Categories
ಸಿನಿ ಸುದ್ದಿ

`ಲಗಾಮ್’ ಹಾಕಲು ಉಪ್ಪಿ ಹಿಂದೆ ಹೊರಟ ಹರಿಪ್ರಿಯಾ !

ಸ್ಯಾಂಡಲ್‌ವುಡ್ ಅಂಗಳದಲ್ಲಿ ಲಗಾಮ್' ಟೈಟಲ್‌ನಿಂದಲೇ ಸಖತ್ ಸೌಂಡ್ ಮಾಡ್ತಿರುವ ಹಾಗೂ ಚರ್ಚೆಗೆ ಗ್ರಾಸವಾಗಿರುವ ಚಿತ್ರ. ರಿಯಲ್‌ಸ್ಟಾರ್ ಉಪೇಂದ್ರ ಬಣ್ಣಹಚ್ಚುತ್ತಿರುವ ಕಾರಣಕ್ಕೆ ಮತ್ತಷ್ಟು ಕ್ಯೂರಿಯಾಸಿಟಿ ಹಾಗೂ ನಿರೀಕ್ಷೆ ಹೆಚ್ಚಿದೆ. ಪ್ರಜಾಕೀಯವನ್ನು ಅಸ್ತಿತ್ವಕ್ಕೆ ತರಲು ಹೊರಟಿರುವ ಬುದ್ದಿವಂತ ಉಪ್ಪಿಯವರು ಯಾವುದಕ್ಕೆ ಲಗಾಮ್ ಹಾಕಲು ಹೊರಟರಪ್ಪ ಎನ್ನುವ ಪ್ರಶ್ನೆ ಉದ್ಭವವಾಗಿದೆ. ರಾಜಕೀಯ ವಿಡಂಭನೆ ಹಾಗೂ ಹಣ ವರ್ಗಾವಣೆ ಕುರಿತಾದ ಚಿತ್ರ ಎನ್ನುವ ಸುದ್ದಿ ಹರಿದಾಡುತ್ತಿದ್ದರೂ ಕೂಡ `ಲಗಾಮ್’ ತಿರುಳನ್ನ ಚಿತ್ರತಂಡ ಗೌಪ್ಯವಾಗಿಡುವ ಪ್ರಯತ್ನ ಪಡುತ್ತಿದೆ. ಇಡೀ ದೇಶವನ್ನೇ ಕಾಡುತ್ತಿರುವ ಸಮಸ್ಯೆಯ ಸುತ್ತ `ಲಗಾಮ್’ ಚಿತ್ರಕಥೆ ಎಣೆಯಲಾಗಿದೆ ಅನ್ನೋ ಸೀಕ್ರೇಟ್ ಚಿತ್ರತಂಡ ಬಿಟ್ಟುಕೊಟ್ಟಿದೆ.

ಪೊರ್ಕಿ-ರಾಮ್-ಪವರ್-ಬೃಂದಾವನ-ಹುಡುಗರು ಸೇರಿದಂತೆ ಹಲವು ಸೂಪರ್‌ಹಿಟ್ ಸಿನಿಮಾಗಳ ಸಾರಥಿ ಕೆ ಮಾದೇಶ್ ಲಗಾಮ್' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಯೂನಿವರ್ಸಲ್ ಸಬ್ಜೆಕ್ಟ್ ವುಳ್ಳ ಕಥೆ ಇದಾಗಿರೋದ್ರಿಂದ ಬಹುಭಾಷೆಯಲ್ಲಿ ತೆರೆಗೆ ತರ‍್ಬೇಕು ಎನ್ನುವ ಪ್ಲ್ಯಾನ್ ಹಾಕಿಕೊಂಡಿದ್ದಾರೆ. ಕಳೆದ ಹತ್ತು ದಿನಗಳಿಂದ ಚಿತ್ರೀಕರಣ ಭರದಿಂದ ಸಾಗ್ತಿದ್ದು, ಸದ್ಯ ಬೆಂಗಳೂರಿನ ಹೆಬ್ಬಾಳದ ಬಳಿ ಇರುವ ವೈಟ್‌ಹೌಸ್‌ನಲ್ಲಿ ಆಕ್ಷನ್ ಸೀಕ್ವೆನ್ಸ್ ಚಿತ್ರೀಕರಣ ನಡೆಯುತ್ತಿದೆ. ಫೇಮಸ್ಸ್ ಫೈಟ್ ಮಾಸ್ಟರ್ ರವಿವರ್ಮಾ ರಿಯಲ್‌ಸ್ಟಾರ್‌ಗೆ ಆಕ್ಷನ್ ಕೊರಿಯಾಗ್ರಫಿ ಮಾಡ್ತಿದ್ದಾರೆ. ಚಿತ್ರದಲ್ಲಿ ಒಟ್ಟು ನಾಲ್ಕು ಆಕ್ಷನ್ ಬ್ಲಾಕ್ ಸೀಕ್ವೆನ್ಸ್ ಗಳಿದ್ದು ರವಿವರ್ಮಾ ಕಂಪೋಸ್ ಮಾಡಲಿದ್ದಾರೆ. ಭರ್ತಿ 35 ದಿನಲಗಾಮ್’ ಚಿತ್ರಕ್ಕೆ ಕಾಲ್‌ಶೀಟ್ ಕೊಟ್ಟಿದ್ದಾರೆ.

ಲಗಾಮ್’ ಹಾಕಲಿಕ್ಕೆ ಹೊರಟಿರುವ ರಿಯಲ್‌ಸ್ಟಾರ್ ಉಪ್ಪಿಗೆ ಹರಿಪ್ರಿಯಾ ಸಾಥ್ ನೀಡಲಿದ್ದಾರೆ. ಮೊದಲ ಭಾರಿಗೆ ಸೂಪರ್‌ಸ್ಟಾರ್ ಉಪ್ಪಿಗೆ ಜೋಡಿಯಾಗ್ತಿರುವ ಹರಿಪ್ರಿಯಾ ಸಖತ್ ಎಕ್ಸೈಟ್ ಆಗಿದ್ದಾರೆ. ಲಗಾಮ್ ಚಿತ್ರದಲ್ಲಿ ನಂದು ಇನ್ವೆಸ್ಟಿಗೇಷನ್ ಜರ್ನಲಿಸ್ಟ್ ಪಾತ್ರ. ನನ್ನ ಸಿನಿಕರಿಯರ್‌ನಲ್ಲಿ ಫಸ್ಟ್ ಟೈಮ್ ಜರ್ನಲಿಸ್ಟ್ ಆಗಿ ಕಾಣಿಸಿಕೊಳ್ತಿದ್ದು ಈ ಪಾತ್ರ ಹೊಸ ಅನುಭವ ನೀಡ್ತಿದೆ ಅಂತಾರೇ. ರಂಗಾಯಣ ರಘು, ಸಾಧುಕೋಕಿಲ, ಅವಿನಾಶ್, ಜಾನಿ ಕುಟ್ಟಪ್ಪ, ಶೋಭರಾಜ್ ಸೇರಿದಂತೆ ಅದ್ದೂರಿ ತಾರಾಬಳಗವೇ ಈ ಚಿತ್ರದಲ್ಲಿದೆ.

ಮೈಸೂರು- ಬೆಂಗಳೂರು ಸುತ್ತಮುತ್ತ ಚಿತ್ರೀಕರಣಕ್ಕೆ ಪ್ಲ್ಯಾನ್ ಮಾಡಿರುವ ಚಿತ್ರತಂಡ ಸಾಂಗ್ ಶೂಟಿಂಗ್‌ಗಾಗಿ ವಿದೇಶಕ್ಕೆ ಹಾರುವ ಪ್ಲ್ಯಾನ್ ಹಾಕಿಕೊಂಡಿದೆ. ಸಾಧುಕೋಕಿಲ ಹಾಗೂ ಅವರ ಪುತ್ರ ಸುರಾಗ್ ಸಂಗೀತ ಸಂಯೋಜನೆ ಚಿತ್ರಕ್ಕಿದೆ. ರಾಜೇಶ್ ಅರಸ್ ಕ್ಯಾಮೆರಾ ಕೈಚಳಕದಲ್ಲಿ `ಲಗಾಮ್’ ಚಿತ್ರೀಕರಣಗೊಳ್ಳುತ್ತಿದೆ. ಎಂ ಆರ್ ಗೌಡ ನಿರ್ಮಾಣದಲ್ಲಿ ಬಹುಕೋಟಿ ವೆಚ್ಚದಲ್ಲಿ ಸಿನಿಮಾ ನಿರ್ಮಾಣಗೊಳ್ಳುತ್ತಿದೆ.ಹೈ ಬಜೆಟ್‌ನಲ್ಲಿ ಅದ್ದೂರಿಯಾಗಿ ನಿರ್ಮಾಣಗೊಳ್ತಿರುವ ಈ ಚಿತ್ರ ಕನ್ನಡದ ಲಗಾನ್ ಆಗಲಿದೆಯಂತೆ. ಎಲ್ಲಾ ಅಂದುಕೊಂಡಂತೆ ತಯ್ಯಾರಾದರೆ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ರಿಲೀಸ್ ಮಾಡ್ಬೇಕು ಅನ್ನೋದು ಚಿತ್ರತಂಡದ ಅಭಿಪ್ರಾಯ.

ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ತುಪ್ಪದ ಬೆಡಗಿ ರಾಗಿಣಿಗೆ ಅಷ್ಟು ದೊಡ್ಡ ಅವಾರ್ಡ್‌ ಹುಡುಕಿ ಬಂದಿದ್ದು ಹೇಗೆ ?

ಚಂದನವನದ ಚೆಂದದ ಚೆಲುವೆ, ತುಪ್ಪದ ಬೆಡಗಿ ಅಂತನೇ ಕರೆಸಿಕೊಳ್ಳುವ ನಟಿ ರಾಗಿಣಿಗೆ 2021 ‘ ಲೆಜೆಂಡ್ ದಾದಾ ಸಾಹೇಬ್ ಫಾಲ್ಕೆ ಅಕಾಡೆಮಿ’ ಅವಾರ್ಡ್‌ ಲಭಿಸಿದೆ. ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ರಾಗಿಣಿ ಮಾಡಿಕೊಂಡು ಬಂದಂತಹ ಸಮಾಜಮುಖಿ‌ ಕಾರ್ಯವನ್ನು ಗುರುತಿಸಿದ ಮುಂಬೈ ಮೂಲದ ದಾದಾ ಸಾಹೇಬ್‌ ಫಾಲ್ಕೆ ಅಕಾಡೆಮಿಯು ನಟಿ ರಾಗಿಣಿ ಅವರಿಗೆ ಈ ಪ್ರಶಸ್ತಿ ನೀಡಿ ಗೌರವಿಸಿದೆ. ಅಂದ ಹಾಗೆ, ದಾದಾ ಸಾಹೇಬ್‌ ಫಾಲ್ಕೆ ಅಕಾಡೆಮಿಯು ಲೆಜೆಂಡ್‌ ದಾದಾ ಸಾಹೇಬ್‌ ಫಾಲ್ಕೆ ಅವರ ಮೊಮ್ಮಗನ ನೇತೃತ್ವದ ಸಂಸ್ಥೆ.
ಸೌತ್ ಸಿನಿಮಾ‌ ಇಂಡಸ್ಟ್ರಿಯಲ್ಲೇ ಈ ಅವಾರ್ಡ್ ನ ಪಡೆದಿರುವುದು ಒನ್ ಅಂಡ್ ಓನ್ಲೀ ರಾಗಿಣಿ ಮಾತ್ರ. ಅದು ಸಮಾಜಮುಖಿ ಕೆಲಸಕ್ಕೆ ಎಂಬುದು ಗಮನಾರ್ಹದ ಸಂಗತಿ. ನಟಿ ರಾಗಿಣಿ ಸಮಾಜಮುಖಿ‌ ಕೆಲಸಗಳಲ್ಲಿ ಮೊದಲಿನಿಂದಲೂ ತೊಡಗಿಸಿಕೊಂಡಿದ್ದಾರೆ. ಅದರಲ್ಲೂ, ಕೊರೊನಾದಂತಹ ಸಂಕಷ್ಟದ ಸಮಯದಲ್ಲಿ ರಾಗಿಣಿಯ ನೆರವಿನ ಹಸ್ತದ ಕಾರ್ಯ ಶ್ಲಾಘನೀಯವಾದದ್ದು.‌

ಹೌದು, ಮನೆಯಿಂದ ಕಾಲ್ತೆಗೆದರೆ ಎಲ್ಲಿ‌‌ ಕೊರೊನಾ ಅಟ್ಯಾಕ್ ಆಗುತ್ತೋ ಎಂಬ ಭಯದಲ್ಲಿ ಬದುಕಿದ್ದಂತಹ ಸಂದರ್ಭದಲ್ಲಿ ನಟಿ ರಾಗಿಣಿ ಬೀದಿಗಿಳಿದರು. ನಿರಾಶ್ರಿತರು, ನಿರ್ಗತಿಕರು,
ಅಸಹಾಯಕರು, ಬಡವರು ಸೇರಿದಂತೆ ಯಾರೆಲ್ಲಾ ಕೊರೊನಾ ಹೊಡೆತಕ್ಕೆ ಸಿಲುಕಿ ಒದ್ದಾಡುತ್ತಿದ್ದರೋ, ಯಾರೆಲ್ಲಾ ಒಪ್ಪೊತ್ತಿನ‌ ಊಟಕ್ಕಿಲ್ಲದೇ ಅಲೆಯುತ್ತಿದ್ದರೋ ಅವರೆಲ್ಲರಿಗೂ ತಮ್ಮ ಶಕ್ತಿ ಮೀರಿ ಸಹಾಯ ಹಸ್ತ ಚಾಚಿದರು. ಹಸಿವು ನೀಗಿಸುವ ಕೆಲಸವನ್ನು ನಿತ್ಯನಿರಂತರವಾಗಿ ಮಾಡಿಕೊಂಡು ಬಂದರು.

ಈ ನಡುವೆ ರಾಗಿಣಿ ಜೈಲಿಗೆ ಹೋಗಬೇಕಾದ ಸಂದರ್ಭ ಬಂತು. ಕಾನೂನಿಗೆ ತಲೆಬಾಗಿ ತಿಂಗಳುಗಟ್ಟಲೇ ಜೈಲುವಾಸ ಅನುಭವಿಸಿ ಬಂದ ರಾಗಿಣಿ ‘ ಕರ್ಮ ರಿಟರ್ನ್ ‘ ಇದನ್ನು ಯಾರೂ ತಪ್ಪಿಸೋದಕ್ಕೆ ಆಗಲ್ಲ. ನನ್ನನ್ನ ಸಂಕಷ್ಟಕ್ಕೆ ಸಿಲುಕಿಸಿ ಮುಸಿಮುಸಿ ನಕ್ಕವರು ಒಂದಲ್ಲ ಒಂದು ಅನುಭವಿಸ್ತಾರೆ ನಾನು ಅದನ್ನು ಕಣ್ಣಾರೇ ನೋಡ್ತೀನಿ ಅಂತ ಸವಾಲ್ ಎಸೆದುಕೊಂಡರು. ಮನೆಯಲ್ಲಿ ಪೂಜೆ ಹೋಮ ಹವನ ಮಾಡಿಸಿ ತಂದೆ ತಾಯಿ ಜೊತೆ ಖುಷಿಖುಷಿಯಾಗಿ ಜೀವನ ಕಳೆಯುತ್ತಿದ್ದರು ಈ‌ ನಡುವೆ ಕೊರೊನಾ ಎರಡನೇ ಅಲೆ ಶುರುವಾಯ್ತು. ಈ‌ಟೈಮ್ ನಲ್ಲಿ ರಾಗಿಣಿ‌ ಊರ ಉಸಾಬರಿ ನನಗ್ಯಾಕೆ ಬಿಡು, ನಾನೆಷ್ಟು ಸಹಾಯ ಮಾಡಿದರೂ ನನಗೆ ಒಳ್ಳೆದಾಗ್ತಿಲ್ಲ ಅಂತ ಸುಮ್ಮನೇ ಆಗಬಹುದಿತ್ತು. ಆದರೆ, ರಾಗಿಣಿ ಆ ಥರ ಯೋಚನೆ ಮಾಡಲಿಲ್ಲ ಬದಲಾಗಿ ಮತ್ತೆ ಫೀಲ್ಡಿಗಿಳಿದರು. ಹಗಲು ರಾತ್ರಿ ಎನ್ನದೇ ಸಂಕಷ್ಟಧಾರಿಗಳ ನೆರವಿಗೆ ಧಾವಿಸಿದರು. ದೇಹಿ ಎನ್ನುವ ಮೊದಲೇ ದಾನ ಮಾಡುತ್ತಾ, ಹಲವರ ಕಣ್ಣೀರು ಒರೆಸುತ್ತಾ, ಅದೆಷ್ಟೋ ಜನರ ಕಣ್ಣಲ್ಲಿ ದೇವತೆಯಾದರು.

