“ಅಮೃತ್ ಅಪಾರ್ಟ್ಮಮೆಂಟ್ಸ್” ಚಿತ್ರದ “ಶುರುವಾಗಬೇಕು ಮತ್ತೊಮ್ಮೆ ನಮ್ಮ ಒಲವು” ಎಂಬ ಪ್ರೇಮಗೀತೆಯೊಂದು ರಿಲೀಸ್ ಆಗಿದೆ. ಯೂಟ್ಯೂಬ್ ಚಾನಲ್ ಮೂಲಕ ಈ ಗೀತೆ ಬಿಡುಗಡೆಯಾಗಿದ್ದು, ಎಲ್ಲೆಡೆ ಮೆಚ್ಚುಗೆ ಸಿಕ್ಕಿದೆ.
ಗಂಡ-ಹೆಂಡತಿ ಮಧ್ಯೆ ಮುನಿಸು ಕರಗುವ ಸನ್ನಿವೇಶಕ್ಕೆ ತಕ್ಕಂತೆ, ಇಡೀ ಸಿನೆಮಾದ ಕಥೆಯ ಸಾರಾಂಶವನ್ನು ಹೇಳುವಂತಹ, ಪ್ರೇಕ್ಷನ ಮನ ತಟ್ಟುವಂತಹ ಒಂದು ವಿಶೇಷ ಹಾಡಿನ ಅವಶ್ಯಕತೆ ಇತ್ತು. ಈ ಥರದ ಒಂದು ವಿನೂತನ ಪ್ರೇಮಗೀತೆಗೆ, ಹೂ-ಹೃದಯದ ಪ್ರೇಮಕವಿ ಕೆ.ಕಲ್ಯಾಣರವರೇ ಸೂಕ್ತ ಎಂದು ನಾನು ಅವರ ಬಳಿ ಹೋದೆ ಎಂದು ಚಿತ್ರದ ನಿರ್ದೇಶಕ ಗುರುರಾಜ ಕುಲಕರ್ಣಿ(ನಾಡಗೌಡ) ಚಿತ್ರಗೀತೆಯ ಹಿಂದಿನ ಪ್ರಸಂಗ ಬಿಚ್ಚಿಟ್ಟರು. ಯುವಪ್ರೇಮಿಗಳ ಪ್ರೀತಿ-ಪ್ರೇಮ-ಮುನಿಸು-ತಲ್ಲಣಗಳ ಭಾವಕ್ಕೆ ತಕ್ಕಂತೆ ಗೀತೆಯ ಸಾಲುಗಳನ್ನು ಕೆ.ಕಲ್ಯಾಣ ಬರೆದಿದ್ದಾರೆ. ಅದಕ್ಕೆ ಪೂರಕವಾಗಿ ಸಂಗೀತ ನಿರ್ದೇಶಕ ಎಸ್.ಡಿ.ಅರವಿಂದ ಕೇಳುಗರನ್ನು ಮೋಡಿ ಮಾಡುವಂತಹ ಸಂಗೀತ ನೀಡಿದ್ದಾರೆ.
ಈ ಯುಗಳ ಹಾಡಿಗೆ ವಾಣಿ ಹರಿಕೃಷ್ಣ ಮತ್ತು ಅಜಯ ವಾರಿಯರ್ ಧ್ವನಿ ನೀಡಿದ್ದಾರೆ. ಬಹಳ ದಿನಗಳ ನಂತರ ಈ ಥರದ ಶುಧ್ಧ ಸಾಹಿತ್ಯಕ್ಕೆ ಧ್ವನಿಯಾಗಿರುವದಕ್ಕೆ ಇಬ್ಬರೂ ಸಂತೋಷ ವ್ಯಕ್ತಪಡಿಸಿದ್ದಾರೆ.
ನವೆಂಬರ ತಿಂಗಳ ಕೊನೆಯ ವಾರದಲ್ಲಿ “ಅಮೃತ ಅಪಾರ್ಟ್ಮೆಂಟ್ಸ್ ಸಿನೆಮಾ ಬಿಡುಗಡೆಯಾಗಲಿದ್ದು, ಚಿತ್ರ ತಂಡ ಪ್ರೇಕ್ಷಕರ ಮನಸ್ಸು ಗೆಲ್ಲುವ ಉತ್ಸಾಹದಲಿದ್ದಾರೆ. ಗುರುರಾಜ ಕುಲಕರ್ಣಿ (ನಾಡಗೌಡ) ನಿರ್ಮಾಣದ ಜೊತೆ ನಿರ್ದೇಶನವನ್ನೂ ಮಾಡಿದ್ದಾರೆ.
ದೊಡ್ಡಮನೆಯ ಮಗ, ಕರುನಾಡಿನ ರಾಜರತ್ನ, ಗಂಧದಗುಡಿಯ ಅರಸು, ಅಭಿಮಾನಿಗಳ ಪಾಲಿನ ಆರಾಧ್ಯ ದೈವ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನ ಕಳೆದುಕೊಂಡು ಕುಟುಂಬಸ್ಥರು- ಅಭಿಮಾನಿ ದೇವರುಗಳು- ಕರುನಾಡಿನ ಜನರು- ಹೊರರಾಜ್ಯದ ಮಂದಿಯಷ್ಟೇ ಕಣ್ಣೀರಾಕಿಲ್ಲ. ಇವರಷ್ಟೇ ದು:ಖ, ಇವರಷ್ಟೇ ನೋವು, ಇವರಷ್ಟೇ ಸಂಕಟವನ್ನ ಬೆಳ್ಳಿತೆರೆಯೂ ಅನುಭವಿಸ್ತಿದೆ. ಆದರೆ, ಬಾಯ್ಬಿಟ್ಟು ಹೇಳಿಕೊಳ್ಳೋದಕ್ಕೆ ಉಸಿರಿಲ್ಲ,ಕಣ್ಣೀರು ಸುರಿಸೋದಕ್ಕೆ ಜೀವ ಇಲ್ಲ.
ಹೀಗಾಗಿ, ನೋವನ್ನು ಹೇಳಿಕೊಳ್ಳೋದಕ್ಕೆ ಆಗದೇ ಒಳಗೊಳಗೆ ಸೊರಗುತ್ತಾ, ಸಂಕಟ ಪಡುತ್ತಿದೆ. ಕೊನೆಭಾರಿ ಅಪ್ಪು ಮುಖ ನೋಡೋದಕ್ಕೆ ಅವಕಾಶ ಸಿಗಲಿಲ್ಲ, ಕಡೇ ಪಕ್ಷ ನಮನ ಸಲ್ಲಿಸೋಣ ಅಂದರೆ ಇವರ್ಯಾರು ಅರೇಂಜ್ ಮಾಡ್ತಿಲ್ಲವಲ್ಲ ಅಂತ ಬಿಗ್ ಸ್ಕ್ರೀನ್ ಕೊರಗುತ್ತಾ ಇತ್ತು. ಬೆಳ್ಳಿತೆರೆಯ ಈ ಕೂಗು ಬಹುಷಃ ಕರ್ನಾಟಕ ಚಿತ್ರ ಪ್ರದರ್ಶಕರಿಗೆ ಕೇಳಿಸ್ತು ಎನಿಸುತ್ತೆ. ಹೀಗಾಗಿಯೇ, ಅಪ್ಪು ಆತ್ಮಕ್ಕೆ ಶಾಂತಿಕೋರುವುದಕ್ಕೆ ಭಾವಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
ಹೌದು, ಇದೇ ಭಾನುವಾರ ಸಂಜೆ 6 ಗಂಟೆಗೆ ಸರಿಯಾಗಿ ಕರ್ನಾಟಕ ರಾಜ್ಯಾದ್ಯಂತ ಎಲ್ಲಾ ಚಿತ್ರಮಂದಿರಗಳ ಆವರಣದಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಪುಷ್ಪಾಂಜಲಿ, ದೀಪಾಂಜಲಿ, ಗೀತಾಂಜಲಿ ಮತ್ತು ಭಾಷ್ಪಾಂಜಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದು ಅಭಿಮಾನಿ ದೇವರುಗಳು, ಸಿನಿಮಾ ಪ್ರೇಕ್ಷಕರು ಪಾಲ್ಗೊಳ್ಳಬಹುದು. ಬೆಂಗಳೂರಿನ ಮುಖ್ಯ ಚಿತ್ರಮಂದಿರಗಳಲ್ಲಿ ಚಿತ್ರೋದ್ಯಮದ ಇತರೆ ವಲಯದ ಗಣ್ಯರು ಭಾಗಿಯಾಗುತ್ತಿದ್ದಾರೆ. ಅಪ್ಪುಗೆ ನಮನ ಸಲ್ಲಿಸುವುದರ ಮೂಲಕ ದಿವಂಗತ ನಟ ಪುನೀತ್ ರಾಜ್ ಕುಮಾರ್ ಆತ್ಮಕ್ಕೆ ಶಾಂತಿಕೋರುತ್ತಿದ್ದಾರೆ. ಈ ಮೂಲಕ ನಾದರೂ ದೊಡ್ಮನೆಯ ರಾಜಕುಮಾರನಿಗೆ ನಮನ ಸಲ್ಲಿಸುವ ಅವಕಾಶ ಸಿಗ್ತಲ್ಲ ಅಂತ ಬೆಳ್ಳಿತೆರೆ ನಿಟ್ಟುಸಿರು ಬಿಟ್ಟಿದೆ. ಇದರ ಮಧ್ಯೆಯೂ ಅಪ್ಪು ನನ್ನ ನೋಡಲಿಕ್ಕೆ ಬರಲ್ವಲ್ಲ ಎಂದು ನೊಂದುಕೊಳ್ಳುತ್ತಿದೆ.
