ಕನ್ನಡದ ಮೋಸ್ಟ್ ಗ್ಲಾಮರಸ್ ನಟಿ ಹರಿಪ್ರಿಯಾ ಮತ್ತೆ ಕಾಲಿವುಡ್ ಗೆ ಕಾಲಿಟ್ಟಿದ್ದಾರೆ. ಒಂಭತ್ತು ವರ್ಷಗಳ ನಂತರ ಮತ್ತೆ ಅಲ್ಲಿ ಸೆಕೆಂಡ್ ಇನ್ನಿಂಗ್ಸ್ ಶುರು ಹಚ್ಚಿಕೊಂಡಿರುವ ಹರಿಪ್ರಿಯಾ, ಸತ್ಯ ಶಿವ ಡೈರೆಕ್ಟ್ ಮಾಡ್ತಿರು ವ ಚಿತ್ರದಲ್ಲಿ ನಾಯಕಿಯಾಗಿ ಧಗಧಗಿಸಿದ್ದಾರೆ.
ಕನ್ನಡದ ಮೋಸ್ಟ್ ಗ್ಲಾಮರಸ್ ನಟಿ ಹರಿಪ್ರಿಯಾ ಮತ್ತೆ ಕಾಲಿವುಡ್ ಗೆ ಕಾಲಿಟ್ಟಿದ್ದಾರೆ. ಕಳೆದ 9 ವರ್ಷಗಳ ನಂತರ ತಮಿಳಿನಲ್ಲಿ ಮತ್ತೆ ಗ್ರಾಂಡ್ ಎಂಟ್ರಿ ಕೊಟ್ಟು, ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದಾರೆ. ಕನ್ನಡದ ಲ್ಲಿಯೇ ಸಾಕಷ್ಟು ಬ್ಯುಸಿ ಇದ್ದರೂ, ಅವರು ಮತ್ತೆ ಪರಭಾಷೆಗಳತ್ತ ಮುಖ ಮಾಡಿರುವುದಕ್ಕೆ ಪರ್ಫಾರ್ಮೆನ್ಸ್ ಒರಿಯೆಂಟೆಡ್ ಪಾತ್ರಗಳು ಈಗ ಅಲ್ಲೂ ಸಿಗುತ್ತಿರುವುದು ಕಾರಣವಂತೆ. ಸದ್ಯಕ್ಕೆ ಅದೇ ಕಾರಣದಿಂದ ಅವರೀಗ ‘ನಾಡೋಡಿಗಳ್’ ಚಿತ್ರದ ಖ್ಯಾತಿಯ ನಟ ಸಸಿಕುಮಾರ್ ಜೋಡಿಯಾಗಿ ಹೊಸದೊಂದು ಚಿತ್ರದಲ್ಲಿ ಕಾಣಿಸಿಕೊಂಡಿದ್ದು, ಈಗಾಗಲೇ ಅದಕ್ಕೆ ಮಾತಿನ ಭಾಗದ ಚಿತ್ರೀಕರಣವೂ ಕಂಪ್ಲೀಟ್ ಆಗಿದೆಯಂತೆ.
ಈ ಚಿತ್ರಕ್ಕಿನ್ನು ಟೈಟಲ್ ಫಿಕ್ಸ್ ಆಗಿಲ್ಲ. ಶೀಘ್ರದಲ್ಲಿಯೇ ಚಿತ್ರ ತಂಡ ಚಿತ್ರದ ಟೈಟಲ್ ಅನೌನ್ಸ್ ಮಾಡುವ ಸಾಧ್ಯತೆ ಇದೆ ಎನ್ನುವ ಸಂಗತಿ ಯನ್ನು ನಟಿ ಹರಿಪ್ರಿಯಾ ಅವರೇ ರಿವೀಲ್ ಮಾಡಿದ್ದಾರೆ. ಹಾಗೆಯೇ ಚಿತ್ರದಲ್ಲಿನ ತಮ್ಮ ಪಾತ್ರ ಮತ್ತು ಚಿತ್ರೀಕರಣದ ಅನುಭವ ವನ್ನು ಕೂಡ ಅವರು ‘ಸಿನಿ ಲಹರಿ’ಗೆ ತೆರೆದಿಟ್ಟರು.’ ತಮಿಳು ಚಿತ್ರರಂಗಕ್ಕೆ ನಾನು ಕಾಲಿಡದೇ ಹತ್ತು ವರ್ಷಗಳಾಗಿದ್ದವು. ಆರಂಭದಲ್ಲಿ ನಾನು ತಮಿಳು ಸೇರಿದಂತೆ ಪರಭಾಷೆ ಕಡೆ ಮುಖ ಮಾಡಿದ್ದಕ್ಕೆ ಕಾರಣ ಪರ್ಫಾಮೆನ್ಸ್ ಒರಿಯೆಂಟೆಡ್ ಪಾತ್ರಗಳ ಸಿಗುತ್ತಿಲ್ಲ ಅಂತ ಹೋಗ ಬೇಕಾಗಿ ಬಂತು. ಆದಾದ ನಂತರ ಕನ್ನಡದಲ್ಲಿಯೇ ಸಾಕಷ್ಟು ಸಿನಿಮಾ ಆಫರ್ ಬಂದವು. ನಾನೇನು ನಿರೀಕ್ಷೆ ಮಾಡುತ್ತಿದ್ದೇನೋ ಅಂತಹ ಪಾತ್ರಗಳೇ ಇಲ್ಲಿಯೇ ಸಿಕ್ಕವು. ಇಷ್ಟಾಗಿಯೂ ಇನ್ನಾಕೆ ತೆಲುಗು, ತಮಿಳು ಅಂತ ಸುಮ್ಮನಾಗಿದ್ದೆ. ಇಷ್ಟಾಗಿಯೂ ತೆಲುಗಿನಲ್ಲಿ ಸಿನಿಮಾ ಮಾಡುತ್ತಾ ಬಂದೆ. ಕಾರಣ ಅಲ್ಲಿ ನನಗೆ ಸಿಕ್ಕ ಪಾತ್ರಗಳು. ಅಂತಹ ಕ್ಯಾರೆಕ್ಟರ್ ತಮಿಳಿನಲ್ಲಿ ಸಿಗಲಿಲ್ಲ ಅಂತ ಸುಮ್ಮನಿದ್ದೆ. ಈಗ ನಾನು ಕನ್ನಡದಲ್ಲಿಯೇ ಬ್ಯುಸಿ ಆಗಿದ್ದರೂ, ಒಳ್ಳೆಯ ಪಾತ್ರಗಳು ತಮಿಳಿನಲ್ಲೂ ಬರುತ್ತಿವೆ. ಅದೇ ಕಾರಣಕ್ಕೆ ಈ ಸಿನಿಮಾ ಒಪ್ಪಿಕೊಂಡೆ ‘ಎನ್ನುತ್ತಾರೆ ಹರಿಪ್ರಿಯಾ.
ಅಂದ ಹಾಗೆ, ಸಸಿಕುಮಾರ್ ಹಾಗೂ ಪರಿಪ್ರಿಯಾ ಕಾಂಬಿನೇಷನ್ ಸಿನಿಮಾಕ್ಕೆ ಅಲ್ಲಿ ಆಕ್ಷನ್ ಕಟ್ ಹೇಳಿದ್ದು ಸತ್ಯಶಿವ. ಈ ಹಿಂದೆ ಇವರು ‘ಕಾಜುಗು’ ಸಿನಿಮಾ ನಿರ್ದೇಶಿಸಿದ್ದರು. ಹಾಗೆಯೇ ಕನ್ನಡದ ಬೆಲ್ ಬಾಟಮ್ ತಮಿಳು ರಿಮೇಕ್ ಗೂ ಸತ್ಯ ಶಿವ ನಿರ್ದೇಶಕರು. ಅದೇ ಕಾರಣಕ್ಕೆ ಅವರು ತಮ್ಮ ಹೊಸ ಸಿನಿಮಾಕ್ಕೆ ಕನ್ನಡದ ಗ್ಲಾಮರಸ್ ನಟಿ ಹರಿಪ್ರಿಯಾ ಅವರನ್ನೇ ಆಯ್ಕೆ ಮಾಡಿಕೊಂಡರಂತೆ.’ ನನ್ನ ಆಯ್ಕೆಗೆ ಬೆಲ್ ಬಾಟಮ್ ಚಿತ್ರದಲ್ಲಿನ ನನ್ನ ಪಾತ್ರವೇ ಕಾರಣ. ಅಲ್ಲಿ ನನ್ನ ಪರ್ ಫಾರ್ಮೆನ್ಸ್ ನೋಡಿದಾಗ ನಿರ್ದೇಶಕರಾದ ಸತ್ಯಶಿವ ಅವರಿಗೆ ತುಂಬಾ ಇಷ್ಟವಾಯಿತ್ತಂತೆ. ಅದೇ ಕಾರಣಕ್ಕೆ ಅವರು ನನ್ನನ್ನು ಭೇಟಿ ಮಾಡಿ, ಚಿತ್ರದಲ್ಲಿನ ಪಾತ್ರದ ಬಗ್ಗೆ ಹೇಳಿದಾಗ ನನಗೂ ಪಾತ್ರ ಇಷ್ಟವಾಯಿತು’ ಎಂದರು ಹರಿಪ್ರಿಯಾ.
