ಸಿನಿಮಾ ರಂಗಕ್ಕೆ ಎಂಟ್ರಿಯಾಗುವ ಬಹುತೇಕ ಹೊಸ ಪ್ರತಿಭೆಗಳು ಕಿರುಚಿತ್ರವೋ ಅಥವಾ ಆಲ್ಬಂ ಸಾಂಗ್ ಮೂಲಕವೋ ಎಂಟ್ರಿಯಾಗುತ್ತಿರುವುದು ಹೊಸದೇನಲ್ಲ. ಆ ಸಾಲಿಗೆ ಇಲ್ಲೊಂದು ಹೊಸತರ ತಂಡ ಒಂದು ಆಲ್ಬಂ ಸಾಂಗ್‌ನೊಂದಿಗೆ ಸದ್ದು ಮಾಡುತ್ತಿದೆ. ಹೌದು, “ನಿನದೇ ನೆನಪು” ಶೀರ್ಷಿಕೆಯ ಆಲ್ಬಂ ಸಾಂಗ್‌ವೊಂದು ಈಗ ಎಲ್ಲೆಡೆ ಜೋರು ಸುದ್ದಿಯಾಗಿದೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಇದರದ್ದೇ ಸುದ್ದಿ.
ಗೀತ ಸಾಹಿತಿ ಗೌಸ್‌ಪೀರ್ ಅವರು ಬರೆದ “ಹೃದಯಕ್ಕೆ ಹೃದಯವೇ ಕಡು ವೈರಿ” ಎಂದು ಶುರುವಾಗುವ ಗೀತೆ ಸ್ವಾತಂತ್ರ್ಯ ದಿನದಂದು ಬಿಡುಗಡೆಯಾಗಿದೆ. ಈ ಹಾಡಿನ ಚಿತ್ರೀಕರಣ ಕಾಶ್ಮೀರ ಮತ್ತು ಲೇಹ್‌ನಲ್ಲಿ ನಡೆದಿದೆ. ಸರವಣ್ ಮತ್ತು ಪ್ರತಿಮಾ ಈ ಆಲ್ಬಂ ಸಾಂಗ್‌ನಲ್ಲಿ ಅಭಿನಯಿಸಿದ್ದಾರೆ.
ಸರವಣ್ ಈಗಾಗಲೇ ಸಬ್ ವೇ ಎಂಬ ಸಿನಿಮಾದಲ್ಲಿ ನಟಿಸಿದ್ದಾರೆ. ಸದ್ಯ ಆ ಸಿನಿಮಾ ರಿಲೀಸ್‌ಗೆ ರೆಡಿಯಾಗುತ್ತಿದೆ. “ಟಿಕ್ ಟಾಕ್” ಮೂಲಕ ಮನೆ ಮಾತಾಗಿರುವ ಪ್ರತಿಮಾ ಈಗಾಗಲೇ ಕೆಲವು ಆಲ್ಬಂಗಳಲ್ಲಿ ನಟಿಸಿದ್ದಾರೆ. ಈ ಆಲ್ಬಂ ನಿರ್ಮಾಣ ಮಾಡಿರೋದು ಆಂಜಿ ಬಾಬು. ಅವರಿಗೆ ಬೆಂಬಲವಾಗಿ ನಿಂತವರು ಫೈಯಿಂಗ್ ಕಿಂಗ್ ಮಂಜು. ಈ ಮೊದಲು ಮಯೂರ್ ಪಟೇಲ್ ಅಭಿನಯದ ರಾಜೀವ ಚಿತ್ರವನ್ನೂ ಮಂಜು ನಿರ್ದೇಶಿಸಿದ್ದಾರೆ.
ಈ ಹಾಡನ್ನು ಎಂ. ವೈ. ಕೃಷ್ಣ ನಿರ್ದೇಶಿಸಿದ್ದಾರೆ. ವಾಸುಕಿ ವೈಭವ್ ಹಾಡಿರುವ ಹಾಡಿಗೆ ರೋಹಿತ್ ಸೊವಾರ್ ಸಂಗೀತವಿದೆ. ಕಾರ್ತಿಕ್ ಛಾಯಾಗ್ರಹಣ ಮಾಡಿದ್ದಾರೆ. ಚಾಣಕ್ಯ ಫಿಲಂಸ್ ಮೂಲಕ ಈ ಅಲ್ಬಂ ನಿರ್ಮಾಣಗೊಂಡಿದೆ. ನರೇಂದ್ರ ಬಾಬು, ನಿರ್ಮಾಪಕ ಸಯ್ಯದ್ ಸಲಾಂ, ರಮೇಶ್ ಹೊಸಬರ ಈ ಹಾಡಿಗೆ ಶುಭ ಹಾರೈಸಿದ್ದಾರೆ.