ರಾಗಿಣಿಯ ಮಾನವೀಯ ಮುಖ ಹಾಗೂ ಸಮಾಜಮುಖಿ ಕೆಲಸವನ್ನು ಸೂಕ್ಷವಾಗಿ ಅವಲೋಕಿಸಿದ ದಾದಾ ಸಾಹೇಬ್ ಫಾಲ್ಕೆಯವರ ಮೊಮ್ಮಗನ ನೇತೃತ್ವದ ಸಂಸ್ಥೆ ನಟಿ ರಾಗಿಣಿಗೆ ‘ ಲೆಜೆಂಡ್ ದಾದಾ ಸಾಹೇಬ್ ಫಾಲ್ಕೆ ಅಕಾಡೆಮಿ ಅವಾರ್ಡ್ ನೀಡಿ ಗೌರವಿಸಿದ್ದಾರೆ. ಪ್ರತಿಷ್ಠಿತ ಸಂಸ್ಥೆಯಿಂದ ಅವಾರ್ಡ್ ಗಿಟ್ಟಿಸಿಕೊಂಡಿರುವ ರಾಗಿಣಿ ಸಂತೋಷದ ಅಲೆಯಲ್ಲಿ ತೇಲುತ್ತಾ ಹೆಮ್ಮೆ ಪಡುತ್ತಿದ್ದಾರೆ. ಈ ಅವಾರ್ಡ್ ನನಗೆ ಮಾತ್ರವಲ್ಲ ನನ್ನೊಟ್ಟಿಗೆ ಹಗಲು ರಾತ್ರಿ ಎನ್ನದೇ ಸಮಾಜಮುಖಿ ಕೆಲಸ ಮಾಡಲಿಕ್ಕೆ ಶ್ರಮಿಸಿದ ತಂಡಕ್ಕೆ ಅರ್ಪಿಸುವುದಾಗಿ ಹೇಳಿಕೊಂಡಿದ್ದಾರೆ. ಇದೇ, ರೀತಿ ಸೊಸೈಟಿಯಲ್ಲಿ ತಮ್ಮ ಸೇವೆಯನ್ನು ಮುಂದುವರೆಸಿಕೊಂಡು ಹೋಗುವುದಕ್ಕೆ ನಿರ್ಧರಿಸಿದ್ದಾರೆ. ಎನಿವೇ ನಟಿ ರಾಗಿಣಿಯ ಸಮಾಜಸೇವೆ ಹೀಗೆ ನಿತ್ಯನಿರಂತರವಾಗಿ ನಡೆಯಲಿ, ಪ್ರತಿಷ್ಠಿತ ಹೆಮ್ಮೆಯ ಪ್ರಶಸ್ತಿಗಳು ರಾಗಿಣಿ ಮುಡಿಗೇರಲಿ. ಗಿಣಿ ಕಂಡ ಎಲ್ಲಾಕನಸು‌ ನನಸಾಗಲಿ ಅಲ್ಲವೇ.

Categories
ಸಿನಿ ಸುದ್ದಿ

ನಮ್ಮ ತಂದೆಯ ಸಾವನ್ನು ರಾಜಕೀಯ ಮಾಡಬೇಡಿ-ಹೆಚ್.ಡಿ ಕುಮಾರಸ್ವಾಮಿ ವಿರುದ್ಧ ಅಂಬರೀಶ್ ಪುತ್ರ ಅಭಿಷೇಕ್ ಆಕ್ರೋಶ

ಮಂಡ್ಯ ದಲ್ಲಿನ ವಾಕ್ಸಮರದಲ್ಲೀಗ ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ಜೂನಿಯರ್ ರೆಬೆಲ್ ಸ್ಟಾರ್ ಅಭಿಷೇಕ ಅಂಬರೀಶ್ ಕೂಡ ಧ್ವನಿ ಮೊಳಗಿಸಿದ್ದಾರೆ.’ರಾಜಕೀಯವಾಗಿ ಏನು ಬೇಕಾದರೂ ವಿರೋಧ ಮಾಡಿ, ಆದರೆ ವೈಯಕ್ತಿಕ ವಿಚಾರಗಳಿಗೆ ಬರಬೇಡಿ. ನಮ್ಮ ತಂದೆಯ ಸಾವನ್ನು ರಾಜಕೀಯ ಮಾಡಬೇಡಿ,ಮನಸ್ಸಿಗೆ ತುಂಬಾ ನೋವಾಗುತ್ತದೆ ‘ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರ ಸ್ವಾಮಿ ಅವರ ವಿರುದ್ಧ ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್ ಕಿಡಿಕಾರಿದ್ದಾರೆ.

ಅಂದಿನ ಸಿಎಂ ಆಗಿದ್ದಾಗ ನೀವು ಏನ್ ಹೇಳಿದ್ರಿ ಅಂತ ಒಮ್ಮೆ ನೆನಪಿಸಿಕೊಳ್ಳಿ. ನಿಮ್ಮ ಬಳಿಯೇ ದಾಖಲೆ ಇದೆ. ಟೈಮ್ ವ್ಯರ್ಥ ಮಾಡುವುದು ಬೇಡ. ಮನೆಯಲ್ಲಿ ಯಾರನ್ನಾದ್ರೂ ಕಳೆದುಕೊಂಡಾಗ ಮಾತಾಡುವ ಪರಿಸ್ಥಿತಿಯಲ್ಲಿ ಇರುತ್ತಾರಾ ?ಅವತ್ತು ನಮ್ಮಮ್ಮ ಗಂಡನ ಕಳೆದುಕೊಂಡು ನೋವಲ್ಲಿದ್ದರು. ಅಂದು ಅಮ್ಮ ಏನೂ ಮಾತನಾಡಿಲ್ಲ. ಆದ್ರೆ ನೀವು ಸಾವನ್ನು ರಾಜಕೀಯ ಮಾಡಬೇಡಿ. ನೋವಾಗುತ್ತದೆ ಎಂದು ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಎಚ್ ಡಿಕೆ ವಿರುದ್ಧ ತೀವ್ರ ಆಕ್ರೋಶ ಹೊರ ಹಾಕಿದರು.
ಅಕ್ರಮ ಗಣಿಗಾರಿಕೆ ಧ್ವನಿ ಎತ್ತಿದ್ದು ನಟೋರಿಯಸ್ಸಾ? ಅಕ್ರಮದ ಬಗ್ಗೆ ಮಾತಾಡೋದು ನಟೋರಿಯಸ್ ಎನ್ನುವುದಾದರೆ, ಹೌದು ನಾವು ನಟೋರಿಸ್ ಅಂತಲೇ ಹೇಳಬೇಕಾಗುತ್ತದೆ. ಯಾರು ನಿಮ್ಮನ್ನು ವಿರೋಧಿಸುತ್ತಿಲ್ಲ ಅಂದ್ರೆ ನೀವು ಏನೂ ಮಾಡಿಲ್ಲ ಅಂತಲೇ ಅರ್ಥ. ವಿಲನ್ ಇಲ್ಲದೆ ಹೀರೋ ಸಾಧ್ಯವೇ ?ನಮ್ಮಮ್ಮ ಏನಾದರೂ ಮಾಡ್ತೀನಿ ಅಂತ ಮನಸ್ಸು ಮಾಡಿದರೆ ಕೊನೆಯವರೆಗೂ ಬಿಡುವುದಿಲ್ಲ. ಚುನಾವಣೆಗೆ ನಿಂತರು. ಚುನಾವಣೆಯನ್ನು ಮಾಡಿದರು. ಛಲದಿಂದ ಕೆಲಸ ಮಾಡಿದರು. ಗೆದ್ದರು. ಜನ ಅವರಿಗೆ ಆಶೀರ್ವಾದ ಮಾಡಿದರು. ಅದು ನಿಮಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಸಂಸದರು ಒಳ್ಳೆಯ ಕೆಲಸ ಮಾಡ್ತಿದ್ದಾರೆ ಅಂತ ಜನ ಹೇಳುತ್ತಿದ್ದಾರೆ. ಆದರೆ ಇವರಿಗೆ ಜನರ ಕೆಲಸ ಬೇಕಿಲ್ಲ, ಅವರ ರಾಜಕೀಯ ನಡೀಬೇಕು ಅದಕ್ಕಾಗಿಯೇವ ಹೀಗೆಲ್ಲ ಮಾಡುತ್ತಿದ್ದಾರೆಂದು ಗುಡುಗಿದರು.

