ಕೆಜಿಎಫ್ 2 ಯಾವಾಗ ಬರುತ್ತೆ ಎನ್ನುವ ಪ್ರೇಕ್ಷಕರ ದೊಡ್ಡ ಕುತೂಹಲದ ನಡುವೆ ಅದು ಆಡಿಯೋ ರೈಟ್ಸ್, ಸ್ಯಾಟಲೈಟ್ಸ್ ರೈಟ್ಸ್ ಮಾರಾಟದಲ್ಲಿ ಹೊಸ ದಾಖಲೆ ಬರೆಯುತ್ತಿದೆ. ಕನ್ನಡ ಚಿತ್ರೋದ್ಯಮ ಈ ತನಕ ಕೇಳರಿಯದಂತಹ ಮೊತ್ತಕ್ಕೆ ಈಗ ಈ ಚಿತ್ರದ ಸ್ಯಾಟಲೈಟ್ಸ್ ರೈಟ್ಸ್ ಸೇಲ್ ಆಗಿದೆ. ಅದನ್ನು ಖರೀದಿಸಿದ್ದು ಯಾರು, ಎಷ್ಟು ಮೊತ್ತಕ್ಕೆ ಆ ಕಥೆ ಇಲ್ಲಿದೆ.
ಕರ್ನಾಟಕ ಅಥವಾ ಭಾರತ ಮಾತ್ರವಲ್ಲ ಇಡೀ ಜಗತ್ತು ಕಣ್ಣರಳಿಸಿ ಕಾಯುತ್ತಿರುವ ಕನ್ನಡದ ಒನ್ ಅಂಡ್ ಓನ್ಲೀ ಸಿನಿಮಾ ಕೆಜಿಎಫ್ ಚಾಪ್ಟರ್ – 2. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಇಷ್ಟೋತ್ತಿಗೆ ಈ ಸಿನಿಮಾ ತೆರೆ ಮೇಲೆ ಬಂದು ಮತ್ತೊಂದು ಹೊಸ ಇತಿಹಾಸ ಕ್ರಿಯೇಟ್ ಆಗುವುದು ಖಚಿತ ಇತ್ತೇನೋ, ಆದರೆ ಕೊರೋನಾ ಎಲ್ಲದಕ್ಕೂ ಅಡ್ಡಿ ಆಗಿದೆ. ಅದು ʼಕೆಜಿಎಫ್ 2ʼ ರಿಲೀಸ್ ಗೂ ತೊಂದರೆ ಉಂಟು ಮಾಡಿದೆ ಅನ್ನೋದು ನಿಮಗೂ ಗೊತ್ತು. ಆದರೂ ಅದರ ಮಾರ್ಕೆಟ್ ಹವಾ ಮಾತ್ರ ಒಂಚೂರು ಕಮ್ಮಿ ಆಗಿಲ್ಲ. ತೆರೆ ಮೇಲೆ ಬರೋದಿಕ್ಕೆ ಒಂದಷ್ಟು ದಿನ ಆಗ್ಬಬಹುದು ಅನ್ನೋದು ಬಿಟ್ಟರೆ ಸಿನಿಮಾ ಯಾವಾಗ ಬರುತ್ತೆ ಎನ್ನುವ ಪ್ರೇಕ್ಷಕರ ದೊಡ್ಡ ಕುತೂಹಲದ ನಡುವೆ ಆಡಿಯೋ ರೈಟ್ಸ್, ಸ್ಯಾಟಲೈಟ್ ರೈಟ್ಸ್ ಹಾಗೂ ಡಿಜಿಟಲ್ ರೈಟ್ಸ್ ಗಳ ಮಾರಾಟದಲ್ಲಿ ದಾಖಲೆ ಸೃಷ್ಟಿಸುತ್ತಲೇ ಬರುತ್ತಿರುವುದು ಮಾತ್ರ ರೋಚಕವೇ ಹೌದು.
