“ಅಮೃತ್ ಅಪಾರ್ಟ್ಮಮೆಂಟ್ಸ್” ಚಿತ್ರದ “ಶುರುವಾಗಬೇಕು ಮತ್ತೊಮ್ಮೆ ನಮ್ಮ ಒಲವು” ಎಂಬ ಪ್ರೇಮಗೀತೆಯೊಂದು ರಿಲೀಸ್ ಆಗಿದೆ. ಯೂಟ್ಯೂಬ್ ಚಾನಲ್ ಮೂಲಕ ಈ ಗೀತೆ ಬಿಡುಗಡೆಯಾಗಿದ್ದು, ಎಲ್ಲೆಡೆ ಮೆಚ್ಚುಗೆ ಸಿಕ್ಕಿದೆ.
ಗಂಡ-ಹೆಂಡತಿ ಮಧ್ಯೆ ಮುನಿಸು ಕರಗುವ ಸನ್ನಿವೇಶಕ್ಕೆ ತಕ್ಕಂತೆ, ಇಡೀ ಸಿನೆಮಾದ ಕಥೆಯ ಸಾರಾಂಶವನ್ನು ಹೇಳುವಂತಹ, ಪ್ರೇಕ್ಷನ ಮನ ತಟ್ಟುವಂತಹ ಒಂದು ವಿಶೇಷ ಹಾಡಿನ ಅವಶ್ಯಕತೆ ಇತ್ತು. ಈ ಥರದ ಒಂದು ವಿನೂತನ ಪ್ರೇಮಗೀತೆಗೆ, ಹೂ-ಹೃದಯದ ಪ್ರೇಮಕವಿ ಕೆ.ಕಲ್ಯಾಣರವರೇ ಸೂಕ್ತ ಎಂದು ನಾನು ಅವರ ಬಳಿ ಹೋದೆ ಎಂದು ಚಿತ್ರದ ನಿರ್ದೇಶಕ ಗುರುರಾಜ ಕುಲಕರ್ಣಿ(ನಾಡಗೌಡ) ಚಿತ್ರಗೀತೆಯ ಹಿಂದಿನ ಪ್ರಸಂಗ ಬಿಚ್ಚಿಟ್ಟರು.
ಯುವಪ್ರೇಮಿಗಳ ಪ್ರೀತಿ-ಪ್ರೇಮ-ಮುನಿಸು-ತಲ್ಲಣಗಳ ಭಾವಕ್ಕೆ ತಕ್ಕಂತೆ ಗೀತೆಯ ಸಾಲುಗಳನ್ನು ಕೆ.ಕಲ್ಯಾಣ ಬರೆದಿದ್ದಾರೆ. ಅದಕ್ಕೆ ಪೂರಕವಾಗಿ ಸಂಗೀತ ನಿರ್ದೇಶಕ ಎಸ್.ಡಿ.ಅರವಿಂದ ಕೇಳುಗರನ್ನು ಮೋಡಿ ಮಾಡುವಂತಹ ಸಂಗೀತ ನೀಡಿದ್ದಾರೆ.
ಈ ಯುಗಳ ಹಾಡಿಗೆ ವಾಣಿ ಹರಿಕೃಷ್ಣ ಮತ್ತು ಅಜಯ ವಾರಿಯರ್ ಧ್ವನಿ ನೀಡಿದ್ದಾರೆ. ಬಹಳ ದಿನಗಳ ನಂತರ ಈ ಥರದ ಶುಧ್ಧ ಸಾಹಿತ್ಯಕ್ಕೆ ಧ್ವನಿಯಾಗಿರುವದಕ್ಕೆ ಇಬ್ಬರೂ ಸಂತೋಷ ವ್ಯಕ್ತಪಡಿಸಿದ್ದಾರೆ.
ನವೆಂಬರ ತಿಂಗಳ ಕೊನೆಯ ವಾರದಲ್ಲಿ “ಅಮೃತ ಅಪಾರ್ಟ್ಮೆಂಟ್ಸ್ ಸಿನೆಮಾ ಬಿಡುಗಡೆಯಾಗಲಿದ್ದು, ಚಿತ್ರ ತಂಡ ಪ್ರೇಕ್ಷಕರ ಮನಸ್ಸು ಗೆಲ್ಲುವ ಉತ್ಸಾಹದಲಿದ್ದಾರೆ.
ಗುರುರಾಜ ಕುಲಕರ್ಣಿ (ನಾಡಗೌಡ) ನಿರ್ಮಾಣದ ಜೊತೆ ನಿರ್ದೇಶನವನ್ನೂ ಮಾಡಿದ್ದಾರೆ.