Categories
ಸಿನಿ ಸುದ್ದಿ

ಎವರ್ ಗ್ರೀನ್ ಹೀರೋ ಹುಟ್ಟು ಹಬ್ಬ; ವಿಜಯ್ ಸಂಕೇಶ್ವರ್ ಬಯೋಪಿಕ್‌ನಲ್ಲಿ ಅನಂತ್‌ನಾಗ್‌ ಎಂಟ್ರಿ!

ಹಿರಿಯ ನಟ ಅನಂತ್‌ನಾಗ್‌ ಅವರ ಹುಟ್ಟುಹಬ್ಬದಂದು‌ “ವಿಜಯಾನಂದ” ಚಿತ್ರ ತಂಡ ಫಸ್ಟ್ ಲುಕ್‌ ರಿಲೀಸ್‌ ಮಾಡಿದೆ. ಡಾ. ವಿಜಯ್ ಸಂಕೇಶ್ವರ್ ಅವರ ಜೀವನಾಧಾರಿತ ಚಿತ್ರದಲ್ಲಿ ಅನಂತ್‌ನಾಗ್‌ ಧಗಧಗಿಸಲಿದ್ದಾರೆ. ಬಿಳಿ ಅಂಗಿ, ಬಿಳಿ ಕಚ್ಚೆ ಪಂಚೆ, ಕರಿಕೋಟು, ತಲೆಗೆ ಬಿಳಿ ರುಮಾಲು, ಕೈಯಲ್ಲೊಂದು ಕೊಡೆ ಹಿಡಿದು ಲುಕ್ ಕೊಟ್ಟಿರುವ ಅವರ ಪೋಸ್ಟರ್ ಮತ್ತು ಟೀಸರ್ ಕೂಡ ಬಿಡುಗಡೆಯಾಗಿದೆ. ವಿಜಯ್ ಸಂಕೇಶ್ವರ್ ಅವರ ತಂದೆ ಬಿ. ಜಿ. ಸಂಕೇಶ್ವರ್ ಅವರ ಪಾತ್ರಕ್ಕೆ ಅನಂತ್ ನಾಗ್ ಬಣ್ಣ ಹಚ್ಚಿದ್ದಾರೆ ಅನ್ನೋದು ವಿಶೇಷ.

ಕನ್ನಡ ಚಿತ್ರರಂಗ ಕಂಡ ಅದ್ಭುತ- ಅಮೋಘ ಹಾಗೂ ಅಪರೂಪದ ನಟ ಅನಂತ್ ನಾಗ್. ‌ಸ್ಯಾಂಡಲ್‌ವುಡ್‌ನ ಚಿರಯುವಕ ಅಂತಾನೇ ಕರೆಸಿಕೊಳ್ಳುವ ಅನಂತ್‌ನಾಗ್‌ ಅವರಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ. 74ನೇ ವಸಂತಕ್ಕೆ ಕಾಲಿಟ್ಟಿರುವ ಚಾರ್ಮಿಂಗ್ ಅಂಡ್ ಎವರ್ ಗ್ರೀನ್ ಹೀರೋ ಅನಂತ್ ನಾಗ್ ಅವರಿಗೆ ಶುಭಾಷಯಗಳ ಮಹಾಪೂರವೇ ಹರಿದು ಬರುತ್ತಿದೆ. ಸೆಲಬ್ರಿಟಿಗಳು ಮಾತ್ರವಲ್ಲ, ಅಭಿಮಾನಿಗಳು ಕೂಡ ಸೋಷಿಯಲ್ ಮೀಡಿಯಾ ಮೂಲಕ ವಿಷಸ್ ತಿಳಿಸುತ್ತಿದ್ದಾರೆ. ಇಂಟ್ರೆಸ್ಟಿಂಗ್ ವಿಷಯ ಅಂದರೆ “ವಿಜಯಾನಂದ” ಸಿನಿಮಾ ಟೀಮ್ ಕೊಟ್ಟಿರುವ ಸಪ್ರೈಸ್ ಗಿಫ್ಟ್!

ಹೌದು, ಹಿರಿಯ ನಟ ಅನಂತ್‌ನಾಗ್‌ ಅವರ ಹುಟ್ಟುಹಬ್ಬದಂದು‌ “ವಿಜಯಾನಂದ” ಚಿತ್ರ ತಂಡ ಫಸ್ಟ್ ಲುಕ್‌ನ ಉಡುಗೊರೆಯಾಗಿ ನೀಡಿದೆ. ಈ ಮೂಲಕ ಡಾ. ವಿಜಯ್ ಸಂಕೇಶ್ವರ್ ಅವರ ಜೀವನಾಧಾರಿತ ಚಿತ್ರದಲ್ಲಿ ಹಿರಿಯ ನಟ ಅನಂತ್‌ನಾಗ್‌ ಧಗಧಗಿಸೋದು ಪಕ್ಕಾ‌ ಆಗಿದೆ.‌ ಬಿಳಿ ಅಂಗಿ, ಬಿಳಿ ಕಚ್ಚೆ ಪಂಚೆ, ಕರಿಕೋಟು, ತಲೆಗೆ ಬಿಳಿ ರುಮಾಲು, ಕೈಯಲ್ಲೊಂದು ಕೊಡೆ ಹಿಡಿದುಕೊಂಡು ನಟ ಅನಂತ್‌ನಾಗ್‌ ಲುಕ್ ಕೊಟ್ಟಿರುವ ಪೋಸ್ಟರ್ ರಿಲೀಸ್ ಆಗಿದೆ. ಇವತ್ತೇ ಟೀಸರ್ ಕೂಡ ಬಿಡುಗಡೆಯಾಗಿದೆ. ವಿಜಯ್ ಸಂಕೇಶ್ವರ್ ಅವರ ತಂದೆ ಬಿ. ಜಿ. ಸಂಕೇಶ್ವರ್ ಅವರ ಪಾತ್ರಕ್ಕೆ ಅನಂತ್ ನಾಗ್ ಬಣ್ಣ ಹಚ್ಚಿದ್ದಾರೆ ಅನ್ನೋದು ವಿಶೇಷ.

ಡಾ.‌ವಿಜಯ್ ಸಂಕೇಶ್ವರ್ ಅವರ ಜೀವನಾಧಾರಿತ ‘ವಿಜಯಾನಂದ’ ಚಿತ್ರಕ್ಕೆ ರಿಷಿಕಾ ಶರ್ಮಾ ಆಕ್ಷನ್ ಕಟ್ ಹೇಳಿದ್ದಾರೆ. “ಟ್ರಂಕ್” ಸಿನಿಮಾ ನಿರ್ದೇಶಿಸಿ ಸೈ‌ ಎನಿಸಿಕೊಂಡಿದ್ದ ರಿಷಿಕಾ, ಎರಡನೇ ಚಿತ್ರದಲ್ಲೇ ಮಹಾ ಸಾಹಸಕ್ಕೆ ಕೈ ಹಾಕಿದ್ದಾರೆ. “ಟ್ರಂಕ್” ಹೀರೋ ನಿಹಾಲ್, ಡಾ.‌ವಿಜಯ್ ಸಂಕೇಶ್ವರ್ ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ. ಈ ಮಹಾ ಸಿನಿಮಾಗೆ ಮೇರು ನಟ ಅನಂತ್ ನಾಗ್ ಸೇರ್ಪಡೆಗೊಂಡಿರುವುದು ವಿಶೇಷ ಹಾಗೂ‌ ಹೆಮ್ಮೆಯ ವಿಚಾರ.

ಒಂದೇ ಒಂದು ಟ್ರಕ್‌ನಿಂದ ಶುರುವಾದ ಡಾ. ವಿಜಯ್ ಸಂಕೇಶ್ವರ್ ಅವರ ಜರ್ನಿ ಕೊನೆಗೆ ಭಾರತದ ಅತಿದೊಡ್ಡ ಪ್ಲೀಟ್ ಮಾಲೀಕರಾಗಿ ಬೆಳೆದು ನಿಲ್ಲುವಂತೆ ಮಾಡಿತು. ಪತ್ರಿಕೆ ಮೂಲಕ ದೊಡ್ಡ ಸಾಧನೆ ಮಾಡಿದರು. ಮಾಧ್ಯಮ ರಂಗದಲ್ಲೂ ಒಳ್ಳೆಯ ಹೆಸರು ಮಾಡಿದ್ದಾರೆ. ಬದುಕಲ್ಲಿ ಏಳು ಬೀಳು‌ ಕಂಡು ಮುಗಿಲೆತ್ತರಕ್ಕೆ‌ ಬೆಳೆದು ನಿಂತಿರುವ ಡಾ. ವಿಜಯ್ ಸಂಕೇಶ್ವರ್ ಅವರ ಜೀವನವನ್ನ ರಿಷಿಕಾ ಹಾಗೂ ನಿಹಾಲ್ ಬೆಳ್ಳಿತೆರೆ ಮೇಲೆ ತರಲಿದ್ದಾರೆ. ಇವರ ಮಹಾಸಾಹಸಕ್ಕೆ ವಿಆರ್‌ಎಲ್ ಸಮೂಹ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಹಾಗೂ ಪ್ರೊಮೋಟರ್ ಆದ ಆನಂದ್ ಸಂಕೇಶ್ವರ್ ಕೈ ಜೋಡಿಸಿದ್ದಾರೆ.

