Categories
ಸಿನಿ ಸುದ್ದಿ

ದಯಮಾಡಿ ವಿವಾದ ಸೃಷ್ಟಿಸಬೇಡಿ _ ಹೀಗಂತ ʼಪೊಗರುʼ ನಿರ್ದೇಶಕ ಮನವಿ ಮಾಡಿದ್ದೇಕೆ?

ಧ್ರುವ ಸರ್ಜಾ ಅಭಿನಯದ ʼಪೊಗರುʼ ಚಿತ್ರ ರಾಜ್ಯಾದ್ಯಂತ ಅಬ್ಬರ ಎಬ್ಬಿಸಿದೆ. ರಿಲೀಸ್‌ ಆದ ಮೊದಲ ದಿನವೇ ಭಾರೀ ಗಳಿಕೆ ಪಡೆದಿದ್ದು, ಚಿತ್ರ ತಂಡ ಗೆದ್ದ ಖುಷಿಯಲ್ಲಿ ಮುಳುಗಿದೆ. ಈ ನಡುವೆ ಈ ಚಿತ್ರ ವಿವಾದಕ್ಕೆ ಸಿಲುಕಿದೆ. ಅದೇ ಕಾರಣಕ್ಕೆ ನಿರ್ದೇಶಕ ನಂದಕಿಶೋರ್‌ ಕ್ಷಮೆ ಕೋರಿದ್ದಾರೆ. ದಯಮಾಡಿ ವಿವಾದ ಸೃಷ್ಟಿಸಬೇಡಿ ಅಂತ ಜನರಲ್ಲಿ ಮನವಿ ಮಾಡಿದ್ದಾರೆ.


“ನಾವು ಬೇಕೆಂದೇ ಒಂದು ಜನಾಂಗಕ್ಕೆ ಧಕ್ಕೆ ತರುವ ಉದ್ದೇಶದಿಂದ ಸನ್ನಿವೇಶಗಳನ್ನು ಸೃಷ್ಟಿಸಿದ್ದಲ್ಲ. ಇದೊಂದು ಕಾಲ್ಪನಿಕ ಕತೆ. ಅರಿವಿಲ್ಲದೆ ಹೀಗಾಗಿದೆ, ಇದರಿಂದ ಯಾರ ಮನಸ್ಸಿಗಾದರೂ ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆ. ಈ ಸಿನಿಮಾಗೆ ಮೂರು ವರ್ಷ ವ್ಯಯಿಸಿದ್ದೇವೆ. ಕೋವಿಡ್ ನಂತರ ಬಿಡುಗಡೆಯಾಗುತ್ತಿರುವ ದೊಡ್ಡ ಚಿತ್ರವಿದು. ದೊಡ್ಡ ಮನಸ್ಸು ಮಾಡಿ ವಿವಾದ ನಿಲ್ಲಿಸಲು ಪ್ರಾರ್ಥಿಸುತ್ತೇನೆ” ಎಂದಿದ್ದಾರೆ. ಹಾಗಾದ್ರೆ ಆ ವಿವಾದ ಏನು?

ಧ್ರುವ ಸರ್ಜಾ ನಟನೆಯ ಅದ್ಧೂರಿ ‘ಪೊಗರು’ ಚಿತ್ರದಲ್ಲಿ ಬ್ರಾಹ್ಮಣ ಜನಾಂದಗವರನ್ನು ಅವಹೇಳನ ಮಾಡಲಾಗಿದೆ ಎಂದು ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಆರೋಪಿಸಿತ್ತು. ಚಿತ್ರದಲ್ಲಿನ ಅಂತಹ ದೃಶ್ಯಗಳನ್ನು ತೆಗೆಯಬೇಕು ಮತ್ತು ಚಿತ್ರತಂಡ ಕ್ಷಮೆಯಾಚಿಸಬೇಕು ಎಂದು ಮಂಡಳಿ ಆಗ್ರಹಿಸಿತ್ತು. ಇದೀಗ ಚಿತ್ರದ ನಿರ್ದೇಶಕ ನಂದಕಿಶೋರ್‌ ಕ್ಷಮೆಯಾಚಿಸಿದ್ದಾರೆ.
“ಪೊಗರು ಚಿತ್ರದಲ್ಲಿ ಹೋಮ ನಡೆಸುತ್ತಿರುವ ಬ್ರಾಹ್ಮಣ ವ್ಯಕ್ತಿಯ ಹೆಗಲ ಮೇಲೆ ನಾಯಕನಟ ಕಾಲಿಡುತ್ತಾನೆ. ಅಲ್ಲದೆ ಬ್ರಾಹ್ಮಣ ಸಮುದಾಯದ ವ್ಯಕ್ತಿಗಳಾಗಿ ತೋರಿಸಿರುವ ಪಾತ್ರಗಳ ಬಗ್ಗೆ ಹಗುರವಾದ ಸಂಭಾಷಣೆಗಳಿವೆ” ಎಂದು ಬ್ರಾಹ್ಮಣ ಅಭಿವೃದ್ಧಿ ಮಂಡಳಿ ರಾಜ್ಯಾಧ್ಯಕ್ಷ ಸಚ್ಚಿದಾನಂದ ಮೂರ್ತಿ ಪ್ರಸ್ತಾಪಿಸಿತ್ತು. ಈ ಕುರಿತಾಗಿ ಸೋಷಿಯಲ್ ಮೀಡಿಯಾದಲ್ಲೂ ಹತ್ತಾರು ಪೋಸ್ಟ್‌ಗಳು ಹರಿದಾಡಿದ್ದವು. ಚಿತ್ರತಂಡ ಸ್ಪಂದಿಸದಿದ್ದರೆ ರಾಜ್ಯಾದ್ಯಾಂತ ಹೋರಾಟ ನಡೆಸುವುದಾಗಿ ಸಚ್ಚಿದಾನಂದ ಮೂರ್ತಿ ಎಚ್ಚರಿಕೆ ನೀಡಿದ್ದರು.

Categories
ಸಿನಿ ಸುದ್ದಿ

ಹೋಮ ನಡೆಸುವ ಬ್ರಾಹ್ಮಣನ ಹೆಗಲ ಮೇಲೆ ಧ್ರುವ ಸರ್ಜಾ ಕಾಲಿಟ್ಟಿದ್ದು ಸರಿನಾ?

ಧ್ರುವ ಸರ್ಜಾ ನಟನೆಯ ಅದ್ಧೂರಿ ‘ಪೊಗರು’ ಚಿತ್ರದಲ್ಲಿ ಬ್ರಾಹ್ಮಣ ಜನಾಂಗದವರನ್ನು ಅವಹೇಳನ ಮಾಡಲಾಗಿದೆ ಎಂದು ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಆರೋಪಿಸಿತ್ತು. ಚಿತ್ರದಲ್ಲಿನ ಅಂತಹ ದೃಶ್ಯಗಳನ್ನು ತೆಗೆಯಬೇಕು ಮತ್ತು ಚಿತ್ರತಂಡ ಕ್ಷಮೆಯಾಚಿಸಬೇಕು ಎಂದು ಮಂಡಳಿ ಆಗ್ರಹಿಸಿತ್ತು. ಇದೀಗ ಚಿತ್ರದ ನಿರ್ದೇಶಕ ನಂದಕಿಶೋರ್‌ ಕ್ಷಮೆಯಾಚಿಸಿದ್ದಾರೆ.

