Categories
ಸಿನಿ ಸುದ್ದಿ

ಅಪ್ಪುಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ; ಸಿಎಂ ಬೊಮ್ಮಾಯಿ ಘೋಷಣೆ

ಪುನೀತ್‌ ರಾಜಕುಮಾರ್‌ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಮಂಗಳವಾರ ಆಯೋಜಿಸಿದ್ದ ಪುನೀತ್‌ ನಮನ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಮಾತನಾಡಿ, ಅಪ್ಪು ಅವರ ಹೆಸರು ಚಿರಸ್ಥಾಯಿ ಆಗಬೇಕು ಎಂಬ ಅಭಿಲಾಶೆ ಏನಿದೆ, ಅದು ನಮ್ಮ ಸರ್ಕಾರದ ಅಭಿಲಾಶೆಯೂ ಕೂಡ. ಅವರ ಸಂಪೂರ್ಣ ಅಂತಿಮ ಸ್ಥಳವೇನಿದೆ. ಅದನ್ನು ಸಂಪೂರ್ವಣವಾಗಿ ನಾವು ರಾಜ್‌ ಕುಮಾರ್‌ ಮತ್ತು ಪಾರ್ವತಮ್ಮ ಅವರ ಸ್ಮಾರಕರಂತೆಯೇ, ನಾವು ಅಪ್ಪು ಅವರ ಸ್ಮಾರಕ ನಿರ್ಮಾಣ ಮಾಡ್ತೀವಿ. ಇದರೊಂದಿಗೆ ನಾನು ಹಲವು ಜನರ ಜೊತೆ ಚರ್ಚೆ ಮಾಡಿದ್ದೇವೆ. ಅದರಂತೆ, ಕರ್ನಾಟಕ ರತ್ಮ ಘೋಷಣೆ ಮಾಡ್ತಾ ಇದ್ದೇನೆ ಎಂದು ಹೇಳಿದ್ದಾರೆ.


ಇವುಗಳೊಂದಿಗೆ ಹಲವು ಸಲಹೆಗಳಿವೆ. ಬೇರೆ ಬೇರೆಯ ರಾಷ್ಟ್ರಮಟ್ಟದ ಪ್ರಶಸ್ತಿ ಬಗ್ಗೆ, ಅವುಗಳ ಬಗ್ಗೆಯೂ ಸರ್ಕಾರ ಮುಕ್ತ ಮನಸ್ಸಿನಲ್ಲಿದೆ. ಬರುವ ಸಂಪುಟ ಸಭೆಯಲ್ಲಿ ಆ ಬಗ್ಗೆ ನಿರ್ಧಾರ ಮಾಡ್ತೀವಿ. ಮುತ್ತುರಾಜ ಅವರ ಅಪ್ಪುಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ಘೋಷಣೆ,
ಅಪ್ಪು ತೋರಿರುವ ಚಾರಿತ್ರ್ಯ ಚರಿತ್ರೆಗೆ ಸೇರುತ್ತದೆ.


ನಾನು ಪುನೀತ್‌ ಅವರಿಗೆ ಮುತ್ತು ಕೊಟ್ಟಾಗ ಬಹಳಷ್ಟು ಜನ ಬೇರೆ ಬೇರೆ ವಿಶ್ಲೇಷಣೆ ಕೊಟ್ಟಿದ್ದಾರೆ. ಅದು ನನ್ನೊಳಗಿನ ಭಾವನೆ. ನಾನು ಕನ್ನಡ ನಾಡಿನ ಜನರ ಪರವಾಗಿ ಮುತ್ತು ನೀಡಿದ್ದೇನೆ. ಮುತ್ತುರಾಜನಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಿರುವುದು ಎಷ್ಟು ಸಂತೋಷವಾಗಿದೆಯೋ ಅಷ್ಟೇ ಅವರಿಗೆ ನಾನು ಮುತ್ತನಿಟ್ಟಿರುವುದೂ ಸಂತಸ ತಂದಿದೆ. ಚಂದ್ರ ಇರೋವರೆಗೆ ಪುನೀತ್‌ ಕರ್ನಾಟಕ ರತ್ನರಾಗಿ ಇರ್ತಾರೆ ಎಂದಿದ್ದಾರೆ ಸಿಎಂ ಬಸವರಾಜ ಬೊಮ್ಮಾಯಿ.

Categories
ಸಿನಿ ಸುದ್ದಿ

`ನಟಸಾರ್ವಭೌಮ’ನಿಗೆ ನುಡಿನಮನ ;ಮತ್ತೆ ಹುಟ್ಟಿ ಬಾರಯ್ಯ ರಾಜಪುತ್ರನೆ-ಆಗಲೇ ನಿಲ್ಲುವುದು ನಮ್ಮ ವೇದನೆ !

ದೊಡ್ಮನೆಯ ರಾಜರತ್ನ.. ಕರುನಾಡಿನ ಯುವರತ್ನ.. ಕೋಟ್ಯಾಂತರ ಭಕ್ತರ ಆರಾಧ್ಯದೈವ… ದಿವಂಗತ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ‘ನುಡಿ ನಮನ' ಕಾರ್ಯಕ್ರಮ ಬೆಂಗಳೂರಿನ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ನಡೆಯುತ್ತಿದೆ. ಗಂಧದಗುಡಿಯ ಸ್ಟಾರ್‌ನಟರುಗಳಾದ ರವಿಚಂದ್ರನ್-ದ್ವಾರಕೀಶ್-ದರ್ಶನ್-ಗಣೇಶ್-ದುನಿಯಾ ವಿಜಯ್-ಜಗ್ಗೇಶ್-ಶ್ರುತಿ-ತಾರಾ-ಸುಧಾರಾಣಿ-ಜಯಮಾಲಾ- ಬಿ.ಸರೋಜಾದೇವಿ ಸೇರಿದಂತೆ ಕನ್ನಡ ಕಲಾವಿದರು ಹಾಗೂ ಬಹುಭಾಷಾ ನಟ ಪ್ರಕಾಶ್ ರೈ-ಶರತ್ ಕುಮಾರ್-ಸಂಪತ್ ರಾಜ್-ಶ್ರೀಕಾಂತ್ ನಟ ವಿಶಾಲ್ ಸೇರಿದಂತೆ ಪರಭಾಷಾ ನಟರುಗಳು ‘ನಟಸಾರ್ವಭೌಮ’ನಿಗೆ ನುಡಿನಮನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಖ್ಯಾತ ಗೀತ ಸಾಹಿತಿ ನಾಗೇಂದ್ರ ಪ್ರಸಾದ್ ಅಪ್ಪು ಮೇಲೆ ಗೀತೆ ರಚಿಸಿದ್ದಾರೆ. ಗುರುಕಿರಣ್ ಸಂಗೀತ ಸಂಯೋಜನೆ ಮಾಡಿದ್ದು, ವಿಜಯ್ ಪ್ರಕಾಶ್ ಧ್ವನಿಯಲ್ಲಿ ಅದ್ಬುತವಾಗಿ ಮೂಡಿಬಂದಿದೆ. ದೊಡ್ಮನೆ ಕುಟುಂಬಸ್ಥರು ಮಾತ್ರವಲ್ಲ ಕರುನಾಡಿನ ಪ್ರತಿಯೊಬ್ಬರ ಕಣ್ಣಂಚಲ್ಲೂ ಕಣ್ಣೀರು ತರಿಸುವ ಭಾವಪೂರ್ಣ ಗೀತೆ ನಿಮ್ಮ ಮುಂದೆ

ಮುತ್ತುರಾಜ ಹೆತ್ತ ಮುತ್ತೆ… ಎತ್ತ ಹೋದೆಯೋ..
ಅತ್ತು ಕರೆದರೂ… ಮತ್ತೆ ಬಾರದಾದೆಯೋ…
ಮರೆಯಲಾರೆವು ಎಂದು ನಿನ್ನ ಅಪ್ಪುಗೆ
ನೆನಪು ತುಂಬಿ ಹೋದೆ ದೂರದೂರಿಗೆ
ಸ್ವೀಕರಿಸು ನಮ್ಮ ಭಾಷ್ಪಾಂಜಲಿ-ಶ್ರದ್ಧಾಂಜಲಿ