ವಿಆರ್‌ಎಲ್ ಫಿಲಂ ಪ್ರೊಡಕ್ಷನ್ ಅಡಿಯಲ್ಲಿ ‘ವಿಜಯಾನಂದ’ ಸಿನಿಮಾ ಅದ್ದೂರಿಯಾಗಿ ಮೂಡಿ ಬರಲಿದೆ. ಅಪ್ಪನ‌ ಸಿನಿಮಾಗೆ ಮಗನೇ ಬಂಡವಾಳ ಹೂಡುತ್ತಿದ್ದು, ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಚಿತ್ರ ತಯ್ಯಾರಿಗೆ ಪ್ಲ್ಯಾನ್ ಆಗಿದೆ. ತೆಲುಗು- ಮಲೆಯಾಳಂ ಚಿತ್ರರಂಗದ ಪ್ರಖ್ಯಾತ ಸಂಗೀತ ನಿರ್ದೇಶಕರಾದ ಗೋಪಿ ಸುಂದರ್ ‘ವಿಜಯಾನಂದ’ ಬಯೋಪಿಕ್ ಚಿತ್ರಕ್ಕೆ ಮ್ಯೂಸಿಕ್ ನೀಡಲಿದ್ದಾರೆ. ಪಾತ್ರವರ್ಗದ ಆಯ್ಕೆ ಜೊತೆ ಜೊತೆಗೆ ಚಿತ್ರೀಕರಣ ನಡೆಯುತ್ತಿದೆ. ಅತೀ ದೊಡ್ಡ ತಾರಾಬಳಗ ಈ‌ ಸಿನಿಮಾದಲ್ಲಿದ್ದು ಶೀಘ್ರದಲ್ಲೇ ಕಾಸ್ಟ್ ಅಂಡ್ ಕ್ರೂ ಬಗ್ಗೆ ಚಿತ್ರತಂಡ ಮಾಹಿತಿ ನೀಡಲಿದ್ದಾರೆ ನಿರ್ದೇಶಕಿ ರಿಷಿಕಾ ಶರ್ಮ.


ಎಂಟರ್ ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಡಾಲಿ-ಚಿಟ್ಟೆ ಮತ್ತೆ ಜೊತೆಯಾದ್ರು ಹಚ್ರಿ ಪಟಾಕಿ; ಹೆಡ್‌ಬುಷ್ ಆಡಲಿದೆ ಟಗರು ಜೋಡಿ!

“ಟಗರು” ಕನ್ನಡ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿದ್ದಷ್ಟೇ ಅಲ್ಲ, ಅಲ್ಲಿದ್ದ ಡಾಲಿ ಅಲಿಯಾಸ್‌ ಧನಂಜಯ್‌ ಹಾಗೂ ಚಿಟ್ಟೆ ಅಲಿಯಾಸ್‌ ವಸಿಷ್ಠ ಸಿಂಹ ಅವರಿಗೆ ಬಹುದೊಡ್ಡ ಹೆಸರು ತಂದುಕೊಟ್ಟಂತಹ ಚಿತ್ರ. ಈಗ “ಹೆಡ್‌ಬುಷ್‌”ನಲ್ಲಿ ಈ ಜೋಡಿ ಸೇರಿ ಮೋಡಿ ಮಾಡಲಿದೆ ಎಂಬ ಲೆಕ್ಕಾಚಾರ ಗಾಂಧಿನಗರದಲ್ಲಿ ಜೋರಾಗಿಯೇ ನಡೆದಿದೆ.

ಡಾಲಿ-ಚಿಟ್ಟೆ ಫ್ಯಾನ್ಸ್ ಕುಣಿದು ಕುಪ್ಪಳಿಸುವ, ಪಟಾಕಿ ಹಚ್ಚಿ ಕೇಕೆ ಹೊಡೆದು ಸಂಭ್ರಮಿಸುವ ಸುದ್ದಿ ಇದು. ಇಂತಹದ್ದೊಂದು ಬಡಾ ಖಬರ್‌ನ ಕೇಳೋದಕ್ಕಾಗಿಯೇ, ಇಂತಹದ್ದೊಂದು ಕ್ಷಣಕ್ಕಾಗಿಯೇ ಇವರಿಬ್ಬರ ಫ್ಯಾನ್ಸ್ ಕಾತುರರಾಗಿ ಕಾಯ್ತಿದ್ದರು. ಕೊನೆಗೆ ಆ ಕೌತುಕದ ಕ್ಷಣಕ್ಕೆ ಬಿಗ್ ಬ್ರೇಕ್ ಬಿದ್ದಿದೆ. “ಟಗರು” ನಂತರ ಡೆಡ್ಲಿ ಕಾಂಬೋ ಮತ್ತೆ ಜೊತೆಯಾಗಿದೆ. ಅದೇ ಈ ಹೊತ್ತಿನ ಸುದ್ದಿ.

“ಟಗರು” ಸಿನಿಮಾ ಖ್ಯಾತಿಯ ಡಾಲಿ ಮತ್ತು ಚಿಟ್ಟೆನಾ ಒಟ್ಟಿಗೆ ನೋಡಬೇಕು ಎನ್ನುವುದು ಇವರಿಬ್ಬರ ಅಭಿಮಾನಿಗಳ ಬಹುದೊಡ್ಡ ಕನಸು. ಆ ಕನಸಿನ ಸಾಕಾರಕ್ಕಾಗಿ ಫ್ಯಾನ್ಸ್ ಎದುರು ನೋಡ್ತಿದ್ದರು. ಫೈನಲೀ, ಆ ದಿವ್ಯ ಘಳಿಗೆ ಕೂಡಿ ಬಂದಿದೆ. “ಟಗರು” ಅಖಾಡದಲ್ಲಿ ಹ್ಯಾಟ್ರಿಕ್ ಹೀರೋ ಜೊತೆ ಧಗಧಗಿಸಿ, ಬೆಳ್ಳಿತೆರೆ ಅಂಗಳದಲ್ಲಿ ಧೂಳೆಬ್ಬಿಸಿದ ಡಾಲಿ-ಚಿಟ್ಟೆ ಜೋಡಿ ಈಗ ಪುನಃ “ಹೆಡ್‌ಬುಷ್’ಗಾಗಿ ಒಂದಾಗಿದೆ. “ಟಗರು” ಕನ್ನಡ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿದ್ದಷ್ಟೇ ಅಲ್ಲ, ಅಲ್ಲಿದ್ದ ಡಾಲಿ ಅಲಿಯಾಸ್‌ ಧನಂಜಯ್‌ ಹಾಗೂ ಚಿಟ್ಟೆ ಅಲಿಯಾಸ್‌ ವಸಿಷ್ಠ ಸಿಂಹ ಅವರಿಗೆ ಬಹುದೊಡ್ಡ ಹೆಸರು ತಂದುಕೊಟ್ಟಂತಹ ಚಿತ್ರ. ಈಗ “ಹೆಡ್‌ಬುಷ್‌”ನಲ್ಲಿ ಈ ಜೋಡಿ ಸೇರಿ ಮೋಡಿ ಮಾಡಲಿದೆ ಎಂಬ ಲೆಕ್ಕಾಚಾರ ಗಾಂಧಿನಗರದಲ್ಲಿ ಜೋರಾಗಿಯೇ ನಡೆದಿದೆ.

`ಹೆಡ್‌ಬುಷ್’ ಟೀಮ್‌ಗೆ ಲೂಸ್ ಮಾದ ಯೋಗಿ ಇತ್ತೀಚೆಗಷ್ಟೇ ಸೇರ್ಪಡೆಯಾಗಿದ್ದರು. ಇದೀಗ, ಚಿಟ್ಟೆ ಸರದಿ. ಗೆಳೆಯ ಕಮ್ ಕೋಸ್ಟಾರ್ ಡಾಲಿಯ ಬಹುನಿರೀಕ್ಷಿತ ಸಿನಿಮಾಗೆ ಸೇರಿಕೊಂಡಿರುವ ಕುರಿತಾಗಿ ಖಾಸಗಿ ಪತ್ರಿಕೆಗೆ ಚಿಟ್ಟೆ ಅಲಿಯಾಸ್ ವಸಿಷ್ಟ ಎನ್.ಸಿಂಹ ಸಂದರ್ಶನ ನೀಡಿದ್ದಾರೆ. ಡಾಲಿ-ಚಿಟ್ಟೆ ಜುಗಲ್‌ಬಂಧಿನಾ ಬಿಗ್‌ಸ್ಕ್ರೀನ್ ಮೇಲೆ ಮತ್ತೆ ನೋಡೋದಕ್ಕೆ ಫ್ಯಾನ್ಸ್ ಬಯಸಿದ್ದರು. ಯಾವಾಗ ಒಂದಾಗ್ತೀರಿ ಅಂತ ಕೇಳ್ತಾನೆ ಇದ್ದರು. ಒಂದೊಳ್ಳೆ ಸ್ಕ್ರಿಪ್ಟ್‌ಗಾಗಿ ನಾವಿಬ್ಬರು ಕಾಯ್ತಿದ್ದೆವು, ಈಗ ಸ್ಕ್ರಿಪ್ಟ್‌ ಜೊತೆ ಒಂದೊಳ್ಳೆ ಟೀಮ್ ಕೂಡ ಸಿಕ್ಕಿದೆ ಎಂದಿದ್ದಾರೆ. ಈಗಾಗಲೇ, ಹೆಡ್‌ಬುಷ್ ಅಖಾಡಕ್ಕೆ ಧುಮ್ಕಿ ಒಂದೆರಡು ಸೀನ್‌ಗಳಲ್ಲಿ ಖದರ್ ತೋರಿಸಿದ್ದಾರೆ.

ಹೆಡ್‌ಬುಷ್' ಡಾಲಿ ಧನಂಜಯ್ ನಟನೆಯ ಮೋಸ್ಟ್ ಎಕ್ಸ್ಪೆಕ್ಟೆಡ್ ಸಿನಿಮಾ. ಭೂಗತ ದೊರೆ ಎಂ.ಪಿ.ಜಯರಾಜ್‌ರ ಜೀವನಾಧರಿತ ಚಿತ್ರ ಇದಾಗಿದ್ದು, ಡಾನ್ ಪಾತ್ರದಲ್ಲಿ ಡಾಲಿ ಅಟ್ಟಹಾಸ ಮೆರೆಯಲಿದ್ದಾರೆ. ಧನಂಜಯ್ ಜೊತೆಗೆ ಹೆಡ್‌ಬುಷ್ ಟೀಮ್ ಸೇರಿಕೊಂಡಿರುವ ಲೂಸ್ ಮಾದ ಯೋಗಿ ಹಾಗೂ ಚಿಟ್ಟೆ ವಸಿಷ್ಟ ಸಿಂಹರದ್ದು ಯಾವ್ ರೀತಿಯ ಪಾತ್ರ ಎನ್ನುವುದು ಇನ್ನೂ ರಿವೀಲ್ ಆಗಿಲ್ಲ. ಡಾನ್ ಡಾಲಿ ಜೊತೆ ಚಿಟ್ಟೆ ಹಾಗೂ ಯೋಗಿ ಕೈ ಜೋಡಿಸ್ತಾರಾ ಅಥವಾ ಭೂಗತ ಪಾತಕಿ ವಿರುದ್ಧ ತಿರುಗಿ ಬೀಳ್ತಾರಾ ಎನ್ನುವ ಕೂತೂಹಲ ಸದ್ಯಕ್ಕೆ ಗುಟ್ಟಾಗಿದೆ.ಹೆಡ್‌ಬುಷ್’ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ಕಂಠೀರವ ಸ್ಟುಡಿಯೋದಲ್ಲಿ ಡಾಲಿ ಅಂಡ್ ಯೋಗಿ ಕಾಂಬಿನೇಷನ್ ದೃಶ್ಯಗಳನ್ನ ಸೆರೆಹಿಡಿಯೋದ್ರಲ್ಲಿ ಚಿತ್ರತಂಡ ಬ್ಯುಸಿಯಾಗಿದೆ.

