನು ನಟಿ ಹರಿಪ್ರಿಯಾ ಅವರೇ ರಿವೀಲ್ ಮಾಡಿದ್ದಾರೆ. ಹಾಗೆಯೇ ಚಿತ್ರದಲ್ಲಿನ ತಮ್ಮ ಪಾತ್ರ ಮತ್ತು ಚಿತ್ರೀಕರಣದ ಅನುಭವ ವನ್ನು ಕೂಡ ಅವರು ‘ಸಿನಿ ಲಹರಿ’ಗೆ ತೆರೆದಿಟ್ಟರು.’ ತಮಿಳು ಚಿತ್ರರಂಗಕ್ಕೆ ನಾನು ಕಾಲಿಡದೇ ಹತ್ತು ವರ್ಷಗಳಾಗಿದ್ದವು. ಆರಂಭದಲ್ಲಿ ನಾನು ತಮಿಳು ಸೇರಿದಂತೆ ಪರಭಾಷೆ ಕಡೆ ಮುಖ ಮಾಡಿದ್ದಕ್ಕೆ ಕಾರಣ ಪರ್ಫಾಮೆನ್ಸ್ ಒರಿಯೆಂಟೆಡ್ ಪಾತ್ರಗಳ ಸಿಗುತ್ತಿಲ್ಲ ಅಂತ ಹೋಗ ಬೇಕಾಗಿ ಬಂತು. ಆದಾದ ನಂತರ ಕನ್ನಡದಲ್ಲಿಯೇ ಸಾಕಷ್ಟು ಸಿನಿಮಾ ಆಫರ್ ಬಂದವು. ನಾನೇನು ನಿರೀಕ್ಷೆ ಮಾಡುತ್ತಿದ್ದೇನೋ ಅಂತಹ ಪಾತ್ರಗಳೇ ಇಲ್ಲಿಯೇ ಸಿಕ್ಕವು. ಇಷ್ಟಾಗಿಯೂ ಇನ್ನಾಕೆ ತೆಲುಗು, ತಮಿಳು ಅಂತ ಸುಮ್ಮನಾಗಿದ್ದೆ. ಇಷ್ಟಾಗಿಯೂ ತೆಲುಗಿನಲ್ಲಿ ಸಿನಿಮಾ ಮಾಡುತ್ತಾ ಬಂದೆ. ಕಾರಣ ಅಲ್ಲಿ ನನಗೆ ಸಿಕ್ಕ ಪಾತ್ರಗಳು. ಅಂತಹ ಕ್ಯಾರೆಕ್ಟರ್ ತಮಿಳಿನಲ್ಲಿ ಸಿಗಲಿಲ್ಲ ಅಂತ ಸುಮ್ಮನಿದ್ದೆ. ಈಗ ನಾನು ಕನ್ನಡದಲ್ಲಿಯೇ ಬ್ಯುಸಿ ಆಗಿದ್ದರೂ, ಒಳ್ಳೆಯ ಪಾತ್ರಗಳು ತಮಿಳಿನಲ್ಲೂ ಬರುತ್ತಿವೆ. ಅದೇ ಕಾರಣಕ್ಕೆ ಈ ಸಿನಿಮಾ ಒಪ್ಪಿಕೊಂಡೆ ‘ಎನ್ನುತ್ತಾರೆ ಹರಿಪ್ರಿಯಾ.

ಅಂದ ಹಾಗೆ, ಸಸಿಕುಮಾರ್ ಹಾಗೂ ಪರಿಪ್ರಿಯಾ ಕಾಂಬಿನೇಷನ್ ಸಿನಿಮಾಕ್ಕೆ ಅಲ್ಲಿ ಆಕ್ಷನ್ ಕಟ್ ಹೇಳಿದ್ದು ಸತ್ಯಶಿವ. ಈ ಹಿಂದೆ ಇವರು ‘ಕಾಜುಗು’ ಸಿನಿಮಾ ನಿರ್ದೇಶಿಸಿದ್ದರು. ಹಾಗೆಯೇ ಕನ್ನಡದ ಬೆಲ್ ಬಾಟಮ್ ತಮಿಳು ರಿಮೇಕ್ ಗೂ ಸತ್ಯ ಶಿವ ನಿರ್ದೇಶಕರು. ಅದೇ ಕಾರಣಕ್ಕೆ ಅವರು ತಮ್ಮ ಹೊಸ ಸಿನಿಮಾಕ್ಕೆ ಕನ್ನಡದ ಗ್ಲಾಮರಸ್ ನಟಿ ಹರಿಪ್ರಿಯಾ ಅವರನ್ನೇ ಆಯ್ಕೆ ಮಾಡಿಕೊಂಡರಂತೆ.’ ನನ್ನ ಆಯ್ಕೆಗೆ ಬೆಲ್ ಬಾಟಮ್ ಚಿತ್ರದಲ್ಲಿನ ನನ್ನ ಪಾತ್ರವೇ ಕಾರಣ. ಅಲ್ಲಿ ನನ್ನ ಪರ್ ಫಾರ್ಮೆನ್ಸ್ ನೋಡಿದಾಗ ನಿರ್ದೇಶಕರಾದ ಸತ್ಯಶಿವ ಅವರಿಗೆ ತುಂಬಾ ಇಷ್ಟವಾಯಿತ್ತಂತೆ. ಅದೇ ಕಾರಣಕ್ಕೆ ಅವರು ನನ್ನನ್ನು ಭೇಟಿ ಮಾಡಿ, ಚಿತ್ರದಲ್ಲಿನ ಪಾತ್ರದ ಬಗ್ಗೆ ಹೇಳಿದಾಗ ನನಗೂ ಪಾತ್ರ ಇಷ್ಟವಾಯಿತು’ ಎಂದರು ಹರಿಪ್ರಿಯಾ.

‘ಕನಗವೇಲ್ ಕಾಕ’ ಹರಿಪ್ರಿಯಾ ನಟನೆಯ ಮೊದಲ ತಮಿಳು ಚಿತ್ರ. ವಲ್ಲಕೊಟ್ಟೈ ಎರಡನೇ ಮೂವೀ. ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಜೊತೆ ಸ್ಕ್ರೀನ್ ಶೇರ್ ಮಾಡಿದ್ದರು. ಮುರಾನ್ ಎನ್ನುವ ಮತ್ತೊಂದು ತಮಿಳು ಸಿನಿಮಾಗೆ ನಾಯಕಿ ಯಾಗಿದ್ದರು.‌ ಜೊತೆಜೊತೆಗೆ ತೆಲುಗು ಚಿತ್ರಗಳಲ್ಲಿ ಅಭಿನಯಿಸಿದರು. ಅದ್ಯಾವಾಗ ಉಗ್ರಂ ಚಿತ್ರಕ್ಕೆ ಬಣ್ಣ ಹಚ್ಚಿದರೋ ಫಿನೀಶ್ ಕನ್ನಡದಲ್ಲೇ ಹೆಚ್ಚು ಬ್ಯುಸಿಯಾಗಿಬಿಟ್ಟರು. ಸ್ಟಾರ್ ನಟರ ಚಿತ್ರಗಳಲ್ಲಿ ನಾಯಕಿಯಾಗಿ ಮಿಂಚಿದರು. ಇದೀಗ ಕನ್ನಡದ ಒಂಭತ್ತು ಚಿತ್ರಗಳಿಗೆ ಹರಿಪ್ರಿಯಾ ಬುಕ್ ಆಗಿದ್ದಾರೆ. ರಿಯಲ್ ಸ್ಟಾರ್ ಉಪೇಂದ್ರ ಜೊತೆ ಲಗಾಮ್, ರಿಷಬ್ ಶೆಟ್ಟಿ ಜೊತೆ ಬೆಲ್ ಬಾಟಮ್ 2, ಸತೀಶ್ ನಿನಾಸಂ ಅವರ ಪೆಟ್ರೋಮ್ನಿರ್ದೇಶಕ ಸೇರಿದಂತೆ ಒಂಭತ್ತು ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಹೀಗೆ ಬೇಡಿಕೆಯ ನಟಿಯಾಗಿರುವ ಹರಿಪ್ರಿಯಾ ಮತ್ತೆ ಕಾಲಿವುಡ್ ಗೆ ಜಿಗಿದಿದ್ದಾರೆ. ಸತ್ಯಶಿವ ಡೈರೆಕ್ಟ್ ಮಾಡ್ತಿರು ವ ಚಿತ್ರದಲ್ಲಿ ನೀರ್ ದೋಸೆ ಬೆಡಗಿ ನಾಯಕಿಯಾಗಿ ಧಗಧಗಿಸಿದ್ದಾರೆ. ಇನ್ನು ಟಿಡಿ ರಜ್ಹಾ ಈ ಚಿತ್ರದ ನಿರ್ಮಾಪಕರು. ಜಂಬವನ್, ಕಂಧಕುಟ್ಟೈ, ವಲ್ಲಕುಟ್ಟೈ ಸೇರಿದಂತೆ ಹಲವು ಸಿನಿಮಾ ನಿರ್ಮಾಣ ಮಾಡಿದ ಅನುಭವ ಅವರದು. ನಿವಾಸ್ ಕೆ ಪ್ರಸನ್ನ ಸಂಗೀತ ಹಾಗೂ ರಾಜಾಪಟ್ಟಚಾರ್ಜ್ ಛಾಯಾಗ್ರಹಣ ಈ ಚಿತ್ರಕ್ಕಿದೆ.
ಎಂಟರ್ ಟೈನ್ಮೆಂಟ್ ಬ್ಯೂರೋ ಸಿನಿ ಲಹರಿ

