ಅಂಬರೀಶ್ ಸಾವಿನಲ್ಲೂ ರಾಜಕೀಯ ಮಾಡಿದವರು ನೀವು- ಮಾಜಿ ಸಿಎಂ ಎಚ್ಡಿಕೆ ವಿರುದ್ಧ ರಾಕ್ ಲೈನ್ ವೆಂಕಟೇಶ್ ಗುಡುಗು

ಮಂಡ್ಯ ರಾಜಕಾರಣ ಕುದಿಯುವ ಎಣ್ಣೆಯಲ್ಲಿ ಬೇಯುತ್ತಿದೆ. ಕೆಆರ್ ಎಸ್ ಅಣೆಕಟ್ಟೆ, ಮೈ ಶುಗರ್ಸ್ ಕಾರ್ಖಾನೆಯ ಜತೆಗೆ ಗಣಿಗಾರಿಕೆ ಕುರಿತ ವಿವಾದದಲ್ಲಿ ಸಂಸದೆ ಸುಮಲತಾ ಹಾಗೂ ಮಾಜಿ ಸಿಎಂ ಎಚ್.ಡಿ.ಕುಮಾರ ಸ್ವಾಮಿ ಅವರ ನಡುವೆ ಆರೋಪ- ಪ್ರತ್ಯಾರೋಪದ ದೊಡ್ಡ ಯುದ್ಧವೇ ಶುರುವಾಗಿದೆ. ರಾಜಕೀಯದ ಸಮರದ ನಡುವೆ ವೈಯಕ್ತಿಕ ಕಿತ್ತಾಟಗಳು ನಡೆಯುತ್ತಿವೆ. ಸುಮಲತಾ ಪರವಾಗಿ ಈಗ ಸಿನಿಮಾ ಮಂದಿಯೂ ಕೂಡ ಈಗ ಧ್ವನಿ ಎತ್ತಿದ್ದಾರೆ. ಸುಮಲತಾ ವಿರುದ್ಧ ಮಾಜಿ ಸಿಎಂ ಎಚ್.ಡಿ. ಕುಮಾರ ಸ್ವಾಮಿ ನೀಡುತ್ತಿರುವ ಹೇಳಿಕೆಗಳನ್ನು ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ಹಿರಿಯ ನಟ ದೊಡ್ಡಣ್ಣ ತೀವ್ರವಾಗಿ ಖಂಡಿಸಿದ್ದು, ಸಂಸದೆ ಸುಮಲತಾ ಅವರಿಗೆ ತಾವು ಮಾತ್ರವಲ್ಲ, ಅಂಬರೀಶ್ ಅಭಿಮಾನಿಗಳು ಕೂಡ ಇದ್ದಾರೆ. ಅಷ್ಟು ಸುಲಭವಾಗಿ ಅಂಬರೀಶ್ ಕುಟುಂಬಕ್ಕೆ ಅವಮಾನ ಆಗಲು ಬಿಡೋದಿಲ್ಲ ಎಂದು ಗುಡುಗಿದ್ದಾರೆ.