ಭೂಗತ ಜಗತ್ತಿನ ದೊರೆಯ ಬಯೋಪಿಕ್ ಆದ ಹೆಡ್‌ಬುಷ್’ಗೆ ಅಗ್ನಿಶ್ರೀಧರ್ ಕಥೆ-ಚಿತ್ರಕಥೆ ರಚಿಸಿದ್ದಾರೆ. ಯುವ ಪ್ರತಿಭೆ ಶೂನ್ಯ ಆಕ್ಷನ್ ಕಟ್ ಹೇಳಿದ್ದಾರೆ. ಆ ದಿನಗಳು ಚಿತ್ರಕ್ಕೆ ಕಥೆ ಕೆತ್ತಿಕೊಟ್ಟು ಸಿನಿರಸಿಕರನ್ನ ಮಾತ್ರವಲ್ಲದೇ ಬಿಗ್‌ಸ್ಕ್ರೀನೇ ಬೆಚ್ಚಿಬೀಳುವಂತೆ ಮಾಡಿದ ನಿರ್ದೇಶಕ ಅಗ್ನಿ ಶ್ರೀಧರ್,ಹೆಡ್‌ಬುಷ್’ ಮೂಲಕ ಸೌತ್ ಸಿನಿಮಾ ಇಂಡಸ್ಟ್ರಿ ಶೇಕ್ ಆಗುವಂತಹ ಕಥೆ ರಚಿಸ್ತಾರೆ ಎನ್ನುವ ಮಾತು ಕೇಳಿ ಬರುತ್ತಿದೆ.

ಟಗರು ಜೋಡಿ ಒಂದಾಗಿರುವುದಕ್ಕೆ ಹೆಡ್‌ಬುಷ್’ ಮೇಲೆ ಕೂತೂಹಲ ಜಾಸ್ತಿಯಾಗ್ತಿದೆ. ಮಲ್ಟಿಲಾಂಗ್ವೇಜ್‌ನಲ್ಲಿ ತೆರೆಗೆ ತರಬೇಕು, ಎರಡು ಚಾಪ್ಟರ್‌ಗಳಾಗಿ ನಿರ್ಮಾಣ ಮಾಡ್ಬೇಕು ಎನ್ನುವ ಪ್ಲ್ಯಾನ್ ಚಿತ್ರತಂಡದ್ದು. ಅದೇ ಪ್ರಕಾರವಾಗಿಹೆಡ್‌ಬುಷ್’ ಟೀಮ್ ಮುನ್ನುಗುತ್ತಿದೆ. ಡಾಲಿ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗ್ತಿದೆ. ಅತೀ ದೊಡ್ಡ ತಾರಾಬಳಗವಿರುವ ಹೆಡ್‌ಬುಷ್‌ಗೆ ಸೌತ್ ಸುಂದರಿ ಪಾಯಲ್ ರಜಪೂತ್ ಜೊತೆಯಾಗುತ್ತಿದ್ದಾರೆ. ಡಾನ್ ಡಾಲಿ ಜೊತೆ ಡ್ಯುಯೆಟ್ ಹಾಡಲಿದ್ದಾರೆ.

ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಚಡ್ಡಿದೋಸ್ತಿಗಳ ಗ್ರ್ಯಾಂಡ್ ದರ್ಶನ ; ಸೆಪ್ಟೆಂಬರ್ 17 ರಂದು ಕಡ್ಡಿ ಅಲ್ಲಾಡ್‌ಸ್ತಾರೆ!

ಕನ್ನಡದಲ್ಲಿ ಹೊಸ ಬಗೆಯ ಶೀರ್ಷಿಕೆ ಹೊತ್ತ ಚಿತ್ರಗಳಿಗೇನು ಲೆಕ್ಕವಿಲ್ಲ. ವಿಭಿನ್ನ ಮತ್ತು ವಿಶೇಷ ಎನಿಸುವ ಶೀರ್ಷಿಕೆಯ ಚಿತ್ರಗಳು ಈಗಾಗಲೇ ಬಂದು ಹೋಗಿವೆ. ಆ ಸಾಲಿಗೆ ಈಗ “ಚಡ್ಡಿದೋಸ್ತ್ ಕಡ್ಡಿ ಅಲ್ಲಾಡುಸ್ಬುಟ್ಟ” ಕೂಡ ಸೇರಿದೆ. ಹೌದು ಈಗಾಗಲೇ ಈ ಚಿತ್ರ ಒಂದಷ್ಟು ಜೋರು ಸುದ್ದಿ ಮಾಡಿದ್ದು, ಸಿನಿಮಾ ಪೋಸ್ಟರ್ ಮೂಲಕವೇ ಕುತೂಹಲ ಮೂಡಿಸಿದೆ. ಅಂದಹಾಗೆ ಈ ಚಿತ್ರ ರೆಡ್ ಅಂಡ್ ವೈಟ್ ಖ್ಯಾತಿಯ ಸೆವೆನ್ ರಾಜ್ ನಿರ್ಮಾಣದಲ್ಲಿ ತಯಾರಾಗಿದೆ. ಇನ್ನು, ಆಸ್ಕರ್ ಕೃಷ್ಣ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಅಷ್ಟೇ ಅಲ್ಲ, ಅವರು ಇದೇ ಮೊದಲ ಸಲ ಹೀರೋ ಆಗಿಯೂ ಕಾಣಿಸಿಕೊಂಡಿದ್ದಾರೆ. ಈ ಚಿತ್ರ ಸೆಪ್ಟೆಂಬರ್ 17 ರಂದು ರಾಜ್ಯಾದ್ಯಂತ ತೆರೆ ಕಾಣುತ್ತಿದೆ.

ಕೊರೊನಾ ಎರಡನೇ ಅಲೆಯ ನಂತರ ಬಿಡುಗಡೆಯಾಗುತ್ತಿರುವ ಈ ಚಿತ್ರ ಜನರನ್ನು ಮತ್ತೆ ಚಿತ್ರಮಂದಿರಕ್ಕೆ ಕರೆತರಲಿದೆ ಎಂಬುದು ಚಿತ್ರತಂಡದ ನಂಬಿಕೆ. ಕಥೆ ಬಗ್ಗೆ ಹೇಳುವುದಾದರೆ, ಇದೊಂದು ಇಬ್ಬರು ಸ್ನೇಹಿತರ ನಡುವೆ ಪ್ರವೇಶಿಸುವ ಒಬ್ಬ ಹುಡುಗಿ ಮತ್ತು ಆಕೆಯೂ ಸೇರಿದಂತೆ ಆ ಇಬ್ಬರು ಗೆಳೆಯರ ಮಧ್ಯೆ ನಡೆಯುವ ಕಥೆ.

ಆ ಕಥೆಯಲ್ಲಿ ಸುತ್ತಿಕೊಳ್ಳುವ ಸಾಮಾಜಿಕ ವ್ಯವಸ್ಥೆಯ ಹಲವು ರೂಪಗಳು, ಇವುಗಳ ನಡುವೆ ಸಿಲುಕಿ ಹಾಕಿಕೊಂಡ ಸ್ನೇಹ, ಪ್ರೀತಿ ಮತ್ತಿತರ ಭಾವನಾತ್ಮಕ ಸಂಬಂಧಗಳು ಚಿತ್ರದ ಹೈಲೈಟ್. ಚಿತ್ರದ ಕಥೆಗೆ ಲೋಕೇಂದ್ರ ಸೂರ್ಯ ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಅಷ್ಟೇ ಅಲ್ಲ, ಅವರು ಇಲ್ಲಿ ಮುಖ್ಯ ಪಾತ್ರದಲ್ಲೂ ನಟಿಸಿದ್ದಾರೆ. ಇಬ್ಬರು ಸ್ನೇಹಿತರ ನಡುವೆ ಬರುವ ಹುಡುಗಿ ಪಾತ್ರದಲ್ಲಿ ಮಲಯಾಳಿ ನಟಿ ಗೌರಿ ನಾಯರ್ ಅಭಿನಯಿಸಿದ್ದಾರೆ.

ಚಿತ್ರದಲ್ಲಿ ಸಿ.ವಿ.ಜಿ, ಗಜರಾಜ್, ಪ್ರತಾಪ್, ಸತೀಶ್ ಗೌಡ, ರಾಜು ನಾಯಕ್, ವರ್ಧನ್ ಬಾಲು, ನವೀನ್ ಮಧುಗಿರಿ, ಮಾಸ್ಟರ್ ರಾಕಿನ್, ಮಹಾಲಕ್ಷ್ಮಿ, ಡಾ.|ಪದ್ಮಾಕ್ಷಿ, ಭಾನು, ಆಸಿಯಾ ಷರೀಫ್, ಮೈಸೂರು ಶೋಭ ಮತ್ತಿತರರು ನಟಿಸಿದ್ದಾರೆ. ಹರ್ಷಿತ ಕಲ್ಲಿಂಗಲ್ ಎಂಬುವ ಮಾದಕ ಚೆಲುವೆ ವಿಶೇಷ ಹಾಡೊಂದಕ್ಕೆ ನರ್ತಿಸಿರುವುದು ಚಿತ್ರದ ಮತ್ತೊಂದು ಹೈಲೈಟ್.