Categories
ಸಿನಿ ಸುದ್ದಿ

ಸಾಕ್ಷಾತ್ ಲಕ್ಷ್ಮಿಯಂತೆ ಖುಷಿ ಪ್ರತ್ಯಕ್ಷ ; ದಿಯಾ ಚೆಲುವೆಗೆ ಕೈ‌ಮುಗಿದರಲ್ಲ ಫ್ಯಾನ್ಸ್ !

ಖುಷಿ ನಗು ಚೆಂದ.. ಖುಷಿ ಮಾತು ಅಂದ.. ಖುಷಿ ಅಭಿನಯ ಅನನ್ಯ ಅನುಬಂಧ. ಎಸ್, ಸೌಮ್ಯ ಸ್ವಭಾವದ ಖುಷಿ ಕಣ್ಣೋಟದ ಅಭಿನಯದ ಮೂಲಕ, ಮೊಗದಲ್ಲಿ‌ ಮೂಡುವ ನಗುವಿನ ಮೂಲಕ ಕಲಾರಸಿಕರನ್ನು ಕಟ್ಟಿಹಾಕಿದ್ದಾರೆ. ಈಗ ಮಹಾಲಕ್ಷ್ಮಿಯ ಅವತಾರವೆತ್ತಿ ಸಾಕ್ಷಾತ್ ಲಕ್ಷ್ಮಿಯೂ ಅಚ್ಚರಿಪಡುವಂತೆ ಮಾಡಿದ್ದಾರೆ.

ಖುಷಿ.. ದಿಯಾ ಖುಷಿ.. ಈ ಖುಷಿ ಅಂದ್ರೆ ಯಾರಿಗ್ ಗೊತ್ತಿಲ್ಲ ಹೇಳಿ, ‌ಎರಡಕ್ಷರದ ದಿಯಾ ಸಿನಿಮಾ.. ಎರಡೇ ಎರಡು ಅಕ್ಷರದ ಖುಷಿ ಎಂಬ ನವನಟಿಯನ್ನು ಬೆಳ್ಳಿತೆರೆಯಲ್ಲಿ ರಾರಾಜಿಸುವಂತೆ ಮಾಡಿತು. ಎರಡಕ್ಷರದ ದಿಯಾ ಎನ್ನುವ ಪಾತ್ರ ನಟಿ ಖುಷಿ ಅವರನ್ನು ಮನೆ ಮಾತು ಆಗುವಂತೆ ಮಾಡಿತು. ಆ ಮೂಲಕ ದೊಡ್ಡ ಚಿತ್ರಪ್ರೇಮಿಗಳ ಮನಸು ಗೆದ್ದ ನಟಿ ಖುಷಿ.

ಖುಷಿ ನಗು ಚೆಂದ.. ಖುಷಿ ಮಾತು ಅಂದ.. ಖುಷಿ ಅಭಿನಯ ಅನನ್ಯ ಅನುಬಂಧ. ಎಸ್, ಸೌಮ್ಯ ಸ್ವಭಾವದ ಖುಷಿ ಕಣ್ಣೋಟದ ಅಭಿನಯದ ಮೂಲಕ, ಮೊಗದಲ್ಲಿ‌ ಮೂಡುವ ನಗುವಿನ ಮೂಲಕ ಕಲಾರಸಿಕರನ್ನು ಕಟ್ಟಿಹಾಕಿದ್ದಾರೆ. ಈಗ ಮಹಾಲಕ್ಷ್ಮಿಯ ಅವತಾರವೆತ್ತಿ ಸಾಕ್ಷಾತ್ ಲಕ್ಷ್ಮಿಯೂ ಅಚ್ಚರಿಪಡುವಂತೆ ಮಾಡಿದ್ದಾರೆ. ವರಮಹಾಲಕ್ಷ್ಮಿ ದರ್ಶನಕ್ಕೆ ಇನ್ನೆರಡು ದಿನ ಬಾಕಿಯಿದೆ. ಭಕ್ತರ‌ ಆಸೆ ಆಕಾಂಕ್ಷೆಗಳನ್ನು ಈಡೇರಿಸಲಿಕ್ಕೆ, ಭಕ್ತರ ಕಷ್ಟ ಸುಖ ಬಗೆಹರಿಸಲಿಕ್ಕೆ ಲಕ್ಷ್ಮವ್ವ ತಾಯಿ ಕೆಲವೇ ಗಂಟೆಗಳಲ್ಲಿ ಧರೆಗಿಳಿಯಲಿದ್ದಾಳೆ.

ಪ್ರತಿಯೊಬ್ಬರ ಮನೆಯಲ್ಲಿ ಚಕ್ಕಳಮಕ್ಕಳ ಹಾಕಿ ಕುಳಿತು ರಾರಾಜಿಸಲಿ ದ್ದಾಳೆ. ಈ ದಿವ್ಯ ಕ್ಷಣವನ್ನು ಭಕ್ತರು ಕಣ್ತುಂಬಿಕೊಳ್ಳುವ ಮೊದಲೇ ದಿಯಾ ಖುಷಿ ಸಾಕ್ಷಾತ್ ಲಕ್ಷ್ಮಿಯಂತೆ ಕಂಗೊಳಿಸಿದ್ದಾರೆ. ವೈಟ್ ಅಂಡ್ ಗೋಲ್ಡನ್ ಕಲರ್ ಕಾಂಬಿನೇಷನ್ ಸೀರೆಯುಟ್ಟಿರುವ ಖುಷಿ ವೆರೈಟಿ ವೆರೈಟಿ ಜ್ಯೂವೆಲರಿ ಹಾಕಿಕೊಂಡು ಫೋಸ್ ಕೊಟ್ಟಿದ್ದಾರೆ. ಕಮಲದಲ್ಲಿ ಕುಳಿತು ಲಕ್ಷ್ಮಿಯ ಚೆಲುವು ಬೀರಿದ್ದಾರೆ. ಧರೆಗಿಳಿದ ಲಕ್ಷ್ಮಿಯಂತೆ ಕಾಣುತ್ತಿರುವ ಖುಷಿಯನ್ನ ಕಂಡು‌ ಅವರ ಫ್ಯಾನ್ಸ್ ನಿಂತಲ್ಲೇ ಕೈಮುಗಿ ಯುತ್ತಿದ್ದಾರೆ.