ಹೌದು, ದೊಡ್ಮನೆ ರಾಜಕುಮಾರನ ಸಿನಿಮಾ ಬರ್ತಿದೆ ಎಂದರೆ ಸಾಕು ಬೆಳ್ಳಿಪರದೆ ಕ್ಯಾಕಿ ಹಾಕುತ್ತಿತ್ತು. ಬಾಕ್ಸ್ ಆಫೀಸ್ ಬೆಟ್ಟದ ಹೂ ಮುಡಿದುಕೊಂಡು ಕುಣಿಯುತ್ತಿತ್ತು. ಇದನ್ನೆಲ್ಲಾ ನೋಡೋದಕ್ಕೆ ಅಣ್ಣಾಬಾಂಡ್ ಥಿಯೇಟರ್ ಗೆ ಎಂಟ್ರಿಕೊಡ್ತಿದ್ದರು. ಅಭಿಮಾನಿ ದೇವರುಗಳು ಜೊತೆ ಕುಳಿತು ಸಿನಿಮಾ ನೋಡ್ತಿದ್ದರು. ಇನ್ಮೇಲೆ ಯುವರತ್ನನಿಗಾಗಿ ಕಾದು ಕುಳಿತರು ಬರಲ್ಲ. ಈಕಟು ಸತ್ಯ ಅರಿತಿರುವ ಸಿಲ್ವರ್ ಸ್ಕ್ರೀನ್ ನಂತೆ ಫ್ಯಾನ್ಸ್ ಕೂಡ ಎದೆಭಾಗ ಹಿಡಿದು ನೋವುಣ್ಣುತ್ತಿದ್ದಾರೆ. ನಮ್ಮ ಜೊತೆ ಇನ್ಯಾವತ್ತೂ ಕುಳಿತುಕೊಂಡು ಸಿನಿಮಾ ನೋಡೋದಕ್ಕೆ ಅಪ್ಪು ಸಾರ್ ಬರಲ್ಲವಲ್ಲ ಎಂದು ಕಣ್ಣೀರಾಗುತ್ತಿದ್ದಾರೆ. ಮಿಡ್ ನೈಟ್ ಶೋ, ಅರ್ಲಿ ಮಾರ್ನಿಂಗ್ ಶೋ, ಫಸ್ಟ್ ಡೇ ಫಸ್ಟ್ ಶೋ ಅಂತ ರಾತ್ರೋರಾತ್ರಿ ಅಪ್ಪುನಾ ನೋಡಲಿಕ್ಕೆ ಆಗಲ್ಲವಲ್ಲ ದೇವಾ ಎಂದು ಹೃದಯ ಹಿಡಿದು ನೊಂದುಕೊಳ್ಳುತ್ತಿದ್ದಾರೆ.
ಇಷ್ಟೆಲ್ಲದರ ಜೊತೆಗೆ ಪವರ್ ಸ್ಟಾರ್ ಜೀವನದಲ್ಲಿ ಬೆಳ್ಳಿತೆರೆಯ ಪಾತ್ರವೆಷ್ಟು ಎನ್ನುವುದರ ಬಗ್ಗೆ ಕೊಂಚ ಮಾತನಾಡ್ಲೆಬೇಕು. ದೊಡ್ಮನೆ ಹುಡುಗನನ್ನು ಬೆಳ್ಳಿತೆರೆ ಬರೋಬ್ಬರಿ 45 ವರ್ಷಗಳ ಕಾಲ ತಲೆ ಮೇಲೆ ಹೊತ್ತು ಮೆರೆಸಿದೆ. ಕರ್ನಾಟಕದ ಮೂಲೆಮೂಲೆ ಮಾತ್ರವಲ್ಲ ಭರತಖಂಡ ಸುತ್ತೆಲ್ಲ ಮುತ್ತಿನ ಪಲ್ಲಕ್ಕಿಯಲ್ಲಿ ಕೂರಿಸಿಕೊಂಡು ಮೆರವಣಿಗೆ ಮಾಡಿದೆ. ನಟಸಾರ್ವಭೌಮ ಎನ್ನುವ ಪಟ್ಟ ಕಟ್ಟಿ ಗಡಿದಾಟಿಸಿದೆ. ಖಜಾನೆಗೆ ಕೋಟಿ ಕೋಟಿ ಹರಿದುಬರುವಂತೆ ಮಾಡಿದೆ ಮಾತ್ರವಲ್ಲ ಬೆಲೆಯೇ ಕಟ್ಟಲಾಗದ ಕೋಟ್ಯಾಂತರ ಅಭಿಮಾನಿಗಳನ್ನು ಸೃಷ್ಟಿಮಾಡಿಕೊಟ್ಟಿದೆ. ಇಷ್ಟೆಲ್ಲಾ, ಸಾಧ್ಯವಾಗಿದ್ದು ಬೆಳ್ಳಿತೆರೆಯಿಂದ ಮತ್ತು ಅಪ್ಪು ನಟನಾಚಾತುರ್ಯದಿಂದ.
ಬಾಲನಟನಾಗಿ ಬೆಳ್ಳಿತೆರೆಗೆ ಲಗ್ಗೆ ಇಟ್ಟು ಬಾಲ್ಯದಲ್ಲೇ ನ್ಯಾಷನಲ್ ಅವಾರ್ಡ್ ಮುಡಿಗೇರಿಸಿಕೊಂಡ ಮಾಸ್ಟರ್ ಲೋಹಿತ್, ನಟಸಾರ್ವಭೌಮನಾಗಿ ಬೆಳೆದು ಗಂಧದಗುಡಿಯ ಅರಸನಾದರು. 45 ವರ್ಷದ ತಮ್ಮ ಸಿನಿಜರ್ನಿಯಲ್ಲಿ 46 ಸಿನಿಮಾ ಮಾಡಿದರು. ನಟನಾಕೌಶಲ್ಯದಿಂದ, ನಯ-ವಿನಯದಿಂದ, ಸರಳ ಮನೋಭಾವದಿಂದ, ದಾನ-ಧರ್ಮದಿಂದ- ಶ್ರದ್ಧಾ- ಭಕ್ತಿಯಿಂದ- ಪ್ರೀತಿ- ವಾತ್ಸಲ್ಯದಿಂದ ಕೇವಲ ಒಂದೇ ಒಂದು ಜನ್ಮದಲ್ಲಿ ಏಳು ಜನ್ಮಕ್ಕಾಗುವಷ್ಟು ಪ್ರೀತಿ- ಕೀರ್ತಿ ಹಾಗೂ ಹೆಸರನ್ನು ಸಂಪಾದನೆ ಮಾಡಿ ಬಿಟ್ಟೋದರು. ಹೀಗಾಗಿ, ಎಷ್ಟೇ ವರ್ಷಗಳು ಉರುಳಿದರೂ ಕೂಡ ಕರುನಾಡಿನಲ್ಲಿ, ಕನ್ನಡಿಗರಲ್ಲಿ, ಸ್ಯಾಂಡಲ್ ವುಡ್ ಇತಿಹಾಸದಲ್ಲಿ ದೊಡ್ಮನೆ ಮಗನ ಹೆಸರು ಅಜರಾಮರ.