ಮುಗುಳುನಗೆಯ ಬೀರುತ ಸ್ನೇಹ-ಪ್ರೀತಿ ಹಂಚುತ
ಕೋಟಿ ಕೋಟಿ ಮನಗಳಲಿ ಸೇರಿ ಹೋದೆ ಶಾಶ್ವತ
ಒಳ್ಳೆತನಕೆ ನೀನೇ ಸ್ಪೂರ್ತಿ ಎಲ್ಲಾ ತಲೆಮಾರಿಗೆ
ಬೆಟ್ಟದ ಹೂ ತರಲು ಹೋದೆ ಬಾರದೂರಿಗೆ
ಮತ್ತೆ ಹುಟ್ಟಿ ಬಾರಯ್ಯ ಯುವರತ್ನನೆ
ಕರುನಾಡೆ ನೆನೆಯುವುದು ನಿನ್ನ ಸಾಧನೆ
ಸ್ವೀಕರಿಸು ನನ್ನ ಪುಷ್ಪಾಂಜಲಿ-ಭಾವಾಂಜಲಿ

ವಿಧಿಯ ಕೆಟ್ಟ ಕಣ್ಣಿಗೆ ಕರುಣೆ ಇಲ್ಲದಾಯಿತು
ನೀನು ಇಲ್ಲದ ಈ ಕ್ಷಣ ತೆರೆಯು ಮೂಕವಾಯಿತು
ಎಂದಿಗೂ ಉಳಿಯುವೆ ನೀನು ಚರಿತೆಯ ಪುಟಗಳಲಿ
ಪುನೀತನಾದೆ ನೀನು ಮಾಡಿದ ಸೇವೆಯಲಿ
ಮತ್ತೆ ಹುಟ್ಟಿ ಬಾರಯ್ಯ ರಾಜಪುತ್ರನೆ
ಆಗಲೆ ನಿಲ್ಲುವುದು ನಮ್ಮ ವೇದನೆ
ಸ್ವೀಕರಿಸು ನಮ್ಮ ಭಾಷ್ಪಾಂಜಲಿ-ಭಾವಾಂಜಲಿ

ಮುತ್ತುರಾಜ ಹೆತ್ತ ಮುತ್ತೆ… ಎತ್ತ ಹೋದೆಯೋ..
ಅತ್ತು ಕರೆದರೂ… ಮತ್ತೆ ಬಾರದಾದೆಯೋ…
ಮರೆಯಲಾರೆವು ಎಂದು ನಿನ್ನ ಅಪ್ಪುಗೆ
ನೆನಪು ತುಂಬಿ ಹೋದೆ ದೂರದೂರಿಗೆ
ಸ್ವೀಕರಿಸು ನಮ್ಮ ಭಾಷ್ಪಾಂಜಲಿ-ಶ್ರದ್ಧಾಂಜಲಿ

Categories
ಸಿನಿ ಸುದ್ದಿ

`ಅಭಿಮಾನಿ ದೇವರು’ಗಳಿಗೋಸ್ಕರ ಕನ್ನಡ ಚಿತ್ರರಂಗ ಮತ್ತೊಮ್ಮೆ ಏರ್ಪಡಿಸಲಿದೆ` ಅಪ್ಪು ನುಡಿ ನಮನ’ ಕಾರ್ಯಕ್ರಮ !

ದೊಡ್ಮನೆಯ ರಾಜಕುಮಾರನ ನುಡಿನಮನ ಕಾರ್ಯಕ್ರಮ ಇಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿದೆ. ಕನ್ನಡ ಚಿತ್ರೋದ್ಯಮದ ಕಡೆಯಿಂದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯವರು ‘ಪುನೀತ್ ನಮನ’ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ. ಸ್ಯಾಂಡಲ್‌ವುಡ್‌ನ ಕಲಾವಿದರು ಸೇರಿದಂತೆ ಪರಭಾಷಾ ಸ್ಟಾರ್‌ಗಳು ಕೂಡ ಆಗಮಿಸಿದ್ದಾರೆ. ಬಹುಭಾಷಾ ನಟ ಪ್ರಕಾಶ್ ರೈ, ಶರತ್ ಕುಮಾರ್, ಸಂಪತ್ ರಾಜ್, ಶ್ರೀಕಾಂತ್, ನಟ ವಿಶಾಲ್ ಸೇರಿದಂತೆ ಬಹುಭಾಷಾ ನಟರುಗಳು ನಟಸಾರ್ವಭೌಮನಿಗೆ ನುಡಿನಮನ ಸಲ್ಲಿಸೋದಕ್ಕೆ ಬಂದಿದ್ದಾರೆ. ದೊಡ್ಮನೆ ಕುಟುಂಬಸ್ಥರು-ಆಪ್ತರು-ಬಂಧುಗಳು ಸೇರಿದಂತೆ ಕಲಾವಿದರಿಗೆ ಮಾತ್ರ ಇವತ್ತಿನ ‘ಅರಸು ಆರಾಧನೆ’ ಕಾರ್ಯಕ್ರಮದಲ್ಲಿ ಅವಕಾಶವಿದ್ದು ಅಭಿಮಾನಿಗಳು ಇಲ್ಲಿ ಭಾಗಿಯಾಗೋದಕ್ಕೆ ಅವಕಾಶ ನೀಡಿಲ್ಲ. ಇದರಿಂದ ಅಭಿಮಾನಿ ದೇವರುಗಳಿಗೆ ಸಹಜವಾಗಿ ಬೇಸರವಾಗಿದೆ. ಇದರಿಂದ ಚಲನಚಿತ್ರ ವಾಣಿಜ್ಯ ಮಂಡಳಿ ಅಭಿಮಾನಿ ದೇವರುಗಳಿಗೋಸ್ಕರವೇ `ಅಪ್ಪು ನುಡಿನಮನ’ ಕಾರ್ಯಕ್ರಮ ಹಮ್ಮಿಕೊಳ್ಳೋದಕ್ಕೆ ನಿರ್ಧಾರ ಮಾಡಿದೆ. ಈ ಬಗ್ಗೆ ಇವತ್ತಿನ ಕಾರ್ಯಕ್ರಮದಲ್ಲಿ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷರಾದಂತಹ ಸಾ.ರಾ ಗೋವಿಂದು ಅವರು ತಿಳಿಸಿದ್ದು, ದೊಡ್ಮನೆಯ ಜೊತೆಗೆ ಮಾತನಾಡಿ ಶೀಘ್ರದಲ್ಲೇ ಧ್ರುವತಾರೆಗೆ ನಮನ ಸಲ್ಲಿಸೋದಕ್ಕೆ ಅವಕಾಶ ಮಾಡಿಕೊಡುವುದಾಗಿ ತಿಳಿಸಿದ್ದಾರೆ.

Categories
ಸಿನಿ ಸುದ್ದಿ

ದುಬೈಗೆ ಹೊರಟ ಸುಕನ್ಯದ್ವೀಪ!

ಪಕ್ಕಾ ಫ್ಯಾಮಿಲಿ ಕಮ್ ಲವ್ ಕಾಮಿಡಿ ಎಂಟರ್ಟೈನರ್ ಕಥಾಹಂದರ ಹೊಂದಿರುವ ಸುಕನ್ಯ ದ್ವೀಪ ಈಗಾಗಲೇ ಚಿತ್ರದ ಮೊದಲನೇ ಹಂತದ ಚಿತ್ರೀಕರಣ ಮುಗಿದಿದ್ದು ಕಳಸ, ಚಿಕ್ಕಮಗಳೂರು,ದೇವರಮನೆ ಹಾಗೂ ಮೂಡಿಗೆರೆ, ಸುತ್ತಮುತ್ತ ಎರಡನೇ ಹಂತದ ಚಿತ್ರೀಕರಣ ನಡೆಸಲಾಗುವುದು. ಉಳಿದಂತೆ 2ಹಾಡುಗಳ ಚಿತ್ರೀಕರಣಕ್ಕಾಗಿ ಚಿತ್ರತಂಡ ಮುಂದಿನವಾರ ದುಬೈಗೆ ಪ್ರಯಾಣ ಬೆಳೆಸಲಿದೆ.

ನಾಯಕ ರಾಜ್ ಪ್ರಭು, ಶ್ರೇಯಾವಸಂತ್ ಹಾಗೂ ಡ್ಯಾನ್ಸ್ ಮಾಸ್ಟರ್ ಜಗ್ಗು ತೆರಳಲಿದ್ದಾರೆ. ಉಳಿದೆರಡು ಹಾಡುಗಳನ್ನು ಶಿಮ್ಲಾದಲ್ಲಿ ಶೂಟ್ ಮಾಡೋ ಪ್ಲಾನ್ ಇದೆ. ನಿರ್ಮಾಣದ ಜವಾಬ್ದಾರಿಯನ್ನು ರಾಜ್ ಪ್ರಭು ವಹಿಸಿಕೊಂಡಿದ್ದಾರೆ. ಮೂವರು ಅಕ್ಕ-ತಂಗಿಯರ ಸುತ್ತ ನಡೆಯುವ ಕಥೆ ಹೇಳಹೊರಟಿದ್ದಾರೆ.