“ಪೊಗರು ಚಿತ್ರದಲ್ಲಿ ಹೋಮ ನಡೆಸುತ್ತಿರುವ ಬ್ರಾಹ್ಮಣ ವ್ಯಕ್ತಿಯ ಹೆಗಲ ಮೇಲೆ ನಾಯಕನಟ ಕಾಲಿಡುತ್ತಾನೆ. ಅಲ್ಲದೆ ಬ್ರಾಹ್ಮಣ ಸಮುದಾಯದ ವ್ಯಕ್ತಿಗಳಾಗಿ ತೋರಿಸಿರುವ ಪಾತ್ರಗಳ ಬಗ್ಗೆ ಹಗುರವಾದ ಸಂಭಾಷಣೆಗಳಿವೆ” ಎಂದು ಬ್ರಾಹ್ಮಣ ಅಭಿವೃದ್ಧಿ ಮಂಡಳಿ ರಾಜ್ಯಾಧ್ಯಕ್ಷ ಸಚ್ಚಿದಾನಂದ ಮೂರ್ತಿ ಪ್ರಸ್ತಾಪಿಸಿತ್ತು. ಈ ಕುರಿತಾಗಿ ಸೋಷಿಯಲ್ ಮೀಡಿಯಾದಲ್ಲೂ ಹತ್ತಾರು ಪೋಸ್ಟ್‌ಗಳು ಹರಿದಾಡಿದ್ದವು. ಚಿತ್ರತಂಡ ಸ್ಪಂದಿಸದಿದ್ದರೆ ರಾಜ್ಯಾದ್ಯಾಂತ ಹೋರಾಟ ನಡೆಸುವುದಾಗಿ ಸಚ್ಚಿದಾನಂದ ಮೂರ್ತಿ ಎಚ್ಚರಿಕೆ ನೀಡಿದ್ದರು.

ಎಚ್ಚರಿಕೆಗೆ ಮಣಿದ ಚಿತ್ರದ ನಿರ್ದೇಶಕ ನಂದಕಿಶೋರ್‌, “ನಾವು ಬೇಕೆಂದೇ ಒಂದು ಜನಾಂಗಕ್ಕೆ ಧಕ್ಕೆ ತರುವ ಉದ್ದೇಶದಿಂದ ಸನ್ನಿವೇಶಗಳನ್ನು ಸೃಷ್ಟಿಸಿದ್ದಲ್ಲ. ಇದೊಂದು ಕಾಲ್ಪನಿಕ ಕತೆ. ಅರಿವಿಲ್ಲದೆ ಹೀಗಾಗಿದೆ, ಇದರಿಂದ ಯಾರ ಮನಸ್ಸಿಗಾದರೂ ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆ. ಈ ಸಿನಿಮಾಗೆ ಮೂರು ವರ್ಷ ವ್ಯಯಿಸಿದ್ದೇವೆ. ಕೋವಿಡ್ ನಂತರ ಬಿಡುಗಡೆಯಾಗುತ್ತಿರುವ ದೊಡ್ಡ ಚಿತ್ರವಿದು. ದೊಡ್ಡ ಮನಸ್ಸು ಮಾಡಿ ವಿವಾದ ನಿಲ್ಲಿಸಲು ಪ್ರಾರ್ಥಿಸುತ್ತೇನೆ” ಎಂದಿದ್ದಾರೆ.

Categories
ಸಿನಿ ಸುದ್ದಿ

ಮತ್ತೊಂದು ಗಂಡು ಮಗುವಿಗೆ ತಾಯಿಯಾದ ಕರೀನಾ! ಸಂಭ್ರಮದಲ್ಲಿ ಸೈಫ್‌ ಅಲಿ ಖಾನ್ ದಂಪತಿ

ಬಾಲಿವುಡ್ ತಾರಾ ದಂಪತಿ ಸೈಫ್‌ ಅಲಿ ಖಾನ್ ಮತ್ತು ಕರೀನಾ ಕಪೂರ್‌ ಎರಡನೇ ಮಗುವಿನ ಪೋಷಕರಾದ ಸಂಭ್ರಮದಲ್ಲಿದ್ದಾರೆ. ಕರೀನಾ ಇಂದು ಬೆಳಗ್ಗೆ ಗಂಡು ಮಗುವಿಗೆ ಜನ್ಮ ನೀಡಿದ್ದು, ಬಾಲಿವುಡ್‌ನ ಹಲವಾರು ತಾರೆಯರಿಂದ ನಟಿಗೆ ಶುಭಾಶಯಗಳು ಸಂದಿವೆ. 2016ರಲ್ಲಿ ದಂಪತಿಗೆ ತೈಮೂರ್ ಜನಿಸಿದ್ದ. ಕಳೆದೆರೆಡು, ಮೂರು ವರ್ಷಗಳಿಂದ ಕರೀನಾ ಜೊತೆಗಿನ ತೈಮೂರ್ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಹರಿದಾಡಿದ್ದವು. ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದ ಸೈಫ್ – ಕರೀನಾ ಹೊಸ ಮನೆಗೆ ತೆರಳಿದ್ದರು. ಇದೀಗ ದಂಪತಿ ಸಡಗರ ಹೆಚ್ಚಾಗಿದೆ.


ಎರಡನೇ ಮಗುವಿಗೆ ಗರ್ಭವತಿಯಾಗಿದ್ದಾಗಲೇ ನಟಿ ಕರೀನಾ ತಮ್ಮ ಸಿನಿಮಾಗಳ ಬಿಡುವಿಲ್ಲದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ಅಮೀರ್‌ ಖಾನ್‌ ನಟನೆಯ ಹಿಂದಿ ಸಿನಿಮಾ ‘ಲಾಲ್ ಸಿಂಗ್ ಛಡ್ಡಾ’ ಚಿತ್ರೀಕರಣಕ್ಕಾಗಿ ಅವರು ದಿಲ್ಲಿಯಲ್ಲಿದ್ದರು.

ಕೆಲವು ಜಾಹೀರಾತುಗಳಲ್ಲಿ ಕಾಣಿಸಿಕೊಂಡ ನಟಿ ‘ಧರ್ಮಶಾಲಾ’, ‘ತಕ್ತ್‌’ ಸಿನಿಮಾಗಳ ಶೂಟಿಂಗ್‌ ಕೂಡ ಪೂರ್ಣಗೊಳಿಸಿದ್ದಾರೆ. ಇನ್ನು ಸೈಫ್ ಅಲಿ ಖಾನ್ ಅವರು ಆದಿಪುರುಷ್‌, ಭೂತ್ ಪೊಲೀಸ್‌ ಮತ್ತು ಬಂಟಿ ಔರ್ ಬಬ್ಲಿ -2 ಚಿತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ.

