Categories
ಸಿನಿ ಸುದ್ದಿ

ಶಶಿ ಹಿಡಿದ ಚಿತ್ರಪಥ – ಚಾಲನೆ ಕೊಡಲಿದ್ದಾರೆ ಗಿರೀಶ್‌ ಕಾಸರವಳ್ಳಿ- ಕೈಯಲ್ಲೇ ಅಪರೂಪ ಫೋಟೋ ಮಾಹಿತಿ

“ಚಿತ್ರಪಥ”…

– ಇದು ಅಪರೂಪದಲ್ಲಿ ಅಪರೂಪ ಎನ್ನುವ ಸಿನಿಮಾ ಆರ್ಕೈವ್ ಪೋರ್ಟಲ್‌. ಇದರ ಹಿಂದೆ ನಿಂತಿರೋದು ಶಶಿಧರ ಚಿತ್ರದುರ್ಗ. ದಶಕಗಳ ಕಾಲ ಪತ್ರಕರ್ತರಾಗಿ, ಸಿನಿಮಾ ಪತ್ರಕರ್ತರಾಗಿ ಕಾರ್ಯನಿರ್ವಹಿಸಿದ್ದ ಶಶಿ ಚಿತ್ರದುರ್ಗ, ಇದೀಗ ಹೊಸದೇನನ್ನೋ ಮಾಡಬೇಕೆಂದು ಹೊರಟಿದ್ದಾರೆ. “ಚಿತ್ರಪಥ” ಅವರ ಕನಸು. ಇದರಲ್ಲಿ ಸಿನಿಮಾ ಇತಿಹಾಸ, ಮಾಹಿತಿ, ಫೋಟೋಗಳನ್ನು ದಾಖಲಿಸುವುದರ ಜೊತೆಗೆ ಇಂದಿನ ಪೀಳಿಗೆಗೆ ಸಿನಿಮಾರಂಗದ ದಶಕಗಳ ಹಿಂದಿನ ಅಪೂರ್ವ ಮಾಹಿತಿ ಫೋಟೋಗಳನ್ನು ತಲುಪಿಸುವುದು, ಸಿನಿಮಾ ಕುರಿತಾಗಿ ಉತ್ತಮ ಅಭಿರುಚಿ ರೂಪಿಸುವುದು ‘ಚಿತ್ರಪಥ’ ಪೋರ್ಟಲ್‌ನ ಆಶಯ.

ಹಿರಿಯ ಸಿನಿಮಾ ಕಲಾವಿದರು ಹಾಗೂ ತಂತ್ರಜ್ಞರನ್ನು ಸ್ಮರಿಸುವುದರ ಜೊತೆಗೆ ಅಪರೂಪದ ಫೋಟೋ, ಪತ್ರ, ಮಾಹಿತಿಗಳನ್ನು ದಾಖಲಿಸುವುದು, ಉತ್ತಮ ಬರಹ, ಲೇಖನ ವಿಶ್ಲೇಷಣೆಗಳ ಮೂಲಕ ಸಿನಿಮಾ ಕುರಿತಾಗಿ ಒಳನೋಟಗಳನ್ನು ನೀಡುವ ನಿಟ್ಟಿನಲ್ಲಿ ‘ಚಿತ್ರಪಥ’ ಕೆಲಸ ಮಾಡಲಿದೆ.

ಇಲ್ಲಿ ಪ್ರಮುಖವಾಗಿ ಕನ್ನಡ ಸಿನಿಮಾ ಹಾಗೂ ಭಾರತದ ಇತರೆ ಪ್ರಾದೇಷಿಕ ಭಾಷಾ ಸಿನಿಮಾ ಸೇರಿದಂತೆ ಜಾಗತಿಕ ಸಿನಿಮಾ ಕುರಿತಾಗಿಯೂ ಫೋಟೋ ಮಾಹಿತಿ ಇರಲಿದೆ. ಜಾಗತಿಕ ಸಿನಿಮಾದ ವಸ್ತು, ವಿಷಯವನ್ನು ಕನ್ನಡಿಗರಿಗೆ ತಲುಪಿಸುವ ಪುಟ್ಟ ವಾಹಕವಾಗಿಯೂ ‘ಚಿತ್ರಪಥ’ ಆರ್ಕೈವ್ ಪೋರ್ಟಲ್ ಕಾರ್ಯನಿರ್ವಹಿಸಲಿದೆ ಎಂಬುದು ವಿಶೇಷ.

ಚಿತ್ರರಂಗ ನಡೆದುಬಂದ ಹಾದಿಯನ್ನು ದಾಖಲಿಸುವ, ಅಲ್ಲಿನ ಶ್ರೀಮಂತಿಕೆ, ಬೆರಗು, ಪನ್ನು ಹೇಳುವ, ಚಿತ್ರರಂಗದ ಅಂದಿನ ಕಾರ್ಯವೈಖರಿ, ಶೂಟಿಂಗ್ ಸ್ಟುಡಿಯೋಗಳು ಹಾಗೂ ಪರಿಕರಗಳ ವಿವರಗಳನ್ನು ನೀಡುವುದು, ಶ್ರೇಷ್ಠ ತಂತ್ರಜ್ಞರು ಹಾಗೂ ಕಲಾವಿದರ ಕುರಿತ ಮಾಹಿತಿ ನೀಡುವ ನಿಟ್ಟಿನಲ್ಲಿ ಹೆಜ್ಜೆ
ಇಡುವ ಒಂದು ಪ್ರಯತ್ನ. ಚಿತ್ರರಂಗದ ದಂತಕಥೆಗಳು ಎನಿಸಿದ ತಂತ್ರಜ್ಞರು ಮತ್ತು ಕಲಾವಿದರು ಅಪರೂಪದ ಫೋಟೋಗಳೊಂದಿಗಿನ ಮಾಹಿತಿ, ಪ್ರತಿಭಾವಂತರ ಕುರಿತ ಟಿಪ್ಪಣಿಗಳು ಕೂಡ ಇದರಲ್ಲಿರಲಿದೆ. ‘ನಾಸ್ಟಾಲ್ಜಿಯಾ”, “‘ಚಿತ್ರ-ಕಥೆ”, “ಶೂಟಿಂಗ್ ಸೋಜಿಗ”, “ಮಾಹಿತಿ– ವಿಶೇಷ”, “‘ನೆನಪು”, “ಪೋಸ್ಟರ್ ಮಾಹಿತಿ”, ” ಅತಿಥಿ ಅಕ್ಷರ” ವಿಭಾಗಗಳ ಮೂಲಕ ತೀರಾ ಅಕಾಡೆಮಿಕ್ ಧಾಟಿಯಲ್ಲಿ ಸಾಗದೆ, ಓದುಗರೊಂದಿಗೆ ಇಂಟರಾಕ್ಟೀವ್‌ ಆಗಿ ಮಾಹಿತಿ ನೀಡುವ ಪ್ರಯತ್ನ ಇಲ್ಲಾಗಲಿದೆ.


ಇನ್ನು, ಫೋಟೋಗಳ ಹಿಂದಿನ ಕತೆ, ಸಂದರ್ಭಗಳನ್ನು ಸ್ವತಃ ಫೋಟೋಗಳನ್ನು ಸೆರೆಹಿಡಿದ ಸ್ಥಿರಚಿತ್ರ ಛಾಯಾಗ್ರಾಹಕರು ನಿರೂಪಿಸಿದ್ದು, ಈ ವೀಡಿಯೋಗಳನ್ನು ’ಚಿತ್ರಪಥ’ ಯೂಟ್ಯೂಬ್ ಚಾನೆಲ್‌ನಲ್ಲಿ ನೋಡಬಹುದು. ‘ಚಿತ್ರಪಥ’ದಲ್ಲಿ ಪ್ರಮುಖವಾಗಿ ಕನ್ನಡ ಚಿತ್ರರಂಗದ ಬಗ್ಗೆ ಹೆಚ್ಚಿನ ಮಾಹಿತಿ
ಇರಲಿದೆ. ಕನ್ನಡ ಚಿತ್ರರಂಗದ ಹಿರಿಯ ಸಿನಿಮಾ ಸ್ಥಿರಚಿತ್ರ ಛಾಯಾಗ್ರಾಹಕರಾದ ಭವಾನಿ ಲಕ್ಷ್ಮೀನಾರಾಯಣ ಮತ್ತು ಪ್ರಗತಿ ಅಶ್ವತ್ಥ ನಾರಾಯಣ ಅವರು ಸೆರೆಹಿಡಿದ ಫೋಟೋಗಳು ಪ್ರಮುಖವಾಗಿ ಪೋರ್ಟಲ್‍ನಲ್ಲಿ ಬಳಕೆಯಾಗಲಿವೆ.

ಭವಾನಿ ಲಕ್ಷ್ಮೀನಾರಾಯಣ
ಕನ್ನಡ ಸಿನಿಮಾಗಳು ಮದರಾಸಿನ ಸ್ಟುಡಿಯೋಗಳಲ್ಲಿ ಚಿತ್ರೀಕರಣಗೊಳ್ಳುತ್ತಿದ್ದ ಕಾಲ ಅದು. ಅಲ್ಲಿನ ಸಿನಿಮಾ ಸುದ್ದಿಗಳನ್ನು ತಮ್ಮ ಫೋಟೋಗಳೊಂದಿಗೆ ಕನ್ನಡನಾಡಿಗೆ ಮುಟ್ಟಿಸುತ್ತಿದ್ದವರು ಭವಾನಿ ಲಕ್ಷ್ಮೀನಾರಾಯಣ. ಆಗ ನಟ, ನಟಿಯರು, ತಂತ್ರಜ್ಞರಿಗೆ ಅವರು ಸ್ಟಾರ್ ಫೋಟೋಗ್ರಾಫರ್! ಕನ್ನಡ ಬೆಳ್ಳಿಪರದೆ ಪ್ರವೇಶಿಸಿದ ಬಹುತೇಕ ಕಲಾವಿದರ ಭಾವಚಿತ್ರಗಳನ್ನು ಕ್ಲಿಕ್ಕಿಸಿದ ಹೆಗ್ಗಳಿಕೆ ಅವರದು.