ನಾಯಕನ ಪಾತ್ರದಲ್ಲಿ ರಾಜ್‌ಪ್ರಭು ಕಾಣಿಸಿಕೊಂಡಿದ್ದಾರೆ. ಫ್ಯಾಮಿಲಿ, ಲವ್‌ಸ್ಟೋರಿ ಇರೋ ಈ ಚಿತ್ರದಲ್ಲಿ ಕಾಮಿಡಿಗೆ ಹೆಚ್ಚು ಒತ್ತು ನೀಡಲಾಗಿದೆ, ಸುಕನ್ಯ ಎಂದರೆ ಹೆಣ್ಣು, ದ್ವೀಪ ಎಂದರೆ ಅವರಿರುವ ಮನೆಗೆ ಹೋಲಿಸಲಾಗಿದೆ.

ವೀರಬಾಹು ಈ ಚಿತ್ರದ ನಿರ್ಮಾಪಕರು. ಈ ಚಿತ್ರಕ್ಕೆ ಸಂಗೀತ ನಿರ್ದೇಶಕನಾಗಿ ಕೌಶಿಕ್ ಹರ್ಷ ಕೆಲಸ ಮಾಡಿದ್ದು. 5 ಹಾಡುಗಳನ್ನು ಕಂಪೋಜ್ ಮಾಡಿದ್ದಾರೆ. ವಿಘ್ನೇಶ್ ನಾಗೇಂದ್ರ ಚಿತ್ರದ ಕ್ಯಾಮೆರಾ ನಿಭಾಯಿಸಿದ್ದಾರೆ.

ರಾಜ್ ಪ್ರಭು, ಸಚಿನ್ ಪುರೋಹಿತ್,ರಘು ರಂಜನ್,ನಾಯಕರು. ಶ್ರೇಯ ವಸಂತ್, ಅಕ್ಷಿತ ನಾಗರಾಜ್, ಚುಂಬಿತ ನಾಯಕಿಯರು. ಹಿರಿಯನಟ ಎಂಡಿ ಕೌಶಿಕ ಕುಟುಂಬದ ಹಿರಿಯನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Categories
ಸಿನಿ ಸುದ್ದಿ

ನಿಂತಲ್ಲೇ ಶವವಾದೆ ಗೊತ್ತೇನು? ಗೋರಿ ಚಿತ್ರದ ಎಮೋಷನಲ್‌ ಗೀತೆಗೆ ಶಿವಣ್ಣ ಸಾಥ್

ಗಾಂಧಿನಗರಕ್ಕೆ ಹಲವು ಮಂದಿ ಆಸೆಯ ಕಂಗಳಲ್ಲೇ ಎಂಟ್ರಿಯಾಗುತ್ತಾರೆ. ತಾನೂ ಹೀರೋ ಆಗಬೇಕು, ನಿರ್ದೇಶಕ ಆಗಬೇಕು ಅಂತ. ಆದರೆ, ಕಲೆ ಕೆಲವರನ್ನು ಮಾತ್ರ ಕೈ ಬೀಸಿ ಕರೆಯುತ್ತೆ. ಆ ಸಾಲಿಗೆ ಮಾಧ್ಯಮ ಗೆಳೆಯ ಕಿರಣ್ ಹಾವೇರಿ ಮತ್ತು ಅವರ ಗೆಳೆಯರು ಸೇರಿದ್ದಾರೆ. ಹೌದು, ಕಿರಣ್‌ ಹಾವೇರಿ ಅವರು ಅವರು ಹೀರೋ ಆಗಿರೋದು ಗೊತ್ತೇ ಇದೆ. “ಗೋರಿ” ಸಿನಿಮಾ ಮೂಲಕ ತಮ್ಮ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.

ಚಿತ್ರ ಈಗ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. “ಗೋರಿ” ಎಂಬ ಹೆಸರೇ ಒಂದು ರೀತಿ ಕುತೂಹಲ ಹುಟ್ಟಿಸುತ್ತೆ. ಹಾಗೆಯೇ ಸಿನಿಮಾದ ಕಥೆ ಕೂಡ ಅಷ್ಟೇ ನಿರೀಕ್ಷೆ ಹೆಚ್ಚಿಸಿದೆ. ಕಾರಣ, ಇದೊಂದು ಪ್ರೇಮಕಥೆ. ಅದರಲ್ಲೂ ಸಮಾನ ಮನಸ್ಕ ಗೆಳೆಯರೆಲ್ಲರೂ ಕೂಡಿ ಮಾಡಿರುವ ಚಿತ್ರವಿದು. ಕಷ್ಟಪಟ್ಟು ಅನ್ನುವುದಕ್ಕಿಂತ ತುಂಬಾನೇ ಇಷ್ಟಪಟ್ಟು ಮಾಡಿರುವ ಚಿತ್ರ. ಆ ಕಾರಣಕ್ಕೆ, “ಗೋರಿ” ಒಂದು ಹೊಸ ಬಗೆಯ ಸಿನಿಮಾ ಅನ್ನಬಹುದು. ಈಗಾಗಲೇ ಚಿತ್ರ ಒಂದಷ್ಟು ಸದ್ದು ಮಾಡಿದೆ. ಆ ಸಾಲಿಗೆ ಮತ್ತೊಂದು ಹಾಡಿನ ಮೂಲಕವೂ ಸೌಂಡು ಮಾಡುತ್ತಿದೆ.

“ನೀನಿರದೇ ನೀನಿರದೇ ನಾನು, ನಿಂತಲ್ಲೇ ಶವವಾದೆ ಗೊತ್ತೇನು…” ಎಂಬ ಹಾಡು ರಿಲೀಸ್‌ ಆಗಿದ್ದು, ಅದೊಂದು ಎಮೋಷನಲ್‌ ಸಾಂಗ್.‌ ಈ ಹಾಡನ್ನು ಸೆಂಚುರಿ ಸ್ಟಾರ್‌ ಶಿವರಾಜಕುಮಾರ್ ಅವರು, ರಿಲೀಸ್‌ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಗೀತ ಸಾಹಿತಿ ಕೆ.ಕಲ್ಯಾಣ್ ಅವರ ಸಾಹಿತ್ಯ ಇರುವ ಈ ಗೀತೆಗೆ ವಿನು ಮನಸು ಅವರ ಸಂಗೀತವಿದೆ. ಕಿರಣ್ ಹಾವೇರಿ ನಟಿಸಿರುವ ಈ ಚಿತ್ರವನ್ನು ಗೋಪಾಲ‌ಕೃಷ್ಣ ಹೊಮ್ಮರಡಿ ನಿರ್ದೇಶನ ಮಾಡಿದ್ದಾರೆ.

ಸದ್ಯ ತೆರೆಗೆ ಅಪ್ಪಳಿಸಲು ಸಜ್ಜಾಗಿರುವ ಈ ಸಿನಿಮಾ ಯು/ಎ ಸರ್ಟಿಫಿಕೆಟ್‌ ಪಡೆದಿದೆ. “ಪ್ರೀತಿಯ ಸಮಾದಿ” ಎಂಬುದು ಶೀರ್ಷಿಕೆಯ ಅಡಿಬರಹ. ಈ ಅಡಿಬರಹ ಓದಿದರೆ, ಇದೊಂದು ಅಪ್ಪಟ ಪ್ರೇಮಿಗಳ ಕಥೆ ಅನ್ನುವುದು ಗೊತ್ತಾಗುತ್ತೆ. ಎಲ್ಲಾ ಲವ್‌ಸ್ಟೋರಿಗಳಲ್ಲೂ ನೋವು ಸಹಜ. ಈ “ಗೋರಿ” ಸಿನಿಮಾದಲ್ಲೂ ಆ ನೋವು ಇದೆಯಾ? ಗೊತ್ತಿಲ್ಲ.

ಆದರೆ, ಸಿನಿಮಾ ನೋಡಿದವರಿಗೆ ಆ ಪ್ರೀತಿಯ ಕಥೆ, ವ್ಯಥೆ ಮತ್ತು ಪ್ರೇಮಿಗಳ ಮನದೊಳಗಿರುವ ಗಾಢವಾದ ನೋವು ಏನೆಂಬುದು ಗೊತ್ತಾಗುತ್ತೆ. ಸದ್ಯ ಆನಂದ್ ಆಡಿಯೋದ ಚಾನೆಲ್‌ನಲ್ಲಿ ಬಿಡುಗಡೆಯಾಗಿರುವ ಈ ಹಾಡಿಗೆ ಎಲ್ಲೆಡೆಯಿಂದ ಮೆಚ್ಚುಗೆ ಸಿಗುತ್ತಿದೆ. ಇನ್ನು, ಈ ಹಾಡಿಗೆ ಸರಿಗಮಪ ಖ್ಯಾತಿಯ ಮೆಹಬೂಬ್ ಸಾಬ್ ಅವರು ಹಾಡಿದ್ದಾರೆ.

