ಎವರ್ ಗ್ರೀನ್ ಹೀರೋ ಹುಟ್ಟು ಹಬ್ಬ; ವಿಜಯ್ ಸಂಕೇಶ್ವರ್ ಬಯೋಪಿಕ್‌ನಲ್ಲಿ ಅನಂತ್‌ನಾಗ್‌ ಎಂಟ್ರಿ!

ಹಿರಿಯ ನಟ ಅನಂತ್‌ನಾಗ್‌ ಅವರ ಹುಟ್ಟುಹಬ್ಬದಂದು‌ “ವಿಜಯಾನಂದ” ಚಿತ್ರ ತಂಡ ಫಸ್ಟ್ ಲುಕ್‌ ರಿಲೀಸ್‌ ಮಾಡಿದೆ. ಡಾ. ವಿಜಯ್ ಸಂಕೇಶ್ವರ್ ಅವರ ಜೀವನಾಧಾರಿತ ಚಿತ್ರದಲ್ಲಿ ಅನಂತ್‌ನಾಗ್‌ ಧಗಧಗಿಸಲಿದ್ದಾರೆ. ಬಿಳಿ ಅಂಗಿ, ಬಿಳಿ ಕಚ್ಚೆ ಪಂಚೆ, ಕರಿಕೋಟು, ತಲೆಗೆ ಬಿಳಿ ರುಮಾಲು, ಕೈಯಲ್ಲೊಂದು ಕೊಡೆ ಹಿಡಿದು ಲುಕ್ ಕೊಟ್ಟಿರುವ ಅವರ ಪೋಸ್ಟರ್ ಮತ್ತು ಟೀಸರ್ ಕೂಡ ಬಿಡುಗಡೆಯಾಗಿದೆ. ವಿಜಯ್ ಸಂಕೇಶ್ವರ್ ಅವರ ತಂದೆ ಬಿ. ಜಿ. ಸಂಕೇಶ್ವರ್ ಅವರ ಪಾತ್ರಕ್ಕೆ ಅನಂತ್ ನಾಗ್ ಬಣ್ಣ ಹಚ್ಚಿದ್ದಾರೆ ಅನ್ನೋದು ವಿಶೇಷ.

ಕನ್ನಡ ಚಿತ್ರರಂಗ ಕಂಡ ಅದ್ಭುತ- ಅಮೋಘ ಹಾಗೂ ಅಪರೂಪದ ನಟ ಅನಂತ್ ನಾಗ್. ‌ಸ್ಯಾಂಡಲ್‌ವುಡ್‌ನ ಚಿರಯುವಕ ಅಂತಾನೇ ಕರೆಸಿಕೊಳ್ಳುವ ಅನಂತ್‌ನಾಗ್‌ ಅವರಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ. 74ನೇ ವಸಂತಕ್ಕೆ ಕಾಲಿಟ್ಟಿರುವ ಚಾರ್ಮಿಂಗ್ ಅಂಡ್ ಎವರ್ ಗ್ರೀನ್ ಹೀರೋ ಅನಂತ್ ನಾಗ್ ಅವರಿಗೆ ಶುಭಾಷಯಗಳ ಮಹಾಪೂರವೇ ಹರಿದು ಬರುತ್ತಿದೆ. ಸೆಲಬ್ರಿಟಿಗಳು ಮಾತ್ರವಲ್ಲ, ಅಭಿಮಾನಿಗಳು ಕೂಡ ಸೋಷಿಯಲ್ ಮೀಡಿಯಾ ಮೂಲಕ ವಿಷಸ್ ತಿಳಿಸುತ್ತಿದ್ದಾರೆ. ಇಂಟ್ರೆಸ್ಟಿಂಗ್ ವಿಷಯ ಅಂದರೆ “ವಿಜಯಾನಂದ” ಸಿನಿಮಾ ಟೀಮ್ ಕೊಟ್ಟಿರುವ ಸಪ್ರೈಸ್ ಗಿಫ್ಟ್!

ಹೌದು, ಹಿರಿಯ ನಟ ಅನಂತ್‌ನಾಗ್‌ ಅವರ ಹುಟ್ಟುಹಬ್ಬದಂದು‌ “ವಿಜಯಾನಂದ” ಚಿತ್ರ ತಂಡ ಫಸ್ಟ್ ಲುಕ್‌ನ ಉಡುಗೊರೆಯಾಗಿ ನೀಡಿದೆ. ಈ ಮೂಲಕ ಡಾ. ವಿಜಯ್ ಸಂಕೇಶ್ವರ್ ಅವರ ಜೀವನಾಧಾರಿತ ಚಿತ್ರದಲ್ಲಿ ಹಿರಿಯ ನಟ ಅನಂತ್‌ನಾಗ್‌ ಧಗಧಗಿಸೋದು ಪಕ್ಕಾ‌ ಆಗಿದೆ.‌ ಬಿಳಿ ಅಂಗಿ, ಬಿಳಿ ಕಚ್ಚೆ ಪಂಚೆ, ಕರಿಕೋಟು, ತಲೆಗೆ ಬಿಳಿ ರುಮಾಲು, ಕೈಯಲ್ಲೊಂದು ಕೊಡೆ ಹಿಡಿದುಕೊಂಡು ನಟ ಅನಂತ್‌ನಾಗ್‌ ಲುಕ್ ಕೊಟ್ಟಿರುವ ಪೋಸ್ಟರ್ ರಿಲೀಸ್ ಆಗಿದೆ. ಇವತ್ತೇ ಟೀಸರ್ ಕೂಡ ಬಿಡುಗಡೆಯಾಗಿದೆ. ವಿಜಯ್ ಸಂಕೇಶ್ವರ್ ಅವರ ತಂದೆ ಬಿ. ಜಿ. ಸಂಕೇಶ್ವರ್ ಅವರ ಪಾತ್ರಕ್ಕೆ ಅನಂತ್ ನಾಗ್ ಬಣ್ಣ ಹಚ್ಚಿದ್ದಾರೆ ಅನ್ನೋದು ವಿಶೇಷ.