ಅಂದ್ಹಾಗೇ, ಖುಷಿ ವರಮಹಾಲಕ್ಷ್ಮಿ ಹಬ್ಬಕ್ಕೆ ವಿಶೇಷವಾಗಿ ಈ ಫೋಟೋಶೂಟ್ ಮಾಡಿಸಿದ್ದಾರೆ. ಹರ್ಷಿತಾ ರೆಡ್ಡಿ ಖುಷಿ ಅಂದವನ್ನ ಹೆಚ್ಚಿಸೋಕೆ ಮೇಕಪ್‌ ಹಚ್ಚಿದ್ದಾರೆ. ವೈಟ್ ಸ್ಯಾರಿ ಹಾಗೂ ತರಹೇವಾರಿ ಆಭರಣದಿಂದ ಖುಷಿಯ ರಂಗು ಹೆಚ್ಚಿದೆ ಎನ್ನುವುದಕ್ಕಿಂತ ಖುಷಿ ಆ ಆಭರಣಗಳನ್ನು ತೊಟ್ಟಿರುವುದರಿಂದಲೇ ಆ ಜ್ಯೂಯಲರಿಗೆ ಹಾಗೂ ಆ ಸೀರೆಗೆ ಲಕ್ಷ್ಮಿ ಕಳೆಬಂದಿದೆ ಅಂದರೆ ತಪ್ಪಾಗಲ್ಲ ಬಿಡಿ. ಎನಿವೇ, ಖುಷಿ ದಿಯಾ ಸಿನಿಮಾ ನಂತರ ಖುಷಿಖುಷಿಯಾಗಿ ಲೈಫ್ ಲೀಡ್ ಮಾಡ್ತಿದ್ದಾರೆ. ರಿಯಲ್ ಲೈಫ್ ಜೊತೆಗೆ ರೀಲ್ ಲೈಫ್ ಕೂಡ ಸುಂದರವಾಗಿ ಸಾಗ್ತಿದೆ. ಖುಷಿಯ ಸಹಜಸುಂದರ ಅಭಿನಯಕ್ಕೆ ಅವಕಾಶಗಳು ಹರಿದುಬರುತ್ತಿವೆ. ರಂಗಿತರಂಗ ಹಾಗೂ ಅವನೇ ಶ್ರೀಮನ್ನಾರಾಯಣ ಸಿನಿಮಾ ಖ್ಯಾತಿಯ ನಿರ್ಮಾಪಕರಾದ ಎಚ್ ಕೆ ಪ್ರಕಾಶ್ ಅವರ ಮುಂದಿನ ಸಿನಿಮಾಗೆ ಖುಷಿ ಹೀರೋಯಿನ್. ನಕ್ಷೆ, ಮಾರ್ಗ ಸೇರಿದಂತೆ ಐದಾರು ಚಿತ್ರಗಳು ಖುಷಿ ಕೈಯಲ್ಲಿವೆ.

ಮದುವೆ ಆದ್ಮೇಲೆ ಹೀರೋಯಿನ್ಸ್ ಗೆ ಬಿಗ್ ಸ್ಕ್ರೀನ್ ನಲ್ಲಿ ಲೈಫ್ ಇಲ್ಲ ಗುರು ಅಂತಿದ್ದವರಿಗೆ ರಿಯಲ್ ಸ್ಟಾರ್ ಉಪ್ಪಿ ಸ್ಟೈಲ್ ನಲ್ಲಿ ಲಾಗಾ ಹೊಡೆಸಿದ್ದಾರೆ. ಬ್ಯಾಕ್ ಟು‌‌ ಬ್ಯಾಕ್ ಸಿನಿಮಾ ಒಪ್ಪಿಕೊಂಡು ಟಕ್ಕರ್ ಕೊಡ್ತಿದ್ದಾರೆ. ಹೊಸಬರ ಚಿತ್ರಗಳಾದರೂ ಕೂಡ ಅಭಿನಯಕ್ಕೆ ಸ್ಕೋಪ್ ಇರುವ, ಸ್ಪೇಸ್ ಇರುವ ಮೂವೀಗಳನ್ನೇ ಖುಷಿ ಆಯ್ಕೆಮಾಡಿ ಕೊಳ್ತಿದ್ದಾರೆ. ದಿಯಾ ಖುಷಿಯ ಸಿನಿಜರ್ನಿ ಹೀಗೆ ಸಕ್ಸಸ್ ಫುಲ್ ಆಗಿ ಸಾಗುತ್ತಿರಲಿ. ಆಲ್ ಇಂಡಿಯಾ ಕ್ರಷ್ ಪಟ್ಟದಲ್ಲಿ ಖುಷಿ ರಾರಾಜಿಸಲಿ ಅನ್ನೋದೇ ಸಿನಿಲಹರಿಯ ಆಶಯ.

ವಿಶಾಲಾಕ್ಷಿ, ಎಂಟರ್ ಟೈನ್ಮೆಂಟ್ ಬ್ಯೂರೋ ಸಿನಿ ಲಹರಿ

Categories
ಸಿನಿ ಸುದ್ದಿ

ಸುದೀಪ್ ಡೈರೆಕ್ಟ್ ಮಾಡಿದ್ರೆ ನಾನು ಆಕ್ಟ್ ಮಾಡ್ತೀನಿ ; ಹೀಗಂದ್ರು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ !

  • ವಿಶಾಲಾಕ್ಷಿ

ಸ್ಯಾಂಡಲ್ ವುಡ್ ಬಾದ್ ಷಾ ಕಿಚ್ಚ ಸುದೀಪ್ ಆಕ್ಷನ್ ಕಟ್ ಹೇಳಿದರೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಆಕ್ಟ್ ಮಾಡೋದಕ್ಕೆ ರೆಡಿಯಂತೆ. ಇದು ಬರೀ ಅಂತೆ ಕಂತೆ ಸುದ್ದಿಯಲ್ಲ ಸ್ವತಃ ಶಿವಣ್ಣ ಅವರೇ ಸುದೀಪ್ ಪಕ್ಕದಲ್ಲಿ ನಿಂತು ಅಧಿಕೃತ ವಾಗಿ ಘೋಷಣೆ ಮಾಡಿರುವ ಸುದ್ದಿ ಇದು.

ಕಿಚ್ಚನ ಕಥೆಗೆ ಶಿವಣ್ಣ ಕ್ಲೀನ್ ಬೋಲ್ಡ್

ಹೌದು, ಕರುನಾಡ ಚಕ್ರವರ್ತಿಯ ‘ನೀ ಸಿಗೋವರೆಗೂ’ ಸಿನಿಮಾ ಮುಹೂರ್ತ ಕಾರ್ಯಕ್ರಮ ಖಾಸಗಿ ಹೋಟೆಲ್ ನಲ್ಲಿ ಹಮ್ಮಿಕೊಳ್ಳಲಾಗಿತ್ತು. ಇಲ್ಲಿಗೆ ವಿಶೇಷ ಅತಿಥಿಯಾಗಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಆಗಮಿಸಿದ್ದರು. ಶಿವಣ್ಣನಿಗೆ ಫಸ್ಟ್ ಕ್ಲಾಪ್ ಮಾಡಿ 124 ನೇ ಚಿತ್ರಕ್ಕೆ ತುಂಬು ಹೃದಯದಿಂದ ಹಾರೈಸಿದರು. ಇದೇ ವೇಳೆ ಹ್ಯಾಟ್ರಿಕ್ ಹೀರೋಗೆ ಸುದೀಪ್ ಒಂದು ಕಥೆ ನರೇಟ್ ಮಾಡಿದ್ದಾರೆ. ಒನ್ ಲೈನ್ ಸ್ಟೋರಿ ಕೇಳಿ ಎಕ್ಸೈಟ್ ಆದ ಶಿವಣ್ಣ ಸುದ್ದಿಗೋಷ್ಠಿಯಲ್ಲಿ ಬಹಿರಂಗವಾಗಿಯೇ ಸುದೀಪ್ ನಿರ್ದೇಶನ ಮಾಡಿದರೆ ನಾನು ಆ ಸಿನಿಮಾ ಮಾಡೋದಕ್ಕೆ ರೆಡಿಯಿದ್ದೇನೆ ಎಂದರು.