‘ಸಿಕ್ಕಿರೋ ಗೌರವವನ್ನು ಹಾಳು ಮಾಡಿಕೊಳ್ಳಬೇಡಿ, ಅಂಬರೀಶ್ ಅವರು ಏನ್ ಅನ್ನೋದನ್ನು ನಾವು ಒತ್ತಿ ಹೇಳಬೇಕಿಲ್ಲ. ಆ ತರಹದ ಮನುಷ್ಯ ಯಾವನೂ ಹುಟ್ಟಿಲ್ಲ. ಅಂಬರೀಶ್ ಇದ್ದಾಗ ಜಿರೋ… ಜಿರೋ ಪಾಯಿಂಟ್ ವ್ಯಾಲೂಮ್ ಇಟ್ಕೊಂಡ್ ಮಾತನಾಡ್ತಾ ಇದ್ರಲ್ವಾ ? ಸತ್ತಾಗ ಒಬ್ಬ ವ್ಯಕ್ತಿ ಬಗ್ಗೆ ಯಾಕೆ ಮಾತನಾಡಿಸ್ತಿದ್ದೀರಿ, ಇದೆಲ್ಲ ಜನಗಳಿಗೆ ಗೊತ್ತಾಗಲ್ವಾ, ಇನ್ನು ಮೇಲಾದರೂ ಇದನ್ನು ಸರಿಪಡಿಸಿಕೊಳ್ಳಿ. ಅಂಬರೀಶ್ ಅವರ ಸ್ಮಾರಕ ನಿರ್ಮಾಣದಲ್ಲಿ ನನ್ನ ದುಡಿಮೆಯ ಪಾಲಿದೆ ಅಂತ ಹೇಳಿದ್ದಾರಂತೆ. ಸ್ಮಾರಕ ನಿರ್ಮಾಣದ ವಿಚಾರದಲ್ಲಿ ಏನೆಲ್ಲ ಆಯ್ತು ಅಂತ ನಮ್ಗೇನು ಗೊತ್ತಿಲ್ವಾ, ಅವರು(ಎಚ್.ಡಿ.ಕೆ) ಸಿಎಂ ಆಗಿದ್ದಾಗ ಸ್ಮಾರಕ ನಿರ್ಮಾಣದ ಕೆಲಸಕ್ಕೆ ಸಂಬಂಧಿಸಿದಂತೆ ದೊಡ್ಡಣ್ಣ ಫೈಲ್ ಹಿಡ್ಕೊಂಡ್ ವಿಧಾನ ಸೌಧಕ್ಕೆ ಹೋದಾಗ ಏನಾಯ್ತು ಅಂತ ಸತ್ಯ ಈಗ ಹೇಳಬೇಕಿದೆ. ಏರಡೂವರೆ ತಾಸು ಕಾಯಿಸಿದ್ರಿ. ಅಷ್ಟಾಗಿಯೂ ಫೈಲ್ ಕೊಡೋದಿಕ್ಕೆ ಅಂತ ದೊಡ್ಡಣ್ಣ ಹೋದಾಗ, ಫೈಲ್ ಬಿಸಾಕಿ ದುರಂಹಕಾರ ತೋರಿಸಿದ್ರಿ. ಇದೆಲ್ಲ ಗೊತ್ತಿಲ್ವಾ? ರಾಜ್ಯದ ಜನಕ್ಕೆ ಹೇಳಬೇಕಾಗುತ್ತದೆ ಎಂದು ರಾಕ್ ಲೈನ್ ವೆಂಕಟೇಶ್ ಮಾಜಿ ಸಿಎಂ ಎಚ್ ಡಿಕೆ ವಿರುದ್ಧ ಪರೋಕ್ಷವಾಗಿ ಗುಡುಗಿದರು.

ಅಂಬರೀಶ್ ಎನ್ ಮಾಡಿದ್ರು ಅಂತ ಸ್ಮಾರಕ ಮಾಡ್ಬೇಕು ಅಂತ ಕೇಳಿದ್ರಂತೆ. ಅಂಬರೀಶ್ ಏನು ಅಂತ ನಿಮ್ಗೆ ಗೋತ್ತಿಲ್ವಾ ? ಅಂಬರೀಶ್ ಅವರಿಂದ ನಿಮಗೆ ಏನ್ ಆಯ್ತು ಅಂತ ಎಲ್ಲರಿಗೂ ಗೊತ್ತಿದೆ. ಅಂಬರೀಶ್ ಸಾವಿನಲ್ಲೂ ರಾಜಕಾರಣ ಮಾಡಿದವರು ನೀವು. ನಿವೇನು ಅಂತ ನಮ್ಗೆನೂ ಗೊತ್ತಿಲ್ಬಾ ? ಆ ಮನೆಗೆ ಇದ್ದಂತಹ ಸ್ನೇಹಕ್ಕಾದರೂ ನನ್ನನ್ನು ಕರೆದು ಮಾತನಾಡಬಹುದೀತ್ತು. ವೆಂಕಟೇಶ್ , ಮಗ ಚುನಾವಣೆಗೆ ನಿಲ್ತಿದ್ದಾರೆ. ಸುಮಲತಾ ಅವರಿಗೆ ಒಂದು ಮಾತು ಹೇಳಿ ಅಂದಿದ್ರೆ, ನಾನೇ ಮುಂದೆ ನಿಂತು ಅವರನ್ನು ಚುನಾವಣೆಯಿಂದ ಆಚೆ ಇರಿಸುತ್ತಿದ್ದೆ. ಆದ್ರೆ ನೀವು ಮಾಡಿದ್ದೇ ಬೇರೆ. ಅದರ ಪರಿಣಾಮ ಏನಾಯ್ತು, ಮಂಡ್ಯ ಜನರ ಒತ್ತಡಕ್ಕೆ ಅವರು ಚುನಾವಣೆಗೆ ನಿಂತ್ರು. ಕೊನೆಗೆ ಸೋಲು ನಿಮ್ಮದೇ ಆಯ್ತು. ಅದರಿಂದಾದ್ರು ಪಾಠ ಕಲಿಬೇಕಿದೆ ಎಂದು ಎಚ್ಚರಿಕೆ ನೀಡಿದರು.