Categories
ಸಿನಿ ಸುದ್ದಿ

ಕಿಟ್ಟಿ ಸಂಸಾರ ಹೆಂಗೈತೆ ಗೊತ್ತಾ? ಕನ್ನಡದಲ್ಲಿ ಶುರುವಾಗಿದೆ ಹೊಸ ವೆಬ್‌ಸೀರೀಸ್‌…


ಈಗಂತೂ ಎಲ್ಲೆಡೆ ವೆಬ್‌ಸೀರೀಸ್‌ಗಳದ್ದೇ ಮಾತು. ಅದರಲ್ಲೂ ಕಂಟೆಂಟ್‌ ಇರುವ ವೆಬ್‌ಸೀರಿಸ್‌ಗಳ ಬಗ್ಗೆಯಂತೂ ಎಲ್ಲಿಲ್ಲದ ಮಾತು. ಹಲವು ಭಾಷೆಗಳಲ್ಲಿ ಈಗಾಗಲೇ ವೆಬ್‌ಸೀರೀಸ್‌ಗಳ ಹವಾ ಜೋರಾಗಿದೆ. ಅದು ಕನ್ನಡಕ್ಕೂ ಹೊರತಲ್ಲ. ಹೌದು, ಇತ್ತೀಚೆಗೆ ಕನ್ನಡದಲ್ಲಿ ಸಾಕಷ್ಟು ವೆಬ್‌ಸೀರೀಸ್‌ಗಳು ಪ್ರಸಾರವಾಗುತ್ತಿವೆ. ಯುವಕರೇ ಹೆಚ್ಚಾಗಿ ವೆಬ್‌ಸೀರೀಸ್‌ಗಳತ್ತ ಮುಖ ಮಾಡುತ್ತಿದ್ದಾರೆ. ಆ ಮೂಲಕ ಅವರೆಲ್ಲರೂ ಗುರುತಿಸಿಕೊಳ್ಳುತ್ತಿದ್ದಾರೆ. ಆ ಸಾಲಿಗೆ ಈಗ ಮತ್ತೊಂದು ಹೊಸ ವೆಬ್‌ಸೀರೀಸ್‌ ಶುರುವಾಗುತ್ತಿದೆ.

ಹೌದು, ಈಗಾಗಲೇ “ರಂಕಲ್‌ ರಾಟೆ” ಮತ್ತು “ಮದುವೆ ಮಾಡ್ರೀ ಸರಿ ಹೋಗ್ತಾನೆ” ಸಿನಿಮಾಗಳನ್ನು ನಿರ್ದೇಶಿಸಿರುವ ಗೋಪಿ ಕೆರೂರ್‌ ಅವರು, ಹೊಸದೊಂದು ವೆಬ್‌ಸೀರೀಸ್‌ಗೆ ಕೈ ಹಾಕಿದ್ದಾರೆ. ಅದಕ್ಕೆ “ಕಿಟ್ಟಿ ಸಂಸಾರದಲ್ಲಿ ಸಿಡಿಮಿಡಿ” ಎಂದು ನಾಮಕರಣ ಮಾಡಿದ್ದಾರೆ. ಈ ವೆಬ್‌ಸೀರೀಸ್‌ ನಿರ್ದೇಶನದ ಜೊತೆಗೆ ಅವರು ಹೀರೋ ಆಗಿಯೂ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ಸದ್ಯ ವೆಬ್‌ಸೀರೀಸ್‌ ಚಿತ್ರೀಕರಣ ಜೋರಾಗಿಯೇ ನಡೆಯುತ್ತಿದೆ. ಗೋಪಿ ಕೆರೂರ್‌ ಅವರಿಗೆ ನಾಯಕಿಯಾಗಿ ಐಶ್ವರ್ಯ ಇದ್ದಾರೆ.

ಉಳಿದಂತೆ ಸಿದ್ಧಿ ವಿನಾಯಕ ಕಾಣಿಸಿಕೊಳ್ಳುತ್ತಿದ್ದಾರೆ. ಆಶಾ ಅವರು ಇತ್ತೀಚೆಗೆ ಕ್ಯಾಮೆರಾ ಆನ್‌ ಮಾಡುವ ಮೂಲಕ ಚಿತ್ರೀಕರಣಕ್ಕೆ ಚಾಲನೆ ನೀಡಿದ್ದಾರೆ. ಇನ್ನು, ಈ ವೆಬ್‌ಸೀರೀಸ್‌ ಅನ್ನು ಝೇಂಕಾರ್‌ ಮ್ಯೂಸಿಕ್ ಕಂಪನಿ ನಿರ್ಮಿಸುತ್ತಿದೆ.


ಎಂಟರ್‌ಟೈನ್ಮೆಂಟ್‌ ಈಗ ಮೊದಲಿಗಿಂತಲೂ ಹೊಸತನದಿಂದ ಕೂಡಿದೆ. ಹೊಸಬರು ಹೊಸ ಹೊಸ ಅಲೋಚನೆಗಳಲ್ಲಿ ಕಥೆ ಹೆಣೆಯುತ್ತಿದ್ದಾರೆ. ಎಲ್ಲಾ ವರ್ಗಕ್ಕೂ ಇಷ್ಟವಾಗುವಂತಹ ವೆಬ್‌ಸೀರೀಸ್‌ಗಳು ಮೂಡಿ ಬರುತ್ತಿವೆ. ಆ ಸಾಲಿಗೆ ಈಗ ಕಿಟ್ಟಿ ಸಂಸಾರದಲ್ಲಿ ಸಿಡಿಮಿಡಿ ಕೂಡ ಸೇರುತ್ತಿದೆ.

Categories
ಸಿನಿ ಸುದ್ದಿ

‘ಕನ್ನಿಕೇರಿ ಹುಡ್ಗಿ’ ಕಿಕ್ಕಿಗೆ ಹೊಡಿರೀ ಸೀಟಿ ! ಆಲೂರ್ ನಾಗಪ್ಪನವ್ರ ಮಗಳು ದಿವ್ಯಾಗೆ ‘ಜಾನಪದ ಪ್ರೀತಿ’ !

ಮಾಯ ಬಜಾರ್‌ಗೆ ಸಪೌಷ್ಟಿಕ ಚೆಲುವೆಯವರು ಪದಾರ್ಪಣೆ ಮಾಡಿದಾಗ, ಬಂಟಲು ಕಂಗಳ ಬೆಡಗಿಯರು ಬಂದಾಗ, ನೀಳಕಾಯದ ಸುಂದರಿಯರು ಎಂಟ್ರಿಕೊಟ್ಟಾಗ, ನಿಂಬೆ ಹಣ್ಣಿನಂಥ ಹುಡ್ಗಿಯರು ಆಗಮಿಸಿದಾಗ, ಸ್ಟ್ರ್ಯಾಬೆರಿಯಷ್ಟೇ ಸ್ವೀಟಿ, ಆಪಲ್‌ನಷ್ಟೇ ಬೊಂಬಾಟ್ ಆಗಿರುವ ನಟಿಮಣಿಯರು ಸ್ಯಾಂಡಲ್‌ವುಡ್ ಪ್ರಪಂಚಕ್ಕೆ ಬಂದಾಗ ಅವರೆಲ್ಲರನ್ನೂ ರತ್ನಗಂಬಳಿ ಹಾಕಿ ಸ್ವಾಗತಿಸಿದ್ದೀರಿ. ಗ್ರ್ಯಾಂಡ್ ಆಗಿ ವೆಲ್‌ಕಮ್ ಮಾಡ್ಕೊಂಡು ತಲೆ ಮೇಲೆ ಹೊತ್ತು ಮೆರೆಸಿದ್ದೀರಾ. ಇದೀಗ ನಮ್ಮ ಕನ್ನಡದ ಕನ್ನಿಕೇರಿ ಹುಡ್ಗಿಯ ಸರದಿ. ನಿರೂಪಕಿಯಾಗಿ ಕನ್ನಡಿಗರ ಮನೆ-ಮನ ತಲುಪಿರುವ ನಿರೂಪಕಿ ಈಗ ‘ಕನ್ನಿಕೇರಿ ಹುಡ್ಗಿ’ ರೂಪದಲ್ಲಿ ನಾಯಕಿಯಾಗಿ ಪ್ಲಸ್ ಗಾಯಕಿಯಾಗಿ ನಿಮ್ಮ ಮುಂದೆ ಬಂದಿದ್ದಾರೆ. ಅಷ್ಟಕ್ಕೂ, ಆ ನಿರೂಪಕಿ ಮತ್ಯಾರು ಅಲ್ಲ ದಿವ್ಯಾ ಆಲೂರ್