ಶಿವಣ್ಣನಿಗಾಗಿ ಡೈರೆಕ್ಟರ್ ಕ್ಯಾಪ್ ತೊಡ್ತಾರಾ ಕಿಚ್ಚ

ಶಿವಣ್ಣ ಮಾತು ಮುಗಿಸಿದ್ಮೇಲೆ ಮೈಕ್ ಕೈಗೆತ್ತಿಕೊಂಡ ಸುದೀಪ್ ಅವರು ಶಿವಣ್ಣನ ದೊಡ್ಡತನದ ಬಗ್ಗೆ ಮಾತನಾಡಿದರು. ಒಬ್ಬ ಹೀರೋ ಮತ್ತೊಬ್ಬ ಹೀರೋಗೆ ಡೈರೆಕ್ಟ್ ಮಾಡ್ತೀನಿ ಅಂಗ ಬಂದಾಗ
ಸಿನಿಮಾ ಮಾಡೋಕೆ ಬರ್ತಿದ್ದಾನಾ ಅಥವಾ ಹಾಳು ಮಾಡೋಕೆ ಬರ್ತಿದ್ದಾನಾ ಎನ್ನುವ ಯೋಚನೆ ಸಹಜವಾಗಿ ಬರುತ್ತೆ. ಜೊತೆಗೆ ಅವರೇ ಒಬ್ಬ ನಟನಾಗಿ ನನಗ್ಯಾಕೆ ಡೈರೆಕ್ಟ್ ಮಾಡಬೇಕು ಎನ್ನುವ ಥಾಟ್ ಕೂಡ ಫ್ಲ್ಯಾಶ್‌‌‌ ಆಗುತ್ತೆ. ವಾಸ್ತವ ಹೀಗಿರುವಾಗ ಡೈರೆಕ್ಟ್ ಮಾಡಿದರೆ ನಾನು ಆಕ್ಟ್ ಮಾಡ್ತೀನಿ ಅಂತ ಶಿವಣ್ಣ ಹೇಳ್ತಿದ್ದಾರೆ ಅಂದರೆ ಅದು ಅವರ ದೊಡ್ಡಗುಣ ಹಾಗೂ ಸುದೀಪ್ ಮೇಲಿರುವ ನಂಬಿಕೆ ಅಲ್ಲದೇ ಮತ್ತೇನು ಅಲ್ಲ.

ಮಾಣಿಕ್ಯ ನಿರ್ದೇಶನದ ಶಾಂತಿನಿವಾಸದಲ್ಲಿ ಮಿಂಚಿದ್ದಾರೆ ಶಿವಣ್ಣ

ಅಷ್ಟಕ್ಕೂ, ಸುದೀಪ್ ಅದ್ಯಾವ್ ಕಥೆ ಹೇಳಿದರೂ, ಸ್ಟೋರಿ ಲೈನ್ ಹೇಗಿದೆ? ಇದ್ಯಾವ ಬಗ್ಗೆಯೂ ಹೆಚ್ಚಿನ ಡಿಟೈಲ್ಸ್ ಇಲ್ಲ. ಆದರೆ, ಇಬ್ಬರು ಒಂದಾಗಿ ಸಿನಿಮಾ ಸಂದರ್ಭ ಎದುರಾದರೆ ನೂರಕ್ಕೆ ನೂರು ಪರ್ಸೆಂಟ್ ಜೊತೆಯಾಗಿ ಸಿನಿಮಾ ಮಾಡ್ತಾರೆ. ಈಗಾಗಲೇ ಒಮ್ಮೆ ಶಿವಣ್ಣನಿಗೆ ಕಿಚ್ಚ ಆಕ್ಷನ್ ಕಟ್ ಹೇಳಿದ್ದಾರೆ. ಸುದೀಪ್ ನಿರ್ದೇಶಿಸಿ‌ ನಟಿಸಿದ್ದ ಶಾಂತಿನಿವಾಸದಲ್ಲಿ
ಹ್ಯಾಟ್ರಿಕ್ ಹೀರೋ ಮಿಂಚಿ ಹೋಗಿದ್ದಾರೆ. ‘ಒಂದು ಒಳ್ಳೆ ಕಥೆಯ ಹೇಳುವೆ’ ಹಾಡಿಗೆ ಸುದೀಪ್ ಹಾಗೂ ಶಿವಣ್ಣ ಒಟ್ಟಿಗೆ ಕಂಠಕುಣಿಸಿದ್ದಾರೆ.

ಈಗಾಗಲೇ, ಜೋಗಿ ಪ್ರೇಮ್ ನಿರ್ದೇಶನದ ಮಲ್ಟಿಸ್ಟಾರರ್ ದಿ ವಿಲನ್ ಚಿತ್ರದಲ್ಲಿ ಧಗಧಗಿಸಿದ್ದಾರೆ.
ಮತ್ತೆ ಒಟ್ಟಿಗೆ ಬೆಳ್ಳಿತೆರೆ ಮೇಲೆ ಯಾವಾಗ ಅಬ್ಬರಿಸ್ತಾರೋ ಅಂತ ಫ್ಯಾನ್ಸ್ ಕೂಡ ಕಾತುರರಾಗಿ ಕಾಯ್ತಿದ್ದಾರೆ. ಈ‌ ಮಧ್ಯೆ ಸುದೀಪ್ ನಿರ್ದೇಶನದ- ಶಿವಣ್ಣನ ಅಭಿನಯದ
ಧಮಾಕೇದಾರ್ ಸುದ್ದಿ ದೊಡ್ಮನೆ ಫ್ಯಾನ್ಸ್ ಹಾಗೂ ಶಾಂತಿನಿವಾಸದ ಅಭಿಮಾನಿಗಳನ್ನು ಹುಚ್ಚೆಬ್ಬಿಸಿದೆ. ಇಬ್ಬರ ಫ್ಯಾನ್ಸ್ ಹಬ್ಬ ಮಾಡಿ ಸಂಭ್ರಮಿಸುವಂತೆ ಮಾಡಿದೆ. ಡೈರೆಕ್ಟರ್ ಕ್ಯಾಪ್ ತೊಟ್ಟು ಆಕ್ಷನ್ ಕಟ್ ಹೇಳುವ ಗಳಿಗೆಯನ್ನ ಆರಡಿ ಕಟೌಟ್ ಫ್ಯಾನ್ಸ್ ಎದುರು ನೋಡುವಂತಾಗಿದೆ. ಆ ದಿನ. ಆ ಕ್ಷಣ ಆದಷ್ಟು ಬೇಗ ಬರಲಿ. ಬಿಗ್ ಸ್ಕ್ರೀನ್ ಕೂಡ ಸಂಭ್ರಮ ಪಡಲಿ ಅಲ್ಲವೇ..

ಎಂಟರ್ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಕಾಶ್ಮೀರದಲ್ಲಿ ಹೊಸಬರ ನೆನಪು ! ಹೃದಯಕೆ ಹೈದಯವೇ ಕಡು ವೈರಿ ಆಲ್ಬಂ ಗೀತೆ ಹೊರ ಬಂತು


ಸಿನಿಮಾ ರಂಗಕ್ಕೆ ಎಂಟ್ರಿಯಾಗುವ ಬಹುತೇಕ ಹೊಸ ಪ್ರತಿಭೆಗಳು ಕಿರುಚಿತ್ರವೋ ಅಥವಾ ಆಲ್ಬಂ ಸಾಂಗ್‌ ಮೂಲಕವೋ ಎಂಟ್ರಿಯಾಗುತ್ತಿರುವುದು ಹೊಸದೇನಲ್ಲ. ಆ ಸಾಲಿಗೆ ಇಲ್ಲೊಂದು ಹೊಸತರ ತಂಡ ಒಂದು ಆಲ್ಬಂ ಸಾಂಗ್‌ನೊಂದಿಗೆ ಸದ್ದು ಮಾಡುತ್ತಿದೆ. ಹೌದು, “ನಿನದೇ ನೆನಪು” ಶೀರ್ಷಿಕೆಯ ಆಲ್ಬಂ ಸಾಂಗ್‌ವೊಂದು ಈಗ ಎಲ್ಲೆಡೆ ಜೋರು ಸುದ್ದಿಯಾಗಿದೆ. ಸದ್ಯ ಸೋಶಿಯಲ್‌ ಮೀಡಿಯಾದಲ್ಲಿ ಇದರದ್ದೇ ಸುದ್ದಿ.