ಅನಂತ್ ಆರ್ಯನ್ ಸಂಗೀತ ನೀಡಿದರೆ, ಗಗನ್ ಕುಮಾರ್ ಛಾಯಾಗ್ರಹಣವಿದೆ. ಮರಿಸ್ವಾಮಿ ಸಂಕಲನವಿದೆ. ವೈಲೆಂಟ್ ವೇಲು ಸಾಹಸ ಮಾಡಿದ್ದಾರೆ. ಅಕುಲ್ ನೃತ್ಯ, ಶ್ರೀಧರ್ ಸಿಯಾ, ಕೃಷ್ಣಕುಮಾರ್ ಮತ್ತು ಸತೀಶ್ ಕ್ಯಾತಘಟ್ಟ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಈ ಚಿತ್ರವನ್ನು ರಾಜ್ಯಾದ್ಯಂತ ಜಯದೇವ್ ಫಿಲಮ್ಸ್ ಸಂಸ್ಥೆ ಬಿಡುಗಡೆ ಮಾಡುತ್ತಿದೆ.

Categories
ಸಿನಿ ಸುದ್ದಿ

ಪೃಥ್ವಿ ಅಂಬರ್‌ ನಮ್‌ ತಾಯಾಣೆ ಅಂತಾರಲ್ಲ ಗುರು! ಶುಗರ್‌ ಲೆಸ್‌ ಚಿತ್ರದ ಹಾಡು ನಾಳೆ ರಿಲೀಸ್

ಚಿತ್ರದ ಎರಡನೇ ಹಾಡು ‘ನಮ್ ತಾಯಾಣೆ’ ವಿಡಿಯೊ ಸಾಂಗ್ ಆನಂದ್ ಯುಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಆಗುತ್ತಿದೆ. ಸಂಚಿತ್ ಹೆಗ್ಡೆ ಹಾಡಿರುವ ಈ ಹಾಡನ್ನು ನಾಗೇಂದ್ರ ಪ್ರಸಾದ್ ಬರೆದಿದ್ದು, ಅನೂಪ್ ಸೀಳಿನ್ ಸಂಗೀತ ನೀಡಿದ್ದಾರೆ.

ಶುಗರ್ ಲೆಸ್ ಚಿತ್ರ ಇನ್ನೇನು ತೆರೆಗೆ ಬರಲು ಸಜ್ಜಾಗುತ್ತಿದೆ. ಈಗಾಗಲೇ ಈ ಚಿತ್ರದ ಹಾಡೊಂದು ಸಖತ್ ವೈರಲ್ ಆಗಿದೆ. ಆಗಸ್ಟ್ 4ರಂದು ಬೆಳಗ್ಗೆ 11 ಗಂಟೆಗೆ ಮತ್ತೊಂದು ಹಾಡು ರಿಲೀಸ್ ಆಗುತ್ತಿದೆ.


ಹೌದು, ಇದೇ ಮೊದಲ ಬಾರಿಗೆ ನಿರ್ದೇಶನ ಮಾಡಿರುವ ನಿರ್ಮಾಪಕ ಶಶಿಧರ ಕೆ.ಎಂ ಅಚರು ಈ ಚಿತ್ರದ ಕಥೆ, ಚಿತ್ರಕಥೆ ಬರೆದು ಒಂದೊಳ್ಳೆಯ ಕಂಟೆಂಟ್ ಚಿತ್ರ ಮಾಡಿದ್ದಾರೆ.

ಆ ಚಿತ್ರದ ಎರಡನೇ ಹಾಡು ‘ನಮ್ ತಾಯಾಣೆ’ ವಿಡಿಯೊ ಸಾಂಗ್ ಆನಂದ್ ಯುಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಆಗುತ್ತಿದೆ. ಸಂಚಿತ್ ಹೆಗ್ಡೆ ಹಾಡಿರುವ ಈ ಹಾಡನ್ನು ನಾಗೇಂದ್ರ ಪ್ರಸಾದ್ ಬರೆದಿದ್ದು, ಅನೂಪ್ ಸೀಳಿನ್ ಸಂಗೀತ ನೀಡಿದ್ದಾರೆ.

Categories
ಸಿನಿ ಸುದ್ದಿ

ಚಾಮುಂಡೇಶ್ವರಿ ದರ್ಶನ ಪಡೆದ ಕಿಚ್ಚ; ಮಾಣಿಕ್ಯನ ದರ್ಶನಕ್ಕೆ ಅಭಿಮಾನಿ ಸಾಗರ!


ಸ್ಯಾಂಡಲ್‌ವುಡ್‌ ಬಾದ್ ಷಾ ಕಿಚ್ಚ ಸುದೀಪ್ ತಮ್ಮ 50 ನೇ ವರ್ಷದ ಬರ್ತ್ ಡೇನಾ ಸಂಭ್ರಮ ಸಡಗರದಿಂದ ಆಚರಣೆ ಮಾಡಿಕೊಂಡಿದ್ದಾರೆ. ಹುಟ್ಟುಹಬ್ಬದ ಮರುದಿನ ಅಭಿನಯ ಚಕ್ರವರ್ತಿ ಟೆಂಪಲ್ ರನ್ ಶುರು ಮಾಡಿದ್ದಾರೆ.

ಶುಕ್ರವಾರ ಬೆಳ್ಳಂ ಬೆಳಗ್ಗೆ ನಾಡ ದೇವತೆ ಚಾಮುಂಡೇಶ್ವರಿ ಸನ್ನಿಧಿಗೆ ಭೇಟಿ ಕೊಟ್ಟಿದ್ದ ಕಿಚ್ಚ, ತಾಯಿ ಚಾಮುಂಡಿಗೆ ವಿಶೇಷ ಪೂಜೆ ಸಲ್ಲಿಸಿದರು.

ಅಲ್ಲಿಂದ ಹೊರಟು ಚನ್ನಪಟ್ಟಣದ ಗೌಡಗೆರೆಯಲ್ಲಿರುವ ಚಾಮುಂಡೇಶ್ವರಿ ವಿಗ್ರಹಕ್ಕೆ ಪೂಜೆ ನೆರವೇರಿಸಿದ್ದಾರೆ.

ಕೋಟಿಗೊಬ್ಬ ಕಿಚ್ಚನ ಭೇಟಿಯ ಹಿನ್ನಲೆ ಅಭಿಮಾನಿಗಳ ದಂಡೇ ಸೇರಿತ್ತು. ಕಿಚ್ಚ.. ಕಿಚ್ಚ.. ಎಂತ ಘೋಷಣೆ ಕೂಗುತ್ತಾ ಅಭಿಮಾನಿಗಳು ಸಂಭ್ರಮಿಸಿದರು. ಮಾಣಿಕ್ಯನ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳೋಕೆ ಮುಗಿಬಿದ್ದರು.

Categories
ಸಿನಿ ಸುದ್ದಿ

ಚಿರು ಮತ್ತು ಮೇಘನಾ ಮುದ್ದು ಪುತ್ರನ ಹೆಸರು ಇನ್ಮೇಲೆ ರಾಯನ್ ರಾಜ್ ಸರ್ಜಾ !

ಚಿರು ಅಗಲಿಕೆಯಿಂದ ನೋವಲ್ಲಿದ್ದ ಇಡೀ ನಮ್ಮ ಕುಟುಂಬಕ್ಕೆ ಸ್ವರ್ಗದ ಬಾಗಿಲು ತೆರೆಸಿದ್ದು ನಮ್ಮ ಮರಿ ಚಿರಂಜೀವಿ. ಕತ್ತಲೆ ಕವಿದಿದ್ದ ಬಾಳಿಗೆ ಬೆಳಕಾಗಿದ್ದಾನೆ. ಅಂದ್ಹಾಗೆ, ನಮ್ಮ ಕಂದಮ್ಮನಿಗೆ “ಯುವರಾಜ” ಅಂತ ಹೆಸರಿಡಬೇಕು ಎನ್ನುವುದ ನನ್ನ ಕನಸಾಗಿತ್ತು. ನನ್ನ ಮನದ ಆಸೆಯಂತೆ ನಮ್ಮ ಮುದ್ದು ಮಗನಿಗೆ ಯುವರಾಜನ ಅರ್ಥಕೊಡುವ “ರಾಯನ್‌” ಎಂಬ ಹೆಸರಿಡಲಾಗಿದೆ…

ಸ್ಯಾಂಡಲ್‌ವುಡ್‌ನ ಯುವ ಸಾಮ್ರಾಟ ದಿವಂಗತ ಚಿರಂಜೀವಿ ಸರ್ಜಾ ಹಾಗೂ ಮೇಘನರಾಜ್ ಪುತ್ರನಿಗೆ ಏನೆಂದು ಹೆಸರಿಡಬಹುದು ಎನ್ನುವ ಅಭಿಮಾನಿಗಳ ಕೂತೂಹಲಕ್ಕೆ ಶುಕ್ರವಾರ ತೆರೆ ಬಿದ್ದಿದೆ. ಜೂನಿಯರ್ ಚಿರಂಜೀವಿಗೆ ರಾಯನ್ ರಾಜ್ ಸರ್ಜಾ' ಎಂದು ಹೆಸರಿಡಲಾಗಿದೆ. ರಾಯನ್ ಅಂದ್ರೆ ಸಂಸ್ಕೃತದಲ್ಲಿ ಯುವರಾಜ ಎಂದರ್ಥವಂತೆ. ಹೀಗಾಗಿ, ಸುಂದರ್ ರಾಜ್ ಹಾಗೂ ಸರ್ಜಾ ಕುಟುಂಬಸ್ಥರು ಖುಷಿಯಿಂದ ಒಪ್ಪಿಕೊಂಡುರಾಯನ್ ರಾಜ್ ಸರ್ಜಾ’ ಹೆಸರನ್ನ ಇಟ್ಟಿದ್ದಾರೆ. ಖಾಸಗಿ ಹೋಟೆಲ್‌ನಲ್ಲಿ ಅದ್ಧೂರಿಯಾಗಿ ಮರಿ ಯುವಸಾಮ್ರಾಟನ ನಾಮಕರಣ ಸಮಾರಂಭ ನೆರವೇರಿದೆ. ಆಕ್ಷನ್ ಪ್ರಿನ್ಸ್ ಅರ್ಜುನ್ ಸರ್ಜಾ ಮುಂದೆ ನಿಂತುಕೊಂಡು ಸಹೋದರನ ಮಗನ ನೇಮಿಂಗ್ ಸೆರಮನಿಯನ್ನ ಸಖತ್ ಗ್ರ್ಯಾಂಡ್ ಆಗಿಯೇ ಮಾಡಿಕೊಟ್ಟಿದ್ದಾರೆ.