ಫೋಟೋ ಜರ್ನಲಿಸ್ಟ್ ಆಗಿ ಸುಮಾರು ಎರಡೂವರೆ ದಶಕಗಳ ಕಾಲ (1955ರಿಂದ 1980) ಅವರು ಕನ್ನಡ ಚಿತ್ರರಂಗಕ್ಕೆ ಸೇವೆ ಸಲ್ಲಿಸಿದ್ದಾರೆ. ಐವತ್ತರ ದಶಕದಲ್ಲಿ ಹೆಚ್ಚಿನ ಸಂಖ್ಯೆಯ ಸಿನಿಮಾ ಸ್ಟಿಲ್ ಛಾಯಾಗ್ರಾಹಕರು ಇರಲಿಲ್ಲ. ಹಾಗಾಗಿ ಭವಾನಿಯವರ ಸಿನಿಮಾ ಸ್ಟಿಲ್‍ಗಳಿಗೆ ಬಹುಬೇಡಿಕೆ ಇತ್ತು. ಚಲನಚಿತ್ರ ಇತಿಹಾಸ ಗ್ರಂಥ ಸೇರಿದಂತೆ ಹತ್ತಾರು ಸಿನಿಮಾ ಪುಸ್ತಕಗಳು, ಪತ್ರಿಕೆಗಳಲ್ಲಿ ಭವಾನಿಯವರು ಸೆರೆಹಿಡಿದ ಅಸಂಖ್ಯ ಛಾಯಾಚಿತ್ರಗಳು ಬಳಕೆಯಾಗಿವೆ. ರಾಜ್ಯೋತ್ಸವ ಪುರಸ್ಕಾರ, ಕರ್ನಾಟಕ ಮಾಧ್ಯಮ ಅಕಾಡೆಮಿ ಗೌರವ, ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ ಸೇರಿದಂತೆ ಅವರಿಗೆ ಹತ್ತುಹಲವು ಗೌರವ ಸಂದಿವೆ.

ಪ್ರಗತಿ ಅಶ್ವತ್ಥನಾರಾಯಣ
ಕನ್ನಡ ಚಿತ್ರರಂಗದ ಬೆಳವಣಿಗೆಯ ಹಾದಿಯಲ್ಲಿ ಪ್ರಗತಿ ಸ್ಟುಡಿಯೋ ಹೆಸರು ಕಡ್ಡಾಯವಾಗಿ ಪ್ರಸ್ತಾಪವಾಗುತ್ತದೆ. ಸ್ಥಿರಚಿತ್ರ ಛಾಯಾಗ್ರಹಣದ ಮೂಲಕ ನಾಲ್ಕು ದಶಕಗಳ ಕಾಲ ಕನ್ನಡ ಚಿತ್ರಜಗತ್ತಿನ ಭಾಗವಾಗಿದ್ದು ಹೆಮ್ಮೆ. ಸಿನಿಮಾ ಸ್ಥಿರಚಿತ್ರ ಛಾಯಾಗ್ರಹಣದಲ್ಲಿ ಅಶ್ವತ್ಥ ಅವರದ್ದು ನಾಲ್ಕು ದಶಕಗಳ ಅನುಭವ. ಅಧಿಕೃತವಾಗಿ ಅಶ್ವತ್ಥರ ಸ್ಥಿರಚಿತ್ರ ಛಾಯಾಗ್ರಹಣ ವೃತ್ತಿ ಆರಂಭವಾಗಿದ್ದು ಮದರಾಸಿನಲ್ಲಿ ಬೆಳ್ಳಿಮೋಡ" ಚಿತ್ರದೊಂದಿಗೆ. ಅವರು ಸ್ಥಿರಚಿತ್ರ ಛಾಯಾಗ್ರಹಣ ಮಾಡಿದ ಕೊನೆಯ ಚಿತ್ರಪ್ರೇಮ ಪ್ರೇಮ ಪ್ರೇಮ”.`”ಪ್ರಗತಿ” ಸ್ಟುಡಿಯೋ ಆರಂಭಿಸಿದ ನಂತರ ಸುಮಾರು 275 ಸಿನಿಮಾಗಳಿಗೆ ಅಶ್ವತ್ಥರು ಸ್ಟಿಲ್ ಫೋಟೋಗ್ರಫಿ ಮಾಡಿದ್ದಾರೆ.

ಮದರಾಸಿನಲ್ಲಿದ್ದಾಗ ಮಲಯಾಳಂ ಚಿತ್ರಗಳೂ ಸೇರಿದಂತೆ 25ಕ್ಕೂ ಹೆಚ್ಚು ಚಿತ್ರಗಳಿಗೆ ದುಡಿದಿದ್ದರು. ಒಟ್ಟಾರೆ ಸ್ಟಿಲ್ ಫೋಟೋಗ್ರಾಫರ್ ಆಗಿ ಅವರು ಕೆಲಸ ಮಾಡಿದ ಚಿತ್ರಗಳ ಸಂಖ್ಯೆ 300 ದಾಟುತ್ತದೆ. ಪುಟ್ಟಣ್ಣ ಕಣಗಾಲ್ ನಿರ್ದೇಶನದ ಹನ್ನೊಂದು, ಸಿದ್ದಲಿಂಗಯ್ಯನವರ ಹದಿನಾಲ್ಕು ಸಿನಿಮಾಗಳಿಗೆ ಅಶ್ವತ್ಥರು ಸ್ಥಿರಚಿತ್ರ ಛಾಯಾಗ್ರಾಹಕರಾಗಿ ಕಾರ್ಯನಿರ್ವಹಿಸಿದ್ದಾರೆ. ಮೈಲುಗಲ್ಲು ಎನಿಸಿದ ಹಲವಾರು ಕನ್ನಡ ಚಿತ್ರಗಳಿಗೆ ಕಾರ್ಯನಿರ್ವಹಿಸಿರುವ ಅಶ್ವತ್ಥರ ಸಂಗ್ರಹದಲ್ಲಿ ಸಹಸ್ರಾರು ಫೋಟೋ ನೆಗೆಟಿವ್ ಇವೆ. ಸಿನಿಮಾ ಸ್ಥಿರಚಿತ್ರ, ಸಿನಿಮಾಗೆ ಸಂಬಂಧಿಸಿದ ಇತರೆ ಫೋಟೋ, ಚಿತ್ರೀಕರಣದ ಸಂದರ್ಭದ ಕ್ಲಿಪಿಂಗ್, ಚಿತ್ರೋದ್ಯಮದ ಕಾರ್ಯಕ್ರಮ, ನಟ- ನಟಿಯರ ಭಾವಚಿತ್ರ, ಕಲಾವಿದರ ಕುಟುಂಬಗಳ ವೈಯಕ್ತಿಕ ಸಮಾರಂಭಗಳು… ಹೀಗೆ ಅವರ ಸಂಗ್ರಹದಲ್ಲಿನ ಅಸಂಖ್ಯಾತ ಫೋಟೋಗಳು ಕನ್ನಡ ಚಿತ್ರರಂಗದ ಇತಿಹಾಸ ದಾಖಲಿಸುತ್ತವೆ.

ಚಿತ್ರಪಥ ಸಂಪಾದಕ – ಶಶಿಧರ ಚಿತ್ರದುರ್ಗ
ಹದಿಮೂರು ವರ್ಷಗಳ ಕಾಲ ಕನ್ನಡಪ್ರಭ, ವಿಜಯ ಕರ್ನಾಟಕ, ದಿ ಸ್ಟೇಟ್‌ ವೆಬ್‌ ಪೋರ್ಟಲ್‌ನಲ್ಲಿ ಸಿನಿಮಾ ಪತ್ರಕರ್ತನಾಗಿ ಕೆಲಸ ಮಾಡಿದ್ದಾರೆ. ಸಿನಿಮಾಗೆ ಸಂಬಂಧಿಸಿದಂತೆ ಏಳು ಪುಸ್ತಕಗಳನ್ನು ಪ್ರಕಟಿಸಿದ್ದು, 2015ನೇ ಸಾಲಿನ ರಾಜ್ಯಸರ್ಕಾರದ ಸಿನಿಮಾ ಸಬ್ಸಿಡಿ ಕಮಿಟಿ ಸದಸ್ಯರಾಗೊ ಕಾರ್ಯನಿರ್ವಹಿಸಿದ್ದಾರೆ.

ಸದ್ಯ ಸಿನಿಮಾ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಾರೆ. ಅಂದಹಾಗೆ, ‘ಚಿತ್ರಪಥ’ ಪೋರ್ಟಲ್ ವಿನ್ಯಾಸವನ್ನು ಕೃಷ್ಣೇಗೌಡ ಎನ್‌.ಎಲ್‌ ಮಾಡಿದರೆ, ಶೀರ್ಷಿಕೆ, ಲೋಗೋ ವಿನ್ಯಾಸವನ್ನು ರಂಜಿತ್ ರಾಮಚಂದ್ರನ್‌ ಮಾಡಿದ್ದಾರೆ.

‘ಚಿತ್ರಪಥ’ ಲಾಂಚ್
(www.chithrapatha.com)
ಮಾರ್ಚ್‌ 6ರಂದು ಶನಿವಾರ ರೇಣುಕಾಂಬ ಸ್ಟುಡಿಯೋದಲ್ಲಿ ಕನ್ನಡದ ಹೆಮ್ಮೆಯ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿಯವರು ‘ಚಿತ್ರಪಥ’ ಅನಾವರಣಗೊಳಿಸಲಿದ್ದಾರೆ.

ರಾಷ್ಟ್ರಪ್ರಶಸ್ತಿ ಪುರಸ್ಕೃತ ನಟ ಸಂಚಾರಿ ವಿಜಯ್‌, ಚಿತ್ರಸಾಹಿತಿ ಕವಿರಾಜ್‌ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮದಲ್ಲಿ ಹಿರಿಯ ಸ್ಥಿರಚಿತ್ರ ಛಾಯಾಗ್ರಾಹಕರಾದ ಭವಾನಿ ಲಕ್ಷ್ಮೀನಾರಾಯಣ ಮತ್ತು ಪ್ರಗತಿ ಅಶ್ವತ್ಥ ನಾರಾಯಣ ಅವರನ್ನು ಸನ್ಮಾನಿಸಲಾಗುವುದು.

Categories
ಸಿನಿ ಸುದ್ದಿ

ಟಾಸ್ಕ್ ಅಂತ ಬಂದಾಗ ದಿವ್ಯಾಗೆ ಯಾರೂ ಸಪೋರ್ಟ್ ಮಾಡಲ್ವಂತೆ- ಹಾಗಾದ್ರೆ ಬಿಗ್‌ ಬಾಸ್‌ ಮನೆಯಲ್ಲಿ ನಡೆಯುತ್ತಿ ರುವುದಾದರೂ ಏನು ?