ಗೀತ ಸಾಹಿತಿ ಗೌಸ್‌ಪೀರ್‌ ಅವರು ಬರೆದ “ಹೃದಯಕ್ಕೆ ಹೃದಯವೇ ಕಡು ವೈರಿ” ಎಂದು ಶುರುವಾಗುವ ಗೀತೆ ಸ್ವಾತಂತ್ರ್ಯ ದಿನದಂದು ಬಿಡುಗಡೆಯಾಗಿದೆ. ಈ ಹಾಡಿನ ಚಿತ್ರೀಕರಣ ಕಾಶ್ಮೀರ ಮತ್ತು ಲೇಹ್‌ನಲ್ಲಿ ನಡೆದಿದೆ. ಸರವಣ್ ಮತ್ತು ಪ್ರತಿಮಾ ಈ ಆಲ್ಬಂ ಸಾಂಗ್‌ನಲ್ಲಿ ಅಭಿನಯಿಸಿದ್ದಾರೆ.

ಸರವಣ್ ಈಗಾಗಲೇ ಸಬ್ ವೇ ಎಂಬ ಸಿನಿಮಾದಲ್ಲಿ ನಟಿಸಿದ್ದಾರೆ. ಸದ್ಯ ಆ ಸಿನಿಮಾ ರಿಲೀಸ್‌ಗೆ ರೆಡಿಯಾಗುತ್ತಿದೆ. “ಟಿಕ್ ಟಾಕ್” ಮೂಲಕ ಮನೆ ಮಾತಾಗಿರುವ ಪ್ರತಿಮಾ ಈಗಾಗಲೇ ಕೆಲವು ಆಲ್ಬಂಗಳಲ್ಲಿ ನಟಿಸಿದ್ದಾರೆ. ಈ ಆಲ್ಬಂ ನಿರ್ಮಾಣ ಮಾಡಿರೋದು ಆಂಜಿ ಬಾಬು. ಅವರಿಗೆ ಬೆಂಬಲವಾಗಿ ನಿಂತವರು ಫೈಯಿಂಗ್ ಕಿಂಗ್ ಮಂಜು. ಈ ಮೊದಲು ಮಯೂರ್ ಪಟೇಲ್ ಅಭಿನಯದ ರಾಜೀವ ಚಿತ್ರವನ್ನೂ ಮಂಜು ನಿರ್ದೇಶಿಸಿದ್ದಾರೆ.


ಈ ಹಾಡನ್ನು ಎಂ. ವೈ. ಕೃಷ್ಣ ನಿರ್ದೇಶಿಸಿದ್ದಾರೆ. ವಾಸುಕಿ ವೈಭವ್ ಹಾಡಿರುವ ಹಾಡಿಗೆ ರೋಹಿತ್ ಸೊವಾರ್ ಸಂಗೀತವಿದೆ. ಕಾರ್ತಿಕ್ ಛಾಯಾಗ್ರಹಣ ಮಾಡಿದ್ದಾರೆ. ಚಾಣಕ್ಯ ಫಿಲಂಸ್ ಮೂಲಕ ಈ ಅಲ್ಬಂ ನಿರ್ಮಾಣಗೊಂಡಿದೆ. ನರೇಂದ್ರ ಬಾಬು, ನಿರ್ಮಾಪಕ ಸಯ್ಯದ್ ಸಲಾಂ, ರಮೇಶ್ ಹೊಸಬರ ಈ ಹಾಡಿಗೆ ಶುಭ ಹಾರೈಸಿದ್ದಾರೆ.

Categories
ಸಿನಿ ಸುದ್ದಿ

ಅಂತೂ ಕ್ಯಾಬ್ ಚಾಲಕನ ಕನಸು ನನಸಾಯ್ತು! ಅಂಗೈಲಿ ಅಕ್ಷರ ಸಿನ್ಮಾ ಮೂಲಕ ಬಣ್ಣದ ಹೆಜ್ಜೆ…

ಸಿನಿಮಾನೆ ಹಾಗೆ. ಇಲ್ಲಿ ಕನಸು ಕಾಣೋ ಮಂದಿಯೇ ಹೆಚ್ಚು. ಅದರಲ್ಲೂ ಇಲ್ಲಿ ಕನಸು ಕಂಡವರಿಗೆಲ್ಲಾ ಅದು ನನಸಾಗುತ್ತೆ ಅಂತ ಹೇಳುವುದಕ್ಕೂ ಆಗೋದಿಲ್ಲ. ಎಲ್ಲೋ ಒಂದಷ್ಟು ಅದೃಷ್ಟವಂತರಿಗೆ ಮಾತ್ರ ಅಂಥದ್ದೊಂದು ಲಕ್‌ ಸಿಗುತ್ತೆ. ಈಗ ಅಂಥದ್ದೊಂದು ಲಕ್‌ಗೆ ಸಿದ್ದರಾಜು ಕಾಳೇನಹಳ್ಳಿ ಕಾರಣರಾಗಿದ್ದಾರೆ. ಹೌದು, ಸರಿ ಸುಮಾರು ಎರಡು ದಶಕಗಳಿಂದಲೂ ಕ್ಯಾಬ್ ಚಾಲಕರಾಗಿರುವ ಸಿದ್ದರಾಜು ಅವರಿಗೆ ತಮ್ಮ ಅನುಭವಗಳನ್ನೇ ಆಧರಿಸಿ ಚಿತ್ರ ನಿರ್ಮಾಣ ಮಾಡಬೇಕೆಂಬ ಹಂಬಲವಿತ್ತು. ಆದರೆ, ಹಣವಿರಲಿಲ್ಲ. ಕ್ಯಾವ್‌ನಲ್ಲಿ ಪಯಣಿಸುತ್ತಿದ್ದ, ಜ್ಞಾನೇಶ್ ಅವರ ಬಳಿ ಸಿದ್ದರಾಜು ಈ ವಿಷಯ ಹೇಳಿದಾಗ, ಚಿತ್ರ ನಿರ್ಮಾಣಕ್ಕೆ ಕೈ ಜೋಡಿಸುವ ಮನಸ್ಸು ಮಾಡಿದ್ದಾರೆ ಜ್ಞಾನೇಶ್. ನಂತರ ಇಬ್ಬರು ಸೇರಿ ಕೆ.ಹೆಚ್.ಎಸ್ ಬ್ಯಾನರ್‌ನಲ್ಲಿ ಸಿನಿಮಾ ನಿರ್ಮಿಸಿದ್ದಾರೆ.

ತಮ್ಮ ಕನಸ್ಸನ್ನೇ ನನಸು ಮಾಡಿಕೊಳ್ಳಲು ಹೆಣಗಾಡುತ್ತಿರುವವರ ನಡುವೆ ಮತ್ತೊಬ್ಬನ ಕನಸನ್ನು ನನಸು ಮಾಡಲು ಹೊರಟಿದ್ದಾರೆ ಜ್ಞಾನೇಶ್. ಒಬ್ಬ ಕ್ಯಾಬ್ ಡ್ರೈವರ್ ಅನ್ನು ಡೈರೆಕ್ಟರ್ ಮಾಡಲು ಹೋಗಿ ಪ್ಯಾಸೆಂಜರ್ ಒಬ್ಬರು ಪ್ರೊಡ್ಯೂಸರ್ ಆಗಿದ್ದಾರೆ. ಇನ್ನು, ಬಾಲ್ಯದಲ್ಲೇ ತಂದೆತಾಯಿ ಕಳೆದುಕೊಂಡ ಮಕ್ಕಳು‌ ವಿದ್ಯಾಭ್ಯಾಸ ಹಾಗೂ ತಮ್ಮ ಜೀವನ ಹೇಗೆ ರೂಪಿಸಿಕೊಳ್ಳಬೇಕು ಎಂಬ ಕಥಾವಸ್ತು ಚಿತ್ರದ ಹೈಲೈಟ್.‌ ಸದ್ಯ ಚಿತ್ರೀಕರಣ ಪೂರ್ಣಗೊಂಡು, ಬಿಡುಗಡೆಗೆ ರೆಡಿಯಾಗಿದೆ.


