ನಮ್ಮ ತಂದೆಯ ಸಾವನ್ನು ರಾಜಕೀಯ ಮಾಡಬೇಡಿ-ಹೆಚ್.ಡಿ ಕುಮಾರಸ್ವಾಮಿ ವಿರುದ್ಧ ಅಂಬರೀಶ್ ಪುತ್ರ ಅಭಿಷೇಕ್ ಆಕ್ರೋಶ

ಮಂಡ್ಯ ದಲ್ಲಿನ ವಾಕ್ಸಮರದಲ್ಲೀಗ ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ಜೂನಿಯರ್ ರೆಬೆಲ್ ಸ್ಟಾರ್ ಅಭಿಷೇಕ ಅಂಬರೀಶ್ ಕೂಡ ಧ್ವನಿ ಮೊಳಗಿಸಿದ್ದಾರೆ.’ರಾಜಕೀಯವಾಗಿ ಏನು ಬೇಕಾದರೂ ವಿರೋಧ ಮಾಡಿ, ಆದರೆ ವೈಯಕ್ತಿಕ ವಿಚಾರಗಳಿಗೆ ಬರಬೇಡಿ. ನಮ್ಮ ತಂದೆಯ ಸಾವನ್ನು ರಾಜಕೀಯ ಮಾಡಬೇಡಿ,ಮನಸ್ಸಿಗೆ ತುಂಬಾ ನೋವಾಗುತ್ತದೆ ‘ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರ ಸ್ವಾಮಿ ಅವರ ವಿರುದ್ಧ ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್ ಕಿಡಿಕಾರಿದ್ದಾರೆ.

ಅಂದಿನ ಸಿಎಂ ಆಗಿದ್ದಾಗ ನೀವು ಏನ್ ಹೇಳಿದ್ರಿ ಅಂತ ಒಮ್ಮೆ ನೆನಪಿಸಿಕೊಳ್ಳಿ. ನಿಮ್ಮ ಬಳಿಯೇ ದಾಖಲೆ ಇದೆ. ಟೈಮ್ ವ್ಯರ್ಥ ಮಾಡುವುದು ಬೇಡ. ಮನೆಯಲ್ಲಿ ಯಾರನ್ನಾದ್ರೂ ಕಳೆದುಕೊಂಡಾಗ ಮಾತಾಡುವ ಪರಿಸ್ಥಿತಿಯಲ್ಲಿ ಇರುತ್ತಾರಾ ?ಅವತ್ತು ನಮ್ಮಮ್ಮ ಗಂಡನ ಕಳೆದುಕೊಂಡು ನೋವಲ್ಲಿದ್ದರು. ಅಂದು ಅಮ್ಮ ಏನೂ ಮಾತನಾಡಿಲ್ಲ. ಆದ್ರೆ ನೀವು ಸಾವನ್ನು ರಾಜಕೀಯ ಮಾಡಬೇಡಿ. ನೋವಾಗುತ್ತದೆ ಎಂದು ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಎಚ್ ಡಿಕೆ ವಿರುದ್ಧ ತೀವ್ರ ಆಕ್ರೋಶ ಹೊರ ಹಾಕಿದರು.
ಅಕ್ರಮ ಗಣಿಗಾರಿಕೆ ಧ್ವನಿ ಎತ್ತಿದ್ದು ನಟೋರಿಯಸ್ಸಾ? ಅಕ್ರಮದ ಬಗ್ಗೆ ಮಾತಾಡೋದು ನಟೋರಿಯಸ್ ಎನ್ನುವುದಾದರೆ, ಹೌದು ನಾವು ನಟೋರಿಸ್ ಅಂತಲೇ ಹೇಳಬೇಕಾಗುತ್ತದೆ. ಯಾರು ನಿಮ್ಮನ್ನು ವಿರೋಧಿಸುತ್ತಿಲ್ಲ ಅಂದ್ರೆ ನೀವು ಏನೂ ಮಾಡಿಲ್ಲ ಅಂತಲೇ ಅರ್ಥ. ವಿಲನ್ ಇಲ್ಲದೆ ಹೀರೋ ಸಾಧ್ಯವೇ ?ನಮ್ಮಮ್ಮ ಏನಾದರೂ ಮಾಡ್ತೀನಿ ಅಂತ ಮನಸ್ಸು ಮಾಡಿದರೆ ಕೊನೆಯವರೆಗೂ ಬಿಡುವುದಿಲ್ಲ. ಚುನಾವಣೆಗೆ ನಿಂತರು. ಚುನಾವಣೆಯನ್ನು ಮಾಡಿದರು. ಛಲದಿಂದ ಕೆಲಸ ಮಾಡಿದರು. ಗೆದ್ದರು. ಜನ ಅವರಿಗೆ ಆಶೀರ್ವಾದ ಮಾಡಿದರು. ಅದು ನಿಮಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಸಂಸದರು ಒಳ್ಳೆಯ ಕೆಲಸ ಮಾಡ್ತಿದ್ದಾರೆ ಅಂತ ಜನ ಹೇಳುತ್ತಿದ್ದಾರೆ. ಆದರೆ ಇವರಿಗೆ ಜನರ ಕೆಲಸ ಬೇಕಿಲ್ಲ, ಅವರ ರಾಜಕೀಯ ನಡೀಬೇಕು ಅದಕ್ಕಾಗಿಯೇವ ಹೀಗೆಲ್ಲ ಮಾಡುತ್ತಿದ್ದಾರೆಂದು ಗುಡುಗಿದರು.

Related Posts

error: Content is protected !!