ಬಿಗ್‌ಬಾಸ್‌ ಮನೆ ದಿನೇ ದಿನೆ ಸುದ್ದಿ ಆಗುತ್ತಿದೆ. ನಿತ್ಯವೂ ಒಂದಲ್ಲೊಂದು ಕುತೂಹಲಕಾರಿ ವಿಷಯಗಳು ರಿವೀಲ್‌ ಆಗುತ್ತಿವೆ. ವಿಭಿನ್ನವಾದ ವ್ಯಕ್ತಿತ್ವ, ವಿಭಿನ್ನವಾದ ಮನಸ್ಥಿತಿ ಜನರೆಲ್ಲಾ ಒಂದೆಡೆ ಸೇರಿಕೊಂಡರೆ ಅಲ್ಲಿ ಜಗಳ, ಕಿತ್ತಾಟ ಇದ್ದದ್ದೆ. ಹೌದು, ಈಗ ಬಿಗ್‌ ಬಾಸ್‌ ಮನೆ ಕೂಡ ಹಾಗೆ ಆಗಿದೆ. ಅಲ್ಲೀಗ ಹಾವು ಮುಂಗುಸಿಯಂತಾಡುವ ಆಟ ಅಲ್ಲೀಗ ಜೋರಾಗಿದೆ. ಸದ್ಯಕ್ಕೆ ಬಿಗ್‌ ಬಾಸ್‌ ಮನೆಯಲ್ಲಿ ವೀಕ್ಷಕರ ಕೇಂದ್ರ ಬಿಂದುವಾಗಿರುವ ದಿವ್ಯಾ ಸುರೇಶ್‌, ಮನೆಯಲ್ಲಿರುವ ಹಲವರ ಮೇಲೆ ಮುನಿಸಿಕೊಂಡಿದ್ದಾರೆ. ದಿವ್ಯಾ ಮಹಾ ಕೋಷಿಷ್ಟೆ ಎನ್ನುವುದು ಬಯಲಾಗ ತೊಡಗಿದೆ.

ಗುರುವಾರದ ಎಪಿಸೋಡ್‌ ನಲ್ಲಿ ದಿವ್ಯಾ ಸುರೇಶ್‌ ಹಾಗೂ ಧನುಶ್ರೀ ನಡುವೆ ಮಹಾ ಸಮರವೇ ನಡೆದು ಹೋಯಿತು. ಅವರಿಬ್ಬರ ಪೈಪೋಟಿಯಂತೂ ನೋಡುಗರಿಗೆ ಅಚ್ಚರಿ ಎಬ್ಬಿಸಿತು. ಇವರಿಬ್ಬರ ಕಾಂಬಿನೇಷನ್ ನಲ್ಲಿ, ಒಬ್ಬರನ್ಬೊಬ್ಬರು ಬಿಟ್ಟೇ ಕೊಡದೆ ಆಟ ಆಡಿದರು. ಇದರಲ್ಲಿ ಧನುಶ್ರೀಗೆ ಒಂದು ಅಂಕವಾದರೆ, ದಿವ್ಯಾ ಸುರೇಶ್ ಗೆ ನಾಲ್ಕು ಅಂಕ ದೊರೆಯಿತು. ಟಾಸ್ಕ್ ನಲ್ಲಿ ದಿವ್ಯಾ ಸುರೇಶ್‌ ಗೆ ಸುಲಭವಾದ ಜಯ ದೊರೆಯಿತು. ಆದಾ ಮೇಲೆ ಬಿಗ್‌ ಬಾಸ್‌ ನ ಲಿವಿಂಗ್‌ ಏರಿಯಾದಲ್ಲಿ ಗುಸು ಗುಸು ಶುರುವಾಯಿತು. ಅದೇನಪ್ಪಾ ಅಂದ್ರೆ, ನಾವಿಬ್ಬರು ಸ್ಪರ್ಧೆಯಲ್ಲಿ ಚೆನ್ನಾಗಿಯೇ ಆಡಿದ್ದೀವಿ ಅನ್ನುತ್ತಾ, ಮೊದಲು ದಿವ್ಯಾ ಸುರೇಶ್ ಮಾತು ಶುರುಮಾಡಿದರು.

” ನನಗೆ ಕೋಪ ಬಲು ಬೇಗ ಬಂದುಬಿಡುತ್ತದೆ. ಅದ್ಯಾವುದೇ ಸಮಯದಲ್ಲೂ ನನಗೆ ನೋವಾದರೆ ಕೋಪದಲ್ಲಿ ರೇಗಿ ಬಿಡುವ ಮನೋಭಾವ ನನ್ನದು. ಇವತ್ತಿನ ಟಾಸ್ಕ್ ನಲ್ಲಿ ನನಗನಿಸಿತು, ಅಲ್ಲಿ ನಾವು ಆಡುತ್ತಿದ್ದಾಗ, ಒಬ್ಬರೂ ನನ್ನ ಹೆಸರು ಕೂಗಲಿಲ್ಲ. ಆಟಗಳಲ್ಲಿ ಆಟಗಾರನಿಗೆ ಪ್ರೋತ್ಸಾಹ ಕೊಡುವುದು ಸಂಸ್ಕ್ರತಿ.‌ ಇದರಿಂದ ನಮಗೆ ಆಟವಾಡಲು ಇನ್ನೂ ಜೋಶ್ ಬರುತ್ತದೆ. ಆದರೆ ಕೇವಲ ಧನುಶ್ರೀ ಅಂತಾನೆ ಕೂಗುತ್ತಿದ್ದರು‌. ಇದು ನನಗೆ ಸಿಕ್ಕಾಪಟ್ಟೆ ನೋವಾಯಿತು‌‌. ಇದರಿಂದ ನನಗೆ ನನ್ನಲ್ಲೇ, ಇಲ್ಲ ನಾನು ಗೆಲ್ಲಬೇಕು ಅಂತೆನಿಸಿ ಛಲ ಬಂತು. ಸೋ ಗೆಲುವು ನನ್ನದಾಯಿತುʼ ಅಂತ ಪ್ರತಿಸ್ಪರ್ಧಿ ಧನುಶ್ರೀ ಜೊತೆ ಹೇಳಿಕೊಂಡರು.


ದಿವ್ಯಾ ಮಾತನ್ನು ಗಂಭೀರವಾಗಿ ಆಲಿಸಿದ ಧನುಶ್ರೀ, ಮಾತು ಶುರು ಮಾಡಿದರು.” ನನ್ನ ಮುಖಕ್ಕೂ ನೀನಉ ಹೊಡೆದು, ತುಂಬಾ ನೋವಾಯಿತು. ಆದರೆ ಅದು ಗೇಮ್. ಅದು ಗೇಮ್ ತರಹನೇ ತಗೊಂಡು ಹೋಗಬೇಕುʼ ಅಂದರು. ಇದಕ್ಕೆ ದಿವ್ಯಾ ಸುರೇಶ್ ಇನ್ನಷ್ಟು ತನ್ನ ಭಾವನೆಗಳನ್ನು ಹೊರ ಹಾಕಲು ಪ್ರಯತ್ನಿಸಿ,” ನನಗೂ ನೀನು ಮುಖಕ್ಕೆ ಹೊಡೆದಿರುವೆ.‌ ಸಡನ್ ಆಗಿ ಕೋಪ ಬಂತುʼ ಅಂತ ಬಿಡದ ಮಾತನ್ನು ಮುಂದುವರಿಸುತ್ತಾ ಹೋದರು. ಇದನ್ನು ಗಮನಿಸಿದ ಟಿಕ್ ಟಾಕ್ ಬೆಡಗಿ ಧನುಶ್ರೀ, ನಿಮ್ಮ ಮನಸ್ಸು ನನಗೆ ಅರ್ಥ ಆಗುತ್ತೆ, ನಾ ಸದಾ ನಿಮ್ಮ ಜೊತೆಯಲ್ಲಿರುವ ಅಂತ ಹೊಗಳಿಕೆಯ ಮಾತುಗಳನ್ನಾಡಿ ಸುಮ್ಮನಾದರು.
……………………

Categories
ಸಿನಿ ಸುದ್ದಿ

ಒಂದೇ ದಿನ – ಒಂದೇ ವೇದಿಕೆ 12 ಚಿತ್ರಗಳ ಪೋಸ್ಟರ್‌ ಲಾಂಚ್‌ ಇದು ಕನ್ನಡ ಚಿತ್ರರಂಗಕ್ಕೊಂದು ದಾಖಲೆ

ರಂಗಪ್ರತಿಭೆ ಅಜಯ್‌ ಕುಮಾರ್‌ ಹೊಸದೊಂದು ದಾಖಲೆ ಬರೆದಿದ್ದಾರೆ. ಅಜಯ್‌ ಸರ್ಕಲ್‌ ಮೂಲಕ ಒಂದೇ ದಿನ ಒಂದೇ ವೇದಿಕೆ ಮೇಲೆ ನಿರ್ದೇಶಕರ 12 ಚಿತ್ರಗಳ ಪೋಸ್ಟರ್‌ ಲಾಂಚ್‌ ಮಾಡುವ ಮೂಲಕ ಸ್ಯಾಂಡಲ್‌ವುಡ್‌ ನಲ್ಲಿ ಸಂಚಲನ ಸೃಷ್ಟಿಸಿದರು. ಆ ದಿನ ಪೋಸ್ಟರ್‌ ಲಾಂಚ್‌ ಕಾರ್ಯಕ್ರಮ ಬೆಂಗಳೂರಿನ ಮಲ್ಲೇಶ್ವರಂನ ರೇಣುಕಾಂಬ ಮಿನಿ ಚಿತ್ರಮಂದಿರದಲ್ಲಿ ವಿಶೇಷವಾಗಿ ನಡೆಯಿತು. ಅವತ್ತಿಗೆ ಗ್ಲಾಮರಸ್‌ ನಟಿ ರಾಗಿಣಿ ದ್ವಿವೇದಿ ಚೀಪ್ ಗೆಸ್ಟ್. ದಂಗೆಯ ಸೂಚಕವೋ ಏನೋ ಅವತ್ತು ಕೆಂಪು ಸ್ಕರ್ಟ್‌ ತೊಟ್ಟು ಬಂದಿದ್ದ ರಾಗಿಣಿ ಇಡೀ ಕಾರ್ಯಕ್ರಮ ಕೇಂದ್ರ ಬಿಂದು ಆಗಿದ್ದರು.