ಅಣ್ಣನ ಮಗನ ತೊಟ್ಟಿಲು ಸಮಾರಂಭಕ್ಕೆ ಧ್ರುವ ಬೆಳ್ಳಿತೊಟ್ಟಿಲು ಗಿಫ್ಟ್ ಮಾಡಿದರು. ಚಿಕ್ಕಪ್ಪ ಧ್ರುವ ಕಡೆಯಿಂದ ಉಡುಗೊರೆಯಾಗಿ ಸಿಕ್ಕಿರುವ ಲಕ್ಷಾಂತರ ಮೌಲ್ಯದ ಬೆಳ್ಳಿ ತೊಟ್ಟಿಲಲ್ಲಿ ಇವತ್ತು ಚಿರು-ಮೇಘನಾ ಮಗನ ನಾಮಕರಣ ಶಾಸ್ತ್ರ ನೆರವೇರಿದೆ. ಮೇಘನಾ ಜೊತೆಗೆ ಚಿರಂಜೀವಿ ಸರ್ಜಾ ಪೋಷಕರು ಹಾಗೂ ಮೇಘನಾ ಪೋಷಕರು ಪೂಜೆಯಲ್ಲಿ ಪಾಲ್ಗೊಂಡಿದ್ದರು. ಶಾಸ್ತ್ರ- ಸಂಪ್ರದಾಯದಂತೆ ಪೂಜೆ-ಪುನಸ್ಕಾರ ನೆರವೇರಿಸದ ಎರಡು ಕುಟುಂಬ, ರಾಯನ್ ರಾಜ್ ಸರ್ಜಾ' ಎಂದು ಹೆಸರಿಟ್ಟು ಖುಷಿಪಟ್ಟರು. ಅರ್ಜುನ್ ಸರ್ಜಾ ವಿಡಿಯೋ ಕಾಲ್ ಮೂಲಕಲಿಟಲ್ ಪ್ರಿನ್ಸ್ ನೇಮಿಂಗ್ ಸೆರಮನಿ’ ಯನ್ನ ವೀಕ್ಷಿಸಿದರು. ಪನ್ನಗಾಭರಣ ಕುಟುಂಬ, ಪ್ರಜ್ವಲ್ ದೇವರಾಜ್ ಕುಟುಂಬ ಸೇರಿದಂತೆ ಚಿರಂಜೀವಿ ಸರ್ಜಾ ಆಪ್ತ ಸ್ನೇಹಿತರೆಲ್ಲರೂ ಕೂಡ ಸ್ನೇಹಜೀವಿ ಚಿರಂಜೀವಿಯ ಮಗನ ನಾಮಕರಣ ಸಮಾರಂಭದಲ್ಲಿ ಪಾಲ್ಗೊಂಡು ಶುಭ ಹಾರೈಸಿದ್ದಾರೆ.

ಚಿರು ಅಗಲಿಕೆಯ ನಂತರ ಸುಂದರ್ ರಾಜ್ ಹಾಗೂ ಸರ್ಜಾ ಕುಟುಂಬದಲ್ಲಿ ಕತ್ತಲೆ ಕವಿದಿತ್ತು. ಮನೆ ಹಾಗೂ ಮನದ ಸಂತೋಷ-ಸಂಭ್ರಮ ದೂರವಾಗಿತ್ತು. ಯಾವಾಗ ಮರಿ ಚಿರಂಜೀವಿಯ ಆಗಮನವಾಯ್ತೋ, ಆ ಕ್ಷಣದಿಂದಲೇ ಎರಡು ಕುಟುಂಬದಲ್ಲೂ ಬೆಳಕು ಮೂಡಿತ್ತು. ಮರೆಯಾದ ಸಂತೋಷ-ಸಡಗರ ಮರಳಿ ಬಂದಿತ್ತು. ಇದೀಗ ನಾಮಕರಣದಿಂದ ನಯಾ ಕಳೆ ಬಂದಿದೆ. ಕಳೆದ ಹೋದ ಖುಷಿಯ ಕ್ಷಣಗಳನ್ನ ಹೊತ್ತು ಬಂದಿರುವ ಜೂನಿಯರ್ ಸಿಂಬ `ಯುವರಾಜ’ ಎನಿಸಿಕೊಂಡಿದ್ದಾನೆ. ಯುವ ಸಾಮ್ರಾಟನ ಛಾಯೆ ಹೊತ್ತುಬಂದು ಎರಡು ಕುಟುಂಬವನ್ನು ಆನಂದಸಾಗರದಲ್ಲಿ ತೇಲಿಸುತ್ತಿದ್ದಾನೆ.

ಮುದ್ದಿನ ಮಗನ ನಾಮಕರಣದ ನಂತರ ಮಾತನಾಡಿದ ಮೇಘನಾ, ಚಿರು ಅಗಲಿಕೆಯಿಂದ ನೋವಲ್ಲಿದ್ದ ಇಡೀ ನಮ್ಮ ಕುಟುಂಬಕ್ಕೆ ಸ್ವರ್ಗದ ಬಾಗಿಲು ತೆರೆಸಿದ್ದು, ನಮ್ಮ ಮರಿ ಚಿರಂಜೀವಿ. ಅಂದ್ಹಾಗೆ, ನಮ್ಮ ಕಂದಮ್ಮನಿಗೆ ಯುವರಾಜ ಎಂಬ ಹೆಸರಿಡಬೇಕು ಎನ್ನುವುದು ನನ್ನ ಕನಸಾಗಿತ್ತು. ನನ್ನ ಮನದ ಆಸೆಯಂತೆ ನಮ್ಮ ಮುದ್ದು ಮಗನಿಗೆ ಯುವರಾಜನ ಅರ್ಥ ಕೊಡುವ “ರಾಯನ್”‌ ಎಂಬ ಹೆಸರಿಟ್ಟಿದ್ದೇನೆ ಎಂದು ಹೇಳಿಕೊಂಡರು.

ಈ ವೇಳೆ ಮೇಘನಾ ತಂದೆ ಮಾತನಾಡುತ್ತ, ಭಾವುಕರಾದರು. ತಂದೆಯ ಕಣ್ಣಚಲಿ ನೀರು ನೋಡಿ ಮೇಘನಾ ಕೂಡ ದುಃಖಿತರಾದರು. ಇದು ಕಣ್ಣೀರು ಹಾಕುವ ಸಮಯವಲ್ಲ. ಸಂಭ್ರಮಿಸೋಣವೆಂದು ಹೆತ್ತವರಿಗೆ ಹೇಳುತ್ತಾ ಮಗನ ನಾಮಕರಣದ ಕ್ಷಣಗಳನ್ನು ಸಂಭ್ರಮಿಸಿದರು. ಆಕ್ಷನ್‌ ಪ್ರಿನ್ಸ್‌ ಧ್ರುವ ಮಾತನಾಡಿ, ಅಣ್ಣನ ಮಗ ರಾಯನ್‌ ಮೇಲೆ ಮೇಲೆ ನಿಮ್ಮ ಆಶೀರ್ವಾದ ಇರಲಿ ಎಂದರು. ಪ್ರೇರಣಾ ಸರ್ಜಾ “ರಾಯನ್‌” ನಗುವಿನಲ್ಲಿ ನಾವು ಚಿರಂಜೀವಿ ಸರ್ಜಾರನ್ನ ಕಾಣುತ್ತಿದ್ದೇವೆ ಎಂದರು. ಹೀಗೆ ಎರಡು ಫ್ಯಾಮಿಲಿಯವರು ರಾಯನ್ ರಾಜ್ ಸರ್ಜಾ’ ನಾಮಕರಣವನ್ನ ಖುಷಿಖುಷಿಯಾಗಿ ಸೆಲಬ್ರೇಟ್ ಮಾಡಿದರು.

ವಿಶಾಲಾಕ್ಷಿ, ಎಂಟರ್‌ಟೈನ್ಮೆಂಟ್‌ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಕಿಚ್ಚನ ಮೇಲಿನ ಪ್ರೀತಿಗೆ ಕೋಣ ಬಲಿ! ಬರ್ತ್‌ ಡೇ ನೆಪದಲ್ಲಿ ಮೂಕ ಪ್ರಾಣಿ ಬಲಿ ಕೊಟ್ಟ ಸುದೀಪ್‌ ಫ್ಯಾನ್ಸ್‌ !! ಎಲ್ಲೆಡೆ ವಿರೋಧ

ಅಭಿಮಾನಿಗಳು ತಮ್ಮ ಹೀರೋಗಳನ್ನು ಆರಾಧಿಸುವುದು ತಪ್ಪಲ್ಲ. ಹಾಲಿನ ಅಭಿಷೇಕ, ಹೂವಿನ ಅಲಂಕಾರ ಇತ್ಯಾದಿ ವಿಶೇಷ ಪೂಜೆಗಳನ್ನು ಮಾಡಲಿ. ಆದರೆ, ಹುಟ್ಟುಹಬ್ಬದ ನೆಪದಲ್ಲಿ ಈ ರೀತಿ ಮೂಕ ಪ್ರಾಣಿಗಳ ಬಲಿ ಕೊಡುವುದು ಅದರಲ್ಲೂ ಸಾರ್ವಜನಿಕವಾಗಿಯೇ ಅದನ್ನು ಚಿತ್ರೀಕರಿಸಿರುವುದು ದೊಡ್ಡ ಅಪರಾಧವಂತೂ ಹೌದು.