ದಿವ್ಯಾ ಆಲೂರ್ ಕನ್ನಡದ ಖ್ಯಾತ ನಿರೂಪಕಿಯರಲ್ಲೊಬ್ಬರು. ಕನ್ನಡ ಭಾಷೆ-ಕಲೆ-ಸಾಹಿತ್ಯ-ಸಂಸ್ಕೃತಿಯನ್ನು ಸಾರುವಂತಹ ಕಾರ್ಯಕ್ರಮಗಳಲ್ಲಿ ದಿವ್ಯಾ ಆಲೂರ್ ನಿರೂಪಣೆ ಇದ್ದೇ ಇರುತ್ತೆ. ಕಳೆದ ಹದಿನೆಂಟು ವರ್ಷಗಳಿಂದ ನಿರೂಪಕಿಯಾಗಿ ಕರುನಾಡಿನಾದ್ಯಂತ ಹಲವಾರು ಕಾರ್ಯಕ್ರಮಗಳನ್ನು ಹೋಸ್ಟ್ ಮಾಡಿರುವಂತಹ ದಿವ್ಯಾ ಅವರು. ದೇಸಿ ಬೀಟ್ಸ್ ಎನ್ನುವ ಜನಪದ ಮ್ಯೂಸಿಕ್ ಬ್ಯಾಂಡ್‌ನೊಂದಿಗೆ ನಾಡಿನ ಮೂಲೆ ಮೂಲೆಯಲ್ಲಿ ಸಂಗೀತ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದ್ದಾರೆ. ಹೊಸ ಪ್ರಯತ್ನ-ದಿಟ್ಟ ಹೆಜ್ಜೆ-ಅಪ್ಪನ ಕನಸು-ಜಾನಪದ ಲೋಕಕ್ಕೆ ಕೊಡುಗೆ ನೀಡಬೇಕು ಎನ್ನುವ ಹಂಬಲದೊಂದಿಗೆ `ಕನ್ನಿಕೇರಿ ಹುಡ್ಗಿ’ ಹೆಸರಿನ ಜಾನಪದ ಹಾಡಿಗೆ ಹೊಸತನ ನೀಡಿ ಅದನ್ನು ಕನ್ನಡಿಗರಿಗೆ ಅರ್ಪಣೆ ಮಾಡಿದ್ದಾರೆ.

ಕನ್ನಿಕೇರಿ ಹುಡ್ಗಿಯೊಬ್ಳು ಕನಕರಾಯನ ಜಾತ್ರೆಯೊಳಗೆ...ಮಿಣಮಿಣಕ ನೋಡುತ್ತಾಳೆ ಏನು ಸಿಂಗಾರ...ಇದು ೯೦ರ ದಶಕದಲ್ಲಿ ಬ್ಲಾಕ್‌ಬಸ್ಟರ್ ಹಿಟ್ಟಾದ ಹಾಡು.ಜನಪದರ ಬಾಯಲ್ಲಿ ನಲಿದಾಡುತ್ತಿದ್ದ ಈ ಹಾಡನ್ನು ತಲೆತಲೆಮಾರಿಗೂ ಉಳಿಸಬೇಕು ಎನ್ನುವ ನಿಟ್ಟಿನಲ್ಲಿ ಜಾನಪದ ಸಾಹಿತಿಗಳು ಹಾಗೂ ಗಾಯಕರು ಆದಂತಹ ಆಲೂರು ನಾಗಪ್ಪ ಅವರು ಕ್ಯಾಸೆಟ್ ರೂಪದಲ್ಲಿ ಹೊರತಂದರು. ಈ ಹಾಡಿಗೆ ಮನೋರಂಜನ್ ಪ್ರಭಾಕರ್ ಅವರು ಸಂಗೀತ ಸಂಯೋಜನೆ ಮಾಡಿದ್ದರು, ಆಲೂರು ನಾಗಪ್ಪನವ್ರೇ ಹಾಡಿದ್ದರು. ಇದೀಗ ಇವರ ಮಗಳಾದ ದಿವ್ಯಾ ಆಲೂರ್ ಅವರು ‘ಕನ್ನಿಕೇರಿ ಹುಡ್ಗಿ’ ಹಾಡಿಗೆ ಕಂಠಕುಣಿಸಿ, ಅಭಿನಯಿಸಿ, ರಿಮಿಕ್ಸ್ ಸ್ಪರ್ಶ ಕೊಡಿಸಿ ಆಲ್ಬಂ ರೂಪದಲ್ಲಿ ಹೊರತಂದಿದ್ದಾರೆ. ಪತಿ ಆದರ್ಶ್ ನೆರವಿನಿಂದ ತಂದೆ ತಂದೆ ಜನಪ್ರಿಯಗೊಳಿಸಿದ್ದ `ಕನ್ನಿಕೇರಿ ಹುಡುಗಿ’ ಹಾಡನ್ನು ಕೇಳುಗರ ಮುಂದಿಟ್ಟಿದ್ದಾರೆ. ಪ್ರಶಾಂತ್ ಕುಮಾರ್ ಈ ಹಾಡನ್ನು ನಿರ್ದೇಶಿಸಿದ್ದಾರೆ. ಅರುಣ್ ಆಂಡ್ರ್ಯೂ ಸಂಗೀತ ನೀಡಿದ್ದಾರೆ. ರಾಜಶೇಖರ್ ಛಾಯಾಗ್ರಹಣ ಮಾಡಿದ್ದಾರೆ.

ರ‍್ಯಾಪ್-ಪಾಪ್ ಮಧ್ಯೆ ಫೋಕ್ ಕಳೆದೋಗಬಾರ್ದು, ಕಣ್ಮರೆಯಾಗಬಾರ್ದು ಅಂತ ಕನ್ನಡ ಮಣ್ಣಲ್ಲಿ ಹುಟ್ಟಿ-ಬೆಳೆದು-ಉಸಿರಾಡುತ್ತಿರುವ ಬಹುತೇಕ ಕಲಾವಿದರು ಒಂದಲ್ಲ,ಒಂದು ರೀತಿಯಲ್ಲಿ ಜಾನಪದವನ್ನು ಉಳಿಸಿ ಬೆಳೆಸುವ ಕಾಯಕವನ್ನು ಕಣ್ಣಿಗೊತ್ತಿಕೊಂಡು ಮಾಡುತ್ತಿದ್ದಾರೆ. ಅದೇ ರೀತಿ ಹೆಸರಾಂತ ಜನಪದ ಗಾಯಕ ಆಲೂರ್ ನಾಗಪ್ಪ ಅವರ ಮಗಳು ದಿವ್ಯಾ ಆಲೂರ್ ಕೂಡ ಹುಮ್ಮಸ್ಸಿನಿಂದ-ಉತ್ಸಾಹದಿಂದ-ಹುರುಪಿನಿಂದ ಜಾನಪದವನ್ನು ಶ್ರೀಮಂತಗೊಳಿಸೋದಕ್ಕೆ ಮುಂದಾಗಿದ್ದಾರೆ. ‘ಜನಪದ ಈಸ್ ಎವರಿ ಜೆನ್ ಪದ'ಹೀಗಾಗಿ,ಜನಪದ ಪ್ರತಿ ಜೆನರೇಷನ್‌ಗೂ ತಲುಪಬೇಕು ಎನ್ನುತ್ತಾ ಯುವಪೀಳಿಗೆಯನ್ನು ಫೋಕ್ ಸಂಸ್ಕೃತಿಯತ್ತ ಅಟ್ರ್ಯಾಕ್ಟ್ ಮಾಡೋದಕ್ಕೆ ಹೊರಟಿದ್ದಾರೆ.ಇದರ ಮೊದಲ ಭಾಗವಾಗಿ ಕನ್ನಿಕೇರಿ ಹುಡ್ಗಿ’ ಸಾಂಗ್ ರಿಮಿಕ್ಸ್ ಮಾಡಿ ಈಗಾಗಲೇ ರಿಲೀಸ್ ಮಾಡಿದ್ದಾರೆ.