ಡ್ರಗ್ಸ್‌ ಕೇಸ್‌ ನಲ್ಲಿ ಅವರಿ ಜೈಲಿಗೆ ಹೋಗಿ ಬಂದ ನಂತರ ಮೊಟ್ಟ ಮೊದಲು ಅಟೆಂಡ್‌ ಮಾಡಿದ ಸಿನಿಮಾ ಕಾರ್ಯಕ್ರಮ ಅದು. ಅವರೇ ಅಲ್ಲಿ ಮೈನ್‌ ಆಟ್ರ್ಯಾಕ್ಷನ್‌ ಆಗಿದ್ದಕ್ಕೂ ಅದೇ ಕಾರಣ. ಅವರೊಂದಿಗೆ ಚಿತ್ರ ಸಾಹಿತಿ ಹಾಗೂ ನಿರ್ದೇಶಕ ನಾಗೇಂದ್ರ ಪ್ರಸಾದ್‌ ಇದ್ದರು. ನಾಡಿನ ಹೆಸರಾಂತ ಕಲಾವಿದ ಶಶಿಧರ್‌ ಅಡಪ್‌ ಇದ್ದರು. ನಿರ್ಮಾಪಕ ನಾಗೇಶ್‌ ಕುಮಾರ್‌ ಹಾಗೂ ನಿರ್ದೇಶಕ ನಾಗೇಂದ್ರ ಅರಸ್‌ ಕೂಡ ಸಾಥ್‌ ನೀಡಿದ್ದರು. ಅವತ್ತಿಗೆ ಅದೊಂದು ವಿಶೇಷ ಕಾರ್ಯಕ್ರಮ ಅದು. ಒಂದೇ ವೇದಿಕೆ ಮೇಲೆ12 ಚಿತ್ರಗಳ ಪೋಸ್ಟರ್‌ ಲಾಂಚ್‌ ಅಂದ್ರೆ ತಮಾಷೆನಾ? ರೇಣುಕಾಂಬ ಸ್ಟುಡಿಯೋ ಇತಿಹಾಸದಲ್ಲೂ ಅದೇ ಮೊದಲು. ಅಂತಹದೊಂದು ಕಾರ್ಯಕ್ರಮಕ್ಕೆ ಕಾರಣ ಆಗಿದ್ದು ರಂಗ ಕರ್ಮಿ ಅಜಯ್‌ ಕುಮಾರ್.

‌ಅಜಯ್‌ ಕುಮಾರ್‌ ಆರಂಭದಿಂದಲೂ ರಂಗಭೂಮಿಯಲ್ಲಿ ಗುರುತಿಸಿಕೊಂಡವರು. ಅನೇಕ ರಂಗತಂಡಗಳಲ್ಲಿ ಕೆಲಸ ಮಾಡಿದವರು. ಅದೇ ಅನುಭವದಲ್ಲಿ ಒಂದು ಮಕ್ಕಳ ನಾಟಕ ಕೂಡ ನಿರ್ದೇಶಿಸಿದ್ದರು. ಈಗ ತಾವೇ ಮುಂದೆ ನಿಂತು ಈಗ ಗೆಳೆಯರ ಜತೆಗೆ ಸೇರಿಕೊಂಡು ಸಿನಿಮಾ ನಿರ್ಮಾಣ ಹಾಗೂ ನಿರ್ದೇಶನಕ್ಕೆ ಮುಂದಾಗಿದ್ದಾರೆ. ಒಂದಲ್ಲ, ಎರಡಲ್ಲ ಏಕ ಕಾಲದಲ್ಲೇ 12 ಸಿನಿಮಾಗಳ ನಿರ್ಮಾಣ ಅಜಯ್‌ ಸರ್ಕಲ್‌ ಮೂಲಕ ಆಗುತ್ತಿದೆ. ಅವೆಲ್ಲ ಚಿತ್ರಗಳ ಪೋಸ್ಟರ್‌ ಲಾಂಚ್‌ ಕಾರ್ಯಕ್ರಮ ಅವತ್ತು ನಡೆಯಿತು. ನಟಿ ರಾಗಿಣಿ, ಶಶಿಧರ್ ಅಡಪ್, ನಾಗೇಂದ್ರ ಪ್ರಸಾದ್, ನಾಗೇಂದ್ರ ಅರಸ್ ಮತ್ತಿತರು ಪೋಸ್ಟರ್ ಅನಾವರಣಗೊಳಿಸಿದರು. ಶಫಿ ಹೆಬ್ಬಾಳ್‌ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ʼ ಲವ್‌ ಯು ಚಿನ್ನʼ ಚಿತ್ರಕ್ಕೆ ತನುಶ್ರೀ ಬಿ.ವಿ ಆಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಈ ಚಿತ್ರದ ಪೋಸ್ಟರ್‌ ಅನ್ನು ನಟಿ ರಾಗಿಣಿ ಲಾಂಚ್‌ ಮಾಡಿದರು.

ದೇವನಹಳ್ಳಿ ದೇವರಾಜ್‌ ನಿರ್ಮಾಣ ಹಾಗೂ ನಿರ್ದೇಶನದ ” ಆಂಡ್ರಾಯ್ಡ್‌ ಫೋನ್‌ʼ ಚಿತ್ರದ ಪೋಸ್ಟರ್‌ ಅನ್ನು ಕೂಡ ರಾಗಿಣಿ ಲಾಂಚ್‌ ಮಾಡಿದರು. ಚನ್ನಬಸವ ನಿರ್ಮಾಣದ ʼಮಂದಾರʼ ಚಿತ್ರಕ್ಕೆ ಯುವ ಪ್ರತಿಭೆ ನವ್ಯಾಶ್ರೀ ಆಕ್ಷನ್‌ ಕಟ್‌ ಹೇಳುತ್ತಿದ್ದು, ಈ ಚಿತ್ರದ ಪೋಸ್ಟರ್‌ ಅನ್ನು ರಾಗಿಣಿ ಲಾಂಚ್‌ ಮಾಡಿದರು. ನೆಲ ಮಂಗಲ ರಾಘವೇದ್ರ ನಿರ್ಮಾಣ ಹಾಗೂ ವನಿತಾ ನಿರ್ದೇಶನದ ʼರಕ್ತಾಕ್ಷಿʼ, ಮಂಜುನಾಥ್‌ ನಿರ್ಮಾಣ ಹಾಗೂ ಅಶ್ವಿನಿ ನಿರ್ದೇಶನದ ʼದೇವರ ಮಕ್ಕಳುʼ, ಅಜಯ್‌ ಕುಮಾರ್‌ ನಿರ್ಮಾಣ ಹಾಗೂ ನಿರ್ದೇಶನದ “ಪ್ರೇಮಂ ಶರಣಂ ಗಚ್ಚಾಮಿʼ, ಅಜಯ್‌ ಕುಮಾರ್‌ ನಿರ್ಮಾಣ ಹಾಗೂ ನಿರ್ದೇಶನದ ಮತ್ತೊಂದು ಚಿತ್ರ ʼಡ್ರಗ್‌ ಪೆಡ್ಲರ್‌ʼ, ಕುಚೇಲಾ ನಿರ್ಮಾಣ ಹಾಗೂ ಕಂಕಣವಾಡಿ ಬಸವರಾಜ್‌ ನಿರ್ದೇಶನದ ಠಕ್ಕ, ಶಿವ ಸಾಹಿತ್ಯ ನಿರ್ಮಾಣ ಹಾಗೂ ದಿನೇಶ್‌ ನಿರ್ದೇಶನದ ವ್ಯಾಕ್ಷಿನ್‌ , ಲಕ್ಷ್ಮಿ ನಿರ್ಮಾಣ ಹಾಗೂ ಶಿವ ಸಾಹಿತ್ಯ ನಿರ್ದೇಶನದ ಸಂಧ್ಯಾರಾಗ, ಯೋಗಾ ಮಕರಂಧ್‌ ನಿರ್ಮಾಣ ಹಾಗೂ ಅಜಯ್‌ ಕುಮಾರ್‌ ನಿರ್ದೇಶನದ ಶ್ರೀರಾಮ ಸಿದ್ದಿ ಹಾಗೂ ಲಾಕ್‌ ಡೌನ್‌ ಚಿತ್ರಗಳ ಪೋಸ್ಟರ್‌ ಗಳು ಲಾಂಚ್‌ ಆದವು.

ಲಾಕ್‌ ಡೌನ್‌ ಸಮಯದಲ್ಲಿ ಸಿನಿಮಾ ಕಥೆ ಬರೆಯಬೇಕೆಂದು ಹೊರಟೆ. ಒಂದು ಕತೆ ಬರೆದು ಅದಕ್ಕೆ ಬಂಡವಾಳ ಹೂಡುವವರನ್ನು ಹುಡುಕು ಹೊರಟೆ. ಯಾರು ಕೂಡ ದೊಡ್ಡ ಮಟ್ಟದಲ್ಲಿ ಬಂಡವಾಳ ಹೂಡಲು ಸಿಗಲಿಲ್ಲ. ಆಗ ಹೊಳೆದಿದ್ದು ಸಣ್ಣ ಮಟ್ಟದಲ್ಲಿಯೇ ಸಿನಿಮಾ ನಿರ್ಮಾಣ ಮಾಡೋಣ ಎನ್ನುವ ಆಲೋಚನೆ. ಇಲ್ಲಿರುವ ಅಷ್ಟು ಸಿನಿಮಾಗಳು ತಲಾ 50 ಲಕ್ಷದಷ್ಟು ಬಂಡವಾಳದಲ್ಲಿ ನಿರ್ಮಾಣ ಆಗುತ್ತಿವೆ. ಕಡಿಮೆ ಬಂಡವಾಳದಲ್ಲಿ ಗುಣಮಟ್ಟದ ಸಿನಿಮಾ ಮಾಡಬೇಕೆನ್ನುವುದು ನಮ್ಮ ಆಶಯ ಅಂತ ಅಜಯ್‌ ಸರ್ಕಲ್‌ ಮುಖ್ಯಸ್ಥ ಅಜಯ್‌ ಕುಮಾರ್‌ ಹೇಳಿದರು. ಗಣ್ಯರು ಮಾತನಾಡಿ ತಂಡಕ್ಕೆ ಶುಭಾಶಯ ಕೋರಿದರು.

Categories
ಸಿನಿ ಸುದ್ದಿ

ಕೃಷಿ ಇಲಾಖೆಗೆ ಬ್ರಾಂಡ್ ಅಂಬಾಸಡರ್ -ಇಂದು(ಮಾ.5) ಅಧಿಕಾರ ಸ್ವೀಕರಿಸುತ್ತಾರೆ ಚಾಲೆಂಜಿಂಗ್ ಸ್ಟಾರ್

ಬಹುನಿರೀಕ್ಷಿತ ‘ರಾಬರ್ಟ್‌ ‘ ಚಿತ್ರದ ಬಿಡುಗಡೆಯ ಭರ್ಜರಿ ಕುತೂಹಲದ ನಡುವೆಯೇ ನಟ ದರ್ಶನ್ ರಾಜ್ಯ ಕೃಷಿ ಇಲಾಖೆಯ ಪ್ರಚಾರ ರಾಯಭಾರಿಯಾಗಿ ನೇಮಕ ಗೊಂಡಿದ್ದು, ನಾಳೆ ಅಧಿಕೃತ ವಾಗಿ ಅವರು ಅಧಿಕಾರ ಸ್ವೀಕಾರ ಮಾಡುತ್ತಿದ್ದಾರೆ. ಈ ಅಧಿಕಾರ ಸ್ವೀಕಾರ ಕಾರ್ಯಕ್ರಮ ನಾಳೆ ವಿಕಾಸ ಸೌಧದಲ್ಲಿ ನಡೆಯುತ್ತಿದೆ. ಕೃಷಿ‌ಸಚಿವ ಬಿ.ಸಿ. ಪಾಟೀಲ್ ನೇತೃತ್ವದಲ್ಲಿ ಈ ಕಾರ್ಯಕ್ರಮ‌ ನಡೆಯುತ್ತಿದೆ.