Categories
ಟಾಲಿವುಡ್ ಸಿನಿ ಸುದ್ದಿ

ದೃಶ್ಯಂ ಸರಣಿಗೆ ರೆಡಿಯಾದ ವೆಂಕಿ! ಜೀತು ಜೋಸೆಫ್ ನಿರ್ದೇಶನದಲ್ಲೇ ಬರಲಿರುವ ಚಿತ್ರ

ಜೀತು ಜೋಸೆಫ್ ನಿರ್ದೇಶನದಲ್ಲಿ ಮೋಹನ್‌ಲಾಲ್ – ಮೀನಾ ನಟಿಸಿರುವ ‘ದೃಶ್ಯಂ2’ ಮೊನ್ನೆಯಷ್ಟೇ ಅಮೇಜಾನ್ ಪ್ರೈಂನಲ್ಲಿ ಪ್ರೀಮಿಯರ್ ಆಗಿದೆ. ವೀಕ್ಷಕರು ಮತ್ತು ವಿಶ್ಲೇಷಕರು ಚಿತ್ರದ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಈ ಯಶಸ್ಸಿನ ಹಿನ್ನೆಲೆಯಲ್ಲಿ ‘ದೃಶ್ಯಂ2’ ತೆಲುಗು ರೀಮೇಕ್ ಸೆಟ್ಟೇರುತ್ತಿದೆ. ಜೀತು ಜೋಸೆಫ್ ಅವರೇ ನಿರ್ದೇಶಿಸುತ್ತಿರುವ ಚಿತ್ರದಲ್ಲಿ ವೆಂಕಟೇಶ್ ನಟಿಸುತ್ತಿದ್ದಾರೆ. ಮುಂದಿನ ತಿಂಗಳಿನಿಂದ ಚಿತ್ರೀಕರಣ ಆರಂಭವಾಗಲಿದ್ದು, ಉಳಿದ ತಾರಾಬಳಗದ ಆಯ್ಕೆ ಜಾರಿಯಲ್ಲಿದೆ.

ನಿರ್ದೇಶಕ ಜೀತು ಜೋಸೆಫ್ ಇಂದು ತಮ್ಮ ಫೇಸ್‌ಬುಕ್ ಪೇಜ್‌ನಲ್ಲಿ ‘ದೃಶ್ಯಂ2’ ತೆಲುಗು ಅವತರಣಿಕೆಯನ್ನು ಘೋಷಿಸಿದ್ದಾರೆ. ನಟ ವೆಂಕಟೇಶ್ ಮತ್ತಿತರರೊಂದಿಗಿನ ಅವರ ಫೋಟೋ ಜೊತೆಗೆ ಈ ಸುದ್ದಿ ಹೊರ ಬಿದ್ದಿದೆ. ‘ದೃಶ್ಯಂ’ ಮೊದಲ ಸರಣಿಯ ತೆಲುಗು ಅವತರಣಿಕೆ 2014ರಲ್ಲಿ ತೆರೆಕಂಡಿತ್ತು. ಆ ಚಿತ್ರವನ್ನು ಸುಪ್ರಿಯಾ ನಿರ್ದೇಶಿಸಿದ್ದರು. ಅಲ್ಲಿ ವೆಂಕಟೇಶ್ ಜೊತೆ ಮೀನಾ, ನಾದಿಯಾ ನಟಿಸಿದ್ದರು.

ಅಮೇಜಾನ್‌ ಪ್ರೈಮ್‌ನಲ್ಲಿ ಪ್ರೀಮಿಯರ್ ಆಗಿರುವ ‘ದೃಶ್ಯಂ2’ ಮಲಯಾಳಂ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಟ ಮೋಹನ್ ಲಾಲ್ ಅವರು ತಮ್ಮ ಫೇಸ್‌ಬುಕ್‌ ಪೇಜ್‌ನಲ್ಲಿ ಯಶಸ್ಸಿಗೆ ಕಾರಣರಾದ ತಂತ್ರಜ್ಞರು ಹಾಗೂ ವೀಕ್ಷಕರಿಗೆ ಧನ್ಯವಾದ ಅರ್ಪಿಸಿದ್ದಾರೆ. ಸದ್ಯ ‘ದೃಶ್ಯಂ2’ ತೆಲುಗು ಅವತರಣಿಕೆ ಸೆಟ್ಟೇರುತ್ತಿದ್ದು, ಮುಂದಿನ ದಿನಗಳಲ್ಲಿ ಕನ್ನಡ, ತಮಿಳು ಮತ್ತು ಹಿಂದಿಯಲ್ಲೂ ತಯಾರಾಗುವ ಸಾಧ್ಯತೆಗಳಿವೆ. ಕನ್ನಡ ‘ದೃಶ್ಯ’ದಲ್ಲಿ ರವಿಚಂದ್ರನ್ ನಟಿಸಿದ್ದರು. ಸರಣಿಯಲ್ಲೂ ಅವರೇ ಇರುತ್ತಾರೆಯೇ ಎಂದು ಕಾದುನೋಡಬೇಕು.

Categories
ಸಿನಿ ಸುದ್ದಿ

ದಿಗಂತ್ ಹೊಸ ಚಿತ್ರಕ್ಕೆ ಪೂಜೆ – ಮತ್ತೊಂದು ಶಾರ್ಪ್‌ ಸಿನ್ಮಾ ಹಿಂದೆ ಬಂದ ನಿರ್ದೇಶಕ ಗೌಸ್‌ಪೀರ್‌

ಗೌಸ್‌ಪೀರ್‌ ಮತ್ತು ದಿಗಂತ್‌  ಕಾಂಬಿನೇಷನ್‌ನಲ್ಲಿ ಈ ಹಿಂದೆ “ಶಾರ್ಪ್‌ ಶೂಟರ್‌” ಚಿತ್ರ ಬಂದಿತ್ತು. ಫನ್ನಿ ಎಲಿಮೆಂಟ್ಸ್‌ನೊಂದಿಗೆ ನೋಡುಗರನ್ನು ರಂಜಿಸಿತ್ತು. ಅದೇ ಜೋಡಿ ಈಗ ಮೋಡಿ ಮಾಡುವಂತಹ ಸ್ಕ್ರಿಪ್ಟ್‌ನೊಂದಿಗೆ ಬರುತ್ತಿದೆ. ದಿಗಂತ್‌ ಕೂಡ ಗೌಸ್‌ಪೀರ್‌ ಕಥೆ ಕೇಳಿ ಥ್ರಿಲ್‌ ಅಗಿದ್ದು, ಹೊಸ ಬಗೆಯ ಕಥೆಗೆ ಖುಷಿಯಾಗಿದ್ದಾರೆ

ದೂದ್‌ಪೇಡ ಅಂತಾನೇ ಕರೆಸಿಕೊಳ್ಳುವ ನಟ ದಿಗಂತ್‌, ಸದ್ಯಕೀಗ ಫುಲ್‌ ಬಿಝಿ. ಇತ್ತೀಚೆಗಷ್ಟೇ ದಿಗಂತ್‌ “ಮಾರಿಗೋಲ್ಡ್‌” ಚಿತ್ರಕ್ಕೆ ಡಬ್‌ ಮಾಡುವ ಮೂಲಕ ಸಿನಿಮಾ ಕೆಲಸವನ್ನು ಮುಗಿಸಿದ್ದಾರೆ. ಅದರ ಬೆನ್ನ ಹಿಂದೆಯೇ ಅವರ “ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ” ಚಿತ್ರವನ್ನೂ ಮುಗಿಸಿದ್ದಾರೆ. ಈಗ ಹೊಸ ಚಿತ್ರಕ್ಕೂ ಜೈ ಎಂದಿದ್ದಾರೆ. ಹೌದು, ಗೀತ ರಚನೆಕಾರ, ಸಂಭಾಷಣೆಕಾರ ಕಮ್ ನಿರ್ದೇಶಕ‌ ಗೌಸ್‌ಪೀರ್‌ ನಿರ್ದೇಶನದ ಹೊಸ ಚಿತ್ರಕ್ಕೆ ದಿಗಂತ್‌ ಹೀರೋ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಆ ಚಿತ್ರಕ್ಕೆ ಇತ್ತೀಚೆಗೆ ಸ್ಕ್ರಿಪ್ಟ್‌ ಪೂಜೆ ಕೂಡ ನೆರವೇರಿದೆ.

