ಬರ್ತ್ ಡೇ ಸಂಭ್ರಮದಲ್ಲಿ ನಟ ಡಾರ್ಲಿಂಗ್‌ ಕೃಷ್ಣ – ಪತಿಗೆ ಸ್ಪೆಷಲ್‌ ಆಗಿ ವಿಶ್‌ ಮಾಡಿದ ನಟಿ ಮಿಲನಾ

‘ಲವ್‌ ಮಾಕ್ಟೇಲ್‌’ ಖ್ಯಾತಿಯ ನಟ ಡಾರ್ಲಿಂಗ್‌ ಕೃಷ್ಣ ಅವರಿಗೆ ಇಂದು (ಜೂನ್12) ಹುಟ್ಟು ಹಬ್ಬದ ಸಂಭ್ರಮ. ಅವರಿಗಿದು ಮದುವೆಯ ನಂತರದ ಮೊದಲ ಹುಟ್ಟು ಹಬ್ಬ. ನಟಿ ಮಿಲನಾ ನಾಗರಾಜ್‌, ತಮ್ಮ ಪ್ರೀತಿಯ ಪತಿಗೆ ಸ್ಪೆಷಲ್‌ ಆಗಿ ಬರ್ತ್‌ ಡೇ ವಿಶ್‌ ಮಾಡಿದ್ದಾರೆ. ಸದ್ಯ ಈ ಜೋಡಿ ‘ಲವ್‌ ಮಾಕ್ಟೇಲ್‌ 2 ‘ ಚಿತ್ರದ ನಿರ್ಮಾಣದಲ್ಲಿ ಬ್ಯುಸಿ ಇದೆ. ಹಾಗೆಯೇ ಆ ಚಿತ್ರವೀಗ ಒಂದು ಹಂತಕ್ಕೆ ಚಿತ್ರೀಕರಣ ಕೂಡ ಮುಗಿಸಿದೆ. ಈ ಚಿತ್ರದ ಪೋಸ್ಟರ್‌ ಒಂದನ್ನು ಸೋಷಲ್‌ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಪತಿ ಡಾರ್ಲಿಂಗ್‌ ಕೃಷ್ಣ ಅವರಿಗೆ ಹುಟ್ಟು ಹಬ್ಬದ ಶುಭಾಯಶ ಕೋರಿದ್ದಾರೆ ಮಿಲನಾ ನಾಗರಾಜ್.

ಕನ್ನಡ ಚಿತ್ರರಂಗದ ಮಟ್ಟಿಗೆ ಈ ಜೋಡಿ ನಿಜಕ್ಕೂ ಅದೃಷ್ಟವಂತ ಜೋಡಿಯೇ. ಯಾಕಂದ್ರೆ ಅವರ ಸಿನಿ ಜರ್ನಿಯಲ್ಲಿ ಬ್ರೇಕ್‌ ಅಂತ ಸಿಕ್ಕಿದ್ದೇ ಒಂದು ವಿಶೇಷವಾದ ಸಂದರ್ಭಕ್ಕೆ. 2020 ಚಿತ್ರರಂಗದ ಪಾಲಿಗೆ ಒಂದು ಕರಾಳ ವರ್ಷ. ಆದರೆ, ಈ ವರ್ಷದ ಆರಂಭದಲ್ಲಿ ಡಾರ್ಲಿಂಗ್‌ ಕೃಷ್ಣ ಹಾಗೂ ಮಿಲನಾ ನಾಗರಾಜ್‌ ಜೋಡಿಯ ‘ಲವ್‌ ಮಾಕ್ಟೇಲ್‌’ ಚಿತ್ರ ಸೂಪರ್‌ ಡೂಪರ್‌ ಹಿಟ್‌ ಆಯಿತು. ಅಂತಹದೊಂದು ಸಂದರ್ಭಕ್ಕಾಗಿ ಹಲವು ವರ್ಷ ಕಾದಿದ್ದ ಆ ಜೋಡಿಗೆ 2020 ನಿಜಕ್ಕೂ ಲಕ್ಕಿ ವರ್ಷ ಆಯಿತು. ಆ ಚಿತ್ರದ ದೊಡ್ಡ ಸಕ್ಸಸ್‌ ನ ಬೆನ್ನಲೇ ಈ ಜೋಡಿ ಮದುವೆ ಆಯಿತು. 2020 ಫೆಬ್ರವರಿ 14 ಕ್ಕೆ ಅಂದರೆ ಪ್ರೇಮಿಗಳ ದಿನಕ್ಕೆ ಈ ಜೋಡಿ ಹಸೆಮಣೆ ಏರಿತು. ಎಲ್ಲವೂ ವಿಶೇಷವಾಗಿಯೇ ಘಟಿಸಿದವು.