ದರ್ಶನ್ ಪಾಲಿಗೆ ಇದು ಸಿನಿಮಾದಷ್ಟು ಕಲರ್ ಫುಲ್ ವೇದಿಕೆ ಅಲ್ಲ. ಆದರೆ ಸಿನಿಮಾದಾಚೆ ದೊಡ್ಡ ಅವಕಾಶ. ರಾಜ್ಯದ ಕೃಷಿ ವಲಯಕ್ಕೆ ಬ್ರಾಂಡ್ ಆಗಿ ಗುರುತಿಸಿಕೊಳ್ಳುವ ಸದಾವಕಾಶ. ಹಾಗಂತ ಅವರಿಗೇನು ಕೃಷಿ ಬದುಕು ಹೊಸದಲ್ಲ. ನಟನೆಯ ಜತೆಗೆಯೇ ಅವರೊಬ್ಬ ಪ್ರಾಣಿಪ್ರಿಯ, ವನ್ಯಜೀವಿ ಛಾಯಾಗ್ರಾಹಕ, ಹಾಗೆಯೇ ತಮ್ಮದೇ ಫಾರ್ಮ್ ಹೊಂದಿ ಕೃಷಿ ಮಾಡಿದ್ದು ಎಲ್ಲರಿಗೂ ಗೊತ್ತು. ಅದೇ ಹಾದಿಯಲ್ಲೀಗ ಇನ್ನೊಂದು ಸದಾವಕಾಶ. ಕೃಷಿ ಇಲಾಖೆಯ ಬ್ರಾಂಡ್ ಅಂಬಾಸಿಡರ್. ಸದ್ಯಕ್ಕೆ ಅವರು ಕೃಷಿ ಇಲಾಖೆಯ ಬ್ರಾಂಡ್ ಅಂಬಾಸಡರ್ ಅಂತಷ್ಟೇ ಇಲಾಖೆ ಪ್ರಕಟಿಸಿದೆ. ಅವರ ಮೂಲಕ ಕೃಷಿ ಇಲಾಖೆ ಕಾರ್ಯಕ್ರಮ ಗಳನ್ನು ಎಷ್ಟರ ಮಟ್ಟಿಗೆ ತೆಗೆದುಕೊಂಡು ಹೋಗಬಲ್ಲದು, ಅದಕ್ಕೆ ದರ್ಶನ್ ಹೇಗೆ ಸಹಕರಿಸುತ್ತಾರೆಂಬುದು ಮಾತ್ರ ಇನ್ನು ಬಾಕಿ ಇದೆ.

Categories
ಸಿನಿ ಸುದ್ದಿ

ರಾಬರ್ಟ್‌ಗೆ ಸೆನ್ಸಾರ್‌ ಅಸ್ತು! ಯು/ಎ ಪ್ರಮಾಣ ಪತ್ರದಲ್ಲಿ ಪ್ರೇಕ್ಷಕರ ದರ್ಶನ

ಸದ್ಯಕ್ಕೆ ಕನ್ನಡ ಚಿತ್ರರಂಗ ಸೇರಿದಂತೆ ತೆಲುಗು ಇಂಡಸ್ಟ್ರಿಯಲ್ಲೂ ಭಾರೀ ಕುತೂಹಲ ಕೆರಳಿಸಿರುವ ದರ್ಶನ್‌ ಅಭಿನಯದ “ರಾಬರ್ಟ್‌” ಚಿತ್ರಕ್ಕೆ ಸೆನ್ಸಾರ್‌ ಮಂಡಳಿ ಅಸ್ತು ಎಂದಿದೆ. ಹೌದು, ಚಿತ್ರಕ್ಕೆ “ಯು/ಎ” ಪ್ರಮಾಣ ಪತ್ರ ನೀಡಿದೆ. ಮಾರ್ಚ್‌ ೧೧ ರಂದು ಚಿತ್ರ ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದೆ. ಈಗಾಗಲೇ ಚಿತ್ರದ ಟ್ರೇಲರ್‌ ಮತ್ತು ಹಾಡುಗಳು ಭರ್ಜರಿ ಸದ್ದು ಮಾಡಿದ್ದಲ್ಲದೆ, ನಿರೀಕ್ಷೆ ಹೆಚ್ಚಿಸಿದೆ. ಸದ್ಯ ಚಿತ್ರತಂಡ ಸಿನಿಮಾ ಪ್ರಚಾರದಲ್ಲಿ ನಿರತವಾಗಿದೆ.

ಇತ್ತೀಚಿಗಷ್ಟೆ ಹೈದರಾಬಾದ್ ಮತ್ತು ಹುಬ್ಬಳ್ಳಿಯಲ್ಲಿ “ರಾಬರ್ಟ್‌” ಚಿತ್ರತಂಡ ಅದ್ಧೂರಿಯಾಗಿ ಪ್ರೀರಿಲೀಸ್‌ ಈವೆಂಟ್‌ ನಡೆದಿದೆ. ಸದ್ಯ ಚಿತ್ರಕ್ಕೆ ಯುಎ ಪ್ರಮಾಣ ಪತ್ರ ಸಿಕ್ಕಿದೆ. ಇದೇ ಸಂಭ್ರಮದಲ್ಲಿರುವ ಚಿತ್ರತಂಡ ಚಿತ್ರದ 3 ನಿಮಿಷದ ಪ್ರೋಮೋವನ್ನು ರಿಲೀಸ್ ಮಾಡಿದೆ. “ರಾಬರ್ಟ್” ಚಿತ್ರದ ಹಾಡು ಹಾಗೂ ಟ್ರೇಲರ್‌ಗೆ ಕನ್ನಡ ಮತ್ತು ತೆಲುಗಿನಲ್ಲಿ ದೊಡ್ಡ ಮಟ್ಟದ ಮೆಚ್ಚುಗೆಯೇ ಸಿಕ್ಕಿದೆ.

ಚಿತ್ರದಲ್ಲಿ ದರ್ಶನ್‌ ಅವರಿಗೆ ನಾಯಕಿಯಾಗಿ ಆಶಾ ಭಟ್ ಕಾಣಿಸಿಕೊಂಡಿದ್ದಾರೆ. ಆಶಾ ಭಟ್ ಅವರಿಗೆ ಇದು ಮೊದಲ ಕನ್ನಡ ಸಿನಿಮಾ. ಚಿತ್ರದ ಮತ್ತೊಂದು ವಿಶೇಷವೆಂದರೆ, ವಿನೋದ್ ಪ್ರಭಾಕರ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಿಲನ್ ಆಗಿ ಖ್ಯಾತ ನಟ ಜಗಪತಿ ಬಾಬು ಅಬ್ಬರಿಸಿದ್ದಾರೆ. ದೇವರಾಜ್, ರವಿಶಂಕರ್ ಸೇರಿದಂತೆ ದೊಡ್ಡ ಕಲಾವಿದರು ಇಲ್ಲಿದ್ದಾರೆ.

Categories
ಸಿನಿ ಸುದ್ದಿ

ನಾನು ಆಗ ಸತ್ತೇ ಹೋಗ್ತೀನಿ ಅಂದುಕೊಂಡಿದ್ದರು! ಬಿಗ್‌ಬಾಸ್‌ ಮನೆಯಲ್ಲಿ ಶುಭಾಪೂಂಜಾ ಹೇಳಿದ ಮಾತಲ್ಲಿ ಸತ್ಯವಿದೆಯಾ?

ಈ ಮಾತನ್ನು ಹೇಳಿದ್ದು ಸ್ವತಃ ಶುಭಾಪೂಂಜಾ. ಅವರು ಹೇಳಿಕೊಂಡಿದ್ದು ಬಿಗ್‌ಬಾಸ್-‌೮ರಲ್ಲಿ. ಹೌದು, ಶುಭಾಪೂಂಜಾ ತಮ್ಮ ಹಳೆಯ ನೆನಪುಗಳನ್ನು ಬಿಚ್ಚಿಟ್ಟಿದ್ದಾರೆ. ಹುಷಾರಿಲ್ಲದೆ, ಆಸ್ಪತ್ರೆ ಸೇರಿ, ಐಸಿಯುನಲ್ಲಿದ್ದು, ಸಾಯುವ ಪರಿಸ್ಥಿತಿಯಲ್ಲಿದ್ದ ಬಗ್ಗೆ ಹೇಳಿಕೊಂಡಿದ್ದಾರೆ. ಇಷ್ಟಕ್ಕೂ ಶುಭಾಪೂಂಜಾ, ಹೇಳಿಕೊಂಡಿದ್ದು, ಮತ್ತೊಬ್ಬ ಸ್ಪರ್ಧಿ “ಬ್ರಹ್ಮಗಂಟು” ಖ್ಯಾತಿಯ ನಟಿ ಗೀತಾ ಜೊತೆ. ಅವರೊಂದಿಗೆ ಮಾತನಾಡುವಾಗ, ತಮ್ಮ ಬಾಲ್ಯದ ದಿನಗಳನ್ನು ಮೆಲುಕು ಹಾಕಿದ್ದಾರೆ ಶುಭಾ.

