ಚಿರು ಅಗಲಿಕೆಯಿಂದ ನೋವಲ್ಲಿದ್ದ ಇಡೀ ನಮ್ಮ ಕುಟುಂಬಕ್ಕೆ ಸ್ವರ್ಗದ ಬಾಗಿಲು ತೆರೆಸಿದ್ದು ನಮ್ಮ ಮರಿ ಚಿರಂಜೀವಿ. ಕತ್ತಲೆ ಕವಿದಿದ್ದ ಬಾಳಿಗೆ ಬೆಳಕಾಗಿದ್ದಾನೆ. ಅಂದ್ಹಾಗೆ, ನಮ್ಮ ಕಂದಮ್ಮನಿಗೆ “ಯುವರಾಜ” ಅಂತ ಹೆಸರಿಡಬೇಕು ಎನ್ನುವುದ ನನ್ನ ಕನಸಾಗಿತ್ತು. ನನ್ನ ಮನದ ಆಸೆಯಂತೆ ನಮ್ಮ ಮುದ್ದು ಮಗನಿಗೆ ಯುವರಾಜನ ಅರ್ಥಕೊಡುವ “ರಾಯನ್” ಎಂಬ ಹೆಸರಿಡಲಾಗಿದೆ…
ಸ್ಯಾಂಡಲ್‌ವುಡ್‌ನ ಯುವ ಸಾಮ್ರಾಟ ದಿವಂಗತ ಚಿರಂಜೀವಿ ಸರ್ಜಾ ಹಾಗೂ ಮೇಘನರಾಜ್ ಪುತ್ರನಿಗೆ ಏನೆಂದು ಹೆಸರಿಡಬಹುದು ಎನ್ನುವ ಅಭಿಮಾನಿಗಳ ಕೂತೂಹಲಕ್ಕೆ ಶುಕ್ರವಾರ ತೆರೆ ಬಿದ್ದಿದೆ. ಜೂನಿಯರ್ ಚಿರಂಜೀವಿಗೆ ರಾಯನ್ ರಾಜ್ ಸರ್ಜಾ' ಎಂದು ಹೆಸರಿಡಲಾಗಿದೆ. ರಾಯನ್ ಅಂದ್ರೆ ಸಂಸ್ಕೃತದಲ್ಲಿ ಯುವರಾಜ ಎಂದರ್ಥವಂತೆ. ಹೀಗಾಗಿ, ಸುಂದರ್ ರಾಜ್ ಹಾಗೂ ಸರ್ಜಾ ಕುಟುಂಬಸ್ಥರು ಖುಷಿಯಿಂದ ಒಪ್ಪಿಕೊಂಡು
ರಾಯನ್ ರಾಜ್ ಸರ್ಜಾ’ ಹೆಸರನ್ನ ಇಟ್ಟಿದ್ದಾರೆ. ಖಾಸಗಿ ಹೋಟೆಲ್‌ನಲ್ಲಿ ಅದ್ಧೂರಿಯಾಗಿ ಮರಿ ಯುವಸಾಮ್ರಾಟನ ನಾಮಕರಣ ಸಮಾರಂಭ ನೆರವೇರಿದೆ. ಆಕ್ಷನ್ ಪ್ರಿನ್ಸ್ ಅರ್ಜುನ್ ಸರ್ಜಾ ಮುಂದೆ ನಿಂತುಕೊಂಡು ಸಹೋದರನ ಮಗನ ನೇಮಿಂಗ್ ಸೆರಮನಿಯನ್ನ ಸಖತ್ ಗ್ರ್ಯಾಂಡ್ ಆಗಿಯೇ ಮಾಡಿಕೊಟ್ಟಿದ್ದಾರೆ.