ಜಯನಗರದ ವಿನಾಯಕ ದೇವಾಲಯದಲ್ಲಿ ಚಿತ್ರಕ್ಕೆ ಪೂಜೆ ನಡೆದಿದ್ದು, ಚಿತ್ರಕ್ಕೆ ಅದ್ಧೂರಿ ಚಾಲನೆಯೂ ದೊರೆತಿದೆ. ಈ ಚಿತ್ರಕ್ಕೆ ಇನ್ನೂ ಶೀರ್ಷಿಕೆ ಪಕ್ಕಾ ಆಗಿಲ್ಲ. ಸದ್ಯ ಸ್ಕ್ರಿಪ್ಟ್‌ಗೆ ಚಾಲನೆ ದೊರೆತಿದ್ದು, ಬರವಣಿಗೆಯ ಕೆಲಸಗಳು ಅಂತಿಮ ಹಂತದಲ್ಲಿವೆ. ದಿಗಂತ್‌ ಸದ್ಯಕ್ಕೆ “ಗಾಳಿಪಟ 2” ಚಿತ್ರಕ್ಕಾಗಿ ವಿದೇಶಕ್ಕೆ ಹಾರಿದ್ದಾರೆ. ಆ ಸಿನಿಮಾದ ಚಿತ್ರೀಕರಣ ಮುಗಿಸಿಕೊಂಡು ಬಂದ ಬಳಿಕ ಗೌಸ್‌ಪೀರ್‌ ನಿರ್ದೇಶನದ ಚಿತ್ರೀಕರಣದಲ್ಲಿ ಕಾಣಿಸಿಕೊಳ್ಳಲಿದ್ದಾರೆ.


ಇನ್ನು, ಈ ಚಿತ್ರವನ್ನು ಗೌಸ್‌ಪೀರ್‌ ಗೆಳೆಯರು ಸೇರಿ ನಿರ್ಮಾಣ ಮಾಡುತ್ತಿದ್ದಾರೆ. ಹರಿಸಿರಿ ಎಂಟರ್‌ಟೈನರ್‌ನ ಉಮಾಶಂಕರ್‌ ಎಂ.ಜಿ.(ಆನಂದ್) ಪ್ರಕೃತಿ ಪ್ರೊಡಕ್ಷನ್ಸ್‌ನ ಶರಣಪ್ಪ, ಗೌರಮ್ಮ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ದಿಗಂತ್‌ ಹೀರೋ ಎನ್ನುವುದು ಪಕ್ಕಾ ಆಗಿದೆ. ಇನ್ನುಳಿದಂತೆ ಚಿತ್ರದಲ್ಲಿ ಯಾರೆಲ್ಲಾ ಇರಲಿದ್ದಾರೆ, ಶೀರ್ಷಿಕೆ ಏನು, ಎಲ್ಲೆಲ್ಲಿ ಚಿತ್ರೀಕರಣ ನಡೆಯಲಿದೆ, ತಾಂತ್ರಿಕ ವರ್ಗದಲ್ಲಿ ಯಾರೆಲ್ಲ ಇರುತ್ತಾರೆ ಎನ್ನುವುದಕ್ಕೆ ಇಷ್ಟರಲ್ಲೇ ಮಾಹಿತಿ ಕೊಡುವುದಾಗಿ ಹೇಳುತ್ತಾರೆ ನಿರ್ದೇಶಕ ಗೌಸ್‌ಪೀರ್.‌

ಗೌಸ್‌ಪೀರ್‌, ಶರಣಪ್ಪ,ಆನಂದ್

ಅಂದಹಾಗೆ, ಗೌಸ್‌ಪೀರ್‌ ನಿರ್ದೇಶನದ ಈ ಚಿತ್ರ ವಿಭಿನ್ನ ಜಾನರ್‌ನಲ್ಲಿದ್ದು, ಸಸ್ಪೆನ್ಸ್‌ ಥ್ರಿಲ್ಲರ್‌ ಅಂಶಗಳೇ ಇಲ್ಲಿ ಹೈಲೈಟ್ ಆಗಿವೆಯಂತೆ. ಈಗಿನ ಟ್ರೆಂಡ್‌ಗೆ ತಕ್ಕಂತಹ ಕಥೆ ಇದಾಗಿದ್ದು, ದಿಗಂತ್‌ ಅವರನ್ನಿಲ್ಲಿ ಹೊಸ ರೂಪದಲ್ಲಿ ತೋರಿಸುವ ಯೋಚನೆ ನಿರ್ದೇಶಕರಗಿದೆಯಂತೆ. ಈ ಪಾತ್ರದಲ್ಲಿ ದಿಗಂತ್‌ ಹೊಸ ರೂಪ ತಾಳಲಿದ್ದಾರೆ ಎನ್ನುವ ನಿರ್ದೇಶಕರು, ದಿಗಂತ್‌ ಅವರು ಇದೇ ಮೊದಲ ಬಾರಿಗೆ ಅಂಥದ್ದೊಂದು ಪಾತ್ರ ನಿರ್ವಹಿಸುತ್ತಿದ್ದಾರೆ ಎನ್ನುತ್ತಾರೆ ನಿರ್ದೇಶಕ ಗೌಸ್‌ಪೀರ್.‌


ಗೌಸ್‌ಪೀರ್‌ ಮತ್ತು ದಿಗಂತ್‌ ಅವರ ಕಾಂಬಿನೇಷನ್‌ನಲ್ಲಿ ಈ ಹಿಂದೆ “ಶಾರ್ಪ್‌ ಶೂಟರ್‌” ಚಿತ್ರ ಬಂದಿತ್ತು. ಅದೊಂದು ಫನ್ನಿ ಎಲಿಮೆಂಟ್ಸ್‌ನೊಂದಿಗೆ ನೋಡುಗರನ್ನು ರಂಜಿಸಿತ್ತು. ಪುನಃ ಅದೇ ಜೋಡಿ ಈಗ ಮೋಡಿ ಮಾಡುವಂತಹ ಸ್ಕ್ರಿಪ್ಟ್‌ನೊಂದಿಗೆ ಬರುತ್ತಿದೆ. ದಿಗಂತ್‌ ಕೂಡ ಗೌಸ್‌ಪೀರ್‌ ಕಥೆ ಕೇಳಿ ಥ್ರಿಲ್‌ ಅಗಿದ್ದು, ಹೊಸ ಬಗೆಯ ಕಥೆಯಲ್ಲಿ ಕೆಲಸ ಮಾಡುತ್ತಿರುವುದಕ್ಕೆ ಖುಷಿಯಾಗಿದ್ದಾರೆ. ಅದೇನೆ ಇರಲಿ, ದಿಗಂತ್‌ ಈಗ ಎಚ್ಚರದ ಆಯ್ಕೆಯಲ್ಲಿದ್ದಾರೆ. ಹಾಗಾಗಿಯೇ, ತಮಗೆ ಇಷ್ಟವಾಗುವಂತಹ ಕಥೆಗಳನ್ನು ಆಯ್ಕೆ ಮಾಡಿಕೊಂಡು ಸಿನಿಮಾ ಮಾಡುತ್ತಿದ್ದಾರೆ. “ಶಾರ್ಪ್‌ ಶೂಟರ್‌” ಮೂಲಕ ಎಲ್ಲರನ್ನು ಸೆಳೆದಿದ್ದ ಗೌಸ್‌ಪೀರ್‌ ಮತ್ತು ದಿಗಂತ್‌, ಈಗ ಸಸ್ಪೆನ್ಸ್‌ ಥ್ರಿಲ್ಲರ್‌ ಕಥೆಯೊಂದಿಗೆ ಬರುತ್ತಿದ್ದಾರೆ. “ಗಾಳಿಪಟ 2” ಚಿತ್ರದ ಚಿತ್ರೀಕರಣ ಮುಗಿಸಿಕೊಂಡು ಬಂದ ಬಳಿಕ ಚಿತ್ರಕ್ಕೆ ಚಾಲನೆ ದೊರೆಯಲಿದೆ.