ಈ ವೇಳೆ, ಅವರು ಹೇಳಿದ್ದಿಷ್ಟು. “ನಾನು ಚಿಕ್ಕವಳಿದ್ದಾಗಲೇ ತುಂಬಾ ಚೂಟಿಯಾಗಿದ್ದೆ. ನನ್ನ ಅಮ್ಮ ಆಗಾಗ ಬಡಿಯುತ್ತಿದ್ದರು. ನಾನು ನನ್ನ ಫ್ರೆಂಡ್ಸ್ ಜೊತೆ ಸದಾ ಗಲಾಟೆ ಮಾಡುತ್ತಿದ್ದೆ. ಆಗ ನನ್ನ ಅಮ್ಮ ಬಯ್ಯುತ್ತಿದ್ದರು. ಅದು ನನಗೆ ಸಿಕ್ಕಾಪಟ್ಟೆ ಕೋಪ ತರಿಸುತ್ತಿತ್ತು. ಒಮ್ಮೆ ನನಗೆ ಹುಷಾರಿಲ್ಲದೆ ಐಸಿಯುನಲ್ಲಿ ಅಡ್ಮಿಟ್ ಮಾಡಲಾಗಿತ್ತು. ಆಗ, ನನ್ನ ಸ್ಥಿತಿ ನೋಡಿದವರು ಇನ್ನೇನು ನಾನು ಸತ್ತೇ ಹೋಗುತ್ತೇನೆ ಅಂತಾನೇ ಅಂದುಕೊಂಡಿದ್ದರು. ಆ ವೇಳೆ ನನಗೆ ಪ್ರಜ್ಞೆಯೇ ಇರಲಿಲ್ಲವಂತೆ. ನನ್ನನ್ನು ನೋಡಿದ ಅಮ್ಮನ ಸ್ಥಿತಿಯೂ ಸಹ ಅಷ್ಟೇ ಚಿಂತಾಜನಕವಾಗಿತ್ತು. ನನ್ನ ಪರಿಸ್ಥಿತಿ ನೋಡಿದ ಅಮ್ಮ ದೇವರ ಮೊರೆ ಹೋದರು‌. ನಾವು ನಂಬುವ ದೇವರಿಗೆ ಮುಡಿ ಕೊಡುತ್ತೇವೆ ಅಂತ ಅಮ್ಮ ಹರಕೆ ಹೇಳಿದ್ದರು‌.‌ ಇದರಿಂದ ನಾನು ದಿನೇ ದಿನೇ ಚೇತರಿಸಿಕೊಂಡು ಬಂದೆ‌. ಆ ದೇವರ ದಯೆಯಿಂದ ನಾನು ಬದುಕುಳಿದೆ! ಇದಾದ ಬಳಿಕ ನನ್ನ ತಲೆಗೂದಲನ್ನು ದೇವರಿಗೆ ಅರ್ಪಿಸಲು ಹೋದೆವು. ನಂತರದ ದಿನಗಳಲ್ಲಿ ತಲೆಗೂದಲಿಲ್ಲದೆ ಸ್ಕೂಲ್‌ಗೆ ಹೋಗಲು ಮುಜುಗರವಾಗುತ್ತಿತ್ತು. ಮನೆಯಲ್ಲಿ ಅಮ್ಮನ ಬಟ್ಟೆಗಳನ್ನು ತಲೆಗೆ ಕವರ್ ಮಾಡಿಕೊಳ್ಳುತ್ತಿದ್ದೆ. ಸ್ಕೂಲ್‌ನಲ್ಲಂತೂ ಎಲ್ಲರೂ ನನ್ನ ನೋಡಿ ನಗೋರು..” ಅಂತ ಶುಭಾ ತನ್ನ ಬಾಲ್ಯದ ಜೀವನವನ್ನು ನೆನಪಿಸಿಕೊಂಡಿದ್ದಲ್ಲದೆ, ತನ್ನ ಜೊತೆ ಇದ್ದ ಸ್ಪರ್ಧಿಗಳನ್ನು ನಗೆಗಡಲಲ್ಲಿ ತೇಲಿಸಿದರು.

ಅದೇನೆ ಇರಲಿ, ಈ ಬಾರಿ ಬಿಗ್‌ಬಾಸ್‌ ಮನೆಯಲ್ಲಿ ಎಲ್ಲವೂ ಜೋರಾಗಿಯೇ ನಡೆಯುತ್ತಿದೆ. ಅದರಲ್ಲೂ, ಕರಾವಳಿ ಬೆಡಗಿ ಶುಭಾಪೂಂಜಾ, ಎಲ್ಲರ ಜೊತೆ ಓಪನ್ ಆಗಿ ಮಾತನಾಡುತ್ತ, ಎಲ್ಲರ ಕೆಂಗಣ್ಣಿಗೆ ಗುರಿಯಾಗುತ್ತಿರುವುದಂತೂ ನಿಜ. ಶುಭಾ ಅವರ ಮನೆಯೊಳಗಿನ ನಡವಳಿಕೆಗಳು, ಮಾತುಗಳು ಆ ಮನೆಯಲ್ಲಿರುವ ಕೆಲವರಿಗೆ ಇಷ್ಟ ಆಗುತ್ತಿಲ್ಲ. ಪಟ ಪಟ ಅಂತ ಮಾತನಾಡಿ, ಹೇಳೋದನ್ನು ನೇರವಾಗಿ ಹೇಳಿ ಮೊದಲ ವಾರದಲ್ಲೇ ಎಲ್ಲರ ಅಸಮಾಧಾನಕ್ಕೆ ಕಾರಣರಾಗಿದ್ದಾರೆ.

Categories
ಸಿನಿ ಸುದ್ದಿ

2018ರ ರಾಜ್ಯ ಸಿನಿಮಾ ಪ್ರಶಸ್ತಿ ವಿತರಿಸದಂತೆ ಹೈಕೋರ್ಟ್‌ ಆದೇಶ

ರಾಜ್ಯ ಸರ್ಕಾರದಿಂದ ಕೊಡಮಾಡುವ ಸಿನಿಮಾ ಪ್ರಶಸ್ತಿಯನ್ನು ವಿತರಿಸದಂತೆ ಇದೀಗ ನ್ಯಾಯಾಲಯ ಆದೇಶಿಸಿದೆ. ಆಯ್ಕೆ ಸಮಿತಿ ನಿಯಮಗಳನ್ನು ಪಾಲಿಸಿಲ್ಲ ಎಂಬ ಕಾರಣಕ್ಕೆ 2018ರ ರಾಜ್ಯ ಪ್ರಶಸ್ತಿ ವಿತರಣೆ ಮಾಡದಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಆದೇಶ ನೀಡಿದೆ. ಸದ್ಯಕ್ಕೆ ರಾಜ್ಯ ಚಲನಚಿತ್ರ ಪ್ರಶಸ್ತಿ ಪಟ್ಟಿ ಬಗ್ಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಿರುವ ರಾಜ್ಯ ಹೈಕೋರ್ಟ್, ಮುಂದಿನ ಆದೇಶದವರೆಗೆ ಪ್ರಶಸ್ತಿ ವಿತರಣೆ ಮಾಡುವಂತಿಲ್ಲ ಎಂದು ಸರ್ಕಾರಕ್ಕೆ ಸೂಚಿಸಿದೆ. 2018 ರಲ್ಲಿ “ರಾಮನ ಸವಾರಿ”ಗೆ ಅತ್ಯುತ್ತಮ ಸಿನಿಮಾ ಪ್ರಶಸ್ತಿ ನೀಡಲಾಗಿತ್ತು. ಆದರೆ, ಈ ಸಿನಿಮಾ ಪ್ರಶಸ್ತಿಗೆ ಸ್ಪರ್ಧೆಯನ್ನೇ ಮಾಡಿರಲಿಲ್ಲ. ಇದನ್ನು ಪ್ರಶ್ನಿಸಿ “ದೇವಕಿ” ಸಿನಿಮಾದ ಕುಮಾರ್‌ ಎಂಬುವರು ನ್ಯಾಯಾಲಯದ ಮೊರೆ ಹೋಗಿದ್ದರು.

“ರಾಮನ ಸವಾರಿ” ಸಿನಿಮಾವನ್ನು ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯರು ನೋಡಿಯೇ ಇಲ್ಲ, ಆದರೂ ಅದಕ್ಕೆ ಪ್ರಶಸ್ತಿ ಘೋಷಣೆ ಮಾಡಿದ್ದಾರೆ. ದಯಾಳ್ ಪದ್ಮನಾಭ್ ನಿರ್ದೇಶನದ ‘ಆ ಕರಾಳ ರಾತ್ರಿ’ ಸಿನಿಮಾ ರೀಮೇಕ್ ಆಗಿತ್ತು. ಆದರೂ, ಅದಕ್ಕೆ ಪ್ರಶಸ್ತಿ ನೀಡಲಾಗಿದೆ. ಆಯ್ಕೆ ಸಮಿತಿಯು ಎಲ್ಲ ನಿಯಮಗಳನ್ನು ಗಾಳಿಗೆ ತೂರಿದೆ’ ಎಂದು ಕುಮಾರ್ ಆರೋಪಿಸಿದ್ದರು. ಪ್ರಶಸ್ತಿಗಾಗಿ “ಪ್ರೊಡಕ್ಷನ್ ಮ್ಯಾನೇಜರ್” ಹೆಸರಿನ ಹೊಸ ವಿಭಾಗವನ್ನೇ ಆಯ್ಕೆ ಸಮಿತಿ ಸೃಷ್ಟಿಸಿತ್ತು. ಸಮಿತಿಯ ಮುಖ್ಯಸ್ಥರ ಸ್ವಜನಪಕ್ಷಪಾತ ಪ್ರಶಸ್ತಿ ಆಯ್ಕೆಯಲ್ಲಿ ಸಾಕಷ್ಟು ಗೊಂದಲ ಇದೆ ಎಂದು ಆರೋಪಿಸಿದ್ದರು. 2018 ರಲ್ಲಿ ಜೋಸೈಮನ್ ಅವರ ನೇತೃತ್ವದ ಸಮಿತಿ‌ ಸಿನಿಮಾಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಿತ್ತು.

ಪ್ರೊಡಕ್ಷನ್‌ ಮ್ಯಾನೇಜರ್‌ ಅವರ ಕೆಲಸವೇ ಬೇರೆ ರೀತಿ ಇರುತ್ತದೆ. ಅವರ ಕೆಲಸ ಸಿನಿಮಾದ “ಕಲೆ”ಗೆ ಸಂಬಂಧಿಸಿರುವುದಿಲ್ಲ. ನಟ, ತಂತ್ರಜ್ಞರ ಕೆಲಸಕ್ಕಿಂತಲೂ ಬಹಳ ಭಿನ್ನವಾದ ಕೆಲಸವದು. ಸಿನಿಮಾ ಕೃತಿಗೆ ಅವರ ಕೊಡುಗೆ ಇಲ್ಲದಿದ್ದರೂ ಅಂತಹ ವಿಭಾಗವನ್ನು ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಆಶ್ಚರ್ಯ ಉಂಟು ಮಾಡಿದೆ ಎಂದು ನಿರ್ಮಾಪಕ ಕೃಷ್ಣೇಗೌಡ ಕೂಡ ಹೇಳಿಕೆ ಕೊಟ್ಟಿದ್ದಾರೆ. 2018ರಲ್ಲಿ ದಯಾಳ್ ಪದ್ಮನಾಭ್ ನಿರ್ದೇಶಿಸಿದ್ದ “ಆ ಕರಾಳ ರಾತ್ರಿ” ಸಿನಿಮಾಗೆ ಅತ್ಯುತ್ತಮ ಸಿನಿಮಾ ಪ್ರಶಸ್ತಿ ನೀಡಲಾಗಿದೆ. ಎರಡನೇ ಸ್ಥಾನ “ರಾಮನ ಸವಾರಿ”, ಮೂರನೇ ಸ್ಥಾನ “ಒಂದಲ್ಲ ಎರಡಲ್ಲ” ಸಿನಿಮಾಗೆ ನೀಡಲಾಗಿತ್ತು. ಅದೇ ವರ್ಷ ಅತ್ಯುತ್ತಮ ನಟ ಪ್ರಶಸ್ತಿಗೆ ‘ಅಮ್ಮನ ಮನೆ’ ಸಿನಿಮಾದಲ್ಲಿ ನಟಿಸಿದ್ದ ರಾಘವೇಂದ್ರ ರಾಜ್‌ಕುಮಾರ್ ಅವರನ್ನು ಆಯ್ಕೆ ಮಾಡಲಾಗಿತ್ತು. ಅತ್ಯುತ್ತಮ ನಟಿ ಪ್ರಶಸ್ತಿಗೆ ‘ಇರುವುದೆಲ್ಲವು ಬಿಟ್ಟು’ ಸಿನಿಮಾದ ನಟನೆಗೆ ಮೇಘನಾ ರಾಜ್‌ ಅವರನ್ನು ಆಯ್ಕೆ ಮಾಡಲಾಗಿತ್ತು. ನಟ ಶ್ರೀನಿವಾಸ ಮೂರ್ತಿ ಅವರಿಗೆ ರಾಜ್‌ಕುಮಾರ್ ಪ್ರಶಸ್ತಿ ಹಾಗು ಪಿ.ಶೇಷಾದ್ರಿ ಅವರಿಗೆ ಪುಟ್ಟಣ ಕಣಗಾಲ್ ಪ್ರಶಸ್ತಿ ಘೊಷಿಸಲಾಗಿತ್ತು.