Categories
ಸಿನಿ ಸುದ್ದಿ

ಅಂಬರೀಶ್ ಸಾವಿನಲ್ಲೂ ರಾಜಕೀಯ ಮಾಡಿದವರು ನೀವು- ಮಾಜಿ ಸಿಎಂ ಎಚ್ಡಿಕೆ ವಿರುದ್ಧ ರಾಕ್ ಲೈನ್ ವೆಂಕಟೇಶ್ ಗುಡುಗು

ಮಂಡ್ಯ ರಾಜಕಾರಣ ಕುದಿಯುವ ಎಣ್ಣೆಯಲ್ಲಿ ಬೇಯುತ್ತಿದೆ. ಕೆಆರ್ ಎಸ್ ಅಣೆಕಟ್ಟೆ, ಮೈ ಶುಗರ್ಸ್ ಕಾರ್ಖಾನೆಯ ಜತೆಗೆ ಗಣಿಗಾರಿಕೆ ಕುರಿತ ವಿವಾದದಲ್ಲಿ ಸಂಸದೆ ಸುಮಲತಾ ಹಾಗೂ ಮಾಜಿ ಸಿಎಂ ಎಚ್.ಡಿ.ಕುಮಾರ ಸ್ವಾಮಿ ಅವರ ನಡುವೆ ಆರೋಪ- ಪ್ರತ್ಯಾರೋಪದ ದೊಡ್ಡ ಯುದ್ಧವೇ ಶುರುವಾಗಿದೆ. ರಾಜಕೀಯದ ಸಮರದ ನಡುವೆ ವೈಯಕ್ತಿಕ ಕಿತ್ತಾಟಗಳು ನಡೆಯುತ್ತಿವೆ. ಸುಮಲತಾ ಪರವಾಗಿ ಈಗ ಸಿನಿಮಾ ಮಂದಿಯೂ ಕೂಡ ಈಗ ಧ್ವನಿ ಎತ್ತಿದ್ದಾರೆ. ಸುಮಲತಾ ವಿರುದ್ಧ ಮಾಜಿ ಸಿಎಂ ಎಚ್.ಡಿ. ಕುಮಾರ ಸ್ವಾಮಿ ನೀಡುತ್ತಿರುವ ಹೇಳಿಕೆಗಳನ್ನು ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ಹಿರಿಯ ನಟ ದೊಡ್ಡಣ್ಣ ತೀವ್ರವಾಗಿ ಖಂಡಿಸಿದ್ದು, ಸಂಸದೆ ಸುಮಲತಾ ಅವರಿಗೆ ತಾವು ಮಾತ್ರವಲ್ಲ, ಅಂಬರೀಶ್ ಅಭಿಮಾನಿಗಳು ಕೂಡ ಇದ್ದಾರೆ. ಅಷ್ಟು ಸುಲಭವಾಗಿ ಅಂಬರೀಶ್ ಕುಟುಂಬಕ್ಕೆ ಅವಮಾನ ಆಗಲು ಬಿಡೋದಿಲ್ಲ ಎಂದು ಗುಡುಗಿದ್ದಾರೆ.

‘ಸಿಕ್ಕಿರೋ ಗೌರವವನ್ನು ಹಾಳು ಮಾಡಿಕೊಳ್ಳಬೇಡಿ, ಅಂಬರೀಶ್ ಅವರು ಏನ್ ಅನ್ನೋದನ್ನು ನಾವು ಒತ್ತಿ ಹೇಳಬೇಕಿಲ್ಲ. ಆ ತರಹದ ಮನುಷ್ಯ ಯಾವನೂ ಹುಟ್ಟಿಲ್ಲ. ಅಂಬರೀಶ್ ಇದ್ದಾಗ ಜಿರೋ… ಜಿರೋ ಪಾಯಿಂಟ್ ವ್ಯಾಲೂಮ್ ಇಟ್ಕೊಂಡ್ ಮಾತನಾಡ್ತಾ ಇದ್ರಲ್ವಾ ? ಸತ್ತಾಗ ಒಬ್ಬ ವ್ಯಕ್ತಿ ಬಗ್ಗೆ ಯಾಕೆ ಮಾತನಾಡಿಸ್ತಿದ್ದೀರಿ, ಇದೆಲ್ಲ ಜನಗಳಿಗೆ ಗೊತ್ತಾಗಲ್ವಾ, ಇನ್ನು ಮೇಲಾದರೂ ಇದನ್ನು ಸರಿಪಡಿಸಿಕೊಳ್ಳಿ. ಅಂಬರೀಶ್ ಅವರ ಸ್ಮಾರಕ ನಿರ್ಮಾಣದಲ್ಲಿ ನನ್ನ ದುಡಿಮೆಯ ಪಾಲಿದೆ ಅಂತ ಹೇಳಿದ್ದಾರಂತೆ. ಸ್ಮಾರಕ ನಿರ್ಮಾಣದ ವಿಚಾರದಲ್ಲಿ ಏನೆಲ್ಲ ಆಯ್ತು ಅಂತ ನಮ್ಗೇನು ಗೊತ್ತಿಲ್ವಾ, ಅವರು(ಎಚ್.ಡಿ.ಕೆ) ಸಿಎಂ ಆಗಿದ್ದಾಗ ಸ್ಮಾರಕ ನಿರ್ಮಾಣದ ಕೆಲಸಕ್ಕೆ ಸಂಬಂಧಿಸಿದಂತೆ ದೊಡ್ಡಣ್ಣ ಫೈಲ್ ಹಿಡ್ಕೊಂಡ್ ವಿಧಾನ ಸೌಧಕ್ಕೆ ಹೋದಾಗ ಏನಾಯ್ತು ಅಂತ ಸತ್ಯ ಈಗ ಹೇಳಬೇಕಿದೆ. ಏರಡೂವರೆ ತಾಸು ಕಾಯಿಸಿದ್ರಿ. ಅಷ್ಟಾಗಿಯೂ ಫೈಲ್ ಕೊಡೋದಿಕ್ಕೆ ಅಂತ ದೊಡ್ಡಣ್ಣ ಹೋದಾಗ, ಫೈಲ್ ಬಿಸಾಕಿ ದುರಂಹಕಾರ ತೋರಿಸಿದ್ರಿ. ಇದೆಲ್ಲ ಗೊತ್ತಿಲ್ವಾ? ರಾಜ್ಯದ ಜನಕ್ಕೆ ಹೇಳಬೇಕಾಗುತ್ತದೆ ಎಂದು ರಾಕ್ ಲೈನ್ ವೆಂಕಟೇಶ್ ಮಾಜಿ ಸಿಎಂ ಎಚ್ ಡಿಕೆ ವಿರುದ್ಧ ಪರೋಕ್ಷವಾಗಿ ಗುಡುಗಿದರು.

ಅಂಬರೀಶ್ ಎನ್ ಮಾಡಿದ್ರು ಅಂತ ಸ್ಮಾರಕ ಮಾಡ್ಬೇಕು ಅಂತ ಕೇಳಿದ್ರಂತೆ. ಅಂಬರೀಶ್ ಏನು ಅಂತ ನಿಮ್ಗೆ ಗೋತ್ತಿಲ್ವಾ ? ಅಂಬರೀಶ್ ಅವರಿಂದ ನಿಮಗೆ ಏನ್ ಆಯ್ತು ಅಂತ ಎಲ್ಲರಿಗೂ ಗೊತ್ತಿದೆ. ಅಂಬರೀಶ್ ಸಾವಿನಲ್ಲೂ ರಾಜಕಾರಣ ಮಾಡಿದವರು ನೀವು. ನಿವೇನು ಅಂತ ನಮ್ಗೆನೂ ಗೊತ್ತಿಲ್ಬಾ ? ಆ ಮನೆಗೆ ಇದ್ದಂತಹ ಸ್ನೇಹಕ್ಕಾದರೂ ನನ್ನನ್ನು ಕರೆದು ಮಾತನಾಡಬಹುದೀತ್ತು. ವೆಂಕಟೇಶ್ , ಮಗ ಚುನಾವಣೆಗೆ ನಿಲ್ತಿದ್ದಾರೆ. ಸುಮಲತಾ ಅವರಿಗೆ ಒಂದು ಮಾತು ಹೇಳಿ ಅಂದಿದ್ರೆ, ನಾನೇ ಮುಂದೆ ನಿಂತು ಅವರನ್ನು ಚುನಾವಣೆಯಿಂದ ಆಚೆ ಇರಿಸುತ್ತಿದ್ದೆ. ಆದ್ರೆ ನೀವು ಮಾಡಿದ್ದೇ ಬೇರೆ. ಅದರ ಪರಿಣಾಮ ಏನಾಯ್ತು, ಮಂಡ್ಯ ಜನರ ಒತ್ತಡಕ್ಕೆ ಅವರು ಚುನಾವಣೆಗೆ ನಿಂತ್ರು. ಕೊನೆಗೆ ಸೋಲು ನಿಮ್ಮದೇ ಆಯ್ತು. ಅದರಿಂದಾದ್ರು ಪಾಠ ಕಲಿಬೇಕಿದೆ ಎಂದು ಎಚ್ಚರಿಕೆ ನೀಡಿದರು.

