ಖುಷಿ ನಗು ಚೆಂದ.. ಖುಷಿ ಮಾತು ಅಂದ.. ಖುಷಿ ಅಭಿನಯ ಅನನ್ಯ ಅನುಬಂಧ. ಎಸ್, ಸೌಮ್ಯ ಸ್ವಭಾವದ ಖುಷಿ ಕಣ್ಣೋಟದ ಅಭಿನಯದ ಮೂಲಕ, ಮೊಗದಲ್ಲಿ ಮೂಡುವ ನಗುವಿನ ಮೂಲಕ ಕಲಾರಸಿಕರನ್ನು ಕಟ್ಟಿಹಾಕಿದ್ದಾರೆ. ಈಗ ಮಹಾಲಕ್ಷ್ಮಿಯ ಅವತಾರವೆತ್ತಿ ಸಾಕ್ಷಾತ್ ಲಕ್ಷ್ಮಿಯೂ ಅಚ್ಚರಿಪಡುವಂತೆ ಮಾಡಿದ್ದಾರೆ.
ಖುಷಿ.. ದಿಯಾ ಖುಷಿ.. ಈ ಖುಷಿ ಅಂದ್ರೆ ಯಾರಿಗ್ ಗೊತ್ತಿಲ್ಲ ಹೇಳಿ, ಎರಡಕ್ಷರದ ದಿಯಾ ಸಿನಿಮಾ.. ಎರಡೇ ಎರಡು ಅಕ್ಷರದ ಖುಷಿ ಎಂಬ ನವನಟಿಯನ್ನು ಬೆಳ್ಳಿತೆರೆಯಲ್ಲಿ ರಾರಾಜಿಸುವಂತೆ ಮಾಡಿತು. ಎರಡಕ್ಷರದ ದಿಯಾ ಎನ್ನುವ ಪಾತ್ರ ನಟಿ ಖುಷಿ ಅವರನ್ನು ಮನೆ ಮಾತು ಆಗುವಂತೆ ಮಾಡಿತು. ಆ ಮೂಲಕ ದೊಡ್ಡ ಚಿತ್ರಪ್ರೇಮಿಗಳ ಮನಸು ಗೆದ್ದ ನಟಿ ಖುಷಿ.
ಖುಷಿ ನಗು ಚೆಂದ.. ಖುಷಿ ಮಾತು ಅಂದ.. ಖುಷಿ ಅಭಿನಯ ಅನನ್ಯ ಅನುಬಂಧ. ಎಸ್, ಸೌಮ್ಯ ಸ್ವಭಾವದ ಖುಷಿ ಕಣ್ಣೋಟದ ಅಭಿನಯದ ಮೂಲಕ, ಮೊಗದಲ್ಲಿ ಮೂಡುವ ನಗುವಿನ ಮೂಲಕ ಕಲಾರಸಿಕರನ್ನು ಕಟ್ಟಿಹಾಕಿದ್ದಾರೆ. ಈಗ ಮಹಾಲಕ್ಷ್ಮಿಯ ಅವತಾರವೆತ್ತಿ ಸಾಕ್ಷಾತ್ ಲಕ್ಷ್ಮಿಯೂ ಅಚ್ಚರಿಪಡುವಂತೆ ಮಾಡಿದ್ದಾರೆ. ವರಮಹಾಲಕ್ಷ್ಮಿ ದರ್ಶನಕ್ಕೆ ಇನ್ನೆರಡು ದಿನ ಬಾಕಿಯಿದೆ. ಭಕ್ತರ ಆಸೆ ಆಕಾಂಕ್ಷೆಗಳನ್ನು ಈಡೇರಿಸಲಿಕ್ಕೆ, ಭಕ್ತರ ಕಷ್ಟ ಸುಖ ಬಗೆಹರಿಸಲಿಕ್ಕೆ ಲಕ್ಷ್ಮವ್ವ ತಾಯಿ ಕೆಲವೇ ಗಂಟೆಗಳಲ್ಲಿ ಧರೆಗಿಳಿಯಲಿದ್ದಾಳೆ.
ಪ್ರತಿಯೊಬ್ಬರ ಮನೆಯಲ್ಲಿ ಚಕ್ಕಳಮಕ್ಕಳ ಹಾಕಿ ಕುಳಿತು ರಾರಾಜಿಸಲಿ ದ್ದಾಳೆ. ಈ ದಿವ್ಯ ಕ್ಷಣವನ್ನು ಭಕ್ತರು ಕಣ್ತುಂಬಿಕೊಳ್ಳುವ ಮೊದಲೇ ದಿಯಾ ಖುಷಿ ಸಾಕ್ಷಾತ್ ಲಕ್ಷ್ಮಿಯಂತೆ ಕಂಗೊಳಿಸಿದ್ದಾರೆ. ವೈಟ್ ಅಂಡ್ ಗೋಲ್ಡನ್ ಕಲರ್ ಕಾಂಬಿನೇಷನ್ ಸೀರೆಯುಟ್ಟಿರುವ ಖುಷಿ ವೆರೈಟಿ ವೆರೈಟಿ ಜ್ಯೂವೆಲರಿ ಹಾಕಿಕೊಂಡು ಫೋಸ್ ಕೊಟ್ಟಿದ್ದಾರೆ. ಕಮಲದಲ್ಲಿ ಕುಳಿತು ಲಕ್ಷ್ಮಿಯ ಚೆಲುವು ಬೀರಿದ್ದಾರೆ. ಧರೆಗಿಳಿದ ಲಕ್ಷ್ಮಿಯಂತೆ ಕಾಣುತ್ತಿರುವ ಖುಷಿಯನ್ನ ಕಂಡು ಅವರ ಫ್ಯಾನ್ಸ್ ನಿಂತಲ್ಲೇ ಕೈಮುಗಿ ಯುತ್ತಿದ್ದಾರೆ.