Categories
ಸಿನಿ ಸುದ್ದಿ

ಹಾಟ್‌ ಬೆಡಗಿ ಶ್ರದ್ಧಾ! ಪಡ್ಡೆಗಳ ನಿದ್ದೆಗೆಡಿಸಿದ‌ ದಾಸ್

ಆಗಾಗ ಸುದ್ದಿಯಲ್ಲಿರೋ ನಟಿಮಣಿಗಳ ಪೈಕಿ ಶ್ರದ್ಧಾದಾಸ್‌ ಕೂಡ ಒಬ್ಬರು. ಹೌದು, ಶ್ರದ್ಧಾ ದಾಸ್‌, ಸದಾ ತಮ್ಮ ವಿಭಿನ್ನ ಫೋಟೋಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಅದರಲ್ಲೂ ಅವರ ಕಲರ್‌ಫುಲ್‌ ಡ್ರೆಸ್‌ ಹಾಕಿಕೊಂಡು ಫೋಸ್‌ ಕೊಡೋದು ಅಂದರೆ ಎಲ್ಲಿಲ್ಲದ ಪ್ರೀತಿ.

ಶ್ರದ್ಧಾ ದಾಸ್‌ ಸದಾ ಬೋಲ್ಡ್‌ ನಟಿ. ಅವರ ಹೆಸರು ಕೇಳಿದರೆ ಸಾಕು, ಪಡ್ಡೆ ಹುಡುಗರಂತೂ ಕೊಂಚ ಥ್ರಿಲ್‌ ಆಗೋದು ದಿಟ. ಅಂದಹಾಗೆ, ಶ್ರದ್ಧಾದಾಸ್‌ ಬಗ್ಗೆ ಇಷ್ಟೊಂದು ಪೀಠಿಕೆ ಯಾಕೆ ಗೊತ್ತಾ? ಅವರು ಹಿಂದಿ, ತೆಲುಗು, ಕನ್ನಡ, ಮಲಯಾಳಂ ಸೇರಿದಂತೆ ಇಂಗ್ಲೀಷ್‌ ಭಾಷೆಯ ಶಾರ್ಟ್‌ ಸಿನಿಮಾದಲ್ಲೂ ನಟಿಸಿದ್ದಾರೆ. ಸದ್ಯ ಸುದೀಪ್‌ ಜೊತೆ “ಕೋಟಿಗೊಬ್ಬ ೩” ಚಿತ್ರದಲ್ಲಿ ನಟಿಸಿದ್ದು, ಅದೀಗ ಬಿಡುಗಡೆಗೆ ರೆಡಿಯಾಗಿದೆ.


ಸದಾ ಸಾಮಾಜಿಕ ಜಾಲ ತಾಣಗಳಲ್ಲಿ ಸದಾ ಬಿಝಿಯಾಗಿರುವ ಶ್ರದ್ಧಾ ದಾಸ್‌, ಆಗಾಗ ತಮ್ಮ ಬೋಲ್ಡ್ ಫೋಟೊಗಳನ್ನು ಹಂಚಿಕೊಳ್ಳುವ ಮೂಲಕ ಸುದ್ದಿಯಲ್ಲೇ ಇರುತ್ತಾರೆ. ಅದರಲ್ಲೂ ಪಡ್ಡೆಗಳು ಅವರ ಫೋಟೋಗಳಿಗೆ ಸಾಕಷ್ಟು ಕಾಮೆಂಟ್‌ ಕೂಡ ಮಾಡದೇ ಇರರು.

ಮುಂಬೈನಲ್ಲಿ ಹುಟ್ಟಿ ಬೆಳೆದ ಶ್ರದ್ಧಾ ದಾಸ್, ಸದ್ಯಕ್ಕೆ ಒಳ್ಳೆಯ ಸಿನಿಮಾಗಳನ್ನು ಎದುರು ನೋಡುತ್ತಿದ್ದಾರೆ. ಶ್ರದ್ಧಾಗೆ ಫ್ಯಾಷನ್ ಶೋ ಅಂದ್ರೆ ಎಲ್ಲಿಲ್ಲದ ಇಷ್ಟ. ಹಾಗಾಗಿ ಅವರು ಬಿಡುವು ಸಿಕ್ಕಾಗೆಲ್ಲ, ಬಣ್ಣ ಬಣ್ಣದ ಡ್ರೆಸ್‌ ಹಾಕ್ಕೊಂಡ್‌, ಹಾಗೊಂದು ಫೋಸ್‌ ಕೊಟ್ಟು ಪಡ್ಡೆಗಳ ನಿದ್ದೆಗೆಡಿಸುವಲ್ಲಿ ನಿರತರಾಗಿದ್ದಾರೆ!

ಅಂದಹಾಗೆ, ಶ್ರದ್ಧಾ ದಾಸ್‌ ಕೂಡ ಈ ಹಿಂದೆ ತೆಲುಗಿನ ಬಿಗ್‌ಬಾಸ್‌ ೪ ರಲ್ಲಿ ಸ್ಪರ್ಧಿಯಾಗಿದ್ದರು. ಸದ್ಯ ಹೊಸ ಬಗೆಯ ಪಾತ್ರ, ಕಥೆ ಎದುರು ನೋಡುತ್ತಿರುವ ಶ್ರದ್ಧಾ, ಕನ್ನಡದ “ಕೋಟಿಗೊಬ್ಬ ೩” ಸಿನಿಮಾ ಎದುರು ನೋಡುತ್ತಿದ್ದಾರೆ.

Categories
ಸಿನಿ ಸುದ್ದಿ

ಸಲಗ ಕ್ರಿಕೆಟ್ ಕಪ್ ಹವಾ – ದುನಿಯಾ ವಿಜಯ್‌ ಅಭಿಮಾನಿಗಳು ಶುರು ಮಾಡಿದ ಕ್ರಿಕೆಟ್‌ ಅಭಿಯಾನ

ಕನ್ನಡ ಚಿತ್ರರಂಗದಲ್ಲೀಗ ಕ್ರಿಕೆಟ್‌ ಹವಾ…!

ಹೌದು, ಸದ್ಯಕ್ಕೆ ಸಿನಿಮಾಗಳ ಬಿಡುಗಡೆಯ ಪರ್ವ ಶುರುವಾಗಿದೆ. ಇದಕ್ಕೂ ಮೊದಲೇ ಬಿಡುಗಡೆಗೆ ಸಜ್ಜಾಗಿರುವ ಚಿತ್ರಗಳು ಜೋರು ಸುದ್ದಿ ಮಾಡುತ್ತಿವೆ. ಇನ್ನು, ಕ್ರಿಕೆಟ್‌ ವಿಚಾರಕ್ಕೆ ಬಂದರೆ, ಸಿನಿಮಾರಂಗಕ್ಕೂ ಕ್ರಿಕೆಟ್‌ ಪಂದ್ಯಕ್ಕೂ ಅವಿನಾಭಾವ ಸಂಬಂಧವಿದೆ. ಇಲ್ಲಿ ಸಿನಿಮಾ ನಟರು ಕೂಡ ಕ್ರಿಕೆಟ್‌ ಮೇಲೆ ಹೆಚ್ಚು ಪ್ರೀತಿ ತೋರುವ ಹಿನ್ನೆಲೆಯಲ್ಲಿ, ಅಭಿಮಾನಿಗಳು ಕೂಡ ಕ್ರಿಕೆಟ್‌ ಆಡೋಕೆ ಬ್ಯಾಟು-ಬಾಲು ಹಿಡಿಯುತ್ತಿರುವುದು ಹೊಸ ಬೆಳವಣಿಗೆಯೇನಲ್ಲ.

ಇತ್ತೀಚೆಗಷ್ಟೇ, ಶಿವರಾಜಕುಮಾರ್‌ ಅವರು ತಮ್ಮ ಸಿನಿಮಾ ಜರ್ನಿಯಲ್ಲಿ 35 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ, ಫ್ಯಾನ್ಸ್‌ ಸೇರಿ ಕ್ರಿಕೆಟ್‌ ಲೀಗ್‌ ಆಯೋಜಿಸಿದ್ದರು. ಈಗ “ದುನಿಯಾ” ವಿಜಯ್‌ ಅಭಿಮಾನಿಗಳ ಸರದಿ.
ಹೌದು, ಸದ್ಯಕ್ಕೆ “ಸಲಗ” ಚಿತ್ರದ ಬಗ್ಗೆ ಎಲ್ಲೆಡೆ ಹವಾ ಇದೆ. ಹೀಗಾಗಿ ರಾಜ್ಯದಾದ್ಯಂತ ವಿಜಯ್ ಅಭಿಮಾನಿಗಳಿಂದ ‌ಕ್ರಿಕೆಟ್ ಅಭಿಯಾನ ಶುರುವಾಗಿದೆ. “ಸಲಗ” ಚಿತ್ರತಂಡ‌ ಕ್ರಿಕೆಟ್ ಮೂಲಕ ವಿಶಿಷ್ಟವಾಗಿ ಸಿನಿಮಾ ಪ್ರಚಾರ‌ ಮಾಡಲು ಹೊರಟಿದೆ. “ದುನಿಯಾ” ವಿಜಯ್ ಅಭಿಮಾನಿಗಳು ರಾಜ್ಯದಾದ್ಯಂತ “ಸಲಗ” ಕ್ರಿಕೆಟ್‌ ಕಪ್ ಸರಣಿಯನನು ಆಯೋಜಿಸಿದ್ದಾರೆ.