Categories
ಸಿನಿ ಸುದ್ದಿ

ಕಾಲಾಪತ್ಥರ್‌ ಚಿತ್ರಕ್ಕೆ ಅಪೂರ್ವ ನಾಯಕಿ – ವಿಕ್ಕಿ ವರುಣ್‌ ಜೊತೆಯಲ್ಲಿ ಡಿಂಗುಡಾಂಗು!


“ಕೆಂಡ ಸಂಪಿಗೆ” ಹುಡುಗ ವಿಕ್ಕಿ ವರುಣ್‌ ಅವರು ಹೊಸ ಚಿತ್ರ “ಕಾಲಾಪತ್ಥರ್” ಅನೌನ್ಸ್‌ ಮಾಡಿದ್ದು ಗೊತ್ತೇ ಇದೆ. ಈ ಚಿತ್ರಕ್ಕೆ ನಾಯಕಿ ಯಾರು ಎಂಬುದನ್ನು ಚಿತ್ರತಂಡ ಗೌಪ್ಯವಾಗಿಟ್ಟಿತ್ತು. ಈಗ ತಂಡ ನಾಯಕಿ ಯಾರೆಂಬುದನ್ನು ಹೇಳಿದೆ. ಹೌದು, “ಕಾಲಾಪತ್ಥರ್‌” ಚಿತ್ರಕ್ಕೆ ‘ಅಪೂರ್ವ’ ಆಯ್ಕೆಯಾಗಿದ್ದಾರೆ. ಅಪೂರ್ವ ಅವರು ಈ ಹಿಂದೆ ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ “ಅಪೂರ್ವ” ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಯಾಗಿದ್ದರು. ಅದಾದ ಬಳಿಕ “ವಿಕ್ಟರಿ 2” ಚಿತ್ರದಲ್ಲೂ ಅಪೂರ್ವ ನಟಿಸಿದ್ದರು. ಈಗ ವಿಕ್ಕಿ ವರುಣ್‌ ಅವರಿಗೆ “ಕಾಲಪತ್ಥರ್” ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.


ಅಂದಹಾಗೆ, “ಕಾಲಾಪತ್ಥರ್‌” ಚಿತ್ರದ ಟೈಟಲ್‌ ಲಾಂಚ್‌ ಆದ ದಿನವೇ ಒಂದಷ್ಟು ಗೊಂದಲವಾಗಿತ್ತು. ಆ ಶೀರ್ಷಿಕೆ ಕಾಂಟ್ರೋವರ್ಸಿಯೂ ಆಗಿತ್ತು. ಟೈಟಲ್‌ ಗೆ ಬೆಂಗಳೂರಿನ ಮಾಜಿ ರೌಡಿಯೊಬ್ಬರು ಆಕ್ಷೇಪಣೆ ಎತ್ತಿದ್ದಾರೆನ್ನುವ ಸುದ್ದಿ ಇತ್ತು. ಆದರೆ, ಅದು ನಿಜಾನ? ಅನ್ನೋದು ಕನ್ಫರ್ಮ್‌ ಇರಲಿಲ್ಲ. ಆದರೆ ಹಾಗೊಂದು ಸುದ್ದಿ ಗಾಂಧಿನಗರದಲ್ಲಿ ಹರಿದಾಡಿದ್ದಂತೂ ನಿಜ. ಟೈಟಲ್‌ಗೆ ಆಕ್ಷೇಪ ಎತ್ತಿ ಮಾಜಿ ರೌಡಿಯೊಬ್ಬರು ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಾರಂತೆ.

 

ತಮ್ಮದೇ ಬಯೋಗ್ರಪಿ ಎತ್ತಿಕೊಂಡು ಕೆಲವರು ಸಿನಿಮಾ ಮಾಡುತ್ತಿದ್ದಾರೆ. ಇದಕ್ಕೆ ಅವಕಾಶ ಕೊಡಬಾರದು ಎಂಬುದಾಗಿ ಅವರು ದೂರು ಸಲ್ಲಿಸಿದ್ದರಂತೆ ಎಂಬುದಾಗಿ ಸುದ್ದಿ ಇತ್ತು. ಆದರೆ ಈ ಕುರಿತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯೇ ಸ್ಪಷ್ಟಪಡಿಸಿದ್ದು, ಆ ರೀತಿಯ ಯಾವುದೇ ದೂರು ಬಂದಿಲ್ಲ ಎಂದಿತ್ತು. ಅದೇನೆ ಇರಲಿ, ವಿಕ್ಕಿ ವರುಣ್‌ ಅಭಿನಯದ “ಕಾಲಾ ಪತ್ಥರ್‌ʼ ಚಿತ್ರ ಸದ್ಯ ಸುದ್ದಿ ಮಾಡುತ್ತಿದೆ. ಚಿತ್ರದ ಶೀರ್ಷಿಕೆಯೇ ಮಾಸ್‌ ಆಗಿದೆ. ಕಥೆ ಕೂಡ ಹಾಗೆಯೇ ಇದೆ ಎಂಬುದು ಅವರ ಮಾತು.

Categories
ಸಿನಿ ಸುದ್ದಿ

‘ಪಿಕೆ’ ಸೀಕ್ವೆಲ್‌ನಲ್ಲಿ ರಣಬೀರ್‌!

ಏಳು ವರ್ಷಗಳ ಹಿಂದೆ ತೆರೆಕಂಡಿದ್ದ ಅಮೀರ್ ಖಾನ್ ನಟನೆಯ ‘ಪಿಕೆ’ ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಯಶಸ್ಸು ಕಂಡಿತ್ತು. ರಾಜ್‌ಕುಮಾರ್ ಹಿರಾನಿ ನಿರ್ದೇಶನದ ಈ ಪ್ರಯೋಗ ವಿಶಿಷ್ಟ ಕತೆಯಿಂದಾಗಿ ಗಮನಸೆಳೆದಿದ್ದ ಸಿನಿಮಾ. ಆ ಚಿತ್ರದ ಕೊನೆಯ ಸನ್ನಿವೇಶವೊಂದರಲ್ಲಿ ನಟ ರಣಬೀರ್ ಕಪೂರ್‌ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಚಿತ್ರದ ಸರಣಿಯನ್ನು ಗಮನದಲ್ಲಿಟ್ಟುಕೊಂಡು ಹಿರಾನಿ ರಣಬೀರ್ ಪಾತ್ರ ಸೃಷ್ಟಿಸಿದ್ದಾರೆ ಎಂದು ಆಗಲೇ ಗುಲ್ಲಾಗಿತ್ತು.

ಚಿತ್ರ ಕಂಡು ವರ್ಷಗಳೇ ಆದ್ದರಿಂದ ಜನರು ಅದನ್ನು ಮರೆತೇ ಬಿಟ್ಟಿದ್ದರು. ಇದೀಗ ಹಿರಾನಿ ‘ಪಿಕೆ’ ಸೀಕ್ವೆಲ್‌ ಕುರಿತು ಪ್ರಸ್ತಾಪಿಸುತ್ತಿದ್ದಾರೆ. ಬಹುತೇಕ ರಣಬೀರ್ ಕಪೂರ್ ನಟಿಸುವುದು ಖಾತ್ರಿಯಾಗಿದೆ. ಮೂಲ ಚಿತ್ರದ ಹೀರೋ ಅಮೀರ್ ಖಾನ್ ಇಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ.  ಅರ್ಹ ಮೂಲಗಳಿಂದ ‘ಪಿಕೆ’ ಸರಣಿ ಕುರಿತಂತೆ ಸುದ್ದಿ ಬಂದಿದ್ದರೂ ಹಿರಾನಿ ಈಗಲೇ ಅದನ್ನು ಖಚಿತಪಡಿಸಲು ಇಚ್ಛಿಸುತ್ತಿಲ್ಲ.