ಸಿನಿಮಾವೇ ಬದುಕು ಎನ್ನುವ ಗೆಳೆಯ ಹಾಗೂ ಒಡನಾಡಿ ಕಿರಣ್ ಅಲಿಯಾಸ್ ಶಿವಕುಮಾರ್ ಅವರ ಬದುಕಲ್ಲಿ ಇದು ನಿಜವಾದ ದೀಪಾವಳಿ. ಯಾಕಂದ್ರೆ ಚಿತ್ರ ನಿರ್ದೇಶಕನಾಗಬೇಕೆನ್ನುವ ಅವರ ಬಹು ದಿನದ ಕನಸು ಈಗ ಈಡೇರುತ್ತಿದೆ. ಗೆಳೆಯರಾದ ಅಶೋಕ್ ಅವರ ಬೆಂಬಲದ ಮೂಲಕ ಶಿವಕುಮಾರ್ ಅವರ ಬಹು ದಿನದ ಕನಸು ನನಸಾಗುತ್ತಿದೆ. ಆ ಮೂಲಕ ಈ ವರ್ಷದ ದೀಪಾವಳಿ ಹಬ್ಬ ಅವರ ಬದುಕಿನಲ್ಲೂ ಹೊಸ ಬೆಳಕು ಮೂಡಿಸಿದೆ. ಆ ಪ್ರಯತ್ನದ ಫಲವಾಗಿ ದೀಪಾವಳಿ ಹಬ್ಬಕ್ಕೆ ಶಿವಕುಮಾರ್ ನಿರ್ದೇಶನದ ಚೊಚ್ಚಲ ಚಿತ್ರದ ಟೈಟಲ್ ಲಾಂಚ್ ಆಗಿದೆ.
ಶಿವಕುಮಾರ್, ನಿರ್ದೇಶಕ
‘1000 ವಾಲಾ ‘ ಎನ್ನುವುದು ಆ ಚಿತ್ರದ ಶೀರ್ಷಿಕೆ. ‘ದಿ ಸೌಂಡ್ ಆಫ್ ಮಾಸ್’ ಎನ್ನುವುದು ಇದರ ಟ್ಯಾಗ್ ಲೈನ್. ಟೈಟಲ್ ಹಾಗೂ ಅದರ ಟ್ಯಾಗ್ ಲೈನ್ ತುಂಬಾ ಆಕರ್ಷಕವಾಗಿವೆ. ಹಾಗೆಯೇ ಕೈ ಗೆ ಪಟಾಕಿ ಸುತ್ತಿಕೊಂಡಿರುವ ಪೋಸ್ಟರ್ ಫಸ್ಟ್ ಲುಕ್ ಕೂಡ ಕುತೂಹಲಕಾರಿಯಾಗಿದೆ. ಇನ್ನು ‘ ತೌಜಂಡ್ ವಾಲಾ’ ಅಂದ್ರೇನು ಅನ್ನೋದು ಎಲ್ಲರಿಗೂ ಗೊತ್ತು. ಇದೊಂದು ಪಟಾಕಿ ಹೆಸರು. ಇದು ಸಿಕ್ಕಾಪಟ್ಟೆ ಸದ್ದು ಮಾಡುವ ಪವರ್ ಫುಲ್ ಪಟಾಕಿ. ಅದನ್ನೇ ಚಿತ್ರದ ಟೈಟಲ್ ಆಗಿಸಿಕೊಂಡಿರುವ ಯುವ ನಿರ್ದೇಶಕ ಶಿವಕುಮಾರ್ ಕನ್ಮಡಕ್ಕೊಂಡು ಪವರ್ ಫುಲ್ ಕಂಟೆಂಟ್ ನ ಸಿನಿಮಾ ಕೊಡುವ ಉತ್ಸಾಹದಲ್ಲಿದ್ದಾರೆ. ಅಂದ ಹಾಗೆ, ಈ ಸಿನಿಮಾ ಕೆಲಸ ಈಗಷ್ಟೇ ಶುರುವಾಗಿದೆ. ಕೆಲಸದ ಮೊದಲ ಸೌಂಡ್ ಗೆ ಅಂತ ದೀಪಾವಳಿ ಹಬ್ಬಕ್ಕೆ ಟೈಟಲ್ ಲಾಂಚ್ ಮಾಡಿರುವ ನಿರ್ದೇಶಕ ಶಿವಕುಮಾರ್, ಶೀಘ್ರವೇ ಚಿತ್ರಕ್ಕೆ ಮುಹೂರ್ತ ಮುಗಿಸಿಕೊಂಡು ಚಿತ್ರೀಕರಣಕ್ಕೆ ಹೊರಡುವ ತಯಾರಿಯಲ್ಲಿದ್ದಾರೆ.
ಅಶೋಕ್, ನಿರ್ಮಾಪಕರು
ಇನ್ನು ಈ ಚಿತ್ರಕ್ಕೆ ನಾಯಕ, ನಾಯಕಿ ಸೇರಿದಂತೆ ಕಲಾವಿದರು ಹಾಗೂ ತಂತ್ರಜ್ಜರು ಫೈನಲ್ ಆಗಿಲ್ಲ. ನಿರ್ದೇಶಕ ಶಿವಕುಮಾರ್ ಹೇಳುವ ಪ್ರಕಾರ ಅದಕ್ಕೊಂದಷ್ಟು ಸಮಯಬೇಕಿದೆ. ಆದರೂ ಈಗ ನಾಯಕರ ಹುಡುಕಾಟ ನಡೆದಿದೆಯಂತೆ.ಕಥೆಗೆ ಸೂಕ್ತ ಎನಿಸುವುದರ ಜತೆಗೆ ಜನರಿಗೂ ಪರಿಚಯ ಇರುವ ನಟರನ್ನೇ ಚಿತ್ರದ ನಾಯಕರನ್ನಾಗಿ ಆಯ್ಕೆ ಮಾಡಿಕೊಳ್ಳಬೇಕೆನ್ನುವ ಇಚ್ವಾಸಕ್ತಿ ಹೊಂದಿದ್ದೇನೆ.ಆ ನಿಟ್ಟಿನಲ್ಲಿ ಒಂದಿಬ್ಬರು ನಾಯಕರನ್ನು ಭೇಟಿಮಾಡಿಮಾತುಕತೆ ನಡೆಸಿದ್ದೇನೆ. ಆದರೆ ಅದ್ಯಾರು ಕೂಡ ಫೈನಲ್ ಆಗಿಲ್ಲ.ಇಷ್ಟರಲ್ಲಿಯೇ ಒಂದು ನಿರ್ಧಾರಕ್ಕೆ ಬಂದ ನಂತರ ಉಳಿದ ಕಲಾವಿದರ ಆಯ್ಕೆಯ ಕಡೆ ಗಮನ ಹರಿಲಾಗುವುದು ಎನ್ನುತ್ತಾರೆ ಯುವ ನಿರ್ದೇಶಕ ಶಿವಕುಮಾರ್.
ಹಾಗೆನೆ, ಶಿವಕುಮಾರ್ ಅವರಿಗೆ ಇದು ಚೊಚ್ಚಲ ಚಿತ್ರವಾದರೂ, ಸಿನಿಮಾ ಪಯಣ ಸಾಕಷ್ಟು ವರ್ಷಗಳದ್ದು. ಕನ್ನಡ ಹಾಗೂ ತಮಿಳು ಅ ಭಾಷೆಯ ಚಿತ್ರಗಳಿಗೆ ಸಹಾಯಕನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ .ಸಿನಿಮಾದ ಹಲವು ವಿಭಾಗಗಳಲ್ಲಿ ಕೆಲಸ ಮಾಡಿರುವ ಶಿವಕುಮಾರ್ ಅವರಿಗೆ ಕನ್ನಡದ ಮೂಲಕವೇ ನಿರ್ದೇಶಕರಾಗಿ ಗುರುತಿಸಿಕೊಳ್ಳುವ ಕನಸು ಹೊತ್ತಿದ್ದರಂತೆ.ಆ ಕನಸು ಈಗ ನನಸಾಗುತ್ತಿದೆ ಎನ್ನುವ ಸಂಭ್ರಮದಲ್ಲಿಯೇ ಹಬ್ಬಕ್ಕೆ 1000 ವಾಲಾ ಪಟಾಕಿ ಸಿಡಿಸಿದ್ದಾರೆ. ಆಲ್ ದಿ ಬೆಸ್ಟ್ ಶಿವಕುಮಾರ್ ಅಂಡ್ ಟೀಮ್.