ಅಣ್ಣನ ಮಗನ ತೊಟ್ಟಿಲು ಸಮಾರಂಭಕ್ಕೆ ಧ್ರುವ ಬೆಳ್ಳಿತೊಟ್ಟಿಲು ಗಿಫ್ಟ್ ಮಾಡಿದರು. ಚಿಕ್ಕಪ್ಪ ಧ್ರುವ ಕಡೆಯಿಂದ ಉಡುಗೊರೆಯಾಗಿ ಸಿಕ್ಕಿರುವ ಲಕ್ಷಾಂತರ ಮೌಲ್ಯದ ಬೆಳ್ಳಿ ತೊಟ್ಟಿಲಲ್ಲಿ ಇವತ್ತು ಚಿರು-ಮೇಘನಾ ಮಗನ ನಾಮಕರಣ ಶಾಸ್ತ್ರ ನೆರವೇರಿದೆ. ಮೇಘನಾ ಜೊತೆಗೆ ಚಿರಂಜೀವಿ ಸರ್ಜಾ ಪೋಷಕರು ಹಾಗೂ ಮೇಘನಾ ಪೋಷಕರು ಪೂಜೆಯಲ್ಲಿ ಪಾಲ್ಗೊಂಡಿದ್ದರು. ಶಾಸ್ತ್ರ- ಸಂಪ್ರದಾಯದಂತೆ ಪೂಜೆ-ಪುನಸ್ಕಾರ ನೆರವೇರಿಸದ ಎರಡು ಕುಟುಂಬ, ರಾಯನ್ ರಾಜ್ ಸರ್ಜಾ' ಎಂದು ಹೆಸರಿಟ್ಟು ಖುಷಿಪಟ್ಟರು. ಅರ್ಜುನ್ ಸರ್ಜಾ ವಿಡಿಯೋ ಕಾಲ್ ಮೂಲಕ
ಲಿಟಲ್ ಪ್ರಿನ್ಸ್ ನೇಮಿಂಗ್ ಸೆರಮನಿ’ ಯನ್ನ ವೀಕ್ಷಿಸಿದರು. ಪನ್ನಗಾಭರಣ ಕುಟುಂಬ, ಪ್ರಜ್ವಲ್ ದೇವರಾಜ್ ಕುಟುಂಬ ಸೇರಿದಂತೆ ಚಿರಂಜೀವಿ ಸರ್ಜಾ ಆಪ್ತ ಸ್ನೇಹಿತರೆಲ್ಲರೂ ಕೂಡ ಸ್ನೇಹಜೀವಿ ಚಿರಂಜೀವಿಯ ಮಗನ ನಾಮಕರಣ ಸಮಾರಂಭದಲ್ಲಿ ಪಾಲ್ಗೊಂಡು ಶುಭ ಹಾರೈಸಿದ್ದಾರೆ.
ಚಿರು ಅಗಲಿಕೆಯ ನಂತರ ಸುಂದರ್ ರಾಜ್ ಹಾಗೂ ಸರ್ಜಾ ಕುಟುಂಬದಲ್ಲಿ ಕತ್ತಲೆ ಕವಿದಿತ್ತು. ಮನೆ ಹಾಗೂ ಮನದ ಸಂತೋಷ-ಸಂಭ್ರಮ ದೂರವಾಗಿತ್ತು. ಯಾವಾಗ ಮರಿ ಚಿರಂಜೀವಿಯ ಆಗಮನವಾಯ್ತೋ, ಆ ಕ್ಷಣದಿಂದಲೇ ಎರಡು ಕುಟುಂಬದಲ್ಲೂ ಬೆಳಕು ಮೂಡಿತ್ತು. ಮರೆಯಾದ ಸಂತೋಷ-ಸಡಗರ ಮರಳಿ ಬಂದಿತ್ತು. ಇದೀಗ ನಾಮಕರಣದಿಂದ ನಯಾ ಕಳೆ ಬಂದಿದೆ. ಕಳೆದ ಹೋದ ಖುಷಿಯ ಕ್ಷಣಗಳನ್ನ ಹೊತ್ತು ಬಂದಿರುವ ಜೂನಿಯರ್ ಸಿಂಬ `ಯುವರಾಜ’ ಎನಿಸಿಕೊಂಡಿದ್ದಾನೆ. ಯುವ ಸಾಮ್ರಾಟನ ಛಾಯೆ ಹೊತ್ತುಬಂದು ಎರಡು ಕುಟುಂಬವನ್ನು ಆನಂದಸಾಗರದಲ್ಲಿ ತೇಲಿಸುತ್ತಿದ್ದಾನೆ.