ಹಿರಿಯ ನಟ ದೊಡ್ಡಣ್ಣ ಕೂಡ ಸುಮಲತಾ ಅವರಿಗೆ ಬೆಂಬಲ ನೀಡಿದ್ದಾರೆ. ಸುಮಲತಾ ಒಬ್ಬಂಟಿ ಅಲ್ಲ, ನಾವು ಇದ್ದೇವೆ ಎಂದು ಗುಡುಗಿದ್ದಾರೆ. ‘ ಸಿನಿಮಾ ಮಂದಿ ಅಂದ್ರೆ ನಿಮಗ್ಯಾಕೋ ಅಷ್ಟು ಅಲಕ್ಷ್ಯ? ನೀವು ಕೂಡ ಸಿನಿಮಾ ದಿಂದಲೇ ಬಂದವರು. ಮೊದಲು ವಿತರಕರಾಗಿ, ನಿರ್ಮಾಪಕರಾಗಿ ಇಲ್ಲಿ ಇದ್ದವರು. ಹಾಗಂತ ನಾನು ಭಾವಿಸಿಕೊಂಡಿದ್ದೇನೆ. ಇದು ತಪ್ಪೋ ಸರಿಯೋ ಗೊತ್ತಿಲ್ಲ. ಆದರೆ ನೀವು ಸಿನಿಮಾ ಮಂದಿಯನ್ನು ಇಷ್ಟೇಕೆ ಕಡೆಗಣಿಸುತ್ತಿದ್ದೀರಿ? ಸ್ಮಾರಕ ನಿರ್ಮಾಣದ ವಿಚಾರದಲ್ಲಿ ನಾನು ಅವತ್ತು ವಿಧಾನ ಸೌಧಕ್ಕೆ ಹೋದಾಗ, ನಾನು ಎರಡೂವರೆ ತಾಸು ಕಾದಿದ್ದೇನೆ. ಕೊನೆಗೂ ಭೇಟಿ ಮಾಡಿದಾಗ ಅದ್ಯಕೋ ನನ್ನನ್ನು ಅಸಡ್ಡೆಯಿಂದ ನೋಡಿ, ಕಳುಹಿಸಿದ್ರಿ. ಇದೆಲ್ಲವನ್ನು ಈಗ ರಾಜ್ಯದ ಜನತೆಗೆ ಹೇಳಬೇಕಾಗುತ್ತದೆ. ಸ್ಮಾರಕ ನಿರ್ಮಾಣ ನೀವು ಮಾಡಿದ್ದಲ್ಲ, ಈಗೇನಿದೆ ರಾಜಾಹುಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಅವರೇ ಸ್ಮಾರಕ ನಿರ್ಮಾಣ ಮಾಡಿದ್ದು ಎಂದು ನಟ ದೊಡ್ಡಣ್ಣ , ಎಚ್ ಡಿಕೆ ವಿರುದ್ಧ ಹರಿಹಾಯ್ದರು.
……………………….

Categories
ಸಿನಿ ಸುದ್ದಿ

ನಟ ದುನಿಯಾ ವಿಜಯ್ ತಾಯಿ ನಾರಾಯಣಮ್ಮ ನಿಧನ

ನಟ ದುನಿಯಾ ವಿಜಯ್‌ ಅವರ ತಾಯಿ ನಾರಾಯಣಮ್ಮ ನಿಧನರಾದರು. ಅನಾರೋಗ್ಯದಲ್ಲಿ ಅವರಿಗೆ ಕಳೆದ ೨೦ ದಿನಗಳಿಂದಲೂ ಮನೆಯಲ್ಲೇ ಚಿಕಿತ್ಸೆ ಕೊಡಿಸುತ್ತಿದ್ದರು ನಟ ದುನಿಯಾ ವಿಜಯ್.‌ ಬ್ರೈನ್‌ ಸ್ಟ್ರೋಕ್‌ ಆದ ಕಾರಣ ನಾರಾಯಣಮ್ಮ ತೀವ್ರ ಅನಾರೋಗ್ಯಕ್ಕೆ ಒಳಾಗಿದ್ದರು. ದಿನ ನಿತ್ಯವೂ ಅವರಿಗೆ ಮನೆಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಗುರುವಾರ ಚಿಕಿತ್ಸೆ ಫಲಿಸದೆ ನಾರಾಯಣಮ್ಮ ನಿಧನರಾಗಿದ್ದು, ಈ ವಿಚಾರವನ್ನು ನಟ ದುನಿಯಾ ವಿಜಯ್‌ ಅವರೇ ಖಚಿತ ಪಡಿಸಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಕೊವಿಡ್ ನಿಂದ ಚೇತರಿಸಿಕೊಂಡಿದ್ದ ದುನಿಯಾ ವಿಜಯ್ ತಾಯಿ ನಾರಾಯಣಮ್ಮ, ಇನ್ನೇನು ಸಮಸ್ಯೆ ಬಗೆಹರಿಯಿತು ಎನ್ನುತ್ತಿರುವಾಗಲೇ ನಿಧನರಾಗಿದ್ದು, ನಟ ವಿಜಯ್‌ ಅವರನ್ನು ತೀವ್ರ ದುಃಖಕ್ಕೆ ತಳ್ಳಿದೆ. ಆಸ್ಪತ್ರೆಗೆ ಹೋಗದೆ ಮನೆಯಲ್ಲೇ ಚಿಕಿತ್ಸೆ ಕೊಡಿಸುತ್ತಿದ್ದಕ್ಕೂ ಕಾರಣ ಇದೆ ಅಂತ ದುನಿಯಾ ವಿಜಯ್‌ ಹೇಳಿದ್ದರು. ʼ ಅಮ್ಮನಿಗೆ ಆಸ್ಪತ್ರೆಗೆ ಹೋಗಲು ಇಷ್ಟವಿರಲಿಲ್ಲ.

ಹೀಗಾಗಿ ಮನೆಯಲ್ಲೇ ಚಿಕಿತ್ಸೆಗೆ ವ್ಯವಸ್ಥೆ ಮಾಡಿಸುತ್ತಿದ್ದೇನೆʼ ಅಂತ ಹೇಳಿಕೊಂಡಿದ್ದರು. ಆದರೆ ಗುರುವಾರ ಅವರು ನಿಧನರಾಗಿದ್ದಾರೆಂದು ಮಾಹಿತಿ ನೀಡಿದ್ದಾರೆ. ದುನಿಯಾ ವಿಜಯ್ ಅವರ ತಾಯಿ ಅಂತ್ಯಕ್ರಿಯೆ ನಾಳೆ ಮಧ್ಯಾಹ್ನ ನಡೆಯಲಿದೆ. ಆನೇಕಲ್ ನ ಕುಂಬಾರ ಹಳ್ಳಿಯಲ್ಲಿ ಅಂತಿಮ ವಿಧಿವಿಧಾನ ಮಾಡಲು ನಿರ್ಧಾರ ಮಾಡಿದ್ದಾಗಿ ಅವರು ತಿಳಿಸಿದ್ದಾರೆ

Categories
ಸಿನಿ ಸುದ್ದಿ

ನಿರ್ದೇಶಕ ಕಮ್ ನಿರ್ಮಾಪಕ ದಯಾಳ್ ಪದ್ಮನಾಭನ್ ಕೂಡ ಜಾತಿ ಅವಮಾನ ಅನುಭವಿಸಿದ್ರಾ?

ನನ್ನ ಜಾತಿ ಹಾಗೂ ಭಾಷೆ ನಿಮಗೆ ಸಮಸ್ಯೆ ಎನಿಸಿತು ಹಾಗಾಗಿ ನನಗೆ ಎಫ್‌ಯುಸಿ ಪ್ರವೇಶ ನಿರಾಕರಿಸಿದ್ರಿ..….
ಇದು ನಿರ್ದೇಶಕ ದಯಾಳ್‌ ಪದ್ಮನಾಭನ್‌ ಅವರ ನೋವಿನ ನುಡಿ. ಅಂದ ಹಾಗೆ, ಲೂಸಿಯಾ ಖ್ಯಾತಿಯ ನಿರ್ದೇಶಕ ಪವನ್‌ ಕುಮಾರ್‌ ನೇತೃತ್ವದಲ್ಲಿ ಈ ಹಿಂದೆ ಶುರುವಾದ ಎಫ್‌ಯುಸಿ ಗೆ ನಿರ್ದೇಶಕರಾದ ತಾವು ಸೇರ ಬಯಸಿದಾಗ ನಿರಾಕರಿಸಿದ್ದರ ಹಿಂದಿನ ಕಾರಣವನ್ನು ದಯಾಳ್‌ ಈಗ ಬಿಚ್ಚಿಟ್ಟಿದ್ದಾರೆ. ನಿರ್ದೇಶಕರಾದ ಪವನ್‌ ಕುಮಾರ್‌ ಹಾಗೂ ದಯಾಳ್‌ ಪದ್ಮಾನಾಭನ್‌ ನಡುವೆ ಅದ್ಯಾಕೆ ಈಗ ಚರ್ಚೆಗೆ ಬಂದಿದೆಯೋ ಗೊತ್ತಿಲ್ಲ. ಆದರೆ ಪವನ್‌ ಕುಮಾರ್‌ ನೇತೃತ್ವದ ಎಫ್‌ಯುಸಿ ಗೆ ತಮ್ಮನ್ನು ನಿರಾಕರಿಸಿದ್ದರ ಹಿಂದಿನ ಕಾರಣ ಏನು ಅಂತ ಈಗ ಸೋಷಲ್‌ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ. ಅದನ್ನು ಪವನ್‌ ಕುಮಾರ್‌ ಅವರಿಗೆ ಉತ್ತರ ರೂಪದಲ್ಲಿ ಬಿಚ್ಚಿಟ್ಟಿದ್ದಾರೆ.