ಆ ಸರಣಿಗಳಲ್ಲಿ “ಸಲಗ” ಚಿತ್ರತಂಡವೂ ಒಂದು ತಂಡವಾಗಿ ಮೈದಾನಕ್ಕಿಳಿಯಲಿದೆ. ಇದರಿಂದಾಗಿ ಮಾರ್ಚ 7ರಂದು ಕೋಲಾರದ ಮಾಲೂರಿನಲ್ಲಿ “ಸಲಗ” ಕ್ರಿಕೆಟ್ ಕಪ್ ಸರಣಿ ನಡೆಯಲಿದೆ. ಇದೇ ಮಾದರಿಯಲ್ಲಿ ಚಿತ್ರದುರ್ಗ, ಹೊಸಪೇಟೆ ಹಾಗೂ ಮೈಸೂರು ಸೇರಿದಂತೆ ರಾಜ್ಯದ ನಾನಾ ಊರುಗಳಲ್ಲಿ “ಸಲಗ” ಕಪ್ ನಡೆಯಲಿದೆ. ಇತ್ತೀಚೆಗೆ ನಡೆದ ಶಿವರಾಜಕುಮಾರ್‌ ಪ್ರೀಮಿಯರ್‌ ಲೀಗ್‌ ಕ್ರಿಕೆಟ್‌ ಸರಣಿಯಲ್ಲಿ “ಸಲಗ” ಚಿತ್ರತಂಡ ಭಾಗವಹಿಸಿತ್ತು. ಪ್ರದರ್ಶನ ಪಂದ್ಯ ಆಡಿದ “ಸಲಗ” ಟೀಮ್ ಭರ್ಜರಿಯಾಗಿ ಗೆಲುವು ದಾಖಲಿಸಿತ್ತು. ಈಗ ಅದರ ವಿಡಿಯೋ ಕೂಡ ರಿಲೀಸ್ ಆಗಿದೆ.

Categories
ಸಿನಿ ಸುದ್ದಿ

ಮೊದಲ ಸಲ ಅನಂತ್‌ನಾಗ್‌ ತುಳು ಭಾಷೆಯ ಇಂಗ್ಲೀಷ್‌ ಚಿತ್ರದಲ್ಲಿ ನಟನೆ -ಮಾರ್ಚ್‌ 26ರಂದು ವಿಶ್ವಾದ್ಯಂತ ಚಿತ್ರಬಿಡುಗಡೆ

ಬಿಡುಗಡೆಗೂ ಮುನ್ನ ಹಲವು ದಾಖಲೆ ಮಾಡಿದೆ. ತುಳು ಭಾಷೆಯ ಚಿತ್ರದಲ್ಲಿ ಮೊದಲ ಬಾರಿಗೆ ಅನಂತ್‌ನಾಗ್ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. 8K ಕ್ಯಾಮರಾ ಬಳಸಿದ ಮೊದಲ ಸಿನೆಮಾ ಎಂಬ ಹೆಗ್ಗಳಿಕೆ ಇದಕ್ಕಿದೆ. ದುಬೈನಲ್ಲಿ ಮಾರ್ಚ್‌ 13 ರಂದು ‘ವರ್ಲ್ಡ್ ಪ್ರೀಮಿಯರ್ ಶೋ’ ಕೂಡ ನಡೆದಿದೆ.

ಅನಂತ್‌ನಾಗ್‌ ಕನ್ನಡ ಚಿತ್ರರಂಗ ಕಂಡ ಅದ್ಭುತ ನಟ. ಈಗಾಗಲೇ ಸಾಕಷ್ಟು ಸಿನಿಮಾಗಳ ಮೂಲಕ ತಮ್ಮದೇ ಛಾಪು ಮೂಡಿಸಿರುವ ಅನಂತ್‌ನಾಗ್‌, ಇದೇ ಮೊದಲ ಬಾರಿಗೆ ತುಳು ಚಿತ್ರರಂಗಕ್ಕೆ ಎಂಟ್ರಿಯಾಗಿದ್ದಾರೆ. ಹೌದು, ತುಳು ಭಾಷೆಯಲ್ಲಿ ತಯಾರಾಗಿರುವ “ಇಂಗ್ಲಿಷ್‌-ಎಂಕ್ಲೆಗ್‌ ಬರ್ಪುಜಿ ಬ್ರೋ” ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರದಲ್ಲಿ ಅವರದು ವಿಶೇಷ ಪಾತ್ರ. ಈ ಚಿತ್ರದಲ್ಲಿ ಹಲವು ವಿಶೇಷತೆಗಳಿವೆ. ಈಗಾಗಲೇ ಚಿತ್ರೀಕರಣ ಪೂರೈಸಿ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿರುವ ಈ ಚಿತ್ರ, ಮಾರ್ಚ್‌ 26ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿದೆ ಎಂಬುದು ವಿಶೇಷತೆಗಳಲ್ಲೊಂದು.

ಹೌದು, ತುಳು ಚಿತ್ರರಂಗದಲ್ಲಿ ಬಹುನಿರೀಕ್ಷೆ ಇರುವ ಈ ಚಿತ್ರ ಮಂಗಳೂರು, ಉಡುಪಿ ಸೇರಿದಂತೆ ಗಲ್ಫ್‌ ಹಾಗು ವಿಶ್ವದ ನಾನಾ ಕಡೆ ಏಕಕಾಲದಲ್ಲಿ ರಿಲೀಸ್‌ ಆಗುತ್ತಿದೆ. ಅಕ್ಮೆ ಮೂವೀಸ್ ಇಂಟರ್‌ನ್ಯಾಷನಲ್ ಬ್ಯಾನರ್‌ನಲ್ಲಿ ದುಬೈನ ಖ್ಯಾತ ಉದ್ಯಮಿ ಹರೀಶ್ ಶೇರಿಗಾರ್ ಮತ್ತು ಶರ್ಮಿಳಾ ಶೇರಿಗಾರ್ ಚಿತ್ರವನ್ನು ನಿರ್ಮಿಸಿದ್ದಾರೆ. ಈ ಹಿಂದೆ ಇವರು “ಮಾರ್ಚ್ 22”, “ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ”, “ಯಾನ” ಚಿತ್ರ ನಿರ್ಮಿಸಿದ್ದಾರೆ. ಕೆ.ಸೂರಜ್ ಶೆಟ್ಟಿ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಇನ್ನು ಈ ಚಿತ್ರದಲ್ಲಿ ತುಳು ಚಿತ್ರರಂಗದ ಹಾಸ್ಯ ದಿಗ್ಗಜರ ದಂಡೇ ಇದೆ. ಚಿತ್ರದ ಬಗ್ಗೆ ಹೇಳುವುದಾದರೆ, ಬಿಡುಗಡೆಗೂ ಮುನ್ನ ಹಲವು ದಾಖಲೆ ಮಾಡಿದೆ. ತುಳು ಭಾಷೆಯ ಚಿತ್ರದಲ್ಲಿ ಮೊದಲ ಬಾರಿಗೆ ಅನಂತ್‌ನಾಗ್ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ.

ಅಷ್ಟೇ ಅಲ್ಲ, 8K ಕ್ಯಾಮರಾ ಬಳಸಿದ ಮೊದಲ ಸಿನೆಮಾ ಎಂಬ ಹೆಗ್ಗಳಿಕೆ ಇದಕ್ಕಿದೆ. ಬೆಂಗಳೂರಿನ ಪ್ಯಾಲೇಸಿನಲ್ಲಿ ಚಿತ್ರೀಕರಿಸಿದ ಹೆಮ್ಮೆಯೂ ಇದೆ. ದುಬೈನಲ್ಲಿ ಮಾರ್ಚ್‌ 13 ರಂದು ‘ವರ್ಲ್ಡ್ ಪ್ರೀಮಿಯರ್ ಶೋ’ ಕೂಡ ನಡೆದಿದೆ. ಸಿನಿಮಾ ವೀಕ್ಷಿಸಿದ ಪ್ರತಿಯೊಬ್ಬರೂ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಸಿನಿಮಾ ದುಬೈನಲ್ಲಿ ‘ವರ್ಲ್ಡ್ ಪ್ರೀಮಿಯರ್ ಶೋ’ ನಡೆದಿದ್ದು, ತುಳು ಚಿತ್ರರಂಗದ ಇತಿಹಾಸದಲ್ಲೇ ಮೊದಲು ಎಂಬುದು ವಿಶೇಷ.

ಇನ್ನು ಚಿತ್ರದಲ್ಲಿ ಹಾಸ್ಯವೇ ಹೈಲೈಟ್‌ ಆಗಿದೆ. ಪಂಚಿಗ್ ಡೈಲಾಗ್‌ಗಳಿಗೆ ಹೆಚ್ಚು ಆದ್ಯತೆ ಇದೆ. ಚಿತ್ರದಲ್ಲಿ ತುಳು ರಂಗಭೂಮಿ ಹಾಸ್ಯ ನಟರಾದ ಅರವಿಂದ್ ಬೋಳಾರ್, ನವೀನ ಡಿ’ಪಡೀಲ್, ಭೋಜರಾಜ್ ವಾಮಂಜೂರ್, ವಿಸ್ಮಯ್ ವಿನಾಯಕ್, ದೀಪಕ್ ರೈ ಇದ್ದಾರೆ. ಹೀರೋ ಆಗಿ “ದಿಯಾ” ಖ್ಯಾತಿಯ ಪೃಥ್ವಿ ಅಂಬರ್ ಮತ್ತು ಅವರಿಗೆ ನಾಯಕಿಯಾಗಿ ನವ್ಯಾ ಪೂಜಾರಿ ನಟಿಸಿದ್ದಾರೆ.
ಕಥೆ, ಚಿತ್ರಕಥೆ, ಸಂಭಾಷಣೆಯ ಜವಾಬ್ದಾರಿಯನ್ನು ನಿರ್ದೇಶಕ ಸೂರಜ್‌ ಶೆಟ್ಟಿ ವಹಿಸಿಕೊಂಡರೆ, ಕದ್ರಿ ಮಣಿಕಾಂತ್‌ ಸಂಗೀತ ನೀಡಿದ್ದಾರೆ. ಕೃಷ್ಣ ಸಾರಥಿ ಹಾಗೂ ಅಭಿಲಾಷ್ ಕಲಾತಿ ಛಾಯಾಗ್ರಹಣವಿದೆ. ಮನು ಶೆಡ್ಗರ್ ಸಂಕಲನ ಮಾಡಿದ್ದಾರೆ. ಮಹೇಶ್‌ ಎನ್ಮೂರಿ ಅವರ ಕಲಾ ನಿರ್ದೇಶನವಿದೆ. ಅರ್ಜುನ್ ಲೆವಿಸ್, ಲೋಕು ಕುಡ್ಲ ಸಾಹಿತ್ಯವಿದೆ. “ಭಜರಂಗಿ” ಮೋಹನ್ ಅವರ ನೃತ್ಯ ನಿರ್ದೇಶನವಿದೆ.

error: Content is protected !!