ಸದ್ಯಕ್ಕೆ ‘ಕೆಜಿಎಫ್ 2’ ಸಿನಿಮಾಕ್ಕೆ ಸಂಬಂಧಿಸಿದಂತೆ ಆಡಿಯೋ ರೈಟ್ಸ್ ಹಾಗ ಸ್ಯಾಟಲೈಟ್ಸ್ ರೈಟ್ಸ್ ಅನ್ನು ಹೊಂಬಾಳೆ ಫಿಲಂಸ್ ಮಾರಾಟ ಮಾಡಿದೆ. ಅದರ ಆಡಿಯೋ ಹಕ್ಕುಗಳನ್ನು ಕನ್ನಡದ ಹೆಸರಾಂತ ಆಡಿಯೋ ಸಂಸ್ಥೆ ಲಹರಿ ಖರೀದಿ ಮಾಡಿದೆ. ಅದು ಭಾರೀ ದೊಡ್ಡ ಮೊತ್ತಕ್ಕೆ ಸೇಲ್ ಆಗಿದೆಯಂತೆ. ಲಹರಿ ಆಡಿಯೋ ಸಂಸ್ಥೆ ಮಾಲೀಕರಾದ ಲಹರಿ ವೇಲು ಹೇಳುವ ಪ್ರಕಾರ ಕನ್ನಡದಲ್ಲಿ ದಾಖಲೆ ಆಗುವಂತಹ ಮೊತ್ತಕ್ಕೆ ‘ಕೆಜಿಎಫ್ 2’ ಆಡಿಯೋ ಹಕ್ಕುಗಳನ್ನು ಖರೀದಿಸಲಾಗಿ ದೆಯಂತೆ. ಅದೇ ರೀತಿ ಈಗ ‘ಕೆಜಿಎಫ್ 2 ‘ಚಿತ್ರದ ಸ್ಯಾಟಲೈಟ್ಸ್ ರೈಟ್ಸ್ ಕೂಡ ಜೀ ಕನ್ನಡದ ಪಾಲಾಗಿದ್ದು, ಅದು ಕನ್ನಡದಲ್ಲಿ ಹಿಂದೆಂದೂ ಕಾಣದಂತಹ ದೊಡ್ಡ ಮೊತ್ತಕ್ಕೆ ಸೇಲ್ ಆಗಿದೆಯಂತೆ. ಸದ್ಯಕ್ಕೆ ಈ ʼಮೊತ್ತʼ ಎಷ್ಟು ಎನ್ನುವುದನ್ನು ಹೊಂಬಾಳೆ ಫಿಲಂಸ್ ಆಗಲಿ ಅಥವಾ ಜೀ ನೆಟ್ ವರ್ಕ್ ಆಗಲಿ ಎಲ್ಲೂ ಬಹಿರಂಗ ಪಡಿಸಿಲ್ಲ, ಆದರೆ ಎರಡು ಸಂಸ್ಥೆಗಳ ನಡುವೆ ಒಪ್ಪಂದ ಆಗಿರುವುದು ಅಧಿಕೃತವಾಗಿದೆ.
ಅವರೆಡು ಸಂಸ್ಥೆಗಳ ನಡುವೆ ಆಗಿರುವ ಒಪ್ಪಂದಕ್ಕೆ ಸಾಕ್ಷಿಯಾಗಿ ವರಮಹಾಲಕ್ಷ್ಮಿ ಹಬ್ಬದ ವಿಶೇಷ ಎನ್ನುವ ಹಾಗೆ ಹೊಂಬಾಳೆ ಫಿಲಂಸ್ ಮಾಧ್ಯಮಕ್ಕೆ ಅಧಿಕೃತ ಹೇಳಿಕೆ ರವಾನಿಸಿದೆ. ಹೊಂಬಾಳೆ ಫಿಲಂಸ್ ನ ಸಾರಥಿ ವಿಜಯ್ ಕಿರಗಂದೂರು ಹಾಗೂ ಜೀ ಕನ್ನಡ ಬ್ಯುಸಿನೆಸ್ ಹೆಡ್ ರಾಘವೇಂದ್ರ ಹುಣಸೂರ್ ಜೊತೆಗಿನ ಫೋಟೋ ಕೂಡ ರಿವೀಲ್ ಆಗಿವೆ. ದೇಶದ ಮನರಂಜನಾ ವಲಯದ ಅತೀ ದೊಡ್ಡ ನೆಟವರ್ಕ್ ಆದ ಜೀ ನೆಟ್ ವರ್ಕ್ ಜತೆಗನ ಒಪ್ಪಂದ ನನಗೆ ಅತೀವ ಖುಚಷಿ ತಂದಿದೆ. ದಕ್ಷಿಣದ ನಾಲ್ಕು ಭಾಷೆಗೂ ‘ಕೆಜಿಎಫ್ 2’ ಸ್ಯಾಟಲೈಟ್ಸ್ ರೈಟ್ಸ್ ಅನ್ನು ಜೀ ನೆಟ್ ವರ್ಕ್ ತನ್ನದಾಗಿಸಿಕೊಂಡಿದೆ. ಜೀ ನಿರೀಕ್ಷೆಯಂತೆ ಅದು ತನ್ನ ವೀಕ್ಷಕರ ವಲಯಕ್ಕೆ ದೊಡ್ಡ ಮನರಂಜನೆ ನೀಡುವುದು ಗ್ಯಾರಂಟಿ ಆಗಿದೆ. ಕೆಜಿಎಫ್ ಮೊದಲ ಭಾಗದಂತೆಯೇ ಚಾಫ್ಟರ್ 2 ಕೂಡ ಭಾರತೀಯ ಚಿತ್ರ ರಂಗದಲ್ಲಿ ದೊಡ್ಡ ಮೈಲುಗಲ್ಲು ಆಗುವುದು ಖಚಿತ ಎನ್ನುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಹಾಗೆಯೇ ಚಿತ್ರದ ನಾಯಕ ನಟ ಯಶ್ ಮತ್ತು ನಿರ್ದೇಶಕ ಪ್ರಶಾಂತ್ ನೀಲ್ ಕೂಡ ಜೀ ನೆಟ್ ವರ್ಕ್ ಜತೆಗಿನ ಒಪ್ಪಂದಕ್ಕೆ ಖುಷಿ ವ್ಯಕ್ತಪಡಿಸಿದ್ದಾರೆ.