“ಸರಣಿ ಸಿನಿಮಾಗಳನ್ನು ಮಾಡಿ ಹಣ ಮಾಡುವುದಿದ್ದರೆ ನಾನು ಮುನ್ನಾಭಾಯ್‌ ಚಿತ್ರದ ನಾಲ್ಕಾರು ಸರಣಿ ಹಾಗೂ ಪಿಕೆ ಚಿತ್ರದ ಮೂರ್ನಾಲ್ಕು ಸರಣಿ ಮಾಡಿಬಿಡುತ್ತಿದ್ದೆ. ಆದರೆ ನನಗೆ ಕತೆ ಮುಖ್ಯ. ವಿಶಿಷ್ಟ ಕತೆ ಮಾಡಿಕೊಂಡು ಹೊಸ ಚಿತ್ರವನ್ನೇ ಮಾಡುತ್ತೇನೆ” ಎನ್ನುತ್ತಾರವರು. ‘ಪಿಕೆ’ ಸರಣಿಗೆ ಅಭಿಜಿತ್ ಜೋಷಿ ಕತೆ ರಚಿಸುತ್ತಿದ್ದು, ಮುಂದಿನ ಕೆಲವು ದಿನಗಳಲ್ಲಿ ಚಿತ್ರದ ಅಧಿಕೃತ ಘೋಷಣೆ ಹೊರಬೀಳಲಿದೆ.

Categories
ಸಿನಿ ಸುದ್ದಿ

ರಿಲೀಸ್ ಗೆ ರೆಡಿಯಾಯ್ತು ಧನುಷ್‌ ‘ಅತ್ರಂಗಿ ರೇ’! ಅಕ್ಷಯ್ -ಸಾರಾ ಕೂಡ ಹೈಲೈಟ್

ಅಕ್ಷಯ್ ಕುಮಾರ್, ಸಾರಾ ಅಲಿ ಖಾನ್ ಮತ್ತು ಧನುಷ್ ನಟನೆಯ ‘ಅತ್ರಂಗಿ ರೇ’ ಹಿಂದಿ ಸಿನಿಮಾ ತೆರೆಗೆ ಸಿದ್ಧವಾಗಿದೆ. ಆನಂದ್ ಎಲ್‌ ರಾಯ್ ನಿರ್ದೇಶನದ ಈ ಚಿತ್ರಕ್ಕೆ ಎ.ಆರ್.ರೆಹಮಾನ್ ಸಂಗೀತ ಸಂಯೋಜಿಸಿದ್ದಾರೆ ಎನ್ನುವುದು ವಿಶೇಷ. ಚಿತ್ರ ಇದೇ ಆಗಸ್ಟ್‌ 6ರಂದು ತೆರೆಕಾಣಲಿದೆ ಎಂದು ಚಿತ್ರತಂಡ ಇಂದು ಘೋಷಿಸಿದೆ. ಈ ಚಿತ್ರದಲ್ಲಿ ಧನುಷ್‌ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು, ಅಕ್ಷಯ್ ಕುಮಾರ್‌ ‘ವಿಶೇಷ’ ಪಾತ್ರವಿದೆ ಎನ್ನುವುದು ಚಿತ್ರತಂಡದ ಹೇಳಿಕೆ.

‘ಅತ್ರಂಗಿ ರೇ’ ಅಕ್ಷಯ್ ಕುಮಾರ್‌ಗೆ 2021ರಲ್ಲಿ ತೆರೆಕಾಣುತ್ತಿರುವ ಮೂರನೇ ಚಿತ್ರವಾಗಲಿದೆ. ಈ ಹಿಂದೆ 2013ರಲ್ಲಿ ಧನುಷ್ ಅವರು ಆನಂದ್ ಎಲ್‌ ರಾಯ್‌ ನಿರ್ದೇಶನದ ‘ರಾಂಝಾ’ ಹಿಂದಿ ಚಿತ್ರದಲ್ಲಿ ನಟಿಸಿದ್ದರು. ವಿಮರ್ಶಕರ ಅಪಾರ ಮೆಚ್ಚುಗೆಗೆ ಪಾತ್ರವಾಗಿದ್ದ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಮಾತ್ರ ದೊಡ್ಡ ಮನ್ನಣೆ ಪಡೆಯಲಿಲ್ಲ. ಅದಾಗಿ ಎಂಟು ವರ್ಷಗಳ ನಂತರ ರಾಯ್ ಮತ್ತು ಧನುಷ್ ಈ ಸಿನಿಮಾದಲ್ಲಿ ಒಟ್ಟಾಗಿದ್ದಾರೆ.

ಹಿಮಾನ್ಶು ಶರ್ಮಾ ಚಿತ್ರಕಥೆ ರಚಿಸಿರುವ ಚಿತ್ರಕ್ಕೆ ಇರ್ಷಾದ್ ಕಮಿಲ್‌ ಗೀತೆಗಳನ್ನು ಬರೆದಿದ್ದಾರೆ. ಕಳೆದ ವರ್ಷ ಮಾರ್ಚ್‌ನಲ್ಲಿ ಚಿತ್ರೀಕರಣ ಶುರುವಾಗಿ ಕೋವಿಡ್ ಕಾರಣದಿಂದಾಗಿ ನಿಂತುಹೋಗಿತ್ತು. ಮತ್ತೆ ಅಕ್ಟೋಬರ್‌ನಿಂದ ಮಧುರೈ, ದಿಲ್ಲಿಯಲ್ಲಿ ಚಿತ್ರೀಕರಣಗೊಂಡು ಶೂಟಿಂಗ್ ಮುಗಿಸಿದೆ.

Categories
ಸಿನಿ ಸುದ್ದಿ

ರಕ್ತ ಗುಲಾಬಿ ಎಂಬ ಸಿಂಗಲ್‌ ಟೇಕ್‌ ಸಿನಿಮಾ, ಇಂಡಿಯಾ ಬುಕ್‌ ಆಫ್‌ ರೆಕಾರ್ಡ್ಸ್‌ನಲ್ಲಿ ಕನ್ನಡ ಚಿತ್ರ !

ಮನರಂಜನೆ ಹಾಗೂ ಬಿಸಿನೆಸ್ ಆಚೆಗೂ ಸಿನಿಮಾ ಎನ್ನುವುದು ಪ್ರಯೋಗಾತ್ಮಕ ಕ್ಷೇತ್ರ. ಹೊಸಬರಿಗಂತೂ ಇದೊಂದು ಮೊದಲ ಆದ್ಯತೆಯೆ ಹೌದು. ಅಂತಹದೇ ಒಂದು ಪ್ರಯೋಗದ ಮೂಲಕ ಈಗ ಸ್ಯಾಂಡಲ್‌ ವುಡ್‌ ನಲ್ಲಿ ಸಖತ್‌ ಸೌಂಡ್‌ ಮಾಡಲು ರೆಡಿಯಾಗಿರುವ ಚಿತ್ರ “ರಕ್ತ ಗುಲಾಬಿʼ. ಚಿತ್ರದ ಶೀರ್ಷಿಕೆಯೇ ಹೇಳುವ ಹಾಗೆ ಇದು ಶುದ್ಧ ಲವ್‌ ಅಂಡ್‌ ಕ್ರೈಂ ಆಧರಿತ ಚಿತ್ರ. ಹೊಸಬರೇ ಇದರ ನಿರ್ಮಾಪಕರು. ಹಾಗೆಯೇ ನಿರ್ದೇಶಕರು ಕೂಡ. ಸದ್ಯಕ್ಕೆ ಚಿತ್ರ ರಿಲೀಸ್‌ ಗೆ ರೆಡಿಯಿದೆ.

