ಕಾಂತಾರ-ವೈರಮುಡಿ ಕಥೆ ಏನಾಯ್ತು ? ಹ್ಯಾಟ್ರಿಕ್ ಹೀರೋ ಶಿವಣ್ಣನ ಮೀಟ್ ಮಾಡಿದ್ರು ರಿಷಬ್ ಶೆಟ್ಟಿ !?

ಕರುನಾಡ ಚಕ್ರವರ್ತಿ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅವ್ರನ್ನ ನಿರ್ದೇಶಕ ರಿಷಬ್ ಶೆಟ್ಟಿ ಭೇಟಿ ಮಾಡಿದ್ದಾರೆ. ಸದ್ದುಗದ್ದಲವಿಲ್ಲದೇ ಸೈಲೆಂಟಾಗಿ ಶಿವಣ್ಣನ್ನ ಮೀಟ್ ಮಾಡಿರುವ ರಿಷಬ್, ಮೊಬೈಲ್ ಕೈಗೆತ್ತಿಕೊಂಡು ಹಾಗೇ ಒಂದು ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. ಬ್ಯೂಟಿಫುಲ್ ಪೋಟೋ ಕ್ಯಾಪ್ಚರ್ ಮಾಡಿಕೊಂಡ ರಿಕ್ಕಿ ಡೈರೆಕ್ಟರ್ ಇಂದು ಬೆಳ್ಳಂಬೆಳಗ್ಗೆ ಶಿವಣ್ಣ ಅವರನ್ನು ಭೇಟಿ ಮಾಡುವ ಭಾಗ್ಯ ನನ್ನದಾಯ್ತು. ಹೊಸ ಹೆಜ್ಜೆಯೊಂದು ಇಡುವ ಬಗ್ಗೆ ಉತ್ಸುಕನಾ ಗಿದ್ದೇನೆ. ಹೀಗಂತ ಬರೆದುಕೊಂಡು ಫೋಟೋ ಸಮೇತ ಸೋಷಿಯಲ್ ಮೀಡಿಯಾಗೆ ಅಪ್‌ಲೋಡ್ ಮಾಡಿದ್ದಾರೆ.

ಶೆಟ್ರು ಹಾಗೂ ಶಿವಣ್ಣರನ್ನ ಒಟ್ಟಿಗೆ ನೋಡಿದ್ಮೇಲೆ ಥ್ರಿಲ್ಲಾಗಲೆಬೇಕು ಅಟ್ ದಿ ಸೇಮ್ ಟೈಮ್ ತಲೆಗೆ ಹುಳಬಿಟ್ಟುಕೊಳ್ಳಲೆಬೇಕು. ಯಾಕಂದ್ರೆ, ಕಾಂತಾರ-ವೈರಮುಡಿಯ ಕನ್‌ಪ್ಯೂಶನ್ ಕಥೆಗೆ ಇನ್ನೂ ಕ್ಲ್ಯಾರಿಟಿ ಸಿಕ್ಕಿಲ್ಲವಲ್ಲ. ಕಳೆದ ಎರಡು ವಾರಗಳ ಹಿಂದೆ ಕಾಂತಾರ ವರ್ಸಸ್ ವೈರಮುಡಿ ಎನ್ನುವಂತಹ ಸಂದರ್ಭ ಸೋಷಿಯಲ್ ಮೀಡಿಯಾದಲ್ಲಿ ಸೃಷ್ಟಿಯಾಗಿದ್ದು ನಿಮಗೆಲ್ಲ ಗೊತ್ತಿರುತ್ತೆ ಅನ್ಸುತ್ತೆ. ಜನಪ್ರಿಯ ನಿರ್ಮಾಣ ಸಂಸ್ಥೆ ಹೊಂಬಾಳೆಕಾಂತಾರ’ ಟೈಟಲ್ ಅನೌನ್ಸ್ ಮಾಡ್ತು. ನಟನೆಯ ಜೊತೆಗೆ ನಿರ್ದೇಶನದ ಜವಾಬ್ದಾರಿ ಹೊತ್ತ ರಿಷಬ್ ಶೆಟ್ಟಿ, ಜಟ್ಟಿ ವೇಷದಲ್ಲಿ ಕಾಣಸಿಕೊಂಡರು. ಕೋಣಗಳು ಓಟ ಕಿತ್ತಿರುವ ಪೋಸ್ಟರ್ ಮೂಲಕ ಶೆಟ್ಟರು ಕಣಕ್ಕಿಳಿದರು. ಆಗಲೇ ಸೋಷಿಯಲ್ ಲೋಕ ಕೆಂಡದಂತೆ ಧಗಧಗಿಸಿತು. ಪೈಲ್ವಾನ್ ಅವತಾರದಲ್ಲಿ ಹುಚ್ಚೆಬ್ಬಿಸಿದ್ದ ಶಿವಣ್ಣನ `ವೈರಮುಡಿ’ ಸಿನಿಮಾದ ಪೋಸ್ಟರ್ ಮತ್ತೆ ರಾರಾಜಿಸ್ತು. ಕಂಬಳದ ಕಥೆಯನ್ನೊಳಗೊಂಡು ವೈರಮುಡಿ ಚಿತ್ರ ತಯಾರಾಗುತ್ತಿದೆ ರಥಾವರ ಡೈರೆಕ್ಟರ್ ಎರಡು ವರ್ಷ ಬೆವರು ಸುರಿಸಿ ಕಥೆ ಮಾಡಿಕೊಂಡಿದ್ದಾರೆ. ಹ್ಯಾಟ್ರಿಕ್ ಹೀರೋ ಡೇಟ್ ನೋಡಿಕೊಂಡು ಶೂಟಿಂಗ್ ಹೋಗೋದಕ್ಕೆ ಸಿದ್ದತೆ ಮಾಡಿಕೊಳ್ತಿದ್ದಾರೆ. ಹೀಗಿರುವಾಗ ಶೆಟ್ಟರು ಯಾಕೇ ಕೋಣಗಳನ್ನು ಓಡಿಸಿಕೊಂಡು ಬಂದ್ರಪ್ಪ ಅಂತ ಚರ್ಚೆಯಾಯ್ತು.