ಮುದ್ದಿನ ಮಗನ ನಾಮಕರಣದ ನಂತರ ಮಾತನಾಡಿದ ಮೇಘನಾ, ಚಿರು ಅಗಲಿಕೆಯಿಂದ ನೋವಲ್ಲಿದ್ದ ಇಡೀ ನಮ್ಮ ಕುಟುಂಬಕ್ಕೆ ಸ್ವರ್ಗದ ಬಾಗಿಲು ತೆರೆಸಿದ್ದು, ನಮ್ಮ ಮರಿ ಚಿರಂಜೀವಿ. ಅಂದ್ಹಾಗೆ, ನಮ್ಮ ಕಂದಮ್ಮನಿಗೆ ಯುವರಾಜ ಎಂಬ ಹೆಸರಿಡಬೇಕು ಎನ್ನುವುದು ನನ್ನ ಕನಸಾಗಿತ್ತು. ನನ್ನ ಮನದ ಆಸೆಯಂತೆ ನಮ್ಮ ಮುದ್ದು ಮಗನಿಗೆ ಯುವರಾಜನ ಅರ್ಥ ಕೊಡುವ “ರಾಯನ್” ಎಂಬ ಹೆಸರಿಟ್ಟಿದ್ದೇನೆ ಎಂದು ಹೇಳಿಕೊಂಡರು.
ಈ ವೇಳೆ ಮೇಘನಾ ತಂದೆ ಮಾತನಾಡುತ್ತ, ಭಾವುಕರಾದರು. ತಂದೆಯ ಕಣ್ಣಚಲಿ ನೀರು ನೋಡಿ ಮೇಘನಾ ಕೂಡ ದುಃಖಿತರಾದರು. ಇದು ಕಣ್ಣೀರು ಹಾಕುವ ಸಮಯವಲ್ಲ. ಸಂಭ್ರಮಿಸೋಣವೆಂದು ಹೆತ್ತವರಿಗೆ ಹೇಳುತ್ತಾ ಮಗನ ನಾಮಕರಣದ ಕ್ಷಣಗಳನ್ನು ಸಂಭ್ರಮಿಸಿದರು. ಆಕ್ಷನ್ ಪ್ರಿನ್ಸ್ ಧ್ರುವ ಮಾತನಾಡಿ, ಅಣ್ಣನ ಮಗ ರಾಯನ್ ಮೇಲೆ ಮೇಲೆ ನಿಮ್ಮ ಆಶೀರ್ವಾದ ಇರಲಿ ಎಂದರು. ಪ್ರೇರಣಾ ಸರ್ಜಾ “ರಾಯನ್” ನಗುವಿನಲ್ಲಿ ನಾವು ಚಿರಂಜೀವಿ ಸರ್ಜಾರನ್ನ ಕಾಣುತ್ತಿದ್ದೇವೆ ಎಂದರು. ಹೀಗೆ ಎರಡು ಫ್ಯಾಮಿಲಿಯವರು ರಾಯನ್ ರಾಜ್ ಸರ್ಜಾ’ ನಾಮಕರಣವನ್ನ ಖುಷಿಖುಷಿಯಾಗಿ ಸೆಲಬ್ರೇಟ್ ಮಾಡಿದರು.
ವಿಶಾಲಾಕ್ಷಿ, ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