ಸಿನಿಮಾವೇ ಬದುಕು ಎನ್ನುವ ಗೆಳೆಯ ಹಾಗೂ ಒಡನಾಡಿ ಕಿರಣ್ ಅಲಿಯಾಸ್ ಶಿವಕುಮಾರ್ ಅವರ ಬದುಕಲ್ಲಿ ಇದು ನಿಜವಾದ ದೀಪಾವಳಿ. ಯಾಕಂದ್ರೆ ಚಿತ್ರ ನಿರ್ದೇಶಕನಾಗಬೇಕೆನ್ನುವ ಅವರ ಬಹು ದಿನದ ಕನಸು ಈಗ ಈಡೇರುತ್ತಿದೆ. ಗೆಳೆಯರಾದ ಅಶೋಕ್ ಅವರ ಬೆಂಬಲದ ಮೂಲಕ ಶಿವಕುಮಾರ್ ಅವರ ಬಹು ದಿನದ ಕನಸು ನನಸಾಗುತ್ತಿದೆ. ಆ ಮೂಲಕ ಈ ವರ್ಷದ ದೀಪಾವಳಿ ಹಬ್ಬ ಅವರ ಬದುಕಿನಲ್ಲೂ ಹೊಸ ಬೆಳಕು ಮೂಡಿಸಿದೆ. ಆ ಪ್ರಯತ್ನದ ಫಲವಾಗಿ ದೀಪಾವಳಿ ಹಬ್ಬಕ್ಕೆ ಶಿವಕುಮಾರ್ ನಿರ್ದೇಶನದ ಚೊಚ್ಚಲ ಚಿತ್ರದ ಟೈಟಲ್ ಲಾಂಚ್ ಆಗಿದೆ.
ಶ
‘1000 ವಾಲಾ ‘ ಎನ್ನುವುದು ಆ ಚಿತ್ರದ ಶೀರ್ಷಿಕೆ. ‘ದಿ ಸೌಂಡ್ ಆಫ್ ಮಾಸ್’ ಎನ್ನುವುದು ಇದರ ಟ್ಯಾಗ್ ಲೈನ್. ಟೈಟಲ್ ಹಾಗೂ ಅದರ ಟ್ಯಾಗ್ ಲೈನ್ ತುಂಬಾ ಆಕರ್ಷಕವಾಗಿವೆ. ಹಾಗೆಯೇ ಕೈ ಗೆ ಪಟಾಕಿ ಸುತ್ತಿಕೊಂಡಿರುವ ಪೋಸ್ಟರ್ ಫಸ್ಟ್ ಲುಕ್ ಕೂಡ ಕುತೂಹಲಕಾರಿಯಾಗಿದೆ. ಇನ್ನು ‘ ತೌಜಂಡ್ ವಾಲಾ’ ಅಂದ್ರೇನು ಅನ್ನೋದು ಎಲ್ಲರಿಗೂ ಗೊತ್ತು. ಇದೊಂದು ಪಟಾಕಿ ಹೆಸರು. ಇದು ಸಿಕ್ಕಾಪಟ್ಟೆ ಸದ್ದು ಮಾಡುವ ಪವರ್ ಫುಲ್ ಪಟಾಕಿ. ಅದನ್ನೇ ಚಿತ್ರದ ಟೈಟಲ್ ಆಗಿಸಿಕೊಂಡಿರುವ ಯುವ ನಿರ್ದೇಶಕ ಶಿವಕುಮಾರ್ ಕನ್ಮಡಕ್ಕೊಂಡು ಪವರ್ ಫುಲ್ ಕಂಟೆಂಟ್ ನ ಸಿನಿಮಾ ಕೊಡುವ ಉತ್ಸಾಹದಲ್ಲಿದ್ದಾರೆ. ಅಂದ ಹಾಗೆ, ಈ ಸಿನಿಮಾ ಕೆಲಸ ಈಗಷ್ಟೇ ಶುರುವಾಗಿದೆ. ಕೆಲಸದ ಮೊದಲ ಸೌಂಡ್ ಗೆ ಅಂತ ದೀಪಾವಳಿ ಹಬ್ಬಕ್ಕೆ ಟೈಟಲ್ ಲಾಂಚ್ ಮಾಡಿರುವ ನಿರ್ದೇಶಕ ಶಿವಕುಮಾರ್, ಶೀಘ್ರವೇ ಚಿತ್ರಕ್ಕೆ ಮುಹೂರ್ತ ಮುಗಿಸಿಕೊಂಡು ಚಿತ್ರೀಕರಣಕ್ಕೆ ಹೊರಡುವ ತಯಾರಿಯಲ್ಲಿದ್ದಾರೆ.
ಇನ್ನು, ಈ ಚಿತ್ರಕ್ಕೆ ನಾಯಕ, ನಾಯಕಿ ಸೇರಿದಂತೆ ಕಲಾವಿದರು ಹಾಗೂ ತಂತ್ರಜ್ಞರು ಫೈನಲ್ ಆಗಿಲ್ಲ. ನಿರ್ದೇಶಕ ಶಿವಕುಮಾರ್ ಹೇಳುವ ಪ್ರಕಾರ ಅದಕ್ಕೊಂದಷ್ಟು ಸಮಯಬೇಕಿದೆ. ಆದರೂ ಈಗ ನಾಯಕರ ಹುಡುಕಾಟ ನಡೆದಿದೆಯಂತೆ. ಕಥೆಗೆ ಸೂಕ್ತ ಎನಿಸುವುದರ ಜತೆಗೆ ಜನರಿಗೂ ಪರಿಚಯ ಇರುವ ನಟರನ್ನೇ ಚಿತ್ರದ ನಾಯಕರನ್ನಾಗಿ ಆಯ್ಕೆ ಮಾಡಿಕೊಳ್ಳಬೇಕೆನ್ನುವ ಇಚ್ವಾಸಕ್ತಿ ಹೊಂದಿದ್ದೇನೆ. ಆ ನಿಟ್ಟಿನಲ್ಲಿ ಒಂದಿಬ್ಬರು ನಾಯಕರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದೇನೆ. ಆದರೆ ಅದ್ಯಾರು ಕೂಡ ಫೈನಲ್ ಆಗಿಲ್ಲ.ಇಷ್ಟರಲ್ಲಿಯೇ ಒಂದು ನಿರ್ಧಾರಕ್ಕೆ ಬಂದ ನಂತರ ಉಳಿದ ಕಲಾವಿದರ ಆಯ್ಕೆಯ ಕಡೆ ಗಮನ ಹರಿಲಾಗುವುದು ಎನ್ನುತ್ತಾರೆ ಯುವ ನಿರ್ದೇಶಕ ಶಿವಕುಮಾರ್. ಹಾಗೆನೆ, ಶಿವಕುಮಾರ್ ಅವರಿಗೆ ಇದು ಚೊಚ್ಚಲ ಚಿತ್ರವಾದರೂ, ಸಿನಿಮಾ ಪಯಣ ಸಾಕಷ್ಟು ವರ್ಷಗಳದ್ದು. ಕನ್ನಡ ಹಾಗೂ ತಮಿಳು ಭಾಷೆಯ ಚಿತ್ರಗಳಿಗೆ ಸಹಾಯಕನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಸಿನಿಮಾದ ಹಲವು ವಿಭಾಗಗಳಲ್ಲಿ ಕೆಲಸ ಮಾಡಿರುವ ಶಿವಕುಮಾರ್ ಅವರಿಗೆ ಕನ್ನಡದ ಮೂಲಕವೇ ನಿರ್ದೇಶಕರಾಗಿ ಗುರುತಿಸಿಕೊಳ್ಳುವ ಕನಸು ಹೊತ್ತಿದ್ದರಂತೆ.ಆ ಕನಸು ಈಗ ನನಸಾಗುತ್ತಿದೆ ಎನ್ನುವ ಸಂಭ್ರಮದಲ್ಲಿಯೇ ಹಬ್ಬಕ್ಕೆ 1000ವಾಲಾ ಪಟಾಕಿ ಸಿಡಿಸಿದ್ದಾರೆ. ಆಲ್ ದಿ ಬೆಸ್ಟ್ ಶಿವಕುಮಾರ್ ಅಂಡ್ ಟೀಮ್.
ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಸಿಂಪಲ್ ಸುನಿ ಕಾಂಬೋದ ಸಖತ್ ಸಿನಿಮಾ ರಿಲೀಸ್ ಡೇಟ್ ಪೋಸ್ಟ್ ಪೋನ್ ಆಗಿದೆ. ಇದೇ ನವೆಂಬರ್ 12 ರಿಂದ ತೆರೆ ಮೇಲೆ ಸಖತ್ ಮ್ಯಾಜಿಕ್ ಶುರುವಾಗಬೇಕಿತ್ತು. ಆದರೆ ಪವರ್ ಸ್ಟಾರ್ ಪುನೀತ್ ಅಕಾಲಿಕ ಮರಣದಿಂದ ಕನ್ನಡ ಚಿತ್ರರಂಗ ದಿಗ್ಬ್ರಮೆಗೆ ಒಳಗಾಗಿದೆ. ಹೀಗಾಗಿ ಚಿತ್ರತಂಡ ಬಿಡುಗಡೆ ದಿನಾಂಕವನ್ನು ಬದಲಿಸಿದೆ. ನವೆಂಬರ್ 12ರ ಬದಲು 26ಕ್ಕೆ ಸಿನಿಮಾ ಬಿಡುಗಡೆ ಮಾಡುವ ತೀರ್ಮಾನ ಮಾಡಿದೆ.