ಇತ್ತೀಚೆಗಷ್ಟೇ ಈ ಹಾಡಿನ ಬಿಡುಗಡೆ ಕಾರ್ಯಕ್ರಮ ನಡೀತು. ಮಗಳ ಚೊಚ್ಚಲ ಪ್ರಯತ್ನವನ್ನು ಕಣ್ತುಂಬಿಕೊಳ್ಳೋದಕ್ಕೆ ನಿರೂಪಕಿ ದಿವ್ಯಾ ಆಲೂರ್ ಅವರ ತಂದೆ ಆಲೂರು ನಾಗಪ್ಪ ನವ್ರು ಬಂದಿದ್ದರು. ಮಹಿಳಾ ಸಮಾಜದ ಶಾಂತ ರಾಮಸ್ವಾಮಿ, ನಿರ್ಮಾಪಕ ಚಂದನ್‌ಗೌಡ, ಕನ್ನಡವೇ ಸತ್ಯ ರಂಗಣ್ಣ ಸೇರಿದಂತೆ ಕೆಲವು ಗಣ್ಯರು ಕಾರ್ಯಕ್ರಮದ ಅತಿಥಿಗಳಾಗಿ ಆಗಮಿಸಿದ್ದರು. ಇವರುಗಳ ಸಮ್ಮುಖದಲ್ಲಿ ‘ಕನ್ನಿಕೇರಿ ಹುಡ್ಗಿ'ಆಲ್ಬಂ ಸಾಂಗ್‌ನ ಬಿಡುಗಡೆ ಮಾಡಲಾಯ್ತು.ಈ ವೇಳೆ ಮಾತನಾಡಿದ ಆಲೂರ್ ನಾಗಪ್ಪನವರ್ ಆಂಕರಿಂಗ್ ಯಾರ್ ಬೇಕಾದರೂ ಮಾಡ್ಬೋದು ಮಗಳೇ, ನನ್ನಂಥೆ ನೀನು ಕೂಡ ಜಾನಪದ ಲೋಕಕ್ಕೆ ನಿನ್ನದೇ ಆದ ಅಳಿಲು ಸೇವೆ ಮಾಡ್ಬೇಕು ಅಂತ ಹೇಳಿದ್ದೆ’ ಕೊನೆಗೂ ನನ್ನ ಮಗಳು ನನ್ನ ಕನಸನ್ನು ಈಡೇರಿಸಿದ್ದಾಳೆ. ಮೊದಲ ಹೆಜ್ಜೆ ಇಟ್ಟಿದ್ದಾಳೆ ಅವಳಿಗೆ ಒಳ್ಳೆಯದಾಗಲಿ ಎಂದರು.

ತಂದೆಯ ಕನಸನ್ನು ಈಡೇರಿಸ್ಬೇಕು ಎನ್ನುವ ನನ್ನ ಕನಸು ಕೂಡ ‘ಕನ್ನಿಕೇರಿ ಹುಡ್ಗಿ' ಹಾಡಿನ ಮೂಲಕ ನೆರವೇರಿದೆ.ತಂದೆ ಜೀವ ತುಂಬಿದ್ದ ಹಾಡಿಗೆ ಧಕ್ಕೆ ತರದಂತೆ ಸ್ವಲ್ಪೇ ಸ್ವಲ್ಪ ಮಾಸ್ ಮಸಾಲೆ ಮಿಕ್ಸ್ ಮಾಡಿ ಹಾಡನ್ನು ದೃಶ್ಯ ರೂಪಕದಲ್ಲಿ ಹೊರತಂದಿರುವುದಾಗಿ ನಿರೂಪಕಿ-ನಾಯಕಿ ಕಮ್ ಗಾಯಕಿ ದಿವ್ಯಾ ಆಲೂರ್ ಹೇಳಿಕೊಂಡಿದ್ದಾರೆ.ಇವತ್ತಿನ ಯುವಪೀಳಿಗೆಯನ್ನು ಗಮನ ಸೆಳೆಯೋಕೆ ರ‍್ಯಾಪ್ ಟಚ್ ಕೊಟ್ಟಿದ್ದಾರೆ.ಕೈಯಲ್ಲಿ ಗೀಟಾರ್ ಹಿಡಿದು ಕಲರ್ ಕಲರ್ ಕಾಸ್ಟ್ಯೂಮ್ ತೊಟ್ಟು ಮಿಂಚಿದ್ದಾರೆ.ದಿವ್ಯಾ ಪತಿ ಆದರ್ಶ್ ಕೂಡ ಆಲ್ಬಂನಲ್ಲಿ ಧಗಧಗಿಸಿದ್ದಾರೆ.ಮೊದಲ ಆಲ್ಬಂ ಸಾಂಗ್ ಆದರೂ ಕೂಡ ಅದ್ದೂರಿತನಕ್ಕೆ ಕೊರತೆಯಾಗಿಲ್ಲ.ಇವರಿಂದ ಅನೇಕರಿಗೆ ಅವಕಾಶ ಸಿಕ್ಕಿದೆ.ಹೊಸ ಪ್ರತಿಭೆಗಳು ಕೂಡ ಈ ಆಲ್ಬಂನಲ್ಲಿ ಮಿಂಚಿದ್ದಾರೆ.ವಿಶೇಷ ಅಂದರೆ ಬಿಲೀವ್ ಕಂಪೆನಿ ಜೊತೆ ಟಯಪ್ ಆಗಿದ್ದು ತಿಂಗಳಿಗೊಂದು ಜಾನಪದ ಆಲ್ಬಂ ಸಾಂಗ್’ನ ಕರುನಾಡ ಜನರಿಗೆ ಕೊಡಬೇಕು ಎನ್ನುವುದು ಇವರ ಉದ್ದೇಶವಾಗಿದೆ. ಇವರ ಮಹಾದಾಸೆ ಈಡೇರಲಿ. ಜಾನಪದ ಕಲೆ-ಸಂಸ್ಕೃತಿ ಇನ್ನೂ ಶ್ರೀಮಂತಗೊಳ್ಳಲಿ. ದಿವ್ಯಾ-ಆದರ್ಶ್ ಜಾನಪದ ಪ್ರೀತಿಗೆ ಯಶಸ್ಸು ಸಿಗಲಿ

ವಿಶಾಲಾಕ್ಷಿ, ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಮತ್ತಷ್ಟು ದಾಖಲೆ ಬರೆದ ಬೊಂಬೆ ಹೇಳುತ್ತೈತೆ ಹಾಡು! 100 ಮಿಲಿಯನ್ಸ್‌ ವೀಕ್ಷಣೆ ಪಡೆದ ಮೇಕಿಂಗ್‌ ವಿಡಿಯೋ!!


ಪುನೀತ್‌ ರಾಜಕುಮಾರ್‌ ಇಲ್ಲವೆಂಬ ಭಾವ ಯಾರಿಗೂ ಇಲ್ಲ. ದೈಹಿಕವಾಗಿ ಅವರಿಲ್ಲದಿದ್ದರೂ, ಎಲ್ಲರ ಹೃದಯದಲ್ಲಿ ಪುನೀತ್‌ ರಾಜಕುಮಾರ್‌ ನೆಲೆಸಿದ್ದಾರೆ. ಇದು ನಿಜ. ಅವರು ಏನೇ ಮಾಡಿದರೂ ದೊಡ್ಡ ಸುದ್ದಿಯೇ ಆಗುತ್ತಿತ್ತು. ಅವರು ಸಿನಿಮಾ ಮಾಡಲಿ, ಹಾಡು ಹಾಡಲಿ, ಡೈಲಾಗ್‌ ಹೇಳಲಿ, ಡ್ಯಾನ್ಸ್‌ ಮಾಡಲಿ, ಫೈಟ್‌ ಮಾಡಲಿ ಏನೂ ಮಾಡಿದರೂ ಜನ ಸೈ ಎನ್ನುತ್ತಿದ್ದರು. ಖುಷಿಯಿಂದಲೇ ಚಪ್ಪಾಳೆ ತಟ್ಟಿ, ಶಿಳ್ಳೆ ಹಾಕಿ ಸಂಭ್ರಮಿಸುತ್ತಿದ್ದರು. ಅವರಿಲ್ಲದಿದ್ದರೂ, ಆ ಸಂಭ್ರಮ ನಿರಂತರವಾಗಿರುತ್ತೆ ಅನ್ನುವುದನ್ನು ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ.