ಅಂತಹ ವಿಶೇಷತೆಗಳ ನಡುವೆಯೇ ವಿವಾಹ ನಂತರದ ಮೊದಲ ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ನಟ ಡಾರ್ಲಿಂಗ್‌ ಕೃಷ್ಣ ಈಗ ಕನ್ನಡದ ಬಹು ಬೇಡಿಕೆನಟ. ಅವರ ಕೈಯಲ್ಲೀಗ ಸಾಲು ಸಾಲು ಚಿತ್ರಗಳಿವೆ. ಆ ನಡುವೆಯೇ ಭರ್ಜರಿ ಸಕ್ಸಸ್ಸಿನ ಲವ್‌ ಮಾಕ್ಟೆಲ್‌ ಚಿತ್ರದ ಸೀಕ್ವೆಲ್‌ ʼಲವ್‌ ಮಾಕ್ಟೇಲ್‌ 2ʼ ಕೂಡ ಬರುತ್ತಿದೆ. ಅದರ ನಿರ್ಮಾಣದಲ್ಲೂ ಇಬ್ಬರು ತೊಡಗಿಸಿಕೊಂಡಿದ್ದಾರೆ. ಅಲ್ಲದೇ ಈ ಚಿತ್ರ ಕನ್ನಡದ ಸಿನಿ ರಸಿಕರ ಪಾಲಿಗೆ ಬಹುದೊಡ್ಡ ನಿರೀಕ್ಷೆ ಹುಟ್ಟು ಹಾಕಿದೆ. ಲವ್‌ ಮಾಕ್ಟೇಲ್‌ ಮೊದಲ ಭಾಗ ದೊಡ್ಡ ಹಿಟ್‌ ಆಗಿದ್ದು ಕೂಡ ಇದಕ್ಕೆ ಕಾರಣ. ಅದೇ ಕಾರಣದಿಂದೀಗ ನಟಿ ಮಿಲನಾ ನಾಗರಾಜ್.‌ ಆ ಚಿತ್ರದ ಒಂದು ಪೋಸ್ಟರ್‌ ಹಂಚಿಕೊಳ್ಳುವ ಮೂಲಕ ನಟ ಡಾರ್ಲಿಂಗ್‌ ಕೃಷ್ಣ ಅವರಿಗೆ ಹುಟ್ಟು ಹಬ್ಬದ ಶುಭಾಶಯ ತಿಳಿಸಿದ್ದಾರೆ.

ಇನ್ನೊಂದೆಡೆ ಕೃಷ್ಣ ಅವರ ಹುಟ್ಟುಹಬ್ಬಕ್ಕೆ ‘ಶುಗರ್‌ ಫ್ಯಾಕ್ಟರಿ ‘ಚಿತ್ರ ತಂಡ ಟೀಸರ್‌ ಲಾಂಚ್‌ ಮಾಡಿದೆ. ಈ ಚಿತ್ರದಲ್ಲಿ ಸೋನಲ್‌ ಮಾಂಟೆರೋ, ಅದ್ವಿತಿ ಶೆಟ್ಟಿ ನಾಯಕಿ ಆಗಿ ಕಾಣಸಿಕೊಂಡಿದ್ದಾರೆ.

Related Posts

error: Content is protected !!