ಸಿನಿಮಾ ಅಂದರೆ, ಅದೊಂಥರಾ ಊರ ಹಬ್ಬ. ಅದರಲ್ಲೂ ಅಭಿಮಾನಿಗಳಿಂತೂ ಎಲ್ಲಿಲ್ಲದ ಸಡಗರ. ತಮ್ಮ ಪ್ರೀತಿಯ ನಾಯಕರನ್ನಂತೂ ಆರಾಧಿಸುವ ದೊಡ್ಡ ಅಭಿಮಾನಿಗಳ ವರ್ಗವೇ ಇದೆ. ತಮ್ಮ ನೆಚ್ಚಿನ ಹೀರೋ ಸಿನಿಮಾ ರಿಲೀಸ್‌ ಆಗುತ್ತೆ ಅಂದರೆ ಸಾಕು, ಕಟೌಟ್‌ಗೆ ಹಾಲಿನ ಅಭಿಷೇಕ ಮಾಡಿ, ದೊಡ್ಡ ದೊಡ್ಡ ಹೂವಿನ ಹಾರಗಳ ಅಲಂಕಾರ ಮಾಡಿ ಸಂಭ್ರಮಿಸುವ ಅಭಿಮಾನಿಗಳಿಗೇನೂ ಕೊರತೆ ಇಲ್ಲ. ಇನ್ನು, ಸ್ಟಾರ್‌ ನಟರ ಹುಟ್ಟುಹಬ್ಬ ಬಂದರಂತೂ ಅಭಿಮಾನಿಗಳ ಖುಷಿಗೆ ಪಾರವೇ ಇರೋದಿಲ್ಲ. ಅದೆಷ್ಟೋ ಅಭಿಮಾನಿಗಳು ತಾವು ಇದ್ದಲ್ಲೇ ತಮ್ಮ ಸ್ಟಾರ್‌ ನಟರುಗಳ ಹುಟ್ಟುಹಬ್ಬವನ್ನು ಆಚರಿಸಿ ಸಂಭ್ರಮಿಸುವುದು ವಾಡಿಕೆ. ಇದು ತಲತಲಾಂತರದಿಂದಲೂ ಬಂದಂತಹ ಪದ್ಧತಿ. ಈಗ ಹೊಸ ಸುದ್ದಿ ಅಂದರೆ, ಕಿಚ್ಚ ಸುದೀಪ್‌ ಅವರ ಬಳ್ಳಾರಿಯ ಸಂಡೂರು ಸಮೀಪದ ಬಂಡ್ರಿ ಗ್ರಾಮದ ಅಭಿಮಾನಿಗಳು ಸುದೀಪ್‌ ಅವರ ಹುಟ್ಟುಹಬ್ಬಕ್ಕೆ ಕೋಣ ಬಲಿ ನೀಡಿ ಅತಿರೇಕ ಮೆರೆದಿದ್ದಾರೆ. ಅಷ್ಟೇ ಅಲ್ಲ, ಸುದೀಪ್‌ ಅವರ ಪೋಸ್ಟರ್‌ ಮುಂದೆಯೇ ಕೋಣನ ಬಲಿ ನೀಡಿರುವ ವಿಡಿಯೊ ಕೂಡ ಮಾಡಲಾಗಿದೆ. ಆದು ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿದೆ. ಮೂಲಗಳ ಪ್ರಕಾರ ಅಲ್ಲಿ ಸೇರಿದ್ದ ಸುಮಾರು ಇಪ್ಪತ್ತಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.

ಕಿಚ್ಚ ಸುದೀಪ್‌ ಅವರು ಕೋವಿಡ್ ಇರುವ ಕಾರಣ ಹುಟ್ಟು ಹಬ್ಬವನ್ನು ಸರಳವಾಗಿ ಆಚರಿಸಿಕೊಳ್ಳುತ್ತಿದ್ದೇನೆ. ಯಾರೂ ಕೂಡ ಗುಂಪು ಸೇರಿ ಆಚರಿಸಬೇಡಿ. ತಾವು ಇದ್ದಲ್ಲೇ ಶುಭಾಶಯ ತಿಳಿಸಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದ್ದರು. ಆದರೆ, ಅವರ ಕೆಲವು ಅಭಿಮಾನಿಗಳು ಅಭಿಮಾನವನ್ನು ಅತಿರೇಕಗೊಳಿಸಿದ್ದಾರೆ.
ಸುದೀಪ್ ಅಭಿಮಾನಿಗಳು ಕೋಣ ಬಲಿ ನೀಡಿ ಹುಟ್ಟುಹಬ್ಬ ಆಚರಿಸಿದ್ದಕ್ಕೆ ಸಾಮಾಜಿಕ ತಾಣಗಳಲ್ಲಿ ಸಾಕಷ್ಟು ವಿರೋಧ ಕೇಳಿ ಬರುತ್ತಿದೆ. ಕೋಣ ಬಲಿ ನೀಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವುದರಿಂದ ಈ ಕೃತ್ಯ ಎಸಗಿದವರ ಮೇಲೆ ದೂರು ನೀಡಬೇಕು ಎಂಬ ಮಾತುಗಳು ಕೇಳಿಬರುತ್ತಿವೆ. ಈ ಹಿಂದೆಯೂ ಸಹ ಸುದೀಪ್ ಹಾಗೂ ಶಿವರಾಜ್ ಕುಮಾರ್ ಅವರ “ದಿ ವಿಲನ್” ಚಿತ್ರದ ಸಕ್ಸಸ್‌ಗೆ ಹಾರೈಸಿ ಕೋಣ ಬಲಿ ಕೊಡಲಾಗಿತ್ತು.

ಆಗ ಕೂಡ ಎಲ್ಲೆಡೆಯಿಂದಲೂ ವಿರೋಧ ವ್ಯಕ್ತವಾಗಿತ್ತು. ಅದೇನೆ ಇರಲಿ, ಅಭಿಮಾನಿಗಳು ತಮ್ಮ ಹೀರೋಗಳನ್ನು ಆರಾಧಿಸುವುದು ತಪ್ಪಲ್ಲ. ಹಾಲಿನ ಅಭಿಷೇಕ, ಹೂವಿನ ಅಲಂಕಾರ ಇತ್ಯಾದಿ ವಿಶೇಷ ಪೂಜೆಗಳನ್ನು ಮಾಡಲಿ. ಆದರೆ, ಹುಟ್ಟುಹಬ್ಬದ ನೆಪದಲ್ಲಿ ಈ ರೀತಿ ಮೂಕ ಪ್ರಾಣಿಗಳ ಬಲಿ ಕೊಡುವುದು ಅದರಲ್ಲೂ ಸಾರ್ವಜನಿಕವಾಗಿಯೇ ಅದನ್ನು ಚಿತ್ರೀಕರಿಸಿರುವುದು ದೊಡ್ಡ ಅಪರಾಧವಂತೂ ಹೌದು. ಸದ್ಯ, ಆ ಘಟನೆಗೆ ಖಂಡನೆ ಆಗುತ್ತಿದೆ. ಇದು ಎಷ್ಟರ ಮಟ್ಟಿಗೆ ಸರಿ ಎಂಬ ಪ್ರಶ್ನೆಗಳು ಕೇಳಿಬರುತ್ತಿವೆ. ಸ್ಟಾರ್‌ಗಳು ತಮ್ಮ ಅಭಿಮಾನಿಗಳಿಗೆ ಈ ರೀತಿಯ ಆಚರಣೆ ಬೇಡ ಎಂಬ ಮನವಿ ಮಾಡಿದ್ದರೂ ಕೂಡ ಪದೇ ಪದೇ ಇಂತಹ ತಪ್ಪುಗಳು ಆಗುತ್ತಲೇ ಇವೆ. ಇಂತಹ ತಪ್ಪು ತಿದ್ದಿಕೊಳ್ಳುವುದು ಯಾವಾಗ ಅನ್ನುವುದೇ ಯಕ್ಷ ಪ್ರಶ್ನೆ.

Categories
ಸಿನಿ ಸುದ್ದಿ

ಜೂನಿಯರ್ ಚಿರು ನೇಮಿಂಗ್ ಸೆರಮನಿ; ಮರಿ ಯುವಸಾಮ್ರಾಟನ ನಾಮಕರಣಕ್ಕೆ ಸಕಲ ಸಿದ್ದತೆ !

ಸರ್ಜಾ ಕುಟುಂಬದ ಕುಡಿ, ಯುವಸಾಮ್ರಾಟ ದಿವಗಂತ ಚಿರಂಜೀವಿ ಸರ್ಜಾರ ಪುತ್ರ, ಮೇಘನಾರ ಮುದ್ದಿನ ಮಗನ ನಾಮಕರಣಕ್ಕೆ ಸಕಲ ಸಿದ್ದತೆ ನಡೆಯುತ್ತಿದೆ. ಸರ್ಜಾ ಕುಟುಂಬದಲ್ಲಿ ಹಾಗೂ ಮೇಘನಾ ಮನೆಯಲ್ಲಿ ಸಂಭ್ರಮ-ಸಡಗರ ಮನೆಮಾಡಿದೆ. ವರ್ಷಗಳು ಕಳೆದ ಮೇಲೆ ಶುಭಕಾರ್ಯ ನಡೆಯುತ್ತಿದ್ದು, ಸೂತಕದ ಛಾಯೆ ಸರಿದು ಸಂತೋಷದ ದಿವ್ಯಕ್ಷಣಗಳು ಮರುಕಳಿಸುತ್ತಿವೆ. ನಾಳೆ ದಿವ್ಯಮುಹೂರ್ತದಲ್ಲಿ ಜೂನಿಯರ್ ಚಿರು ನೇಮಿಂಗ್ ಸೆರಮನಿ ಅದ್ಧೂರಿಯಾಗಿಯೇ ನಡೆಯಲಿದೆ.

ಇಲ್ಲಿವರೆಗೂ ಜೂನಿಯರ್ ಚಿರು, ಜೂನಿಯರ್ ಸಿಂಬ, ಚಿಂಟು, ಬರ್ಫಿ, ಮರಿ ಸಿಂಗ. ಪಾಪಕುಟ್ಟಿ, ಹೀಗೆ ವೆರೈಟಿ ಪೆಟ್ ನೇಮ್‌ಗಳಿಂದ ಕರೆಯುತ್ತಿದ್ದರು. ನಾಳೆಯಿಂದ ಈ ಪೆಟ್ ನೇಮ್ ಜೊತೆ ರಿಯಲ್ ನೇಮ್ ಸೇರಿಕೊಳ್ತಿದೆ.
ಚಿರು-ಮೇಘನಾರ ಮುದ್ದಿನ ಮಗನಿಗೆ ಏನೆಂದು ಹೆಸರಿಡಬಹುದು ಎನ್ನುವ ಕಾತುರಕ್ಕೆ ಬಿಗ್ ಬ್ರೇಕ್ ಬೀಳಲಿದೆ.