ʼ ನನ್ನ ಜಾತಿ ಹಾಗೂ ಭಾಷೆ ನಿಮಗೆ ಸಮಸ್ಯೆ ಎನಿಸಿತು ಹಾಗಾಗಿ ನನಗೆ ಎಫ್‌ಯುಸಿ ಪ್ರವೇಶ ನಿರಾಕರಿಸಿದಿರ ನನ್ನ, ಹೋರಾಡುವ ಛಾತಿ, ಎತ್ತರಕ್ಕೆ ಬೆಳೆಯುವ ಹಂಬಲ, ನೇರ, ನಿಷ್ಠುರ ಮಾತು, ನನ್ನ ಸ್ವತಂತ್ರ ಚಿಂತನೆಗಳು ಸಹ ನಿಮಗೆ ಸಹಿಸಲಾಗದೆ ನನ್ನನ್ನು ಹೊರಗಿಟ್ಟಿರಿ” ಎಂದಿದ್ದಾರೆ. ”ಎಫ್‌ಯುಸಿಯ ಆಹ್ವಾನವನ್ನು ನೀವೇ ನನಗೆ ಕಳಿಸಿದಿರಿ. ಈಗ ಅದನ್ನು ‘ಪ್ರೊಪೋಸಲ್’ ಎಂದು ನೀವು ಕರೆಯುತ್ತಿದ್ದೀರಿ. ನಾನಾಗಿಯೇ ಬಂದು ನನ್ನನ್ನು ತಂಡದಲ್ಲಿ ಸೇರಿಸಿಕೊಳ್ಳಿ ಎಂದು ಕೇಳಿರಲಿಲ್ಲ.

https://m.facebook.com/story.php?story_fbid=10159268455612158&id=597452157

ಇದಕ್ಕಿಂತಲೂ ಉತ್ತಮವಾದ ಕೆಲಸಗಳು ನನ್ನ ಬಳಿ ಇದ್ದವು” ಎಂದು ಪವನ್‌ಗೆ ಉತ್ತರಿಸಿದ್ದಾರೆ ದಯಾಳ್.ಸದ್ಯಕ್ಕೆ ಇದು ಹವನ್‌ ಅವರಿಗೆ ನೀಡಿದ ಉತ್ತರ ಆಗಿರಬಹುದು, ಆದರೆ ಈಗ ಚಿತ್ರರಂಗದಲ್ಲಿ ಜಾತಿ ವಿಚಾರ ತೀವ್ರ ಚರ್ಚೆಯಲ್ಲಿದೆ. ಅದೇ ಹೊತ್ತಿಗೆ ದಯಾಳ್‌ ಅವರ ಹೇಳಿಕೆ ಕೂಡ ತೀವ್ರ ಗಮನ ಸೆಳೆದಿದಿದೆ.

ಕನ್ನಡ ಚಿತ್ರರಂಗದಲ್ಲಿ ಜಾತಿ ಇದೆ ಇಲ್ಲವೋ ಗೊತ್ತಿಲ್ಲ, ಆದರೆ ಈಗ ಚಿತ್ರರಂಗದಲ್ಲಿ ಜಾತಿ ವಿಚಾರ ಮನ್ನೆಲೆಗೆ ಬಂದಿದೆ ಎನ್ನುವುದಕ್ಕೆ ಇತ್ತೀಚಿನ ಕೆಲವು ವಿವಾದಗಳು ಸಾಕ್ಷಿ. ಯಾವುದೋ ಚರ್ಚೆಯ ವಿಚಾರದಲ್ಲಿ ನಟ ಉಪೇಂದ್ರ ಅವರು, ಮಹಾ ನಾಯಕ ಅಂಬೇಡ್ಕರ್‌ ಹೇಳಿಕೆಯೊಂದನ್ನು ಇನ್ನಾರೋ ಹೇಳಿದ್ದು ಅಂತ ಹೇಳಿದ್ದೆ ಸಿನಿಮಾದೊಳಗಡೆಯೂ ಜಾತಿ ಚರ್ಚೆ ಹುಟ್ಟು ಹಾಕಿದ್ದು ನಿಮಗೂ ಗೊತ್ತು. ಉಪೇಂದ್ರ ಅವರ ಮಾತಿಗೆ ಆ ದಿನಗಳು ಖ್ಯಾತಿಯ ನಟ ಚೇತನ್‌ ನೀಡಿದ ಪ್ರತಿಕ್ರಿಯೆ ದೊಡ್ಡ ವಿವಾದ ಹುಟ್ಟು ಹಾಕಿತು. ಮುಂದೆ ಯುವ ನಟ ಕಿರಣ್‌ ಶ್ರೀನಿವಾಸ್‌ ಕೂಡ ಚಿತ್ರರಂಗದೊಳಗಡೆಯ ಜಾತಿ ಕುರಿತು ಮಾತನಾಡಿದರು. ಕೊನೆಗೆ ನಟ ಸಂಚಾರಿ ನಿಧನದ ನಂತರ ಅವರ ಜಾತಿಯ ಅವಮಾನದ ಕುರಿತು ನಟ ಸತೀಶ್‌ ನೀನಾಸಂ ಆಡಿದ ಮಾತು ಕೂಡ ಸಂಚಲನ ಸೃಷ್ಟಿಸಿತು. ಈಗ ನಿರ್ದೇಶಕ ದಯಾಳ್‌ ಪದ್ಮನಾಭನ್‌ ಕೂಡ ಜಾತಿ ಅವಮಾನ ಕುರಿತು ಮಾತನಾಡಿದ್ದಾರೆ.

ಎಫ್‌ಯುಸಿಯ ಆಹ್ವಾನವನ್ನು ನೀವೇ ನನಗೆ ಕಳಿಸಿದಿರಿ. ಈಗ ಅದನ್ನು ‘ಪ್ರೊಪೋಸಲ್’ ಎಂದು ನೀವು ಕರೆಯುತ್ತಿದ್ದೀರಿ. ನಾನಾಗಿಯೇ ಬಂದು ನನ್ನನ್ನು ತಂಡದಲ್ಲಿ ಸೇರಿಸಿಕೊಳ್ಳಿ ಎಂದು ಕೇಳಿರಲಿಲ್ಲ. ಇದಕ್ಕಿಂತಲೂ ಉತ್ತಮವಾದ ಕೆಲಸಗಳು ನನ್ನ ಬಳಿ ಇದ್ದವು” ಎಂದು ಪವನ್‌ಗೆ ಉತ್ತರಿಸಿದ್ದಾರೆ ದಯಾಳ್. ”ನನಗೆ ಅವಮಾನ ಮಾಡಿದ್ದಕ್ಕೆ ನೀವು ಮತ್ತು ನಿಮ್ಮ ಎಫ್‌ಯುಸಿ ಸದಸ್ಯರು ತಕ್ಕ ಶಾಸ್ತಿ ಅನುಭವಿಸಿಯೇ ತೀರುತ್ತೀರ. ನಿಮಗೆ ಹಾಗೂ ನಿಮ್ಮ ತಂಡದ ಸದಸ್ಯರಿಗೆ ಸಮಯವೇ ಸೂಕ್ತ ಪಾಠ ಕಲಿಸಲಿದೆ. ಯಾವುದು ಸಹ ನನ್ನನ್ನು ಬದಲಾವಣೆ ಮಾಡಲಾರದು. ಏನಾದರೂ ಎದುರು ಬರಲಿ, ನಾನು ಕೊನೆಯವರೆಗೆ ಕನ್ನಡ ಸಿನಿಮಾ ನಿರ್ದೇಶಕನಾಗಿ ಇರುತ್ತೇನೆ” ಎಂದಿದ್ದಾರೆ ದಯಾಳ್.

Categories
ಸಿನಿ ಸುದ್ದಿ

ದಯವಿಟ್ಟು ಬೇಸರ ಪಟ್ಟುಕೊಳ್ಳಬೇಡಿ- ಅಭಿಮಾನಿ ದೇವರಿಗೆ ಸೆಂಚುರಿ ಸ್ಟಾರ್‌ ಮನವಿ ಮಾಡಿಕೊಂಡಿದ್ದು ಯಾಕೆ ?

ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ತಮ್ಮ ಅಭಿಮಾನಿ ದೇವರುಗಳಿಗೆ ವಿಶೇಷ ಸಂದೇಶ ರವಾನಿಸಿದ್ದಾರೆ. ಸಂಕಷ್ಟದ ಸಮಯದಲ್ಲಿ ಸಂಭ್ರಮಾಚರಣೆ ಬೇಡವೆಂದು ನಿರ್ಧರಿಸಿರುವ ಶಿವಣ್ಣ ತಮ್ಮ ಹುಟ್ಟುಹಬ್ಬಕ್ಕೆ ಬ್ರೇಕ್ ಹಾಕಿದ್ದಾರೆ. ತಮ್ಮ ಬರ್ತ್ಡೇ ಸೆಲಬ್ರೇಷನ್‌ಗಿಂತ ನಿಮ್ಮೆಲ್ಲರ ಆರೋಗ್ಯ ಮುಖ್ಯವೆಂದು ತೀರ್ಮಾನಿಸಿರುವ ಶಿವಣ್ಣ ವಿಡಿಯೋ ಮೂಲಕ ದೊಡ್ಮನೆ ಅಭಿಮಾನಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.