ಹುಲಿಯೂರುದುರ್ಗ, ಮಾಗಡಿ ತಾವರೆಕೆರೆ, ಬೆಂಗಳೂರು ನಗರ ಸುತ್ತಮುತ್ತ ಚಿತ್ರೀಕರಣ ನಡೆದಿದೆ. ಸಿದ್ದರಾಜು ಕಾಳೇನಹಳ್ಳಿ ಅವರೇ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ನಾಗೇಶ್ ಉಜ್ಜನಿ ಸಹ ನಿರ್ದೇಶನವಿದೆ. ಮಲ್ಲಿಕಾರ್ಜುನ್ ಎಮ್ ಎನ್, ಸೋಮಣ್ಣ ಅವರ ಸಹಾಯಕ ನಿರ್ದೇಶನವಿದೆ. ಅಮ್ಮನಿಂದ ದೂರವಾದ ಒಂದು ಬಡ ವರ್ಗದ ಹುಡುಗನ ಶೈಕ್ಷಣಿಕ ಹಾದಿ, ಅಮ್ಮ ಮಗನ ನಡುವಿನ ಬಾಂಧವ್ಯ ಇರುವ ಹಾಗೂ ಸಮಾಜಕ್ಕೆ ಶಿಕ್ಶಣದ ಮಹತ್ವದ ಅರಿವು ಮೂಡಿಸುವ ಕುರಿತಾದ ಈ ಚಿತ್ರದಲ್ಲಿ ಪಕ್ಕಾ ಫ್ಯಾಮಿಲಿ, ಫ್ರೆಂಡ್‍ಷಿಪ್, ಸೆಂಟಿಮೆಂಟ್ ಹಾಗೂ ಕಾಮಿಡಿಯಂತಹ ಎಲ್ಲಾ ಮನರಂಜನಾತ್ಮಕ ಅಂಶಗಳಿವೆ.

ಈ ಚಿತ್ರಕ್ಕೆ ಎ.ಟಿ.ರವೀಶ್‌ ಅವರ ಸಂಗೀತವಿದೆ. ಚಿತ್ರದಲ್ಲಿ ನಾಲ್ಕು ಹಾಡುಗಳಿವೆ. ನಾಗೇಶ್ ಉಜ್ಜನಿ, ಜ್ಞಾನೇಶ ಎಂ.ಬಿ, ಶೈಲಜಾ ಎಸ್.ರಾವ್ ಸಾಹಿತ್ಯವಿದೆ. ಸರಿಗಮಪ ವಿನ್ನರ್ ಸುನಿಲ್, ಮೆಹಬೂಬ್ ಸಾಬ್, ಕನ್ನಡ ಕೋಗಿಲೆ ತನುಷ್ ರಾಜ್ ಹಾಡಿದ್ದಾರೆ. ಮಲ್ಲ, ಕೋದಂಡರಾಮ ಚಿತ್ರದ ಸಂಜೀವ್ ರೆಡ್ಡಿ ಅವರ ಸಂಕಲನವಿದ್ದು, ರಮೇಶ್ ಹಾಗೂ ನರಸಿಂಹ ಅವರ ಛಾಯಾಗ್ರಹಣವಿದೆ. ಲಯನ್ ಗಂಗರಾಜು ಅವರ ಸಾಹಸ, ಸ್ಟಾರ್ ನಾಗಿ, ಸುರೇಶ್ ಅವರ ನೃತ್ಯ ನಿರ್ದೇಶನವಿದೆ.


ಈ ಚಿತ್ರದಲ್ಲಿ ಬಾಲನಟರಾಗಿ ತನುಷರಾಜ್, ಕಾನಿಷ್ಕ ರವಿ ದೇಸಾಯಿ, ಅಮೋಘ ಕೃಷ್ಣ, ಮಧುಸೂಧನ್, ಬೇಬಿ ಅಂಕಿತ ಜಯರಾಮ್, ಬೇಬಿಶ್ರೀ, ಜೀವನ್, ಚೇತನ್, ನವನೀತ್, ಬಾ ನಾ ರವಿ, ಚಂದ್ರಪ್ರಭಾ, ಗೋವಿಂದೇಗೌಡ, ವಿನೋದ್ ಆನಂದ್, ಮೋನಿಕ, ಶ್ರೀದೇವಿ ಮಂಜುನಾಥ, ರಾಜೇಶ್, ನವೀನ್ ರಾಜ್, ಗಂಗರಾಜು ನಾಗಶ್ರೀ, ಗುರು, ರಾಜು, ಅಂಧರಾದ ಬಸವರಾಜ್, ಪ್ರತಾಪ್ ನಟಿಸಿದ್ದಾರೆ. ಅತಿಥಿ ಪಾತ್ರದಲ್ಲಿ ಕರ್ನಾಟಕ ಜನಸೇವಾ ಟ್ರಸ್ಟಿನ ಪ್ರಶಾಂತ್ ಚಕ್ರವರ್ತಿ ಕಾಣಿಸಿಕೊಂಡಿದ್ದಾರೆ. ಗೋ ಸಂರಕ್ಷಕರಾದ ಮಹೇಂದ್ರ ಮುನ್ನೋತ್ ಶಿಕ್ಷಣ ಸಚಿವರಾಗಿ ನಟಿಸಿದ್ದಾರೆ.

Categories
ಸಿನಿ ಸುದ್ದಿ

ರಾಜ್‌ ಕುಮಾರ್‌ ಅಂದ್ರೆ ಪ್ರಜ್ವಲಿಸುವ ನಕ್ಷತ್ರ ಅಂದ್ರು ಸಿಎಂ ಬಸವರಾಜ್‌ ಬೊಮ್ಮಾಯಿ !

ಆಕಾಶದಲ್ಲಿ ಹಲವಾರು ನಕ್ಷತ್ರಗಳಿರಬಹುದು, ಆದರೆ ಒಂದೇ ಒಂದು ನಕ್ಷತ್ರ ಹೆಚ್ಚಾಗಿ ಮಿಂಚುತ್ತಿರುತ್ತದೆ, ಆ ನಕ್ಷತ್ರವೇ ರಾಜ್‌ಕುಮಾರ್..

-ರಾಜ್‌ ಕುಮಾರ್‌ ಅವರನ್ನು ಹೀಗೆ ವರ್ಣನೆ ಮಾಡಿದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ. ಬೆಂಗಳೂರಿನ ಖಾಸಗಿ ಹೋಟೆಲ್‌ ನಲ್ಲಿ ಡಾ. ರಾಜ್‌ ಕುಮಾರ್‌ ಅಕಾಡೆಮಿಯಿಂದ ರೂಪಿಸಿದ ಡಾ.ರಾಜ್‍ಕುಮಾರ್ ಲರ್ನಿಂಗ್ ಆಪ್ ಬಿಡುಗಡೆ ಮಾಡಿ ಮಾತನಾಡಿದರು.

ಡಾ.ರಾಜ್‍ಕುಮಾರ್ ಅಂದರೆ ಒಬ್ಬ ಸಾಧಕ. ಸಾಧಕನಿಗೆ ಸಾವು ಅಂತ್ಯವಲ್ಲ. ಸಾಧಕ ಸಾವಿನ ನಂತರವೂ ಬದುಕಬಲ್ಲ ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದಾರೆ. ಶ್ರೀಮಂತ, ಮೌಲಿಕ ಬದುಕನ್ನು ಬದುಕಿದರೆ ಸಾವಿನ ನಂತರವೂ ಜನ ನಮ್ಮನ್ನು ನೆನಪಿಸಿಕೊಳ್ಳುತ್ತಾರೆ. ಕರ್ನಾಟಕದ ಅಂಥ ಏಕಮೇವ ತಾರೆ ಅಂದರೆ ಡಾ.ರಾಜ್‍ಕುಮಾರ್ ಅವರೊಬ್ಬರೆ ಮಾತ್ರ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಣ್ಣಿಸಿದರು.21 ನೇ ಶತಮಾನ ಜ್ಞಾನವಂತರಿಗೆ ಸೇರಿದ್ದು. ಜ್ಞಾನಕ್ಕೆ ಬೆಲೆ ಹಾಗೂ ಬಲ ಬಂದಿದೆ. ಜ್ಞಾನದ ಕ್ಷೇತ್ರಕ್ಕೆ ಡಾ.ರಾಜ್‍ಕುಮಾರ್ ಅವರ ಆಪ್ ದೊಡ್ಡ ಕೊಡುಗೆ ನೀಡಿದೆ. ಮಕ್ಕಳಿಗೆ ತರ್ಕ ಬದ್ಧವಾಗಿ ಚಿಂತನೆ ಮಾಡಲು ಪ್ರೇರೇಪಿಸಬೇಕು. ಆಗ ಸಹಜವಾಗಿ ಅವರ ಸ್ಮೃತಿ ಪಟಲದಲ್ಲಿ ಉಳಿಯುತ್ತದೆ ಎಂದರು.