ಮರಿ ಯುವಸಾಮ್ರಾಟ್ ಚಿರುಗೆ ಹತ್ತು ತಿಂಗಳು ತುಂಬಿದೆ. ಮೇಘನಾ ಮಡಲಲ್ಲಿ ಆಡುತ್ತಾ, ಮಲಗುತ್ತಾ, ನಗುತ್ತಾ, ಅಳುತ್ತಾ, ಕುಣಿಯುತ್ತಾ
ಅಮ್ಮನಿಗೆ ಸಂತೋಷ ನೀಡುತ್ತಿರುವ ಮರಿ ಸಿಂಬ, ಅಮ್ಮನ‌ ಅಜ್ಜ ಅಜ್ಜಿಯ ಮನೆಯಲ್ಲಿ ಬೆಳೆದು ದೊಡ್ಡವನಾಗ್ತಿದ್ದಾನೆ. ಸರ್ಜಾ ಕುಟುಂಬದಲ್ಲಿ ಬೆಳಕು ಮೂಡಿಸಿದ್ದಾನೆ.

ಇಂತಹ ಮುದ್ದುಮಗನ ನಾಮಕರಣಕ್ಕೆ ಎರಡು ಕುಟುಂಬ ಸಕಲ ತಯ್ಯಾರಿ ಮಾಡಿಕೊಂಡಿದೆ. ಕುಟುಂಬಸ್ಥರು ಆಪ್ತರ ಸಮ್ಮುಖದಲ್ಲಿ ನೇಮಿಂಗ್ ಸೆರಮನಿ ನಡೆಯಲಿದೆ. ಈ‌ ವಿಚಾರವನ್ನ ಮೇಘನಾ, ಧ್ರುವ, ಅರ್ಜುನ್ ಸರ್ಜಾ ಸೇರಿದಂತೆ ಎಲ್ಲರೂ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇತ್ತ ಫ್ಯಾನ್ಸ್ ಫುಲ್ ಎಕ್ಸೈಟ್ ಆಗಿದ್ದಾರೆ. ಹೇಗಿರಲಿದೆ? ಏನಿರಲಿದೆ ಸರ್ಜಾ ಕುಟುಂಬ ಕುಡಿಯ ಹೆಸರು ವೇಯ್ಟ್ ಅಂಡ್ ಸೀ

ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ವಿಕ್ರಾಂತ್ ರೋಣ ಫಸ್ಟ್ ಗ್ಲಿಂಪ್ಸ್: ದಿ ಡೆಡ್ ಮಾನ್ಸ್ ಆಂಥಮ್’ನಲ್ಲಿ ‌ಕಿಚ್ಚನ ಸಖತ್‌ ಖದರ್!

ಕಿಚ್ಚ ಸುದೀಪ್ ನಟಿಸಿರುವ “ವಿಕ್ರಾಂತ್ ರೋಣ”‌ ಚಿತ್ರ ಕೋವಿಡ್ ಹಾವಳಿ ಕಡಿಮೆಯಾದ ನಂತರ ಶುರುವಾದ ಮೊದಲ ಮೆಗಾ-ಬಜೆಟ್‌ ಸಿನಿಮಾ. ಆರಂಭದಿಂದಲೂ ಜೋರು ಸುದ್ದಿ ಮಾಡಿಕೊಂಡು ಬರುತ್ತಿದ್ದ “ವಿಕ್ರಾಂತ್‌ ರೋಣ” ಈಗ ಮತ್ತೊಂದು ದೊಡ್ಡ ಕುತೂಹಲ ಮೂಡಿಸಿದೆ. ಹೌದು, ಸುದೀಪ್‌ ಅವರ ಹುಟ್ಟು ಹಬ್ಬಕ್ಕೆ ಚಿತ್ರ ತಂಡವು ಅತ್ಯಾಕರ್ಷಕ ಎನಿಸುವ ಫಸ್ಟ್‌ಲುಕ್‌ ಬಿಡುಗಡೆ ಮಾಡಿದೆ. ಫಸ್ಟ್‌ ಲುಕ್‌ ನೋಡಿದವರಿಗೆ ಸುದೀಪ್‌ ಅವರ ಮಾಸ್‌ ಫೀಲ್‌ ಇಷ್ಟವಾಗದೇ ಇರದು. ರೈನ್‌ ಕೋಟು, ಹ್ಯಾಟು, ಕೈಯಲ್ಲೊಂದು ಲೋಡೆಡ್‌ ಗನ್ನು ಹಿಡಿದಿರುವ ಫೋಟೋ ಸಖತ್‌ ಮೆಚ್ಚುಗೆ ಪಡೆಯುತ್ತಿದೆ.


‘ದಿ ಡೆಡ್ ಮಾನ್ಸ್ ಆಂಥಮ್’, ನಿರೂಪಕನ ಧ್ವನಿಯನ್ನು ಹಿಂಬಾಲಿಸುತ್ತ ಕಗ್ಗತ್ತಲೆಯ ಲೋಕದ ಒಡೆಯ ಸುದೀಪ್ ಅವರು, ಶತ್ರುಗಳಿಗೆ ಭಯ ಹುಟ್ಟಿಸುವ ಸನ್ನಿವೇಷದೊಂದಿಗೆ ಶುರುವಾಗುತ್ತದೆ. ಗಮನ ಸೆಳೆಯುವ ದೃಶ್ಯಗಳು, ವಿಸ್ಮಯಗೊಳಿಸುವ ಹಿನ್ನಲೆ ಸಂಗೀತ, ಸುದೀಪ್ ರವರ ಖದರ್‌ಗೆ ಪೂರಕವಾಗಿವೆ. ಈ ಎಲ್ಲಾ ಅಂಶಗಳಿಂದಾಗಿ, ಸೂಕ್ತ ಶೀರ್ಷಿಕೆಯೊಂದಿಗೆ ಅವರ ಹುಟ್ಟು ಹಬ್ಬದಂದು ರಿಲೀಸ್ ಆಗಿರುವ “ದಿ ಡೆಡ್ ಮಾನ್ಸ್ ಆಂಥಮ್” ವೀಕ್ಷಕರಿಗೆ ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.

“ದಿ ಡೆಡ್ ಮಾನ್ಸ್ ಆಂಥಮ್” ಸುದೀಪ್ ಅವರ ಹುಟ್ಟು ಹಬ್ಬದ ದಿನ ರಿಲೀಸ್ ಆಗುತ್ತಿರುವುದು ನನಗೆ ಬಹಳ ಖುಷಿಯಾಗಿದೆ. “ವಿಕ್ರಾಂತ್ ರೋಣ” ಪಾತ್ರದ ನಿಗೂಢತೆಯನ್ನು ಫಸ್ಟ್ ಗ್ಲಿಂಪ್ಸ್ ಅದ್ಭುತವಾಗಿ ಸೆರೆ ಹಿಡಿದಿದೆ. ಚಿತ್ರೀಕರಣದ ಸಮಯದಲ್ಲೇ ನನಗೆ ಇದರ ಮೇಲೆ ಅಪಾರ ನಿರೀಕ್ಷೆ ಇತ್ತು. ಆದರೆ, ಸುದೀಪ್ ಅವರು ಈ ಪಾತ್ರವನ್ನು ಸಾಕಾರಗೊಳಿಸುತ್ತಿರುವುದು, ನನ್ನ ನಿರೀಕ್ಷಣೆಯನ್ನು ಇನ್ನೂ ಹೆಚ್ಚಾಗಿಸಿದೆ. ಅವರಿಗೆ ಹುಟ್ಟುಹಬ್ಬದ ಶುಭಾಶಯಗಳುʼ ಎಂದು ನಿರ್ದೇಶಕ ನಿರ್ದೇಶಕ ಅನೂಪ್ ಭಂಡಾರಿ ಹೇಳಿದ್ದಾರೆ.

ಇನ್ನು, ನಿರ್ಮಾಪಕರಾದ ಜಾಕ್ ಮಂಜುನಾಥ್ ರವರು, “ಸುದೀಪ್ ರವರಿಗೆ ಹುಟ್ಟು ಹಬ್ಬದ ಶುಭಾಶಯಗಳನ್ನು, “ವಿಕ್ರಾಂತ್ ರೋಣ” ಚಿತ್ರದ ಫಸ್ಟ್ ಗ್ಲಿಂಪ್ಸ್ ನೊಂದಿಗೆ ವ್ಯಕ್ತ ಪಡಿಸುತ್ತಿದ್ದೇವೆ. ಎಲ್ಲರ ಕೈ ಕಟ್ಟುವಂತಹ ಸಂದರ್ಭದಲ್ಲಿ ನಾವು ಇಷ್ಟು ಸಕಾರಾತ್ಮಕವಾಗಿ ಮುನ್ನಡೆಯುತ್ತಿರುವುದೇ ಸಂತೋಷದ ವಿಷಯ. ಅವರ ಹುರುಪು, ಉತ್ಸಾಹ ಮತ್ತು ಸಿನಿಮಾ ಮಾಡುವ ಛಲಕ್ಕೆ ಯಾವುದೇ ಸಮಯದ ಪರೀಕ್ಷೆಯನ್ನು ತಡೆಯುವ ಶಕ್ತಿಯಿದೆ. ಇದೇ “ವಿಕ್ರಾಂತ್ ರೋಣ” ಚಿತ್ರವನ್ನು ವಿಶೇಷವಾಗಿಸುತ್ತದೆ,” ಎಂದಿದ್ದಾರೆ ಜಾಕ್‌ ಮಂಜು.