“ಹುಟ್ಟುಹಬ್ಬಕ್ಕಿಂತ ನಿಮ್ಮೆಲ್ಲರ ಆರೋಗ್ಯ ತುಂಬಾ ಮುಖ್ಯ. ದೇವರ ದಯೆಯಿಂದ ಕೊರೊನಾ ಕಮ್ಮಿ ಆಗಿದೆ. ಹಾಗಂತ ಎಚ್ಚರಿಕೆಯಿಂದ ಇರುವ ಸಮಯ ಮುಗಿದಿಲ್ಲ. ಮುಂದೆ ಇನ್ನೂ ಎಚ್ಚರಿಕೆಯಿಂದ ಇರಬೇಕು. ಜುಲೈ 12 ನನ್ನ ಹುಟ್ಟಿದ ದಿನ ಎಲ್ಲರಿಗೂ ಗೊತ್ತಿದೆ. ಕೆಲವು ಕಾರಣಗಳಿಂದ ನಾನು ಬೆಂಗಳೂರಿನಲ್ಲಿ ಇರಲ್ಲ. ದಯವಿಟ್ಟು ಬೇಸರ ಮಾಡಿಕೊಳ್ಳಬೇಡಿ. ನಿಮಗೆ ಎಷ್ಟು ಬೇಸರ ಆಗುತ್ತಿದೆಯೋ ನನಗೂ ಅಷ್ಟೇ ಆಗುತ್ತಿದೆ. ನಿಮ್ಮ ವಿಶ್‌ಗಳನ್ನ ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿ. ನಿಮ್ಮ ಪ್ರೀತಿ, ವಿಶ್ವಾಸ ಪ್ರೋತ್ಸಾಹ ಯಾವಾಗಲೂ ಇರಬೇಕು. ದಯವಿಟ್ಟು ಕೊರೊನಾ ನಿಯಮ ಫಾಲೋ ಮಾಡಿ ಮಾಸ್ಕ್ ಹಾಕಿಕೊಳ್ಳಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ ಎಲ್ಲರೂ ವ್ಯಾಕ್ಸಿನೇಷನ್ ಹಾಕಿಸಿಕೊಳ್ಳಿ ದಯವಿಟ್ಟು ಯಾರು ಬೇಜಾರ್ ಮಾಡಿಕೊಳ್ಳಬೇಡಿ. ಆದಷ್ಟು ಬೇಗ ಕೊರೊನಾ ದೂರವಾಗಿ ಎಲ್ಲರೂ ಒಟ್ಟಾಗಿ ಸೇರುವ ದಿನ ಬರಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡಿಕೊಳ್ಳೋಣ. ಮನೆಯಲ್ಲೇ ಇರಿ ಎಲ್ಲರೂ ಸೇಫ್ ಆಗಿರಿ ಎಲ್ಲರನ್ನೂ ಸೇಫಾಗಿಡಿ ಹೀಗಂತ ಶಿವಣ್ಣ ಅಭಿಮಾನಿ ದೇವರುಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಆರಾಧ್ಯದೈವನ ಮನವಿಯಂತೆ ನಡೆದುಕೊಳ್ಳೋಕೆ ದೊಡ್ಮನೆ ಭಕ್ತರು ನಿರ್ಧರಿಸಿದ್ದಾರೆ. ಕಾಮನ್ ಡಿಪಿ ಜೊತೆಗೆ ಶಿವಣ್ಣನ ಅಪ್‌ಕಮ್ಮಿಂಗ್ ಸಿನಿಮಾಗಳ ಪೋಸ್ಟರ್ ಹಾಗೂ ಟೀಸರ್‌ಗಳನ್ನ ಸೋಷಿಯಲ್ ಲೋಕದಲ್ಲಿ ಹಂಚಿಕೊಳ್ಳುವ ಮೂಲಕ ಬ್ರ್ಯಾಂಡ್ ಮಾಡಲಿಕ್ಕೆ ಅಭಿಮಾನಿಗಳು ಸಜ್ಜಾಗಿದ್ದಾರೆ. ಅಭಿನಯ ಚಕ್ರವರ್ತಿಯ ಹುಟ್ಟುಹಬ್ಬದಂದು ಪೋಸ್ಟರ್‌ ಹಾಗೂ ಟೀಸರ್ ಜೊತೆ ಹೊಸ ಸಿನಿಮಾಗಳು ಅನೌನ್ಸ್ ಆಗುವ ನಿರೀಕ್ಷೆಯಿದೆ. ಭಜರಂಗಿ 2 ಚಿತ್ರ ಬಿಡುಗಡೆಗೆ ಸಜ್ಜಾಗಿದ್ದು123 ನೇ ಸಿನಿಮಾದಲ್ಲಿ ಶಿವಣ್ಣ ಬ್ಯುಸಿಯಾಗಿದ್ದಾರೆ. ಅಂದ್ಹಾಗೇ ಈ ಚಿತ್ರಕ್ಕೆ ವಿಜಯ್ ಮಿಲ್ಟನ್ ನಿರ್ದೇಶನವಿದ್ದು,ಶಿವಪ್ಪ ಅಂತ ಟೈಟಲ್ ಫಿಕ್ಸ್ ಮಾಡಲಾಗಿತ್ತು, ಆದರೆ, ಶಿವಪ್ಪ ಟೈಟಲ್ ಮ್ಯಾಚ್ ಆಗ್ತಿಲ್ಲ ಎನ್ನುವ ಕಾರಣಕ್ಕೆ ಚೇಂಜ್ ಮಾಡ್ತಿದ್ದಾರೆ. ಬರ್ತ್ಡೇ ದಿನ ಹೊಸ ಟೈಟಲ್ ಅನಾವರಣಗೊಳ್ಳಲಿದೆ

Categories
ಸಿನಿ ಸುದ್ದಿ

ಡ್ಯಾನ್ಸರ್ಸ್ ಕಷ್ಟಕ್ಕೆ ಮಿಡಿಯಿತು ನಿಖಿಲ್ ಮನ !

ಸ್ಯಾಂಡಲ್ ವುಡ್‌ ನ ಯುವರಾಜ ನಿಖಿಲ್ ಕುಮಾರ್ ರೀಲ್ ನಲ್ಲಿ ಮಾತ್ರವಲ್ಲ ರಿಯಲ್ ಲೈಫ್ ನಲ್ಲೂ ಹೀರೋ ಅನ್ನೋದನ್ನ ಪ್ರೂ ಮಾಡಿದ್ದಾರೆ. ಈಗ ಮತ್ತೊಬ್ಬ ರಿಯಲ್ ಹೀರೋ ಅಂತ ಸಾಬೀತುಪಡಿಸಿದ್ದಾರೆ.

ಲಾಕ್ ಡೌನ್ ನಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದ ಬೆಂಗಳೂರಿನ ಡಾನ್ಸರ್ಸ್ ಅಸೋಸಿಯೇಷನ್ ಸದಸ್ಯರಿಗೆ ಫುಡ್ ಕಿಡ್ ವಿತರಣೆ ಮಾಡಿದ್ದಾರೆ.
ಡಾನ್ಸ್ ಮಾಸ್ಟರ್ ಭೂಷಣ್ ಜೊತೆ ಸೇರಿ ಆಹಾರ ಕಿಟ್ ವಿತರಿಸಿದ್ದಾರೆ. ಇನ್ನು ರಾಮನಗರದಲ್ಲಿ ಅಂಗನವಾಡಿ ಸಿಬ್ಬಂದಿ, ದಾದಿಯರು ಹಾಗೂ ಕೊರೋನಾ ವಾರಿಯರ್ಸ್‌ ಗೂ ನಟ ನಿಖಿಲ್ ಕುಮಾರ್‌ , ಫುಡ್‌ ಕಿಟ್‌ ವಿತರಣೆ ಮಾಡಿದ್ದರು.

Categories
ಸಿನಿ ಸುದ್ದಿ

ವಿವಾಹ ಬಂಧನದಲ್ಲಿ ಬಹದ್ದೂರ್‌ ಚೇತನ್‌; ಅರಮನೆ ನಗರಿಯಲ್ಲಿ ಹೊಸ ಬಾಳಿಗೆ ಕಾಲಿಟ್ಟ ಜೇಮ್ಸ್‌ ಡೈರೆಕ್ಟರ್‌

‘ಬಹದ್ದೂರ್‌ʼ ಚಿತ್ರದ ಖ್ಯಾತಿಯ ನಿರ್ದೇಶಕ ಚೇತನ್‌ ಕುಮಾರ್‌ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ. ಕೊರೋನಾ ನಡುವೆ ಸದ್ದಿಲ್ಲದೆ, ಸುದ್ದಿ ಮಾಡದೆ ಭಾನುವಾರ ಮೈಸೂರಿನಲ್ಲಿ ಸರಳವಾಗಿ ಮದುವೆ ಆಗಿದ್ದಾರೆ. ಆದರೆ ಅವರ ವಿವಾಹ ಮಹೋತ್ಸವಕ್ಕೆ ಕನ್ನಡದ ಅನೇಕ ಸ್ಟಾರ್‌ ಗಳು ಪಾಲ್ಗೊಳ್ಳುವ ಮೂಲಕ ಸಾಕ್ಷಿ ಅಗಿದ್ದಾರೆ.