ಕಿರಿಕ್ ಡೈರೆಕ್ಟರ್ ಕಂಬಳದ ಕಥೆಯನ್ನೇ ಕಾಂತಾರ' ಚಿತ್ರದಲ್ಲಿ ದಂತಕತೆ ಮಾಡೋದಕ್ಕೆ ಹೊರಟರಾ? ಹೀಗೊಂದು ಸಂಶಯ ಬಂದು ಶಿವಣ್ಣನ ಅಭಿಮಾನಿಗಳು ಹಾಗೂ ರಥಾವರ ನಿರ್ದೇಶಕರ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದರು. ಸಿನಿಲಹರಿ ಜೊತೆ ಮಾತನಾಡುತ್ತಾ ವೈರಮುಡಿಗೋಸ್ಕರ ಪಟ್ಟ ಶ್ರಮದ ಬಗ್ಗೆ ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ ಬಿಚ್ಚಿಟ್ಟರು.ಕಾಂತಾರ’ ಸಿನಿಮಾ ಕಂಬಳ ಕುರಿತಾಗಿದೆಯೋ ಅಥವಾ ಮತ್ಯಾವುದೋ ಕಥೆಯನ್ನೋ ಹೇಳಲಿದೆಯೋ ಗೊತ್ತಿಲ್ಲ. ಒಂದ್ವೇಳೆ ಕಾಂತಾರ' ಕರಾವಳಿಯ ಜಾನಪದ ಕ್ರೀಡೆ ಕಂಬಳದ್ದೇ ಕಥೆಯಾದರೆ ನಿಜಕ್ಕೂ ಕೃತಿಚೌರ್ಯವೇ ಅಂತ ಬಂಡಿಯಪ್ಪ ನೊಂದುಕೊಂಡರು. ಇದಾಗಿ ಹೆಚ್ಚುಕಮ್ಮಿ 13 ದಿನಗಳು ಕಳೆದಿವೆ ಆದರೆ ರಿಷಬ್ ಶೆಟ್ಟಿಯವರೇ ಆಗಲೀ, ಹೊಂಬಾಳೆ ಸಂಸ್ಥೆಯೇ ಆಗಲಿಕಾಂತಾರ’ ಸಿನಿಮಾದ ತಿರುಳಿನ ಬಗ್ಗೆ ಬಿಟ್ಟುಕೊಟ್ಟಿಲ್ಲ. ಇತ್ತ ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ ಯಾವ ನಿರ್ಧಾರಕ್ಕೆ ಬಂದ್ರೋ ಗೊತ್ತಿಲ್ಲ. ಈ ಬಗ್ಗೆ ಶಿವಣ್ಣ ಜೊತೆಗೆ ಏನಾದರೂ ಮಾತುಕತೆ ನಡೆಸಿದ್ದಾರೋ ಏನೋ ಆ ಬಗ್ಗೆ ಹೆಚ್ಚಿನ ಡೀಟೈಲ್ಸ್ ಲಭ್ಯವಾಗಿಲ್ಲ. ಈ ಮಧ್ಯೆ ನಿರ್ದೇಶಕ ರಿಷಬ್ ಶೆಟ್ಟಿ ಹ್ಯಾಟ್ರಿಕ್ ಹೀರೋನಾ ಭೇಟಿ ಮಾಡಿ ಕೂತೂಹಲ ಕೆರಳಿಸಿದ್ದಾರೆ.