ಮಾರ್ಚ್‌ 5 ಕ್ಕೆ ರಿಲೀಸ್‌ ದಿನಾಂಕ ಕೂಡ ಫಿಕ್ಸ್‌ ಆಗಿದೆ. ಈಗಷ್ಟೇ ಟೀಸರ್‌ ಹಾಗೂ ಟ್ರೇಲರ್‌ ಮೂಲಕ ಸೌಂಡ್‌ ಮಾಡುತ್ತಿರುವ ಚಿತ್ರ, ತನ್ನ ಸಿಂಗಲ್‌ ಟೆಕ್‌ ಜತೆಗೆ ವಿಭಿನ್ನ ಕಥಾ ಹಂದರದ ಮೂಲಕ ಕುತೂಹಲ ಮೂಡಿಸುತ್ತಿದೆ.
ಮೆಷೆನ್‌ಕಡ್‌ ಫಿಲಂಸ್‌ ಬ್ಯಾನರ್‌ ನಲ್ಲಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ಆಕ್ಷನ್‌ ಕಟ್‌ ಹೇಳಿದ್ದು ಯುವ ನಿರ್ದೇಶಕ ರಾಬಿ. ಚಿತ್ರಕ್ಕೆ ಅವರೇ ಕತೆ, ಚಿತ್ರಕತೆ ಬರೆದು ಆಕ್ಷನ್‌ ಕಟ್‌ ಹೇಳಿದ್ದಾರೆ. ರಾಬಿ ವೃತ್ತಿಯಲ್ಲಿ ಬ್ಯಾಂಕ್‌ ಉದ್ಯೋಗಿ. ಪ್ರವೃತ್ತಿಯಲ್ಲಿ ಸಿನಿಮಾ ಮೇಕರ್ಸ್.‌ ಹಲವು ವರ್ಷಗಳಿಂದ ಕನ್ನಡ ಚಿತ್ರೋದ್ಯಮದಲ್ಲಿ ಕೆಲಸ ಮಾಡಿದ್ದಾರಂತೆ. ಅದೇ ಅನುಭವದಲ್ಲಿ ಈಗ ಸ್ವತಂತ್ರ ನಿರ್ದೇಶಕರಾಗಿ ʼರಕ್ತ ಗುಲಾಬಿʼ ಚಿತ್ರಕ್ಕೆ ಆಕ್ಷನ್‌ ಕಟ್‌ ಹೇಳಿ, ಪ್ರೇಕ್ಷಕರ ಮುಂದೆ ತರಲು ರೆಡಿಯಾಗಿದ್ದಾರೆ. ಚಿತ್ರದ ತಾರಾಬಳಗದಲ್ಲೂ ಹೊಸ ಪ್ರತಿಭೆಗಳೇ ಇದ್ದಾರೆ. ವಿಕ್ರಮಾಧಿತ್ಯ ಹಾಗೂ ಶಿವಾನಿ ಚಿತ್ರದ ನಾಯಕ-ನಾಯಕಿ. ಅವರ ಪ್ರಕಾರ ಇದೊಂದು ಪಕ್ಕಾ ಎಂಟರ್‌ ಟೈನರ್‌ ಮೂವೀ.

ಚಿತ್ರದ ಟೀಸರ್‌ ಹಾಗೂ ಟ್ರೈಲರ್‌ ನೋಡಿದವರಿಗೆ ಇಲ್ಲೊಂದಿಷ್ಟು ರೋಚಕ ಸಂಗತಿಗಳಿವೆ. ಪ್ರೀತಿಸುವ ಒಂದು ಜೋಡಿ. ಅವರನ್ನು ಹಿಂಬಾಲಿಸಿ ಬಂದ ಒಂದು ಶಸ್ತ್ರ ಸಜ್ಜಿತ ಗುಂಪು, ಅವರನ್ನು ಹಿಂಬಾಲಿಸಿ ಬಂದ ಪೊಲೀಸು. ಇದೆಲ್ಲ ಕಾಡಿನ ನಡುವೆ ಕಾಣುವ ದೃಶ್ಯ. ಈ ದೃಶ್ಯ ನೋಡಿದರೆ ಸಹಜವಾಗಿಯೇ ಇದೊಂದು ನಕ್ಸಲ್‌ ಆಧರಿಸಿದ ಕತೆ ಎಂದೆನಿಸುವುದು ಸಹಜ. ಆದರೆ ಅಲ್ಲಿ ನಡೆಯುವುದೇ ಬೇರೆಯಂತೆ.” ಕಥಾ ನಾಯಕ ಗಣೇಶ್.‌ ಆತ ತನ್ನ ಬಂಡಾಯದ ಸ್ವರೂಪದಿಂದ ಹೇಗಾದರೂ ಮಾಡಿ ವಿಮುಕ್ತಿ ಪಡೆಯಲು ಯತ್ನಿಸುತ್ತಾನೆ. ಅದೇ ವೇಳೆ ತಾನು ಇಷ್ಟ ಪಟ್ಟ ಹುಡುಗಿಯೊಂದಿಗೆ ಕಾಡು ತೊರೆದು ದೂರದೂರಿಗೆ ಹೊರಡುತ್ತಾನೆ. ಅಲ್ಲಿ ಅವನಿಗೆ ಕೆಲವು ಸವಾಲುಗಳಿವೆ. ಆತನನ್ನು ಹಿಂಬಾಲಿಸಿ ಕೆಲವರು ಬರುತ್ತಾರೆ. ಅದಕ್ಕಾಗಿ ಆತ ದಾರಿ ಬದಲಿಸುತ್ತಾನೆ. ಅಲ್ಲಿಂದ ಮುಂದೇವಾಗುತ್ತೆ ಎನ್ನುವುದು ಕತೆಯ ಸಸ್ಪೆನ್ಸ್‌ ವಿಷಯʼ ಎನ್ನುತ್ತಾರೆ ನಿರ್ದೇಶಕ ರಾಬಿ.

ಕತೆಯ ಕುತೂಹಲ ಒಂದೆಡೆಯಾದರೆ ಸಿಂಗಲ್‌ ಟೆಕ್‌ ಶೂಟ್‌ ಇದರ ಇನ್ನೊಂದು ವಿಶೇಷ. ಸುಮಾರು ೨ ಗಂಟೆಯಷ್ಟು ಅವದಿಯ ಇಡೀ ಸಿನಿಮಾ ಒಂದೇ ಟೆಕ್‌ ನಲ್ಲಿ ಶೂಟ್‌ ಆಗಿದೆ. ಈಗಾಗಲೇ ಇದು ಇಂಡಿಯಾ ಬುಕ್‌ ಆಫ್‌ ರೆಕಾರ್ಡ್‌ ನಲ್ಲಿ ದಾಖಲಾಗಿದೆ. ಈ ಮೂಲಕ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದ ದಾಖಲೆಗಳ ಜತೆಗೆ ಫಿಲ್ಮ್‌ ಫೆಸ್ಟಿವೆಲ್‌ ಗಳಿಗೂ ಕಳುಹಿಸುವ ತವಕ ಚಿತ್ರ ತಂಡದಲ್ಲಿದೆ. ಸದ್ಯಕ್ಕೀಗ ರಿಲೀಸ್‌ ಸಿದ್ದತೆಯೊಂದಿಗೆ ಚಿತ್ರದ ತಂಡ ಸದ್ದು ಮಾಡಲು ರೆಡಿಯಾಗಿದೆ.