ನಟರಾದ ದರ್ಶನ್‌, ಪುನೀತ್‌ ರಾಜಕುಮಾರ್‌, ನಿರ್ದೇಶಕರಾದ ಮಹೇಶ್‌ ಸೇರಿದಂತೆ ಹಲವರು ಮದುವೆಗೆ ಆಗಮಿಸಿ ನವದಂಪತಿಗೆ ಶುಭಾಶಯ ಕೋರಿದರು ಎಂದು ಮೂಲಗಳು ತಿಳಿಸಿವೆ. ನವದಂಪತಿಗಳಿಗೆ ಶುಭವಾಗಲಿ.

Categories
ಸಿನಿ ಸುದ್ದಿ

ಬರ್ತ್ ಡೇ ಸಂಭ್ರಮದಲ್ಲಿ ನಟ ಡಾರ್ಲಿಂಗ್‌ ಕೃಷ್ಣ – ಪತಿಗೆ ಸ್ಪೆಷಲ್‌ ಆಗಿ ವಿಶ್‌ ಮಾಡಿದ ನಟಿ ಮಿಲನಾ

‘ಲವ್‌ ಮಾಕ್ಟೇಲ್‌’ ಖ್ಯಾತಿಯ ನಟ ಡಾರ್ಲಿಂಗ್‌ ಕೃಷ್ಣ ಅವರಿಗೆ ಇಂದು (ಜೂನ್12) ಹುಟ್ಟು ಹಬ್ಬದ ಸಂಭ್ರಮ. ಅವರಿಗಿದು ಮದುವೆಯ ನಂತರದ ಮೊದಲ ಹುಟ್ಟು ಹಬ್ಬ. ನಟಿ ಮಿಲನಾ ನಾಗರಾಜ್‌, ತಮ್ಮ ಪ್ರೀತಿಯ ಪತಿಗೆ ಸ್ಪೆಷಲ್‌ ಆಗಿ ಬರ್ತ್‌ ಡೇ ವಿಶ್‌ ಮಾಡಿದ್ದಾರೆ. ಸದ್ಯ ಈ ಜೋಡಿ ‘ಲವ್‌ ಮಾಕ್ಟೇಲ್‌ 2 ‘ ಚಿತ್ರದ ನಿರ್ಮಾಣದಲ್ಲಿ ಬ್ಯುಸಿ ಇದೆ. ಹಾಗೆಯೇ ಆ ಚಿತ್ರವೀಗ ಒಂದು ಹಂತಕ್ಕೆ ಚಿತ್ರೀಕರಣ ಕೂಡ ಮುಗಿಸಿದೆ. ಈ ಚಿತ್ರದ ಪೋಸ್ಟರ್‌ ಒಂದನ್ನು ಸೋಷಲ್‌ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಪತಿ ಡಾರ್ಲಿಂಗ್‌ ಕೃಷ್ಣ ಅವರಿಗೆ ಹುಟ್ಟು ಹಬ್ಬದ ಶುಭಾಯಶ ಕೋರಿದ್ದಾರೆ ಮಿಲನಾ ನಾಗರಾಜ್.

ಕನ್ನಡ ಚಿತ್ರರಂಗದ ಮಟ್ಟಿಗೆ ಈ ಜೋಡಿ ನಿಜಕ್ಕೂ ಅದೃಷ್ಟವಂತ ಜೋಡಿಯೇ. ಯಾಕಂದ್ರೆ ಅವರ ಸಿನಿ ಜರ್ನಿಯಲ್ಲಿ ಬ್ರೇಕ್‌ ಅಂತ ಸಿಕ್ಕಿದ್ದೇ ಒಂದು ವಿಶೇಷವಾದ ಸಂದರ್ಭಕ್ಕೆ. 2020 ಚಿತ್ರರಂಗದ ಪಾಲಿಗೆ ಒಂದು ಕರಾಳ ವರ್ಷ. ಆದರೆ, ಈ ವರ್ಷದ ಆರಂಭದಲ್ಲಿ ಡಾರ್ಲಿಂಗ್‌ ಕೃಷ್ಣ ಹಾಗೂ ಮಿಲನಾ ನಾಗರಾಜ್‌ ಜೋಡಿಯ ‘ಲವ್‌ ಮಾಕ್ಟೇಲ್‌’ ಚಿತ್ರ ಸೂಪರ್‌ ಡೂಪರ್‌ ಹಿಟ್‌ ಆಯಿತು. ಅಂತಹದೊಂದು ಸಂದರ್ಭಕ್ಕಾಗಿ ಹಲವು ವರ್ಷ ಕಾದಿದ್ದ ಆ ಜೋಡಿಗೆ 2020 ನಿಜಕ್ಕೂ ಲಕ್ಕಿ ವರ್ಷ ಆಯಿತು. ಆ ಚಿತ್ರದ ದೊಡ್ಡ ಸಕ್ಸಸ್‌ ನ ಬೆನ್ನಲೇ ಈ ಜೋಡಿ ಮದುವೆ ಆಯಿತು. 2020 ಫೆಬ್ರವರಿ 14 ಕ್ಕೆ ಅಂದರೆ ಪ್ರೇಮಿಗಳ ದಿನಕ್ಕೆ ಈ ಜೋಡಿ ಹಸೆಮಣೆ ಏರಿತು. ಎಲ್ಲವೂ ವಿಶೇಷವಾಗಿಯೇ ಘಟಿಸಿದವು.

ಅಂತಹ ವಿಶೇಷತೆಗಳ ನಡುವೆಯೇ ವಿವಾಹ ನಂತರದ ಮೊದಲ ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ನಟ ಡಾರ್ಲಿಂಗ್‌ ಕೃಷ್ಣ ಈಗ ಕನ್ನಡದ ಬಹು ಬೇಡಿಕೆನಟ. ಅವರ ಕೈಯಲ್ಲೀಗ ಸಾಲು ಸಾಲು ಚಿತ್ರಗಳಿವೆ. ಆ ನಡುವೆಯೇ ಭರ್ಜರಿ ಸಕ್ಸಸ್ಸಿನ ಲವ್‌ ಮಾಕ್ಟೆಲ್‌ ಚಿತ್ರದ ಸೀಕ್ವೆಲ್‌ ʼಲವ್‌ ಮಾಕ್ಟೇಲ್‌ 2ʼ ಕೂಡ ಬರುತ್ತಿದೆ. ಅದರ ನಿರ್ಮಾಣದಲ್ಲೂ ಇಬ್ಬರು ತೊಡಗಿಸಿಕೊಂಡಿದ್ದಾರೆ. ಅಲ್ಲದೇ ಈ ಚಿತ್ರ ಕನ್ನಡದ ಸಿನಿ ರಸಿಕರ ಪಾಲಿಗೆ ಬಹುದೊಡ್ಡ ನಿರೀಕ್ಷೆ ಹುಟ್ಟು ಹಾಕಿದೆ. ಲವ್‌ ಮಾಕ್ಟೇಲ್‌ ಮೊದಲ ಭಾಗ ದೊಡ್ಡ ಹಿಟ್‌ ಆಗಿದ್ದು ಕೂಡ ಇದಕ್ಕೆ ಕಾರಣ. ಅದೇ ಕಾರಣದಿಂದೀಗ ನಟಿ ಮಿಲನಾ ನಾಗರಾಜ್.‌ ಆ ಚಿತ್ರದ ಒಂದು ಪೋಸ್ಟರ್‌ ಹಂಚಿಕೊಳ್ಳುವ ಮೂಲಕ ನಟ ಡಾರ್ಲಿಂಗ್‌ ಕೃಷ್ಣ ಅವರಿಗೆ ಹುಟ್ಟು ಹಬ್ಬದ ಶುಭಾಶಯ ತಿಳಿಸಿದ್ದಾರೆ.

ಇನ್ನೊಂದೆಡೆ ಕೃಷ್ಣ ಅವರ ಹುಟ್ಟುಹಬ್ಬಕ್ಕೆ ‘ಶುಗರ್‌ ಫ್ಯಾಕ್ಟರಿ ‘ಚಿತ್ರ ತಂಡ ಟೀಸರ್‌ ಲಾಂಚ್‌ ಮಾಡಿದೆ. ಈ ಚಿತ್ರದಲ್ಲಿ ಸೋನಲ್‌ ಮಾಂಟೆರೋ, ಅದ್ವಿತಿ ಶೆಟ್ಟಿ ನಾಯಕಿ ಆಗಿ ಕಾಣಸಿಕೊಂಡಿದ್ದಾರೆ.

error: Content is protected !!