ಈಗಾಗ್ಲೇ ಸಖತ್ ಟೀಸರ್ ಹಾಗೂ ಸಾಂಗ್ ಝಲಕ್ ಅಂತೂ ಸೋಷಿಯಲ್ ಮೀಡಿಯಾದಲ್ಲಿ ಭರ್ಜರಿ ರೆಸ್ಪಾನ್ಸ್ ಪಡೆದುಕೊಂಡಿದೆ. ಅಂಧನ ಪಾತ್ರದಲ್ಲಿ ಗಣಿ ಲುಕ್.. ಸಿಂಪಲ್ ಸುನಿ ಡೈಲಾಗ್ ಕಿಕ್.. ಜೂಡಾ ಸ್ಯಾಂಡಿ ಮ್ಯೂಸಿಕ್ ಎಲ್ಲವೂ ಚಿತ್ರಪ್ರೇಮಿಗಳಿಗೆ ಸಖತ್ ಇಷ್ಟವಾಗಿದೆ.
ಕಾಮಿಡಿ ಜೊತೆ ರಿಯಾಲಿಟಿ ಶೋ ಸುತ್ತ ಎಣೆಯಲಾಗಿರುವ ಸಖತ್ ಸಿನಿಮಾದಲ್ಲಿ ಗಣೇಶ್ ಗೆ ಜೋಡಿಯಾಗಿ ನಿಶ್ವಿಕಾ ನಾಯ್ಡು ಹಾಗೂ ಸುರಭಿ ನಟಿಸಿದ್ದಾರೆ. ಉಳಿದಂತೆ ರಂಗಾಯಣ ರಘು, ಸಾಧುಕೋಕಿಲ, ಧರ್ಮಣ್ಣ ಕಡೂರು ಸೇರಿದಂತೆ ಮುಂತಾದವರು ಪೋಷಕ ಪಾತ್ರ ನಿಭಾಯಿಸಿದ್ದಾರೆ.
ಕೆವಿಎನ್ ಪ್ರೊಡಕ್ಷನ್ ನಡಿ ಅದ್ಧೂರಿಯಾಗಿ ತಯಾರಾಗಿರುವ ಸಖತ್ ಸಿನಿಮಾಗೆ ನಿಶಾ ವೆಂಕಟ್ ಕೋನಾಂಕಿ ಹಾಗೂ ಸುಪ್ರಿತ್ ಬಂಡವಾಳ ಹೂಡಿದ್ದಾರೆ. ಸದ್ಯ ಸ್ಯಾಂಪಲ್ಸ್ ನಲ್ಲಿ ಕ್ಯೂರಿಯಾಸಿಟಿ ಹುಟ್ಟಿಸಿರುವ ಸಖತ್ ಸಿನಿಮಾ ನವೆಂಬರ್ 26 ರಂದು ಬಿಗ್ ಸ್ಕ್ರೀನ್ ಗೆ ಎಂಟ್ರಿ ಕೊಡಲಿದೆ.
ದೊಡ್ಮನೆ ರಾಜಕುಮಾರನ ಅಕಾಲಿಕ ಅಗಲಿಕೆಗೆ ಸ್ಯಾಂಡಲ್ ವುಡ್ ಸ್ಟಾರ್ಸ್ ಮಾತ್ರವಲ್ಲ ಹೊರರಾಜ್ಯ- ಪರಭಾಷೆಯ ಸ್ಟಾರ್ಸ್ ಗಳು ಕೂಡ ಶೋಕ ವ್ಯಕ್ತಪಡಿಸಿದ್ದಾರೆ. ದೊಡ್ಡ ದೊಡ್ಡ ನಟರುಗಳು ಪುನೀತ್ ನಿವಾಸಕ್ಕೆ ಆಗಮಿಸಿ ಅಪ್ಪು ಕುಟುಂಬವನ್ನು ಸಂತೈಸ್ತಿದ್ದಾರೆ. ನಾವೆಲ್ಲರೂ ನಿಮ್ಮೊಂದಿಗಿದ್ದೇವೆ ಧೈರ್ಯವಾಗಿರಿ ಎನ್ನುವ ಮಾತುಗಳನ್ನಾಡ್ತಿದ್ದಾರೆ. ಅಕ್ಕಿನೇನಿ ನಾಗಚೈತನ್ಯ- ರಾಮ್ ಚರಣ್ ತೇಜಾ- ಶಿವಕಾರ್ತಿಕೇಯನ್- ಪ್ರಭು ಗಣೇಶನ್ ನಂತರ ಖ್ಯಾತ ತಮಿಳು ನಟ ವಿಜಯ್ ಸೇತುಪತಿ ಪವರ್ ಸ್ಟಾರ್ ಮನೆಗೆ ಭೇಟಿಕೊಟ್ಟು ಸಾಂತ್ವನ ಹೇಳಿದ್ದಾರೆ. ಆದರೆ, ಯುವರತ್ನನ ಮನೆಗೆ ಆಗಮಿಸುವ ಹೊತ್ತಲ್ಲಿ ಕೆಂಪೇಗೌಡ ನಿಲ್ದಾಣದಲ್ಲಿ ನಟ ವಿಜಯ್ ಸೇತುಪತಿ ಮೇಲೆ ಹಲ್ಲೆ ನಡೆದಿದೆ ಎನ್ನಲಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಭಾರೀ ವೈರಲ್ ಆಗ್ತಿದೆ.
ಮಾಸ್ಟರ್ ಶೆಫ್ ಶೂಟಿಂಗ್ ಗಾಗಿ ಬೆಂಗಳೂರಿಗೆ ಆಗಮಿಸಿದ್ದ ತಮಿಳು ನಟ ವಿಜಯ್ ಅವರು, ಚಿತ್ರೀಕರಣದ ನಂತರ ನಟಸಾರ್ವಭೌಮನ ಪುಣ್ಯಭೂಮಿಗೆ ಭೇಟಿ ನೀಡಲು ನಿರ್ಧರಿಸಿದ್ದರಂತೆ. ಆದರೆ, ಏರ್ ಪೋರ್ಟ್ ನಲ್ಲಿಯೇ ನಟನ ಮೇಲೆ ಹಲ್ಲೆ ಯತ್ನ ನಡೆದಿದೆ. ವಿಮಾನದಲ್ಲಿ ವಿಜಯ್ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ವಿಚಾರದಲ್ಲಿ ವಿಜಯ್ ಪಿ.ಎ ಮತ್ತು ಸಹಪ್ರಯಾಣಿಕನ ಮಧ್ಯೆ ಕಿರಿಕ್ ಆಗಿತ್ತಂತೆ. ಸಹಪ್ರಯಾಣಿಕ ಪಾನಮತ್ತನಾಗಿದ್ದು, ಸೇತುಪತಿ ಪಿ.ಎ ಜೊತೆ ವಾಗ್ವಾದ ನಡೆಸಿದ್ದಾನೆ ಮಾತ್ರವಲ್ಲ ವಿಮಾನ ನಿಲ್ದಾಣದಲ್ಲಿ ನಡೆದು ಹೋಗುವಾಗ ಹಿಂದೆಯಿಂದ ಬಂದು ಕಾಲಿನಿಂದ ಎಗರೆಗರಿ ಹೊಡೆದಿದ್ದಾನೆ. ಈ ವೇಳೆ ಸೇತುಪತಿಯವರ ಭದ್ರತಾ ಸಿಬ್ಬಂಧಿ ಯುವಕನನ್ಮು ಕೆಂಪೇಗೌಡ ವಿಮಾನ ನಿಲ್ದಾಣದ ಪೊಲೀಸರಿಗೆ ಒಪ್ಪಿಸಿದ್ದಾರೆ.