Categories
ಸಿನಿ ಸುದ್ದಿ

ಅಭಿನಯ ಚಕ್ರವರ್ತಿಯ ಗ್ರಾಮ ದತ್ತು ಸ್ವೀಕಾರ, ಆವಿಗೆ ಗ್ರಾಮಕ್ಕೆ ಇನ್ನು ಮುಂದೆ ಸು”ದೀಪ”

ನಟ ಕಿಚ್ಚ ಸುದೀಪ್‌ ಅಂದ್ರೆ  ಸಿನಿಮಾ ಅಥವಾ ರಿಯಾಲಿಟಿ ಶೋ ಮಾತ್ರವಲ್ಲ ಅದರಾಚೆ ಸಾಮಾಜಿಕ ಕೆಲಸಗಳಲ್ಲೂ  ಸದಾ ಮುಂಚೂಣಿಯಲ್ಲಿರುವ ಹೆಸರು. ಸಾಮಾಜಿಕ ಕೆಲಸಗಳಿಗೆ ಅಂತಲೇ ಅವರು ಶುರು ಮಾಡಿರುವ ಕಿಚ್ಚ ಚಾರಿಟೇಬಲ್‌ ಟ್ರಸ್ಟ್‌ ಇತ್ತೀಚೆಗಷ್ಟೇ ನಾಲ್ಕನೇ ವರ್ಷಕ್ಕೆ ಕಾಲಿಟ್ಟಿದ್ದು ನಿಮಗೂ ಗೊತ್ತು. ಈ ಹಂತದಲ್ಲೀಗ ಮತ್ತೊಂದು ಮಹತ್ವದ ಸಾಮಾಜಿಕ ಕಾರ್ಯದ ಮೂಲಕ  ಕಿಚ್ಚ ಸುದೀಪ್‌ ಸುದ್ದಿಯಲ್ಲಿದ್ದಾರೆ. ಅದುವೇ ಗ್ರಾಮ ದತ್ತು ಸ್ವೀಕಾರ !

ಹೌದು, ಇದೀಗ ಕಿಚ್ಚ ಸುದೀಪ್‌ ಅವರು ತಮ್ಮ ತವರು ಜಿಲ್ಲೆ  ಶಿವಮೊಗ್ಗದ  ಗ್ರಾಮವೊಂದನ್ನು ದತ್ತು ಪಡೆದಿದ್ದಾರೆ. ಸಾಗರ ತಾಲೂಕು ಆವಿಗೆ ಗ್ರಾಮವನ್ನು ಕಿಚ್ಚ ಚಾರಿಟೆಬಲ್‌ ಟ್ರಸ್ಟ್‌ ಮೂಲಕ ದತ್ತು ಪಡೆದು, ಸಂಪೂರ್ಣವಾಗಿ ಅಭಿವೃದ್ದಿ ಪಡಿಸಲು ಮುಂದಾಗಿದ್ದಾರೆ. ಈ ಸಂಬಂಧ ಈಗಾಗಲೇ ಅವರು ಗ್ರಾಮಕ್ಕೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿ ಅವಲೋಕಿಸಿದ್ದು ಮಾತ್ರವಲ್ಲ, ಗ್ರಾಮ ದತ್ತು ಸ್ವೀಕಾರದ ಸಂಬಂಧ ಆಗಬೇಕಿರುವ ಎಲ್ಲಾ ಸರ್ಕಾರಿ ಕೆಲಸಗಳನ್ನು ಅಧಿಕೃತವಾಗಿಯೂ ಮುಗಿಸಿಕೊಂಡು ಬಂದಿದ್ದಾರಂತೆ.ಸಿನಿಮಾ ನಟ-ನಟಿಯರ ಸಾಮಾಜಿಕ ಕೆಲಸಗಳಲ್ಲೇ ಇದೊಂದು ಮಹತ್ತರವಾದ ಕೆಲಸ. ಯಾಕಂದ್ರೆ, ನಟ-ನಟಿಯರು ಇದುವರೆಗೂ ಸರ್ಕಾರಿ ಶಾಲೆಗಳನ್ನು, ಅನಾಥಾಶ್ರಮಗಳನ್ನು, ಮೃಗಾಲಯಗಳಲ್ಲಿನ ಪ್ರಾಣಿ-ಪಕ್ಷಿಗಳನ್ನು ದತ್ತು ಪಡೆದಿದ್ದು ನಿಮಗೆಲ್ಲ ಗೊತ್ತಿರುವ ವಿಚಾರವೇ. ಆದರೆ ಗ್ರಾಮ ದತ್ತು ಸ್ವೀಕಾರ ಅಂತ ಬಂದಾಗ ಇದು ಮೊದಲು. ಆ ಕೆಲಸ ಸುದೀಪ್‌ ಅವರ ಮೂಲಕ ಶುರುವಾಗಿದೆ. ಇಷ್ಟಕ್ಕೂ ಈ ಗ್ರಾಮವನ್ನೇ ಅವರು ದತ್ತು ಪಡೆದಿದ್ದಕ್ಕೂ ಒಂದು ಬಲವಾದ ಕಾರಣ ಇದೆ.

ಆವಿಗೆ ಗ್ರಾಮ ಇರೋದು ಸಾಗರ ತಾಲೂಕಿನಲ್ಲಿ. ತಾಲೂಕು ಕೇಂದ್ರ ಸಾಗರ ಪಟ್ಟಣದಿಂದ 70 ಕಿಲೋ ಮೀಟರ್‌ ದೂರದಲ್ಲಿದೆ. ಶರಾವತಿ  ಹಿನ್ನಿರಿನ ಪ್ರದೇಶದಲ್ಲಿರುವ ಈ ಗ್ರಾಮವು ಈಗಲೂ ಹೊರಜಗತ್ತಿನೊಂದಿಗೆ ಸಂಪರ್ಕ ಕಡಿದುಕೊಂಡಿದೆ. ಕೇವಲ 27 ಮನೆಗಳಿರುವ ಕುಗ್ರಾಮ ಇದು. ಅಲ್ಲಿಯೇ 1ನೇ ತರಗತಿಯಿಂದ 5ನೇ ತರಗತಿಯವರೆಗೆ ಪ್ರಾಥಮಿಕ ಶಾಲೆ ಇದ್ದು, ಅಲ್ಲಿ 13 ಮಕ್ಕಳು ಕಲಿಯುತ್ತಿದ್ದಾರೆ. ಇಷ್ಟಾಗಿಯೂ ಇಲ್ಲಿ ಅಗತ್ಯ ಮೂಲಭೂತ ಸೌಲಭ್ಯಗಳಿಲ್ಲ. ಸುಸಜ್ಜಿತವಾದ ರಸ್ತೆ, ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲು ಈಗ ಕಿಚ್ಚ ಚಾರಿಟೆಬಲ್‌ ಟ್ರಸ್ಟ್‌ ಮುಂದಾಗಿದೆ.

error: Content is protected !!