ಆಪ್ ಗಳ ಮೂಲಕ ಜಗತ್ತನ್ನು ತಲುಪಲು ಸಾಧ್ಯ. ನೂತನ ಶಿಕ್ಷಣ ನೀತಿಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಜಾರಿಗೆ ತಂದಿದ್ದು, ಈ ಆಪ್ ಶಿಕ್ಷಣ ನೀತಿಗೆ ಉಪಯುಕ್ತವಾಗಲಿದೆ. ಭಾರತದಲ್ಲಿಯೇ ನೂತನ ಶಿಕ್ಷಣ ನೀತಿಯನ್ನು ಜಾರಿಗೆ ತಂದ ಮೊದಲ ರಾಜ್ಯ ಕರ್ನಾಟಕ ಎಂದು ತಿಳಿಸಿದರು.ಡಾ.ರಾಜ್‍ಕುಮಾರ್ ಅಂದರೆ ಒಬ್ಬ ಸಾಧಕ. ಸಾಧಕನಿಗೆ ಸಾವು ಅಂತ್ಯವಲ್ಲ. ಸಾಧಕ ಸಾವಿನ ನಂತರವೂ ಬದುಕಬಲ್ಲ ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದಾರೆ. ಶ್ರೀಮಂತ, ಮೌಲಿಕ ಬದುಕನ್ನು ಬದುಕಿದರೆ ಸಾವಿನ ನಂತರವೂ ಜನ ನಮ್ಮನ್ನು ನೆನಪಿಸಿಕೊಳ್ಳುತ್ತಾರೆ. ಕರ್ನಾಟಕದ ಅಂಥ ಏಕಮೇವ ತಾರೆ ಅಂದರೆ ಡಾ.ರಾಜ್‍ಕುಮಾರ್. ಅವರ ಸರಳತೆ, ನಡೆ, ನುಡಿ , ಮೌಲ್ಯಗಳನ್ನು ವಿಶೇಷವಾಗಿ ಅಧಿಕಾರಿಗಳು, ಜನಪ್ರಿಯ ವ್ಯಕ್ತಿಗಳು ಕಲಿಯಬೇಕು ಎಂದರು. ಈಗಷ್ಟೇ ಹುಟ್ಟಿರುವ ಮಗುವಿನ ಮುಗ್ಧತೆ ಅವರಲ್ಲಿತ್ತು ಎಂದು ಹೇಳಿದರು.

ಮಗುವಿನಲ್ಲಿರುವ ಕುತೂಹಲಕ್ಕೆ ಜ್ಞಾನ, ಅರ್ಥವನ್ನು ಕೊಡಬೇಕು. ಡಾ.ರಾಜ್‍ಕುಮಾರ್ ನಿರಂತರ ವಿದ್ಯಾರ್ಥಿಯಾಗಿದ್ದರೂ, ಮುಗ್ಧತೆ ಸದಾಕಾಲ ಇರುತ್ತಿತ್ತು ಎಂದರು. ರಾಘವೇಂದ್ರ ರಾಜಕುಮಾರ್, ಪುನೀತ್ ರಾಜಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Categories
ಸಿನಿ ಸುದ್ದಿ

ವಿಜಯ್‌ ರಾಘವೇಂದ್ರ ಅವರೀಗ ಹೈ ಪ್ರೊಫೈಲ್‌ ಸೈಕಾಲಜಿಸ್ಟ್‌ – ಒಂದಷ್ಟು ಗ್ಯಾಪ್‌ ಬಳಿಕ ಅಯನ ಗಂಗಾಧರ್‌ ಕಮ್‌ ಬ್ಯಾಕ್‌ !

ಯುವ ನಿರ್ದೇಶಕ ಗಂಗಾಧರ್‌ ಸಾಲಿಮಠ್‌, ಒಂದಷ್ಟು ಗ್ಯಾಪ್‌ ಬಳಿಕ ಸಿನಿ ದುನಿಯಾಕ್ಕೆ ಮತ್ತೆ ಕಮ್‌ ಬ್ಯಾಕ್‌ ಮಾಡುತ್ತಿದ್ದಾರೆ. ಈ ಬಾರಿ ನಟ ಚಿನ್ನಾರಿ ಮುತ್ತಾ ವಿಜಯ ರಾಘವೇಂದ್ರ ಕಾಂಬಿನೇಷನ್‌ ಮೂಲಕ ತಮ್ಮ ನಿರ್ದೇಶನದ ಕೈ ಚಳಕ ತೋರಿಸಲು ಹೊರಟಿದ್ದಾರೆ. ಕನ್ನಡದಲ್ಲಿಯೇ ಕೊಂಚ ಹೊಸತೆನಿಸುವ ಟೆಕ್ನೋ ಸಸ್ಪೆನ್ಸ್‌ ಥ್ರಿಲ್ಲರ್‌ ಕಥೆಯೊಂದನ್ನು ಆಯ್ಕೆ ಮಾಡಿಕೊಂಡಿರುವ ನಿರ್ದೇಶಕ ಗಂಗಾಧರ್‌ ಸಾಲಿಮಠ್‌, ಇದರಲ್ಲಿ ನಟ ವಿಜಯ್‌ರಾಘವೇಂದ್ರ ಅವರನ್ನು ಹೈ ಪ್ರೊಫೈಲ್ ಸೈಕಾಲಜಿಸ್ಟ್‌ ಆಗಿ ತೆರೆ ಮೇಲೆ ತೋರಿಸುವ ತವಕದಲ್ಲಿದ್ದಾರೆ. ಸದ್ಯಕ್ಕೆ ಈ ಚಿತ್ರಕ್ಕಿನ್ನು ಟೈಟಲ್‌ ಫೈನಲ್‌ ಆಗಿಲ್ಲ. ಹಾಗೆಯೇ ತಂತ್ರಜ್ಜರ ಜತೆಗೆ ಕಲಾವಿದರ ಆಯ್ಕೆ ಕೂಡ ಬಾಕಿ ಇದೆ. ಮೊದಲ ಹಂತದಲ್ಲಿ ಚಿತ್ರದ ನಾಯಕ ನಟ ವಿಜಯ್‌ ರಾಘವೇಂದ್ರ ಅವರ ಕಾಲ್‌ ಶೀಟ್‌ ಫೈನಲ್‌ ಆಗಿದೆ.‌

ಉಳಿದಂತೆ ಅಕ್ಟೋಬರ್‌ ಮೊದಲ ವಾರದೊಳಗೆ ಎಲ್ಲವನ್ನು ಫೈನಲ್‌ ಮಾಡಿಕೊಂಡು ಶೂಟಿಂಗ್‌ ಹೊರಡುವ ಫ್ಲಾನ್‌ನಲ್ಲಿದ್ದಾರೆ ನಿರ್ದೇಶಕ ಗಂಗಾಧರ್‌ ಸಾಲಿಮಠ್.‌ ಇನ್ನು ಈ ಗಂಗಾಧರ್‌ ಸಾಲಿಮಠ್‌ ಯಾರು ಎನ್ನುವ ಪ್ರಶ್ನೆಗೆ ಉತ್ತರ ʼಅಯನʼ ಚಿತ್ರ. ವೃತ್ತಿಯಲ್ಲಿ ಅವರು ಸಾಫ್ಟ್‌ ವೇರ್‌ ಇಂಜಿನಿಯರ್‌. ಸಿನಿಮಾ ಮೇಲಿನ ವ್ಯಾಮೋಹಕ್ಕೆ ಕಳೆದ ಎರಡು ವರ್ಷಗಳ ಹಿಂದೆ ಗೆಳೆಯರ ಜತೆಗೆ ಸೇರಿಕೊಂಡು ʼಅಯನʼ ಹೆಸರಿನ ಚಿತ್ರವೊಂದನ್ನು ತೆರೆಗೆ ತಂದಿದ್ದರು. ಇದರ ನಿರ್ದೇಶಕರು ಗಂಗಾಧರ್‌ ಸಾಲಿಮಠ್‌.