ಪ್ರತಿಷ್ಠಿತ ಮನರಂಜನಾ ಟಿವಿ ಚಾನೆಲ್ ಜೀ ಸಂಸ್ಥೆ ಕನ್ನಡ – ತೆಲುಗು- ತಮಿಳು- ಮಲೆಯಾಳಂ ಭಾಷೆಯ ಸ್ಯಾಟಲೈಟ್ ಹಕ್ಕುಗಳನ್ನ ಕೊಂಡು ಕೊಂಡಿದೆ. ವಲ್ಡ್ ವೈಡ್ ತುಂಬ ಮನೆಮನಕ್ಕೆ ಜೀ ಸಂಸ್ಥೆ ಕೆಜಿಎಫ್ ಚಾಪ್ಟರ್ – 2 ಚಿತ್ರವನ್ನ ತಲುಪಿಸಲು ತುದಿಗಾಲ ಮೇಲೆ ನಿಂತಿದೆ. ಕೆಜಿಎಫ್ ೨ ತಮ್ಮ ಸಂಸ್ಥೆ ಪಾಲಾಗಿದ್ದಕ್ಕೆ ಜೀ ಕನ್ನಡ ಬ್ಯುಸಿನೆಸ್ ಹೆಡ್ ರಾಘವೇಂದ್ರ ಹುಣಸೂರು ಕೂಡ ಎಕ್ಸೈಟ್ ಆಗಿದ್ದು, ಜೀ ನೆಟ್ ವರ್ಕ್ ಜರ್ನಿಯಲ್ಲೂ ಇದೊಂದು ದೊಡ್ಡ ಮೈಲುಗ ಲ್ಲುಆಗುವ ದೊಡ್ಡ ಭರವಸೆ ತಮಗಿದೆ ಎಂದು ಅನಿಸಿಕೆ ಹಂಚಿಕೊಂ ಡಿದ್ದಾರೆ. ಇನ್ನು ಒಟಿಟಿ ಫ್ಲಾಟ್ ಫಾರ್ಮ್ ನಲ್ಲಿಯೇ ಸಿನಿಮಾ ಬಿಡುಗಡೆ ಮಾಡಲು ಅಮೆಜಾನ್, ನೆಟ್ ಪ್ಲೆಕ್ಸ್ ಈಗ ಚಾತಕ ಪಕ್ಷಿಯಂತೆ ಕಾಯು ತ್ತಿವೆ. ಇದಕ್ಕಾಗಿ ಅವರು ನೂರಿನ್ನೂರು ಕೋಟಿ ಕೊಡುವುದಕ್ಕೂ ಸಿದ್ದವಿವೆ. ಆದರೆ 250 ಕೋಟಿ ಅಲ್ಲ 500 ಕೋಟಿ ಕೊಟ್ಟರೂ ಸಿನಿಮಾನ ಓಟಿಟಿ ಪ್ಲಾಟ್ ಫಾರ್ಮ್ ನಲ್ಲಿ ಬಿಡುಗಡೆ ಮಾಡಲ್ಲ. ಎಷ್ಟೇ ಟೈಮ್ ಹಿಡಿದರೂ ಪರವಾಗಿಲ್ಲ ಥಿಯೇಟರ್ ನಲ್ಲಿ ರಿಲೀಸ್ ಮಾಡ್ತೀವಿ ಅಂತ ಕೆಜಿಎಫ್ ೨ ಡಿಸೈಡ್ ಮಾಡಿದೆ. ಅದರಂತೆ ಬಿಗ್ ಸ್ಕ್ರೀನ್‌ನಲ್ಲಿ ರಿಲೀಸ್ ಆಗಲಿದೆ. ಯಾವಾಗ ? ಹೇಗೆ ಎನ್ನುವುದಕ್ಕೆ ಶೀಘ್ರದಲ್ಲೇ ತೆರೆ ಬೀಳಲಿದೆ.
- ಎಂಟರ್ ಟೈನ್ ಮೆಂಟ್ ಬ್ಯೂರೋ , ಸಿನಿಲಹರಿ