ಅಂದ್ಹಾಗೇ, ಖುಷಿ ವರಮಹಾಲಕ್ಷ್ಮಿ ಹಬ್ಬಕ್ಕೆ ವಿಶೇಷವಾಗಿ ಈ ಫೋಟೋಶೂಟ್ ಮಾಡಿಸಿದ್ದಾರೆ. ಹರ್ಷಿತಾ ರೆಡ್ಡಿ ಖುಷಿ ಅಂದವನ್ನ ಹೆಚ್ಚಿಸೋಕೆ ಮೇಕಪ್ ಹಚ್ಚಿದ್ದಾರೆ. ವೈಟ್ ಸ್ಯಾರಿ ಹಾಗೂ ತರಹೇವಾರಿ ಆಭರಣದಿಂದ ಖುಷಿಯ ರಂಗು ಹೆಚ್ಚಿದೆ ಎನ್ನುವುದಕ್ಕಿಂತ ಖುಷಿ ಆ ಆಭರಣಗಳನ್ನು ತೊಟ್ಟಿರುವುದರಿಂದಲೇ ಆ ಜ್ಯೂಯಲರಿಗೆ ಹಾಗೂ ಆ ಸೀರೆಗೆ ಲಕ್ಷ್ಮಿ ಕಳೆಬಂದಿದೆ ಅಂದರೆ ತಪ್ಪಾಗಲ್ಲ ಬಿಡಿ. ಎನಿವೇ, ಖುಷಿ ದಿಯಾ ಸಿನಿಮಾ ನಂತರ ಖುಷಿಖುಷಿಯಾಗಿ ಲೈಫ್ ಲೀಡ್ ಮಾಡ್ತಿದ್ದಾರೆ. ರಿಯಲ್ ಲೈಫ್ ಜೊತೆಗೆ ರೀಲ್ ಲೈಫ್ ಕೂಡ ಸುಂದರವಾಗಿ ಸಾಗ್ತಿದೆ. ಖುಷಿಯ ಸಹಜಸುಂದರ ಅಭಿನಯಕ್ಕೆ ಅವಕಾಶಗಳು ಹರಿದುಬರುತ್ತಿವೆ. ರಂಗಿತರಂಗ ಹಾಗೂ ಅವನೇ ಶ್ರೀಮನ್ನಾರಾಯಣ ಸಿನಿಮಾ ಖ್ಯಾತಿಯ ನಿರ್ಮಾಪಕರಾದ ಎಚ್ ಕೆ ಪ್ರಕಾಶ್ ಅವರ ಮುಂದಿನ ಸಿನಿಮಾಗೆ ಖುಷಿ ಹೀರೋಯಿನ್. ನಕ್ಷೆ, ಮಾರ್ಗ ಸೇರಿದಂತೆ ಐದಾರು ಚಿತ್ರಗಳು ಖುಷಿ ಕೈಯಲ್ಲಿವೆ.
ಮದುವೆ ಆದ್ಮೇಲೆ ಹೀರೋಯಿನ್ಸ್ ಗೆ ಬಿಗ್ ಸ್ಕ್ರೀನ್ ನಲ್ಲಿ ಲೈಫ್ ಇಲ್ಲ ಗುರು ಅಂತಿದ್ದವರಿಗೆ ರಿಯಲ್ ಸ್ಟಾರ್ ಉಪ್ಪಿ ಸ್ಟೈಲ್ ನಲ್ಲಿ ಲಾಗಾ ಹೊಡೆಸಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನಿಮಾ ಒಪ್ಪಿಕೊಂಡು ಟಕ್ಕರ್ ಕೊಡ್ತಿದ್ದಾರೆ. ಹೊಸಬರ ಚಿತ್ರಗಳಾದರೂ ಕೂಡ ಅಭಿನಯಕ್ಕೆ ಸ್ಕೋಪ್ ಇರುವ, ಸ್ಪೇಸ್ ಇರುವ ಮೂವೀಗಳನ್ನೇ ಖುಷಿ ಆಯ್ಕೆಮಾಡಿ ಕೊಳ್ತಿದ್ದಾರೆ. ದಿಯಾ ಖುಷಿಯ ಸಿನಿಜರ್ನಿ ಹೀಗೆ ಸಕ್ಸಸ್ ಫುಲ್ ಆಗಿ ಸಾಗುತ್ತಿರಲಿ. ಆಲ್ ಇಂಡಿಯಾ ಕ್ರಷ್ ಪಟ್ಟದಲ್ಲಿ ಖುಷಿ ರಾರಾಜಿಸಲಿ ಅನ್ನೋದೇ ಸಿನಿಲಹರಿಯ ಆಶಯ.
ವಿಶಾಲಾಕ್ಷಿ, ಎಂಟರ್ ಟೈನ್ಮೆಂಟ್ ಬ್ಯೂರೋ ಸಿನಿ ಲಹರಿ