ಡೆಬ್ಯೂ ಸಿನಿಮಾ. ಅಲ್ಲೊಂದು ಕುತೂಹಲಕಾರಿ ಕಥೆ ಇತ್ತು. ನಿರೂಪಣೆ ಕೂಡ ಚೆಂದವಾಗಿತ್ತು. ವಿಮರ್ಶಕರಿಂದ ಒಳ್ಳೆಯ ಪ್ರತಿಕ್ರಿಯೆ ಕೂಡ ಸಿಕ್ಕಿತು. ಆದರೆ ಆ ಹೊತ್ತಿಗಿದ್ದ ಸ್ಟಾರ್‌ ಸಿನಿಮಾಗಳ ಅಬ್ಬರದಲ್ಲಿ ʼಅಯನʼದಂತಹ ಹೊಸಬರ ಸಿನಿಮಾಗಳಿಗೆ ಪ್ರೇಕ್ಷಕರನ್ನು ತಲುಪು ವುದೇ ದುಸ್ತರ ಆಯಿತು. ಆದರೆ ಆಗ ಬಂದ ಹೊಸಬರ ಸಿನಿಮಾಗಳಲ್ಲಿ ʼಅಯನʼ ಒಂದಷ್ಟು ಸದ್ದು ಮಾಡಿದ್ದು ಹೌದು. ಆ ವರ್ಷ ಚೊಚ್ಚಲ ನಿರ್ದೇಶಕರ ಸಿನಿಮಾ ವಿಭಾಗದಲ್ಲಿ ಇದಕ್ಕೆ ರಾಜ್ಯ ಪ್ರಶಸ್ತಿಯೂ ಬಂತು. ಅಲ್ಲಿಂ ದ ಒಂದಷ್ಟು ಗ್ಯಾಪ್‌ ಮೂಲಕ ಗಂಗಾಧರ್‌ ಸಾಲಿಮಠ್‌ ಮತ್ತೆ ನಿರ್ದೇಶನಕ್ಕೆ ಕೈ ಹಾಕಿದ್ದಾರೆ. ಮತ್ತೆ ಸಸ್ಪೆನ್ಸ್‌, ಥ್ರಿಲ್ಲರ್‌ ಕಥೆಯೊಂದಕ್ಕೆ ಆಕ್ಷನ್‌ ಕಟ್‌ ಹೇಳಲು ಸಜ್ಜಾಗಿದ್ದಾರೆ. ಸಮಕಾಲೀನ ತಂತ್ರಜ್ಣಾನಕ್ಕೆ ಪೂಕರವಾದ ಸಬ್ಜೆಕ್ಟ್ ವೊಂದನ್ನು ಆಯ್ಕೆ ಮಾಡಿಕೊಂಡು ಸಿನಿಮಾ ಮಾಡಲು ಹೊರಟಿರುವುದು ಈಗ ವಿಶೇಷ.

ʼ ಈಗಿನ ಪ್ರೇಕ್ಷಕರಿಗೆ ತುಂಬಾ ಅಪ್ಡೇಟ್‌ ಆಗಿರುವಂತಹ ಕಥೆಯನ್ನೇ ಹೇಳ್ಬೇಕು, ಆಗ ಮಾತ್ರ ಆವರಿಗಿದು ಹೊಸತೆನಿಸುತ್ತದೆ. ಅದೇ ದೃಷ್ಟಿ ಯಲ್ಲಿ ನಾನೀಗ ಟೆಕ್ನೋ ಸಸ್ಪೆನ್ಸ್‌ ಥ್ರಿಲ್ಲರ್‌ ಕಥೆಯೊಂದನ್ನು ಆಯ್ಕೆ ಮಾಡಿಕೊಂಡಿದ್ದೇನೆ. ವರ್ಚುವಲ್‌ ನಲ್ಲಿನ ಒಂದು ಗೇಮ್‌ಗೆ ಅಡಿಕ್ಟ್‌ ಆದ ಮಕ್ಕಳ ಮನಸಲ್ಲಿ ಅದು ಹೇಗೆಲ್ಲ ಪರಿಣಾಮ ಬೀರುತ್ತದೆ, ಅದರಿಂದ ಹೊರ ಬರಬೇಕಾದರೆ ಎಷ್ಟೇಲ್ಲ ಕೌನ್ಸಿಲಿಂಗ್‌ ಬೇಕಾಗುತ್ತದೆ ಎನ್ನುವ ಎಲ್ಲರಿಗೂ ಗೊತ್ತಿರುವಂತಹ ಸಂಗತಿಗಳನ್ನೇ ತೆರೆ ಮೇಲೆ ತೋರಿಸಲು ಹೊರಟಿದ್ದೇನೆ. ಅದೇ ಸಿನಿಮಾದ ವಿಶೇಷ ಎನ್ನುತ್ತಾರೆ ನಿರ್ದೇಶಕ ಗಂಗಾಧರ್‌ ಸಾಲಿಮಠ್.

ಗಂಗಾಧರ್‌ ಸಾಲಿಮಠ್‌ ಈಗ ಆಕ್ಷನ್‌ ಕಟ್‌ ಹೇಳಲು ಹೊರಟಿರುವ ಕಥೆ ಐದು ಪ್ರಮುಖ ಪಾತ್ರಗಳಿವೆಯಂತೆ. ಅದರಲ್ಲಿ ಚಿತ್ರದ ನಾಯಕನ ಪಾತ್ರ ವೂ ಒಂದು. ಅದು ಒಬ್ಬ ಹೈ ಪ್ರೊಫೈಲ್‌ ಸೈಕಾಲಜಿಸ್ಟ್.‌ ಆ ಪಾತ್ರದಲ್ಲಿ ಕಾಣಿಸಿ ಕೊಳ್ಳಲಿದ್ದಾರೆ ನಟ ಚಿನ್ನಾರಿ ಮುತ್ತಾ ವಿಜಯ್‌ ರಾಘವೇಂದ್ರ. ಉಳಿದ ನಾಲ್ಕು ಪಾತ್ರಗಳಲ್ಲಿ ಒಬ್ಬ ಬಾಲಕನ ಪಾತ್ರಕ್ಕೆ ಅಷ್ಟೇ ಆದ್ಯತೆ ಇದೆ. ಆ ಪಾತ್ರಕ್ಕೆ ತಕ್ಕಂತೆ ಒಬ್ಬ ಚೈಲ್ಡ್‌ ಆರ್ಟಿಸ್ಟ್‌ ಹುಡುಕಾಟ ನಡೆದಿದೆ. ಅದರಾಚೆ ಮೂರು ಸ್ತ್ರೀ ಪಾತ್ರಗಳಿದ್ದು, ಅದಕ್ಕೆ ಹುಡುಕಾಟ ನಡೆಸಿದ್ದಾ ರಂತೆ ನಿರ್ದೇಶಕ ಗಂಗಾಧರ್‌ ಸಾಲಿಮಠ್.‌ ಇನ್ನು ಈ ಚಿತ್ರಕ್ಕೆ ಮುಂಬೈ ನಲ್ಲಿ ನೆಲೆಸಿರುವ ಧಾರವಾಡ ಮೂಲದ ಆನಂದ್‌ ಮುಗುದ್‌ ಬಂಡವಾ ಳ ಹೂಡುತ್ತಿದ್ದಾರೆ. ವಿಶೇಷ ಅಂದ್ರೆ ಈ ಚಿತ್ರಕ್ಕೆ ಅವರೇ ಕಥೆ ಬರೆದಿದ್ದು. ಅದಕ್ಕೆ ಚಿತ್ರಕಥೆ ಬರೆದು ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ ಗಂಗಾಧರ್‌ ಸಾಲಿಮಠ್. ಬಸವರಾಜ್‌ ಇದರ ಕಾರ್ಯಕಾರಿ ನಿರ್ಮಾಪಕ.

error: Content is protected !!