ಪುನೀತ್‌ ಇಲ್ಲ ಅಂದುಕೊಳ್ಳದ ಅವರ ಅಭಿಮಾನಿಗಳು ಮತ್ತು ನಾಡಿನ ಜನ, ಅವರ ಸಿನಿಮಾಗಳನ್ನು ಮತ್ತೆ ಮತ್ತೆ ನೋಡುತ್ತಿದ್ದಾರೆ. ಹಾಡುಗಳನ್ನು ಪುನಃ ಕೇಳುತ್ತಲೇ ಇದ್ದಾರೆ. ಅವರ ಮಾತುಗಳನ್ನು ಕೇಳಿ ಅದೆಷ್ಟೋ ಮಂದಿ ಕಣ್ಣೀರಾಗಿದ್ದಾರೆ. ಈಗ ಮತ್ತೊಂದು ದಾಖಲೆಯ ವಿಷಯ ಏನೆಂದರೆ, ಅವರ ರಾಜಕುಮಾರ ಚಿತ್ರದ ಬೊಂಬೆ ಹೇಳುತ್ತೈತೆ ಹಾಡು ದೊಡ್ಡ ದಾಖಲೆ ಬರೆದಿದೆ.

ಹೌದು, ರಾಜಕುಮಾರ ಸಿನಿಮಾ ಪುನೀತ್ ರಾಜ್‌ಕುಮಾರ್ ಅವರ 42ನೇ ಹುಟ್ಟುಹಬ್ಬ ಸಂಭ್ರಮದ ಬಳಿಕ ರಿಲೀಸ್ ಆಗಿತ್ತು. ಸಂತೋಷ್ ಆನಂದ್‌ರಾಮ್ ನಿರ್ದೇಶಿಸಿದ್ದ ಈ ಚಿತ್ರ ದೊಡ್ಡ ಸುದ್ದಿ ಮಾಡಿತ್ತು. ಅನೇಕ ದಾಖಲೆಗಳನ್ನೂ ಬರೆದಿತ್ತು. ಈ ಸಿನಿಮಾ ರಿಲೀಸ್‌ ಆಗುವ ಮೊದಲೇ ದೊಡ್ಡ ಸೌಂಡ ಮಾಡಿತ್ತು. ಅದಕ್ಕೆ ಕಾರಣ, ಬೊಂಬೆ ಹೇಳುತೈತೆ ಹಾಡು. ಹೌದು, ಈ ಹಾಡಿಗೆ ವಿ.ಹರಿಕೃಷ್ಣ ಸಂಗೀತ ಸಂಯೋಜಿಸಿದ್ದರು. ಗಾಯಕ ವಿಜಯ್ ಪ್ರಕಾಶ್ ಹಾಡಿದ್ದರು.

ಬೊಂಬೆ ಹೇಳುತೈತೆ ಹಾಡಿನ ಮೇಕಿಂಗ್ ಝಲಕ್ ರಿಲೀಸ್ ಮಾಡಿದ್ದರಿಂದ ಜನರು ಈ ಹಾಡನ್ನೇ ಗುನುಗುವ ಮೂಲಕ ಸಿನಿಮಾ ರಿಲೀಸ್‌ಗೆ ಕಾದಿದ್ದರು. ನಂತರ ಸಿನಿಮಾ ಬಿಡುಗಡೆಯಾದ ಬಳಿಕ ಹಾಡು ಸೂಪರ್‌ ಹಿಟ್‌ ಲಿಸ್ಟ್‌ಗೆ ಸೇರಿತ್ತು. ಈ ಹಾಡು ಈಗ ಮತ್ತಷ್ಟು ಜನಪ್ರಿಯವಾಗಿದೆ ಅನ್ನೋದೇ ವಿಶೇಷ. ಯುಟ್ಯೂಬ್‌ನಲ್ಲಿ ಬರೋಬ್ಬರಿ 100 ಮಿಲಿಯನ್ ವೀಕ್ಷಣೆ ಕಂಡು ದಾಖಲೆ ಬರೆದಿದೆ. ಭಾರತದಲ್ಲಿ ಮೇಕಿಂಗ್ ವಿಡಿಯೋಗೆ ಇಷ್ಟೊಂದು ವೀವ್ಸ್ ಸಿಕ್ಕಿರುವುದು ವಿಶೇಷತೆಗಳಲ್ಲೊಂದು. ಅದೇನೆ ಇರಲಿ, ಅಪ್ಪು ಫ್ಯಾನ್ಸ್‌ ಮಾತಲ್ಲಿ ಅಪ್ಪು ಸದಾ ರಾಜಕುಮಾರ.

Categories
ಸಿನಿ ಸುದ್ದಿ

ಮದಗಜ ನೋಡೋಕೆ ಕಾಲೇಜಿಗೆ ರಜೆ ಕೊಡಿ! ಹೀಗಂತ ಮೈಸೂರು ಕಾಲೇಜು ಸ್ಟುಡೆಂಟ್ ಪ್ರಿನ್ಸಿಪಾಲರಿಗೆ ಪತ್ರ ಬರೆದ!!


ಮದಗಜ ಸಿನಿಮಾ ರಿಲೀಸ್‌ ಡೇಟ್‌ ಅನೌನ್ಸ್‌ ಮಾಡಿದ್ದೇ ತಡ, ಶ್ರೀಮುರಳಿ ಫ್ಯಾನ್ಸ್‌ ಸಿಕ್ಕಾಪಟ್ಟೆ ಖುಷಿಯಲ್ಲಿದ್ದಾರೆ. ಅಷ್ಟೇ ಅಲ್ಲ, ಸಿನಿಮಾ ನೋಡೋಕೆ ತುದಿಗಾಲ ಮೇಲೆ ನಿಂತಿದ್ದಾರೆ. ಇದಿಷ್ಟೇ ಆಗಿದ್ದರೆ ಹೇಳುವ ಅಗತ್ಯ ಇರುತ್ತಿರಲಿಲ್ಲ. ಈಗ ಹೊಸ ಸುದ್ದಿ ಅಂದರೆ, ಮದಗಜ ಸಿನಿಮಾ ನೋಡಲು ಕಾಲೇಜಿಗೆ ರಜೆ ಕೊಡಿ ಅಂತ ಕಾಲೇಜಿನಿ ವಿದ್ಯಾರ್ಥಿಯೊಬ್ಬ ಪ್ರಾಂಶುಪಾಲರಿಗೆ ಪತ್ರ ಬರೆದಿದ್ದಾನೆ…

ಹೌದು, ಶ್ರೀಮುರಳಿಯ ಅಪ್ಪಟ ಅಭಿಮಾನಿಯೊಬ್ಬ ಮದಗಜ ಚಿತ್ರ ನೋಡಲು ಮೈಸೂರಿನ ಜ್ಞಾನೋದಯ ಕಾಲೇಜಿಗೆ ರಜೆ ಕೊಡಬೇಕು ಎಂದು ವಿದ್ಯಾರ್ಥಿ ವಿಕ್ರಮ್‌ ಎಂಬಾತ ಪ್ರಿನ್ಸಿಪಾಲ್‌ಗೆ ಪತ್ರ ಬರೆದಿದ್ದಾನೆ.
ಆತ ಬರೆದಿರುವ ಪತ್ರದಲ್ಲಿ, “ಡಿಯರ್‌ ಪ್ರಿನ್ಸಿಪಾಲ್‌, ಡಿಸೆಂಬರ್‌ ೩ ರಂದು ಕಾಲೇಜಿಗೆ ರಜೆ ಘೋಷಣೆ ಮಾಡಿ. ಯಾಕೆಂದರೆ, ಅಂದು ರೋರಿಂಗ್‌ ಸ್ಟಾರ್‌ ಶ್ರೀಮುರಳಿ ಅವರ “ಮದಗಜ” ಸಿನಿಮಾ ರಿಲೀಸ್‌ ಆಗುತ್ತಿದೆ.

ಹಾಗಾಗಿ, ಎಲ್ಲರೂ ಅವರ ಸಿನಿಮಾ ನೋಡಲು ಕಾತುರರಾಗಿದ್ದಾರೆ. ಅದರಲ್ಲೂ, ಅದೊಂದು ಬಹುನಿರೀಕ್ಷೆಯ ಚಿತ್ರ. ಹೀಗಾಗಲಿ, ಜನರು ಕೂಡ ಸಿನಿಮಾ ನೋಡಲು ಕಾಯುತ್ತಿದ್ದಾರೆ. ನಾವೆಲ್ಲರೂ ಕೂಡ ಕಾಯುತ್ತಿದ್ದೇವೆ. ಆದ್ದರಿಂದ, ಡಿಸೆಂಬರ್‌ ೩ ರಂದು ಮದಗಜ ಸಿನಿಮಾ ರಿಲೀಸ್‌ ಆಗುತ್ತಿರುವುದರಿಂದ ಅಂದು ಕಾಲೇಜಿಗೆ ರಜೆಯನ್ನು ಘೋಷಿಸಬೇಕು ಎಂದು ಪತ್ರ ಬರೆದು, ಪೋಸ್ಟ್‌ ಮಾಡಿದ್ದಾನೆ.
ಈ ರೀತಿಯ ಅಭಿಮಾನಿಗಳ ಪತ್ರಗಳು ಹೊಸದೇನಲ್ಲ.