‘ಕನಗವೇಲ್ ಕಾಕ’ ಹರಿಪ್ರಿಯಾ ನಟನೆಯ ಮೊದಲ ತಮಿಳು ಚಿತ್ರ. ವಲ್ಲಕೊಟ್ಟೈ ಎರಡನೇ ಮೂವೀ. ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಜೊತೆ ಸ್ಕ್ರೀನ್ ಶೇರ್ ಮಾಡಿದ್ದರು. ಮುರಾನ್ ಎನ್ನುವ ಮತ್ತೊಂದು ತಮಿಳು ಸಿನಿಮಾಗೆ ನಾಯಕಿ ಯಾಗಿದ್ದರು. ಜೊತೆಜೊತೆಗೆ ತೆಲುಗು ಚಿತ್ರಗಳಲ್ಲಿ ಅಭಿನಯಿಸಿದರು. ಅದ್ಯಾವಾಗ ಉಗ್ರಂ ಚಿತ್ರಕ್ಕೆ ಬಣ್ಣ ಹಚ್ಚಿದರೋ ಫಿನೀಶ್ ಕನ್ನಡದಲ್ಲೇ ಹೆಚ್ಚು ಬ್ಯುಸಿಯಾಗಿಬಿಟ್ಟರು. ಸ್ಟಾರ್ ನಟರ ಚಿತ್ರಗಳಲ್ಲಿ ನಾಯಕಿಯಾಗಿ ಮಿಂಚಿದರು. ಇದೀಗ ಕನ್ನಡದ ಒಂಭತ್ತು ಚಿತ್ರಗಳಿಗೆ ಹರಿಪ್ರಿಯಾ ಬುಕ್ ಆಗಿದ್ದಾರೆ. ರಿಯಲ್ ಸ್ಟಾರ್ ಉಪೇಂದ್ರ ಜೊತೆ ಲಗಾಮ್, ರಿಷಬ್ ಶೆಟ್ಟಿ ಜೊತೆ ಬೆಲ್ ಬಾಟಮ್ 2, ಸತೀಶ್ ನಿನಾಸಂ ಅವರ ಪೆಟ್ರೋಮ್ನಿರ್ದೇಶಕ ಸೇರಿದಂತೆ ಒಂಭತ್ತು ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಹೀಗೆ ಬೇಡಿಕೆಯ ನಟಿಯಾಗಿರುವ ಹರಿಪ್ರಿಯಾ ಮತ್ತೆ ಕಾಲಿವುಡ್ ಗೆ ಜಿಗಿದಿದ್ದಾರೆ. ಸತ್ಯಶಿವ ಡೈರೆಕ್ಟ್ ಮಾಡ್ತಿರು ವ ಚಿತ್ರದಲ್ಲಿ ನೀರ್ ದೋಸೆ ಬೆಡಗಿ ನಾಯಕಿಯಾಗಿ ಧಗಧಗಿಸಿದ್ದಾರೆ. ಇನ್ನು ಟಿಡಿ ರಜ್ಹಾ ಈ ಚಿತ್ರದ ನಿರ್ಮಾಪಕರು. ಜಂಬವನ್, ಕಂಧಕುಟ್ಟೈ, ವಲ್ಲಕುಟ್ಟೈ ಸೇರಿದಂತೆ ಹಲವು ಸಿನಿಮಾ ನಿರ್ಮಾಣ ಮಾಡಿದ ಅನುಭವ ಅವರದು. ನಿವಾಸ್ ಕೆ ಪ್ರಸನ್ನ ಸಂಗೀತ ಹಾಗೂ ರಾಜಾಪಟ್ಟಚಾರ್ಜ್ ಛಾಯಾಗ್ರಹಣ ಈ ಚಿತ್ರಕ್ಕಿದೆ.
– ಎಂಟರ್ ಟೈನ್ಮೆಂಟ್ ಬ್ಯೂರೋ ಸಿನಿ ಲಹರಿ