ಅಚ್ಚರಿ ಅಂದರೆ, ತಮಿಳು ನಟ ವಿಜಯ್ ಅವರು ಹಲ್ಲೆ ಘಟನೆಯನ್ನು ದೊಡ್ದದು ಮಾಡಲಿಕ್ಕೆ ಹೋಗಿಲ್ಲ. ತಾವು ಬಂದ ಕೆಲಸದ ಕಡೆ ಗಮನ ವಹಿಸಿ ಅಲ್ಲಿಂದ ತೆರಳಿದ್ದಾರೆ. ಒಂದು ವೇಳೆ ವಿಷ್ಯ ದೊಡ್ದು ಮಾಡಿದ್ದರೆ ವಿಜಯ್ ಮೇಲಿನ ಹಲ್ಲೆ ಘಟನೆ ಬೇರೆಯದ್ದೇ ಆದ ತಿರುವು ಪಡೆಯುತ್ತಿತ್ತು. ರೊಚ್ಚಿಗೇಳುವ, ಆಕ್ರೋಶಗೊಂಡು ಅಲ್ಲೋಲ- ಕಲ್ಲೋಲ ಮಾಡುವ ಘಟನೆಗಳು ಸಂಭವಿಸುತ್ತಿತ್ತು. ಇದ್ಯಾವುದಕ್ಕೂ ಆಸ್ಪದ ಕೊಡದ ಜನಪ್ರಿಯ ನಟ,ಶೂಟಿಂಗ್ ಮುಗಿಸಿಕೊಂಡು ಅನಂತರ ಅಂಜನಿಪುತ್ರನ ಪುಣ್ಯಭೂಮಿಗೆ ಭೇಟಿಕೊಟ್ಟು ಹೂವಿನ ಹಾರ ಹಾಕಿ ಅಪ್ಪುಗೆ ನಮಿಸಿದ್ದಾರೆ. ಅನಂತರ ಅಪ್ಪು ಮನೆಗೆ ಭೇಟಿಕೊಟ್ಟು ಸಾಂತ್ವನ ಹೇಳಿ ಮಾಧ್ಯಮದ ಜೊತೆ ಮಾತನಾಡಿದ್ದಾರೆ.
ನಾನು ಪುನೀತ್ ರಾಜ್ ಕುಮಾರ್ ಅವರ ಅಭಿಮಾನಿ. ಆದರೆ, ಅವರನ್ನು ಭೇಟಿಯಾಗುವ ಸೌಭಾಗ್ಯ ನನಗೆ ಸಿಕ್ಕಿಲ್ಲ. ಆದರೆ ಕಾಲ್ನಲ್ಲಿ ಒಂದು ಸಲ ಮಾತನಾಡಿದ್ದೆ. ಬಹಳ ಪ್ರೀತಿಯಿಂದ ಮಾತನಾಡಿಸಿದ್ದರು. ನನ್ನ ಸಿನಿಮಾ ನೋಡಿ ಕಾಲ್ ಮಾಡಿದ್ರು, ನನಗೆ ಅವರು ಇಲ್ಲ ಎನ್ನುವುದು ಈ ಕ್ಷಣದವರೆಗೂ ಅರಗಿಸಿಕೊಳ್ಳಲು ಆಗಿಲ್ಲ. ಅವರು ಆಸ್ಪತ್ರೆಗೆ ಸೇರಿದ್ದಾರೆ ಎಂದು ನ್ಯೂಸ್ ನೋಡಿದಾಗ ಅವರು ತುಂಬಾ ಫಿಟ್ ಇದ್ದಾರೆ.. ಖಂಡಿತ ಹುಷಾರಾಗಿ ವಾಪಸ್ ಬರ್ತಾರೆ ಅಂತ ಅಂದು ಕೊಂಡಿದ್ದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಮಾಧ್ಯಮದ ಮುಂದೆ ಹೇಳಿಕೊಂಡರು. ಇಂತಹ ಮನಸ್ಥಿತಿಯ ವ್ಯಕ್ತಿ ನಮ್ಮ ರಾಜವಂಶದ ಕುಡಿಯ ಅಗಲಿಕೆಗೆ ಕಂಬನಿ ಮಿಡಿಯಲು ಬರುತ್ತಿರುವಾಗ, ಅದ್ಯಾರೋ ಪಾನಮತ್ತ ಯುವಕ ಹಲ್ಲೆ ನಡೆಸಿದ್ದು ನಿಜಕ್ಕೂ ಖಂಡನೀಯ
ಬದುಕು ಅನಿರೀಕ್ಷಿತ life is so unpredictable ಅಂತಾರೆ. ಜೀವನ ಯಾರದ್ದೇ ಆಗಿರಲಿ ಹೀಗೆ ಇರುತ್ತೆ, ಹೀಗೆ ನಡೆಯುತ್ತೆ ಎಂಬುದನ್ನು ಊಹೆ ಮಾಡೋದಕ್ಕೆ ಸಾಧ್ಯವಿಲ್ಲ. ಈ ಕಟುಸತ್ಯವನ್ನು ಅರಿತುಕೊಂಡಿದ್ದ ಕನ್ನಡದ ಕೋಟ್ಯಾಧಿಪತಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಯಾವುದಕ್ಕೂ ಇರಲಿ ಅಂತ ತಾವು ಆಸರೆಯಾಗಿದ್ದ ಚಾರಿಟಿಗಳಿಗೆ ಬರೋಬ್ಬರಿ 8 ಕೋಟಿ ಡೆಪಾಸಿಟಿ ಮಾಡಿಟ್ಟು ಹೋಗಿದ್ದಾರೆನ್ನುವ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಯಾಗ್ತಿದೆ. ಈ ಸುದ್ದಿ ಕೇಳಿದ ಅಪ್ಪು ಭಕ್ತರು ನಮ್ಮ ಬಾಸ್ ದೇವರು ಅಂತಿದ್ದಾರೆ.
ದೇವರು ಇದ್ದಾನೋ ಇಲ್ಲವೋ ಗೊತ್ತಿಲ್ಲ ಆದರೆ ದೇವರ ರೂಪದಲ್ಲಿ ದೊಡ್ಮನೆಯ ರಾಜಕುಮಾರ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಇದ್ದರು ಮತ್ತು ಇದ್ದಾರೆ ಎನ್ನುವುದೇ ಅಚ್ಚರಿಯ ಸತ್ಯ. ಬದುಕಿದ್ದಷ್ಟು ದಿನ ಪ್ರೀತಿ ಹಂಚಿದರು, ಬಲಗೈನಲ್ಲಿ ಕೊಟ್ಟಿದ್ದು ಎಡಗೈಗೂ ಗೊತ್ತಾಗದಂತೆ ನೋಡಿಕೊಂಡರು. ದೇಹಿ ಎನ್ನುವ ಮೊದಲೇ ದಾನ ಮಾಡಿದರು. ಅನಾಥಾಶ್ರಮ- ವೃದ್ಧಾಶ್ರಮ- ವಸತಿ ಶಿಕ್ಷಣ- ಗೋಶಾಲೆಗೆ ಆಸರೆಯಾದರು. 1800 ವಿಧ್ಯಾರ್ಥಿಗಳ ವಿಧ್ಯಾಭ್ಯಾಸದ ಹೊಣೆ ಹೊತ್ತರು. ಇಷ್ಟೆಲ್ಲಾ ಮಾಡಿದರೂ ಪ್ರಚಾರ ಬಯಸಲಿಲ್ಲ. ಮಾಧ್ಯಮದ ಮುಂದೆ ಯಾವತ್ತೂ ಹೇಳಿಕೊಳ್ಳಲಿಲ್ಲ.
ಹೌದು, ಅಪ್ಪು ಧ್ವನಿಯಾದ ಹಾಡಿಗೆ ಸಿಗುತ್ತಿದ್ದ ಸಂಭಾವನೆ ಮೈಸೂರಿನ ಶಕ್ತಿಧಾಮ ಚಾರಿಟಿಗೆ ಹೋಗುತ್ತೆ ಎನ್ನುವ ವಿಚಾರ ಗೊತ್ತಿತ್ತೆ ವಿನಃ, 16 ವೃದ್ಧಾಶ್ರಮಗಳಿಗೆ, 19 ಗೋಶಾಲೆಗಳಿಗೆ, 45 ಉಚಿತ ಶಾಲೆಗಳಿಗೆ, ಶಕ್ತಿ ಧಾಮದಂತಹ ಎಷ್ಟೋ ಅನಾಥಾಶ್ರಮಗಳಿಗೆ ಆಸರೆಯಾಗಿದ್ರು ಎನ್ನುವ ಸುದ್ದಿ ಯಾರಿಗೂ ಗೊತ್ತಿರಲಿಲ್ಲ. ಅಪ್ಪು ಅಗಲಿಕೆಯ ನಂತ್ರ ಅದೆಷ್ಟು ಸಮಾಜಮುಖಿ ಕೆಲಸ ಮಾಡ್ತಿದ್ದರು ಎನ್ನುವ ಸತ್ಯ ಬಹಿರಂಗಗೊಂಡಿತು. ಇದೀಗ, ಆಸರೆಯಾಗಿದ್ದ ಸಂಸ್ಥೆಗಳು ಯಾವ ಸಂದರ್ಭದಲ್ಲೂ ಸಂಕಷ್ಟಕ್ಕೆ ಸಿಲುಕಬಾರದು ಎನ್ನುವ ಕಾರಣಕ್ಕೆ ಪುನೀತ್ ಮೊದಲೇ 8 ಕೋಟಿ ಡೆಪಾಸಿಟ್ ಮಾಡಿದ್ದರು ಎನ್ನುವ ವಿಚಾರ ಸಾಮಾಜಿಕ ಜಾಲತಾಣದ ಮೂಲಕ ಬೆಳಕಿಗೆ ಬಂದಿದೆ.