ಡಾ.‌ವಿಜಯ್ ಸಂಕೇಶ್ವರ್ ಅವರ ಜೀವನಾಧಾರಿತ ‘ವಿಜಯಾನಂದ’ ಚಿತ್ರಕ್ಕೆ ರಿಷಿಕಾ ಶರ್ಮಾ ಆಕ್ಷನ್ ಕಟ್ ಹೇಳಿದ್ದಾರೆ. “ಟ್ರಂಕ್” ಸಿನಿಮಾ ನಿರ್ದೇಶಿಸಿ ಸೈ‌ ಎನಿಸಿಕೊಂಡಿದ್ದ ರಿಷಿಕಾ, ಎರಡನೇ ಚಿತ್ರದಲ್ಲೇ ಮಹಾ ಸಾಹಸಕ್ಕೆ ಕೈ ಹಾಕಿದ್ದಾರೆ. “ಟ್ರಂಕ್” ಹೀರೋ ನಿಹಾಲ್, ಡಾ.‌ವಿಜಯ್ ಸಂಕೇಶ್ವರ್ ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ. ಈ ಮಹಾ ಸಿನಿಮಾಗೆ ಮೇರು ನಟ ಅನಂತ್ ನಾಗ್ ಸೇರ್ಪಡೆಗೊಂಡಿರುವುದು ವಿಶೇಷ ಹಾಗೂ‌ ಹೆಮ್ಮೆಯ ವಿಚಾರ.

ಒಂದೇ ಒಂದು ಟ್ರಕ್‌ನಿಂದ ಶುರುವಾದ ಡಾ. ವಿಜಯ್ ಸಂಕೇಶ್ವರ್ ಅವರ ಜರ್ನಿ ಕೊನೆಗೆ ಭಾರತದ ಅತಿದೊಡ್ಡ ಪ್ಲೀಟ್ ಮಾಲೀಕರಾಗಿ ಬೆಳೆದು ನಿಲ್ಲುವಂತೆ ಮಾಡಿತು. ಪತ್ರಿಕೆ ಮೂಲಕ ದೊಡ್ಡ ಸಾಧನೆ ಮಾಡಿದರು. ಮಾಧ್ಯಮ ರಂಗದಲ್ಲೂ ಒಳ್ಳೆಯ ಹೆಸರು ಮಾಡಿದ್ದಾರೆ. ಬದುಕಲ್ಲಿ ಏಳು ಬೀಳು‌ ಕಂಡು ಮುಗಿಲೆತ್ತರಕ್ಕೆ‌ ಬೆಳೆದು ನಿಂತಿರುವ ಡಾ. ವಿಜಯ್ ಸಂಕೇಶ್ವರ್ ಅವರ ಜೀವನವನ್ನ ರಿಷಿಕಾ ಹಾಗೂ ನಿಹಾಲ್ ಬೆಳ್ಳಿತೆರೆ ಮೇಲೆ ತರಲಿದ್ದಾರೆ. ಇವರ ಮಹಾಸಾಹಸಕ್ಕೆ ವಿಆರ್‌ಎಲ್ ಸಮೂಹ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಹಾಗೂ ಪ್ರೊಮೋಟರ್ ಆದ ಆನಂದ್ ಸಂಕೇಶ್ವರ್ ಕೈ ಜೋಡಿಸಿದ್ದಾರೆ.

ವಿಆರ್‌ಎಲ್ ಫಿಲಂ ಪ್ರೊಡಕ್ಷನ್ ಅಡಿಯಲ್ಲಿ ‘ವಿಜಯಾನಂದ’ ಸಿನಿಮಾ ಅದ್ದೂರಿಯಾಗಿ ಮೂಡಿ ಬರಲಿದೆ. ಅಪ್ಪನ‌ ಸಿನಿಮಾಗೆ ಮಗನೇ ಬಂಡವಾಳ ಹೂಡುತ್ತಿದ್ದು, ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಚಿತ್ರ ತಯ್ಯಾರಿಗೆ ಪ್ಲ್ಯಾನ್ ಆಗಿದೆ. ತೆಲುಗು- ಮಲೆಯಾಳಂ ಚಿತ್ರರಂಗದ ಪ್ರಖ್ಯಾತ ಸಂಗೀತ ನಿರ್ದೇಶಕರಾದ ಗೋಪಿ ಸುಂದರ್ ‘ವಿಜಯಾನಂದ’ ಬಯೋಪಿಕ್ ಚಿತ್ರಕ್ಕೆ ಮ್ಯೂಸಿಕ್ ನೀಡಲಿದ್ದಾರೆ. ಪಾತ್ರವರ್ಗದ ಆಯ್ಕೆ ಜೊತೆ ಜೊತೆಗೆ ಚಿತ್ರೀಕರಣ ನಡೆಯುತ್ತಿದೆ. ಅತೀ ದೊಡ್ಡ ತಾರಾಬಳಗ ಈ‌ ಸಿನಿಮಾದಲ್ಲಿದ್ದು ಶೀಘ್ರದಲ್ಲೇ ಕಾಸ್ಟ್ ಅಂಡ್ ಕ್ರೂ ಬಗ್ಗೆ ಚಿತ್ರತಂಡ ಮಾಹಿತಿ ನೀಡಲಿದ್ದಾರೆ ನಿರ್ದೇಶಕಿ ರಿಷಿಕಾ ಶರ್ಮ.


ಎಂಟರ್ ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Related Posts

error: Content is protected !!