ಆದರೆ, ಮೈಸೂರಿನ ಜ್ಞಾನೋದಯ ಕಾಲೇಜು ವಿದ್ಯಾರ್ಥಿಯೊಬ್ಬ, ಈ ರೀತಿ ಪರಿ ಪರಿಯಾಗಿ ತನ್ನ ಕಾಲೇಜಿನ ಪ್ರಾಂಶುಪಾಲರಿಗೆ , ಸಿನಿಮಾ ನೋಡುವ ಸಲುವಾಗಿಯೇ ರಜೆ ಕೊಡಬೇಕು ಎಂದು ಮನವಿ ಮಾಡಿಕೊಳ್ಳುವ ಮೂಲಕ ಪತ್ರವೊಂದನ್ನು ಬರೆದಿರುವುದು ನಿಜಕ್ಕೂ ವಿಶೇಷ.
ಅದೇನೆ ಇರಲಿ, ಇಂತಹ ಅಭಿಮಾನಿಗಳೂ ಇದ್ದಾರೆ ಅನ್ನುವುದಕ್ಕೆ ಇದೊಂದು ಉದಾಹರಣೆಯಷ್ಟೇ. ಶ್ರೀಮುರಳಿ ಅವರಿಗೆ ಈಗ ಸಾಕಷ್ಟು ಅಭಿಮಾನಿ ಬಳಗವಿದೆ. ಅವರೆಲ್ಲರೂ ಮದಗಜ ಚಿತ್ರವನ್ನು ನೋಡಲು ತುದಿಗಾಲ ಮೇಲೆ ನಿಂತಿದ್ದಾರೆ.

ಅದರಲ್ಲೂ ಶ್ರೀಮುರಳಿ ಅವರಿಗೆ ಕಾಲೇಜು ಸ್ಟುಡೇಂಟ್ಸ್‌ ಹೆಚ್ಚು ಫ್ಯಾನ್ಸ್.‌ ಯೂಥ್‌ಗೆ ಫೇವರೇಟ್‌ ಹೀರೋ ಎನಿಸಿರುವ ಶ್ರೀಮುರಳಿ ಅವರು, ಎಲ್ಲರನ್ನೂ ಅಷ್ಟೇ ಪ್ರೀತಿಯಿಂದ ಕಾಣುತ್ತಾರೆ. ಫ್ಯಾನ್ಸ್‌ ಅಂದರೆ ಸಾಕು, ಎಲ್ಲಿಲ್ಲದ ಪ್ರೀತಿ ಅವರಿಗೆ. ಸದಾ ಸೋಶಿಯಲ್‌ ಮೀಡಿಯಾದಲ್ಲಿ ಸಕ್ರಿಯರಾಗಿರುವ ಶ್ರೀಮುರಳಿ ಅವರು, ತಮ್ಮ ಅಭಿಮಾನಿಗಳಿಗಾಗಿಯೇ ವಿಶೇಷ ಪಾತ್ರವನ್ನು ಮದಗಜ ಚಿತ್ರದಲ್ಲಿ ನಿರ್ವಹಿಸಿದ್ದಾರೆ.

ಈಗಾಗಲೇ ಮದಗಜ ಸಾಕಷ್ಟು ಸುದ್ದಿಯಲ್ಲಿದೆ. ಇತ್ತೀಚೆಗೆ ಬಿಡುಗಡೆಯಾದ ಟೈಟಲ್‌ ಸಾಂಗ ಭರ್ಜರಿ ಹಿಟ್‌ ಆಗಿದೆ. ಆ ಹಾಡು ನೋಡಿದವರಿಗೆ ಸಿನಿಮಾ ನೋಡಲೇಬೇಕು ಅನ್ನುವಷ್ಟರ ಮಟ್ಟಿಗೆ ಸಾಂಗು ಸೂಪರ್‌ ಆಗಿದೆ. ಚಿತ್ರತಂಡ, ಡಿಸೆಂಬರ್‌ ೩ರಂದು ರಿಲೀಸ್‌ ಮಾಡಲು ಜೋರಾದ ತಯಾರಿ ಮಾಡಿಕೊಂಡಿದೆ.

Categories
ಸಿನಿ ಸುದ್ದಿ

ಪ್ರಿಯಾಮಣಿಯ ಸೈನ್ಸ್ ಫಿಕ್ಷನ್ ಆಕ್ಷನ್ ಥ್ರಿಲ್ಲರ್ ಡಿಆರ್ 56; ಟೀಸರ್ ಹೊರ ಬಂತು…

ಹರಿಹರ ಪಿಚ್ಚರ್ಸ್ ನಿರ್ಮಾಣದ ‘ಡಿಆರ್ 56’ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಹೀರೋ “ಪಿಆರ್” ಹಾಗು “ಪ್ರಿಯಾಮಣಿ” ಅಭಿನಯದ “ಡಿಆರ್ 56” ಚಿತ್ರದ ಟೀಸರ್ ಬಿಡುಗಡೆಗೆ ಕಾರಣ, ನಟ “ಪಿಆರ್” ಅವರ ಹುಟ್ಟು ಹಬ್ಬ. ಹಾಗಾಗಿ ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ನವೆಂಬರ್ 11ರಂದು ಬಿಡುಗಡೆ ಮಾಡಲಾಗಿದೆ.


ಈ ಚಿತ್ರ ಕನ್ನಡ ಹಾಗೂ ತಮಿಳ್ ನಲ್ಲಿ ಏಕಕಾಲದಲ್ಲಿ ಚಿತ್ರೀಕರಣ ಮಾಡಲಾಗಿದ್ದು ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಚಿತ್ರ ತೆರೆಗೆ ಬರಲು ಸಜ್ಜಾಗಿದೆ. ಇದೊಂದು ಸೈನ್ಸ್ ಫಿಕ್ಷನ್ ಆಕ್ಷನ್ ಥ್ರಿಲ್ಲರ್ ಚಿತ್ರವಾಗಿದ್ದು ಸಮಾಜದಲ್ಲಿ ನಡೆಯುತ್ತಿದ್ದ, ನಡೆಯುತ್ತಿರುವ, ಮುಂದೆಯು ನಡೆಯುವ
ವಂಚನೆಯನ್ನು ಜನರಿಗೆ ಮನದಟ್ಟು ಮಾಡಿಸಲು ಹೊರಟಿರುವ ಚಿತ್ರ.

ಕಥೆ ಹಾಗೂ ಚಿತ್ರಕಥೆ ನಾಯಕನಟ “ಪಿಆರ್”
ಅವರೆ ರೂಪಿಸಿದ್ದು, ನಿರ್ದೇಶನದ ಜವಾಬ್ದಾರಿಯನ್ನು “ರಾಜೇಶ್ ಆನಂದ ಲೀಲಾ” ಅವರು ನಿರ್ವಹಿಸಿದ್ದಾರೆ
ರಾಕೇಶ್ ಸಿ ತಿಲಕ್ ಅವರ ಛಾಯಾಗ್ರಹಣ
ನೋಬಿನ್ ಪಾಲ್ ಅವರ ಸಂಗೀತ ಹಾಗೂ ಹಿನ್ನೆಲೆ ಸಂಗೀತ ವಿಶ್ವ ಎನ್ ಎಂ” ಅವರ ಸಂಕಲನ
“ಶಂಕರ್ ರಾಮನ್” ಅವರ ಸಂಭಾಷಣೆ
ನಾಗೇಂದ್ರ ಪ್ರಸಾದ್ ಅವರ ಸಾಹಿತ್ಯವಿದೆ.


ರಾಷ್ಟ್ರಪ್ರಶಸ್ತಿ ವಿಜೇತ “ವಿಕ್ರಂ ಮೋರ್” ಅವರ ಸಾಹಸ ನಿರ್ದೇಶನವಿದೆ. ಕಾರ್ಯಕಾರಿ ನಿರ್ಮಾಪಕ “ಶ್ರೀಕಾಂತ್ ಕಶ್ಯಪ್” ಅವರ ನಿರ್ವಹಣೆ ಚಿತ್ರಕ್ಕಿದೆ.

error: Content is protected !!