ತೆಲುಗು ಖ್ಯಾತ ನಟ ಅಕ್ಕಿನೇನಿ ನಾಗಾರ್ಜುನ್ ಅವರು ಮಂಗಳವಾರ ಪುನೀತ್ ರಾಜಕುಮಾರ್ ಅವರ ನಿವಾಸಕ್ಕೆ ಆಗಮಿಸಿ, ಕುಟುಂಬದವರ ಜೊತೆ ಮಾತನಾಡಿ, ಅವರನ್ನು ಸಂತೈಸುವುದರ ಜೊತೆ ಧೈರ್ಯ ತುಂಬಿದ್ದಾರೆ. ಪುನೀತ್ ಅವರ ಸಹೋದರ ಶಿವರಾಜಕುಮಾರ್, ರಾಘವೇಂದ್ರ ರಾಜಕುಮಾರ್ ಅವರೊಂದಿಗೆ ಮಾತನಾಡಿದ ಬಳಿಕ, ಮಾಧ್ಯಮದವರ ಜೊತೆ ಪುನೀತ್ ಬಗ್ಗೆ ಹೇಳಿದ್ದಿಷ್ಟು. “ನನಗೆ ಪುನೀತ್ ರಾಜಕುಮಾರ್ ಅವರು ಇಲ್ಲ ಎಂಬ ಸುದ್ದಿ ಕೇಳಿ ನಿಜಕ್ಕೂ ಶಾಕ್ ಆಯ್ತು. ಎರಡ್ಮೂರು ದಿನಗಳಿಂದಲೂ ಈ ಸುದ್ದಿ ಕೇಳುತ್ತಲೇ ಇದ್ದೇನೆ. ನಿಜವಾಗಿಯೂ ಈ ಸುದ್ದಿ ನಿಜಾನಾ, ಇದು ನಡೀತಾ, ಇಲ್ಲವೋ ಅನ್ನುವುದನ್ನೂ ಊಹೆ ಮಾಡಿಕೊಳ್ಳೋಕೆ ಆಗುತ್ತಿಲ್ಲ. ಪುನೀತ್ ರಾಜಕುಮಾರ್ ಅವರು ಇಲ್ಲೇ ಎಲ್ಲೋ ಹೋಗಿದ್ದಾರೆ ಎಂಬ ಭಾವನೆ ನನ್ನಲ್ಲಿದೆ. ಒಂದೊಮ್ಮೆ ಯೋಚಿಸಿದರೆ, ಇದೆಲ್ಲಾ ನಡೀತಾ ಅನ್ನೋದೇ ಗೊತ್ತಾಗುತ್ತಿಲ್ಲ.
ಪುನೀತ್ ರಾಜಕುಮಾರ್ ಅವರ ಬಗ್ಗೆ ಯಾರು ಏನೇ ಮಾತಾಡಿದರೂ, ಒಳ್ಳೆಯತನದಿಂದಲೇ ಮಾತಾಡುತ್ತಾರೆ. ಅವರ ಕುರಿತು ಒಳ್ಳೆಯ ಅಭಿಪ್ರಾಯವನ್ನೇ ಹೇಳುತ್ತಾರೆ. ಯಾರನ್ನೇ ಕೇಳಿ ಪುನೀತ್ ಬಗ್ಗೆ ಒಳ್ಳೆಯದನ್ನು ಬಿಟ್ಟರೆ ಬೇರೆ ಏನನ್ನೂ ಹೇಳುವುದಿಲ್ಲ. ಪುನೀತ್ ರಾಜಕುಮಾರ್ ಅವರು ಹಾಗೆ ಹೆಲ್ಪ್ ಮಾಡಿದ್ದಾರೆ, ಈ ರೀತಿ ಕೆಲಸ ಮಾಡಿದ್ದಾರೆ ಪ್ರತಿಭೆಗಳಿಗೆ ಶಿಕ್ಷಣ ಕೊಡಿಸುತ್ತಿದ್ದಾರೆ ಹೀಗೆ ಒಳ್ಳೊಳ್ಳೆಯ ಕೆಲಸ ಮಾಡಿದ್ದಾರೆ ಎಂಬ ಕುರಿತಾಗಿಯೇ ಮಾತುಗಳು ಕೇಳಿಬರುತ್ತಿದೆ.
ಅವರೊಬ್ಬ ಹೀರೋ ಆಗಿಯೂ ಸಾಕಷ್ಟು ಬೇರೆ ಪ್ರತಿಭಾವಂತರಿಗೆ ಬೆನ್ನು ತಟ್ಟುತ್ತಿದ್ದರು. ಪ್ರೋತ್ಸಾಹ ಕೊಡುತ್ತಿದ್ದರು. ಇಂತಹ ಮನುಷ್ಯನನ್ನು ದೇವರು ಬೇಗನೇ ಕರೆದುಕೊಂಡು ಹೋದ. ಈ ಪ್ರಶ್ನೆಗೆ ನಮ್ಮಲ್ಲಿ ಉತ್ತರವಿಲ್ಲ. ಪುನೀತ್ ರಾಜಕುಮಾರ್ ಅವರ ಫ್ಯಾನ್ಸ್‌ಗೆ, ಕನ್ನಡಿಗರಿಗೆ ಮತ್ತು ಅವರ ಕುಟುಂಬಕ್ಕೆ ದುಃಖ ಭರಿಸೋ ಶಕ್ತಿ ಕೊಡಲಿ ಎಂದು ನಾನು ಆ ದೇವರಲ್ಲಿ ಪ್ರಾರ್ಥಿಸುತ್ತೇನೆ.
ಫ್ಯಾನ್ಸ್, ಕನ್ನಡಿರಗರು ಫ್ಯಾಮಿಲಿಗೆ ದುಃಖ ಬರಿಸೋ ಶಕ್ತಿ ನೀಡಲಿ