ವಿಕ್ರಾಂತ್ ರೋಣ, ಒಂದು ಬಹುಭಾಷಾ ಆಕ್ಷನ್ ಅಡ್ವೆಂಚರ್ ಚಿತ್ರವಾಗಿದ್ದು, 55 ದೇಶಗಳಲ್ಲಿ, 14 ಭಾಷೆಗಳಲ್ಲಿ 3-D ಯಲ್ಲಿ ಬಿಡುಗಡೆಯಾಗಲಿದೆ. ಅನೂಪ್ ಭಂಡಾರಿ ನಿರ್ದೇಶನದ ಚಿತ್ರಕ್ಕೆ ಜಾಕ್ ಮಂಜುನಾಥ್ ಹಾಗು ಶಾಲಿನಿ ಮಂಜುನಾಥ್ ನಿರ್ಮಾಪಕರು. ಅಲಂಕಾರ್ ಪಾಂಡಿಯನ್ ಸಹ ನಿರ್ಮಾಪಕರು. ಅಜನೀಶ್ ಲೋಕನಾಥ್ ಹಿನ್ನಲೆ ಸಂಗೀತ ನೀಡಿದ್ದಾರೆ. ಶಿವಕುಮಾರ್‌ ಅವರ ಕಲಾ ನಿರ್ದೇಶನ ವಿಲಿಯಮ್ ಡೇವಿಡ್ ಕ್ಯಾಮೆರಾ ಕೆಲಸ ಚಿತ್ರದಲ್ಲಿದೆ. ಸುದೀಪ್‌ ಅವರ ಈ ಚಿತ್ರದಲ್ಲಿ ನಿರೂಪ್ ಭಂಡಾರಿ, ನೀತಾ ಅಶೋಕ್, ಜ್ಯಾಕಲೀನ್ ಫರ್ನಾಂಡೀಸ್ ಸೇರಿದಂತೆ ಹಲವರು ಇದ್ದಾರೆ.

Categories
ಸಿನಿ ಸುದ್ದಿ

ಇದು ಕಣ್ರೀ ಬರ್ತ್ ಡೇ ಗಿಫ್ಟ್ ಅಂದ್ರೆ; ಅಭಿನಯ ಚಕ್ರವರ್ತಿಗೆ ಚಕ್ರವರ್ತಿ ಚಂದ್ರಚೂಡ್ ಮರೆಯಲಾಗದ ಉಡುಗೊರೆ !

ಬಿಗ್ ಬಾಸ್ ಮನೆಯಲ್ಲಿದ್ದಾಗ ಕಿಚ್ಚನಿಂದ ಸ್ಪೆಷಲ್ ಕ್ಲಾಸ್ ಪಡೆಯುತ್ತಿದ್ದ ಡಿ.ಜೆ. ಚಕ್ರವರ್ತಿ ಚಂದ್ರಚೂಡ್ ಇವತ್ತು ಬಾದ್ ಷಾ ಬರ್ತ್ ಡೇಗೆ ಸ್ಪೆಷಲ್ ಸಾಂಗ್ ನ ಕಾಣಿಕೆಯಾಗಿ ಕೊಟ್ಟಿದ್ದಾರೆ. ಅಭಿನಯ ಚಕ್ರವರ್ತಿಗೆ ಚಕ್ರವರ್ತಿಯ ಉಡುಗೊರೆ ಬಗ್ಗೆ ಮಾತನಾಡಲೆಬೇಕು. ಅದಕ್ಕೂ ಮುನ್ನ ಬರ್ತ್ ಡೇ ಸಂಭ್ರಮ ನೋಡೋಣ

1971 ಸೆಪ್ಟೆಂಬರ್ 2 ರಂದು ಕಿಚ್ಚ ಭೂಮಿಗೆ ಬಂದಾಗ ಬರೀ ಕುಟುಂಬದವರು ಮಾತ್ರ ಸಂಭ್ರಮಿಸಿದ್ದರು.ಆದರೆ ಇವತ್ತು ಕೋಟ್ಯಾಂತರ ಮಂದಿ ಮಾಣಿಕ್ಯನ ಬರ್ತ್ ಡೇನಾ ಹಬ್ಬ… ಹಬ್ಬ …ಮಾಡಿ ಸಂತೋಷ ಪಡುತ್ತಾರೆ. ಅದಕ್ಕೆ ಕಾರಣ ಕಿಚ್ಚನ ಸಾಧನೆ ಮಾತ್ರವಲ್ಲ ಹೃದಯಶ್ರೀಮಂತಿಕೆಯಲ್ಲಿ ಕಿಚ್ಚ ಕೋಟಿಗೊಬ್ಬನಾಗಿದ್ದೇ ಇವತ್ತಿನ ಅದ್ದೂರಿ ಹುಟ್ಟುಹಬ್ಬಕ್ಕೆ ಸಾಕ್ಷಿ.

ಹೌದು, ಕೋಟಿಗೊಬ್ಬ ಕಿಚ್ಚ ಸುದೀಪ್ ಇವತ್ತು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 50ನೇ ವಸಂತಕ್ಕೆ ಕಾಲಿಟ್ಟಿರೋ ಮಾಣಿಕ್ಯನಿಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಸುದೀಪಿಯನ್ಸ್ ಸೋಷಿಯಲ್ ಮೀಡಿಯಾದಲ್ಲಿ ಹಬ್ಬ ಮಾಡಿ ಸಂಭ್ರಮಿಸುತ್ತಿದ್ದಾರೆ. ಬಾದ್ ಷಾ ಬರ್ತ್ ಡೇಗೆ ವಿಶೇಷವಾಗಿ ವಿಕ್ರಾಂತ್ ರೋಣ ಚಿತ್ರತಂಡ ‘ಡೆಡ್ ಮ್ಯಾನ್ಸ್ ಆಂಥಮ್’ ಸಾಂಗ್ ರಿಲೀಸ್ ಮಾಡಿದೆ. ಕೈಗೆ ಕಬ್ಬಿಣದ ಸರಪಳಿ ಸುತ್ತಿಕೊಂಡು, ಮಚ್ಚೆಳೆಯೋ ಸೀನ್ ಜೊತೆಗೆ ಧಗಧಗಿಸೋ ಮನೆಗೆ ಎಂಟ್ರಿಕೊಟ್ಟು ವಿಕ್ರಾಂತ್ ರೋಣ ಬ್ಯಾಂಗ್ ಮಾಡೋದನ್ನ ಕಂಡು ಫ್ಯಾನ್ಸ್ ಥ್ರಿಲ್ಲಾಗಿದ್ದಾರೆ.

ಸುದೀಪ್ ಹುಟ್ಟುಹಬ್ಬದಂದು ಸುದೀಪಿಯನ್ಸ್ ಹೃದಯ ಗೆಲ್ಲುವಲ್ಲಿ ಚಕ್ರವರ್ತಿ ಚಂದ್ರಚೂಡ್ ಯಶಸ್ವಿಯಾಗಿದ್ದಾರೆ. ಸುದೀಪಿಯನ್ಸ್ ಹೆಸರಲ್ಲೇ ಆಲ್ಬಂ ಸಾಂಗ್ ನ ರಿಲೀಸ್ ಮಾಡುವ ಮೂಲಕ ಮಾಣಿಕ್ಯನ ಗೋಲ್ಡನ್ ಜ್ಯೂಬಿಲಿ ಸಂಭ್ರಮಕ್ಕೆ ಕಳೆತಂದಿದ್ದಾರೆ. ಕಿಚ್ಚನ ಹೆತ್ತವರು ಮಾತ್ರವಲ್ಲ ಕೋಟ್ಯಾಂತರ ಭಕ್ತರು ಉಘೇ ಉಘೇ ಎನ್ನುವಂತಹ ಹಾಡೊಂದನ್ನ ಕಟ್ಟಿಕೊಟ್ಟಿದ್ದಾರೆ.

ನಿಮ್ಮ ಬರಣಿಗೆಗೆ ನಾನು ಅಭಿಮಾನಿ ಅಂತ ಬಿಗ್ಬಾಸ್ ವೇದಿಕೆಯಲ್ಲೇ ಕಿಚ್ಚ ಅನೌನ್ಸ್ ಮಾಡಿದ್ದರು. ಆ ಅಭಿಮಾನಕ್ಕೆ ಏನಾದರೂ ಕೊಡುಗೆ ಕೊಡಬೇಕು ಅಂತ ನಿರ್ಧರಿಸಿದ್ದ ಚಕ್ರವರ್ತಿ ಚಂದ್ರಚೂಡ್, ಶಾಂತಿನಿವಾಸದ ನಂದಾದೀಪ ಇಡೀ ಕರುನಾಡಿಗೆ ಬೆಳಕಾಗಿದ್ದರ ಬಗ್ಗೆ, ಕಲಿಯುಗದ ಕರ್ಣನಾಗಿ ಮಿನುಗುತ್ತಿರುವ
ಬಗ್ಗೆ ಪದಗಳನ್ನ ಪೋಣಿಸಿ ಅಕ್ಷರಗಳ ಹೂಮಾಲೆಯನ್ನ ಅರ್ಪಿಸಿದ್ದಾರೆ.

ಎಂಥಾ ಮಗನ ಹೆತ್ತೀರಿ ಸಂಜೀವಪ್ಪ. ಕರುನಾಡಿಗೆ ಸಂಜೀವಿನಿ ಈ ಜೀವ ನೋಡ್ರಪ್ಪ .. ಭೂಮಿ ತೂಕವನ್ನೇ ಹೋಲುವ ಚಕ್ರವರ್ತಿಯವರ ಸಾಹಿತ್ಯಕ್ಕೆ, ವೀರ್ ಸಮರ್ಥ್ ರಾಗ ಸಂಯೋಜನೆ ಮಾಡಿದ್ದಾರೆ. ಅಶ್ವಿನ್ ಶರ್ಮಾ ಕಂಠದಾನ ಮಾಡಿದ್ದಾರೆ. ಅಶ್ವಿನಿ ರೆಕಾರ್ಡಿಂಗ್ ಕಂಪೆನಿ ಕಡೆಯಿಂದ ‘ ಸುದೀಪಿಯನ್ಸ್’ ಆಲ್ಬಂ ಸಾಂಗ್ ಹೊರಬಂದಿದೆ. ಕಿಚ್ಚನ ಭಕ್ತರ ಕಾಲರ್ ಪಟ್ಟಿ ಎಗರಿಸುವಂತೆ ಮಾಡಿದೆ. ಯೂಟ್ಯೂಬ್ ಕೂಡ ಖುಷಿಪಟ್ಟಿದೆ. ಲೈಕ್ಸ್, ಕಾಮೆಂಟ್ ಗಳ ಮೂಲಕ ಶೇಕ್ ಆಗೋದಷ್ಟೇ ಬಾಕಿಯಿದೆ. ಆಗುತ್ತೆ ನೋ ಡೌಟ್ ಅಬೌಟ್ ಇಟ್ .

ವಿಶಾಲಾಕ್ಷಿ, ಎಂಟರ್ ಟೈನ್ಮೆಂಟ್ ಬ್ಯೂರೋ ಸಿನಿಲಹರಿ

error: Content is protected !!