ನಿರ್ದೇಶಕ ರಿಷಬ್ ಶೆಟ್ಟಿ ಸೆಂಚುರಿಸ್ಟಾರ್ ಶಿವಣ್ಣರನ್ನು ಭೇಟಿ ಮಾಡಿರುವ ಉದ್ದೇಶ ಹೊಸ ಸಿನಿಮಾ. ಯಸ್, ದೊಡ್ಮನೆ ಸ್ಟಾರ್ ಶಿವಣ್ಣನಿಗೆ ಕಿರಿಕ್ ಡೈರೆಕ್ಟರ್ ರಿಷಬ್ ಶೆಟ್ಟಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಶಿವಣ್ಣನ ಜೊತೆಗೆ ರಿಷಬ್ ಸಿನಿಮಾ ಮಾಡ್ತಾರೆ ಎನ್ನುವ ಸುದ್ದಿ ಹರಿದಾಡಿತ್ತು. ಆದರೆ, ಯಾವ ಸಿನಿಮಾ? ಪ್ರೊಡ್ಯೂಸರ್ ಯಾರು? ಶಿವಣ್ಣ ಯಾವಾಗ ಡೇಟ್ ಕೊಟ್ಟಿದ್ದಾರೆ? ಯಾವಾಗ ಸಿನಿಮಾ ಸೆಟ್ಟೇರುತ್ತೆ? ಇದ್ಯಾವ ಪ್ರಶ್ನೆಗೂ ಉತ್ತರ ಸಿಕ್ಕಿರಲಿಲ್ಲ. ಆ ಎಲ್ಲಾ ಕೂತೂಹಲದ ಪ್ರಶ್ನೆಗೆ ಶೆಟ್ರು ಹಾಗೂ ಶಿವಣ್ಣರ ಭೇಟಿಯಿಂದ ಉತ್ತರ ಸಿಕ್ಕಿದೆ. 124 ನೇ ಸಿನಿಮಾ ಇತ್ತೀಚೆಗಷ್ಟೇ ಸೆಟ್ಟೇರಿದೆ. ನೀ ಸಿಗೋವರೆಗೂ ಸಿನಿಮಾದಲ್ಲಿ ಸದ್ಯ ಶಿವಣ್ಣ ಬ್ಯುಸಿಯಾಗಿದ್ದಾರೆ. 125 ನೇ ಚಿತ್ರವಾದ `ವೇದ’ದಲ್ಲಿಯೂ ತೊಡಗಿಸಿಕೊಳ್ಳಲಿದ್ದಾರೆ. ಈ ಎರಡು ಸಿನಿಮಾನ ಬ್ಯಾಲೆನ್ಸ್ ಮಾಡಿಕೊಂಡು ರಿಷಬ್ ಶೆಟ್ಟಿಯವರ ಅಖಾಡಕ್ಕೆ ಹ್ಯಾಟ್ರಿಕ್ ಹೀರೋ ಧುಮಕಲಿದ್ದಾರೆ.

ಹೌದು, 126 ನೇ ಸಿನಿಮಾವನ್ನು ಶಿವಣ್ಣ ರಿಷಬ್ ಜೊತೆಗೆ ಮಾಡಲಿದ್ದಾರೆ. ಶೆಟ್ಟರು ಹಾಗೂ ಶಿವಣ್ಣ ಕಾಂಬಿನೇಷನ್ ಸಿನಿಮಾಗೆ ಜನಪ್ರಿಯ ನಿರ್ಮಾಪಕರಾದ ಜಯ್ಯಣ್ಣ ಬಂಡವಾಳ ಹೂಡಲಿದ್ದಾರೆ. ಇವತ್ತು ಅನ್ನದಾತರಾದ ಜಯಣ್ಣರೊಟ್ಟಿಗೆ ಜೊತೆಗೆ ಕರುನಾಡ ಚಕ್ರವರ್ತಿ ಯನ್ನ ರಿಷಬ್ ಭೇಟಿಮಾಡಿದ್ದಾರೆ. ಫೋಟೋ ಸಮೇತ ಸೋಷಿಯಲ್ ಮೀಡಿಯಾಗೆ ಅಪ್‌ಲೋಡ್ ಕೂಡ ಮಾಡಿದ್ದಾರೆ. ಅಲ್ಲಿಗೆ ಚಂದ್ರಶೇಖರ್ ಬಂಡಿಯಪ್ಪರೊಟ್ಟಿಗೆ ಸಿನಿಮಾ ಮಾಡುವ ಮೊದಲೇ ಶಿವರಾಜ್‌ ಕುಮಾರ್, ರಿಷಬ್ ಶೆಟ್ಟಿಯವರ ನಿರ್ದೇಶನದ ಸಿನಿಮಾದಲ್ಲಿ ಮಿಂಚಲಿದ್ದಾರೆ.ನಂತರವಷ್ಟೇ ಚಂದ್ರಶೇಖರ್ ಬಂಡಿಯಪ್ಪ ನಿರ್ದೇಶ ನದ ಸಿನಿಮಾದಲ್ಲಿ ಶಿವಣ್ಣ ಧಗಧಗಿಸಲಿದ್ದಾರೆ. ಏನಾಗಲಿದೆ 127 ನೇ ವೈರಮುಡಿಯ ಕಥೆ ಕಾದುನೋಡಬೇಕಿದೆ.

  • ವಿಶಾಲಾಕ್ಷಿ, ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Related Posts

error: Content is protected !!