ಸದ್ಯಕ್ಕೆ ಸಖತ್ ತೆರೆಗೆ ಬರಲ್ಲ! ನವೆಂಬರ್ 26ಕ್ಕೆ ಗಣಿ-ಸುನಿಯ ಸಖತ್ ಮ್ಯಾಜಿಕ್…!

ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಸಿಂಪಲ್ ಸುನಿ ಕಾಂಬೋದ ಸಖತ್ ಸಿನಿಮಾ ರಿಲೀಸ್ ಡೇಟ್ ಪೋಸ್ಟ್ ಪೋನ್ ಆಗಿದೆ. ಇದೇ ನವೆಂಬರ್ 12 ರಿಂದ ತೆರೆ ಮೇಲೆ ಸಖತ್ ಮ್ಯಾಜಿಕ್ ಶುರುವಾಗಬೇಕಿತ್ತು. ಆದರೆ ಪವರ್ ಸ್ಟಾರ್ ಪುನೀತ್ ಅಕಾಲಿಕ ಮರಣದಿಂದ ಕನ್ನಡ ಚಿತ್ರರಂಗ ದಿಗ್ಬ್ರಮೆಗೆ ಒಳಗಾಗಿದೆ. ಹೀಗಾಗಿ ಚಿತ್ರತಂಡ ಬಿಡುಗಡೆ ದಿನಾಂಕವನ್ನು ಬದಲಿಸಿದೆ. ನವೆಂಬರ್ 12ರ ಬದಲು 26ಕ್ಕೆ ಸಿನಿಮಾ ಬಿಡುಗಡೆ ಮಾಡುವ ತೀರ್ಮಾನ ಮಾಡಿದೆ.

ಈಗಾಗ್ಲೇ ಸಖತ್ ಟೀಸರ್ ಹಾಗೂ ಸಾಂಗ್ ಝಲಕ್ ಅಂತೂ ಸೋಷಿಯಲ್ ಮೀಡಿಯಾದಲ್ಲಿ ಭರ್ಜರಿ ರೆಸ್ಪಾನ್ಸ್ ಪಡೆದುಕೊಂಡಿದೆ. ಅಂಧನ‌ ಪಾತ್ರದಲ್ಲಿ ಗಣಿ ಲುಕ್.. ಸಿಂಪಲ್ ಸುನಿ ಡೈಲಾಗ್ ಕಿಕ್.. ಜೂಡಾ ಸ್ಯಾಂಡಿ ಮ್ಯೂಸಿಕ್ ಎಲ್ಲವೂ ಚಿತ್ರಪ್ರೇಮಿಗಳಿಗೆ ಸಖತ್ ಇಷ್ಟವಾಗಿದೆ.

ಕಾಮಿಡಿ ಜೊತೆ ರಿಯಾಲಿಟಿ ಶೋ ಸುತ್ತ ಎಣೆಯಲಾಗಿರುವ ಸಖತ್ ಸಿನಿಮಾದಲ್ಲಿ ಗಣೇಶ್ ಗೆ ಜೋಡಿಯಾಗಿ ನಿಶ್ವಿಕಾ ನಾಯ್ಡು ಹಾಗೂ ಸುರಭಿ ನಟಿಸಿದ್ದಾರೆ. ಉಳಿದಂತೆ ರಂಗಾಯಣ ರಘು, ಸಾಧುಕೋಕಿಲ, ಧರ್ಮಣ್ಣ ಕಡೂರು ಸೇರಿದಂತೆ ಮುಂತಾದವರು ಪೋಷಕ ಪಾತ್ರ ನಿಭಾಯಿಸಿದ್ದಾರೆ.

ಕೆವಿಎನ್ ಪ್ರೊಡಕ್ಷನ್ ನಡಿ ಅದ್ಧೂರಿಯಾಗಿ ತಯಾರಾಗಿರುವ ಸಖತ್ ಸಿನಿಮಾಗೆ ನಿಶಾ ವೆಂಕಟ್ ಕೋನಾಂಕಿ ಹಾಗೂ ಸುಪ್ರಿತ್ ಬಂಡವಾಳ ಹೂಡಿದ್ದಾರೆ. ಸದ್ಯ ಸ್ಯಾಂಪಲ್ಸ್ ನಲ್ಲಿ ಕ್ಯೂರಿಯಾಸಿಟಿ ಹುಟ್ಟಿಸಿರುವ ಸಖತ್ ಸಿನಿಮಾ ನವೆಂಬರ್ 26 ರಂದು ಬಿಗ್ ಸ್ಕ್ರೀನ್ ಗೆ ಎಂಟ್ರಿ ಕೊಡಲಿದೆ.

Related Posts

error: Content is protected !!