ಒಂದ್ವೇಳೆ ಈ ಸುದ್ದಿ ನಿಜ ಆದರೆ ಕನಿಷ್ಟ ಪಕ್ಷ ಅರ್ಧ ವರ್ಷವಾದರೂ ಚಾರಿಟಿಯವರು ದೊಡ್ಮನೆ ಅರಸು ಆಸರೆಯಾಗಿದ್ದ ಸಂಸ್ಥೆಗಳನ್ಮು ನಿಶ್ಚಿಂತೆಯಿಂದ ನಡೆಸುತ್ತಾರೆ. ರಾಜಕುಮಾರ ಇಲ್ಲ ಎನ್ನುವ ಕೊರಗಿನ ನಡುವೆಯೂ ಆಶ್ರಮದಲ್ಲಿ ನೆಲೆಕಂಡುಕೊಂಡವರು ನೆಮ್ಮದಿಯ ನಿಟ್ಟುಸಿರು ಬಿಡುತ್ತಾರೆ.
ಶಕ್ತಿಧಾಮದಲ್ಲಿರುವ ವಿಧ್ಯಾರ್ಥಿಗಳು ಸೇರಿದಂತೆ ರಾಜ್ಯದ ಒಟ್ಟು 1800 ವಿಧ್ಯಾರ್ಥಿಗಳ ಓದಿನ ಜವಬ್ದಾರಿ ನನಗಿರಲಿ. ಮುಂದಿನ ವರ್ಷದಿಂದ ನಾನು ಅವರೆಲ್ಲರಿಗೂ ಆಸರೆಯಾಗುವುದಾಗಿ ಕಾಲಿವುಡ್ ಸೂಪರ್ ಸ್ಟಾರ್ ವಿಶಾಲ್ ಆಶ್ವಾಸನೆ ಕೊಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಅಪ್ಪು ನಡೆಸುತ್ತಿದ್ದ ಅಷ್ಟು ಅನಾಥಾಶ್ರಮ, ವೃದ್ಧಾಶ್ರಮ- ಉಚಿತ ಶಾಲೆ ಹಾಗೂ ಗೋಶಾಲೆಗಳಿಗೆ ನೆರವಾಗುವುದಕ್ಕೆ ಯಾರಾದರೂ ಮುಂದೆ ಬಂದರೆ ಒಳ್ಳೆಯದಾಗುತ್ತೆ. ವಿಶಾಲ್ ರಂತೆ ಸ್ಟಾರ್ ಗಳು, ರಾಜಕೀಯದವರು ಯಾರೇ ಆಗಲಿ ಮುಂದೆ ಬಂದು ಟೇಕ್ ಓವರ್ ಮಾಡಿಕೊಂಡು ಸಮಾಜ ಸೇವೆ ಮಾಡಲಿ ಎನ್ನುವುದೇ ಸಕಲರ ಬೇಡಿಕೆ
ಉತ್ತರ ಕರ್ನಾಟಕದಲ್ಲಿ ಅಪ್ಪು ಹೆಸರಿನಲ್ಲಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ ಅಥವಾ ಫಿಲಂ ಸಿಟಿ ನಿರ್ಮಾಣ ಮಾಡುವಂತೆ ಸರ್ಕಾರಕ್ಕೆ ಶ್ರೀಗಳಸಲಹೆ
ಅಪ್ಪು ಅವರ ಮನೆಗೆ ಭೇಟಿ ನೀಡಿದ ಕೂಡಲ ಸಂಗಮದ ಶ್ರೀ ಜಯಮೃತ್ಯುಂಜಯ ಶ್ರೀಗಳು, ಅಪ್ಪು ಅವರ ಪತ್ನಿ ಆಶ್ವಿನಿ , ಮಗಳಾದ ದೃತಿ ಹಾಗೂ ವಂದಿತಾ, ವಿನಯ್ ರಾಘವೇಂದ್ರ ರಾಜ್ ಕುಮಾರ್ ಹಾಗೂ ಕುಟುಂಬ ವರ್ಗದವರಿಗೆ ಸಾಂತ್ವಾನ ಹೇಳಿದರು.
ಈ ಸಂಧರ್ಭದಲ್ಲಿ ಮಾಜಿ ಮೇಯರ್ ಪುಟ್ಟರಾಜ್ , ಮಾಜಿ ಸದಸ್ಯ ನಟರಾಜ್ , ಯುವ ನಟ ಅಭಿಲಾಷ , ನಗರ ಅಧ್ಯಕ್ಷ ಶಿವಪುತ್ರ ಮಲ್ಲೆವಾಡ , ಕಾರ್ಯದರ್ಶಿ ವೀರೇಶ ಮೊದಲಾದವರು ಉಪಸ್ತಿತರಿದ್ದರು.
ಗಂಧದಗುಡಿ ಅಂಗಳದಲ್ಲೀಗ ಹೊಸ ಬೆಳವಣಿಗೆಯೊಂದು ನಡೆಯುತ್ತಿದೆ. ಈ ಬೆಳವಣಿಗೆ ಇಡೀ ಕನ್ನಡ ಸಿನಿಪ್ರಿಯರಿಗೆ ಖಂಡಿತ ಖುಷಿ ಕೊಡುತ್ತೆ. ಅಂತಹ ಬೆಳವಣಿಗೆ ಏನು ಅಂತಾ ಬಾಯಮೇಲೆ ಬೆರಳಿಡಬೇಡಿ. ಇಡೀ ಕನ್ನಡ ಅಭಿಮಾನಿದೇವರುಗಳು ಒಗ್ಗಟ್ಟಿನ ಮಂತ್ರ ಜಪಿಸ್ತಿದೆ
ಹೌದು.. ಕನ್ನಡದ ರಾಜರತ್ನ..ಯುವರತ್ನ..ಪವರ್ ಸ್ಟಾರ್ ಪುನೀತ್ ಹಠಾತ್ ಸಾವು ಎಲ್ಲರನ್ನು ದಿಗ್ರ್ಬಮೆಗೆ ತಳ್ಳಿದೆ. ಇರೋ ನಾಲ್ಕೈದು ದಿನ ಎಲ್ಲರು ಖುಷಿಯಿಂದ ಒಗ್ಗಟ್ಟಿನಿಂದ ಇರೋಣ. ಈ ಸ್ಟಾರ್ ವಾರ್, ಫ್ಯಾನ್ ವಾರ್ ಎಲ್ಲ ಪಕ್ಕಕ್ಕಿಟ್ಟು. ಒಗ್ಗಟ್ಟಿನಿಂದ ಜೀವಿಸೋಣ ಅನ್ನೋ ಸಂದೇಶವನ್ನು ಅಭಿಮಾನಿಗಳು ಸಾರಿ ಸಾರಿ ಹೇಳ್ತಿದ್ದಾರೆ.
ನಮ್ಮ ಕನ್ನಡ ಇಂಡಸ್ಟ್ರೀಯ ಎಲ್ಲಾ ಸ್ಟಾರ್ಸ್ ಅಭಿಮಾನಿಗಳು ಒಂದಾಗಿದ್ದಾರೆ. ಸದಾ ಸ್ಟಾರ್ಸ್ ವಾರ್ ಫ್ಯಾನ್ ವಾರ್ ಅಂತಾ ತೋಳೇರಿಸಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ಕಿತ್ತಾಟ ನಡೆಸ್ತಿದ್ದ ಅಭಿಮಾನಿ ದೇವರುಗಳು ಈಗ ನಾವೆಲ್ಲ ಒಂದೇ ಅನ್ನೋ ಮಂತ್ರ ಜಪಿಸ್ತಿದ್ದಾರೆ.