ಹಿರಿಯ ನಟ ದೊಡ್ಡಣ್ಣ ಕೂಡ ಸುಮಲತಾ ಅವರಿಗೆ ಬೆಂಬಲ ನೀಡಿದ್ದಾರೆ. ಸುಮಲತಾ ಒಬ್ಬಂಟಿ ಅಲ್ಲ, ನಾವು ಇದ್ದೇವೆ ಎಂದು ಗುಡುಗಿದ್ದಾರೆ. ‘ ಸಿನಿಮಾ ಮಂದಿ ಅಂದ್ರೆ ನಿಮಗ್ಯಾಕೋ ಅಷ್ಟು ಅಲಕ್ಷ್ಯ? ನೀವು ಕೂಡ ಸಿನಿಮಾ ದಿಂದಲೇ ಬಂದವರು. ಮೊದಲು ವಿತರಕರಾಗಿ, ನಿರ್ಮಾಪಕರಾಗಿ ಇಲ್ಲಿ ಇದ್ದವರು. ಹಾಗಂತ ನಾನು ಭಾವಿಸಿಕೊಂಡಿದ್ದೇನೆ. ಇದು ತಪ್ಪೋ ಸರಿಯೋ ಗೊತ್ತಿಲ್ಲ. ಆದರೆ ನೀವು ಸಿನಿಮಾ ಮಂದಿಯನ್ನು ಇಷ್ಟೇಕೆ ಕಡೆಗಣಿಸುತ್ತಿದ್ದೀರಿ? ಸ್ಮಾರಕ ನಿರ್ಮಾಣದ ವಿಚಾರದಲ್ಲಿ ನಾನು ಅವತ್ತು ವಿಧಾನ ಸೌಧಕ್ಕೆ ಹೋದಾಗ, ನಾನು ಎರಡೂವರೆ ತಾಸು ಕಾದಿದ್ದೇನೆ. ಕೊನೆಗೂ ಭೇಟಿ ಮಾಡಿದಾಗ ಅದ್ಯಕೋ ನನ್ನನ್ನು ಅಸಡ್ಡೆಯಿಂದ ನೋಡಿ, ಕಳುಹಿಸಿದ್ರಿ. ಇದೆಲ್ಲವನ್ನು ಈಗ ರಾಜ್ಯದ ಜನತೆಗೆ ಹೇಳಬೇಕಾಗುತ್ತದೆ. ಸ್ಮಾರಕ ನಿರ್ಮಾಣ ನೀವು ಮಾಡಿದ್ದಲ್ಲ, ಈಗೇನಿದೆ ರಾಜಾಹುಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಅವರೇ ಸ್ಮಾರಕ ನಿರ್ಮಾಣ ಮಾಡಿದ್ದು ಎಂದು ನಟ ದೊಡ್ಡಣ್ಣ , ಎಚ್ ಡಿಕೆ ವಿರುದ್ಧ ಹರಿಹಾಯ್ದರು.
……………………….

Related Posts

error: Content is protected !!