ಕನ್ನಡದ ಹಿರಿಯ ನಟ..ನವರಸ ನಾಯಕ ಜಗ್ಗೇಶ್ ಕೂಡ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. ಎಲ್ಲರ ಸ್ಟಾರ್ಸ್ ಒಂದಾಗಿರುವ ಫೋಟೋವನ್ನು ಹಂಚಿಕೊಂಡು, ಈ ಭಾವ ನನ್ನ ಕಣ್ಣಲ್ಲಿ ಆನಂದಭಾಷ್ಪ ತರಿಸಿತು! ಮಾನ್ಯರೆ ನಾವೆಲ್ಲಾ ಶಾರದೆಯ ಮಕ್ಕಳು ಚಿತ್ರರಂಗ ನಮ್ಮ ಮನೆ! ಕನ್ನಡಿಗರು ನಮ್ಮ ಬಂಧುಗಳು! ನಮ್ಮ ಈಒಗ್ಗಟ್ಟು ರಾಜಣ್ಣನ ಕಾಲದಲ್ಲಿ ಇತ್ತು!ಮತ್ತೆ ಬರೋದಿಲ್ಲವೆ ಎಂಬ ಕೊರಗು ಕಾಡುತ್ತಿತ್ತು!ಈಗ ಇದನ್ನ ನೋಡಿ ಹಾಲುಜೇನು ಸವಿದಂತೆ ಆಯಿತು!ಈಒಗ್ಗಟ್ಟಿನ ಮಂತ್ರ ಯಾವ ಅಡೆತಡೆ ಇಲ್ಲದೆ ಮುಂದುವರಿಯಲಿ ಅಂತ ಟ್ವೀಟ್ ಮಾಡಿದ್ದಾರೆ.
ಅಭಿಮಾನಿಗಳ ಈ ನಡೆಗೆ ಜಗ್ಗೇಶ್ ಸಾಥ್ ಕೊಟ್ಟಿದ್ದಾರೆ. ಅಪ್ಪು, ಕಿಚ್ಚ, ದಚ್ಚು ಗಣಿ, ಶಿವಣ್ಣ ಹೀಗೆ ಕನ್ನಡದ ಎಲ್ಲಾ ಸ್ಟಾರ್ಸ್ ಫ್ಯಾನ್ಸ್, ಫ್ಯಾನ್ಸ್ ವಾರ್ ಬೇಡ್ವೇ ಬೇಡ ಅನ್ನೋ ನಿರ್ಧಾರಕ್ಕೆ ಬಂದಿದ್ದಾರೆ. ಜೇನಿನಗೂಡ ನಾವೆಲ್ಲ ಹೀಗೆ ಇರೋಣ ಅಂತ ಮನವಿ ಮಾಡಿಕೊಳ್ಳುತ್ತಿದ್ದಾರೆ.
ತೆಲುಗು ಖ್ಯಾತ ನಟ ಅಕ್ಕಿನೇನಿ ನಾಗಾರ್ಜುನ್ ಅವರು ಮಂಗಳವಾರ ಪುನೀತ್ ರಾಜಕುಮಾರ್ ಅವರ ನಿವಾಸಕ್ಕೆ ಆಗಮಿಸಿ, ಕುಟುಂಬದವರ ಜೊತೆ ಮಾತನಾಡಿ, ಅವರನ್ನು ಸಂತೈಸುವುದರ ಜೊತೆ ಧೈರ್ಯ ತುಂಬಿದ್ದಾರೆ. ಪುನೀತ್ ಅವರ ಸಹೋದರ ಶಿವರಾಜಕುಮಾರ್, ರಾಘವೇಂದ್ರ ರಾಜಕುಮಾರ್ ಅವರೊಂದಿಗೆ ಮಾತನಾಡಿದ ಬಳಿಕ, ಮಾಧ್ಯಮದವರ ಜೊತೆ ಪುನೀತ್ ಬಗ್ಗೆ ಹೇಳಿದ್ದಿಷ್ಟು. “ನನಗೆ ಪುನೀತ್ ರಾಜಕುಮಾರ್ ಅವರು ಇಲ್ಲ ಎಂಬ ಸುದ್ದಿ ಕೇಳಿ ನಿಜಕ್ಕೂ ಶಾಕ್ ಆಯ್ತು. ಎರಡ್ಮೂರು ದಿನಗಳಿಂದಲೂ ಈ ಸುದ್ದಿ ಕೇಳುತ್ತಲೇ ಇದ್ದೇನೆ. ನಿಜವಾಗಿಯೂ ಈ ಸುದ್ದಿ ನಿಜಾನಾ, ಇದು ನಡೀತಾ, ಇಲ್ಲವೋ ಅನ್ನುವುದನ್ನೂ ಊಹೆ ಮಾಡಿಕೊಳ್ಳೋಕೆ ಆಗುತ್ತಿಲ್ಲ. ಪುನೀತ್ ರಾಜಕುಮಾರ್ ಅವರು ಇಲ್ಲೇ ಎಲ್ಲೋ ಹೋಗಿದ್ದಾರೆ ಎಂಬ ಭಾವನೆ ನನ್ನಲ್ಲಿದೆ. ಒಂದೊಮ್ಮೆ ಯೋಚಿಸಿದರೆ, ಇದೆಲ್ಲಾ ನಡೀತಾ ಅನ್ನೋದೇ ಗೊತ್ತಾಗುತ್ತಿಲ್ಲ.
ಪುನೀತ್ ರಾಜಕುಮಾರ್ ಅವರ ಬಗ್ಗೆ ಯಾರು ಏನೇ ಮಾತಾಡಿದರೂ, ಒಳ್ಳೆಯತನದಿಂದಲೇ ಮಾತಾಡುತ್ತಾರೆ. ಅವರ ಕುರಿತು ಒಳ್ಳೆಯ ಅಭಿಪ್ರಾಯವನ್ನೇ ಹೇಳುತ್ತಾರೆ. ಯಾರನ್ನೇ ಕೇಳಿ ಪುನೀತ್ ಬಗ್ಗೆ ಒಳ್ಳೆಯದನ್ನು ಬಿಟ್ಟರೆ ಬೇರೆ ಏನನ್ನೂ ಹೇಳುವುದಿಲ್ಲ. ಪುನೀತ್ ರಾಜಕುಮಾರ್ ಅವರು ಹಾಗೆ ಹೆಲ್ಪ್ ಮಾಡಿದ್ದಾರೆ, ಈ ರೀತಿ ಕೆಲಸ ಮಾಡಿದ್ದಾರೆ ಪ್ರತಿಭೆಗಳಿಗೆ ಶಿಕ್ಷಣ ಕೊಡಿಸುತ್ತಿದ್ದಾರೆ ಹೀಗೆ ಒಳ್ಳೊಳ್ಳೆಯ ಕೆಲಸ ಮಾಡಿದ್ದಾರೆ ಎಂಬ ಕುರಿತಾಗಿಯೇ ಮಾತುಗಳು ಕೇಳಿಬರುತ್ತಿದೆ.
ಅವರೊಬ್ಬ ಹೀರೋ ಆಗಿಯೂ ಸಾಕಷ್ಟು ಬೇರೆ ಪ್ರತಿಭಾವಂತರಿಗೆ ಬೆನ್ನು ತಟ್ಟುತ್ತಿದ್ದರು. ಪ್ರೋತ್ಸಾಹ ಕೊಡುತ್ತಿದ್ದರು. ಇಂತಹ ಮನುಷ್ಯನನ್ನು ದೇವರು ಬೇಗನೇ ಕರೆದುಕೊಂಡು ಹೋದ. ಈ ಪ್ರಶ್ನೆಗೆ ನಮ್ಮಲ್ಲಿ ಉತ್ತರವಿಲ್ಲ. ಪುನೀತ್ ರಾಜಕುಮಾರ್ ಅವರ ಫ್ಯಾನ್ಸ್ಗೆ, ಕನ್ನಡಿಗರಿಗೆ ಮತ್ತು ಅವರ ಕುಟುಂಬಕ್ಕೆ ದುಃಖ ಭರಿಸೋ ಶಕ್ತಿ ಕೊಡಲಿ ಎಂದು ನಾನು ಆ ದೇವರಲ್ಲಿ ಪ್ರಾರ್ಥಿಸುತ್ತೇನೆ. ಫ್ಯಾನ್ಸ್, ಕನ್ನಡಿರಗರು ಫ್ಯಾಮಿಲಿಗೆ ದುಃಖ ಬರಿಸೋ ಶಕ್ತಿ ನೀಡಲಿ